Empower Abilities, Change Lives

Your support helps us create a world where abilities shine beyond disabilities. Every donation provides essential resources, education, and opportunities for individuals to thrive. Together, we can break barriers and build a more inclusive future.

Donate Now & Make a Difference!

World where ability, not disability, matters

ಕಲ್ಮೇಶ್ವರ ವಿಕಲಚೇತನರ ಸ್ವಸಹಾಯ ಸಂಘದ ಕೇಸ್ ಸ್ಟಡಿ

ವಿಕಲಚೇತನರ ಏಳಿಗೆಗಾಗಿ ಮತ್ತು ಅವರ ಆರ್ಥಿಕ ಜೀವನಕ್ಕೆ ಡೀಲ್ ಫೌಂಡೇಶನ್ ಸಂಸ್ಥೆಯು ಅನೇಕ ಕಾರ್ಯ ಚಟುವಟಿಕೆಗಳನ್ನು ಕೈಗೊಂಡಿತು.ಪ್ರತಿ ತಾಲೂಕಿನಲ್ಲಿ ಲವ್ಲಿ ವುಡ್ ಆಫೀಸರ್ಸ್ ಅನ್ನು ನೇಮಿಸಿ ವಿಕಲಚೇತನ ಮತ್ತು ಮಹಿಳೆಯರಿಗೆ ಜಾಗೃತಿ ಮೂಡಿಸುವ ತರಬೇತಿ, ಸಾಕ್ಷರತೆಯ ತರಬೇತಿ, ಸಮುದಾಯ ಸಂವೇದನೆ, ಬೇಸ್ಲೈನ್ ಸಮೀಕ್ಷೆ, ಜೀವನೋಪಾಯ ತರಬೇತಿ,ಸ್ವ ಆರಂಭ ಉದ್ಯೋಗ ಕೇಂದ್ರ ಸ್ಥಾಪಿಸುವುದು ಮತ್ತು ವಿಕಲಚೇತನ ಹಾಗೂ ಮಹಿಳೆಯರ ಸ್ವಸಹಾಯ ಸಂಘಗಳ ರಚನೆ ಮಾಡಿ ಬ್ಯಾಂಕ್/ಹಣಕಾಸು ಮಾರುಕಟ್ಟೆ ಸಂಪರ್ಕ ಒದಗಿಸುವುದು,ರೈತ ಉತ್ಪಾದಕರ ಕಂಪನಿಗಳ ರಚನೆ,ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಸಹಕಾರಿ ಸಂಘ ರಚನೆ ಮಾಡುವುದು ಈ ರೀತಿ ಎಲ್ಲಾ ಕಾರ್ಯಗಳನ್ನು ಲವ್ಲಿ ವುಡ್ ಆಫೀಸರ್ಸ್ ಮೂಲಕ ವಿಕಲಚೇತನರ ಮತ್ತು ಮಹಿಳೆಯರಿಗೆ ಇವುಗಳಿಂದ ಅನುಕೂಲವಾಗುವಂತೆ ಡೀಲ್ ಫೌಂಡೇಶನ್ ಸಂಸ್ಥೆ ಮಾಡುತ್ತಿದೆ.

ಅದರಲ್ಲಿ ಗದಗ್ ತಾಲೂಕಿನ ಲವ್ಲಿ ವುಡ್ ಆಫೀಸರ್ ಆದ ನಿರ್ಮಲ ಅವರು ಪಾಪನಾಶಿ ಗ್ರಾಮಕ್ಕೆ ಭೇಟಿ ನೀಡಿ ಅಲ್ಲಿನ ವಿಕಲಚೇತನರಿಗೆ ಡೀಲ್ ಫೌಂಡೇಶನ್ ಸಂಸ್ಥೆಯ ಕಾರ್ಯಗಳ ಬಗ್ಗೆ ಮತ್ತು ಸ್ವಸಹಾಯ ಸಂಘಗಳ ರಚನೆ ಬಗ್ಗೆ ಮಾಹಿತಿ ನೀಡಿದರು. ಅದರಂತೆ ಅಲ್ಲಿನ ವಿಕಲಚೇತನರೆಲ್ಲರೂ ಸೇರಿ ಸಂಘವನ್ನು ರಚಿಸಲು ಮುಂದಾದರು.ಅದರಂತೆ 12 ಜನ ಆಸಕ್ತಿ ಹೊಂದಿದ ವಿಕಲಚೇತನರನ್ನು ಸೇರಿಸಿ ಸಂಘವನ್ನು ರಚಿಸಿ ಅದಕ್ಕೆ “ಕಲ್ಮೇಶ್ವರ ವಿಕಲಚೇತನ ಸ್ವ ಸಹಯ ಸಂಘ” ಎಂದು ಹೆಸರಿಟ್ಟು ಅಡವಿ ಸೋಮಪುರ ಗ್ರಾಮದ ಕೆವಿಜಿ ಬ್ಯಾಂಕ್ ನಲ್ಲಿ ಖಾತೆಯನ್ನು ತೆರೆದರು.ಸದಸ್ಯರೆಲ್ಲರೂ ಪ್ರತಿ ತಿಂಗಳು ನೂರು ರೂಪಾಯಿ ಉಳಿತಾಯವನ್ನು ಕಟ್ಟುತ್ತಿದ್ದಾರೆ.

ನಂತರ ಈ ಸಂಘಕ್ಕೆ ನಿರ್ಮಲ ಅವರು ಬುಕ್ ರೈಟಿಂಗ್ ತರಬೇತಿ,2016ರ ಡಿಸೆಬಿಲಿಟಿ ಅವೆರ್ನೆಸ್ ತರಬೇತಿ,ಫೈನಾನ್ಸಿಯಲ್ ಲೀಡರ್ ಶಿಪ್ ತರಬೇತಿಯನ್ನು ನೀಡಿದರು.ಪ್ರತಿ ತಿಂಗಳು ಎಲ್ಲ ಸದಸ್ಯರು ಕಲ್ಮೇಶ್ವರ ದೇವಸ್ಥಾನದಲ್ಲಿ ಸೇರಿ ಮೀಟಿಂಗ್ ಮಾಡಿ ಉಳಿತಾಯ ತುಂಬುತ್ತಿದ್ದಾರೆ.ಹಾಗೆ ಈ ಸಂಘಕ್ಕೆ ನಿರ್ಮಲ ಅವರು ಉದ್ಯೋಗದ ತರಬೇತಿಗಳಾದ ಹೈನುಗಾರಿಕೆ ತರಬೇತಿ,ಜೇನು ಸಾಕಾಣಿಕೆ ತರಬೇತಿ,ಪೇಪರ್ ಬ್ಯಾಗ್ ತರಬೇತಿಯ ಬಗ್ಗೆ ಹಾಗೂ ಉದ್ಯೋಗದಲ್ಲಿ ತೊಡಗಿದರೆ ನಂತರ ಮಾರುಕಟ್ಟೆಯ ಸಂಪರ್ಕದ ಬಗ್ಗೆ ಮಾಹಿತಿಯನ್ನು ನೀಡಿದರು.

ಉದ್ಯೋಗ ತರಬೇತಿಯ ಮಾಹಿತಿ ಪಡೆದ ನಂತರ ಉದ್ಯೋಗ ಮಾಡಲು ಬಂಡವಾಳ ಬೇಕು ಅದಕ್ಕಾಗಿ ತಮ್ಮ ಸಂಘದ ಉಳಿತಾಯದಿಂದ ಸಾಲ ಪಡೆದುಕೊಳ್ಳಲು ಸದಸ್ಯರು ನಿರ್ಧರಿಸಿದರು.ಅದರಲ್ಲಿ ಚಂದ್ರಶೇಖರ್ ಮರೆಯಣ್ಣವರ್ ಇವರು 10,000/- ಸಾಲ ತೆಗೆದುಕೊಂಡು ಟೈಲರಿಂಗ್ ಉದ್ಯೋಗ ಆರಂಭಿಸಿದರು. ಅದೇ ರೀತಿ ರಾಮಸ್ವಾಮಿ ಎಮ್ಮಿ ಇವರು ಕೃಷಿಗಾಗಿ 5000/- ಸಾಲವನ್ನು ಪಡೆದುಕೊಂಡು ಉದ್ಯೋಗ ಮಾಡುತ್ತಿದ್ದಾರೆ. ಉಳಿತಾಯದಲ್ಲಿ ಸಾಲ ಕಡಿಮೆ ಇರುವದರಿಂದ ಬ್ಯಾಂಕ್ ಲೋನ್ ಪಡೆದುಕೊಳ್ಳಲು ಎಲ್ಲ ಸದಸ್ಯರು ಮುಂದಾದರು. ಅದಕ್ಕಾಗಿ ಬ್ಯಾಂಕ್ ನಿಂದ ಸಾಲವನ್ನು ಪಡೆದುಕೊಂಡು ಉಳಿದ ಸದಸ್ಯರಿಗೂ ಅನುಕೂಲ ಮಾಡಿಕೊಡೋಣ ಎಂದು ಎಲ್ಲ ಸದಸ್ಯರು ತೀರ್ಮಾನಿಸಿದರು.

ನಂತರ ಸಂರಕ್ಷಣೆ ವಿಕಲಚೇತನ ಕೋ ಆಪರೇಟಿವ್ ಸೊಸೈಟಿ ಮುಖ್ಯ ಪ್ರವರ್ತಕರಾದ ವೀಣಾ ಇವರ ಸಹಕಾರದೊಂದಿಗೆ ಬ್ಯಾಂಕ್ ಲೋನ್ ಗಾಗಿ ಎಲ್ಲ ಸದಸ್ಯರ ದಾಖಲಾತಿ ಹೊಂದಿಸಿ ಅರ್ಜಿ ಸಲ್ಲಿಸಿದರು.ಅದರಂತೆ ಇವರ ಉಳಿತಾಯವನ್ನು ಗಮನಿಸಿ ಪ್ರತಿ ಸದಸ್ಯರಿಗೂ 10,000 ದಂತೆ ಬ್ಯಾಂಕ್ ಲೋನ್ ಸ್ಯಾಂಕ್ಷನ್ ಮಾಡಿದರು. ಈ ಲೋಲನ್ನು ಅವಶ್ಯಕತೆ ಇರುವ ಸದಸ್ಯರು ತೆಗೆದುಕೊಂಡಿದ್ದಾರೆ. ಅದರಲ್ಲಿ ಐದು ಜನ ಈ ಬ್ಯಾಂಕ್ ಲೋನ್ ಅನ್ನು ತೆಗೆದುಕೊಂಡು ಉದ್ಯೋಗ ಮಾಡುತ್ತಿದ್ದಾರೆ ಅದರಲ್ಲಿ ಚಂದ್ರಶೇಖರ್ ಮರೆಣ್ಣವರ್ ಇವರು ಟೈಲರಿಂಗ್ ಉದ್ಯೋಗ ಮಾಡುವುದರ ಜೊತೆಗೆ ಮದುವೆ ಮತ್ತು ಜಾತ್ರೆಗಳಲ್ಲಿ ಆಟಿಕೆ ಸಾಮಾನು ಮಾರಲು 15000/-ಲೋನ್ ತೆಗೆದುಕೊಂಡು ಹೊಸ ಉದ್ಯೋಗ ಆರಂಭಿಸಿದ್ದಾರೆ. ಅದೇ ರೀತಿ ಸಂಗಯ್ಯ ಕುಲಕರಣಿ ಇವರು ಕೃಷಿಗಾಗಿ 20,000/- ಲೋನ್ ತೆಗೆದುಕೊಂಡು ಕೃಷಿಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ಹಾಗೆ ರಾಮಸ್ವಾಮಿ ಎಮ್ಮಿ ಇವರು ಕೂಡ 50000/-ಲೋನ್ ತೆಗೆದುಕೊಂಡು ಹೈನುಗಾರಿಕೆ ಉದ್ಯೋಗ ಮಾಡುತ್ತಿದ್ದಾರೆ. ಹಾಗೆ ಶಶಿಕಲಾ ಪಾಟೀಲ್ ಇವರು 20000/-ಲೋನ್ ತೆಗೆದುಕೊಂಡು ಕುರಿ ಸಾಕಾಣಿಕೆ ಉದ್ಯೋಗ ಮಾಡುತ್ತಿದ್ದಾರೆ. ಹಾಗೆ ದೇವಕ್ಕ ಗೌಳಿ ಇವರು ಕಿರಾಣಿ ಅಂಗಡಿ ಹಾಕಿ ಸ್ವಯಂ ಉದ್ಯೋಗ ಮಾಡಲು 15,000/- ಲೋನ್ ತೆಗೆದುಕೊಂಡು ತಮ್ಮ ಆರ್ಥಿಕ ಜೀವನದಲ್ಲಿ ಸುಧಾರಣೆ ಹೊಂದಿದ್ದಾರೆ.

ಹೀಗೆ ಈ ಎಲ್ಲ ಸದಸ್ಯರು ಸ್ವಯಂ ಉದ್ಯೋಗ ಮಾಡಲು ಬ್ಯಾಂಕ್ ಲೋನ್ ತೆಗೆದುಕೊಂಡು ಉದ್ಯೋಗ ಆರಂಭಿಸಿ ಆರ್ಥಿಕವಾಗಿ ಸದೃಢರಾಗಿ ತಮ್ಮ ಕುಟುಂಬಗಳಿಗೆ ಆಸರೆಯಾಗಿದ್ದಾರೆ.ಹಾಗೂ ಈ ಸಮಾಜಕ್ಕೆ ವಿಕಲಚೇತನರು ಯಾವುದಕ್ಕೂ ಕಡಿಮೆ ಇಲ್ಲ ಎಂದು ಗುರುತಿಸಿಕೊಳ್ಳುತ್ತಿದ್ದಾರೆ. ಸದಸ್ಯರೆಲ್ಲರೂ ಯಾವುದೇ ಕಟ್ಟು ಬಾಕಿ ಉಳಿಸದೆ ಪ್ರತಿ ತಿಂಗಳು ಸಾಲ ಮರುಪಾವತಿ ಮಾಡುತ್ತಿದ್ದಾರೆ.ಅಷ್ಟೇ ಅಲ್ಲದೆ ಈ ಸಂಘದ ಸದಸ್ಯರಿಗೆ ಕೃಷಿ ಮಾಡುತ್ತಿರುವ 6 ಜನ ಸದಸ್ಯರಿಗೆ ಕೃಷಿ ಇಲಾಖೆಯಿಂದ ಬೀಜ ಮತ್ತು ಗೊಬ್ಬರವನ್ನು ಉಚಿತವಾಗಿ ಕೊಡಿಸಲಾಗಿದೆ.ಇದರಿಂದ ಸದಸ್ಯರೆಲ್ಲರಿಗೂ ಅನುಕೂಲವಾಗಿದೆ.

ಹೀಗೆ ಸದಸ್ಯರೆಲ್ಲರೂ ಒಬ್ಬೊಬ್ಬರಾಗಿ ತಮ್ಮ ಜೀವನದಲ್ಲಿ ಆರ್ಥಿಕವಾಗಿ ಮುಂದೆ ಬರುತ್ತಿದ್ದಾರೆ.ಇದಕ್ಕೆ ಕಾರಣ ಡೀಲ್ ಫೌಂಡೇಶನ್ ಸಂಸ್ಥೆಯ ಸಹಕಾರ.ಇಷ್ಟೆಲ್ಲಾ ತರಬೇತಿಯ ಅನುಭವಗಳನ್ನು ನೀಡಿದ ಫೌಂಡೇಶನ್ ಸಂಸ್ಥೆಯ ಬಗ್ಗೆ ಸದಸ್ಯರೆಲ್ಲರೂ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ ಅದು ಮೊದಲು ವಿಕಲಚೇತನರೆಂದರೆ ಈ ಸಮಾಜ ಕನಿಕರದ ಭಾವನೆ ತೋರಿಸುತ್ತಾರೆ ಆದರೆ ನಮಗೆ ಕನಿಕರ ಬೇಡ ಅವಕಾಶ ಬೇಕಿತ್ತು ಆ ಅವಕಾಶವನ್ನು ಡೀಲ್ ಫೌಂಡೇಶನ್ ಸಂಸ್ಥೆ ನಮಗೆ ದಾರಿ ತೋರಿಸಿದರು. ಸಂಘ ರಚನೆ ಮಾಡಿದ್ದರಿಂದ ನಮಗೆ ಉಳಿತಾಯದ ಮೂಲಕ ಮುಂದಿನ ನಮ್ಮ ಮಕ್ಕಳಿಗಾಗಿ ಅಥವಾ ಕಷ್ಟಕಾಲದಲ್ಲಿ ಸಹಾಯಕವಾಗುತ್ತದೆ.ಹಾಗೆ ಉದ್ಯೋಗದ ಬಗ್ಗೆ ಮಾಹಿತಿ ಮತ್ತು ಅನೇಕ ಇಲಾಖೆಗಳಿಂದ ಸಿಗುವ ಸೌಲಭ್ಯಗಳ ಕುರಿತು ಮಾಹಿತಿಯನ್ನು ನಮಗೆ ನಿರ್ಮಲ ಅವರು ನೀಡಿದರು. ಹಾಗೆ ಉದ್ಯೋಗದ ಬಗ್ಗೆ ತರಬೇತಿ ಮತ್ತು ಉದ್ಯೋಗ ಮಾಡಲು ಬಂಡವಾಳಕ್ಕಾಗಿ ಬ್ಯಾಂಕ್ ಸಾಲ ಕೊಡಿಸಿ ನಮ್ಮ ಆರ್ಥಿಕ ಸ್ವಾವಲಂಬನೆ ಜೀವನಕ್ಕೆ ದಾರಿ ಮಾಡಿಕೊಟ್ಟರು.ಒಟ್ಟಾರೆ ಯಾಗಿ ಈ ಸ್ವಸಹಾಯ ಸಂಘ ರಚನೆ ಮಾಡಿದ್ದರಿಂದ ಈ ಸಮಾಜದಲ್ಲಿ ನಮ್ಮನ್ನು ನಾವು ಗುರುತಿಸಿಕೊಳ್ಳುವಂತಾಗಿದೆ. ಇಷ್ಟೆಲ್ಲ ಸಹಕಾರ ನೀಡಿದ ಡೀಲ್ ಫೌಂಡೇಶನ್ ಸಂಸ್ಥೆಗೆ ಹಾಗೂ ನಿರ್ಮಲ ಅವರಿಗೂ ಮತ್ತು ವೀಣಾ ಅವರಿಗೂ ನಮ್ಮ ಸಂಘದ ಸದಸ್ಯರೆಲ್ಲರ ಪರವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇವೆ ಎಂದು ಕೇಳಿಕೊಳ್ಳುತ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಹೀಗೆ ಪ್ರತಿ ತಾಲೂಕಿನಲ್ಲಿ ಡೀಲ್ ಫೌಂಡೇಶನ್ ಸಂಸ್ಥೆಯು ವಿಕಲಚೇತನರು ಮತ್ತು ಮಹಿಳೆಯರ ಸ್ವಾವಲಂಬನೆ ಜೀವನ ಕಟ್ಟಿಕೊಳ್ಳಲು ಸಹಾಯ ಮಾಡುತ್ತಿದ್ದಾರೆ.ಹೀಗೆ ಅನೇಕ ವಿಕಲಚೇತನರ ಮತ್ತು ಮಹಿಳೆಯರನ್ನು ಗುರುತಿಸಿ ಬೆಳಸಲಿ ಮತ್ತು ಇನ್ನೂ ಹೆಚ್ಚಿನ ಕೀರ್ತಿ ಗಳಿಸಲಿ ಎಂದು ಎಲ್ಲರೂ ಹಾರೈಸುತ್ತಿದ್ದಾರೆ.

ಈ ಬ್ಲಾಗ್ ಗೆ ಸಂಬಂಧಿಸಿದಂತೆ ಯಾವುದೇ ನಿರ್ದಿಷ್ಟ ಪ್ರಶ್ನೆಗಳಿಗೆ ಅಥವಾ ಯಾವುದೇ ಸಹಾಯಕ್ಕಾಗಿ Info@deal-foundation.com ನಲ್ಲಿ ತಿಳಿಸಿರಿ ಮತ್ತು ನಾವು ಮಾಡುವ ಕೆಲಸದ ಕುರಿತು ಇನ್ನಷ್ಟು ತಿಳಿದುಕೊಳ್ಳಲು www.deal-foundation ಗೆ ಲಾಗ್ ಇನ್ ಮಾಡಿರಿ.

ಧನ್ಯವಾದಗಳು

Scroll to Top