ನವಚೇತನ ಮಹಿಳಾ ಸ್ವಸಹಾಯ ಸಂಘದ ಕೇಸ್ ಸ್ಟಡಿ

 

ಇಂದಿನ ಸಮಾಜದಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಹಲವಾರು ತಾರತಮ್ಯಗಳು ಮತ್ತು ಅನಾನುಕೂಲತೆಗಳಿಗೆ ಒಳಗಾಗುತ್ತಿದೆ.ಅದರಲ್ಲಿ ವಿಕಲಚೇತನತೆಯು ಕೂಡ ಒಂದು ಹೆಚ್ಚಿನ ಜನಸಂಖ್ಯೆಯಲ್ಲಿ ವಿಕಲಚೇತನರು ಬಡತನ ಕೆಳಗೆ ವಾಸಿಸುತ್ತಿದ್ದಾರೆ.ಇಂತಹ ಸಮಾಜದಲ್ಲಿ ವಿಕಲಚೇತನರಿಗೆ ಹಲವಾರು ಅಡೆತಡೆಗಳು ಎದುರಾಗುತ್ತಿವೆ.ವಿಕಲಚೇತನರಿಗೆ ತಾರತಮ್ಯದ ಭಾವನೆಗಳು ಉಂಟಾಗುತ್ತವೆ. ಇಂತಹ ಸಮಸ್ಯೆಗಳನ್ನು ವಿಕಲಚೇತನರು ಎದುರಿಸಬೇಕಾಗುತ್ತಿದೆ. ಅದಕ್ಕಾಗಿ ವಿಕಲಚೇತನತೆಯ ಬಗ್ಗೆ ಅದರ ಅರಿವಿನ ಬಗ್ಗೆ ನಕಾರಾತ್ಮಕ ಭಾವನೆಗಳನ್ನು ತೊಡೆದು ಹಾಕಲು ಡೀಲ್ ಫೌಂಡೇಶನ್ ಸಂಸ್ಥೆಯು ವಿಕಲಚೇತನರಿಗೆ ವಿಕಲಚೇತನತೆ ಅರಿವಿನ ಬಗ್ಗೆ ಮಾಹಿತಿ ನೀಡಿ ವಿಕಲಚೇತನರ ಜೀವನಕ್ಕೆ ಬೆಳಕಾಗಿ ಅದು ಸ್ಥಿರವಾಗಿ ನೆಲೆಸುವಂತೆ ಕಾರ್ಯ ನಿರ್ವಹಿಸುತ್ತಿದೆ.

ಅಷ್ಟೇ ಅಲ್ಲದೆ ವಿಕಲಚೇತನರ ಮತ್ತು ಮಹಿಳೆಯರಿಗೆ ಸುಸ್ಥಿರ ಜೀವನೋಪಾಯ ಅವಕಾಶಗಳನ್ನು ಉತ್ತೇಜಿಸಲು ಸ್ವಸಹಾಯ ಸಂಘವನ್ನು ರಚಿಸುವುದರ ಮೂಲಕ ತರಬೇತಿಯನ್ನು ನೀಡಿ ಅವರ ಆರ್ಥಿಕ ಜೀವನ ಸುಧಾರಣೆ ಹೊಂದುವಂತೆ ಮಾಡುತ್ತಿದೆ. ಹೀಗೆ ಪ್ರತಿ ತಾಲೂಕಿನಲ್ಲಿ ಡೀಲ್ ಫೌಂಡೇಶನ್ ಸಂಸ್ಥೆಯ ಕಾರ್ಯಕರ್ತರು ವಿಕಲಚೇತನರ ಮತ್ತು ಮಹಿಳೆಯರೊಡನೆ ಕಾರ್ಯ ನಿರ್ವಹಿಸಿ ಸ್ವಸಹಾಯ ಸಂಘಗಳಲ್ಲಿ ತೊಡಗುವಂತೆ ಮಾಡುತ್ತಿದ್ದಾರೆ.

ಅಂತಹ ತಾಲೂಕಿನ ಸ್ವಸಹಾಯ ಸಂಘದ ಬಗ್ಗೆ ಹೇಳುವುದಾದರೆ ಲಕ್ಷ್ಮೇಶ್ವರ ತಾಲೂಕಿನ ಸೋಗಿಹಾಳ ಗ್ರಾಮದ “ನವಚೇತನ ಮಹಿಳಾ ಸ್ವಸಹಾಯ ಸಂಘ”ವು ಕೂಡ ಒಂದು.ಈ ಸಂಘದ ಬಗ್ಗೆ ನೋಡುವುದಾದರೆ ಡೀಲ್ ಫೌಂಡೇಶನ್ ಸಂಸ್ಥೆ ವತಿಯಿಂದ ಲಕ್ಷ್ಮೇಶ್ವರ ತಾಲೂಕಿನ ಲವ್ಲೀ ವುಡ್ ಆಫೀಸರ್ ಆದ ವಿರೂಪಾಕ್ಷ ಅವರು ಸೋಗಿಹಾಳ ಗ್ರಾಮಕ್ಕೆ ಭೇಟಿ ನೀಡಿ ಅಲ್ಲಿನ ವಿ ಆರ್ ಡಬ್ಲ್ಯೂ ಅವರಿಗೆ ಮೊದಲು ಡೀಲ್ ಫೌಂಡೇಶನ್ ಸಂಸ್ಥೆಯ ಕಾರ್ಯಗಳ ಬಗ್ಗೆ ಮಾಹಿತಿ ನೀಡಿ ವಿಕಲಚೇತನರ ಮನೆಗಳಿಗೆ ಭೇಟಿ ನೀಡಲು ಒಪ್ಪಿಗೆ ಪಡೆದುಕೊಂಡು ಗ್ರಾಮದ ಎಲ್ಲ ವಿಕಲಚೇತನ ಮನೆಗಳಿಗೆ ಭೇಟಿ ನೀಡಿ ಮಾಹಿತಿಯನ್ನು ಪಡೆದುಕೊಂಡು ಅವರಿಗೆ ಡೀಲ್ ಫೌಂಡೇಶನ್ ಸಂಸ್ಥೆ ಬಗ್ಗೆ ಮತ್ತು ಸ್ವಸಹಾಯ ಸಂಘದ ಬಗ್ಗೆ ಮಾಹಿತಿ ನೀಡುತ್ತಾ ಹೋದರು.ಹೀಗೆ ಪ್ರತಿ ಮನೆಗಳಿಗೂ ಭೇಟಿ ನೀಡಿದರು.ಇದರಿಂದ ಆಸಕ್ತಿ ಹೊಂದಿದ ವಿಕಲಚೇತನರು ಸ್ವ ಸಹಾಯ ಸಂಘವನ್ನು ರಚಿಸಿಕೊಂಡರು.ಹೀಗೆ ವಿಕಲಚೇತನ ಸಂಘವನ್ನು ರಚಿಸಿ ಅವರಿಗೆ ತರಬೇತಿಗಳನ್ನು ನೀಡುವುದನ್ನು ಗಮನಿಸಿ ಅಲ್ಲಿನ ಮಹಿಳೆಯರು ಕೂಡ ಸ್ವಸಹಾಯ ಸಂಘವನ್ನು ನಾವು ಮಾಡುತ್ತೇವೆ ತರಬೇತಿಯನ್ನು ಪಡೆದುಕೊಂಡು ಸ್ವಯಂ ಉದ್ಯೋಗದಲ್ಲಿ ತೊಡಗಿ ಆರ್ಥಿಕವಾಗಿ ಬೆಳೆಯುತ್ತೇವೆ ಎಂದು ವಿರೂಪಾಕ್ಷ ಅವರ ಸಹಕಾರದಲ್ಲಿ ಹತ್ತು ಜನ ಮಹಿಳೆಯರು ಸೇರಿ ಸ್ವ ಸಹಾಯ ಸಂಘವನ್ನು ರಚಿಸಿಕೊಂಡರು.ಅದಕ್ಕೆ ನವ ಚೇತನ ಮಹಿಳಾ ಸ್ವಸಹಾಯ ಸಂಘ ಹೆಸರಿಟ್ಟು ಕೆಸಿಸಿ ಬ್ಯಾಂಕ್ ನಲ್ಲಿ ಖಾತೆಯನ್ನು ತೆರೆದರು.ಸಂಘದ ಸದಸ್ಯರೆಲ್ಲರೂ ಪ್ರತಿ ತಿಂಗಳು 500 ರೂಪಾಯಿ ಉಳಿತಾಯ ಮಾಡಲು ತೀರ್ಮಾನಿಸಿದರು.

ಹೀಗೆ ಈ ಸಂಘ ರಚನೆಯಾದ ನಂತರ ವಿರೂಪಾಕ್ಷ ಅವರು ಈ ಸಂಘಕ್ಕೆ ಬುಕ್ ರೈಟಿಂಗ್ ತರಬೇತಿ,ಲೀಡರ್ಶಿಪ್ ತರಬೇತಿ,2016ರ ಡಿಸ್ ಎಬಿಲಿಟಿ ಅವರ್ನೆಸ್ ತರಬೇತಿಗಳನ್ನು ನೀಡಿದರು.ಹೀಗೆ 6ತಿಂಗಳು ಆದ ನಂತರ ಸಂಘದಿಂದ ಲೋನ್ ಪಡೆದುಕೊಂಡು ಉದ್ಯೋಗದಲ್ಲಿ ತೊಡಗಲು ಪ್ರತಿ ತಿಂಗಳ ಮೀಟಿಂಗ್ ನಲ್ಲಿ ಎಲ್ಲ ಸದಸ್ಯರು ಚರ್ಚೆ ಮಾಡಿದರು.ಸಂಘದ ಸದಸ್ಯರು ಯಾವುದೇ ಅಡೆಚಣೆ ಬರದ ಹಾಗೆ ಸಂಘವನ್ನು ನಡೆಸಿಕೊಂಡು ಹೋಗುತ್ತಿದ್ದಾರೆ.

ಈ ಸಂಘವು ರಚನೆಯಾದ ಆರು ತಿಂಗಳ ನಂತರ ಸದಸ್ಯರೆಲ್ಲರೂ ಲೋನ್ ತೆಗೆದುಕೊಳ್ಳಲು ಬ್ಯಾಂಕಿಗೆ ಹೋಗಿ ಅರ್ಜಿಯನ್ನು ಸಲ್ಲಿಸಿದರು ಆದರೆ ಕೆಸಿಸಿ ಬ್ಯಾಂಕ್ ನಲ್ಲಿ ಸಂಘ ರಚನೆಯಾದ ಒಂದು ವರ್ಷ ಆದ ನಂತರ ಬ್ಯಾಂಕ್ ಲೋನ್ ಕೊಡುತ್ತೇವೆ ಎಂದು ಹೇಳಿದರು.ಅಲ್ಲಿಯವರೆಗೂ ಏನಾದರೂ ಮಾಡಬೇಕು ಎಂದು ಸದಸ್ಯರು ಚರ್ಚಿಸಿ ತಮ್ಮ ಉಳಿತಾಯದಿಂದಲೇ ಸಾಲವನ್ನು ಪಡೆದುಕೊಳ್ಳಲು ತೀರ್ಮಾನಿಸಿದರು ಅದರಂತೆ ತುಂಬಾ ಅವಶ್ಯಕತೆ ಇರುವ ಸದಸ್ಯರು ಮೊದಲು ಲೋನ್ ತೆಗೆದುಕೊಳ್ಳಲು ತೀರ್ಮಾನಿಸಿದರು.ಅದರಲ್ಲಿ ರೇಣುಕಾ ಪಾಟೀಲ್ ಇವರು 10,000 ಆಂತರಿಕ ಸಾಲ ಪಡೆದುಕೊಂಡು ಕುರಿಮರಿ ಸಾಕಾಣಿಕೆ ಉದ್ಯೋಗ ಮಾಡುತ್ತಿದ್ದಾರೆ.ಇದರಿಂದ ಅವರ ಕುಟುಂಬಕ್ಕೂ ಸಹಾಯಕವಾಗಿದೆ.ಅದೇ ರೀತಿ ಪುಷ್ಪ ಒಲಿ ಇವರು ಕಿರಾಣಿ ಅಂಗಡಿಗಾಗಿ 15000 ಲೋನ್ ಪಡೆದುಕೊಂಡು ಮನೆಯಲ್ಲಿ ಉದ್ಯೋಗ ಮಾಡುತ್ತ ಆರ್ಥಿಕವಾಗಿ ಸುಧಾರಣೆ ಹೊಂದುತ್ತಿದ್ದಾರೆ.

ಹೀಗೆ ಇವರು ಯಾವುದೇ ಕಟ್ಟುಬಾಕಿ ಉಳಿಸದೆ ಸರಿಯಾಗಿ ಸಾಲ ಮರುಪಾವತಿ ಮಾಡುತ್ತಿದ್ದಾರೆ.ಇವರ ಸಾಲ ತೀರಿದ ನಂತರ ಆ ಸದಸ್ಯರಲ್ಲಿ ನೇತ್ರ ಪಾಟೀಲ್ ಇವರು ಹೈನುಗಾರಿಕೆಗಾಗಿ 25 ಸಾವಿರ ಲೋನ್ ಪಡೆದುಕೊಂಡು ಉದ್ಯೋಗ ಮಾಡುತ್ತಿದ್ದಾರೆ. ಹಾಗೆ ಜ್ಯೋತಿ ಕುಂಬಾರ ಇವರು 40,000 ಲೋನ್ ಪಡೆದುಕೊಂಡು ಕೃಷಿಗಾಗಿ ಮತ್ತು ಕುರಿ ಮರಿ ಯನ್ನು ಖರೀದಿಸಿ ಉದ್ಯೋಗ ಮಾಡುತ್ತಿದ್ದಾರೆ.ಈ ಎರಡು ವರ್ಷದಲ್ಲಿ ಇವರ ಆಂತರಿಕ ಲೋನ್ ದಿಂದಲೇ ಸದಸ್ಯರೆಲ್ಲರೂ ಸಾಲವನ್ನು ಪಡೆದುಕೊಂಡು ಉದ್ಯೋಗದಲ್ಲಿ ತೊಡಗಿದ್ದಾರೆ. ಇದರಿಂದ ಇವರ ಸಂಘವು ಮಾದರಿಯಾಗಿ ಮಹಿಳೆಯರಿಗೆ ತಮ್ಮ ಕುಟುಂಬದಿಂದಲೇ ಬೆಂಬಲ ಸಿಗುತ್ತದೆ.

ಹೀಗೆ ನವಚೇತನ ಮಹಿಳಾ ಸಂಘದ ಸದಸ್ಯರು ಮಹಿಳೆಯರಿಗೆ ಅವಕಾಶ ಸಿಕ್ಕರೆ ಯಾವುದಕ್ಕೂ ಕಡಿಮೆ ಇಲ್ಲ ಎಂದು ಈ ಸಂಘದ ಸದಸ್ಯರು ಅದನ್ನು ಈ ಸಮಾಜಕ್ಕೆ ಗುರುತಿಸುವಂತೆ ಮಾದರಿಯಾಗಿದ್ದಾರೆ.ಇವರ ಈ ಬೆಳವಣಿಗೆಯನ್ನು ಕಂಡು ಡೀಲ್ ಫೌಂಡೇಶನ್ ಸಂಸ್ಥೆಯು ಪ್ರತಿವರ್ಷ ಸ್ವಾವಲಂಬನೆ ಪ್ರಶಸ್ತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತದೆ. ವಿಕಲಚೇತನ ಮತ್ತು ಮಹಿಳೆಯರನ್ನು ಗುರುತಿಸಿ ಅವರಿಗೆ ಪ್ರಶಸ್ತಿಯನ್ನು ನೀಡುತ್ತದೆ.ಅದೇ ರೀತಿ ಈ ವರ್ಷ ಸ್ವಸಹಾಯ ಸಂಘದಿಂದ ಆರ್ಥಿಕವಾಗಿ ಉದ್ಯೋಗದಲ್ಲಿ ತೊಡಗಿದ ಸಂಘವನ್ನು ಗುರುತಿಸಿ ಆ ಸಂಘಕ್ಕೆ ಪ್ರಶಸ್ತಿಯನ್ನು ನೀಡಿತು.ಅದರಲ್ಲಿ ಲಕ್ಷ್ಮೇಶ್ವರ ತಾಲೂಕಿನ ನವ ಚೇತನ ಮಹಿಳಾ ಸ್ವಸಹಾಯ ಸಂಘ ಮೂರನೇ ಪ್ರಶಸ್ತಿಗೆ ಆಯ್ಕೆಯಾಗಿ 10,000 ಬಹುಮಾನವನ್ನು ಪಡೆದುಕೊಂಡಿತು.ಇದರಿಂದ ಇನ್ನೂ ಹೆಚ್ಚಿನ ಪ್ರೊತ್ಸಾಹ ಮಹಿಳೆಯರಿಗೆ ಬರಲಿ, ಆರ್ಥಿಕವಾಗಿ ಇನ್ನು ಬೆಳೆಯಲಿ ಎಂಬ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಡೀಲ್ ಫೌಂಡೇಶನ್ ಸಂಸ್ಥೆ ಹಮ್ಮಿಕೊಳ್ಳುತ್ತದೆ.

ಹೀಗೆ ಡೀಲ್ ಫೌಂಡೇಶನ್ ಸಂಸ್ಥೆ ವತಿಯಿಂದ ತರಬೇತಿಯನ್ನು ಪಡೆದುಕೊಂಡು ಉದ್ಯೋಗದಲ್ಲಿ ತೊಡಗಿ ಮಹಿಳೆಯರು ತಮ್ಮ ಕುಟುಂಬಗಳಿಗೆ ಆಸರೆಯಾಗಿದ್ದಾರೆ.ಇಷ್ಟೆಲ್ಲ ಸಹಕಾರ ನೀಡಿದ ಡೀಲ್ ಫೌಂಡೇಶನ್ ಸಂಸ್ಥೆ ಬಗ್ಗೆ ಸಂಘದ ಸದಸ್ಯರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ ಅದು ವಿಕಲಚೇತನರು ಮತ್ತು ಮಹಿಳೆಯರ ಆರ್ಥಿಕ ಅಭಿವೃದ್ಧಿಗಾಗಿ ಕಾರ್ಯನಿರ್ವಹಿಸುತ್ತಿರುವ ಮೊದಲ ಸಂಸ್ಥೆಯನ್ನು ನಾವು ಗಮನಿಸಿದವು.ಅದರಲ್ಲಿ ನಾವು ಭಾಗವಹಿಸಿ ಅದರ ಲಾಭವನ್ನು ಪಡೆಯೋಣ ಎಂದು ತೀರ್ಮಾನಿಸಿ ಡಿಲ್ ಫೌಂಡೇಶನ್ ಇಂದ ವಿರೂಪಾಕ್ಷ ಅವರ ಮೂಲಕ ಸ್ವಸಹಾಯ ಸಂಘವನ್ನು ರಚಿಸಿಕೊಂಡೆವು.ಉಳಿತಾಯ ಮಾಡುವುದರಿಂದ ಅಲ್ಪ ಪ್ರಮಾಣದಲ್ಲಿ ಆದರೂ ನಮಗೆ ಕಷ್ಟಕಾಲದಲ್ಲಿ ಸಹಾಯಕವಾಗುತ್ತದೆ.ಈ ಸಂಘ ರಚನೆಯಾಗಿದ್ದರಿಂದ ಅನೇಕ ಇಲಾಖೆಗಳ ಮಾಹಿತಿ ಹಾಗೂ ಕಡಿಮೆ ಬಡ್ಡಿ ಯಲ್ಲಿ ಸಾಲ ಸಿಗುತ್ತಿದೆ.ನಮ್ಮ ಉಳಿತಾಯದಿಂದಲೇ ಸಂಘವನ್ನು ನಡೆಸಿಕೊಂಡು ಹೋಗುತ್ತಿದ್ದೆವೆ.ಹಾಗೂ ತರಬೇತಿಗಳ ಮೂಲಕ ಸ್ವಯಂ ಉದ್ಯೋಗದಲ್ಲಿ ತೊಡಗುವಂತೆ ಆಗಿದೆ ಇದರಿಂದ ನಮ್ಮ ಕುಟುಂಬಕ್ಕೆ ಸಹಾಯಕವಾಗಿದೆ.ಹೀಗೆ ನಮ್ಮನ್ನು ಗುರುತಿಸಿ, ಪ್ರೋತ್ಸಾಹಿಸಿ ಬಹುಮಾನವನ್ನು ನಮ್ಮ ಸಂಘವು ಪಡೆದುಕೊಂಡಿದ್ದರಿಂದ ನಮಗೆ ಇನ್ನೂ ದುಡಿಯುವ ಆಸಕ್ತಿ ಹೆಚ್ಚಾಗಿದೆ.ಇಷ್ಟೆಲ್ಲ ಸಹಕಾರ ನೀಡಿದ ಡೀಲ್ ಫೌಂಡೇಶನ್ ಸಂಸ್ಥೆಗು ಹಾಗೂ ವಿರೂಪಾಕ್ಷ ಅವರಿಗೂ ನಮ್ಮ ಸಂಘದ ಸದಸ್ಯರೆಲ್ಲರ ಪರವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇವೆ.ಹೀಗೆ ನಿಮ್ಮ ಸಹಕಾರ ನಮಗೆ ಸದಾ ಕಾಲ ನೀಡಲಿ ಎಂದು ಕೇಳಿಕೊಳ್ಳುತ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಹೀಗೆ ಡೀಲ್ ಫೌಂಡೇಶನ್ ಸಂಸ್ಥೆಯು ವಿಕಲಚೇತನರಿಗೆ ಮಾತ್ರವಲ್ಲದೆ ಮಹಿಳೆಯರಿಗೂ ಕೂಡ ಸಮಾನ ಅವಕಾಶ ನೀಡಿ ಈ ಸಮಾಜದಲ್ಲಿ ಗುರುತಿಸಿಕೊಳ್ಳುವಂತೆ ಮಾಡುತ್ತಿದೆ.ಅನೇಕ ವಿಕಲಚೇತನ ಮತ್ತು ಮಹಿಳೆಯರು ಡೀಲ್ ಫೌಂಡೇಶನ ಸಂಸ್ಥೆ ಗೆ ಬೆಂಬಲ ನೀಡುತ್ತಿದ್ದಾರೆ.ಹೀಗೆ ಡೀಲ್ ಫೌಂಡೇಶನ್ ಸಂಸ್ಥೆಯು ಇನ್ನು ಹೆಚ್ಚಿನ ಕೀರ್ತಿಗಳಿಸಲಿ ಎಂದು ಎಲ್ಲ ವಿಕಲಚೇತನ ಮತ್ತು ಮಹಿಳೆಯರು ಹಾರೈಸುತ್ತಿದ್ದಾರೆ.

ಈ ಬ್ಲಾಗ್ ಗೆ ಸಂಬಂಧಿಸಿದಂತೆ ಯಾವುದೇ ನಿರ್ದಿಷ್ಟ ಪ್ರಶ್ನೆಗಳಿಗೆ ಅಥವಾ ಯಾವುದೇ ಸಹಾಯಕ್ಕಾಗಿ Info@deal-foundation.com ನಲ್ಲಿ ತಿಳಿಸಿರಿ ಮತ್ತು ನಾವು ಮಾಡುವ ಕೆಲಸದ ಕುರಿತು ಇನ್ನಷ್ಟು ತಿಳಿದುಕೊಳ್ಳಲು www.deal-foundation ಗೆ ಲಾಗ್ ಇನ್ ಮಾಡಿ.

ಧನ್ಯವಾದಗಳು

Scroll to Top