ಆದಿಶಕ್ತಿ ಮಹಿಳಾ ಸ್ವಸಹಾಯ ಸಂಘದ ಕೇಸ್ ಸ್ಟಡಿ

 

ವಿಕಲಚೇತನರ ಮತ್ತು ಮಹಿಳೆಯರ ಸಾವಲಂಬನೆ ಜೀವನಕ್ಕಾಗಿ ಡೀಲ್ ಫೌಂಡೇಶನ್ ಸಂಸ್ಥೆಯು ತರಬೇತಿಗಳನ್ನು ನೀಡಿ ಅವರ ಅಭಿವೃದ್ಧಿಗಾಗಿ ಅನೇಕ ತರಬೇತಿಗಳ ಮಾರ್ಗವನ್ನು ನೀಡುತ್ತಿದೆ.ಅದರಿಂದ ವಿಕಲಚೇತನರ ಮತ್ತು ಮಹಿಳೆಯರ ಸ್ವಸಹಾಯ ಸಂಘ ರಚಿಸಿ ಅವರಿಗೆ ಡೀಲ್ ಫೌಂಡೇಶನ್ ವತಿಯಿಂದ ಕುಂಕುಮ ತರಬೇತಿ,ಮೇಣಬತ್ತಿ ತರಬೇತಿ,ಪೇಪರ್ ಬ್ಯಾಗ್ ತರಬೇತಿ, ಹೈನುಗಾರಿಕೆ ತರಬೇತಿ, ಮುಂತಾದ ತರಬೇತಿಗಳನ್ನು ನೀಡಿ ಬ್ಯಾಂಕಿನಿಂದ ಸಾಲವನ್ನು ಕೊಡಿಸಿ ಅವರ ಆರ್ಥಿಕ ಜೀವನಕ್ಕೆ ನೆರಳಾಗುವಂತೆ ಪ್ರತಿ ತಾಲೂಕಿನಲ್ಲಿ ಲವ್ಲೀ ವುಡ್ ಆಫೀಸರ್ಸ್ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದರಿಂದ ಪ್ರತಿ ತಾಲೂಕಿನಲ್ಲಿ ಅನೇಕ ವಿಕಲಚೇತನ ಮಹಿಳೆಯರ ತಮ್ಮ ಸ್ವಾವಲಂಬನೆ ಜೀವನವನ್ನು ಗುರುತಿಸಿ ಕೊಂಡಿದ್ದಾರೆ.

ಮಹಿಳೆಯರು ಕೂಡ ಯಾವುದಕ್ಕೂ ಕಡಿಮೆ ಇಲ್ಲ ಅವರಿಗೂ ಅವಕಾಶ ಮಾರ್ಗವನ್ನು ಸೂಚಿಸಿದರೆ ಏನಾದರೂ ಸಾಧಿಸುತ್ತಾರೆ ಎನ್ನುವುದಕ್ಕೆ ಈ ಮಹಿಳಾ ಸ್ವಸಹಾಯ ಉದಾಹರಣೆ ಆಗಿದೆ. ಹೌದು ಪ್ರತಿ ತಾಲೂಕಿನಲ್ಲಿ ಲವ್ಲಿವುಡ್ ಆಫೀಸರ್ ಮೂಲಕ ಮಹಿಳಾ ಸ್ವಸಹಾಯ ಸಂಘ ರಚಿಸಿ ಅವರನ್ನು ಉದ್ಯೋಗದಲ್ಲಿ ತೊಡಗುವಂತೆ ಮಾಡಿದ್ದಾರೆ.ಅಂತಹ ಸಂಘದಲ್ಲಿ ನೋಡುವುದಾದರೆ ಮುಂಡರಗಿ ತಾಲೂಕಿನ ಡೋಣಿ ಗ್ರಾಮದ ಆದಿಶಕ್ತಿ ಮಹಿಳಾ ಸ್ವಸಹಾಯ ಸಂಘವು ಒಂದು.

ಈ ಸಂಘದ ಬಗ್ಗೆ ನೋಡುವುದಾದರೆ ಮುಂಡರಗಿ ತಾಲೂಕಿನಲ್ಲಿ ಡೀಲ್ ಫೌಂಡೇಶನ್ ವತಿಯಿಂದ ಲವ್ಲೀ ವುಡ್ ಆಫೀಸರ್ ಆದ ರೇಣುಕಾ ಕಲ್ಲಳ್ಳಿ ಇವರು ದೋಣಿ ಗ್ರಾಮಕ್ಕೆ ಭೇಟಿ ನೀಡಿ ಅಲ್ಲಿನ ವಿಕಲಚೇತನರ ಸರ್ವೆ ಮಾಡಿ ವಿಆರ್ ಡಬ್ಲ್ಯೂ ಮೂಲಕ ವಿಕಲಚೇತನರ ಮನೆಗಳಿಗೆ ಭೇಟಿ ನೀಡಿ ಅವರಿಗೆ ಡೀಲ್ ಫೌಂಡೇಶನ್ ಸಂಸ್ಥೆಯ ಬಗ್ಗೆ ಮತ್ತು ಸ್ವಸಹಾಯ ಸಂಘಗಳ ಬಗ್ಗೆ ಮಾಹಿತಿಯನ್ನು ಅರ್ಥ ಮಾಡಿಸಿ ವಿಕಲ ಚೇತನರ ಸ್ವಸಹಾಯ ಸಂಘಗಳಲ್ಲಿ ತೊಡಗಿ ಸ್ವಯಂ ಉದ್ಯೋಗ ಮಾಡುವಂತೆ ಮಾಡಿದ್ದಾರೆ.ಪ್ರತಿ ತಿಂಗಳ ವಿಕಲಚೇತನರ ಗುಂಪುಗಳಿಗೆ ರೇಣುಕಾ ಅವರು ಭೇಟಿ ನೀಡಿ ತರಬೇತಿಯನ್ನು ನೀಡುವುದನ್ನು ಗಮನಿಸಿದ ಅಲ್ಲಿನ ಮಹಿಳೆಯರು ಕೂಡ ನಾವು ಇದೇ ರೀತಿಯ ಸ್ವಸಹಾಯ ಸಂಘದಲ್ಲಿ ತೊಡಗುತ್ತೇವೆ ನಮಗೂ ಅವಕಾಶ ಕೊಡಿ ಎಂದು ಅಲ್ಲಿ ನಮ್ಮ ಮಹಿಳೆಯರು ರೇಣುಕಾ ಅವರ ಹತ್ತಿರ ತಮ್ಮ ಅಭಿಪ್ರಾಯ ಆಸಕ್ತಿಯನ್ನು ವ್ಯಕ್ತಪಡಿಸಿದರು.

ನಂತರ ರೇಣುಕಾ ಅವರು ಆ ಎಲ್ಲ ಮಹಿಳೆಯರನ್ನು ಸೇರಿಸಿ 2022 ರಲ್ಲಿ ಈ ಸಂಘವನ್ನು ರಚಿಸಿದರು.ಅದಕ್ಕೆ ಆದಿಶಕ್ತಿ ಮಹಿಳಾ ಸ್ವಸಹಾಯ ಸಂಘ ಎಂದು ಹೆಸರಿಟ್ಟು ಬ್ಯಾಂಕ್ ಖಾತೆಯನ್ನು ತೆರೆದರು.ಪ್ರತಿ ತಿಂಗಳ ನೂರು ರೂಪಾಯಿ ಉಳಿತಾಯವನ್ನು ಕಟ್ಟುತ್ತಿದ್ದಾರೆ.ನಂತರ ಈ ಸಂಘಕ್ಕೆ ರೇಣುಕಾ ಅವರು ಡೀಲ್ ಫೌಂಡೇಶನ್ ವತಿಯಿಂದ ಬುಕ್ ರೈಟಿಂಗ್ ತರಬೇತಿ, ಲೀಡರ್ಶಿಪ್ ತರಬೇತಿ, 2016ರ ಡಿಸ್ಬಿಲಿಟಿ ತರಬೇತಿಯನ್ನು ನೀಡಿದರು.ಹೀಗೆ ಸ್ವಲ್ಪ ದಿನ ಕಳೆದ ನಂತರ ಉದ್ಯೋಗದ ತರಬೇತಿಗಳಾದ ಕುಂಕುಮ ತರಬೇತಿ, ಮೇಣದಬತ್ತಿ ತರಬೇತಿ, ಪೇಪರ್ ಬ್ಯಾಗ್ ತರಬೇತಿ ಮುಂತಾದ ಉದ್ಯೋಗ ತರಬೇತಿಗಳನ್ನು ನೀಡಿ ಅವುಗಳ ಮಾರುಕಟ್ಟೆಯ ಬಗ್ಗೆ ಮಾಹಿತಿಯನ್ನು ನೀಡಿದರು.

ಉದ್ಯೋಗ ತರಬೇತಿಯನ್ನು ಪಡೆದುಕೊಂಡ ನಂತರ ಆಸಕ್ತಿ ಹೊಂದಿದ ಉದ್ಯೋಗದಲ್ಲಿ ತೊಡಗಲು ಸದಸ್ಯರು ತೀರ್ಮಾನಿಸಿದರು. ಆದರೆ ಅದಕ್ಕೆ ಬಂಡವಾಳ ಬೇಕು ಅದಕ್ಕಾಗಿ ಎಲ್ಲ ಮಹಿಳೆಯರು ಸಂಘದ ವತಿಯಿಂದ ಬ್ಯಾಂಕ್ ಲೋನ್ ಪಡೆದುಕೊಳ್ಳಲು ತೀರ್ಮಾನಿಸಿದರು. ಅದಕ್ಕಾಗಿ ಪ್ರತಿ ತಿಂಗಳ ಮೀಟಿಂಗ್ ನಲ್ಲಿ ರೇಣುಕಾ ಅವರೊಂದಿಗೆ ಚರ್ಚಿಸಿ ಎಲ್ಲ ಸದಸ್ಯರ ದಾಖಲಾತಿಯೊಂದಿಗೆ ಬ್ಯಾಂಕ್ ಲೋನ್ಗಾಗಿ ಅರ್ಜಿಯನ್ನು ಸಲ್ಲಿಸಿದರು.ಅದರಂತೆ ಬ್ಯಾಂಕ್ ನಿಂದ ಈ ಸಂಘಕ್ಕೆ 60,000 ಲೋನ್ ಸ್ಯಾಂಕ್ಷನ್ ಆಯ್ತು.ಆ ಲೋನ್ ಅನ್ನು ಸಂಘದ ಸದಸ್ಯರಲ್ಲಿ ಸ್ವಯಂ ಉದ್ಯೋಗಕ್ಕಾಗಿ ಲೋನನ್ನು ಪಡೆದುಕೊಂಡಿದ್ದಾರೆ. ಅದರಲ್ಲಿ ಶೀಲವ್ವ ಆವಿನ ಇವರು ಕುರಿಮರಿ ಸಾಕಾಣಿಕೆ ಉದ್ಯೋಗದಲ್ಲಿ ತೊಡಗಲು 10,000 ಲೋನ್ ತೆಗೆದುಕೊಂಡು ಉದ್ಯೋಗದಲ್ಲಿ ತೊಡಗಿದ್ದಾರೆ.ಅದೇ ರೀತಿ ಕಸ್ತೂರಿ ಆವಿನ್ ಇವರು ಮಕ್ಕಳ ವಿದ್ಯಾಭ್ಯಾಸಕ್ಕಾಗಿ 20,000 ಲೋನ್ ಪಡೆದುಕೊಂಡು ಮಕ್ಕಳ ಭವಿಷ್ಯಕ್ಕೆ ಆಧಾರವಾಗಿದ್ದಾರೆ. ನಂತರ ರೇಣವ್ವ ಆವಿನ್ ಇವರು ಕೂಡ 10,000 ಲೋನ್ ಪಡೆದುಕೊಂಡು ಬೀಜ ಗೊಬ್ಬರಕ್ಕಾಗಿ ಕೃಷಿ ಉದ್ಯೋಗದಲ್ಲಿ ಮುಂದುವರೆದಿದ್ದಾರೆ. ಅದೇ ರೀತಿ ವಿಜಯಲಕ್ಷ್ಮಿ ಅವಿನ್ ಇವರು ಕೂಡ ಟೈಲರಿಂಗ್ ಉದ್ಯೋಗ ಮಾಡಲು ಹತ್ತು ಸಾವಿರ ಲೋನ್ ಪಡೆದುಕೊಂಡು ಉದ್ಯೋಗ ಮಾಡುತ್ತಿದ್ದಾರೆ.ಹೀಗೆ ಎಲ್ಲ ಸದಸ್ಯರು ತರಬೇತಿ ಪಡೆದುಕೊಂಡು ಸ್ವಯಂ ಉದ್ಯೋಗದಲ್ಲಿ ತೊಡಗಿ ಎಲ್ಲ ಮಹಿಳೆಯರಿಗೂ ಮಾದರಿಯಾಗುವಂತೆ ಮಾಡುತ್ತಿದ್ದಾರೆ.

ಅಷ್ಟೇ ಅಲ್ಲದೆ ಎಲ್ಲ ಸದಸ್ಯರು ಪ್ರತಿ ತಿಂಗಳು ನೂರು ರೂಪಾಯಿಯಂತೆ ಉಳಿತಾಯದಲ್ಲೂ ಲೋನ್ ಪಡೆದುಕೊಂಡು ಹೆಚ್ಚಿನ ಉದ್ಯೋಗ ಮಾಡುತ್ತಿದ್ದಾರೆ. ಅದರಲ್ಲಿ ಅನ್ನಪೂರ್ಣ ಮೇಟಿ ಇವರು 10,000 ಹಾಗೂ ರೇಣವ್ವ ಆವಿನ ಇವರು ಕೃಷಿಗಾಗಿ 10,000 ಹಾಗೂ ಕಸ್ತೂರಿ ಆವಿನ್ ಇವರು ಬೀಜ ಗೊಬ್ಬರಕ್ಕಾಗಿ ಹತ್ತು ಸಾವಿರ ಲೋನ್ ಪಡೆದುಕೊಂಡು ತಮ್ಮ ಸಂಘವನ್ನು ಯಾವುದೇ ಅಡಚಣೆ ಬರದ ಹಾಗೆ ಯಾವುದೇ ಕಟ್ಟು ಬಾಕಿ ಉಳಿಸದೆ ಸರಿಯಾಗಿ ಸಾಲ ಮರುಪಾವತಿಯನ್ನು ಕಟ್ಟುತ್ತಿದ್ದಾರೆ.ಹೀಗೆ ಸಂಘದ ಮಹಿಳೆಯರು ಈ ಸಮಾಜದಲ್ಲಿ ಮಹಿಳೆಯರು ಕೂಡ ಯಾವುದಕ್ಕೂ ಕಡಿಮೆ ಇಲ್ಲ ಎಂದು ತೋರಿಸುತ್ತಿದ್ದಾರೆ.ಈ ಸಂಘದ ಬೆಳವಣಿಗೆಯನ್ನು ಕಂಡು ಡೀಲ್ ಫೌಂಡೇಶನ್ ವತಿಯಿಂದ ಹೆಚ್ಚಿನ ಬೆಳವಣಿಗೆ ಹೊಂದಿದ ಎಲ್ಲ ತಾಲೂಕಿನ ಸ್ವಸಹಾಯ ಸಂಘಗಳನ್ನು ಗಮನಿಸಿ ಪ್ರತಿ ವರ್ಷದಂತೆ ಈ ವರ್ಷವೂ ಬಹುಮಾನವಾಗಿ ಈ ಸಂಘಕ್ಕೆ ಮೊದಲ ಬಹುಮಾನವನ್ನು ಪಡೆದುಕೊಂಡಿದೆ.ಆ ಬಹುಮಾನವಾಗಿ 20 ಸಾವಿರ ಹಣವನ್ನು ಈ ಸಂಘವು ಪಡೆದುಕೊಂಡು ಮಾದರಿಯಾಗಿದೆ.

ಹೀಗೆ ಡೀಲ್ ಫೌಂಡೇಶನ್ ವತಿಯಿಂದ ತರಬೇತಿ ಪಡೆದುಕೊಂಡು ಉದ್ಯೋಗದಲ್ಲಿ ತೊಡಗಿದ ಸಂಘದ ಮಹಿಳೆಯರು ಡೀಲ್ ಫೌಂಡೇಶನ್ ಸಂಸ್ಥೆಯ ಬಗ್ಗೆ ತಮ್ಮ ಅಭಿಪ್ರಾಯ ಅನುಭವಗಳ ಮಾತನ್ನು ಹಂಚಿಕೊಂಡಿದ್ದಾರೆ. ಅದು ವಿಕಲಚೇತನರಿಗೆ ಕಾರ್ಯನಿರ್ವಹಿಸುತ್ತಿರುವ ಡೀಲ್ ಫೌಂಡೇಶನ್ ಸಂಸ್ಥೆಯ ಕಾರ್ಯಗಳ ಬಗ್ಗೆ ಮೊದಲು ನಾವು ಗಮನಿಸಿದೆವು ಅದನ್ನು ಕಂಡು ವಿಕಲಚೇತನರು ಇಷ್ಟು ಮುಂದೆ ಬರುತ್ತಿರುವಾಗ ನಾವು ಕೂಡ ಅದೇ ರೀತಿ ಅವಕಾಶವನ್ನು ಉಪಯೋಗಿಸಿಕೊಂಡು ಮುಂದೆ ಬರಬೇಕು ಎಂದು ಸಂಘವನ್ನು ರಚಿಸಿಕೊಂಡವು. ರೇಣುಕಾ ಮೇಡಂ ಇವರಿಂದ ಎಲ್ಲ ತರಬೇತಿಗಳನ್ನು ಪಡೆದುಕೊಂಡು ಉದ್ಯೋಗದಲ್ಲಿ ತೊಡಗುವಂತೆ ಮಾಡಿದರು.ಈ ಸಂಘ ರಚನೆ ಯಾಗಿದ್ದರಿಂದ ನಮಗೆ ಸಾಲ ಸೌಲಭ್ಯಗಳು ಸಿಗುತ್ತವೆ. ಎಲ್ಲ ಮಾಹಿತಿಗಳು ಕೂಡ ನಮಗೆ ನೀಡುತ್ತಿದ್ದಾರೆ.ಈ ಸಂಘ ಮಾಡಿದ್ದರಿಂದ ನಮಗೆ ಹೆಮ್ಮೆ ಆಗುತ್ತದೆ ಕಾರಣ ಬೇರೆ ಕಡೆ ತರಬೇತಿಗಳನ್ನು ಪಡೆಯಲು ಹೋಗಿದ್ದೆವು ಜೊತೆಗೆ ಮನೆಗಳಿಗೆ ಮಾತ್ರ ಸೀಮಿತವಾಗಿದ್ದ ನಾವು ತರಬೇತಿಯನ್ನು ಪಡೆದುಕೊಂಡಿದ್ದರಿಂದ ಎಲ್ಲ ರೀತಿಯ ತಿಳುವಳಿಕೆಯು ನಮಗೆ ಹೆಚ್ಚಾಗಿದೆ.ಹೀಗೆ ಹೆಚ್ಚಿನ ಅವಕಾಶಗಳು ನಮಗೆ ಸಿಕ್ಕಿವೆ.ನಮ್ಮನ್ನು ಗುರುತಿಸುವಂತೆ ಮಾಡಿದ ಡೀಲ್ ಫೌಂಡೇಶನ್ ಸಂಸ್ಥೆಗೆ ಹಾಗೂ ರೇಣುಕಾ ಅವರಿಗೂ ನಮ್ಮ ಸಂಘದ ಎಲ್ಲ ಸದಸ್ಯರ ಪರವಾಗಿ ಧನ್ಯವಾದಗಳು ಅರ್ಪಿಸುತ್ತೇವೆ.ಹೀಗೆ ಹೆಚ್ಚಿನ ಸಹಕಾರ ನೀಡಿ ನಮ್ಮನ್ನು ಬೆಳೆಸಲಿ ಎಂದು ಕೇಳಿಕೊಳ್ಳುತ್ತೇವೆ.ಹೀಗೆ ಎಲ್ಲ ಸದಸ್ಯರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ಈ ರೀತಿಯಾಗಿ ವಿಕಲಚೇತನರಿಗೆ ಅಷ್ಟೇ ಅಲ್ಲದೆ ಮಹಿಳೆಯರಿಗೂ ಕೂಡ ಅವಕಾಶವನ್ನು ನೀಡಿ ಮಹಿಳೆಯರು ಸ್ವಾವಲಂಬನೆ ಜೀವನ ನಡೆಸುವ ಹಾಗೆ ಡೀಲ್ ಫೌಂಡೇಶನ್ ಸಂಸ್ಥೆಯು ಸಹಕಾರಿಯಾಗಿದೆ ಹೀಗೆ ಇನ್ನೂ ಎಷ್ಟೋ ಮಹಿಳೆಯರು ಕೂಡ ಅವಕಾಶಗಳಿಂದ ವಂಚಿತರಾಗಿದ್ದಾರೆ ಅವರನ್ನು ಗುರುತಿಸಿ ಅವರಿಗೂ ಆರ್ಥಿಕವಾಗಿ ಮುಂದೆ ಬರುವಂತೆ ಡೀಲ್ ಫೌಂಡೇಶನ್ ಸಂಸ್ಥೆ ಮಾಡಿ ಹೆಚ್ಚಿನ ಕೀರ್ತಿಗಳಿಸಲಿ ಎಂದು ಎಲ್ಲ ವಿಕಲಚೇತನ ಮತ್ತು ಮಹಿಳೆಯರು ಹಾರೈಸುತ್ತಿದ್ದಾರೆ.

ಈ ಬ್ಲಾಗ್ ಗೆ ಸಂಬಂಧಿಸಿದಂತೆ ಯಾವುದೇ ನಿರ್ದಿಷ್ಟ ಪ್ರಶ್ನೆಗಳಿಗೆ ಅಥವಾ ಯಾವುದೇ ಸಹಾಯಕ್ಕಾಗಿ Info@deal-foundation.com ನಲ್ಲಿ ತಿಳಿಸಿರಿ ಮತ್ತು ನಾವು ಮಾಡುವ ಕೆಲಸದ ಕುರಿತು ಇನ್ನಷ್ಟು ತಿಳಿದುಕೊಳ್ಳಲು www.deal-foundation.com ಗೆ ಲಾಗ್ ಇನ್ ಮಾಡಿ.

ಧನ್ಯವಾದಗಳು

Scroll to Top