ಶ್ರೀ ರೇಣುಕಾ ದೇವಿ ವಿಕಲಚೇತನ ಸ್ವಸಹಾಯ ಸಂಘದ ಕೇಸ್ ಸ್ಟಡಿ

 

ವಿಕಲಚೇತನರ ಏಳಿಗೆಗಾಗಿ ಮತ್ತು ಅವರ ಜೀವನಕ್ಕೆ ಸಾಕಾರವಾಗಲಿ ಎಂಬ ಉದ್ದೇಶದಿಂದ ಡೀಲ್ ಫೌಂಡೇಶನ್ ಸಂಸ್ಥೆಯು ವಿಕಲಚೇತನ ವ್ಯಕ್ತಿಗಳನ್ನು ಒಳಗೊಂಡ ಅವರ ಸುಸ್ಥಿರ ಜೀವನೋಪಾಯ ಚಟುವಟಿಕೆಗಳನ್ನು ತಿಳಿಯಲು 2 ವರ್ಷದ ಗುರಿಯನ್ನು ಹಾಕಿಕೊಂಡಿತು.ಅದರಂತೆ ವಿಕಲಚೇತನರ ಮತ್ತು ಮಹಿಳೆಯರಿಗೆ ಆರ್ಥಿಕ ಅಭಿವೃದ್ಧಿಗಾಗಿ ಹಂತ ಹಂತವಾಗಿ ಜಾಗೃತಿ ತರಬೇತಿ, ಸಮುದಾಯ ಸಂವೇದನೆ, ಬೇಸ್ ಲೈನ್ ಸಮೀಕ್ಷೆ, ಜೀವನೋಪಾಯ ತರಬೇತಿ, ಆರ್ಥಿಕ ಸಾಕ್ಷರತೆ ತರಬೇತಿ, ಆರಂಭ ಸ್ವ ಉದ್ಯೋಗ ಕೇಂದ್ರಗಳನ್ನು ಸ್ಥಾಪಿಸುವುದು, ವಿಕಲಚೇತನರ ಸ್ವಸಹಾಯ ಗುಂಪು ರಚನೆ ಮಾಡುವುದು, ಬ್ಯಾಂಕ್/ಹಣಕಾಸು ಮಾರುಕಟ್ಟೆ ಸಂಪರ್ಕ ಒದಗಿಸುವುದು,ರೈತ ಉತ್ಪಾದಕರ ಕಂಪನಿಗಳ ರಚನೆ,ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಸಹಕಾರ ಸಂಘ ರಚನೆ ಮಾಡುವುದು ಈ ರೀತಿಯಾಗಿ ಗುರಿಗಳನ್ನು ಮುಂದೆ ಇಟ್ಟುಕೊಂಡು ಇದನ್ನು ಕಾರ್ಯರೂಪಕ್ಕೆ ತರಲು ಪ್ರತಿ ತಾಲೂಕಿನಲ್ಲಿ ಲವ್ಲಿವುಡ್ ಆಫೀಸರ್ ಅನ್ನು ನೇಮಕ ಮಾಡಿದರು.

ಅದರಲ್ಲಿ ನರಗುಂದ ತಾಲೂಕಿನ ಲವ್ಲಿ ವುಡ್ ಆಫೀಸರ್ ಆದ ಸಂಗೀತ ಇವರು ನರಗುಂದ ತಾಲೂಕಿನ ಕಾರ್ಯ ವ್ಯಾಪ್ತಿಗೆ ಬರುವ ಎಲ್ಲಾ ಗ್ರಾಮಗಳಲ್ಲಿ ಡೀಲ್ ಫೌಂಡೇಶನ್ ಸಂಸ್ಥೆಯು ಹಾಕಿಕೊಂಡ ಗುರಿಗಳಂತೆ ಕಾರ್ಯ ಆರಂಭಿಸಿದರು. ಅದರಂತೆ ನರಗುಂದ ತಾಲೂಕಿನ ಕುರಿ ಗೋವಿನ ಕೊಪ್ಪ ಗ್ರಾಮ ಪಂಚಾಯಿತಿಗೆ ಸಂಗೀತ ಅವರು ಭೇಟಿ ನೀಡಿ ಅಲ್ಲಿನ ವಿ ಆರ್ ಡಬ್ಲ್ಯೂ ಅವರಿಗೆ ಡೀಲ್ ಫೌಂಡೇಶನ್ ಸಂಸ್ಥೆಯ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದರು.ಅದರಂತೆ ಕುರಿ ಗೋವಿನಕೊಪ್ಪ ಗ್ರಾಮ ಪಂಚಾಯಿತಿಯ ವಿ ಆರ್ ಡಬ್ಲ್ಯೂ ಅವರು ಸ್ವಸಹಾಯ ಸಂಘವನ್ನು ಮಾಡಲು ಒಪ್ಪಿಗೆ ನೀಡಿದರು. ಇವರು ಎಲ್ಲ ವಿಕಲಚೇತನರನ್ನು ಸೇರಿಸಿ ಅವರಿಗೆ ಸಂಘದ ಬಗ್ಗೆ ಆಗುವ ಲಾಭದ ಬಗ್ಗೆ ಮತ್ತು ಡೀಲ್ ಫೌಂಡೇಶನ್ ಸಂಸ್ಥೆಯ ಬಗ್ಗೆ ಮಾಹಿತಿ ನೀಡಿದರು.ಇದರಿಂದ ಪ್ರೇರಿತಗೊಂಡು ವಿಕಲಚೇತನರು ಸೇರಿ ಸ್ವಸಹಾಯ ಸಂಘವನ್ನು ರಚಿಸಿಕೊಂಡರು.

ನಂತರ ಈ ಸಂಘಕ್ಕೆ ಶ್ರೀ ರೇಣುಕಾ ದೇವಿ ವಿಕಲಚೇತನ ಸ್ವಸಹಾಯ ಸಂಘ ಎಂದು ಹೆಸರಿಟ್ಟು ಎಲ್ಲ ದಾಖಲಾತಿಯನ್ನು ಹೊಂದಿಸಿ ಸಂಗೀತ ಅವರು ಕೆವಿಜಿ ಬ್ಯಾಂಕ್ ನಲ್ಲಿ ಖಾತೆಯನ್ನು ತೆರೆದರು.ಎಲ್ಲ ಸದಸ್ಯರು ಪ್ರತಿ ತಿಂಗಳು ನೂರು ರೂಪಾಯಿ ಉಳಿತಾಯವನ್ನು ಕಟ್ಟುತ್ತಿದ್ದಾರೆ.ಈ ಸಂಘವನ್ನು ರಚಿಸಿಕೊಳ್ಳಲು ವಿಕಲಚೇತನರ ಮೂಲ ಉದ್ದೇಶ ವಿಕಲಚೇತನರಿಗೆ ತರಬೇತಿಯ ಮೂಲಕ ವೈಯಕ್ತಿಕ ಉದ್ಯೋಗಕ್ಕೆ ಸಹಾಯಕವಾಗುತ್ತದೆ ಇದರಿಂದ ಅವರ ಆರ್ಥಿಕ ಪರಿಸ್ಥಿತಿ ಸುಧಾರಣೆ ಆಗುತ್ತದೆ ಎಂಬ ಉದ್ದೇಶದಿಂದ ಈ ಸಂಘವನ್ನು ರಚಿಸಿಕೊಂಡರು.

ನಂತರ ಈ ಸಂಘಕ್ಕೆ ಸಂಗೀತ ಅವರು ಬುಕ್ ರೈಟಿಂಗ್ ತರಬೇತಿ,ಲೀಡರ್ ಶಿಪ್ ತರಬೇತಿ,2016ರ ಡಿಸ್ಬಿಲಿಟಿ ಅವೆರ್ನೆಸ್ ತರಬೇತಿ, ಸರ್ಕಾರದಿಂದ ಸಿಗುವ ಸೌಲಭ್ಯಗಳ ಕುರಿತು ಎಲ್ಲ ಮಾಹಿತಿಯನ್ನು ಮತ್ತು ತರಬೇತಿಗಳನ್ನು ಸದಸ್ಯರಿಗೆ ನೀಡಿದರು.ಹಾಗೆ ಡೀಲ್ ಫೌಂಡೇಶನ್ ವತಿಯಿಂದ ಉದ್ಯೋಗಗಳ ತರಬೇತಿಯ ಬಗ್ಗೆ ಮಾಹಿತಿ ನೀಡಿದರು.

ದಿನ ಕಳೆದ ನಂತರ ಸದಸ್ಯರೆಲ್ಲರೂ ಸಾಲವನ್ನು ಪಡೆದುಕೊಂಡು ಉದ್ಯೋಗದಲ್ಲಿ ಮುಂದುವರಿಯೋಣ ಎಂದು ಚರ್ಚೆ ಮಾಡಿದರು.ಬ್ಯಾಂಕ್ನಿಂದ ಸಿಗುವ ಸಾಲ ಪಡೆದುಕೊಂಡರೆ ಅದಕ್ಕೆ ಸಮಯ ಹೆಚ್ಚಾಗುತ್ತದೆ ಜೊತೆಗೆ ಹೆಚ್ಚಿನ ಬಡ್ಡಿ ಕಟ್ಟಬೇಕಾಗುತ್ತದೆ.ಅದಕ್ಕೆ ಮೊದಲು ನಮ್ಮ ಉಳಿತಾಯದಿಂದಲೇ ಸಾಲವನ್ನು ಪಡೆದುಕೊಳ್ಳೋಣ ಇದರಿಂದ ನಮ್ಮ ಸಂಘದ ಸದಸ್ಯರಿಗೆ ಬಡ್ಡಿ ಹಂಚಿಕೆಯಾಗುತ್ತದೆ ಜೊತೆಗೆ ಸಂಘವು ಕೂಡ ಹೊಂದಾಣಿಕೆಯಿಂದ ಬೆಳೆಯುತ್ತದೆ ಎಂದು ಎಲ್ಲ ಸದಸ್ಯರು ಕೂಡಿ ಚರ್ಚೆ ಮಾಡಿದರು.ಎಲ್ಲರ ಒಪ್ಪಿಗೆಯಿಂದ ಸಂಘದ ಪ್ರತಿಯೊಬ್ಬರ ಉಳಿತಾಯದಿಂದ ಮೂರು ಜನ ಸದಸ್ಯರು ಸಾಲವನ್ನು ಪಡೆದುಕೊಳ್ಳಲು ನಿರ್ಧರಿಸಿದರು.ಅದರಲ್ಲಿ 1)ಶೇಖಪ್ಪ ಕುಂಬಾರ್ ಇವರು ಮೂಲತಹ ಬಡಿಗೇತನ ಉದ್ಯೋಗವನ್ನು ಮಾಡುತ್ತಿದ್ದಾರೆ ಅವರ ಕೆಲಸಕ್ಕೆ ಬಂಡವಾಳದ ಅವಶ್ಯಕತೆ ಇರುವ ಕಾರಣ 15,000 ಸಾಲವನ್ನು ಪಡೆದುಕೊಂಡು ಉದ್ಯೋಗವನ್ನು ಇನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಸಿಕೊಂಡು ಆರ್ಥಿಕವಾಗಿ ಸುಧಾರಣೆ ಹೊಂದುತ್ತಿದ್ದಾರೆ.ಅದೇ ರೀತಿ 2)ಶಿವನಗೌಡ ಪಾಟೀಲ್ ಇವರು ಸಂಘ ರಚನೆಯಾದ ನಂತರ ಸ್ವಯಂ ಉದ್ಯೋಗದಲ್ಲಿ ತೊಡಗಬೇಕು ಎಂದು ನಿರ್ಧರಿಸಿ ಹೈನುಗಾರಿಕೆಯ ಅನುಭವ ಹೊಂದಿರುವ ಇವರು 5000 ಲೋನ್ ಪಡೆದುಕೊಂಡು ಉದ್ಯೋಗವನ್ನು ಆರಂಭಿಸಿದ್ದಾರೆ.ಅದೇ ರೀತಿ 3)ಹನುಮಂತ ಕಂಬಳಿ ಇವರು ಕೃಷಿ ಉದ್ಯೋಗಕ್ಕಾಗಿ 3000 ಲೋನ್ ಪಡೆದುಕೊಂಡು ಕೃಷಿಯಲ್ಲಿ ಮುಂದುವರೆದಿದ್ದಾರೆ.

ಇವರೆಲ್ಲರೂ ಪ್ರತಿ ತಿಂಗಳು ಅಸಲು ಮತ್ತು ಬಡ್ಡಿ ಯಾವುದೇ ರೀತಿಯ ಕಟ್ಟು ಬಾಕಿ ಉಳಿಸದೆ ಸಾಲ ಮರುಪಾವತಿ ಮಾಡುತ್ತಿದ್ದಾರೆ. ಬಂದ ಬಡ್ಡಿಯನ್ನು ಸಂಘಕ್ಕೆ ಹಾಕಿ ಹೆಚ್ಚಿನ ಮಟ್ಟದಲ್ಲಿ ಯಾವುದೇ ಅಡೆತಡೆ ಇಲ್ಲದ ಹಾಗೆ ಸಂಘವನ್ನು ಮಾದರಿಯಾಗುವಂತೆ ವಿಕಲಚೇತನ ಸದಸ್ಯರು ನಡೆಸಿಕೊಂಡು ಹೋಗುತ್ತಿದ್ದಾರೆ.ಹಾಗೆ ಬ್ಯಾಂಕ್ನಿಂದ ಲೋನ್ ಪಡೆದುಕೊಳ್ಳಲು ಉಳಿದ ಸದಸ್ಯರು ಮುಂದುವರೆದಿದ್ದಾರೆ ಅದರ ಎಲ್ಲಾ ದಾಖಲಾತಿಯ ಕೆಲಸವನ್ನು ಸಂಗೀತ ಅವರು ಮಾಡುತ್ತಿದ್ದಾರೆ.

ಇವರ ಈ ಎಲ್ಲ ವಿಕಲಚೇತನರ ಹುಮ್ಮಸ್ಸು, ದುಡಿವ ಛಲ, ಆತ್ಮವಿಶ್ವಾಸವನ್ನು ಗಮನಿಸಿ, ಡೀಲ್ ಫೌಂಡೇಶನ್ ಸಂಸ್ಥೆಯಿಂದ ಪ್ರತಿ ವರ್ಷ ಸ್ವಾವಲಂಬನೆ ಪ್ರಶಸ್ತಿ ಕಾರ್ಯಕ್ರಮದಂತೆ ಈ ವರ್ಷವೂ ಈ ಸಂಘಕ್ಕೆ ಎರಡನೇ ಬಹುಮಾನವಾಗಿ 15000 ಹಣವನ್ನು ಪಡೆದುಕೊಂಡಿದ್ದಾರೆ.ಇದರಿಂದ ಇನ್ನೂ ಹೆಚ್ಚಿನ ಮಟ್ಟದಲ್ಲಿ ವಿಕಲಚೇತನರಿಗೆ ಸಹಾಯವಾಗಲಿ ಈ ಹಣದಿಂದ ಸಾಲವನ್ನು ಪಡೆದುಕೊಂಡು ಹೆಚ್ಚಿನ ಉದ್ಯೋಗ ಮಾಡಲಿ ಎಂಬ ಉದ್ದೇಶದಿಂದ ಈ ಬಹುಮಾನವನ್ನು ಡೀಲ್ ಫೌಂಡೇಶನ್ ಸಂಸ್ಥೆಯು ಈ ಸಂಘಕ್ಕೆ ನೀಡಲಾಗಿದೆ.

ಇಷ್ಟೆಲ್ಲ ಸಹಕಾರ ಪಡೆದುಕೊಂಡ ಸಂಘದ ಸದಸ್ಯರು ಡೀಲ್ ಫೌಂಡೇಶನ್ ಸಂಸ್ಥೆಯ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.ಅದು ಮೊದಲು ನಮಗೆ ಸಂಘದ ಬಗ್ಗೆ ಅದನ್ನು ರಚಿಸಿಕೊಳ್ಳುವುದರ ಬಗ್ಗೆ, ಬುಕ್ ಬರೆಯುವುದರ ಬಗ್ಗೆ ಯಾವುದೇ ರೀತಿಯ ಮಾಹಿತಿಯು ಇರಲಿಲ್ಲ ಸಂಗೀತ ಅವರು ಎಲ್ಲ ಮಾಹಿತಿಯನ್ನು ಹೇಳಿದಾಗ ಅದರ ಬಗ್ಗೆ ತಿಳಿಯಿತು.ಜೊತೆಗೆ ವಿಕಲಚೇತನರಿಗೆ ಹೊರಗಡೆ ಕೆಲಸ ಕೊಡಲು ಹಿಂದೆ ಮುಂದೆ ಯೋಚಿಸುತ್ತಾರೆ ಅದೇ ಡೀಲ್ ಫೌಂಡೇಶನ್ ನಿಂದ ತರಬೇತಿ ಪಡೆದುಕೊಂಡು ಸ್ವಯಂ ಉದ್ಯೋಗದಲ್ಲಿ ತೊಡಗಿದರೆ ಯಾರು ಕೂಡ ನಮ್ಮನ್ನು ತಡೆಯಲು ಹೀಯಾಳಿಸಲು ಸಾಧ್ಯವಿಲ್ಲ ಅದರಂತೆ ನಮ್ಮನ್ನು ಡೀಲ್ ಫೌಂಡೇಶನ್ ಸಂಸ್ಥೆಯು ಸದೃಢವನ್ನಾಗಿ ಮಾಡಿದೆ.ಹಾಗೆ ಅನೇಕ ಇಲಾಖೆಗಳಿಂದ ವಿಕಲಚೇತನರಿಗೆ ಸಿಗುವ ಸೌಲಭ್ಯಗಳ ಮಾಹಿತಿಯನ್ನು ಕೂಡ ನಮಗೆ ನೀಡಿದ್ದಾರೆ.ಈ ರೀತಿ ನಮ್ಮಲ್ಲಿ ಧೈರ್ಯ ತುಂಬಿ ಉದ್ಯೋಗದಲ್ಲಿ ತೊಡಗುವಂತೆ ಡೀಲ್ ಫೌಂಡೇಶನ್ ಸಂಸ್ಥೆ ಮಾಡಿದೆ.ಇಷ್ಟೆಲ್ಲ ಸಹಕಾರ ನೀಡಿದ್ದಕ್ಕಾಗಿ ನಮ್ಮ ಸಂಘದ ಸದಸ್ಯರಿಗೆ ಡೀಲ್ ಫೌಂಡೇಶನ್ ಸಂಸ್ಥೆಯು 2ನೇ ಬಹುಮಾನ ಬರಲು ಕಾರಣವಾಯಿತು.ಆದ್ದರಿಂದ ನಮ್ಮನ್ನು ಗುರುತಿಸಿ ಬೆಳಕಿಗೆ ತಂದ ಡೀಲ್ ಫೌಂಡೇಶನ್ ಸಂಸ್ಥೆಗೂ ಹಾಗೂ ಸಂಗೀತ ಅವರಿಗೂ ಸಂಘದ ಸದಸ್ಯರ ಪರವಾಗಿ ಧನ್ಯವಾದಗಳು ಅರ್ಪಿಸುತ್ತೇವೆ.ಇದೇ ರೀತಿ ಹೆಚ್ಚಿನ ಸಹಕಾರ ನೀಡಿ ನಮ್ಮನ್ನು ಬೆಳೆಸಲಿ ಎಂದು ಕೇಳಿಕೊಳ್ಳುತ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಹೀಗೆ ಡೀಲ್ ಫೌಂಡೇಶನ್ ಸಂಸ್ಥೆಯು ವಿಕಲಚೇತನರನ್ನು ಗುರುತಿಸಿ ಉದ್ಯೋಗದಲ್ಲಿ ತೊಡಗಿಸಿ ಆರ್ಥಿಕವಾಗಿ ಈ ಸಮಾಜದಲ್ಲಿ ಮುಂದೆ ಬರಲು ಬೆನ್ನೆಲುಬಾಗಿ ನಿಂತಿದೆ.ಇದೇ ರೀತಿ ಇನ್ನೂ ಹೆಚ್ಚಿನ ಮಟ್ಟದಲ್ಲಿ ವಿಕಲಚೇತನರನ್ನು ಗುರುತಿಸಿ ಅವರಿಗೆ ಸಹಾಯಕವಾಗಲಿ ಎಂದು ಕೇಳಿಕೊಳ್ಳುತ ಹೆಚ್ಚಿನ ಕೀರ್ತಿಗೊಳಿಸಲಿ ಎಂದು ಎಲ್ಲ ವಿಕಲಚೇತನರು ಹಾರೈಸುತ್ತಿದ್ದಾರೆ.

ಈ ಬ್ಲಾಗ್ ಗೆ ಸಂಬಂಧಿಸಿದಂತೆ ಯಾವುದೇ ನಿರ್ದಿಷ್ಟ ಪ್ರಶ್ನೆಗಳಿಗೆ ಅಥವಾ ಯಾವುದೇ ಸಹಾಯಕ್ಕಾಗಿ Info@deal-foundation.com ಗೆ ತಿಳಿಸಿರಿ ಮತ್ತು ನಾವು ಮಾಡುವ ಕೆಲಸದ ಕುರಿತು ಇನ್ನಷ್ಟು ತಿಳಿದುಕೊಳ್ಳಲು www.deal-foundation.com ಗೆ ಲಾಗ್ ಇನ್ ಮಾಡಿ.

ಧನ್ಯವಾದಗಳು

Scroll to Top