ಈ ಸಂಘದಲ್ಲಿರುವ ಕನಕಪ್ಪ ಉಪ್ಪಾರ್ ಇವರು 38 ವಯಸ್ಸಿನವರಿದ್ದು ಇವರಿಗೆ ಹುಟ್ಟಿನಿಂದ ದೈಹಿಕ ಅಂಗವಿಕಲತೆ ಇರುತ್ತದೆ ಅಂದರೆ ಎರಡು ಕಾಲು ಇರುವುದಿಲ್ಲ ಮತ್ತು ಬೆನ್ನು ಮೂಳೆ ಸಮಸ್ಯೆ ಕೂಡ ಇರುತ್ತದೆ ಆದ್ದರಿಂದ ನನಗೆ ನಡೆದಾಡಲು ಆಗುವುದಿಲ್ಲ ಎಲ್ಲಿಗೆ ಹೋದರು ಬೇರೆಯವರ ಸಹಾಯ ತೆಗೆದುಕೊಂಡು ಓಡಾಡಬೇಕು ಇದರಿಂದ ನನ್ನ ಜೀವನ ಬಹಳ ಕಷ್ಟಕರವಾಗಿದೆ . ಎಂದರು ಹಾಗೂ ಇವರ ತಂದೆ ತಾಯಿ ಚಿಕ್ಕವರು ಇರುವಾಗಲೇ ತೀರಿಕೊಂಡಿದ್ದಾರೆ ಈಗ ಇವರು ಅಕ್ಕ ಮತ್ತು ಸೋದರ ಮಾವನ ಮನೆಯಲ್ಲಿ ಇದ್ದಾರೆ ಈ ಮನೆಯಲ್ಲಿ ಒಟ್ಟು ಆರು ಜನ ಇರುತ್ತಾರೆ ಕನಕಪ್ಪ ಇವರನ್ನು ಅವರ ಅಕ್ಕ ಮತ್ತು ಮಾವ ಚೆನ್ನಾಗಿ ನೋಡಿಕೊಳ್ಳುತ್ತಾರೆ ಮತ್ತು ಅಕ್ಕನಿಗೆ ಮೂರು ಮಕ್ಕಳಿದ್ದು ಅವರು ಶಾಲೆಗೆ ಹೋಗುತ್ತಾರೆ ಅವರು ಕೂಡ ನನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ ಅಕ್ಕ ಮತ್ತು ಮಾವ ನಾನು ನಾವು ಕೃಷಿ ಕೆಲಸವನ್ನು ಮಾಡುತ್ತೇವೆ ನಾನು ಮೂರನೇ ತರಗತಿಯವರೆಗೆ ಓದಿರುತ್ತೇನೆ ಮುಂದೆ ಓದಲು ಆಗಲಿಲ್ಲ ಯಾಕೆಂದರೆ ನಾನು ಚಿಕ್ಕವನಿದ್ದಾಗ ಶಾಲೆಯ ಸ್ನೇಹಿತರು ನನ್ನನ್ನು ಹೊತ್ತುಕೊಂಡು ಶಾಲೆಗೆ ಹೋಗುತ್ತಿದ್ದರು ಆದರೆ ಮೂರನೇ ತರಗತಿಯ ನಂತರ ನಾನು. ಬಾರ ಆಗುತ್ತೇನೆಂದು ಬಿಟ್ಟರು ಆಗ ನಾನು ಸೈಕಲ್ ಅಥವಾ ಬಂಡಿ ಯನ್ನು ತೆಗೆದುಕೊಳ್ಳಲು ನಮಗೆ ಆರ್ಥಿಕ ಸಮಸ್ಯೆ ಇರುವುದರಿಂದ ಆಗಲಿಲ್ಲ ಅದಕ್ಕೆ ಶಾಲೆಗೆ ಹೋಗುವದನ್ನೇ ನಿಲ್ಲಿಸಿದನು. ನಾನು ಶ್ರೀ ಮಾರುತೇಶ್ವರ ವಿಕಲಚೇತನರ ಸ್ವಸಹಾಯ ಸಂಘದಲ್ಲಿ ಸೇರಿದ ನಂತರ ಸುರಕ್ಷಿತ ವಿಕಲಚೇತನರ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯಲ್ಲಿ ಶೇರುದಾರ ಸದಸ್ಯನಾಗಿದ್ದೇನೆ. ಹಾಗೂ
ನಾನು ಈಗ ಕೃಷಿ ಕೆಲಸವನ್ನು ಮಾಡಿಕೊಂಡು ಹೋಗುತ್ತಿದ್ದೇನೆ 4 ಎಕರೆ ನೀರಾವರಿ ಜಮೀನು ಇದೆ. ಆದ್ದರಿಂದ ಸುರಕ್ಷಿತ ವಿಕಲಚೇತನರ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯಿಂದ ಎರಡು ಸಾರಿ ಸಾಲಾ ತೆಗೆದುಕೊಂಡಿರುತ್ತೇನೆ. ಮೊದಲನೇ ಸಲ ನಾನು ಕೃಷಿ ಚಟುವಟಿಕೆಗಳಾದ ಬೀಜ ಗೊಬ್ಬರಕ್ಕೆ ಬಳಸಿಕೊಂಡೆ ಅದರಿಂದ ನನಗೆ ತುಂಬಾ ಒಳ್ಳೆ ಆದಾಯದ ಬೆಳೆ ಬಂತು ಬಹಳ ಲಾಭ ಆಯಿತು. ಆದ್ದರಿಂದ ಮತ್ತೆ ನಾನು ಎರಡನೇ ಸಾರಿ ಮತ್ತೆ ಕೃಷಿ ಚಟುವಟಿಕೆಗೆ ಸಾಲ ಪಡೆದುಕೊಂಡಿದ್ದೇನೆ ಈ ಸಾಲವನ್ನು ನಾನು 12 ಕಂತಿನಲ್ಲಿ ಪ್ರತಿ ತಿಂಗಳು ಕಂತಿನ ಪ್ರಕಾರ ಅಸಲು ಬಡ್ಡಿಯನ್ನು ಮರುಪಾವತಿಸುತ್ತೇನೆ
ಕನಕಪ್ಪನ ಅನಿಸಿಕೆಗಳು
ನಾನು ಡೀಲ್ ಫೌಂಡೇಶನ್ ಸಂಸ್ಥೆಯ ಲವ್ಲಿ ಹುಡ್ ಆಫೀಸರ್ ರೇಣುಕಾ ಇವರ ಮಾರ್ಗದರ್ಶನದ ಮೇಲೆ ಸಂಘ ರಚನೆ ಮಾಡಿ ಸಂಘದಲ್ಲಿ ಭಾಗವಹಿಸಿ ಇದರಿಂದ ನಾನು ಸುರಕ್ಷಿತ ವಿಕಲಚೇತನರ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯಲ್ಲಿ ಸೇರಿದಾರರನಾಗಲು ಅನುಕೂಲವಾಯಿತು. ಸೇರುದಾರ ಸದಸ್ಯರಾಗಿರುವುದರಿಂದ ನನಗೆ ಹಣಕಾಸಿನ ಸಹಾಯ ಅಂದರೆ ಸಾಲ ದೊರೆಯಿತು ಆ ಸಾಲದಿಂದ ನನಗೆ ಕೃಷಿ ಚಟುವಟಿಕೆ ಮಾಡಲು ತುಂಬಾ ಅನುಕೂಲವಾಯಿತು ಮತ್ತು ಈ ಸಾಲ ಕಡಿಮೆ ಬಡ್ಡಿ ಮತ್ತು ಕಂತಿನ ಪ್ರಕಾರ ಮರುಪಾವತಿ ಇರುವುದರಿಂದ ನನ್ನಂಥ ವಿಕಲಚೇತನಾಗಿ ಸುಲಭವಾಗಿದೆ ಎಂದು ಹೇಳಬಹುದು ಯಾಕೆಂದರೆ ಬೇರೆ ಕಡೆ ಬ್ಯಾಂಕ್ ಅಥವಾ ಫೈನಾನ್ಸ್ ಗಳಲ್ಲಿ ವಿಕಲಚೇತನರು ಇವರೇನು ಉದ್ಯೋಗ ಮಾಡುತ್ತಾರೆಂದು ನಮಗೆ ಸಾಲ ಕೊಡುವುದಿಲ್ಲ ಆದರೆ ನಮಗೆ ಇಲ್ಲಿ ಸದಸ್ಯರಾಗಲು ಅವಕಾಶ ನೀಡಿ ಮತ್ತೆ ಉದ್ಯೋಗದಲ್ಲಿ ತೊಡಗುವಂತೆ ಮಾಡಿದ್ದಾರೆ ಹಾಗೂ ನಮ್ಮ ಗುಂಪು ಮತ್ತು ಸದಸ್ಯರು ಅಭಿವೃದ್ಧಿ ಹೊಂದಲು ಹಣಕಾಸು ನಿರ್ವಹಣೆ ನಾಯಕತ್ವ ತರಬೇತಿ ಯೋಜನೆಗಳ ಅರಿವು ಸ್ವಯಂ ಉದ್ಯೋಗ ಹೀಗೆ ಹಲವಾರುತರಬೇತಿ ನೀಡಿದ್ದಾರೆ. ಇದರಿಂದ ನಮಗೆ ಬಹಳ ಅನುಕೂಲವಾಗಿದೆ ಅಂತ ಹಂಚಿಕೊಂಡರು.