Select Page

ಬಸವಣ್ಣೆವ್ವ

ಬಸವಣ್ಣೆವ್ವ

ಬಸವಣ್ಣೆವ್ವನವರು ಬಾಲ್ಯದ ಜೀವನದಲ್ಲಿಯ ಪೋಲಿಯೊಗೆ ತುತ್ತಾದರು. ಕೃಷಿ ಕುಟುಂಬಕ್ಕೆ ವಿವಾಹವಾದ ಇವರು ತನ್ನ ಸ್ಥಿತಿಯನ್ನು ಅರಿಯಲು ನಿರಾಕರಿಸಿದರು.

ಅವರು ಸುಸಿರ ಗ್ರಾಮೀಣ ಜೀವನೋಪಾಯದ ಕಾರ್ಯಕ್ರಮದ ಮೂಲಕ ಡೀಲ್ ಫೌಂಡೇಶನ್ ಸಂಸ್ಥೆಯು ಪರಿಚಯವಾಯಿತು. ಉಪಯುಕ್ತ ಜೀವನೋಪಾಯದ ಕೌಶಲ್ಯಗಳನ್ನು ಪಡೆದ ಆಕೆ ಮನೆಯಲ್ಲಿ ಎರಡು ಹಸುಗಳನ್ನು ಮತ್ತು ಎತ್ತುಗಳನ್ನು ನೋಡಿಕೊಳ್ಳಲು ಸಹಾಯ ಮಾಡುತ್ತಾಳೆ ಮತ್ತು ತಮ್ಮ ಜಮೀನಿನ ಕೆಲಸಗಳನ್ನು ನಿರ್ವಹಿಸುತ್ತಾರೆ. ಹಾಗೆಯೇ ತನ್ನ ಚಿಕ್ಕ ಕುಟುಂಬದ ಸದಸ್ಯರಿಗೆ ಬಟ್ಟೆಗಳನ್ನು ಹೊಲಿಯುವ ಸಾಕಷ್ಟು ಹೊಲಿಗೆ ತರಬೇತಿ ಕೌಶಲ್ಯಗಳನ್ನು ಪಡೆದುಕೊಂಡಿದ್ದಾರೆ.

ಬಸವಣ್ಣೆವ್ವನವರು ಇತ್ತೀಚಿಗೆ ಒಂದು ಸಣ್ಣ ಝರಾಕ್ಸ್ ಮಷೀನ್ ಅನ್ನು ತೆಗೆದುಕೊಂಡಿದ್ದು ಅದರಿಂದ ಹಳ್ಳಿಯ ಸಮುದಾಯದ ಜನರಿಗೆ ಸಹಾಯವಾಗಿದೆ, ಮತ್ತು ಇದನ್ನು ಉಪಯೋಗಿಸುವುದರಿಂದ ಅವರಿಗೆ ಹೆಚ್ಚುವರಿ ಆದಾಯವನ್ನು ತಂದುಕೊಡುತ್ತಿದೆ.

ಡೀಲ್ ಫೌಂಡೇಶನ್ ಸಂಸ್ಥೆಯ ಜೀವನೋಪಾಯದ ಅಧಿಕಾರಿಗಳಾದ ರೇಣುಕಾದೇವಿ ಅವರು ಬಸವಣ್ಣೆವ್ವ ಅವರೊಂದಿಗೆ ಸ್ಥಳೀಯ ಅಗತ್ಯಕ್ಕೆ ಅನುಗುಣವಾಗಿ ಶಾವಿಗೆ ಮಷೀನ್ ಅನ್ನು ಹಾಕಿಕೊಳ್ಳುವ ಮೂಲಕ ಒಂದು ಸಣ್ಣ ಪ್ರಮಾಣದ ಉದ್ಯೋಗಕ್ಕೆ ಸಹಾಯ ಮಾಡುತ್ತಿದ್ದಾರೆ, ಇದು ಮತ್ತೊಂದು ಆದಾಯವನ್ನು ಸೃಷ್ಟಿಸುವುದರ ಜೊತೆಗೆ ಆದಾಯವನ್ನು ಮಟ್ಟವನ್ನು ಹೆಚ್ಚಿಸಲು ಮತ್ತು ವೈಯಕ್ತಿಕ ಸ್ಥಿತಿಸ್ಥಾಪಕತ್ವವನ್ನು ನಿರ್ಮಿಸಲು ಸಹಾಯ ಮಾಡುತ್ತದೆ.

“ಡೀಲ್ ಫೌಂಡೇಶನ್ ಸಂಸ್ಥೆಯಿಂದ ನಾನು ಪಡೆಯುವ ನಿರಂತರ ಬೆಂಬಲ ಮತ್ತು ಪ್ರೋತ್ಸಾಹ ನನಗೆ ಬಹಳಷ್ಟು ಸಹಾಯ ಮಾಡಿದೆ, ನಿರ್ದಿಷ್ಟವಾಗಿ ಹೇಳುವುದಾದರೆ ಕೃಷಿಯಾಧಾರಿತ ಜೀವನೋಪಾಯದ ತರಬೇತಿಗಳ ಬಗ್ಗೆ ನನಗೆ ಸರಿಯಾದ ಮಾಹಿತಿಯನ್ನು ನೀಡುವುದರ ಜೊತೆಗೆ ವಿಶ್ವಾಸ ಮತ್ತು ಯಶಸ್ವಿಯಾಗಿ ಉದ್ಯೋಗವನ್ನು ಮಾಡಲು ನನಗೆ ಬೆಂಬಲವನ್ನು ನೀಡಿದೆ” ಎಂದು ಬಸವಣ್ಣೆವ್ವ ಅವರು ಹೇಳಿದರು.

Get a report of all our on field work every month.

You have Successfully Subscribed!

Share This