Select Page

ದೇವಕ್ಕ

ದೇವಕ್ಕನ ಬದಲಾವಣೆಗೆ ದಾರಿ ಸಿಕ್ಕಿದ್ದು ಹೀಗೆ :

ಡೀಲ್ ಫೌಂಡೇಶನ್ ಸಂಸ್ಥೆಯಲ್ಲಿ ತರಬೇತಿ ಪಡೆದು ತರಬೇತಿದಾರಳಾಗಿ,

ಗದಗ ಜಿಲ್ಲೆ ಮುಂಡರಗಿ ತಾಲೂಕು ಮೇವುಂಡಿ ಗ್ರಾಮದ ನಿವಾಸಿಯಾದ ದೇವಕ್ಕ ತಳವಾರವರು ದೈಹಿಕ ವಿಕಲಚೇತನತೆಯನ್ನು ಹೊಂದಿದ್ದಾಳೆ. ಇವಳು ಉಡುಪುಗಳು ಮತ್ತು ಹೊಲಿಗೆಯಲ್ಲಿ ಆಸಕ್ತಿಯನ್ನು ಹೊಂದಿದ್ದು, ಸಂಸ್ಥೆಯ ಹೊಲಿಗೆ ತರಬೇತಿ ಕೇಂದ್ರಕ್ಕೆ ಸೇರಿ ಉಡುಪುಗಳ ಹೊಲಿಗೆ ತರಬೇತಿಯನ್ನು ಯಶಸ್ವಿಯಾಗಿ ಮುಗಿಸಿದರು.

ತರಬೇತಿ ಪಡೆದ ದೇವಕ್ಕ ಹೇಳಿದ್ದು ಹೀಗೆ ನನ್ನ ಮನೆಯ ಬಾಗಿಲವರೆಗೆ ಬಂದಂತಹ ಉಡುಪು ವಿನ್ಯಾಸ ಮತ್ತು ಹೊಲಿಗೆ ತರಬೇತಿಯನ್ನು ನೀಡುವ ಅವಕಾಶ ಸಿಕ್ಕಿದ್ದು, ನನಗೆ ತುಂಬಾ ಖುಷಿಯನ್ನು ತಂದುಕೊಟ್ಟಿದೆ.

ಇದು ನನ್ನ ದೇವರ ಅನುಗ್ರಹ ಎಂದು ಬಯಸುತ್ತೇನೆ. ಹಾಗೆ ಹೊಸ ಜನರನ್ನು ಪರಿಚಯಿಸಲು ಸಾಧ್ಯವಾಯಿತು. ಸಮಾನ ಮನಸ್ಸಿನ ಆಸಕ್ತಿವುಳ್ಳ ಜನರೊಂದಿಗೆ ಸ್ನೇಹ ಬೆಳೆಸಿಕೊಂಡು ಹೊಸ ವಿಷಯಗಳ ಬಗ್ಗೆ ಕಲಿಯುವ ಅವಕಾಶಗಳನ್ನು ಪಡೆದುಕೊಂಡು ನನಗೆ ಸಿಕ್ಕಿರುವ ಸಮಯವನ್ನು ಬಹಳ ಆನಂದದಾಯಕವಾಗಿ ಮತ್ತು ಉತ್ಸಾಹ ಕತೆ ಯಿಂದ ಉಪಯೋಗಿಸಿಕೊಂಡಿದ್ದೇನೆ. ಕರೋನ ವೈರಸ್ (ಕೋವಿಡ್) ಸಹಜವಾಗಿ ನಡೆಯುವ ನಮ್ಮ ದಿನಚರಿಯನ್ನು ಅಡ್ಡಿಪಡಿಸಿದೆ, ಮತ್ತೆ ನಾನು ಗುಂಪಿನೊಂದಿಗೆ ಮರುಳಲು ಸಿದ್ಧ.

ದೇವಕ್ಕ ಅವರು ಅಂತರಿಕವಾಗಿ ಅಲಂಕಾರಿಕ ಚೀಲಗಳು (ಬ್ಯಾಗುಗಳು) ಮತ್ತು ಮಹಿಳೆಯರ ಉಡುಪುಗಳ ಉತ್ಪನ್ನಗಳನ್ನು ಉತ್ಪಾದಿಸುವದರೊಂದಿಗೆ ಡೀಲ್ ಫೌಂಡೇಶನ್ ಸಂಸ್ಥೆಯ ಹೊಲಿಗೆ ತರಬೇತಿ ಕೇಂದ್ರದ ಸಂಪನ್ಮೂಲ ವ್ಯಕ್ತಿಯಾಗಿ ವಿಕಲಚೇತನತೆಯನ್ನು ಹೊಂದಿರುವ ಮಹಿಳೆಯರಿಗೆ ಆರ್ಥಿಕ ಸ್ವತಂತ್ರವನ್ನು ಪಡೆಯಲು ಸಹಾಯ ಮಾಡುವ ಕೌಶಲ್ಯಗಳ ಬಗ್ಗೆ ತರಬೇತಿ ನೀಡುತ್ತಾರೆ.

ದೇವಕನ ಕನಸು ನನಸಾಗಲು ಸಮಾನಮನಸ್ಕರ ರೊಂದಿಗೆ ಕೈಜೋಡಿಸಿ ಉಡುಪುಗಳು ಮತ್ತು ಸಮಾಜಿಕ ಉದ್ಯಮಶೀಲತೆಯನ್ನು ಬೆಳೆಸಿಕೊಳ್ಳುವುದಕ್ಕೆ ಜೀವನೋಪಾಯ ಕಾರ್ಯಕ್ರಮದ ವ್ಯವಸ್ಥಾಪಕರಾದ ಉಮಾ ಶಿರೋಳ ಮತ್ತುಡೀಲ್ ಫೌಂಡೇಶನ್ ಸಂಸ್ಥೆಯಲ್ಲಿ ಆಕೆಯ ಸಹೋದ್ಯೋಗಿಗಳು ಬೆಂಬಲಿಸಿದ್ದಾರೆ

ದೇವಕ್ಕ ಈ ನನ್ನ ಕನಸು ನನಸಾಗಿಸುವ ಮೂಲಕ ಸಂಸ್ಥೆಯಲ್ಲಿ ಹೊಲಿಗೆ ತರಬೇತಿಗಾರಳಾಗಿ ಮುಂದುವರೆದಿದ್ದೇನೆ ಎಂದು ಹೇಳಿ ಸಂತೋಷಪಟ್ಟರು.

Get a report of all our on field work every month.

You have Successfully Subscribed!

Share This