ಇಂದಿನ ಸಮಾಜದಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಹಲವಾರು ತಾರತಮ್ಯಗಳು ಮತ್ತು ಅನಾನುಕೂಲತೆಗಳಿಗೆ ಒಳಗಾಗುತ್ತದೆ.ಅದರಲ್ಲಿ ವಿಕಲಚೇತನತೆಯು ಕೂಡ ಒಂದು.ಇದರಿಂದ ವಿಕಲಚೇತನರು ಈ ಸಮಾಜದಲ್ಲಿ ಮುಂದೆ ಬರದೆ ಹಿಂದುಳಿದಿದ್ದಾರೆ.ಎಲ್ಲಾ ಕೌಶಲ್ಯ ಗಳನ್ನು ಹೊಂದಿದ್ದರು ಅವಕಾಶ ಸಿಗದೇ ವಿಕಲಚೇತನರು ಹಿಂದುಳಿತಿದ್ದಾರೆ.ಅಂತಹ ವಿಕಲಚೇತನರಿಗಾಗಿ ಡೀಲ್ ಫೌಂಡೇಶನ್ ಸಂಸ್ಥೆಯು ಕಾರ್ಯನಿರ್ವಹಿಸುತ್ತಿದೆ. ಡೀಲ್ ಫೌಂಡೇಶನ್ ಸಂಸ್ಥೆಯು ಪ್ರತಿ ತಾಲೂಕಿನಲ್ಲಿ ವಿಕಲಚೇತನರಿಗೆ ಮತ್ತು ಮಹಿಳೆಯರಿಗಾಗಿ ಕೆಲಸ ಮಾಡಲು ಲವ್ಲಿ ವುಡ್ ಆಫೀಸರ್ಸ್ ಅನ್ನು ನೇಮಿಸಿ ಕಾರ್ಯನಿರ್ವಹಿಸುತ್ತಿದೆ.
ಡೀಲ್ ಫೌಂಡೇಶನ್ ಸಂಸ್ಥೆಯು ವಿಕಲಚೇತನರನ್ನು ಗುರುತಿಸಿ ಅವರಿಗೆ ತರಬೇತಿಗಳನ್ನು ನೀಡಿ ಅವರಲ್ಲಿ ಅಡಗಿರುವ ಕೌಶಲ್ಯದ ಮೂಲಕ ಸ್ವಯಂ ಉದ್ಯೋಗದ ಮೂಲಕ ಸ್ವಾವಲಂಬನೆ ಬದುಕಿಗೆ ದಾರಿ ಮಾಡಿಕೊಡುತ್ತಿದೆ.ಜೊತೆಗೆ ವಿಕಲಚೇತನರ ಮತ್ತು ಮಹಿಳೆಯರ ಸ್ವಸಹಾಯ ಸಂಘಗಳನ್ನು ನಿರ್ಮಿಸಿ ಅವರಿಗೆ ಡೀಲ್ ಫೌಂಡೇಶನ್ ವತಿಯಿಂದ ಹಾಗೂ ಸರ್ಕಾರದಿಂದ ಸಿಗುವ ಸೌಲಭ್ಯಗಳ ಕುರಿತು ತರಬೇತಿಗಳನ್ನು ಸ್ವಸಹಾಯ ಸಂಘದ ಸದಸ್ಯರಿಗೆ ಲವ್ಲಿ ವುಡ್ ಆಫೀಸರ್ಸ್ ನೀಡುತ್ತಿದ್ದಾರೆ.ಪ್ರತಿ ತಾಲೂಕಿನಲ್ಲಿ ವಿಕಲಚೇತನರ ಮತ್ತು ಮಹಿಳೆಯರು ತರಬೇತಿಯನ್ನು ಪಡೆದುಕೊಂಡು ಸ್ವಯಂ ಉದ್ಯೋಗದಲ್ಲಿ ತೊಡಗಿದ್ದಾರೆ. ಅಂತಹ ಸ್ವಸಹಾಯ ಸಂಘಗಳಲ್ಲಿ ಹೇಳುವುದಾದರೆ ಶಿರಹಟ್ಟಿ ತಾಲೂಕಿನ ಪರಸಾಪುರ ಗ್ರಾಮದ ನಂದೀಶ್ವರ ವಿಕಲಚೇತನರ ಪುರುಷರ ಸ್ವಸಹಾಯ ಸಂಘ ಕೂಡ ಒಂದು.
ಈ ಸಂಘದ ಬಗ್ಗೆ ಹೇಳುವುದಾದರೆ ಶಿರಹಟ್ಟಿ ತಾಲೂಕಿನ ಲವ್ಲಿವುಡ್ ಆಫೀಸರ್ ಆದ ರೇಖಾ ಮಡ್ಡಿ ಇವರು ಆ ಗ್ರಾಮದ ವಿಕಲಚೇತನರ ಮನೆ ಮನೆಗೆ ಭೇಟಿ ನೀಡಿ ಅವರಿಗೆ ಡೀಲ್ ಫೌಂಡೇಶನ್ ಸಂಸ್ಥೆಯ ಬಗ್ಗೆ ಮಾಹಿತಿ ನೀಡಿ ವಿಕಲಚೇತನರಲ್ಲಿ ಸ್ಪೂರ್ತಿ ನೀಡುತ್ತಾ ಹೋದರು.ನಂತರ ಆ ಎಲ್ಲ ವಿಕಲಚೇತನರನ್ನು ಒಂದು ಕಡೆ ಸೇರಿಸಿ ಅವರಿಗೆ ಸಂಸ್ಥೆ ಕಾರ್ಯ ವೈಖರಿಗಳ ಬಗ್ಗೆ ಮತ್ತು ಸ್ವಸಹಾಯ ಸಂಘ ಮಾಡುವುದರಿಂದ ಸಿಗುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು. ಅದರಂತೆ ಎಲ್ಲರೂ ಆಸಕ್ತಿ ಹೊಂದಿ ಸ್ವಸಹಾಯ ಸಂಘ ರಚನೆ ಮಾಡಲು ಮುಂದಾದರು.
ನಂತರ ರೇಖಾ ಅವರು ಹತ್ತು ಜನ ವಿಕಲಚೇತನರೊಂದಿಗೆ ಅಲ್ಲಿ ಸಂಘವನ್ನು ರಚನೆ ಮಾಡಿದರು ಅದಕ್ಕೆ “ನಂದೀಶ್ವರ ವಿಕಲಚೇತನರ ಪುರುಷರ ಸ್ವಸಹಾಯ ಸಂಘ”ಎಂದು ಹೆಸರಿಟ್ಟು ಎಲ್ಲಾ ದಾಖಲಾತಿಯೊಂದಿಗೆ ಮಾಗಡಿಯ ಕೆವಿಜಿ ಬ್ಯಾಂಕ್ ನಲ್ಲಿ ಖಾತೆಯನ್ನು ತೆರೆದರು. ಪ್ರತಿ ಸದಸ್ಯರು ತಿಂಗಳಿಗೆ ಎರಡು ನೂರು ರೂಪಾಯಿ ಉಳಿತಾಯ ತುಂಬುವುದಾಗಿ ನಿರ್ಧರಿಸಿದರು.
ಹೀಗೆ ಸಂಘ ರಚನೆಯಾದ ನಂತರ ರೇಖಾ ಅವರು ಈ ಸಂಘಕ್ಕೆ ಬುಕ್ ರೈಟಿಂಗ್ ತರಬೇತಿ,2016ರ ಡಿಸ್ ಎಬಿಲಿಟಿ ಅವೆರ್ನೆಸ್ ತರಬೇತಿ, ಲೀಡರ್ ಶಿಪ್ ತರಬೇತಿಯನ್ನು ನೀಡಿದರು.ಹಾಗೂ ಸರ್ಕಾರದಿಂದ ವಿಕಲಚೇತನರಿಗೆ ಸಿಗುವ ಸೌಲಭ್ಯಗಳ ಕುರಿತು ಮಾಹಿತಿಯನ್ನು ನೀಡಿದರು. ಅದರಂತೆ ತರಬೇತಿಯನ್ನು ಪಡೆದುಕೊಂಡು ಪ್ರತಿ ತಿಂಗಳು ಸದಸ್ಯರೆಲ್ಲರೂ ಮೀಟಿಂಗ್ ಮಾಡಿ ಉಳಿತಾಯ ಖಾತೆಯನ್ನು ಎಲ್ಲ ಸದಸ್ಯರು ಬರೆಯುತ್ತಿದ್ದಾರೆ.
ನಂತರ ಉದ್ಯೋಗದ ಬಗ್ಗೆ ರೇಖಾ ಅವರು ಈ ಸಂಘಕ್ಕೆ ಮಾಹಿತಿಯನ್ನು ನೀಡಿದರು. ಆಸಕ್ತಿ ಹೊಂದಿದ ಸದಸ್ಯರು ಸಂಘದಿಂದ ಲೋನ್ ಪಡೆದುಕೊಂಡು ಸ್ವಯಂ ಉದ್ಯೋಗದಲ್ಲಿ ತೊಡಗಬೇಕು ಎಂದು ನಿರ್ಧರಿಸಿದರು. ಅದರಂತೆ ಸಂಘ ರಚನೆಯಾದ ಆರು ತಿಂಗಳ ನಂತರ ಬ್ಯಾಂಕ್ ಲೋನ್ ಪಡೆದುಕೊಳ್ಳಲು ನಿರ್ಧರಿಸಿದರು.ಅದರ ಎಲ್ಲ ಮಾಹಿತಿಯನ್ನು ರೇಖಾ ಅವರು ಬ್ಯಾಂಕ್ ನಲ್ಲಿ ವಿಚಾರಣೆ ಮಾಡಿದರು. ಅದರಂತೆ ಎಲ್ಲ ಸದಸ್ಯರ ದಾಖಲಾತಿಯನ್ನು ಹೊಂದಿಸಿ ಸಾಲವನ್ನು ಪಡೆದುಕೊಳ್ಳಲು ಅರ್ಜಿ ಹಾಕಿದರು.
ನಂತರ ಈ ಸಂಘಕ್ಕೆ 50000 ಮೊದಲನೇ ಸಾಲವನ್ನು ಮಾತ್ರ ಕೊಡುತ್ತೇವೆ ಎಂದು ಬ್ಯಾಂಕ್ ನಲ್ಲಿ ಹೇಳಿದರು.ಅದರಂತೆ ಮೊದಲು ಅವಶ್ಯಕತೆ ಇರುವವರು ಈ ಸಾಲವನ್ನು ಪಡೆದುಕೊಂಡು ಉದ್ಯೋಗದಲ್ಲಿ ತೊಡೋಣ ನಂತರ ಉಳಿದ ಸದಸ್ಯರು ತೆಗೆದುಕೊಳ್ಳಿ ಎಂದು ಸದಸ್ಯರೆಲ್ಲರೂ ಒಟ್ಟುಗೂಡಿ ತೀರ್ಮಾನಿಸಿದರು.ಅದರಂತೆ ಮುತ್ತಪ್ಪ ಬಡಗಣ್ಣವರ್ ಅವರು ಈ ಸಾಲವನ್ನು ಪಡೆದುಕೊಂಡು ಹೈನುಗಾರಿಕೆ ಉದ್ಯೋಗದಲ್ಲಿ ತೊಡಗಿದರು.
ಹೀಗೆ ಮುತ್ತಪ್ಪ ಅವರು ಯಾವುದೇ ಕಟ್ಟು ಬಾಕಿ ಉಳಿಸದೆ ಸಾಲ ಮರುಪಾವತಿಯನ್ನು ಮಾಡಿದರು.ನಂತರ ಉಳಿದ ಸದಸ್ಯರು ಚರ್ಚೆ ಮಾಡಿ ಮತ್ತೆ ಎರಡನೇ ಸಲ ಬ್ಯಾಂಕ್ ಲೋನ್ ಪಡೆದುಕೊಳ್ಳಲು ತೀರ್ಮಾನಿಸಿದರು.ಅದರಂತೆ ರೇಖಾ ಅವರ ಸಹಕಾರದೊಂದಿಗೆ ಎಲ್ಲ ಸದಸ್ಯರ ದಾಖಲಾತಿಯನ್ನು ಹೊಂದಿಸಿ ಬ್ಯಾಂಕಿಗೆ ಅರ್ಜಿ ಸಲ್ಲಿಸಿದರು.ಮೊದಲನೇ ಲೋನ್ ಯಾವುದೇ ಕಟ್ಟು ಬಾಕಿ ಇಲ್ಲದೆ ಸರಿಯಾಗಿ ಕಟ್ಟಿದ್ದ ಕಾರಣ ಎರಡನೇ ಲೋನ್ ನಲ್ಲಿ 1,50000/- ಲೋನ್ ಸ್ಯಾಂಕ್ಷನ್ ಮಾಡಿದರು.ಆ ಲೋನ್ ಅನ್ನು ಸಂಘದ ಸದಸ್ಯರಲ್ಲಿ ಮೂರು ಜನ ತೆಗೆದುಕೊಂಡು ಉದ್ಯೋಗ ಮಾಡುತ್ತಿದ್ದಾರೆ ಅದರಲ್ಲಿ ಮೈಲಾರಪ್ಪ ಗಂಜಿಗಡ್ಡೆರ ಇವರು ಕೃಷಿಗಾಗಿ ಮತ್ತು ಕುರಿ ಸಾಕಾಣಿಕೆಗಾಗಿ ಐವತ್ತು ಸಾವಿರ ಲೋನ್ ಪಡೆದುಕೊಂಡು ಉದ್ಯೋಗ ಮಾಡುತ್ತಿದ್ದಾರೆ. ಇವರು ದೈಹಿಕ ವಿಕಲಚೇತನತೆ ಹೊಂದಿದವರು.ಹಾಗೆ ಕೃಷ್ಣಪ್ಪ ಎಣಿಗಾರ್ ಇವರು ಕೂಡ 50000 ಲೋನ್ ಪಡೆದುಕೊಂಡು ಕಿರಾಣಿ ಅಂಗಡಿಯಿಟ್ಟು ತಮ್ಮ ಉದ್ಯೋಗವನ್ನು ಆರಂಭಿಸಿ ತಮ್ಮ ಕುಟುಂಬಗಳಿಗೆ ಆಧಾರವಾಗಿದ್ದಾರೆ.ಅದೇ ರೀತಿ ಮುತ್ತಪ್ಪ ಬೆಡಗಣ್ಣನವರ್ ಇವರು ಕೂಡ 50000 ಲೋನ್ ಪಡೆದುಕೊಂಡು ಹೈನುಗಾರಿಕೆ ಉದ್ಯೋಗವನ್ನು ಮುಂದುವರೆಸಿದ್ದಾರೆ.
ಹೀಗೆ ಇವರೆಲ್ಲರೂ ವಿಕಲಚೇತನತೆ ಹೊಂದಿದ್ದರು ನಮ್ಮಲ್ಲಿ ದುಡಿಯುವ ಛಲ ಇದೆ ಎಂದು ಎಲ್ಲ ವಿಕಲಚೇತನಿಗೆ ಮಾದರಿಯಾಗಿ ನಿಂತು ತಮ್ಮ ಕುಟುಂಬಗಳಿಗೆ ಬೆನ್ನೆಲುಬಾಗಿದ್ದಾರೆ.ಯಾವುದೇ ರೀತಿ ಕಟ್ಟು ಬಾಕಿ ಉಳಿಸದೆ ಸರಿಯಾಗಿ ಸಾಲವನ್ನು ಮರುಪಾವತಿ ಮಾಡುತ್ತಿದ್ದಾರೆ. ಇಷ್ಟೆಲ್ಲಾ ಸಹಕಾರ ಪಡೆದುಕೊಂಡ ಸದಸ್ಯರು ಡೀಲ್ ಫೌಂಡೇಶನ್ ಸಂಸ್ಥೆ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ ಅದು ಮೊದಲು ನಮಗೆ ಸಂಘ ಅಂದರೆ ಬೇಸರವಿತ್ತು ಎಲ್ಲಿ ದುಡ್ಡು ತೆಗೆದುಕೊಂಡು ಹೋಗುತ್ತಾರೆ ಎಂದು ಜೊತೆಗೆ ನಾವು ವಿಕಲಚೇತನತೆ ಹೊಂದಿದ್ದರು ನಮಗೆ ಯಾವುದೇ ಸಾಲ ಮತ್ತು ಕೆಲಸ ಕೊಡುವುದಿಲ್ಲ ಇದರಿಂದ ಸಂಘದ ಬಗ್ಗೆ ಅಷ್ಟು ಮಾಹಿತಿ ಕೂಡ ಇರಲಿಲ್ಲ ಆದರೆ ರೇಖಾ ಅವರು ಬಂದು ಮನೆಮನೆಗೆ ಹೋಗಿ ವಿಕಲಚೇತನರಿಗೆ ಆತ್ಮಸ್ಥೈರ್ಯ ತುಂಬಿ ಸಂಘ ಮಾಡಿ ಉದ್ಯೋಗ ಮಾಡುವಂತೆ ಮಾಡಿದರು. ಇದರಿಂದ ನಮ್ಮನ್ನು ನಾವು ಮೊದಲು ಗುರುತಿಸಿಕೊಂಡು ನಮ್ಮ ಕುಟುಂಬದಲ್ಲಿ ನಮಗೂ ಬೆಲೆ ಸಿಕಂತಾಯಿತು.ಸಂಘ ಮಾಡಿದ್ದರಿಂದ ನಮಗೆ ಸಾಲ ಸೌಲಭ್ಯಗಳು ಸಿಕ್ಕಿದವು ಹಾಗೂ ತರಬೇತಿಗಳಿಂದ ನಮ್ಮ ಬುದ್ಧಿ ಮಟ್ಟವು ಕೂಡ ಹೆಚ್ಚಾಗಿದೆ. ಇಷ್ಟೆಲ್ಲ ಸಹಕಾರ ನೀಡಿದ ಡೀಲ್ ಫೌಂಡೇಶನ್ ಸಂಸ್ಥೆಗೂ ಹಾಗೂ ರೇಖಾ ಅವರಿಗೂ ನಮ್ಮ ಸಂಘದ ಎಲ್ಲ ಸದಸ್ಯರ ಪರವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇವೆ.ಹೀಗೆ ನಮ್ಮಂತ ವಿಕಲಚೇತನರನ್ನು ಗುರುತಿಸಿ ಅವರ ಜೀವನಕ್ಕೆ ಸಹಾಯ ಮಾಡಿ ದಾರಿ ತೋರಲಿ ಎಂದು ಕೇಳಿಕೊಳ್ಳುತ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಹೀಗೆ ಡೀಲ್ ಫೌಂಡೇಶನ್ ಸಂಸ್ಥೆಯು ತರಬೇತಿಗಳನ್ನು ನೀಡುವುದರ ಮೂಲಕ ವಿಕಲಚೇತನರಿಗೆ ಉದ್ಯೋಗದಲ್ಲಿ ತೊಡಗುವಂತೆ ಮಾಡುತ್ತಿದ್ದಾರೆ.ಹೀಗೆ ಇನ್ನೂ ಹೆಚ್ಚಿನ ಮಟ್ಟದಲ್ಲಿ ಡೀಲ್ ಫೌಂಡೇಶನ್ ಸಂಸ್ಥೆಯಿಂದ ವಿಕಲಚೇತನರಿಗೆ ಅನುಕೂಲವಾಗಲಿ ಎಂದು ಹೇಳುತ್ತಾ ಡೀಲ್ ಫೌಂಡೇಶನ್ ಸಂಸ್ಥೆ ಇನ್ನೂ ಹೆಚ್ಚು ಕೀರ್ತಿ ಗಳಿಸಲಿ ಎಂದು ಎಲ್ಲ ವಿಕಲಚೇತನರು ಹಾರೈಸುತ್ತಿದ್ದಾರೆ.
ಈ ಬ್ಲಾಗ್ ಗೆ ಸಂಬಂಧಿಸಿದಂತೆ ಯಾವುದೇ ನಿರ್ದಿಷ್ಟ ಪ್ರಶ್ನೆಗಳಿಗೆ ಅಥವಾ ಯಾವುದೇ ಸಹಾಯಕ್ಕಾಗಿ Info@deal-foundation.com ನಲ್ಲಿ ತಿಳಿಸಿರಿ ಮತ್ತು ನಾವು ಮಾಡುವ ಕೆಲಸದ ಕುರಿತು ಇನ್ನಷ್ಟು ತಿಳಿದುಕೊಳ್ಳಲು www.deal-foundation ಗೆ ಲಾಗ್ ಇನ್ ಮಾಡಿ.
ಧನ್ಯವಾದಗಳು