ತುಳಸಿ ವಿಕಲಚೇತನರ ಸ್ವ ಸಹಾಯ ಸಂಘದ ಕೇಸ್ ಸ್ಟಡಿ

ವಿಕಲಚೇತನರ ಮತ್ತು ಮಹಿಳೆಯರ ಆರ್ಥಿಕ ಅಭಿವೃದ್ಧಿಗಾಗಿ ಮತ್ತು ಸ್ವಾವಲಂಬನೆ ಜೀವನಕ್ಕಾಗಿ ಹಿಂದೆ ಗುರು ಮುಂದೆ ಗುರಿ ಇದ್ದರೆ ಏನನ್ನಾದರೂ ಸಾಧಿಸಬಹುದು ಎಂಬ ವಾಕ್ಯದಂತೆ ಡೀಲ್ ಫೌಂಡೇಶನ್ ಸಂಸ್ಥೆಯು ಗುರಿಗಳನ್ನು ಹಾಕಿಕೊಂಡು ಮುಂದುವರೆಯಿತು.ಅದರಲ್ಲಿ ವಿಕಲಚೇತನಗಾಗಿ ಜಾಗೃತಿ ತರಬೇತಿ, ಸಮುದಾಯ ಸಂವೇದನೆ,ಬೇಸ್ ಲೈನ್ ಸಮೀಕ್ಷೆ,ಜೀವನೋಪಾಯ ತರಬೇತಿ,ಆರಂಭ ಸ್ವ ಉದ್ಯೋಗ ಕೇಂದ್ರ ಗಳನ್ನು ಸ್ಥಾಪಿಸುವುದು, ವಿಕಲಚೇತನ ಮತ್ತು ಮಹಿಳೆಯರ ಸ್ವಸಹಾಯ ಗುಂಪು ರಚಿಸುವುದು, ಬ್ಯಾಂಕ್ ಮತ್ತು ಮಾರುಕಟ್ಟೆ ಸಂಪರ್ಕ ಕಲ್ಪಿಸುವುದು,ರೈತ ಉತ್ಪಾದಕರ ಕಂಪನಿಗಳ ರಚನೆ, ತಾಲೂಕು ಮತ್ತು ಜಿಲ್ಲಾಮಟ್ಟದಲ್ಲಿ ಸಹಕಾರಿ ಸಂಘ ರಚನೆ ಮಾಡುವುದು ಈ ರೀತಿಯಾಗಿ ಗುರಿಗಳನ್ನು ಇಟ್ಟುಕೊಂಡು ಪ್ರತಿ ತಾಲೂಕಿನಲ್ಲಿ ಲವ್ಲಿ ವುಡ್ ಆಫೀಸರ್ಸ್ ವಿಕಲಚೇತನರ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿದ್ದಾರೆ.

      ವಿಕಲಚೇತನರ ಅಭಿವೃದ್ಧಿಯಲ್ಲಿ ಲವ್ಲಿವುಡ್ ಆಫೀಸರ್ಸ್ ಹಂತ ಹಂತವಾಗಿ ವಿಕಲಚೇತನ ಸಮೀಕ್ಷೆ ಮಾಡಿ ಅವರಿಗೆ ಡೀಲ್ ಫೌಂಡೇಶನ್ ಸಂಸ್ಥೆಯು ಮಾಡುತ್ತಿರುವ ಕಾರ್ಯಗಳ ಬಗ್ಗೆ, ತರಬೇತಿಗಳ ಬಗ್ಗೆ ಮಾಹಿತಿ ನೀಡಿ ಆಸಕ್ತಿ ಹೊಂದಿದ ವಿಕಲಚೇತನರ ಸ್ವಸಹಾಯ ಗುಂಪುಗಳನ್ನು ರಚಿಸಿದರು.ನಂತರ ಆ ಸಂಘಗಳಿಗೆ ತರಬೇತಿ ನೀಡಿ ವಿಕಲಚೇತನರು ಉದ್ಯೋಗದಲ್ಲಿ ತೊಡುವಂತೆ ಮಾಡಿದ್ದಾರೆ.ಇದರಿಂದ ವಿಕಲಚೇತನರು ಕೂಡ ಯಾವುದಕ್ಕೂ ಕಡಿಮೆ ಇಲ್ಲ ಎಂದು ಪ್ರತಿ ತಾಲೂಕುಗಳಲ್ಲಿ ವಿಕಲಚೇತನರು ಗುರುತಿಸಿಕೊಂಡಿದ್ದಾರೆ.ಅಂತಹ ಸ್ವಸಹಾಯ ಸಂಘಗಳಲ್ಲಿ ಹೇಳುವುದಾದರೆ ಗದಗ್ ತಾಲೂಕಿನ “ತುಳಸಿ ವಿಕಲಚೇತನರ ಸ್ವಸಹಾಯ ಸಂಘ” ಕೂಡ ಒಂದು.

      ಈ ಸಂಘದ ಬಗ್ಗೆ ಹೇಳುವುದಾದರೆ ಗದಗ್ ತಾಲೂಕಿನಲ್ಲಿ ಲವ್ಲಿ ವುಡ್ ಆಫೀಸರ್ ಆದ ವೀಣಾ ಶಾಖಾನವರ ಇವರು ವಿಕಲಚೇತನರ ಸಮೀಕ್ಷೆಗಾಗಿ ಪ್ರತಿ ಗ್ರಾಮ ಪಂಚಾಯಿತಿಗಳಿಗೂ ಹೋಗಿ ಅಲ್ಲಿನ ಅಧಿಕಾರಿಗಳಿಗೆ ಭೇಟಿ ನೀಡಿ ಡೀಲ್ ಫೌಂಡೇಶನ್ ಸಂಸ್ಥೆ ಬಗ್ಗೆ ಮಾಹಿತಿ ನೀಡಿ ವಿಕಲಚೇತನರಿಗಾಗಿ ಗ್ರಾಮ ಪಂಚಾಯಿತಿಯಲ್ಲಿ ಎಲ್ಲಾ ವಿಕಲಚೇತನರೊಡನೆ ಕಾರ್ಯನಿರ್ವಹಿಸಲು ಸಹಕಾರ ಪಡೆದುಕೊಂಡು ಆಯಾ ಪಂಚಾಯಿತಿಯ ವಿ ಆರ್ ಡಬ್ಲ್ಯೂ ಮೂಲಕ ವಿಕಲಚೇತನರನ್ನು ಭೇಟಿ ನೀಡಿ ಅವರಿಗೆ ಸ್ವಸಹಾಯ ಸಂಘದಲ್ಲಿ ತೊಡಗುವಂತೆ ಮಾಡಿ ಉದ್ಯೋಗದ ಅವಕಾಶಗಳನ್ನು ನೀಡಿದ್ದಾರೆ.

      ಅದೇ ರೀತಿ ಮುಳುಗುಂದ ಪಟ್ಟಣ ಪಂಚಾಯಿತಿಯ ಯು ಆರ್ ಡಬ್ಲ್ಯೂ ಅವರ ಸಹಕಾರದಿಂದ ನಿರ್ದಿಷ್ಟ ಸೀಮಿತವಾದ ಪ್ರದೇಶದಿಂದ ವಿಕಲಚೇತನರನ್ನು ಆಯ್ಕೆ ಮಾಡಿ ಅವರನ್ನು ಒಂದು ಕಡೆ ಸೇರಿಸಿ ಅವರಿಗೆ ವಿಕಲಚೇತನತೆಯ ಬಗ್ಗೆ, ಡೀಲ್ ಫೌಂಡೇಶನ್ ಸಂಸ್ಥೆಯ ಬಗ್ಗೆ, ಸರ್ಕಾರದಿಂದ ಸಿಗುವ ಸೌಲಭ್ಯಗಳ ಬಗ್ಗೆ ಮತ್ತು ಸ್ವಸಹಾಯ ಸಂಘ ರಚಿಸುವುದರಿಂದ ಸಿಗುವ ಸೌಲಭ್ಯಗಳ ಕುರಿತು ವಿವರವಾಗಿ ಅಲ್ಲಿನ ವಿಕಲಚೇತನರಿಗೆ ವೀಣಾ ಅವರು ಮಾಹಿತಿಯನ್ನು ನೀಡಿದರು. 

      ಇದರಿಂದ ವಿಕಲಚೇತನರು ಆಸಕ್ತಿ ಹೊಂದಿ ಹತ್ತಿರ ವಿರುವ ವಿಕಲಚೇತನರನ್ನು ಸೇರಿಸಿಕೊಂಡು 10 ಜನ ಸೇರಿ ಸ್ವಸಹಾಯ ಸಂಘವನ್ನು ರಚಿಸಿಕೊಂಡರು. ಅದಕ್ಕೆ “ತುಳಸಿ ವಿಕಲಚೇತನ ಸ್ವಸಹಾಯ ಸಂಘ” ಎಂದು ಹೆಸರಿಟ್ಟು ಕೆವಿಜಿ ಬ್ಯಾಂಕ್ ನಲ್ಲಿ ಖಾತೆಯನ್ನು ತೆರೆದರು.ಪ್ರತಿ ತಿಂಗಳು ನೂರು ರೂಪಾಯಿ ಉಳಿತಾಯವನ್ನು ತುಂಬುದಾಗಿ ಎಂದು ತೀರ್ಮಾನಿಸಿದರು.ಅದೇ ರೀತಿ ಪ್ರತಿ ತಿಂಗಳು ಉಳಿತಾಯವನ್ನು ತುಂಬುತ್ತಿದ್ದಾರೆ. ನಂತರ ಈ ಸಂಘಕ್ಕೆ ವೀಣಾ ಅವರು 2016ರ ಡಿಸೆಬಿಲಿಟಿ ಅವೆರ್ನೆಸ್ ತರಬೇತಿ,ಬುಕ್ ರೈಟಿಂಗ್ ತರಬೇತಿ, ಫೈನಾನ್ಸಿಯಲ್ ಲೀಡರ್ ಶಿಪ್ ತರಬೇತಿ,ಉದ್ಯೋಗದ ತರಬೇತಿಯ ಮಾಹಿತಿ ಈ ಎಲ್ಲಾ ತರಬೇತಿಗಳನ್ನು ಡೀಲ್ ಫೌಂಡೇಶನ್ ವತಿಯಿಂದ ನೀಡಿದರು.

      ಇದರಿಂದ ಪ್ರೇರಿತಗೊಂಡು ಸಂಘದ ವಿಕಲಚೇತನರು ತಮ್ಮ ಆರ್ಥಿಕ ಜೀವನಕ್ಕಾಗಿ ನಾವು ಏನಾದರೂ ದುಡಿಯಬೇಕು ನಮ್ಮ ತಂದೆ ತಾಯಿಗಳಿಗೆ ನಾವು ಹೊರೆ ಆಗಬಾರದು ಎಂದು ತೀರ್ಮಾನಿಸಿ ತಮ್ಮ ಕುಟುಂಬಗಳ ಸಹಕಾರದಿಂದ ಹಾಗೂ ಡೀಲ್ ಫೌಂಡೇಶನ್ ಸಂಸ್ಥೆಯ ಸಹಕಾರದಿಂದ ಉದ್ಯೋಗದಲ್ಲಿ ತೊಡಗಲು ಒಬ್ಬೊಬ್ಬರಾಗಿ ಆರಂಭಿಸಿದರು. ಮೊದಲು ಮನ್ಸೂರಾಬಿ ಕರ್ನಾಚಿ ಇವರು ದೈಹಿಕ ವಿಕಲಚೇತನತೆ ಹೊಂದಿದ್ದು ತಾಯಿ ಮತ್ತು ಅಣ್ಣನ ಸಹಕಾರದಿಂದ ಪುಟ್ಟದಾಗಿ ಮನೆಯಲ್ಲಿ ಕಿರಾಣಿ ಅಂಗಡಿ ಇಟ್ಟು ಉದ್ಯೋಗದಲ್ಲಿ ತೊಡಗಿದರು. ಇದರಿಂದ ಅವರ ಕುಟುಂಬವು ಅವಳ ಜೀವನಕ್ಕೆ ಸಹಾಯಕವಾಗುತ್ತದೆ ಎಂದು ಹಾರೈಸಿದರು.ಇವರಿಂದ ಪ್ರೇರಿತಗೊಂಡ ಉಳಿದ ಸದಸ್ಯರಾದ ಆಸ್ಮ ಲಾಡ ಸಾಬ್ ನವರ್ ಮತ್ತು ರೇಷ್ಮೆ ಲಾಡ್ಸಾಬ್ ನವರ್ ಇವರು ಅಕ್ಕ-ತಂಗಿಯರು.ಇಬ್ಬರು ದೈಹಿಕ ವಿಕಲಚೇತನತೆಯನ್ನು ಹೊಂದಿದ್ದು ಅವರ ತಂದೆ ಮನೆಯಲ್ಲಿ ಉದ್ದಿನ ಕಡ್ಡಿ ವ್ಯಾಪಾರ ಮಾಡುತ್ತಾರೆ.ಡೀಲ್ ಫೌಂಡೇಶನ್ ಸಂಸ್ಥೆಯ ತರಬೇತಿಯಿಂದ ಪ್ರೇರಿತಗೊಂಡ ಇವರು ನಮ್ಮ ತಂದೆಗೆ ನಾವು ಸಹಕಾರ ನೀಡಬೇಕು ಎಂದು ತಮ್ಮ ಮನೆಯಲ್ಲಿ ಉದ್ದಿನ ಕಡ್ಡಿ ಪ್ಯಾಕ್ ಮಾಡಿ ಅಂಗಡಿಗಳಿಗೆ ಹೋಗಿ ಮಾರಾಟ ಮಾಡುತ್ತಿದ್ದಾರೆ.

      ಅದೇ ರೀತಿ ಇನ್ನುಳಿದ ಸದಸ್ಯರಾದ ಪ್ಯಾರಿಜಾನ್ ಕಲ್ಲಾನವರ ಇವರು ದೈಹಿಕ ವಿಕಲಚೇತನತೆ ಹೊಂದಿದ್ದು ಮನೆಯಲ್ಲಿ ಹೂ ಕಟ್ಟಿ ಮಾರಾಟ ಮಾಡುವ ಉದ್ಯೋಗದಲ್ಲಿ ತೊಡಗಿದ್ದಾರೆ.ಅದೇ ರೀತಿ ಪರೀದಾ ಬೇಗಂ ಇವರು ದೃಷ್ಟಿ ದೋಷ ಹೊಂದಿದ್ದರು ಮನೆಯಲ್ಲಿ ಬಾಗಿಲು ಪರದೆ ಎಣಿಕೆ ಮಾಡುವ ಉದ್ಯೋಗದಲ್ಲಿ ತೊಡಗಿದ್ದಾರೆ.

      ಹೀಗೆ ಈ ಸ್ವ ಸಹಾಯ ಸಂಘದಲ್ಲಿ ಪ್ರತಿ ವಿಕಲಚೇತನ ಸದಸ್ಯರು ಉದ್ಯೋಗದಲ್ಲಿ ತೊಡಗಿದ್ದಾರೆ.ಆದರೆ ಇವರು ತಮ್ಮ ಮನೆಗಳಲ್ಲಿ ಚಿಕ್ಕಬಂಡವಾಳ ಹಾಕಿ ಉದ್ಯೋಗದಲ್ಲಿ ತೊಡಗಿದ್ದಾರೆ. ಆದರೆ ಇವರ ಕನಸು ಇನ್ನು ಹೆಚ್ಚಿನ ಪ್ರಮಾಣದಲ್ಲಿ ದುಡಿದು ಉದ್ಯೋಗ ಆರಂಭಿಸಬೇಕು ಎಂಬುದಾಗಿದೆ. ಅದಕ್ಕಾಗಿ ಇವರ ಹೆಚ್ಚಿನ ಬೆಳವಣಿಗೆಗಾಗಿ ಬಂಡವಾಳ ಬೇಕು. ಪ್ರತಿ ಕ್ಷೇತ್ರದಲ್ಲಿ ಮುಂದೆ ಬಂದರೆ ವಿಕಲಚೇತನರು ಗುರುತಿಸಿಕೊಳ್ಳುತ್ತಾರೆ.ಆದ್ದರಿಂದ ಈ ಎಲ್ಲಾ ಸದಸ್ಯರು ತಮ್ಮ ಸ್ವಸಹಾಯ ಸಂಘದಿಂದ ಬ್ಯಾಂಕ್ ಲೋನ್ ಪಡೆದುಕೊಂಡು ಅವರ ಕನಸಿನಂತೆ ದೊಡ್ಡ ಪ್ರಮಾಣದಲ್ಲಿ ಉದ್ಯೋಗ ಮಾಡಬೇಕು ಎಂದು ವೀಣಾ ಇವರ ಸಹಕಾರದಲ್ಲಿ ಬ್ಯಾಂಕ್ ಲೋನ್ ಗಾಗಿ ಎಲ್ಲ ಸದಸ್ಯರ ದಾಖಲಾತಿಯನ್ನು ಬ್ಯಾಂಕ್ ಅರ್ಜಿಯೊಂದಿಗೆ ತಯಾರಿಸಿ ಬ್ಯಾಂಕ್ ನಲ್ಲಿ ಸಲ್ಲಿಸಿದ್ದಾರೆ.ಇನ್ನು ಸ್ವಲ್ಪ ದಿನಗಳಲ್ಲಿ ಇವರು ಬ್ಯಾಂಕ್ ಲೋನ್ ಪಡೆದುಕೊಳ್ಳುತ್ತಾರೆ.ಹೀಗೆ ಈ ಸಂಘದ ಸದಸ್ಯರು ಚಿಕ್ಕದಾಗಿ ಉದ್ಯೋಗ ಪ್ರಾರಂಭಿಸಿಕೊಂಡು ತಮ್ಮ ಕುಟುಂಬಗಳಿಗೆ ಹೊರೆ ಆಗಬಾರದು ಎಂದು ನಿರ್ಧರಿಸಿ ಡೀಲ್ ಫೌಂಡೇಶನ್ ನಿಂದ ತರಬೇತಿಗಳನ್ನು ಪಡೆದುಕೊಂಡು ತಮ್ಮನ್ನು ಗುರುತಿಸಿಕೊಳ್ಳುವಂತೆ ಮಾಡುತ್ತಿದ್ದಾರೆ.

      ಇಷ್ಟೆಲ್ಲ ಸಹಕಾರ ನೀಡಿದ ಡೀಲ್ ಫೌಂಡೇಶನ್ ಸಂಸ್ಥೆ ಬಗ್ಗೆ ಸಂಘದ ಸದಸ್ಯರೆಲ್ಲರೂ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.ಅದು ಮೊದಲು ನಮ್ಮ ಕುಟುಂಬದವರು ನಮ್ಮನ್ನು ಇವರ ಜೀವನವೇ ಇಷ್ಟೇ ಎಂಬ ಭಾವನೆಯಿಂದ ನೋಡುತ್ತಿದ್ದರು. ಯಾರು ಕೂಡ ಬೆಂಬಲ ನೀಡುತ್ತಿರಲಿಲ್ಲ.ಆದರೆ ಡೀಲ್ ಫೌಂಡೇಶನ್ ಸಂಸ್ಥೆಯಿಂದ ವೀಣಾ ಅವರು ಸ್ವಸಹಾಯ ಸಂಘ ಮಾಡಿ ತರಬೇತಿ ನೀಡಿ ಉದ್ಯೋಗದ ಸ್ಪೂರ್ತಿ ನೀಡಿ ನಮ್ಮ ಜೀವನಕ್ಕೆ ಸಹಾಯವಾಗುವ ಮಾರ್ಗವನ್ನು ಸೂಚಿಸಿದ್ದಾರೆ.ನಮ್ಮ ಸಂಘದ ಸದಸ್ಯರೆಲ್ಲರನ್ನು ಈಗ ಎಲ್ಲರೂ ಗುರುತಿಸುತ್ತಿದ್ದಾರೆ.ನಮ್ಮ ಕುಟುಂಬದವರು ಕೂಡ ನಮಗೆ ಬೆಲೆ ನೀಡಿ ಸಹಕಾರ ನೀಡುತ್ತಿದ್ದಾರೆ. ಇಷ್ಟೆಲ್ಲ ಸಹಕಾರ ನೀಡುತ್ತಿರುವ ಡೀಲ್ ಫೌಂಡೇಶನ್ ಸಂಸ್ಥೆಗೂ ಮತ್ತು ವೀಣಾ ಅವರಿಗೂ ನಮ್ಮ ಸಂಘದ ಸದಸ್ಯರೆಲ್ಲರೂ ಧನ್ಯವಾದಗಳನ್ನು ಅರ್ಪಿಸುತ್ತೇವೆ. ನಾವೆಲ್ಲರೂ ನಿಮಗೆ ಚಿರಋಣಿ ಆಗಿರುತ್ತೇವೆ.ನಮ್ಮ ಬೆಂಬಲ ವಿಕಲಚೇತನರ ಏಳಿಗೆಗಾಗಿ ಸಹಕರಿಸುತ್ತೇವೆ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

        ಹೀಗೆ ಡೀಲ್ ಫೌಂಡೇಶನ್ ಸಂಸ್ಥೆಯು ಪ್ರತಿ ತಾಲೂಕಿನಲ್ಲಿ ವಿಕಲಚೇತನರ ಆರ್ಥಿಕ ಜೀವನಕ್ಕೆ ತರಬೇತಿಯನ್ನು ನೀಡುವುದರ ಮೂಲಕ ಬೆಂಬಲಿಸುತ್ತಿದ್ದಾರೆ.ಹೀಗೆ ಇನ್ನು ಹೆಚ್ಚಿನ ಮಟ್ಟದಲ್ಲಿ ಡೀಲ್ ಫೌಂಡೇಶನ್ ಸಂಸ್ಥೆಯ ಕೀರ್ತಿ ಬೆಳಗಲಿ ಎಂದು ಎಲ್ಲ ವಿಕಲಚೇತನರು ಹಾರೈಸುತ್ತಿದ್ದಾರೆ.

       ಈ ಬ್ಲಾಗ್ ಗೆ ಸಂಬಂಧಿಸಿದಂತೆ ಯಾವುದೇ ನಿರ್ದಿಷ್ಟ ಪ್ರಶ್ನೆಗಳಿಗೆ ಅಥವಾ ಯಾವುದೇ ಸಹಾಯಕ್ಕಾಗಿ Info@deal-foundation.com ನಲ್ಲಿ ತಿಳಿಸಿರಿ ಮತ್ತು ನಾವು ಮಾಡುವ ಕೆಲಸದ ಕುರಿತು ಇನ್ನಷ್ಟು ತಿಳಿದುಕೊಳ್ಳಲು www.deal-foundation.com ಗೆ ಲಾಗ್ ಇನ್ ಮಾಡಿ.

                ಧನ್ಯವಾದಗಳು

Scroll to Top