Select Page

ಇವುಗಳ ಬಗ್ಗೆ

ಇವುಗಳ ಬಗ್ಗೆ

ಪ್ರಾರಂಭ  :

ನಮ್ಮ ಸಂಸ್ಥೆಯು ಸುಮಾರು ಏಳು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದು, ಸಂಸ್ಥೆಯ ಸಂಸ್ಥಾಪಕರಾದ ಸುರೇಂದ್ರ ಮತ್ತು ಎಲಿಜಬೆತ್ ಶ್ರಾಫ್ ಅವರು ವಿಕಲಚೇತನರ ಉತ್ಸಾಹ ಮತ್ತು ಅನುಭವವನ್ನು ಹೊಂದಿದ್ದರಿಂದ ವಿಕಲಚೇತನರ  ವ್ಯಕ್ತಿಗಳ ಜೀವನಗಳ ಬದಲಾವಣೆ ತರುವ ದೃಷ್ಟಿ ಹೊಂದಿದ್ದು, ಎಲ್ಲರಿಗೂ ಸುಸ್ಥಿರ ಮತ್ತು ಅಂತರ್ಗತ ಭವಿಷ್ಯಕ್ಕಾಗಿ ಮೌಲ್ಯ ಸೃಷ್ಟಿಗೆ ಜೀವನೋಪಾಯದ ಅವಕಾಶಗಳನ್ನು ಸೃಷ್ಟಿಸಲು ಸಂಸ್ಥೆಯ ನಿರ್ಮಾಣವಾಗಿದೆ.

ವಿಕಲಚೇತನ ವ್ಯಕ್ತಿಗಳು ಮತ್ತು ಅವರ  ವಾಸಿಸುವ ಸಮುದಾಯವನ್ನು ಮುಖ್ಯವಾಹಿನಿಗೆ ತರುವ ವೇಗವರ್ಧಕವಾಗಿ ನಾವು ನಮ್ಮ ಪಾತ್ರವನ್ನು ಅಳವಡಿಸಲು ಮತ್ತು ವೈಯಕ್ತಿಕ ಜೀವನವನ್ನು ಪರಿವರ್ತಿಸಲು ಮತ್ತು ಅವರ ನಿಜವಾದ ಸಾಮರ್ಥ್ಯವನ್ನು ಅರಿತುಕೊಳ್ಳುವುದರ ಮೂಲಕ ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಳ್ಳಲು ಪ್ರೇರೇಪಿಸುವುದು.

ವಿಕಲಚೇತನರಿಗೆ ಉದ್ಯಮಶೀಲತೆ ಕೌಶಲ್ಯ ಅಭಿವೃದ್ಧಿ ತರಬೇತಿಯನ್ನು ಬೆಂಗಳೂರಿನಲ್ಲಿ ಪ್ರಾಯೋಗಿಕವಾಗಿ ಪ್ರಾರಂಭಿಸಿದ್ದು ಮತ್ತು ವಿಕಲಚೇತನರಿಗೆ ತರಬೇತಿ ಮತ್ತು ಉದ್ಯೋಗವಕಾಶಗಳನ್ನು ಉತ್ತೇಜಿಸುವಲ್ಲಿ ಬಹಳ ಯಶಸ್ವಿಯಾದರು ವ್ಯಾಪಕವಾದ ಸಾಮಾಜಿಕ ಆರ್ಥಿಕ ಮತ್ತು ಪರಿಸರದ ಪ್ರಭಾವವನ್ನು ಸೃಷ್ಟಿಸುವ ದೃಷ್ಟಿಯಿಂದ ಹಲವು ಪರಿಣಾಮಗಳನ್ನು ಸೃಷ್ಟಿಸುವಲ್ಲಿ ಇದು ಕಡಿಮೆಯಾಗಿದೆ ಎಂದು ನಾವು ಅರಿತುಕೊಂಡೆವು.

ನಾವು ಇನ್ನೂ ಅಭಿವೃದ್ಧಿ ಹೊಂದುವ ಹಂತದಲ್ಲಿದ್ದು ಒಬ್ಬ ವ್ಯಕ್ತಿಯ ಗುರಿ ಮತ್ತು ಸಾಧನೆ ಮೇಲೆ ಕೇಂದ್ರೀಕರಿಸಿ ನಾವು ಮಾಡುವ ಕೆಲಸದಲ್ಲಿ ಯಾವಾಗಲೂ ಉತ್ತಮವಾಗಿರಲು ಪ್ರಯತ್ನಿಸುತ್ತೇವೆ.

ನಾವು ನಮ್ಮ ಪಾಲುದಾರರು ಮತ್ತು ಬೆಂಬಲಿಗರೊಂದಿಗೆ ಸಂಪನ್ಮೂಲಗಳನ್ನು ನ್ಯಾಯಯುತವಾಗಿ ಹೂಡಿಕೆ ಮಾಡಲು ವಿಕಲಚೇತನ ವ್ಯಕ್ತಿಗಳ ಜೀವನದಲ್ಲಿ ಮತ್ತು ಅವರ ವಾಸಿಸುವ ಸಮುದಾಯಗಳಲ್ಲಿ ಶಾಶ್ವತವಾದ ಅವಕಾಶಗಳನ್ನು ಸೃಷ್ಟಿಸಲು ಕೆಲಸ ಮಾಡುತ್ತಿದ್ದೇವೆ.

ಉದ್ದೇಶಗಳು : 

  •  ವಿಕಲಚೇತನರ ಸಮಸ್ಯೆಗಳನ್ನು ಕುರಿತು ಜಾಗೃತಿ ಮೂಡಿಸುವ ತರಬೇತಿ.
  • ವಿಕಲಚೇತನರ ವೈಯಕ್ತಿಕ ಅವಶ್ಯಕತೆಗಳನ್ನು ಕುರಿತು ಸಮೀಕ್ಷೆ ಕೈಗೊಳ್ಳುವುದು.
  •  ವೈಯಕ್ತಿಕ ಮತ್ತು ಕೌಟುಂಬಿಕ ಸನ್ನಿವೇಶಗಳನ್ನು ಅಭಿವೃದ್ಧಿಪಡಿಸುವುದು.
  •  ಅರ್ಹ ಪ್ರಯೋಜನಗಳಿಗಾಗಿ ಅವಕಾಶಗಳನ್ನು ಗುರುತಿಸುವುದು.
  •  ಜೀವನೋಪಾಯ ತರಬೇತಿ ಮತ್ತು ಬೆಂಬಲವನ್ನು ಒದಗಿಸುವುದು.
  • ಆದಾಯ ಸೃಷ್ಟಿಸುವ ಚಟುವಟಿಕೆಗಳನ್ನು ಕೈಗೊಳ್ಳಲು ಹಣಕಾಸು ನೀಡುವ ಬ್ಯಾಂಕು ಮತ್ತು ವ್ಯಕ್ತಿಯ ನಡುವೆ ಕೊಂಡಿಯಾಗಿ ಕೆಲಸ ನಿರ್ವಹಿಸುವುದು.
  • ಉತ್ಪಾದನೆ ಮತ್ತು ಮಾರುಕಟ್ಟೆ ಸಂಪರ್ಕ
  • ಸುಧಾರಿತ ಫಲಿತಾಂಶಗಳಿಗಾಗಿ ಮೇಲ್ವಿಚಾರಣೆ ಮತ್ತು ಪ್ರಕ್ರಿಯೆಗಳ ತಿದ್ದುಪಡಿ.

ದೃಷ್ಟಿಕೋನ  :

 ವಿಕಲಚೇತನರ ಸಾಮರ್ಥ್ಯ ಗುರುತಿಸುವಂತಹ ಪ್ರಪಂಚದ ನಿರ್ಮಾಣ.

ಧ್ಯೇಯ :  

ಸ್ಥಿತಿಸ್ಥಾಪಕತ್ವವನ್ನು ನಿರ್ಮಿಸಲು ಮತ್ತು ವಿಕಲಚೇತನರ ವ್ಯಕ್ತಿಗಳಿಗೆ ಕೆಲಸವನ್ನು ರಚಿಸಲು ಮತ್ತು ನಿರ್ವಹಿಸಲು ಸಹಾಯ ಮಾಡುವುದು.

ಗುರಿ : 

ನಾವು ಪ್ರಸ್ತುತವಾಗಿ ಕರ್ನಾಟಕ ರಾಜ್ಯದಲ್ಲಿ ಬೆಂಗಳೂರು, ಗದಗ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಕೆಲಸ ಮಾಡುತ್ತಿದ್ದೇವೆ. 2025 ರ ವೇಳೆಗೆ ಐದು ಸಾವಿರ ವಿಕಲಚೇತನರ ಕುಟುಂಬಗಳಿಗೆ ಸುಸ್ಥಿರ ಜೀವನೋಪಾಯವನ್ನು ಸೃಷ್ಟಿಸುವುದು ನಮ್ಮ ಗುರಿಯಾಗಿದೆ.

ಸಾಧನೆಯ ಹಾದಿ :  

  • ಗದಗ ಮತ್ತು ಹಾವೇರಿ ಜಿಲ್ಲೆಗಳ ಸ್ಥಳೀಯ ಪ್ರದೇಶಗಳಲ್ಲಿ ಆರಂಭ ಸ್ವದ್ಯೋಗ ಕೇಂದ್ರವನ್ನು ಸ್ಥಾಪಿಸುವುದು. 
  • ಮೇವುಂಡಿ ಮತ್ತು ಶಿಗ್ಗಾಂವ್ ಕೃಷಿ ಆಧಾರಿತ ತರಬೇತಿ ಸಂಪನ್ಮೂಲ ಕೇಂದ್ರಗಳಾಗಿ ಮತ್ತು ಪರಿಸರ ಶಿಕ್ಷಣ ಮತ್ತು ಅಂತರ್ಗತ ಅಭಿವೃದ್ಧಿಗಾಗಿ ಪ್ರದರ್ಶನ ತಾಣಗಳಾಗಿ ಅಭಿವೃದ್ಧಿಪಡಿಸುವುದು.
  • ವಿಕಲಚೇತನ ವ್ಯಕ್ತಿಗಳು ನಡೆಸುವ ಮತ್ತು ನಿರ್ವಹಿಸುವ ಮಾದರಿ ಸಾಮಾಜಿಕ ಉದ್ಯಮ ಗಳನ್ನು ಸ್ಥಾಪಿಸುವುದು.
  •  ಹಣಕಾಸು ಸೇವೆ ಮತ್ತು ಬೆಂಬಲಕ್ಕೆ ಪ್ರೋತ್ಸಾಹ ನೀಡುವುದು.
  •  ಬೆಂಗಳೂರಿನಲ್ಲಿ ತಂತ್ರಜ್ಞಾನ ಬಳಕೆಯಿಂದ ಸಾಮಾಜಿಕ ಉದ್ಯಮ ಕೇಂದ್ರವನ್ನು ಸ್ಥಾಪಿಸುವುದು. 

            ಯಶಸ್ವಿಯಾಗಿ ಸಾಧಿಸಿದ ಆಧಾರದ ಮೇಲೆ ಮತ್ತು 2030ರ ಮುಂಚಿತವಾಗಿ ನಾವು ಇತರ ಜಿಲ್ಲೆಯಾದ್ಯಂತ ನಮ್ಮ ಚಟುವಟಿಕೆಗಳನ್ನು ವಿಸ್ತರಿಸುವ ಮತ್ತು ಪರಿಣಾಮವನ್ನು ಹೆಚ್ಚಿಸಲು ನಮ್ಮ ಕಾರ್ಯಗಳ ಮುಖಾಂತರ ಅನ್ವಯಿಸುವುದು.

ಪರಿಣಾಮಗಳ ಮೌಲ್ಯಮಾಪನ ಮಾಡುವುದು :

”ಯಾವ ಗುರಿಯ ಮೌಲ್ಯಮಾಪನ ಮಾಡಲಾಗುತ್ತದೆಯೋ ಆ ಗುರಿಯನ್ನು ಸಾಧಿಸಲಾಗುತ್ತದೆ”. ಆದ್ದರಿಂದ ವಿಕಲಚೇತನ ವ್ಯಕ್ತಿಗಳ ಜೀವನದಲ್ಲಿ ಮತ್ತು ಅವರು ವಾಸಿಸುವ ಸಮುದಾಯಗಳ ಜೀವನದಲ್ಲಿ ನಮ್ಮ ಕೆಲಸದ ಪರಿಣಾಮವನ್ನು ಮೌಲ್ಯಮಾಪನ ಮಾಡಲು ಸಮಗ್ರ ಅಭಿವೃದ್ಧಿ ಗುರಿಗಳು (SDGs) ಸಂಬಂಧಿತ ಜಾಗತಿಕ ವರದಿ ಮಾಡುವ ಉಪಕ್ರಮ (GRI) ಮತ್ತು ಇತರ ಸಂಬಂಧಿತ ಮಾನದಂಡಗಳಿಗೆ ಹೊಂದಿಕೊಂಡಂತೆ ಒಂದು ಸೂಕ್ತ ಮೌಲ್ಯಮಾಪನ ಫಲಿತಾಂಶಗಳ ಚೌಕಟ್ಟನ್ನು ಅಭಿವೃದ್ಧಿಪಡಿಸುತ್ತಿದೆ.

ಉತ್ತಮ ಅಭ್ಯಾಸದ ಪರಿಣಾಮ ಲೆಕ್ಕಪತ್ರ ತತ್ವಗಳು ಮತ್ತು ಮಾನದಂಡಗಳಿಗೆ ಅನುಗುಣವಾಗಿ ಪರಿಣಾಮದ ಫಲಿತಾಂಶಗಳ ಮುಕ್ತ, ಪಾರದರ್ಶಕ ವರದಿಗಾರಿಕೆಯನ್ನು ಖಚಿತಪಡಿಸಿಕೊಳ್ಳಲು ನಾವು ಅಂತರ್ಜಾಲದ ಶಕ್ತಿಯನ್ನು ಬಳಸುತ್ತೇವೆ.

2022 ರ ಗೈಡ್ ಸ್ಟಾರ್ ಪಾರದರ್ಶಕತೆ,

NGO ದರ್ಪನ್ NITI ಅಯೋಗ್ ಪೋರ್ಟಲ್ ನಲ್ಲಿ ನೋಂದಾಯಿಸಲಾಗಿದೆ.

Get a report of all our on field work every month.

You have Successfully Subscribed!

Share This