ಮುಶ್ಯವ್ವಾ ಪೂಜಾರ ಇವರ  ಜೀವನ ಕಥೆ

ವಿಕಲಚೇತನ ಉದ್ಯಮಶೀಲತೆ ಮತ್ತು ನಾಯಕತ್ವ ಸಿಬ್ಬಂದಿಗಳು ಗದಗ್ ಜಿಲ್ಲೆಯಾದ್ಯಂತ 2023ರಲ್ಲಿ 3000 ವಿಕಲಚೇತನ ಮತ್ತು ನಾಲ್ಕು ಸಾವಿರ ಮಹಿಳೆಯರು ಸದಸ್ಯರನ್ನು ಗುರುತಿಸಲು ಕಾರ್ಯ ಆರಂಭಿಸಿದರು.ಇದರಿಂದ ವಿಕಲಚೇತನ ಮತ್ತು ಮಹಿಳೆಯರ ಸಮಸ್ಯೆಗಳು ನಮಗೆ ಕಂಡುಬಂದಿತು.ವಿಕಲಚೇತನರು ಹೆಚ್ಚಾಗಿ ಉತ್ತಮ ಶಿಕ್ಷಣ,ಉದ್ಯೋಗ, ಅವಕಾಶಗಳಿಂದ ವಂಚಿತರಾಗಿ ತಮ್ಮ ಮನೆಗಳಿಗೆ ಮಾತ್ರ ಸೀಮಿತರಾಗಿದ್ದಾರೆ.ಆದರೆ ಇವರಿಗೆ ಅವಕಾಶ ಮತ್ತು ಸರಿಯಾದ ಮಾರ್ಗದರ್ಶನ ಸಿಕ್ಕರೆ ತಮ್ಮನ್ನು ತಾವು ಗುರುತಿಸಿಕೊಂಡು ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸುತ್ತಾರೆ.

     ಅದಕ್ಕಾಗಿ ಡೀಲ್ ಫೌಂಡೇಶನ್ ಸಂಸ್ಥೆಯು ಗ್ರಾಮೀಣ/ನಗರ ಹಾಗೂ ಬಡತನ ರೇಖೆಗಿಂತ ಕೆಳಗೆ ವಾಸಿಸುತ್ತಿರುವ ವಿಕಲಚೇತನರಿಗೆ, ಮಹಿಳೆಯರಿಗೆ ತಮ್ಮ ಸ್ವಾವಲಂಬನೆ ಜೀವನವನ್ನು ಕಟ್ಟಿಕೊಂಡು ಎಲ್ಲರಂತೆ ಸದೃಢ ಭಾವನೆಗಳನ್ನು ಮೈಗೂಡಿಸಿಕೊಂಡು ಸದಾ ಕ್ರಿಯಾಶೀಲ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಮಾಡಲು ಪ್ರತಿ ತಾಲೂಕಿನಲ್ಲಿ ಲವ್ಲಿ ವುಡ್ ಆಫೀಸರ್ಸ್ ಕಾರ್ಯನಿರ್ವಹಿಸುತ್ತಿದ್ದಾರೆ. ವಿಕಲಚೇತನ ಮತ್ತು ಮಹಿಳೆಯರನ್ನು ಗುರುತಿಸಿ ಅವರಲ್ಲಿರುವ ಆಸಕ್ತಿಯ ಉದ್ಯೋಗದ ತರಬೇತಿಯನ್ನು ನೀಡಿ ಸ್ವಯಂ ಉದ್ಯೋಗದಲ್ಲಿ ತೊಡಗುವಂತೆ ಮಾಡುತ್ತಿದ್ದಾರೆ. ಹೀಗೆ ಪ್ರತಿ ತಾಲೂಕಿನಲ್ಲಿ ವಿಕಲಚೇತನರು ಉದ್ಯೋಗದಲ್ಲಿ ತೊಡಗಿದ್ದಾರೆ.ಅದರಲ್ಲಿ ಹೇಳುವುದಾದರೆ ಮುಶ್ಯವ್ವಾ ಪೂಜಾರ ಇವರು ಕೂಡ ಒಬ್ಬರು.

       ಇವರ ಬಗ್ಗೆ ಹೇಳುವುದಾದರೆ ಇವರು ಮೂಲತಃ ಮುಂಡರಗಿ ತಾಲೂಕಿನ ಡಂಬಳ ಗ್ರಾಮದವರು. ಇವರ ಬಾಲ್ಯ ಜೀವನ ನೋಡುವುದಾದರೆ ಇವರ ತಂದೆ ಬೀರಪ್ಪ ತಾಯಿ ದೇವಕ್ಕ.ತಂದೆ ತಾಯಿಗೆ ಇವರು ಮುದ್ದಿನ ಮಗಳು ಇವರು ದೈಹಿಕ ವಿಕಲಚೇತನತೆಯನ್ನು ಹೊಂದಿದ್ದಾರೆ.ಅದು ಹುಟ್ಟಿದಾಗ ಯಾವುದೇ ರೀತಿಯ ತೊಂದರೆ ಇರಲಿಲ್ಲ 5 ವರ್ಷವಿದ್ದಾಗ ಪೋಲಿಯೋ ಹಾಕಿದ ಕಾರಣದಿಂದಾಗಿ ಇವರ ಕಾಲು ನಡೆಯಲು ಬರಲಿಲ್ಲ.ಕೋಲಿನ ಸಹಾಯದಿಂದ ನಡೆಯುವುದನ್ನು ಕಲಿತರು.ಈ ರೀತಿ ಇದ್ದರೂ ಕೂಡ ಮುಶ್ಯವ್ವಾ ಇವರಿಗೆ ಶಿಕ್ಷಣದಲ್ಲಿ ತುಂಬಾ ಆಸಕ್ತಿ ಹೆಚ್ಚಿನ ಶಿಕ್ಷಣ ಕಲಿತು ನನ್ನ ನ್ಯೂನತೆಯನ್ನು ಹೋಗಲಾಡಿಸಬೇಕು,ನನ್ನನ್ನು ನಾನು ಗುರುತಿಸಿಕೊಳ್ಳಬೇಕು ಎಂಬ ಛಲ ಇವರದಾಗಿತ್ತು.ಅದರಂತೆ ಕುಟುಂಬದ ಸಹಕಾರದಿಂದ ಪಿಯುಸಿ ಮುಗಿಸಿ ನಂತರ ಐಟಿಐ ಮಾಡುತ್ತಾ ಕಂಪ್ಯೂಟರ್ ತರಬೇತಿಯನ್ನು ಪಡೆದುಕೊಂಡು ಉನ್ನತ ಶಿಕ್ಷಣವನ್ನು ಕಲಿತರು.

      ಶಿಕ್ಷಣ ಮುಗಿದ ನಂತರ ಮನೆಯಲ್ಲೇ ಕುಳಿತರೆ ಸಾಲದು ನನ್ನ ಶಿಕ್ಷಣದಿಂದ ಏನಾದರೂ ಮಾಡಬೇಕು ಎಂದು ಲಕ್ಷ್ಮೇಶ್ವರದಲ್ಲಿ ವಿಕಲಚೇತನರಿಗಾಗಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಯಲ್ಲಿ ತಾವು ವಿಕಲಚೇತನತೆ ಹೊಂದಿರುವ ಕಾರಣ ಅವರಿಗಾಗಿ ಕಾರ್ಯನಿರ್ವಹಿಸಬೇಕು ಎಂದು ಲಕ್ಷ್ಮೇಶ್ವರದ ವಿಕಲಚೇತನರಿಗೆ ಮಾಹಿತಿ ನೀಡಿ ಅವರ ಡಾಟಾ ಸೇರ್ಪಡಿಸುತ್ತಾ ಸರ್ಕಾರದಿಂದ ಸಿಗುವ ಸೌಲಭ್ಯಗಳ ಬಗ್ಗೆ ವಿಕಲಚೇತನರಿಗೆ ಮಾಹಿತಿ ನೀಡುವ ಕೆಲಸ ಆರಂಭಿಸಿದರು.ಹೀಗೆ ಎಂಟು ತಿಂಗಳು ಅಲ್ಲಿ ಕಾರ್ಯ ನಿರ್ವಹಿಸಿದರು.ದಿನ ಕಳೆದ ಹಾಗೆ ಇವರ ಕಾಲ ನಡೆಯಲು ಆಗಲಿಲ್ಲ ಅದಕ್ಕಾಗಿ ಆ ಕೆಲಸವನ್ನು ಬಿಟ್ಟು ಮನೆಯಲ್ಲಿ ಇದ್ದರು.

      ಹೀಗೆ ದಿನ ಕಳೆದ ಹಾಗೆ ತಂದೆ ತಾಯಿ ಇಬ್ಬರು ತಿರಿಹೋದರು.ಮುಶ್ಯವ್ವಾ ಅವರು ಅವರ ಅಣ್ಣನ ಮನೆಯಲ್ಲಿ ಅವರ ಜೀವನ ಸಾಗಿಸುತ್ತಿದ್ದಾರೆ. ಮನೆಯಲ್ಲೇ ಕುಳಿತರೆ ಏನು ಆಗುವುದಿಲ್ಲ ನಾನು ಕಲಿತ ವಿದ್ಯೆ ಹಾಳಾಗಬಾರದು ಏನಾದರೂ ಮಾಡಬೇಕು ಎಂದು ಕಾಲು ನೋವು ಇದ್ದರೂ ಕೂಡ ಟೈಲರಿಂಗ್ ತರಬೇತಿಯನ್ನು ಪಡೆದುಕೊಂಡರು. ಇದರಿಂದ ಮನೆಯಲ್ಲಿ ಇದ್ದು ಬಟ್ಟೆ ಹೊಲಿದರೆ ನನ್ನ ಜೀವನಕ್ಕೆ ಸಹಾಯಕವಾಗುತ್ತದೆ ಜೊತೆಗೆ ನಾನು ಯಾರಿಗೂ ಭಾರವಾಗುವುದಿಲ್ಲ ಎಂದು ಈ ಉದ್ಯೋಗವನ್ನು ಪ್ರಾರಂಭಿಸಿದರು.ಅಕ್ಕಪಕ್ಕದ ಮನೆಯವರು ಇವರ ಹತ್ತಿರದಲ್ಲೇ ಬಟ್ಟೆ ಹೊಲಿಯಲು ಕೊಡುತ್ತಿದ್ದರು.ಇದರಿಂದ ಕ್ರಮೇಣವಾಗಿ ಇವರ ಆರ್ಥಿಕ ಜೀವನ ಸುಧಾರಣೆ ಹೊಂದಿತು.

      ಹೀಗೆ ಒಂದು ದಿನ ಡೀಲ್ ಫೌಂಡೇಶನ್ ಸಂಸ್ಥೆಯ ಪ್ರೋಗ್ರಾಮ್ ಮ್ಯಾನೇಜರ್ ಆದ ಉಮಾ ಚಿಲ್ ಗೌಡರ್ ಹಾಗೂ ಟ್ರೈನಿಂಗ್ ಕೋ ಆರ್ಡಿನೇಟರ್ ಆದ ಶಿವಕುಮಾರ್ ಶಿರೋಳ್ ಇವರು ಡಂಬಳದ ವಿಕಲಚೇತನರನ್ನು ಸರ್ವೆ ಮಾಡಲು ಹೋದಾಗ ಪ್ರತಿ ವಿಕಲಚೇತನರ ಮನೆಗೆ ಭೇಟಿ ನೀಡಿ ಅವರ ಮಾಹಿತಿಯನ್ನು ಪಡೆದುಕೊಂಡು ಡೀಲ್ ಫೌಂಡೇಶನ್ ಸಂಸ್ಥೆಯ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದರು.ಅದೇ ರೀತಿ ಮುಶವ್ವ ಇವರ ಮನೆಗೂ ಭೇಟಿ ನೀಡಿ ಅವರ ಜೀವನದ ಬಗ್ಗೆ ತಿಳಿದುಕೊಂಡು ಡೀಲ್ ಫೌಂಡೇಶನ್ ಸಂಸ್ಥೆಯ ಕಾರ್ಯಗಳ ಬಗ್ಗೆ,ಸ್ವ ಸಹಾಯ ಸಂಘಗಳ ಬಗ್ಗೆ ಮಾಹಿತಿಯನ್ನು ನೀಡಿದರು. ಅದರಿಂದ ಪ್ರೇರಿತಗೊಂಡು ಮುಶ್ಯವ್ವಾ ಅವರ ಮನೆ ಹತ್ತಿರವಿದ್ದ ಏಳು ಜನ ವಿಕಲಚೇತನೊಡನೆ ಸೇರಿ ಜಂಟಿ ಬಾಧ್ಯತೆ ಗುಂಪುವನ್ನು 2019ರಲ್ಲಿ ರಚಿಸಿಕೊಂಡರು.ಅದಕ್ಕೆ “ಶ್ರೀ ಮಾಯಮ್ಮ ದೇವಿ ವಿಕಲಚೇತನರ ಜಂಟಿ ಬಾಧ್ಯತೆ ಗುಂಪು”ಎಂದು ಹೆಸರಿಟ್ಟು ಕೆವಿಜಿ ಬ್ಯಾಂಕಿನಲ್ಲಿ ಖಾತೆಯನ್ನು ತೆರೆದರು. ಸದಸ್ಯರೆಲ್ಲರೂ ಪ್ರತಿ ವಾರ 25 ರೂಪಾಯಿ ಉಳಿತಾಯವನ್ನು ತುಂಬುತ್ತಿದ್ದಾರೆ.

      ನಂತರ ಈ ಸಂಘಕ್ಕೆ ಉಮಾ ಚಿಲ್ ಗೌಡರ್ ಇವರು ಬುಕ್ ರೈಟಿಂಗ್ ತರಬೇತಿ,ಅವೆರ್ನೆಸ್ ತರಬೇತಿ,ಫೈನಾನ್ಸಿಯಲ್ ಲೀಡರ್ಶಿಪ್ ತರಬೇತಿಯನ್ನು ನೀಡಿದರು.ನಂತರ ಸದಸ್ಯರಲ್ಲಿರುವ ಆಸಕ್ತಿ ಉದ್ಯೋಗದ ಬಗ್ಗೆ ತಿಳಿದುಕೊಂಡು ಅವರಿಗೆ ಡೀಲ್ ಫೌಂಡೇಶನ್ ವತಿಯಿಂದ ಕುಂಕುಮ ತರಬೇತಿ,ಮೇಣದ ಬತ್ತಿಯ ತರಬೇತಿ ಮುಂತಾದ ತರಬೇತಿಯನ್ನು ನೀಡಿ ಸದಸ್ಯರಿಗೆ ಬೆಂಬಲವನ್ನು ನೀಡಿದರು. ತರಬೇತಿಯ ನಂತರ ಉದ್ಯೋಗ ಮಾಡಲು ಬಂಡವಾಳ ಬೇಕು ಅದಕ್ಕಾಗಿ ಬ್ಯಾಂಕ್ ಲೋನ್ ಪಡೆಯಲು ಸದಸ್ಯರೆಲ್ಲರೂ ನಿರ್ಧರಿಸಿದ್ದರು.ಅದರಂತೆ ಉಮಾ ಇವರ ಸಹಕಾರದಿಂದ ಸದಸ್ಯರೆಲ್ಲರ ದಾಖಲಾತಿಯನ್ನು ಪಡೆದುಕೊಂಡು ಬ್ಯಾಂಕ್ ಲೋನ್ ಗಾಗಿ ಅರ್ಜಿಯನ್ನು ಸಲ್ಲಿಸಿದರು.

      ಈ ಸಂಘದ ಉಳಿತಾಯ, ನಡವಳಿಕೆ ಪುಸ್ತಕ ಎಲ್ಲವನ್ನು ಗಮನಿಸಿ ಬ್ಯಾಂಕ್ ನಿಂದ ಲೋನ್ ಮಂಜೂರಾಯಿತು.ಸಂಘದ ಸದಸ್ಯರಾದ ಮುಶವ್ವ ಇವರು ಆ ಲೋನಲ್ಲಿ 50,000/- ಪಡೆದುಕೊಂಡು ಕುರಿ ಆಡು ಸಾಕಾಣಿಕೆಯ ಉದ್ಯೋಗ ಆರಂಭಿಸಿದರು.ಇದರಿಂದ ಅವರ ಕುಟುಂಬಕ್ಕೆ ಸಹಾಯಕ ವಾಯಿತು. ಯಾವುದೇ ಕಟ್ಟು ಬಾಕಿ ಉಳಿಸದೆ ಸಾಲವನ್ನು ಮುಟ್ಟಿಸಿದರು.

      ಹೀಗೆ ಡೀಲ್ ಫೌಂಡೇಶನ್ ಸಂಸ್ಥೆಯು ವಿಕಲಚೇತನರಿಗಾಗಿ ತರಬೇತಿ ನೀಡಿ ಉದ್ಯೋಗದಲ್ಲಿ ತೊಡಗುವಂತೆ ಮಾಡುವುದರ ಜೊತೆಗೆ ವಿಕಲಚೇತನರ ಸುರಕ್ಷಿತ ಕೋ ಆಪರೇಟಿವ್ ಸೊಸೈಟಿಯನ್ನು ಆರಂಭಿಸಿದರು.ಅದರಲ್ಲಿ ಮುಶ್ಯವ್ವಾ ಅವರು ಬೋರ್ಡ್ ಮೆಂಬರ್ ಆಗಿ ಆಯ್ಕೆಯಾಗಿದ್ದಾರೆ.ಇವರು ಕೂಡ ಕೋ ಆಪರೇಟಿವ್ ನಲ್ಲಿ ಶೇರು ಹಣ ಕಟ್ಟಿ ಸದಸ್ಯತ್ವವನ್ನು ಪಡೆದುಕೊಂಡಿದ್ದಾರೆ.ಆರು ತಿಂಗಳ ಆದ ನಂತರ ಮುಶವ್ವ ಅವರು ಸುರಕ್ಷಿತ ಕೋ ಆಪರೇಟಿವ್ ನಲ್ಲಿ ಹತ್ತು ಸಾವಿರ ಲೋನ್ ಕುರಿ ಆಡು ಸಾಕಾಣಿಕೆಗಾಗಿ ಲೋನ್ ಪಡೆದುಕೊಂಡು ಹೆಚ್ಚಿನ ಉದ್ಯೋಗ ಮಾಡುತ್ತಿದ್ದಾರೆ.ಹೀಗೆ ಮುಶವ್ವ ಅವರು ಸಂಘದ ಪ್ರತಿನಿಧಿಯಾಗಿ ಯಾವುದೇ ಅಡಚಣೆ ಬರದ ಹಾಗೆ ನಾಲ್ಕು ವರ್ಷದಿಂದ ಮಾದರಿಯಾಗುವಂತೆ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.ಅಷ್ಟೇ ಅಲ್ಲದೆ ಸುರಕ್ಷಿತ ಕೋ-ಆಪರೇಟಿವ್ ನಲ್ಲಿ ಬೋರ್ಡ್ ಮೆಂಬರ್ ಆಗಿ ಪ್ರತಿ ತಿಂಗಳು ಮೀಟಿಂಗ್ ಅಟೆಂಡ್ ಆಗಿ ಎಲ್ಲ ವಿಕಲಚೇತರಿಗೂ ಮಾದರಿಯಾಗುವಂತೆ ಡೀಲ್ ಫೌಂಡೇಶನ್ ಸಂಸ್ಥೆಯ ಸಹಕಾರದಿಂದ ಕೋ ಆಪರೇಟಿವ್ ಸೊಸೈಟಿಯನ್ನು ಬೆಳೆಸಿಕೊಂಡು ಹೋಗುತ್ತಿದ್ದಾರೆ.

      ಈ ರೀತಿಯಾಗಿ ಮುಶ್ಯವ್ವಾ ಅವರು ಉದ್ಯೋಗದಲ್ಲಿ ತೊಡಗಿ ಅನೇಕ ವಿಕಲ ಚೇತನರಿಗೆ ಮಾದರಿಯಾಗಿ ಯಾರಿಗೂ ಹೊರೆಯಾಗದಂತೆ ತಮ್ಮ ಜೀವನವನ್ನು ಸಾಗಿಸುತ್ತಿದ್ದಾರೆ. ಇಷ್ಟೆಲ್ಲ ಸಹಕಾರ ನೀಡಿದ ಡೀಲ್ ಫೌಂಡೇಶನ್ ಸಂಸ್ಥೆಯ ಬಗ್ಗೆ ಮುಷವ್ವ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ ಅದು ವಿಕಲಚೇತನತೆ ಹೊಂದಿದೆ ನನಗೆ ಮುಂದಿನ ಜೀವನದ ಬಗ್ಗೆ ಆತಂಕವಿತ್ತು ಆದರೆ ಡೀಲ್ ಫೌಂಡೇಶನ್ ಸಂಸ್ಥೆಯು ನನಗೆ ಆ ಆತಂಕವನ್ನು ದೂರ ಮಾಡಿತು. ಉನ್ನತ ಮಟ್ಟದವರೆಗೂ ಶಿಕ್ಷಣ ಮುಗಿಸಿದ ನನಗೆ ಮುಂದೆ ಏನು ಮಾಡಬೇಕು ಎಂದು ತಿಳಿಯದಾಗ ಮನೆಯಲ್ಲೇ ಇದ್ದಾಗ ಡೀಲ್ ಫೌಂಡೇಶನ್ ವತಿಯಿಂದ ಉಮಾ ಚಿಲ್ ಗೌಡರ್ ಮತ್ತು ಶಿವಕುಮಾರ್ ಅವರು ಉದ್ಯೋಗಗಳ ಬಗ್ಗೆ, ವಿಕಲಚೇತನತೆಯ ಬಗ್ಗೆ, ಸರ್ಕಾರದಿಂದ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿ ಸಂಘವನ್ನು ರಚಿಸಿ ತರಬೇತಿಯನ್ನು ನೀಡುವುದರ ಮೂಲಕ ಉದ್ಯೋಗದಲ್ಲಿ ತೊಡಗುವಂತೆ ಮಾಡಿ ಈ ಸಮಾಜದಲ್ಲಿ ನಮ್ಮನ್ನು ಗುರುತಿಸಿಕೊಳ್ಳುವಂತೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ವಿಕಲಚೇತನರಿಗಾಗಿ ಕೋ ಆಪರೇಟಿವ್ ಸೊಸೈಟಿ ಆರಂಭಿಸಿ ಹೆಚ್ಚಿನ ಸಾಲ ಸೌಲಭ್ಯ ನೀಡುವುದರ ಮೂಲಕ ಹೆಚ್ಚಿನ ಪ್ರೋತ್ಸಾಹವನ್ನು ಡೀಲ್ ಫೌಂಡೇಶನ್ ಸಂಸ್ಥೆಯು ನಮಗೆ ನೀಡಿದೆ.ಇಷ್ಟೆಲ್ಲ ಸಹಕಾರ ನೀಡಿದ ಡೀಲ್ ಫೌಂಡೇಶನ್ ಸಂಸ್ಥೆಗೂ ಹಾಗೂ ಉಮಾ ಚಿಲ್ ಗೌಡರ್ ಮತ್ತು ಶಿವಕುಮಾರ್ ಶಿರೋಳ್ ಇವರಿಗೆ ನನ್ನ ಪರವಾಗಿ ಮತ್ತು ನಮ್ಮ ಸಂಘದ ಪರವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಹೀಗೆ ಇನ್ನು ಹೆಚ್ಚಿನ ಸಹಕಾರ, ಪ್ರೋತ್ಸಾಹ ನೀಡಿ ನಮ್ಮಂತಹ ಇನ್ನೂ ಅನೇಕ ವಿಕಲ ಚೇತನರಿಗೆ ಸಹಕಾರ ನೀಡಲಿ ಎಂದು ಕೇಳಿಕೊಳ್ಳುತ್ತೇವೆ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

      ಈ ರೀತಿಯಾಗಿ ಡಿ ಫೌಂಡೇಶನ್ ಸಂಸ್ಥೆಯು ಆರಂಭದಿಂದ ಇಲ್ಲಿಯವರೆಗೂ ಅನೇಕ ವಿಕಲಚೇತನರಿಗೆ ಅವರ ಆರ್ಥಿಕವಾಗಿ ಅವರ ಕುಟುಂಬಗಳಿಗೆ ಸಹಕಾರಿಯಾಗುವಂತೆ ಮಾಡುತ್ತಿದ್ದಾರೆ. ಪ್ರತಿ ತಾಲೂಕಿನಲ್ಲೂ ವಿಕಲಚೇತನರು ಆರ್ಥಿಕವಾಗಿ ಬೆಳೆದು ತಮ್ಮನ್ನು ತಾವು ಗುರುತಿಸಿಕೊಂಡು ಮಾದರಿಯಾಗಿದ್ದಾರೆ. ಹೀಗೆ ಹೆಚ್ಚಿನ ಮಟ್ಟದಲ್ಲಿ ವಿಕಲಚೇತನರು ಬೆಳೆಯುವದರ ಜೊತೆಗೆ ಡೀಲ್ ಫೌಂಡೇಶನ್ ಸಂಸ್ಥೆಯು ಕೀರ್ತಿ ಬೆಳೆಯಲಿ ಎಂದು ವಿಕಲಚೇತನರು ಹಾರೈಸುತ್ತಿದ್ದಾರೆ.  

      ಈ ಬ್ಲಾಗ್ ಗೆ ಸಂಬಂಧಿಸಿದಂತೆ ಯಾವುದೇ ನಿರ್ದಿಷ್ಟ ಪ್ರಶ್ನೆಗಳಿಗೆ ಅಥವಾ ಯಾವುದೇ ಸಹಾಯಕ್ಕಾಗಿ Info@deal-foundation.com ನಲ್ಲಿ ತಿಳಿಸಿರಿ ಮತ್ತು ನಾವು ಮಾಡುವ ಕೆಲಸದ ಕುರಿತು ಇನ್ನಷ್ಟು ತಿಳಿದುಕೊಳ್ಳಲು www.deal-foundation.com ಗೆ ಲಾಗ್ ಇನ್ ಮಾಡಿ.

              ಧನ್ಯವಾದಗಳು

Scroll to Top