Select Page

ಫೆಬ್ರವರಿ 2022 ರ ಕಾರ್ಯ ಚಟುವಟಿಕೆಗಳ ಸಾಧನೆ

ಹೊಸ ಸ್ವ-ಸಹಾಯ ಗುಂಪು ಮತ್ತು ಜಂಟಿ ಭಾದ್ಯತೆ ಗುಂಪು ರಚನೆ:

ನಾವು ಈ ತಿಂಗಳಲ್ಲಿ ಗದಗ ಜಿಲ್ಲೆಯ ಮೇವುಂಡಿ ಗ್ರಾಮದಲ್ಲಿ ‘ಆಧಾರಸ್ತಂಭ ಸ್ವ-ಸಹಾಯ ಗುಂಪು’ ಮತ್ತು ‘ಶ್ರೀನಿಧಿ ಜಂಟಿ ಭಾದ್ಯತೆ ಗುಂಪು’ಎಂಬ ಎರಡು ಹೊಸ ಗುಂಪುಗಳನ್ನು ರಚಿಸಲಾಗಿದೆ.

ಗುಂಪುಗಳ ಬ್ಯಾಂಕ ಖಾತೆ ತೆರೆಯುವಿಕೆ :

ಶ್ರೀನಿಧಿ ಜಂಟಿ ಭಾದ್ಯತೆ ಗುಂಪುನ ಬ್ಯಾಂಕ ಖಾತೆಯನ್ನು ತೆರೆಯಲಾಗಿದೆ.

ಸಾಲದ ಅರ್ಜಿ:

ಗದಗ ಜಿಲ್ಲಾ ಮುಂಡರಗಿ ತಾಲೂಕು ಮೇವುಂಡಿ ಗ್ರಾಮದಿಂದ ಆದಿಶಕ್ತಿ ಜಂಟಿ ಭಾದ್ಯತೆ ಗುಂಪು, ಶ್ರೀ ಮಂಜುನಾಥ ಜಂಟಿ ಬಾಧ್ಯತೆ ಗುಂಪು ಮತ್ತು ಯಕ್ಲಾಸಪೂರ ಗ್ರಾಮದಿಂದ ಶುಕ್ರಗೌರಿ ಜಂಟಿ ಬಾಧ್ಯತೆ ಗುಂಪುಗಳಿಗೆ ಬ್ಯಾಂಕ್ ಸಾಲಕ್ಕೆ ಅರ್ಜಿ ಸಲ್ಲಿಸುವ ಮೂಲಕ ಆರ್ಥಿಕ ಸ್ವಾವಲಂಬನೆಯ ಜೀವನ ಮಟ್ಟದ ಸುಧಾರಣೆ ಹೆಜ್ಜೆ.

ಸಾಲ ಮಂಜೂರಾತಿ:

ಗದಗ ಜಿಲ್ಲಾ ಮುಂಡರಗಿ ತಾಲೂಕು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಮೇವುಂಡಿ ಮತ್ತು ಡಂಬಳ ಶಾಖೆಗಳಲ್ಲಿ ಮೇವುಂಡಿ ಗ್ರಾಮದಿಂದ ಜೇನುಗೂಡು ಸ್ವ-ಸಹಾಯ ಗುಂಪು ಮತ್ತು ಆದಿಶಕ್ತಿ ಜಂಟಿ ಭಾದ್ಯತೆ ಗುಂಪು ಯಕ್ಲಾಸಪೂರ ಗ್ರಾಮದಿಂದ ಮಂಜುನಾಥ  ಜಂಟಿ ಭಾದ್ಯತೆ ಗುಂಪು ಮತ್ತು ಡಂಬಳ ಗ್ರಾಮದಿಂದ ಶರ್ಮಿಸಾವಲಿ  ಜಂಟಿ ಭಾದ್ಯತೆ  ಗುಂಪುಗಳಿಗೆ  ಬ್ಯಾಂಕ್ ಸಾಲ ಮಂಜೂರಾಗಿದೆ .

 ಜಂಟಿ ಭಾದ್ಯತೆ ಗುಂಪು & ಸ್ವ-ಸಹಾಯ ಗುಂಪು ಸಭೆಗಳು :   ( JLG/SHG )

ನಾವು ಗದಗ ಜಿಲ್ಲೆಯ ಮೇವುಂಡಿ ಗ್ರಾಮದಲ್ಲಿ ಹುಚ್ಚೀರೇಶ್ವರ ಜಂಟಿ ಭಾದ್ಯತೆ ಗುಂಪು, ಜನನಿ ಸ್ವ-ಸಹಾಯ ಗುಂಪು ಮತ್ತು ನವಚೇತನ ಜಂಟಿ ಭಾದ್ಯತೆ ಗುಂಪುಗಳಿಗೆ ಮಾಸಿಕ ಗುಂಪು ಸಭೆಗಳನ್ನು ನಡೆಸಿದ್ದೇವೆ.

ವಿಕಲಚೇತನರವೈದ್ಯಕೀಯತಪಾಸಣಾಶಿಬಿರ:

ಗದಗ ಜಿಲ್ಲೆಯ ಮುಂಡರಗಿತಾಲೂಕಿನಲ್ಲಿ ವಿಕಲಚೇತನರ ವೈದ್ಯಕೀಯ ತಪಾಸಣಾ ಶಿಬಿರ ವಿಕಲಚೇತನರಿಗೆ ಒದಗಿಸಲಾಗುವ ಸಾಧನ ಸಲಕರಣೆಗಳು ಅಗತ್ಯತೆಗಳನ್ನು ನಿರ್ಣಯಿಸಲು ವಿಕಲಚೇತನರ ಮೌಲ್ಯಮಾಪನ ಶಿಬಿರವನ್ನು ಆಯೋಜಿಸಲಾಗಿತ್ತು.

ಕೌಶಲ್ಯತರಬೇತಿಕಾರ್ಯಕ್ರಮ:

ನಾವು ಗದಗ ಜಿಲ್ಲೆಯ ಮೇವುಂಡಿ ಗ್ರಾಮದಲ್ಲಿ ಸೆಲ್ಕೊ ಫೌಂಡೇಶನ್ ಸಹಯೋಗದಲ್ಲಿ ಜಂಟಿ ಭಾದ್ಯತೆ ಗುಂಪು & ಸ್ವ-ಸಹಾಯ ಗುಂಪು ಸದಸ್ಯರಿಗೆ ತರಬೇತಿ ಕಾರ್ಯಕ್ರಮವನ್ನು ನಡೆಸಿದ್ದೇವೆ. ತರಬೇತಿಯು ಸ್ವಯಂ ಉದ್ಯೋಗ ಮತ್ತು ಸ್ವತಂತ್ರ ಜೀವನಕ್ಕೆ ಕೇಂದ್ರೀಕೃತವಾಗಿತ್ತು..

ಹೊಲಿಗೆ ತರಬೇತಿ:

ಗದಗ ಜಿಲ್ಲೆಯ ಮೇವುಂಡಿ ಗ್ರಾಮದಲ್ಲಿರುವ ನಮ್ಮ ತರಬೇತಿ ಕೇಂದ್ರದಲ್ಲಿ ಹೊಲಿಗೆ ಮತ್ತು ಉಡುಪು ತರಬೇತಿ ತರಗತಿಗಳು ಮುಂದುವರೆದಿವೆ.

ಮೆಕ್ಕೆಜೋಳ ಬೆಳೆ ಕಟಾವು:

ಗದಗ ಜಿಲ್ಲೆಯ ಮೇವುಂಡಿ ಗ್ರಾಮದ ನಮ್ಮ ಕೃಷಿ ಮತ್ತು ತೋಟಗಾರಿಕೆ ಜಮೀನಿನಲ್ಲಿ ಜೋಳದ ಬೆಳೆ ಕಟಾವು.

ಎರೆಹುಳು ಗೊಬ್ಬರ ತಯಾರಿಕೆ :

ಗದಗ ಜಿಲ್ಲೆಯ ಮೇವುಂಡಿಯಲ್ಲಿರುವ ನಮ್ಮ ಕೃಷಿ/ತೋಟಗಾರಿಕೆ ಪ್ಲಾಟ್‌ನಲ್ಲಿ ಎರೆಹುಳು ಗೊಬ್ಬರ ತಯಾರಿಕೆಯ ಕೆಲಸ ಮುಂದುವರೆದಿದೆ.

ಮುಂಬರುವ ಕಾರ್ಯ ಚಟುವಟಿಕೆಗಳ ಮುಖ್ಯಾಂಶಗಳು:

  • ವಿಕಲಚೇತನತೆಯನ್ನು ಹೊಂದಿರುವ ಎರಡು ಜಂಟಿ ಬಾಧ್ಯತೆ ಗುಂಪುಗಳನ್ನು ರಚಿಸುವುದು.
  • ಎರಡು ಜಂಟಿ ಬಾಧ್ಯತೆ ಗುಂಪುಗಳಿಗೆ ಬ್ಯಾಂಕ್ ಸಂಪರ್ಕವನ್ನು ಕಲ್ಪಿಸುವುದು.
  • ಗುಂಪುಗಳಿಗೆ ಸಾಮರ್ಥ್ಯ ಬಲವರ್ಧನೆ ತರಬೇತಿ ಮತ್ತು ಜೀವನೋಪಾಯದ ತರಬೇತಿಯನ್ನು ನಡೆಸಲಾಗುವುದು.
  • ಹೊಲಿಗೆ ತರಬೇತಿ ಕೇಂದ್ರದಲ್ಲಿ ಉಡುಪುಗಳ ತಯಾರಿಕೆಯ ತರಬೇತಿಯು ಮುಂದುವರೆಯುವುದು.
  • ತೋಟದ ಕೃಷಿ ತರಬೇತಿ ಕೇಂದ್ರ ಕಾರ್ಯ.
  • ಎರೆಹುಳು ಗೊಬ್ಬರ ತಯಾರಿಕೆ.
  • ಪೇರಲ ಮತ್ತು ಕರಿಬೇವು ಎಲೆಗಳ ಕೊಯ್ಲು ಮತ್ತು ಮಾರಾಟ ಮಾಡುವುದು.
  • ರೈತ ಉತ್ಪಾದನೆ ಕಂಪನಿ ( ಎಪ್ ಪಿ ಓ ) ತಯಾರಿ ಕೆಲಸ.
  • ವಿಕಲಚೇತನರ ಸಹಕಾರಿ ಸಂಘದ ನೋಂದಣಿ ಕಾರ್ಯ.
  • ಮೂಲ ಸಮೀಕ್ಷೆ ಆರಂಭ.

Get a report of all our on field work every month.

You have Successfully Subscribed!

Share This