Select Page

 ಜೀವನೋಪಾಯ ಎಂಬ ಪದವು ನಮಗೆಲ್ಲರಿಗೂ ಮನದಟ್ಟವಾಗಿದೆ, ನಾವೆಲ್ಲ ಬೇರೆ ಬೇರೆ ರೀತಿಯಲ್ಲಿ ತಮಗೆ ಮತ್ತು ಇತರರಿಗಾಗಿ ಜೀವನೋಪಾಯವನ್ನು ಉತ್ತೇಜಿಸುವ ಮಾರ್ಗಗಳ ಮೇಲೆ ಕೇಂದ್ರೀಕರಿಸುವುದು. ನಾವು ವಿಕಲಚೇತನ ವ್ಯಕ್ತಿಗಳ ಬಗ್ಗೆ ಯೋಚಿಸಿದಾಗ ಅವರು ಮತ್ತು ಅವರ ಅವಲಂಬಿತರನ್ನು ಪೋಷಿಸುವ ಮತ್ತು ಕಾಳಜಿವಹಿಸುವ ಸತತವಾಗಿ ಜೀವನವನ್ನು ನಡೆಸುವಲ್ಲಿ ಇತರರಂತೆ ಅವರಿಗೆ ಹೆಚ್ಚಿನ ಅವಶ್ಯಕತೆ ಇರುತ್ತದೆ.

ಅನಿರೀಕ್ಷಿತ ಎಂದು ಹೆಚ್ಚಿನ ವಿಕಲಚೇತನ ವ್ಯಕ್ತಿಗಳು ತಮ್ಮಲ್ಲಿರುವ ಸಾಮರ್ಥ್ಯಗಳ ಅರಿವಿನ ಕೊರತೆಯಿಂದ ಅಥವಾ ವಿಕಲಚೇತನ ವ್ಯಕ್ತಿಯ ಬಗ್ಗೆ ಸಮಾಜದ ಕಲ್ಪನೆಯ ಭಯದಿಂದ ಹೊರಗಿನ ಪ್ರಪಂಚಕ್ಕೆ ಕಡಿಮೆ ಒಳಗೊಳ್ಳುವಿಕೆಯಿಂದ ವಿಕಲತೆ ಹೊಂದಿರುವ ವ್ಯಕ್ತಿಗೆ ಅಗತ್ಯವಾದ ಕೌಶಲ್ಯಗಳ ಕೊರತೆ ಎದುರಿಸುವ ವಿಶ್ವಾಸ ಹೊಂದಿದ್ದಾರೆ.

ವಿಕಲಚೇತನರು ಸಮಾಜಕ್ಕೆ ಕೊಡುಗೆ ನೀಡಲಾರದ ವ್ಯಕ್ತಿಗಳಾಗಿ ಬದುಕುವ ದಿನಗಳು ಕಳೆದು ಹೋಗಿವೆ. ಈಗ, ಸಮಯ ಕಳೆದಂತೆ, ಮತ್ತು ತಂತ್ರಜ್ಞಾನವು ನಿಸ್ಸಂಶಯವಾಗಿ ಸಾಕಷ್ಟು ಸುಧಾರಿಸಿದೆ, ವಿಕಲಚೇತನ ಸದಸ್ಯರಲ್ಲಿ ಹೊರಬರಲು ಮತ್ತು ತಮ್ಮನ್ನು ತಾವು ಸಾಬೀತುಪಡಿಸಲು ಬಲವಾದ ಪ್ರಚೋದನೆ ಕಂಡುಬಂದಿದೆ. ಆದ್ದರಿಂದ, ತರಬೇತಿ ಮತ್ತು ಕೌಶಲ್ಯಗಳ ಅಭಿವೃದ್ಧಿಯ ಅಗತ್ಯವು ಏನು ಮಾಡಬಹುದು ಮತ್ತು ಅದನ್ನು ಹೇಗೆ ಮಾಡಬಹುದು ಎಂಬ ಕಲ್ಪನೆಗಳು ಈ ವ್ಯಕ್ತಿಗಳಿಗೆ ನೀಡಬೇಕಾದದ್ದು ಬಹಳ ಮುಖ್ಯವಾಗಿದೆ.

ಅನೇಕ ಸಂಸ್ಥೆಗಳು ಮತ್ತು ವಿವಿಧ ಕ್ಷೇತ್ರಗಳು ವಿವಿಧ ಅಂಶಗಳಲ್ಲಿ ತರಬೇತಿಯನ್ನು ಉತ್ತೇಜಿಸಲು ಕೆಲಸ ಮಾಡುತ್ತಿವೆ. ಅದು ಜನರು ತಮ್ಮನ್ನು ತಾವು ಬದಲಾಯಿಸಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಅವರು ವಾಸಿಸುವ ಭೌಗೋಳಿಕ ಮತ್ತು ಅವರ ಆಸಕ್ತಿ ಮತ್ತು ಸಾಮರ್ಥ್ಯದ ಆಧಾರದ ಮೇಲೆ ದೊಡ್ಡ ಸಮುದಾಯಕ್ಕೆ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಕಾರ್ಯವನ್ನು ಸಮರ್ಥವಾಗಿ ನಿರ್ವಹಿಸಲು ಕೊಡುಗೆ ನೀಡುತ್ತವೆ.

ತಂತ್ರಜ್ಞಾನದಲ್ಲಿನ ಪ್ರಗತಿಯು ವಿಕಲಚೇತನ ವ್ಯಕ್ತಿಗಳಿಗೆ ಸಹಾಯ ಮಾಡಲು ಬಳಸಬಹುದಾದ ವಿಧಾನಗಳು ಖಂಡಿತವಾಗಿಯೂ ಪ್ರಯೋಜನವಾಗಿದೆ ಏಕೆಂದರೆ ಇದು ಜೀವನವನ್ನು ಹೆಚ್ಚು ಅನುಕೂಲಕರ ಮತ್ತು ಸುಗಮಗೊಳಿಸುವಲ್ಲಿ ಯಶಸ್ವಿಯಾಗಿದೆ..

ಡೀಲ್ ಫೌಂಡೇಶನ್ ಇದರ ಮುಖ್ಯ ಗುರಿಯು ವಿಕಲಚೇತನ ವ್ಯಕ್ತಿಗಳ 5000 ಕುಟುಂಬಗಳಿಗೆ ಸುಸ್ಥಿರ ಜೀವನೋಪಾಯದ ಅವಕಾಶಗಳನ್ನು ಉತ್ತೇಜಿಸುವುದರ ಜೊತೆಗೆ ಗದಗ ಮತ್ತು ಬೆಂಗಳೂರು ಜಿಲ್ಲೆಗಳಾದ್ಯಂತ ಕಾರ್ಯ ನಿರ್ವಹಿಸುತ್ತಿದೆ.

ವಿಕಲಚೇತನರಿಗೆ ತರಬೇತಿಯನ್ನು ನೀಡುವುದು ವ್ಯಕ್ತಿಯ ಆಸಕ್ತಿ ಮತ್ತು ವ್ಯಕ್ತಿಯ ಸಾಮರ್ಥ್ಯದ ಆಧಾರದ ಮೇಲೆ ತ ನ್ನನ್ನು ತೊಡಗಿಸಿಕೊಂಡಿರುವ ಒಂದು ಪ್ರತಿಷ್ಠಾನದ ಪ್ರಮುಖ ಕ್ಷೇತ್ರವೆಂದರೆ ಪ್ರಸ್ತುತ ತೋಟಗಾರಿಕೆ, ಹೊಲಿಗೆ ತರಬೇತಿ ಮತ್ತು ಕೈ-ತೊಟ ಇತ್ಯಾದಿಗಳ ತರಬೇತಿಯನ್ನು ಸದಸ್ಯರಿಗೆ ನೀಡಲಾಗುತ್ತಿದೆ.

ಸಾಮಾನ್ಯವಾಗಿ ನಾವು ಆಸಕ್ತಿವುಳ್ಳ 5 ರಿಂದ 6 ಸದಸ್ಯರನ್ನು ಒಳಗೊಂಡಿರುವಂತೆ ಜಂಟಿ ಬಾಧ್ಯತಾ ಗುಂಪು ( ಜೆ.ಎಲ್.ಜಿ )ಗಳನ್ನು ರಚಿಸುತ್ತೇವೆ, ಈ ರೀತಿಯಾಗಿ ಮಾಡುವುದರಿಂದ ಸದಸ್ಯರು ವಿಷಯಗಳನ್ನು ಮತ್ತು ಜನರನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಲು ಸಹಾಯವಾಗುತ್ತದೆ. ಹಾಗೆ ಗುಂಪಿಗೆ ಅಗತ್ಯವಿರುವ ಕೌಶಲ್ಯ ಮತ್ತು ಜ್ಞಾನವನ್ನು ನೀಡಲು ಅನುಕೂಲಕರವಾಗುತ್ತದೆ, ಅದೇ ರೀತಿಯಾಗಿ ಸಮಯಕ್ಕೆ ಸರಿಯಾಗಿ ಸದಸ್ಯರು ಒಟ್ಟಿಗೆ ಸೇರಲು ಮತ್ತು ಈಗಾಗಲೇ ಅಸ್ತಿತ್ವದಲ್ಲಿರುವ ವಿಚಾರಗಳನ್ನು ನಿರ್ಮಿಸಲು ಬೇರೆ ಬೇರೆ ಆಲೋಚನೆಗಳನ್ನು ಹುಟ್ಟುಹಾಕಬಹುದು.

ಜೀವನೋಪಾಯಗಳನ್ನು ಅಳವಡಿಸಿಕೊಳ್ಳಲು ಸಾಧ್ಯವಾಗುವ ಕುರಿ ಸಾಕಾಣಿಕೆ, ಆಡು ಸಾಕಾಣಿಕೆ ಮತ್ತು ಹೈನುಗಾರಿಕೆ ಇತ್ಯಾದಿ ಇತರೆ ವಿಧಾನಗಳನ್ನು ಕುರಿತು ನಾವು ಅರಿವು ಮತ್ತು ತರಬೇತಿಯನ್ನು ಉತ್ತೇಜಿಸುತ್ತೆವೆ.

ಉಲ್ಲೇಖ ಕ್ಕೆ ಕುರಿತು ಯಾವುದೇ ಪ್ರಶ್ನೆಗಳಿಗೆ, ದಯವಿಟ್ಟು info@deal-foundation.com ನಲ್ಲಿ ನಮಗೆ ತಿಳಿಸಿ.

ನಮ್ಮ ಕುರಿತು ಇನ್ನಷ್ಟು ತಿಳಿದುಕೊಳ್ಳಲು, ದಯವಿಟ್ಟು www.deal-foundation.com ಗೆ ಲಾಗ್ ಇನ್ ಮಾಡಿ . 

Get a report of all our on field work every month.

You have Successfully Subscribed!

Share This