ಡೀಲ್ ಫೌಂಡೇಶನ್ ಸಂಸ್ಥೆಯು ಗದಗ್ ಜಿಲ್ಲೆಯ 7 ತಾಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಮಾರ್ಚ್ ತಿಂಗಳಲ್ಲಿ ನಡೆದ ಚಟುವಟಿಕೆಗಳು ಮತ್ತು ಇವೆಂಟುಗಳ ವಿವರ : —
- ) ಗದಗ ಶಿರಹಟ್ಟಿ ಹಾಗೂ ಗಜೇಂದ್ರಗಡ ,ನರಗುಂದ , ಮುಂಡರಗಿ ತಾಲೂಕಿನಲ್ಲಿ ಒಟ್ಟು 3 ವಿಕಲಚೇತನರ ಸಂಘ ಒಟ್ಟು30 ಸದಸ್ಯರು 01 ಮಹಿಳಾ ಸ್ವಸಹಾಯ ಸಂಘ10 ಸದಸ್ಯರು ಹಣಕಾಸಿನ ವ್ಯವಹಾರ ಮಾಡಲು ಹಣ ಹಾಕುವುದು ತೆಗೆಯುವುದು ಬ್ಯಾಂಕ್ ಸಾಲ ಸೌಲಭ್ಯ ಹೊಂದುವ ಸಲುವಾಗಿ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಕೆನರಾ ಬ್ಯಾಂಕ್ ನಲ್ಲಿ ಸಂಘಗಳ ಹೆಸರಿನಲ್ಲಿ ಉಳಿತಾಯ ಖಾತೆಯನ್ನು ತೆರೆಯಲಾಗಿದ
- ಪ್ರಭುಸ್ವಾಮಿ ವಿಕಲಚೇತನರ ಸ್ವಸಹಾಯ ಸಂಘ ಕಡಕೋಳ ತಾಲೂಕ ಶಿರಹಟ್ಟಿ ಹಾಗೂ
- ಶ್ರೀ ಮಲ್ಲಿಕಾರ್ಜುನ ವಿಕಲಚೇತನರ ಸ್ವಸಹಾಯ ಸಂಘ ಹೊಸಹಳ್ಳಿ ತಾಲೂಕ ಶಿರಹಟ್ಟಿ ಹಾಗೂ
- ಶ್ರೀ ದಾನೇಶ್ವರಿ ಮಹಿಳಾ ಸ್ವಸಹಾಯ ಸಂಘ ಹರಿಪುರ ತಾಲೂಕ್, ಶಿರಹಟ್ಟಿ ಹಾಗೂ
- ಅಂಬಿಗರ ಚೌಡಯ್ಯ ವಿಕಲಚೇತನರ ಸ್ವಸಹಾಯ ಸಂಘ ಮಾಗಡಿ ತಾಲೂಕ್, ಶಿರಹಟ್ಟಿ
- ಗದಗ್ ನರಗುಂದ ಶಿರಹಟ್ಟಿ ಮುಂಡರಗಿ ತಾಲೂಕುಗಳಲ್ಲಿ 2 ವಿಕಲಚತನರ ಸ್ವ ಸಹಾಯ ಸಂಘದ ಒಟ್ಟು 20 ಸದಸ್ಯರಿಗೆ 0 ಮಹಿಳಾ ಸಂಘ 0 ಸದಸ್ಯರಿಗೆ ವಿಕಲಚೇತನರ ಜಾಗೃತಿ ತರಬೇತಿ ಆರ್ಥಿಕ ಹಣಕಾಸು ತರಭೇತಿ ಮತ್ತು ನಾಯಕತ್ವ ತರಬೇತಿ . ಉದ್ಯಮಶೀಲತೆ ತರಬೇತಿ ಮತ್ತು ಸುಸ್ಥಿರ ಜೀವನೋಪಾಯ ತರಬೇತಿಯನ್ನು ವಿಕಲಚೇತನ ಗುಂಪಿನ ಸದಸ್ಯರಿಗೆ ನಡೆಸಲಾಯಿತು
- ಪ್ರಭು ಸ್ವಾಮಿ ವಿಕಲಚೇತನರ ಸ್ವಸಹಾಯ ಸಂಘ ಕಡಕೋಳ ತಾಲೂಕ ಶಿರಹಟ್ಟಿ ಹಾಗೂ
- ಶ್ರೀ ಮಲ್ಲಿಕಾರ್ಜುನ ವಿಕಲಚೇತನರ ಸ್ವಸಹಾಯ ಸಂಘ ಹೊಸಹಳ್ಳಿ ತಾಲೂಕ ಶಿರಹಟ್ಟಿ
- ಗದಗ್ ತಾಲೂಕ್ ಹಾಗೂ ಮುಂಡರಗಿ ತಾಲೂಕು, ಶಿರಹಟ್ಟಿ ತಾಲೂಕು ನರಗುಂದ ಗಜೇಂದ್ರಗಡ ಹಾಗೂ ರೋಣ ಲಕ್ಷ್ಮೇಶ್ವರ ತಾಲೂಕ ಗಳಿಂದ ಒಟ್ಟು 4 ಸ್ವಸಹಾಯ ಸಂಘಗಳಿಗೆ ಅಂದರೆ 3 ವಿಕಲಚೇತನರ ಸ್ವಸಹಾಯ ಸಂಘ 1 ಮಹಿಳಾ ಸಂಘಗಳಿಗೆ ಅಂದರೆ ಒಟ್ಟು 40 ಸದಸ್ಯರಿಗೆ ಬ್ಯಾಂಕ್ನಿಂದ ಸಾಲ ಪಡೆದುಕೊಂಡಿರುತ್ತಾರೆ.
- ಮುಂಡರಗಿ ತಾಲೂಕಿನಲ್ಲಿ ಮೇವುಂಡಿ ಗ್ರಾಮದಲ್ಲಿರುವ ಸುರಕ್ಷಿತ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯಲ್ಲಿ ಮಂಡಳಿಯ ಸಭೆಯನ್ನು ನಡೆಸಲಾಯಿತು ಸಭೆಯಲ್ಲಿ ಸೊಸೈಟಿಯ ಕಾರ್ಯ ಚಟುವಟಿಕೆಗಳ ಚರ್ಚಿಸಲಾಯಿತು ಹಾಗೂ ಜಿಲ್ಲಾ ಮಟ್ಟದ ಸಂರಕ್ಷಣಾ ಕ್ರೆಡಿಟ್ ಕಾರ್ಪೊರೇಟಿವ್ ಸೊಸೈಟಿ ಈ ತಿಂಗಳಲ್ಲಿ ನೋಂದಣಿ ಆಗಿರುತ್ತದೆ ಇದರಲ್ಲಿ ಮುಂಡರಗಿ ತಾಲೂಕು ಹೊರತುಪಡಿಸಿ ಗದಗ್ ಜಿಲ್ಲೆಯ ಎಲ್ಲಾ ತಾಲೂಕುಗಳಿಂದ ವಿಕಲಚೇತನರು 440 ಸದಸ್ಯರು ಸೇರುದಾರರಾಗಿರುತ್ತಾರೆ .
- ಪರಿಸರ ಸಮೃದ್ಧಿ ರೈತ ಉತ್ಪಾದಕರ ಕಂಪನಿ ನಿಯಮಿತ ಮೇವುಂಡಿ ತಾಲೂಕ್ ಮುಂಡರಿಗೆ ಹಾಗೂ ಸೊರ್ಟೂರ್ ಸಮಗ್ರ ತೋಟಗಾರಿಕೆ ರೈತ ಉತ್ಪಾದಕರ ಕಂಪನಿ ಸೊರ್ಟೂರ್ ತಾ/ಗದಗ್ ಹಾಗೂ ಶಿರಹಟ್ಟಿ.ನಿರ್ದೇಶಕ ಮಂಡಳಿ ಸಭೆಯನ್ನು ಮಾಡಲಾಯಿತು ಹಾಗೂ ಸಭೆಯಲ್ಲಿ ರೈತರಿಗಾಗಿ ಇರುವಂತ ಕೃಷಿ ಚಟುವಟಿಕೆಗಳ ಬಗ್ಗೆ ಕೃಷಿ ಉಪಕರಣಗಳ ಬಗ್ಗೆ ಮಾಹಿತಿ ನೀಡಲಾಯಿತು ಹಾಗೂ ಈ ವರ್ಷದಲ್ಲಿ ಸೇರು ಸದಸ್ಯರ ಸಂಖ್ಯೆ ಹೆಚ್ಚಿಸುವುದು ಮತ್ತು ರೈತರಿಗೆ ಇರುವಂತ ಸೌಲಭ್ಯಗಳನ್ನು ಒದಗಿಸಿಕೊಡುವ ಕೊಡುವ ಬಗ್ಗೆ ಚರ್ಚಿಸಲಾಯಿತು ಹಾಗೂ ಪರಿಸರ ಸಮೃದ್ಧಿ ರೈತ ಉತ್ಪಾದಕರ ಕಂಪನಿಯಿಂದ ಜೀವನ್ ಕಾಟ್ ವೆಬ್ಸೈಟ್ ಪ್ರಾರಂಭ ಮಾಡಲಾಯಿತು. ಇದರ ಮೂಲಕ ಶೇರುದಾರ ಸದಸ್ಯರು ಮತ್ತು ರೈತರು ತಮ್ಮ ಕೃಷಿಗೆ ಬೇಕಾದ ವಸ್ತುಗಳ ಖರೀದಿ ಮತ್ತು ಮಾರಾಟ ಮಾಡಬಹುದು.
- ಡೀಲ್ ಫೌಂಡೇಶನ್ ಸಂಸ್ಥೆ ಗದಗ್ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ಏಳು ತಾಲೂಕುಗಳಲ್ಲಿ ಮಹಿಳಾ ಸ್ವಸಹಾಯ ಸಂಘಗಳ ಹಾಗೂ ವಿಕಲಚೇತನರ ಸ್ವಸಹಾಯ ಸಂಘಗಳಲ್ಲಿ ಪ್ರತಿ ತಿಂಗಳು ಸಭೆ ಮಾಡಿದ ಚಟುವಟಿಕೆಗಳನ್ನು ಈ ಕೆಳಗಿನ ಫೋಟೋದಲ್ಲಿ ನೋಡಬಹುದು.
- ಡೀಲ್ ಫೌಂಡೇಶನ್ ಸಂಸ್ಥೆ ವತಿಯಿಂದ ಜಿಲ್ಲಾಮಟ್ಟದಲ್ಲಿ ಗದಗ್ ಶ್ರೀ ರೈತ ಉತ್ಪಾದಕರ ಸಂಸ್ಥೆಯನ್ನು ಈ ತಿಂಗಳು ಗದಗ್ ಮತ್ತು ಗಜೇಂದ್ರಗಡ ತಾಲೂಕಿನ ಸದಸ್ಯರ ಸೇರಿಕೊಂಡು ಗದಗಶ್ರೀ ರೈತ ಉತ್ಪಾದಕರ ಸಂಸ್ಥೆಯನ್ನು ರಚನೆ ಮಾಡಲಾಯಿತು ಇದರ ಮುಖ್ಯ ಉದ್ದೇಶ ಬಂದು ಸಿರಿಧಾನ್ಯ ಬೆಳೆಗಾರರ ಒಂದುಗೂಡಿಸಿ ಅವರಿಗೆ ಮಾರುಕಟ್ಟೆ ಮತ್ತು ಮೌಲ್ಯವರ್ಧನೆ ಮಾಡಿಸುವುದು ಮತ್ತು ವಿಕಲಚೇತನರು ಮತ್ತು ರೈತ ಮಹಿಳೆಯರ ಆರ್ಥಿಕ ಪರಿಸ್ಥಿತಿಯನ್ನು ಸುಧಾರಣೆಗೊಳಿಸುವುದು.
- ಡೀಲ್ ಫೌಂಡೇಶನ್ ಸಂಸ್ಥೆಯ ತೊಟದಲ್ಲಿ ಎರೆಹುಳ ಗೊಬ್ಬರ ತಯಾರಿಕೆ ಮಾಡುವುದು ಮತ್ತು ಗೊಬ್ಬರ ತೆಗೆದು ಅದನ್ನು ಮೂರೂ ಎಕರೆ ತೊಟದಲ್ಲಿ ಹಾಕುವುದು ಮತ್ತು ವಸ್ತು ಪ್ರದರ್ಶನದಲ್ಲಿ ಎರೆಹುಳು ಗೊಬ್ಬರ ಮಾರಾಟ ಮಾಡುವುದು ಮತ್ತು ವಿಕಲಚೇತನ ಕುಟುಂಬಗಳಿಗೂ ಹಾಗೂ ಸ್ವಸಹಾಯ ಸಂಘಗಳಿಗೆ ಎರೆಹುಳ ಗೊಬ್ಬರ ತಯಾರಿಕೆ ಕುರಿತು ತರಬೇತಿಗಳನ್ನು ನೀಡುವುದು
11) ಡೀಲ್ ಫೌಂಡೇಶನ್ ಸಂಸ್ಥೆ ಮೇವುಂಡಿಯಲ್ಲಿ ವಿಕಲಚೇತನ ಕುಟುಂಬ ಹಾಗೂ ಮಹಿಳೆಯರಿಗಾಗಿ ಹೊಲಿಗೆ ತರಬೇತಿ ಕೇಂದ್ರವನ್ನು ಪ್ರಾರಂಭಿಸಿದ್ದು ಇದು ಸತತವಾಗಿ ನಾಲ್ಕು ವರ್ಷದಿಂದ ಹೊಲಿಗೆ ತರಬೇತಿ ಕೇಂದ್ರ ನಡೆಯುತ್ತಿದೆ. Deal-Foundation Mevundi -Tailoring Unit class
ಮುಂದಿನ ತಿಂಗಳ ಇವೆಂಟ ಮುಖ್ಯಾಂಶಗಳು:
- 50 ವಿಕಲಚೇತನರು ಸೇರಿದಂತೆ 05 ಹೊಸ ಸ್ವಸಹಾಯ ಗುಂಪುಗಳನ್ನು ಸ್ಥಾಪಿಸಲಾಗುವುದು.
- 10 SHG ಗಳಿಗೆ ಹಣಕಾಸಿನ ಸೇರ್ಪಡೆ ಮತ್ತು ಬ್ಯಾಂಕ್ ಸಂಪರ್ಕ ಕಲ್ಪಿಸುವುದು.
- 20 ಗುಂಪುಗಳ ಸಾಮರ್ಥ್ಯ ನಿರ್ಮಾಣ ಮತ್ತು ಜೀವನೋಪಾಯ ತರಬೇತಿ ನೀಡುವದು.
- ಮೇವುಂಡಿಯಲ್ಲಿ ಹೊಲಿಗೆ ತರಬೇತಿ ಹಾಗೂ ಉಡುಪುಗಳ ಸಿದ್ಧತೆ ಸೇವೆಯನ್ನು ಮುಂದುವರಿಸುವುದು.
- ಎರೆಹುಳ ಗೊಬ್ಬರ ತಯಾರಿಕೆ ಕೆಲಸ ಮುಂದುವರಿಸುವುದು
- ರೈತ ಉತ್ಪಾದಕರ ಕಂಪನಿ 250 ಹೊಸ ಸದಸ್ಯರ ಸೇರು ಸಂಗ್ರಹಿಸುವುದು (FPO ಕೆಲಸ.)
- ಸಹಕಾರಿ ಕೆಲಸ ಹಂಚಿಕೆ ಹೊಸ ಸದಸ್ಯರ ಸೇರು ಮೊತ್ತ ಸಂಗ್ರಹಿಸುವ ಕೆಲಸ
- 10 ಗುಂಪುಗಳ ಜಾಗೃತಿ ತರಬೇತಿ ಮತ್ತು ಗುಂಪುವಾರು ತರಬೇತಿ
- ಆರಂಬ ಸ್ವ ಉದ್ಯೋಗ ಕೇಂದ್ರದ ಚಟುವಟಿಕೆಗಳನ್ನು ಮುಂದುವರಿಸುವುದು (ASK ಕೇಂದ್ರ ) ಹಾಗೂ
- ಮುಂಡರಗಿ ಹೊರತುಪಡಿಸಿ ಉಳಿದ ತಾಲೂಕುಗಳಲ್ಲಾಸೇರಿ ಜಿಲ್ಲಾ ಸಹಕಾರಿ ಕೆಲಸ ನೊಂದಣಿ ಮಾಡಿಸಲು ಪೂರ್ವಭಾವಿ ಸಭೆ ಮಾಡುವುದು .