Select Page

ನಾಯಕತ್ವ ತಂಡ

ಶ್ರೀಮತಿ ಎಲಿಜಬೆತ್ ಶ್ರಾಫ್ – ಸಂಸ್ಥೆಯ ಹಣಕಾಸು ಮತ್ತು ಆಡಳಿತದ ಮುಖ್ಯಸ್ಥೆರು, ಇವರು ವೈಯಕ್ತಿಕ ಬ್ಯಾಂಕು ಮತ್ತು ವಿಮೆಯಲ್ಲಿ ಅನುಭವವನ್ನು ಹೊಂದಿದ್ದಾರೆ. ಪಿಜಿಯೊಂದಿಗೆ ಲಂಡನ್‌ನ ಯು.ಸಿ.ಎಲ್‌ನಿಂದ ಜಾಗತಿಕ ಆರೋಗ್ಯ ಮತ್ತು ಅಭಿವೃದ್ಧಿ ವಿಕಲಚೇತನತೆ ಮಾರ್ಗದಲ್ಲಿ ಅರ್ಹತೆ, ಅವರು ಹಿರಿಯ ವೃತ್ತಿಪರರು ಮತ್ತು ಸಾಮಾಜಿಕ ಬ್ಯಾಂಕಿನ ಪ್ರಮುಖ ಪ್ರತಿಪಾದಕರು ಮತ್ತು ಆರೈಕೆದಾರರಾಗಿ ಜವಾಬ್ದಾರಿಗಳನ್ನು ಹೊಂದಿರುವ ಅವರು ನೇರ ಅನುಭವ ಮತ್ತು ವಿಕಲಚೇತನ ಜನರ ಮೇಲೆ ಪರಿಣಾಮ ಬೀರುವ ಸಮಸ್ಯೆಗಳ ತಿಳುವಳಿಕೆಯನ್ನು ಹೊಂದಿದ್ದಾರೆ.

ಡಾ. ಆರ್ ಎಸ್ ಗಿರಡ್ಡಿ ಮಂಡಳಿಯ ಸದಸ್ಯರು, ಇವರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ (UAS) ಧಾರವಾಡ ಮತ್ತು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ (UAS) ರಾಯಚೂರು ಈ ವಿಶ್ವವಿದ್ಯಾಲಯಗಳಲ್ಲಿ ಡೀನ್ (ಆಡಳಿತ) ಮತ್ತು ಕೀಟಶಾಸ್ತ್ರದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಇವರು ಕೃಷಿ ಮತ್ತು ಕೃಷಿ ಸಂಬಂಧಿತ ಉಪ ಕಸುಬುಗಳ ವಲಯದಲ್ಲಿ ಅನುಭವವನ್ನು ಹೊಂದಿದ್ದಾರೆ.

 ಇವರು ಸಂಸ್ಥೆಯ ತಳಮಟ್ಟದ ಅಭಿವೃದ್ಧಿಯಲ್ಲಿ ಪ್ರಮುಖರಾಗಿರುವರು.

ಶ್ರೀ ಸರ್ಬಜಿತ್ ಘೋಸ್ – ಮಂಡಳಿಯ ಸದಸ್ಯರು, ಇವರು ಮೆಕ್ಯಾನಿಕಲ್ ಇಂಜಿನಿಯರಿಂಗ್ ಇವರು ಬಟ್ಟೆ ತಯಾರಿಕೆಯಲ್ಲಿ 40 ವರ್ಷಗಳ ಅನುಭವವನ್ನು ಹೊಂದಿದ್ದಾರೆ. ಇವರು ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ಉತ್ಕಟ ಭಾವನೆಯಿಂದ ನಿರ್ವಹಿಸುವವರು.

ಇವರು ISO-26000 ಅನ್ನು ಅನುಷ್ಠಾನಗೊಳಿಸಿದ ನೇರ ಅನುಭವವನ್ನು ಹೊಂದಿದ್ದಾರೆ ಮತ್ತು ವಿವಿಧ ಸಾಮಾಜಿಕ ಕಾರಣಗಳನ್ನು ಬೆಂಬಲಿಸುವ ಗೌರವಾನ್ವಿತ ಮಂಡಳಿಯ ಸದಸ್ಯರಾಗಿದ್ದಾರೆ.

ಶ್ರೀ ಸಂತೋಷ್ ಪಂಚಭಾವಿ – ಆಡಳಿತ ಮಂಡಳಿ ಸದಸ್ಯರು, ಇವರು ಎಲೆಕ್ಟ್ರಾನಿಕ್ಸ್ ಮತ್ತು ಕಂಪ್ಯೂಟರ್ ಸೈನ್ಸ್ ನಲ್ಲಿ ಪದವಿ ಹೊಂದಿದ್ದಾರೆ. ಐಟಿ ಮತ್ತು ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್‌ನಲ್ಲಿ ಇವರಿಗೆ 12 ವರ್ಷಗಳ ಅನುಭವವನ್ನು ಹೊಂದಿದ್ದಾರೆ.

ಇವರು ವಿಕಲಚೇತನರ ನೇರವಾದ ಅನುಭವ ಮತ್ತು ತಿಳುವಳಿಕೆಯನ್ನು ಹೊಂದಿದ್ದಾರೆ ಮತ್ತು ಡಿಜಿಟಲ್ ಸೇರ್ಪಡೆಗೆ ಉತ್ಸುಕರಾಗಿದ್ದಾರೆ.

ಶ್ರೀ ಸುರೇಂದ್ರ ಶ್ರಾಫ್ – ಕಾರ್ಯನಿರ್ವಾಹಕ ನಿರ್ದೇಶಕರು, ಇವರು ಸಾರ್ವಜನಿಕ ಸೇವಾ ನಿರ್ವಹಣೆ ಮತ್ತು ವಿಕಲಚೇತನದ ಮತ್ತು ಅಭಿವೃದ್ಧಿಯ ಹಿನ್ನೆಲೆಯನ್ನು ಹೊಂದಿದ್ದಾರೆ. ಸಾರ್ವಜನಿಕ, ಖಾಸಗಿ ಮತ್ತು ಲಾಭೋದ್ದೇಶವಿಲ್ಲದ ವಲಯ ಸಂಸ್ಥೆಗಳಲ್ಲಿ 30 ವರ್ಷಗಳ ಸಂಬಂಧಿತ ಅನುಭವ ಹೊಂದಿರುವ ಇವರು ಸುಸ್ಥಿರ ಅಭಿವೃದ್ಧಿಗಾಗಿ ಭಾಗವಹಿಸುವಿಕೆಯ ವಿಧಾನಗಳ ಪ್ರಬಲ ಪ್ರತಿಪಾದಕರಾಗಿದ್ದಾರೆ.

ವಿಕಲಚೇತನದ ಬಗ್ಗೆ ಸಾಕಷ್ಟು ಅನುಭವವನ್ನು ಹೊಂದಿರುವ ಇವರು ವಿಕಲಚೇತನರಿಗಾಗಿ ಜೀವನದ ಅವಕಾಶಗಳನ್ನು ಮತ್ತು ಅವುಗಳನ್ನು ಸುಧಾರಿಸಲು ಉತ್ತೇಜನ ನೀಡುವಂತೆ ಪ್ರತಿಪಾದಿಸುತ್ತಾರೆ.

ಶ್ರೀ ನಿಕ್ ಎಡ್ವರ್ಡ್ಸ್ – ಉನ್ನತಮಟ್ಟದ ಕಾರ್ಯಕ್ರಮದ ಸಲಹೆಗಾರರು, ಇವರು ಸಂಕ್ರಾಮಿಕ ರೋಗಶಾಸ್ತ್ರ, ಮಾನವನ ಆರೋಗ್ಯ ಮತ್ತು ವಿಷಶಾಸ್ತ್ರದಲ್ಲಿ 30 ವರ್ಷಗಳ ಅನುಭವದ ಪರಿಣತಿಯನ್ನು ಹೊಂದಿದ್ದಾರೆ. ಹವಾಮಾನ ಬದಲಾವಣೆ, ಸಮುದಾಯದ ಆರೋಗ್ಯ, ಅಭಿವೃದ್ಧಿ ಮತ್ತು ಆರಂಭಿಕ ಮಧ್ಯಸ್ಥಿಕೆಯ ಕಾರ್ಯಕ್ರಮಗಳ ಬಗ್ಗೆ ತೀವ್ರವಾದ ಆಸಕ್ತಿಯನ್ನು ಹೊಂದಿದ್ದು, ವಿಕಲಚೇತನರ ವೈಯಕ್ತಿಕ ಅನುಭವವನ್ನು ಹೊಂದಿದ್ದಾರೆ.

ಡಾ. ಜಾವೀದ್ ಮುಲ್ಲಾ – ಗೌರವಾನ್ವಿತ ನಿರ್ದೇಶಕರು, ಐ.ಎಫ್.ಎಸ್ ಪ್ರಯೋಜನಗಳು, ಇವರು ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ (UAS) ಪಶು ವಿಜ್ಞಾನ ವಿಭಾಗ ಧಾರವಾಡ ಮಾಜಿ ಮುಖ್ಯಸ್ಥರಾದ ಇವರು 35 ವರ್ಷಗಳ ಅನುಭವದೊಂದಿಗೆ ಡೈರಿ ವಿಜ್ಞಾನದಲ್ಲಿ ಡಾಕ್ಟರೇಟ್ ಪದವಿಯನ್ನು ಪಡೆದುಕೊಂಡಿದ್ದು,ಇವರು ಸುಸ್ಥಿರ ಜೀವವೈವಿಧ್ಯತೆ ಮತ್ತು ಪರಿಸರ ಯೋಗಕ್ಷೇಮಕ್ಕಾಗಿ ಸಮಗ್ರ ಕೃಷಿ ಪದ್ಧತಿ ಉದ್ಯೋಗದ ಪ್ರಮುಖ ಪ್ರತಿಪಾದಕರಾಗಿದ್ದಾರೆ.

ಶ್ರೀಮತಿ ಉಮಾ ಶಿರೋಳ – ಕಾರ್ಯಕ್ರಮ ಸಂಯೋಜಕರು, ಇವರು ಸಮಾಜ ಸಂಘಟನೆ ಮತ್ತು ಸಮುದಾಯದ ಕ್ಷೇತ್ರದಲ್ಲಿ 19 ವರ್ಷಗಳ ಅನುವವನ್ನು ಹೊಂದಿರುವ ಇವರು ಪದವಿಯನ್ನು ಹೊಂದಿದ್ದಾರೆ.

ತಳಮಟ್ಟದ ಚಳುವಳಿಗಳ ತೀವ್ರ ಬೆಂಬಲಿಗರಾದ ಇವರು, ಅಂತರ್ಗತ ಅಭಿವೃದ್ಧಿಯನ್ನು ಉತ್ತೇಜಿಸುವಲ್ಲಿ ಸರ್ಕಾರೇತರ ಸಂಸ್ಥೆಗಳ (ಎನ್‌.ಜಿ.ಒ) ಪಾತ್ರ ಮತ್ತು ಕೊಡುಗೆಗಳ ಬಗ್ಗೆ ವ್ಯಾಪಕವಾದ ತಿಳುವಳಿಕೆಯನ್ನು ಬೆಳೆಸಿಕೊಂಡಿದ್ದಾರೆ. ಇವರು ವಿಸ್ತರಣೆ ಮತ್ತು ಸಮುದಾಯ ಆಧಾರಿತ ಸೇವಾ ನಿಬಂಧನೆಯ ಪ್ರಬಲ ಪ್ರತಿಪಾದರು.

ಶ್ರೀ ರೋಹನ್ ರೋಚೆ – ಅಭಿವೃದ್ಧಿ ಮತ್ತು ಸಂಪರ್ಕದ ನಿರ್ವಹಣೆ, ಬಿಸಿನೆಸ್ ಅಡ್ಮಿನಿಸ್ಟ್ರೇಶನ್‌ನಲ್ಲಿ ನಲ್ಲಿ ಪದವಿಯನ್ನು ಹೊಂದಿದ್ದು ಹಾಗೂ ವಿಮೆ ಕ್ಷೇತ್ರಗಳಲ್ಲಿ ಮತ್ತು ಗ್ರಾಹಕರ ಸಂಬಂಧಗಳೊಂದಿಗೆ  15 ವರ್ಷಗಳ ಅನುಭವವನ್ನು ಹೊಂದಿದ್ದಾರೆ. 

ಇವರು ವಿಕಲಚೇತನಕ್ಕೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಆಳವಾದ ತಿಳುವಳಿಕೆಯನ್ನು ಹೊಂದಿದ್ದು, ಪರಿಣಾಮಕಾರಿ ಸಹಭಾಗಿಗಳ ನಿಗದಿತ ಕಾರ್ಯಕ್ರಮದ ಪ್ರಮುಖ ಅನುಭವವನ್ನು ಮತ್ತು ಸೂಕ್ಷ್ಮ-ದೃಷ್ಟಿಯನ್ನು ತರುತ್ತಾರೆ.

ಶ್ರೀಮತಿ ಆಗ್ನೆಸ್ ಮೇರಿ – ಡಿಜಿಟಲ್ ಮಾರ್ಕೆಟಿಂಗ್ ಮತ್ತು ಕಂಟೆಂಟ್ ಡೆವಲಪ್‌ಮೆಂಟ್ ಅಧಿಕಾರಿಗಳು, ಡೀಲ್ ಫೌಂಡೇಶನ್ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುವ ಇವರು ವಿಪ್ರೊ ಸಂಸ್ಥೆಯಲ್ಲಿ ವಲಸೆ ತಜ್ಞರಾಗಿ ಕಾರ್ಯನಿರ್ವಹಿಸಿ ಸಾಕಷ್ಟು ಅನುಭವವನ್ನು ಹೊಂದಿದ್ದಾರೆ. ಇವರು ಸೃಜನಶೀಲತೆ, ಬರವಣಿಗೆ ಕೌಶಲ್ಯ ಮತ್ತು ನೇರ ವೈಯಕ್ತಿಕ ಅನುಭವ ಮತ್ತು ವಿಕಲಚೇತನದ ಬಗ್ಗೆ ಸಾಕಷ್ಟು ಅನುಭವವನ್ನು ಹೊಂದಿದ್ದಾರೆ. 

Get a report of all our on field work every month.

You have Successfully Subscribed!

Share This