Select Page

ಮಾರ್ಚ್ 2022 ರ ಕಾರ್ಯ ಚಟುವಟಿಕೆಗಳ ಸಾಧನೆ

ಹೊಸ ಜಂಟಿ ಭಾದ್ಯತೆ ಗುಂಪು ರಚನೆ:

ನಾವು ಈ ತಿಂಗಳ ಅವಧಿಯಲ್ಲಿ, ನಾವು ಗದಗ ಜಿಲ್ಲೆಯ ಎಕ್ಲಾಸಪುರ ಗ್ರಾಮದಲ್ಲಿ ನಂದಿನಿ ಜೆಎಲ್‌ಜಿ ಎಂಬ ಹೊಸ ಜಂಟಿ ಭಾದ್ಯತೆ ಗುಂಪನ್ನು ರಚಿಸಿದ್ದೇವೆ.

ಗುಂಪುಗಳ ಬ್ಯಾಂಕ ಖಾತೆ ತೆರೆಯುವಿಕೆ :

ಗದಗ ಜಿಲ್ಲಾ ಮುಂಡರಗಿ ತಾಲೂಕು ಎಕ್ಲಾಸಪುರ ಗ್ರಾಮದ ನಂದಿನಿ ಜೆಎಲ್‌ಜಿ ಅವರು ತಮ್ಮ ಗುಂಪಿನ ಬ್ಯಾಂಕ್ ಖಾತೆ ತೆರೆಯುವ ಮೂಲಕ ಆರ್ಥಿಕ ಸೇರ್ಪಡೆಯತ್ತ ಮೊದಲ ಹೆಜ್ಜೆ ಇಟ್ಟರು.

ಸಾಲದ ಅರ್ಜಿ:

ಎರಡು ಗುಂಪುಗಳು, ಮೇವುಂಡಿ ಗ್ರಾಮದ ಸಾಯಿನಾಥ ಜೆಎಲ್‌ಜಿ ಮತ್ತು ಎಕ್ಲಾಸಪುರ ಗ್ರಾಮದ ಶ್ರೀ ರಾಧಾಕೃಷ್ಣ ಜೆಎಲ್‌ಜಿ ಗುಂಪು ಬ್ಯಾಂಕ್ ಸಾಲಕ್ಕಾಗಿ ಅರ್ಜಿ ಸಲ್ಲಿಸುವ ಮೂಲಕ ಆರ್ಥಿಕ ಸ್ವಾತಂತ್ರ್ಯದತ್ತ ಮೊದಲ ಹೆಜ್ಜೆ ಇಟ್ಟರು.

ಗುಂಪು ಸಾಲ ಮಂಜೂರಾತಿ:

ಗದಗ ಜಿಲ್ಲಾ ಮುಂಡರಗಿ ತಾಲೂಕು ಈ ತಿಂಗಳಲ್ಲಿ, ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ (ಕೆವಿಜಿಬಿ) ಮೇವುಂಡಿ ಶಾಖೆಯಿಂದ ಮೂರು ಜಂಟಿ ಭಾದ್ಯತೆ ಗುಂಪುಗಳಾದ ರಾಧಾಕೃಷ್ಣ ಜೆಎಲ್‌ಜಿ, ರೇಣುಕಾದೇವಿ ಜೆಎಲ್‌ಜಿ ಮತ್ತು ಮಹಾಶಕ್ತಿ ಜೆಎಲ್‌ಜಿ ಗುಂಪು ಬ್ಯಾಂಕ್ ಸಾಲವನ್ನು ಮಂಜೂರು ಮಾಡಿತು.

ಮಾಸಿಕ ಗುಂಪು ಸಭೆಗಳು:

ನಾವು ಗದಗ ಜಿಲ್ಲೆಯ ಮುಂಡರಗಿ ತಾಲೂಕು ಪೇಟೆಲೂರು ಗ್ರಾಮದಲ್ಲಿ ಭುವನೇಶ್ವರಿ ಜೆಎಲ್‌ಜಿ ಮತ್ತು ಹಾರೋಗೇರಿ ಗ್ರಾಮದಲ್ಲಿ ಜ್ಯೋತಿ ಜೆಎಲ್‌ಜಿಗಾಗಿ ಮಾಸಿಕ ಗುಂಪು ಸಭೆಗಳನ್ನು ನಡೆಸಿದ್ದೇವೆ.

ನಾಯಕತ್ವ ತರಬೇತಿ ಕಾರ್ಯಕ್ರಮ:

ಗದಗ ಜಿಲ್ಲೆಯ ಮೇವುಂಡಿ ಗ್ರಾಮದಲ್ಲಿ ಆದಿಶಕ್ತಿ ಜೆಎಲ್‌ಜಿ ಮತ್ತು ಹುಚ್ಚೀರೇಶ್ವರ ಜೆಎಲ್‌ಜಿ ಎಂಬ ಎರಡು ಗುಂಪುಗಳಿಗೆ ನಾಯಕತ್ವ ತರಬೇತಿ ಕಾರ್ಯಕ್ರಮಗಳನ್ನು ನಡೆಸಿದ್ದೇವೆ.

ವಿಕಲಚೇತನ ಜಾಗೃತಿ ಮೂಡಿಸುವ ತರಬೇತಿ:

ಗದಗದ ಮುಂಡರಗಿ ತಾಲೂಕಿನ ಪೇಠಾಲೂರ ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಸದಸ್ಯರಿಗೆ ಅಂಗವಿಕಲರ ಹಕ್ಕುಗಳ (ಆರ್‌ಪಿಡಬ್ಲ್ಯುಡಿ) ಕಾಯಿದೆ 2016ರ ಅನುಸಾರವಾಗಿ ವಿಕಲಚೇತನ ವರ್ಗೀಕರಣದ ಕುರಿತು ತರಬೇತಿ ನೀಡಿದ್ದೇವೆ.

ಅರ್ಹತೆ ಪ್ರಯೋಜನಗಳ ಪರಿಶೀಲನೆ ಸಮೀಕ್ಷೆ:

ಗದಗ ಜಿಲ್ಲೆಯ ಮೇವುಂಡಿ ಮತ್ತು ಬರದೂರು ಗ್ರಾಮಗಳಲ್ಲಿ ನಾವು ಅರ್ಹತೆ ಪ್ರಯೋಜನಗಳ ಪರಿಶೀಲನೆಯ ಕುರಿತು ಸಮೀಕ್ಷೆ ನಡೆಸಿದ್ದೇವೆ. ಲಭ್ಯವಿರುವ ಪ್ರಯೋಜನಗಳು ಮತ್ತು ಅವುಗಳನ್ನು ಪಡೆಯುವ ಕಾರ್ಯವಿಧಾನಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಈ ಸಮೀಕ್ಷೆಗಳನ್ನು ನಡೆಸಲಾಗಿದೆ.

ಕಿಸಾನ್ ಗೋಷ್ಠಿ ಕಾರ್ಯಕ್ರಮ:

ಗದಗದ ಮೇವುಂಡಿ ಗ್ರಾಮದಲ್ಲಿ ಕೃಷಿ ಇಲಾಖೆ ಮುಂಡರಗಿ ಸಹಯೋಗದಲ್ಲಿ ರೈತರು ಮತ್ತು ಸ್ವಸಹಾಯ ಸಂಘದ ಸದಸ್ಯರಿಗೆ ಕಿಸಾನ್ ಗೋಷ್ಠಿ ಕಾರ್ಯಕ್ರಮ ನಡೆಸಿದ್ದೇವೆ. ಕೃಷಿ ಮತ್ತು ಸಂಬಂಧಿತ ವಲಯಗಳಲ್ಲಿ ಡಿಜಿಟಲೀಕರಣದ ಕಡೆಗೆ ರೈತರನ್ನು ಸಮೀಪಿಸಲು ಮತ್ತು ಕೃಷಿ ಸಂಸ್ಥೆಗಳೊಂದಿಗೆ ಅವರ ಉದ್ದೇಶಪೂರ್ವಕ ಸಂವಹನವನ್ನು ಮಾಡಲು ಈ ತರಬೇತಿಯನ್ನು ನಡೆಸಲಾಯಿತು.

ಹೊಲಿಗೆ ಮತ್ತು ಉಡುಪು ತರಬೇತಿ ಘಟಕ:

ಗದಗ ಜಿಲ್ಲೆಯ ಮೇವುಂಡಿ ಗ್ರಾಮದಲ್ಲಿರುವ ನಮ್ಮಹೊಲಿಗೆ ಮತ್ತು ಉಡುಪು ತರಬೇತಿ ಘಟಕದಲ್ಲಿ ಹೊಲಿಗೆ ತರಗತಿಗಳು ಮುಂದುವರೆದಿವೆ.ಇದು ಮೇವುಂಡಿ ಮತ್ತು ಸುತ್ತಮುತ್ತಲಿನ ಮಹಿಳೆಯರಿಗೆ ಪರ್ಯಾಯ ಜೀವನೋಪಾಯದ ಚಟುವಟಿಕೆಯನ್ನು ಆರಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ.

ಎರೆಹುಳು ಗೊಬ್ಬರ ತಯಾರಿಕೆ :

ಗದಗ ಜಿಲ್ಲೆಯ ಮೇವುಂಡಿಯಲ್ಲಿರುವ ನಮ್ಮ ಕೃಷಿ/ತೋಟಗಾರಿಕೆ ಪ್ಲಾಟ್‌ನಲ್ಲಿ ಎರೆಹುಳು ಗೊಬ್ಬರ ತಯಾರಿಕೆಯ ಕೆಲಸ ಮುಂದುವರೆದಿದೆ.

ಮುಂಬರುವ ಕಾರ್ಯ ಚಟುವಟಿಕೆಗಳ ಮುಖ್ಯಾಂಶಗಳು:

  • ವಿಕಲಚೇತನತೆಯನ್ನು ಹೊಂದಿರುವ ಹತ್ತು ಜಂಟಿ ಬಾಧ್ಯತೆ ಗುಂಪುಗಳನ್ನು ರಚಿಸುವುದು.
  • ಎರಡು ಜಂಟಿ ಬಾಧ್ಯತೆ ಗುಂಪುಗಳಿಗೆ ಬ್ಯಾಂಕ್ ಸಂಪರ್ಕವನ್ನು ಕಲ್ಪಿಸುವುದು.
  • ಗುಂಪುಗಳಿಗೆ ಸಾಮರ್ಥ್ಯ ಬಲವರ್ಧನೆ ತರಬೇತಿ ಮತ್ತು ಜೀವನೋಪಾಯದ ತರಬೇತಿಯನ್ನು ನಡೆಸಲಾಗುವುದು.
  • ಹೊಲಿಗೆ ತರಬೇತಿ ಕೇಂದ್ರದಲ್ಲಿ ಉಡುಪುಗಳ ತಯಾರಿಕೆಯ ತರಬೇತಿಯು ಮುಂದುವರೆಯುವುದು.
  • ಎರೆಹುಳು ಗೊಬ್ಬರ ತಯಾರಿಕೆ.
  • ಪೇರಲ ಮತ್ತು ಕರಿಬೇವು ಎಲೆಗಳ ಕೊಯ್ಲು ಮತ್ತು ಮಾರಾಟ ಮಾಡುವುದು.
  • ರೈತ ಉತ್ಪಾದನೆ ಕಂಪನಿ ( ಎಪ್ ಪಿ ಓ ) ತಯಾರಿ ಕೆಲಸ.
  • ವಿಕಲಚೇತನರ ಸಹಕಾರಿ ಸಂಘದ ನೋಂದಣಿ ಕಾರ್ಯ.
  • ಗದಗ ಜಿಲ್ಲೆಯ ಮುಂಡರಗಿ ಹೋಬಳಿಯ ಸರ್ವೆ ಕಾರ್ಯ.
  • ಗದಗ ಜಿಲ್ಲೆಯ ಮೇವುಂಡಿ ಗ್ರಾಮದಲ್ಲಿ ‘ಆರಂಭ ಸ್ವೌದ್ಯೋಗ ಕೇಂದ್ರ (ASK) ಕೇಂದ್ರ ಸ್ಥಾಪನೆ

Get a report of all our on field work every month.

You have Successfully Subscribed!

Share This