Select Page

ನವಂಬರ್ 2021 ರ ಕಾರ್ಯ ಚಟುವಟಿಕೆಗಳ ಸಾಧನೆ

ಜಂಟಿ ಬಾಧ್ಯತೆ ಗುಂಪು ಮತ್ತು ಸ್ವಸಹಾಯ ಗುಂಪುಗಳ ರಚನೆ

ಈ ತಿಂಗಳಲ್ಲಿ ಹತ್ತು ಜನರ ಎರಡು ಅಂದರೆ (ಜಂಟಿ ಬಾಧ್ಯತೆ ಗುಂಪು) ಗಳನ್ನು ಮತ್ತು ಒಂದು ಸ್ವಸಹಾಯ ಗುಂಪು ರಚಿಸುವದರೊಂದಿಗೆ ಜೀವನೋಪಾಯದ ಉದ್ದೇಶದಿಂದ ಆರ್ಥಿಕ ಮತ್ತು ಹಣಕಾಸಿನ ತರಬೇತಿಯನ್ನು ಪಡೆದಿದ್ದಾರೆ.

ಜಂಟಿ ಬಾಧ್ಯತೆ ಗುಂಪುಗಳಿಗೆ ಸಾಮರ್ಥ್ಯ ವೃದ್ಧಿಯ ತರಬೇತಿ

ಭುವನೇಶ್ವರಿ ಗುಂಪು ಗದಗ ಜಿಲ್ಲಾ ಮುಂಡರಗಿ ತಾಲೂಕು ಪೇಠಾಲೂರು ಗ್ರಾಮದಲ್ಲಿ ಗುಂಪಿನ ಸದಸ್ಯರಿಗೆ ಸಾಮರ್ಥ್ಯದ ವೃದ್ಧಿಯ ಬಗ್ಗೆ ತರಬೇತಿ ನೀಡಿರುವುದು.

ಜಂಟಿ ಬಾಧ್ಯತೆ ಗುಂಪು ಸಭೆ

ಜಂಟಿ ಬಾಧ್ಯತೆ ಗುಂಪು ಗದಗ ಜಿಲ್ಲಾ ಮುಂಡರಗಿ ತಾಲೂಕು ಹಾರೂಗೇರಿ ಗ್ರಾಮದಲ್ಲಿ ಮಾಸಿಕ ಸಭೆಯಲ್ಲಿ ಜೀವನೋಪಾಯಕ್ಕೆ ಸಂಬಂಧಿಸಿದಂತೆ ಆರ್ಥಿಕ ಚಟುವಟಿಕೆಗಳ ಬಗ್ಗೆ ಸಭೆಯನ್ನು ನಡೆಸಲಾಯಿತು.

ಬ್ಯಾಂಕ್ ಸಂಪರ್ಕದೊಂದಿಗೆ

ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ (ಕೆವಿಜಿಬ್ಯಾಂಕ್) ಮೇವುಂಡಿ  ಶಾಖೆಯಲ್ಲಿ ಜಂಟಿ ಬಾಧ್ಯತೆ ಗುಂಪುಗಳಿಗೆ ಬ್ಯಾಂಕಿನಲ್ಲಿ ಸಾಲದ ಸಂಪರ್ಕವನ್ನು ಒದಗಿಸಲಾಯಿತು

ವಿಕಲಚೇತನರ ತಾಲೂಕು ಸಹಕಾರಿ ಸಂಘದ ಜಾಗೃತಿ ಕಾರ್ಯಕ್ರಮ

ವಿಕಲಚೇತನರ ಜಂಟಿ ಭಾದ್ಯತೆ ಗುಂಪುಗಳಲ್ಲಿ ವಿಕಲಚೇತನರ ತಾಲೂಕು ಮಟ್ಟದ ಸಹಕಾರಿ ಸಂಘದ ಪ್ರಾಮುಖ್ಯತೆಯ ಬಗ್ಗೆ ಚರ್ಚಿಸುವ ಕಾರ್ಯಕ್ರಮವನ್ನು ನಡೆಸಲಾಯಿತು.

“ರೈತರೊಂದಿಗೊಂದು ದಿನ”  ಕಾರ್ಯಕ್ರಮ

ಕೃಷಿ ಇಲಾಖೆ ಆಯೋಜಿಸಿದ್ದ “ಜೈ ಕಿಸಾನ್” ಯೋಜನೆಯ ಅಡಿಯಲ್ಲಿ ಹಮ್ಮಿಕೊಂಡ ರೈತರೊಂದಿಗೊಂದು ದಿನ ಕಾರ್ಯಕ್ರಮ ಗದಗ ಜಿಲ್ಲೆ ಕೊಣ್ಣೂರು ಗ್ರಾಮದಲ್ಲಿ ಆಯೋಜಿಸಲಾಗಿತ್ತು, ಇದರಲ್ಲಿ ಡೀಲ್ ಫೌಂಡೇಶನ್ ಭಾಗಿಯಾಗಿ ಸಂಸ್ಥೆಯ ಕಾರ್ಯಕ್ರಮದ ಪರಿಚಯದೊಂದಿಗೆ, ಜಂಟಿ ಬಾಧ್ಯತೆ ಗುಂಪು ಡೀಲ್ ಫೌಂಡೇಶನ್ ಬೆಂಬಲದೊಂದಿಗೆ ರಚಿಸಲಾದ ಯಕ್ಲಾಸಪುರ ಗ್ರಾಮದ “ಸರಸ್ವತಿ ಗುಂಪು” ಗೆ ಕಾರ್ಯಕ್ರಮದಲ್ಲಿ ಪ್ರಶಸ್ತಿಯೊಂದಿಗೆ 10,000 ಸುತ್ತು ನಿಧಿ ಯನ್ನು ನೀಡಲಾಯಿತು..ಹಾಗೇಯೆ ಸಂಸ್ಥೆಯ ವಿಕಲಚೇತನ ರಿಂದ ತಯಾರಿಸಿದ ವಸ್ತುಗಳ ಪ್ರದರ್ಶನ ನಡೆಯಿತು.

ವಿಕಲಚೇತನರೊಂದಿಗೆ ವಿಚಾರ ಗುಂಪು  (ಫೋಕಸ್ ಗ್ರೂಪ್)

 ಡೀಲ್ ಫೌಂಡೇಶನ್ ಸಂಸ್ಥೆಯು ಗದಗ ಜಿಲ್ಲೆಯ ಬರದೂರ, ಕಲಕೇರಿ, ಹಾರೋಗೇರಿ, ಡಂಬಳ, ಹೊಸಡಂಬಳ ಮತ್ತು ಕದಂಪೂರ ಗ್ರಾಮಗಳಲ್ಲಿ ವಿಕಲಚೇತನರ ಮನೆಗಳಿಗೆ ಭೇಟಿ ನೀಡಿ ಸಹಾಯಕ ತಂತ್ರಜ್ಞಾನದ ಅಳವಡಿಕೆಯ ಅಗತ್ಯತೆಯ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಮತ್ತು ಗದಗ ಜಿಲ್ಲೆಯ ರೆಡ್ ಕ್ರಾಸ್ ವಿಕಲಚೇತನರ ಪುನರ್ವಸತಿ ಕೇಂದ್ರಕ್ಕೆ ವಿಕಲಚೇತನರ ತಂತ್ರಜ್ಞಾನಗಳ ಬಗ್ಗೆ ಭೇಟಿ ನೀಡಲಾಯಿತು.

ವಿಶ್ವ ಉಳಿತಾಯ ದಿನ ಕಾರ್ಯಕ್ರಮ

“ವಿಶ್ವ ಉಳಿತಾಯ ದಿನ” ಕಾರ್ಯಕ್ರಮದ ಅಂಗವಾಗಿ ಡೀಲ್ ಫೌಂಡೇಶನ್ ಮತ್ತು ಎಸ್.ಬಿ.ಐ ಫೌಂಡೇಶನ್ ದೊಂದಿಗೆ ಜಂಟಿ ಭಾದ್ಯತೆ ಗುಂಪುಗಳ ಮತ್ತು ಸ್ವಸಹಾಯ ಗುಂಪುಗಳ ಸದಸ್ಯರಿಗೆ ಗದಗ ಜಿಲ್ಲೆಯ ಹಾರೂಗೇರಿ ಗ್ರಾಮದಲ್ಲಿ “ಉಳಿತಾಯ ದಿನ” ಕಾರ್ಯಕ್ರಮವನ್ನು ಆಯೋಜಿಸಿ ಉಳಿತಾಯದ ಕುರಿತು ಮಹಿಳೆಯರಿಗೆ ಅರಿವು ಮೂಡಿಸಲಾಯಿತು.

ಜೀವನೋಪಾಯದ  ಅವಕಾಶಗಳನ್ನು ಕಂಡುಕೊಳ್ಳವುದು.

 ಗದಗ ಜಿಲ್ಲೆಯ ಹಾರೋಗೇರಿ ಗ್ರಾಮದ ದೇವಕ್ಕ ಅವರು ಜಂಟಿ ಬಾಧ್ಯತೆ ಗುಂಪಿನಲ್ಲಿ ಸೇರಿಕೊಂಡು ಹಣದ ಉಳಿತಾಯವನ್ನು ಸಂಗ್ರಹಿಸಿ ಬ್ಯಾಂಕಿನೊಂದಿಗೆ ಸಂಪರ್ಕ ಹೊಂದಿ ಸಾಲ ಪಡೆದು ಹೈನುಗಾರಿಕೆಯಲ್ಲಿ ತೊಡಗಿದ್ದಾರೆ.

ಗದಗ ಜಿಲ್ಲೆಯ ಬರದೂರು ಗ್ರಾಮದ ಪಕೀರಪ್ಪ ನವರು ಡೀಲ್ ಫೌಂಡೇಶನ್ ನಲ್ಲಿ ಜೀವನೋಪಾಯದ ತರಬೇತಿ ಪಡೆದು ನಂತರ ತೋಟಗಾರಿಕೆ, ಕೃಷಿ ಯೊಂದಿಗೆ ಕುರಿ ಸಾಕಾಣಿಕೆಯಲ್ಲಿ ತೊಡಗಿಕೊಂಡು ಜೀವನೋಪಾಯ ನಡೆಸುತ್ತಿದ್ದಾರೆ.

ಸಂಸ್ಥೆಯಿಂದ ಹೊಲಿಗೆ ತರಬೇತಿ ಪಡೆದ ಜಂಟಿ ಬಾಧ್ಯತೆ ಗುಂಪಿನ ಸದಸ್ಯರು ಹೊಲಿಗೆ ಕಾರ್ಯದಲ್ಲಿ ನಿರತರಾಗಿದ್ದಾರೆ.

ಹೊಲಿಗೆ ತರಬೇತಿ ಕೇಂದ್ರ

ಡೀಲ್ ಫೌಂಡೇಶನ್ ಮೇವುಂಡಿ ಗ್ರಾಮದಲ್ಲಿ ಹೊಲಿಗೆ ತರಬೇತಿ ಕೇಂದ್ರದಲ್ಲಿ ತರಬೇತಿಯು ಮುಂದುವರೆದಿದೆ.

ಮೆಕ್ಕೆ ಜೋಳದ ಬೆಳೆಗೆ ಸಾವಯವ ಔಷಧಿ ಸಿಂಪಡಣೆ

ಗದಗ ಜಿಲ್ಲೆಯ ಮೇವುಂಡಿ ಗ್ರಾಮದಲ್ಲಿ ತೋಟಗಾರಿಕೆ ಮತ್ತು ಕೃಷಿಯಲ್ಲಿ ಮೆಕ್ಕೆಜೋಳ ಬೆಳೆ.

ಎರೆಹುಳಗೊಬ್ಬರ

ಗದಗ ಜಿಲ್ಲೆ ಮೇವುಂಡಿ ಗ್ರಾಮದಲ್ಲಿರುವ ತೋಟಗಾರಿಕೆ ಮತ್ತು ಕೃಷಿ ಫಾರಂನಲ್ಲಿ ಎರೆಹುಳ ಗೊಬ್ಬರ ತಯಾರಿಕೆ ಕೆಲಸ ಮುಂದುವರೆದಿದೆ..

ಮುಂಬರುವ ಮುಖ್ಯಾಂಶಗಳು

  • ವಿಕಲಚೇತನ ಸದಸ್ಯರ ಎರಡು ಜಂಟಿ ಬಾಧ್ಯತೆ ಗುಂಪು ರಚನೆ ಮಾಡುವುದು.
  • ಎರಡು ಜಂಟಿ ಬಾದ್ಯತೆ ಗುಂಪುಗಳ ಹಣಕಾಸು ಸಂಗ್ರಹಣೆ ಮತ್ತು ಬ್ಯಾಂಕ್ ಸಂಪರ್ಕ ಕಲ್ಪಿಸುವುದು.
  • ಜಂಟಿ ಬಾಧ್ಯತೆ ಗುಂಪುಗಳ ಸಾಮರ್ಥ್ಯ ನಿರ್ವಹಣೆ ಮತ್ತು ಜೀವನೋಪಾಯದ ತರಬೇತಿ ನೀಡುವುದು.
  • ಸಿದ್ದ ಉಡುಪುಗಳ ಹೊಲಿಗೆ ತರಬೇತಿ ಮುಂದುವರಿಸುವುದು.
  • ತೋಟದ ಕೃಷಿ ತರಬೇತಿ ಕೇಂದ್ರ ಕಾರ್ಯ.
  • ಎರೆಹುಳು ಗೊಬ್ಬರ ತಯಾರಿಕೆ.
  • ಪೇರಲ ಮತ್ತು ಕರಿಬೇವು ಎಲೆಗಳ ಕೊಯ್ಲು ಮತ್ತು ಮಾರಾಟ ಮಾಡುವುದು.
  • ರೈತ ಉತ್ಪಾದನೆ ಕಂಪನಿ ( ಎಪ್ ಪಿ ಓ ) ತಯಾರಿ ಕೆಲಸ.
  • ವಿಕಲಚೇತನರ ಸಹಕಾರಿ ಸಂಘದ ನೋಂದಣಿ ಕಾರ್ಯ.
  • ತೋಟಗಾರಿಕೆ ಇಲಾಖೆಯಿಂದ ಜೇನುಸಾಕಣೆಯ ಕೃಷಿಗೆ ಅರ್ಜಿ ಅನುಸರಣೆ.
  • ಮುಂಡರಗಿ ಹೋಬಳಿಯ ಸಮೀಕ್ಷೆಯ ಕಾರ್ಯ.

Get a report of all our on field work every month.

You have Successfully Subscribed!

Share This