ಕರೀಮಭಾಷಾ ಮಕಂದರ ಅವರ ಜೀವನ ಕಥೆ

 

ವಿಕಲಚೇತನ ಪ್ರಾತಿನಿಧ್ಯದ ಕೊರತೆಯಿಂದಾಗಿ ವಿಕಲಚೇತನ ವ್ಯಕ್ತಿಗಳು ತಮ್ಮ ಹಕ್ಕುಗಳ ಬಗ್ಗೆ, ಪ್ರಯೋಜನಗಳ ಬಗ್ಗೆ ಮತ್ತು ಸಮಾಜದ ಮಾಹಿತಿಯ ಬಗ್ಗೆ ತಿಳಿದಿರುವುದಿಲ್ಲ ಅಥವಾ ಅದರ ಅರಿವು ಹೊಂದಿರುವುದಿಲ್ಲ.

ಈ ಅನಾನುಕೂಲಗಳು ಮತ್ತು ಅಡೆ-ತಡೆಗಳನ್ನು ಜಯಿಸಲು ಲಭ್ಯವಿರುವ ಯೋಜನೆಗಳು ಮತ್ತು ಅವುಗಳನ್ನು ಸದುಪಯೋಗ ಪಡಿಸಿಕೊಳ್ಳಲು ಇರುವ ಕಾರ್ಯವಿಧಾನಗಳನ್ನು ವಿಕಲಚೇತನರಿಗೆ ತಿಳಿಸಿಕೊಡಬೇಕು.ಇಂತಹ ಕಾರ್ಯವನ್ನು ಡೀಲ್ ಫೌಂಡೇಶನ್ ಸಂಸ್ಥೆಯು ಜಾಗೃತಿ ಮೂಡಿಸುವುದರ ಮೂಲಕ,ವಿಕಲಚೇತನರ ಸ್ವಸಹಾಯ ಸಂಘ ಮಾಡುವುದರ ಮೂಲಕ ಮಾಹಿತಿ ನೀಡಿ ಸದೃಢರನ್ನಾಗಿ ಮಾಡುತ್ತಿದ್ದಾರೆ.ಇದರಿಂದ ವಿಕಲಚೇತನರು ಸಮಾಜದಲ್ಲಿ ಸಕ್ರಿಯವಾಗಿ ಗುರುತಿಸಿಕೊಳ್ಳಲು ಸಾಧ್ಯವಾಗುತ್ತಿದೆ.

ಅಂತಹ ವಿಕಲ ಚೇತನರಲ್ಲಿ ಹೇಳುವುದಾದರೆ ಕರಿಮ್ ಬಾಷಾ ಮಕಂದರ ಇವರು ಕೂಡ ಒಬ್ಬರು.ಇವರ ಬಗ್ಗೆ ನೋಡುವುದಾದರೆ ಇವರು ಮೂಲತಃ ಮುಂಡರಗಿ ತಾಲೂಕಿನ ಮುಕ್ತಂಪುರ ಗ್ರಾಮದವರು.ತಂದೆ ಸೈಯದ್ ಅಬ್ದುಲ್ ರಜಾಕ್ ತಾಯಿ ಆಶಾಭಿ.ಇವರ ತಂದೆ ತಾಯಿಗೆ ಏಳು ಜನ ಗಂಡು ಮಕ್ಕಳು ಮತ್ತು ಮೂರು ಜನ ಹೆಣ್ಣು ಮಕ್ಕಳು. ಕರಿಮ್ ಬಾಷಾ ಇವರು ಕೊನೆಯ ಮಗನಾಗಿದ್ದರು.ಇವರದ್ದು ಕೂಡು ಕುಟುಂಬವಾಗಿತ್ತು. ಇವರು ಹುಟ್ಟಿನಿಂದಲೇ ದೈಹಿಕ ವಿಕಲಚೇತನತೆಯನ್ನು ಹೊಂದಿದ್ದಾರೆ.ಮೂರನೇ ತರಗತಿಯವರಿಗೆ ಶಾಲೆಗೆ ಹೋಗಿಬಿಟ್ಟರು ನಂತರ ಮನೆಯಲ್ಲಿಯೇ ತಂದೆ ತಾಯಿಯ ಜೊತೆಗೆ ಕೂಲಿ ಕೆಲಸಕ್ಕೆ ಹೋಗುತ್ತಿದ್ದರು. ಕಾರಣ ಇವರು ಆರ್ಥಿಕ ಪರಿಸ್ಥಿತಿಯು ದುಡಿದು ತಿನ್ನುವ ಪರಿಸ್ಥಿತಿ ಅವರದ್ದಾಗಿತ್ತು.

ಇವರ ಬಾಲ್ಯವೆಲ್ಲವು ಶಿರಹಟ್ಟಿ ತಾಲೂಕಿನಲ್ಲಿ ಇತ್ತು ಕಾರಣ ಇವರ ತಂದೆ ತಾಯಿ ಮೂಲತಃ ಶಿರಹಟ್ಟಿ ಅವರು ಅದಕ್ಕಾಗಿ ಅಲ್ಲಿಯೇ ಬೆಳೆದು ಕೂಲಿ ಕೆಲಸಕ್ಕೆ ಹಾಗೂ ಹೊಲದ ಕೆಲಸ ಮಾಡುತ್ತ ಜೀವನ ಸಾಗಿಸುತ್ತಿದ್ದರು.ಹೀಗೆ ದಿನ ಕಳೆದ ಹಾಗೆ ಎಲ್ಲ ಅಣ್ಣಂದಿರ ಮದುವೆ ಆಯ್ತು ಹಾಗೆ ಕರಿಂಬಾಶ ಇವರದ್ದು ಮದುವೆ ಆಯಿತು.ಮದುವೆ ಆದ ನಂತರ ಅಣ್ಣಂದಿರೆಲ್ಲ ಬೇರೆ ಬೇರೆ ಆದರೂ ಕರಿಂ ಭಾಷಾ ಅವರು ತಂದೆ ತಾಯಿಯ ಜೊತೆಗೆ ತಮ್ಮ ಕುಟುಂಬವನ್ನು ಸಾಗಿಸುತ್ತಿದ್ದರು.ಸ್ವಲ್ಪ ದಿನ ಕಳೆದ ನಂತರ ತಂದೆ ತಾಯಿ ತೀರಿಕೊಂಡರು ಆಗ ಇವರ ಜೀವನಕ್ಕೆ ಆರ್ಥಿಕವಾಗಿ ಪೆಟ್ಟುಬಿತ್ತು.ಆದರೂ ಎಲ್ಲವನ್ನು ಸಹಿಸಿಕೊಂಡು ವಿಕಲಚೇತನತೆ ಹೊಂದಿದ್ದರು ಕೂಲಿ ಕೆಲಸ ಮಾಡುತ್ತಾ ಕುಟುಂಬವನ್ನು ನಡೆಸುತ್ತಾ ಹೋದರು.

ಮುಂದೆ ಕರೀಂ ಭಾಷೆ ಅವರಿಗೆ ಆರು ಜನ ಹೆಣ್ಣು ಮಕ್ಕಳು ಮತ್ತು ಐದು ಜನ ಗಂಡು ಮಕ್ಕಳೊಂದಿಗೆ ಬಡತನ ಪರಿಸ್ಥಿತಿ ಇದ್ದರೂ ಖುಷಿಯಿಂದ ಇವರ ಕುಟುಂಬ ಕುಡಿತ್ತು. ಬಡತನ ಪರಿಸ್ಥಿತಿ ಇದ್ದರೂ ಕರಿಂ ಭಾಷಾ ಅವರು ಮಕ್ಕಳಿಗೆ ಮದುವೆ ಮಾಡಿದರು.ಆದರೆ ವಿಧಿ ಆಟ ಮಕ್ಕಳಿಗೆ ಮದುವೆ ಮಾಡಿದ ನಂತರ ಮಕ್ಕಳು ಇವರನ್ನು ಮನೆಯಿಂದ ಆಚೆ ಹಾಕಿದರು.ಮಕ್ಕಳೆಲ್ಲ ಇವರನ್ನು ಬಿಟ್ಟು ತಮ್ಮ ಸ್ವಾರ್ಥ ಜೀವನ ನಡೆಸಲು ಬೇರೆ ಹೋದರು. ಆದರೂ ಕರೀಂ ಬಾಷಾ ಅವರು ಎಷ್ಟೇ ಕಷ್ಟ ಬಂದರೂ ಎದೆಗುಂದದೆ ಏನಾದರೂ ಮಾಡಿ ಜೀವನ ನಡೆಸಬೇಕು ಎಂದು ಛಲ ಹೊಂದಿದ್ದರು. ಆದರೆ ಆರ್ಥಿಕವಾಗಿ ಸಹಾಯ ಮಾಡಲು ಇವರಿಗೆ ಬೆನ್ನೆಲುಬಾಗಿ ಯಾರಾದರೂ ಬೇಕು ಎಂದು ಕರಿಂ ಭಾಷಾ ಅವರು ಯೋಚಿಸುತ್ತಾ ಕೂಲಿ ಕೆಲಸದಲ್ಲಿ ಜೀವನ ಸಾಗಿಸುತ್ತಿದ್ದರು.

ಹೀಗೆ ಒಂದು ದಿನ ಡೀಲ್ ಫೌಂಡೇಶನ್ ಸಂಸ್ಥೆಯಿಂದ ಮುಂಡರಗಿ ತಾಲೂಕಿನ ಲವ್ಲಿವುಡ್ ಆಫೀಸರ್ ಆದ ರೇಣುಕಾ ಕಲ್ಲಳ್ಳಿ ಇವರು ಮುಕ್ತಂಪುರ ಗ್ರಾಮಕ್ಕೆ ಭೇಟಿ ನೀಡಿ ಅಲ್ಲಿನ ವಿಕಲಚೇತನರ ಮನೆಮನೆಗೂ ಹೋಗಿ ಸರ್ವೇ ಮಾಡಿ ಅವರಿಗೆ ಸಂಸ್ಥೆಯ ಬಗ್ಗೆ ಮತ್ತು ವಿಕಲಚೇತನಿಗೆ ಸಿಗುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು ಇದರಿಂದ ಪ್ರೇರಿತಗೊಂಡ ವಿಕಲಚೇತನರು ಸ್ವಸಹಾಯ ಸಂಘ ರಚಿಸಿಕೊಳ್ಳಲು ಮುಂದೆ ಬಂದರು.ಆ ಗ್ರಾಮದ 10 ಜನ ವಿಕಲಚೇತನರನ್ನು ಸೇರಿಸಿ ರೇಣುಕಾ ಅವರು ಸಂಘವನ್ನು ರಚಿಸಿದರು.ಅದರಲ್ಲಿ ಕರೀಂ ಬಾಷಾ ಇವರು ಕೂಡ ಒಬ್ಬರು. ನಂತರ ಈ ಸಂಘಕ್ಕೆ “ಮಾರುತೇಶ್ವರ ವಿಕಲಚೇತನ ಸ್ವ ಸಹಾಯ ಸಂಘ” ಎಂದು ಹೆಸರಿಟ್ಟು ಕೆವಿಜಿ ಬ್ಯಾಂಕ್ ನಲ್ಲಿ ಖಾತೆಯನ್ನು ತೆರೆದರು.ಪ್ರತಿ ತಿಂಗಳು ನೂರು ರೂಪಾಯಿ ಉಳಿತಾಯ ತುಂಬುವುದು ಎಂದು ಸದಸ್ಯರೆಲ್ಲರೂ ತೀರ್ಮಾನಿಸಿದರು.

ನಂತರ ಈ ಸಂಘಕ್ಕೆ ರೇಣುಕಾ ಅವರು ಡೀಲ್ ಫೌಂಡೇಶನ್ ವತಿಯಿಂದ ಬುಕ್ ರೇಟಿಂಗ್ ತರಬೇತಿ, ಲೀಡರ್ಶಿಪ್ ತರಬೇತಿ,2016ರ ಡಿಸ್ಬಿಲಿಟಿ ಅವೆರಸ್ ತರಬೇತಿ, ಉದ್ಯೋಗದ ಬಗ್ಗೆ ಮಾಹಿತಿಯನ್ನು ಕೂಡ ನೀಡಿದರು.ಆಸಕ್ತಿ ಹೊಂದಿದ ಸದಸ್ಯರು ಉದ್ಯೋಗದಲ್ಲಿ ತೊಡಗಲು ತೀರ್ಮಾನಿಸಿದರು. ಅದರಂತೆ ಆರು ತಿಂಗಳು ಆದ ನಂತರ ಬ್ಯಾಂಕ್ ಲೋನ್ ತೆಗೆದುಕೊಳ್ಳಲು ನಿರ್ಧರಿಸಿದರು.ಅಷ್ಟೇ ಅಲ್ಲದೆ ಡೀಲ್ ಫೌಂಡೇಶನ್ ವತಿಯಿಂದ ವಿಕಲಚೇತನರಿಗೆ ಇನ್ನೂ ಹೆಚ್ಚಿನ ಅನುಕೂಲವಾಗಲಿ ಎಂದು ಮುಂಡರಗಿ ತಾಲೂಕಿನ ಮೇವುಂಡಿಯಲ್ಲಿ ಸುರಕ್ಷಿತ ವಿಕಲಚೇತನ ಕೋ ಆಪರೇಟಿವ್ ಸೊಸೈಟಿಯನ್ನು ಆರಂಭಿಸಿದರು.ಇಲ್ಲಿ ವಿಕಲಚೇತನರು ಷೇರುದಾರರಾದರೆ ಕಡಿಮೆ ಬಡ್ಡಿ ಯಲ್ಲಿ ಸಾಲ ಸೌಲಭ್ಯಗಳು ಸಿಗುತ್ತದೆ. ಅದಕ್ಕಾಗಿ ಮಾರುತೇಶ್ವರ ಸಂಘದ ಸದಸ್ಯರು ಈ ಕೋ ಆಪರೇಟಿವ್ ಸೊಸೈಟಿಯಲ್ಲಿ ಶೇರು ಕಟ್ಟಿ ಸದಸ್ಯರಾದರು. ಅದರಂತೆ ಕರೀಂ ಭಾಷಾ ಅವರು ಷೇರುದಾರರಾಗಿ ಮೊದಲು 10,000 ಸಾಲವನ್ನು ಪಡೆದುಕೊಂಡರು.ಅದರಿಂದ ಪುಟ್ಟದಾಗಿ ಕಾಯಿ ವ್ಯಾಪಾರ ಮಾಡುತ್ತಾ ತಮ್ಮ ಉದ್ಯೋಗವನ್ನು ಆರಂಭಿಸಿದರು.

ದಿನ ಕಳೆದ ಹಾಗೆ ಅವರ ವ್ಯಾಪಾರ ಚೆನ್ನಾಗಿ ಆಯಿತು. ಸಾಲವನ್ನು ಕೂಡ ಯಾವುದೇ ಕಟ್ಟು ಬಾಕಿ ಉಳಿಸದೆ ಕಟ್ಟುತ್ತಿದ್ದರು.ನಂತರ ಇನ್ನು ಹೆಚ್ಚಿನ ವ್ಯಾಪಾರ ಮಾಡಲು ಎರಡನೇ ಸಾರಿ ಐವತ್ತು ಸಾವಿರ ಸಾಲವನ್ನು ಪಡೆದುಕೊಂಡರು. ಇದರಿಂದ ಪುಟ್ಟದಾಗಿ ಅಂಗಡಿ ಹಾಕಿ ಅಲ್ಲಿ ಕಾಯಿ ವ್ಯಾಪಾರ ಮಾಡುತ್ತಾ ಹೋದರು.ಹೀಗೆ ಕರಿಂ ಭಾಷಾ ಅವರು ತಮ್ಮ ಆರ್ಥಿಕ ಜೀವನದಲ್ಲಿ ಸುಧಾರಣೆ ಹೊಂದುತ್ತಿದ್ದಾರೆ. ಸಾಲವನ್ನು ಕೂಡ ಯಾವುದೇ ಕಟ್ಟು ಬಾಕಿ ಉಳಿಸದೆ ಸರಿಯಾಗಿ ಕಟ್ಟುತ್ತಿದ್ದಾರೆ.

ಇಷ್ಟೆಲ್ಲ ಸಹಕಾರ ನೀಡಿದ ಡೀಲ್ ಫೌಂಡೇಶನ್ ಸಂಸ್ಥೆಯ ಬಗ್ಗೆ ಕರೀಂ ಭಾಷಾ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.ಅದು ಈ ಸಂಘವನ್ನು ರಚಿಸಿಕೊಂಡಿದ್ದರಿಂದ ನಮಗೆ ತುಂಬಾ ಅನುಕೂಲವಾಗಿದೆ ಹಾಗೂ ಮಾಹಿತಿಯು ಕೂಡ ಸಿಕ್ಕಿದೆ.ಉದ್ಯೋಗದ ಬಗ್ಗೆ ಆಸಕ್ತಿ ಹೊಂದಿದ ನಮಗೆ ಆರ್ಥಿಕವಾಗಿ ಮುಂದುವರೆಯಲು ನಮ್ಮ ಸಂಘದಿಂದ ಸಹಾಯಕವಾಗಿದೆ.ಮಕ್ಕಳೆಲ್ಲ ಬಿಟ್ಟು ಹೋದ ಮೇಲೆ ತಂದೆ ತಾಯಿಯ ಹಾಗೆ ಡೀಲ್ ಫೌಂಡೇಶನ್ ಸಂಸ್ಥೆಯು ನನ್ನನ್ನು ಕೈ ಹಿಡಿದು ನಡೆಸುತ್ತಿದೆ.ಉದ್ಯೋಗದಲ್ಲಿ ಇಷ್ಟೊಂದು ಮುಂದೆ ಬರಲು ಮತ್ತು ನನ್ನನ್ನು ನಾನು ಗುರುತಿಸಿಕೊಳ್ಳಲು ಈ ಸಂಸ್ಥೆ ನನಗೆ ಸಹಾಯಕವಾಗಿದೆ. ಅನೇಕ ಇಲಾಖೆಗಳಿಂದ ಸಿಗುವ ಸೌಲಭ್ಯಗಳ ಕುರಿತು ರೇಣುಕಾ ಅವರು ನಮಗೆ ಮಾಹಿತಿಯನ್ನು ನೀಡಿ ಸಹಾಯ ಮಾಡಿದ್ದಾರೆ.ಇಷ್ಟೆಲ್ಲ ಸಹಕಾರ ನೀಡಿದ ಡೀಲ್ ಫೌಂಡೇಶನ್ ಸಂಸ್ಥೆಗೆ ಹಾಗೂ ರೇಣುಕಾ ಅವರಿಗೂ ನನ್ನ ಪರವಾಗಿ ಹಾಗೂ ನಮ್ಮ ಸಂಘದ ಎಲ್ಲಾ ಸದಸ್ಯರ ಪರವಾಗಿ ಧನ್ಯವಾದಗಳು ಅರ್ಪಿಸುತ್ತೇನೆ.ಹೀಗೆ ಇನ್ನು ಹೆಚ್ಚಿನ ಸಹಕಾರ,ಬೆಂಬಲ ನಮಗೆ ನೀಡಲಿ ಎಂದು ಕೇಳಿಕೊಳ್ಳುತ ಕರಿಂ ಭಾಷಾ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ಹೀಗೆ ಡೀಲ್ ಫೌಂಡೇಶನ್ ಸಂಸ್ಥೆಯು ಅನೇಕ ವಿಕಲಚೇತನರನ್ನು ಗುರುತಿಸಿ, ಉದ್ಯೋಗದಲ್ಲಿ ತೊಡುವಂತೆ ಮಾಡಿದೆ.ತಂದೆ ತಾಯಿಯ ಹಾಗೆ ಬೆನ್ನೆಲುಬಾಗಿ ನಿಂತು ಸಹಾಯ ಮಾಡಿ ಪ್ರೋತ್ಸಾಹ ತುಂಬುತ್ತಿದ್ದಾರೆ.ಹೀಗೆ ಇನ್ನು ಹೆಚ್ಚಿನ ಮಟ್ಟದಲ್ಲಿ ಡೀಲ್ ಫೌಂಡೇಶನ್ ಸಂಸ್ಥೆ ಬೆಳೆಯಲಿ ಎಂದು ವಿಕಲಚೇತನರು ಹಾರೈಸುತ್ತಿದ್ದಾರೆ.

ಈ ಬ್ಲಾಗ್ ಗೆ ಸಂಬಂಧಿಸಿದಂತೆ ಯಾವುದೇ ನಿರ್ದಿಷ್ಟ ಪ್ರಶ್ನೆಗಳಿಗೆ ಅಥವಾ ಯಾವುದೇ ಸಹಾಯಕ್ಕಾಗಿ Info@deal-foundation.com ನಲ್ಲಿ ತಿಳಿಸಿರಿ ಮತ್ತು ನಾವು ಮಾಡುವ ಕೆಲಸದ ಕುರಿತು ಇನ್ನಷ್ಟು ತಿಳಿದುಕೊಳ್ಳಲು www.deal-foundation ನಲ್ಲಿ ಲಾಗ್ ಇನ್ ಮಾಡಿ.

ಧನ್ಯವಾದಗಳು

Scroll to Top