ದಾವಲ್ ಸಾಬ್ ಖತೀಬ್ ಇವರ ಜೀವನ ಕಥೆ

ಗದಗ್ ಜಿಲ್ಲೆಯ ಏಳು ತಾಲೂಕುಗಳಲ್ಲಿ ವಿಕಲಚೇತನ ಉದ್ಯಮಶೀಲತೆ ಮತ್ತು ನಾಯಕತ್ವ ಪ್ರತಿಷ್ಠಾನದಿಂದ ಸ್ಥಾಪಿಸಲಾಗುವ ಆರಂಭ ಸ್ವ ಉದ್ಯೋಗ ಕೇಂದ್ರ ಮುಖ್ಯವಾಗಿ ವಿಕಲಚೇತನ ವ್ಯಕ್ತಿಗಳಿಗೆ ಟೈಲರಿಂಗ್ ತರಬೇತಿ, ಹೈನುಗಾರಿಕೆ ತರಬೇತಿ,ಮೇಣದಬತ್ತಿ ತರಬೇತಿ,ಕುಂಕುಮ ತರಬೇತಿ,ಜೇನು ಸಾಕಾಣಿಕೆ ಮುಂತಾದ ಜೀವನ ಪೋಷಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಸಹಾಯ ಮಾಡುವ ಗುರಿಯನ್ನು ಹೊಂದಿದೆ.

      ವಿಕಲಚೇತನತೆ ಹೊಂದಿದ ಹೆಚ್ಚಿನ ವ್ಯಕ್ತಿಗಳು ಅಗತ್ಯ ಅಂಶಗಳ ಅಗತ್ಯ ಮಾಹಿತಿಯನ್ನು ಹೊಂದಿರುವುದಿಲ್ಲ.ಇದರಿಂದ ವಿಕಲಚೇತನ ವ್ಯಕ್ತಿಗಳ ಬೆಳವಣಿಗೆಗೆ ಅಡ್ಡಿಯುಂಟು ಮಾಡಿದೆ.ಮತ್ತು ಅನೇಕ ವಿಕಲಚೇತನ ವ್ಯಕ್ತಿಗಳು ಕಳೆದು ಹೋದ ಮತ್ತು ಹಿಂದುಳಿದಿರುವ ಭಾವನೆಗೆ ಕಾರಣವಾಗಿದೆ.

      ಇದಕ್ಕೆ ಪರಿಹಾರವಾಗಿ ಡೀಲ್ ಫೌಂಡೇಶನ್ ಸಂಸ್ಥೆಯು ಪ್ರತಿ ತಾಲೂಕಿನಲ್ಲಿಯೂ ಲವ್ಲಿ ವುಡ್ ಆಫೀಸರ್ಸ್ ಅನ್ನು ನೇಮಕ ಮಾಡಿ ವಿಕಲಚೇತನರೊಡನೆ ಕಾರ್ಯನಿರ್ವಹಿಸುತ್ತಿದ್ದಾರೆ.ಪ್ರತಿ ತಾಲೂಕಿನಲ್ಲೂ ವಿಕಲಚೇತನರ ಮಾಹಿತಿ ಪಡೆದು ಅವರನ್ನು ಒಂದು ಕಡೆ ಸೇರಿಸಿ ಅವರಿಗೆ ವಿಕಲಚೇತನರಿಗೆ ಸಿಗುವ ಸೌಲಭ್ಯಗಳ ಕುರಿತು,ಡೀಲ್ ಫೌಂಡೇಶನ್ ಸಂಸ್ಥೆಯ ಬಗ್ಗೆ ಮಾಹಿತಿ ನೀಡಿ ಸ್ವಸಹಾಯ ಸಂಘವನ್ನು ರಚಿಸಿ ತರಬೇತಿಗಳನ್ನು ನೀಡಿ ಸ್ವಯಂ ಉದ್ಯೋಗದಲ್ಲಿ ತೊಡುವಂತೆ ಮಾಡಿದ್ದಾರೆ.ಅದರಲ್ಲಿ ಮುಂಡರಗಿ ತಾಲೂಕಿನ ಲವ್ಲಿವುಡ್ ಆಫೀಸರ್ ಆದ ರೇಣುಕಾ ಕಲ್ಲಳ್ಳಿ ಇವರು ವಿಕಲಚೇತನರನ್ನು ಸ್ವಯಂ ಉದ್ಯೋಗದಲ್ಲಿ ತೊಡಗುವಂತೆ ಮಾಡಿದ್ದಾರೆ.ಅಂತಹ ವಿಕಲಚೇತನರ ಬಗ್ಗೆ ಹೇಳುವುದಾದರೆ ದಾವುಲ್ ಸಾಬ್ ಖತೀಬ್ ಇವರು ಕೂಡ ಒಬ್ಬರು.

      ಇವರ ಬಗ್ಗೆ ಹೇಳುವುದಾದರೆ ಇವರು ಮೂಲತಃ ಮುಂಡರಗಿ ತಾಲೂಕಿನ ಕಲಕೇರಿ ಗ್ರಾಮದವರು. ತಂದೆ ಜಾಫರ್ ಜಾಬ್ ತಾಯಿ ಮಾಬುಬಿ.ದಾವಲಸಾಬ್ ಇವರು ಹುಟ್ಟಿನಿಂದಲೇ ದೈಹಿಕ ವಿಕಲಚೇತನತೆಯನ್ನು ಹೊಂದಿದ್ದಾರೆ.ಇವರ ಕುಟುಂಬವು ಬಡತನದಲ್ಲಿತ್ತು ತಂದೆ ತಾಯಿ ಕೂಲಿ ಕೆಲಸ ಮಾಡಿ ಜೀವನ ನಡೆಸುತ್ತಿದ್ದರು.ಇದರಿಂದ ದಾವಲ್ ಸಾಬ್ ಅವರು ಶಾಲೆಗೆ ಹೋಗದೆ ಚಿಕ್ಕವಯಸ್ಸಿನಿಂದಲೇ ತಂದೆಯ ಜೊತೆಗೆ ಕೂಲಿ ಕೆಲಸಕ್ಕೆ ಹೋಗುತ್ತಿದ್ದರು.ಹೀಗೆ ಇವರ ಜೀವನ ಸಾಗುತ್ತಿತ್ತು.ಮುಂದೆ ಇವರಿಗೆ ಮದುವೆ ಆಯಿತು ಸ್ವಲ್ಪ ದಿನಗಳ ನಂತರ ಹೀಗೆ ಇದ್ದರೆ ಜೀವನ ಸಾಗಿಸುವುದು ಕಷ್ಟ ಅದಕ್ಕೆ ಏನಾದರೂ ಮಾಡಬೇಕು ಎಂದು ಚಿಂತಿಸುತ್ತಿರುವಾಗ ರೇಣುಕಾ ಅವರು ಮುಂಡರಗಿ ತಾಲೂಕಿನ ಪ್ರತಿ ಹಳ್ಳಿಗಳಿಗೂ ಹೋಗಿ ವಿಕಲಚೇತನರನ್ನು ಭೇಟಿ ಮಾಡಿ ಅವರಿಗೆ ವಿಕಲಚೇತನರ ಸೌಲಭ್ಯಗಳ ಕುರಿತು ಮತ್ತು ಡೀಲ್ ಫೌಂಡೇಶನ್ ಸಂಸ್ಥೆಯ ಬಗ್ಗೆ ಮಾಹಿತಿ ನೀಡಿ ಸ್ವ ಸಹಾಯ ಗುಂಪುಗಳನ್ನು ರಚಿಸುತ್ತಿದ್ದರು. ಅದರಂತೆ ಕಲಿಕೇರಿ ಗ್ರಾಮಕ್ಕೆ ವಿಕಲಚೇತನರಿಗೆ ಮಾಹಿತಿ ನೀಡಲು ಹೋದಾಗ ರೇಣುಕಾ ಅವರು ದಾವುಲು ಸಾಬ್ ಅವರನ್ನು ಭೇಟಿ ನೀಡಿ ಡೀಲ್ ಫೌಂಡೇಶನ್ ಸಂಸ್ಥೆ ಮಾಡುತ್ತಿರುವ ಕಾರ್ಯಗಳ ಬಗ್ಗೆ ತಿಳಿಸಿದರು.ಇದರಿಂದ ಪ್ರೇರಿತಗೊಂಡು ತಮಗೆ ಗೊತ್ತಿರುವ ಎಲ್ಲಾ ವಿಕಲಚೇತನನ್ನು ಸೇರಿಸಿ ದಾವಲ ಸಾಬ್ ಅವರು ಸ್ವಸಹಾಯ ಗುಂಪನ್ನು ರಚಿಸಿಕೊಂಡರು.

      ನಂತರ ಆ ಸಂಘದ ಸದಸ್ಯರಿಗೆ ರೇಣುಕಾ ಅವರು ಬುಕ್ ರೈಟಿಂಗ್ ತರಬೇತಿ, ಫೈನಾನ್ಸಿಯಲ್ ಲೀಡರ್ಶಿಪ್ ತರಬೇತಿಯನ್ನು ನೀಡಿದರು.ದಾವಲ್ ಸಾಬ್ ಅವರು ಮುಂದೆ ಆರ್ಥಿಕ ಜೀವನಕ್ಕೆ ಏನಾದರೂ ಮಾಡಬೇಕು ಎಂದು ಯೋಚಿಸುತ್ತಿರುವಾಗ ಡೀಲ್ ಫೌಂಡೇಶನ್ ನಿಂದ ಅವರಿಗೆ ದಾರಿ ಸಿಕ್ಕಿತು.ಅದು ಸ್ವಲ್ಪ ದಿನಗಳ ನಂತರ ಡೀಲ್ ಫೌಂಡೇಶನ್ ಸಂಸ್ಥೆಯು ವಿಕಲಚೇತನರಿಗಾಗಿ ಹೆಚ್ಚಿನ ಸಾಲ ಸೌಲಭ್ಯಕ್ಕಾಗಿ ಅನುಕೂಲವಾಗಲಿ ಎಂದು ಸುರಕ್ಷಿತ ವಿಕಲಚೇತನರ ಕೋಆಪರೇಟಿವ್ ಸೊಸೈಟಿಯನ್ನು ತಾಲೂಕು ಮಟ್ಟದಲ್ಲಿ ಆರಂಭಿಸಿದರು.ಇದರಲ್ಲಿ ದಾವುಲ್ ಸಾಬ್ ಅವರು ಶೇರು ಹಣ ಕಟ್ಟಿ ಸದಸ್ಯತ್ವವನ್ನು ಪಡೆದುಕೊಂಡು ಕೋ ಆಪರೇಟಿವ್ ಸೊಸೈಟಿಗೆ ಬೋರ್ಡ್ ಮೆಂಬರ್ ಆಗಿ ಆಯ್ಕೆಯಾದರು.

      ನಂತರ ದಾವಲ್ ಸಾಬ್ ಅವರು ಕೋ ಆಪರೇಟಿವ್ ಸೊಸೈಟಿಯಲ್ಲಿ ಸಾಲ ಪಡೆದುಕೊಂಡು ಏನಾದರೂ ಉದ್ಯೋಗ ಮಾಡಬೇಕು ಎಂದು ತೀರ್ಮಾನಿಸಿದರು.ಇದಕ್ಕೆ ಅವರ ಕುಟುಂಬವು ಕೂಡ ಸಹಕಾರಿ ನೀಡಿತು.ರೇಣುಕಾ ಇವರ ಸಹಯೋಗದಲ್ಲಿ ಎಲ್ಲಾ ದಾಖಲಾತಿಯನ್ನು ಕೋ ಆಪರೇಟಿನಲ್ಲಿ ಸಾಲಕ್ಕಾಗಿ ದಾಖಲಾತಿಯನ್ನು ಸಲ್ಲಿಸಿದರು. ನಂತರ ಇವರಿಗೆ 10 ಸಾವಿರ ಲೋನ್ ಪಡೆದುಕೊಂಡು ಕುರಿ ಆಡು ಸಾಕಾಣಿಕೆ ಉದ್ಯೋಗವನ್ನು ಆರಂಭಿಸಿದರು.ಜೊತೆಗೆ ಇವರ ಕುಟುಂಬದವರು ಕೂಡ ಮನೆಯಲ್ಲಿ ಬಳೆ ವ್ಯಾಪಾರ ಉದ್ಯೋಗ ಆರಂಭಿಸಿ ತಮ್ಮ ಆರ್ಥಿಕ ಜೀವನವನ್ನು ಸುಧಾರಣೆಗೊಳಿಸಿದರು.

       ದಾವಲ್ ಸಾಬ್ ಅವರು ಜೀವನಕ್ಕೆ ಏನಾದರೂ ಮಾಡಬೇಕು ನನ್ನ ವಿಕಲಚೇತನತೆ ನನಗೆ ಅಡ್ಡಿಯಾಗಬಾರದು ಎಂದು ಚಿಂತಿಸುತ್ತಿರುವ ವ್ಯಕ್ತಿ ಈಗ ಅನೇಕ ವಿಕಲಚೇತನರಿಗೆ ಮಾದರಿಯಾಗುತ್ತಿದ್ದಾರೆ.ತಾವು ಜೀವನದಲ್ಲಿ ಮುಂದೆ ಬಂದು ತಮ್ಮಂತಹ ಅನೇಕ ವಿಕಲಚೇತನರಿಗೆ ಮಾಹಿತಿ ನೀಡಿ ಉದ್ಯೋಗದಲ್ಲಿ ತೊಡಗುವಂತೆ ಮಾಡುತ್ತಿದ್ದಾರೆ.ಅಷ್ಟೇ ಅಲ್ಲದೆ ಸುರಕ್ಷಿತ ವಿಕಲಚೇತನರ ಕೋ ಆಪರೇಟಿವ್ ಸೊಸೈಟಿಯನ್ನು ಮುಂಡರಗಿ ತಾಲೂಕಿನ ಎಲ್ಲ ಜನರು ಗುರುತಿಸುವಂತೆ ಸೊಸೈಟಿಯ ಎಲ್ಲಾ ಮಂಡಳಿ ಸದಸ್ಯರು ಪ್ರತಿ ತಿಂಗಳು ಮೀಟಿಂಗ್ ಮಾಡಿ ಹೆಚ್ಚಿನ ವಿಕಲಚೇತನರು ಶೇರುದಾರರಾಗಿ ಇದರ ಸೌಲಭ್ಯಗಳನ್ನು ಪಡೆದುಕೊಳ್ಳುವಂತೆ ಮಾಡುತ್ತಿದ್ದಾರೆ.ಕೋ ಆಪರೇಟಿ ಸೊಸೈಟಿಯನ್ನು ಎಲ್ಲಾ ತಾಲೂಕುಗಳಿಗೂ ಮಾದರಿಯಾಗುವಂತೆ ಹೆಚ್ಚಿನ ಶೇರು ಕಟ್ಟಿ ವಿಕಲಚೇತನರು ಇದರಿಂದ ಸಾಲ ಸೌಲಭ್ಯ ಪಡೆದುಕೊಂಡು ಉದ್ಯೋಗದಲ್ಲಿ ತೊಡಗುತ್ತಿದ್ದಾರೆ. ದಾವಲ್ ಸಾಬ್ ಅವರು ಕೂಡ ಹೆಚ್ಚಿನ ಸಹಕಾರ ಈ ಕೋ ಆಪರೇಟಿವ್ ಸೊಸೈಟಿಗೆ ನೀಡುತ್ತಿದ್ದಾರೆ.

      ಹೀಗೆ ದಾವಲ್ ಸಾಬ್ ಅವರು ಜೀವನದಲ್ಲಿ ಆರ್ಥಿಕವಾಗಿ ಸುಧಾರಣೆ ಹೊಂದಿ ತಮ್ಮ ಕುಟುಂಬಕ್ಕೂ ಹಾಗೂ ವಿಕಲಚೇತನರಿಗೆ ಮಾದರಿಯಾಗಿದ್ದಾರೆ.ಇಷ್ಟೆಲ್ಲ ಸಹಕಾರ ಪಡೆದುಕೊಂಡಿದ್ದು ಡೀಲ್ ಫೌಂಡೇಶನ್ ಸಂಸ್ಥೆಯಿಂದ ಅದಕ್ಕಾಗಿ ಡೀಲ್ ಫೌಂಡೇಶನ್ ಸಂಸ್ಥೆ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.ಅದು ಬಡತನದಿಂದ ಕೂಡಿದ್ದ ನನ್ನ ಕುಟುಂಬ ಮುಂದೆ ಜೀವನಕ್ಕೆ ಏನು ಮಾಡಬೇಕು ಎಂದು ತೋಚದೆ ಇದ್ದಾಗ ಡೀಲ್ ಫೌಂಡೇಶನ್ ನಿಂದ ರೇಣುಕಾ ಅವರು ದಾರಿ ತೋರಿಸಿದರು.ಅದು ಸ್ವ ಸಹಾಯ ಸಂಘ ರಚಿಸಿ ತರಬೇತಿಯನ್ನು ನೀಡಿ ಉದ್ಯೋಗದಲ್ಲಿ ತೊಡಗುವಂತೆ ಮಾಡಿದರು.ಅಷ್ಟೇ ಅಲ್ಲದೆ ವಿಕಲಚೇತನರ ಕೋ ಆಪರೇಟಿವ್ ಸೊಸೈಟಿಯನ್ನು ಆರಂಭಿಸಿ ಅದರಲ್ಲಿ ಕಡಿಮೆ ಬಡ್ಡಿಯಲ್ಲಿ ಸಾಲ ಸೌಲಭ್ಯ ಸಿಗುವಂತೆ ಮಾಡಿದ್ದಾರೆ. ವಿಕಲಚೇತನರ ಜೀವನಕ್ಕೆ ಮಾರ್ಗಸೂಚಿಯಾಗಿ ಡೀಲ್ ಫೌಂಡೇಶನ್ ಸಂಸ್ಥೆಯು ನಿಂತಿದೆ. ಇಷ್ಟೆಲ್ಲ ಸಹಕಾರ ನೀಡಿದ ಡೀಲ್ ಫೌಂಡೇಶನ್ ಸಂಸ್ಥೆಗೂ ಹಾಗೂ ರೇಣುಕಾ ಕಲ್ಲಳ್ಳಿ ಇವರಿಗೂ ಹೃದಯಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಹೀಗೆ ಇನ್ನೂ ಹೆಚ್ಚಿನ ಸಹಕಾರದಿಂದ ವಿಕಲಚೇತನರು ಗುರುತಿಸಿಕೊಳ್ಳುವಂತೆ ಆಗಲಿ ಎಂದು ಹಾರೈಸುತ್ತೇನೆ.ಹೀಗೆ ದಾವಲ್ ಸಾಬ್ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

      ಹೀಗೆ ಡೀಲ್ ಫೌಂಡೇಶನ್ ಸಂಸ್ಥೆಯು ವಿಕಲಚೇತನರನ್ನು ಗುರುತಿಸಿ ಸ್ವಾವಲಂಬನೆ ಜೀವನವನ್ನು ಕಟ್ಟಿಕೊಳ್ಳಲು ನೆರಳಾಗಿದೆ.ಇನ್ನು ಅನೇಕ ವಿಕಲಚೇತನರು ಇಂತಹ ಅವಕಾಶಗಳಿಂದ ವಂಚಿತರಾಗಿದ್ದಾರೆ ಅವರನ್ನು ಗುರುತಿಸಿ ವಿಕಲಚೇತನರು ಯಾವುದಕ್ಕೂ ಕಡಿಮೆ ಇಲ್ಲ ಎಂದು ತೋರಿಸುವಂತೆ ಡೀಲ್ ಫೌಂಡೇಶನ್ ಸಂಸ್ಥೆ ಮಾಡಲಿ ಎಂದು ಎಲ್ಲ ವಿಕಲಚೇತನರು ಹಾರೈಸುತ್ತಿದ್ದಾರೆ.

      ಈ ಬ್ಲಾಗ್ ಗೆ ಸಂಬಂಧಿಸಿದಂತೆ ಯಾವುದೇ ನಿರ್ದಿಷ್ಟ ಪ್ರಶ್ನೆಗಳಿಗೆ ಅಥವಾ ಯಾವುದೇ ಸಹಾಯಕ್ಕಾಗಿ Info@deal-foundation.com ನಲ್ಲಿ ತಿಳಿಸಿರಿ ಮತ್ತು ನಾವು ಮಾಡುವ ಕೆಲಸದ ಕುರಿತು ಇನ್ನಷ್ಟು ತಿಳಿದುಕೊಳ್ಳಲು www.deal-foundation.com ಗೆ ಲಾಗ್ ಇನ್ ಮಾಡಿ.

               ಧನ್ಯವಾದಗಳು

Scroll to Top