ಡೀಲ್ ಫೌಂಡೇಶನ್ ಸಂಸ್ಥೆಯು ವಿಕಲಚೇತನರಿಗಾಗಿ ಪ್ರತಿ ತಾಲೂಕಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ.ಅದಕ್ಕೆ ತಕ್ಕಂತೆ ಗುರುಗಳನ್ನು ಹಾಕಿಕೊಂಡು ಎಲ್ಲಾ ಲವ್ಲೀ ವುಡ್ ಆಫೀಸರ್ಸ್ ವಿಕಲಚೇತನರನ್ನು ಗುರುತಿಸಿ ಅವರಿಗೆ ಮನಸ್ಥರ್ಯ ನೀಡಿ ವಿಕಲಚೇತನತೆ ಒಂದು ನ್ಯೂನ್ಯತೆ ಅಲ್ಲ ಅದು ಸ್ವಾಭಾವಿಕ. ವಿಕಲಚೇತನತೆಯಿಂದ ಎಲ್ಲವನ್ನು ಸಾಧಿಸಬಹುದು ಎಂಬ ಮನಸ್ಥಿತಿಯನ್ನು ವಿಕಲಚೇತನರಲ್ಲಿ ಲವ್ಲಿ ವುಡ್ ಆಫೀಸರ್ಸ್ ತುಂಬುತ್ತಿದ್ದಾರೆ. ಅದೇ ರೀತಿ ಡೀಲ್ ಫೌಂಡೇಶನ್ ಸಂಸ್ಥೆ ವಿಕಲಚೇತನರಿಗಾಗಿ ತರಬೇತಿಗಳನ್ನು ನೀಡಿ ವಿಕಲಚೇತನರಾಗಿ ಸ್ವ ಆರಂಭ ಉದ್ಯೋಗ ಕೇಂದ್ರವನ್ನು ಪ್ರತಿ ತಾಲೂಕಿನಲ್ಲಿ ಆರಂಭಿಸಿದೆ. ಅಲ್ಲಿ ಆಸಕ್ತಿ ಹೊಂದಿದ ವಿಕಲಚೇತನರು ಸ್ವಯಂ ಉದ್ಯೋಗ ಮಾಡಬಹುದು. ಜೊತೆಗೆ ಜೀವನ್ ಕಾರ್ಟ್ ಎಂಬ ವೆಬ್ಸೈಟ್ ನಲ್ಲಿ ಮಾರಾಟ ಕೂಡ ಮಾಡಬಹುದು.ಅಷ್ಟೇ ಅಲ್ಲದೆ ವಿಕಲಚೇತನರಿಗೆ ಇನ್ನೂ ಹೆಚ್ಚಿನ ಸಾಲ ಸೌಲಭ್ಯಗಳು ಅನುಕೂಲವಾಗಲಿ ಎಂದು ಜಿಲ್ಲಾ ಮಟ್ಟದಲ್ಲಿ ಸಂರಕ್ಷಣೆ ವಿಕಲಚೇತನ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯನ್ನು ಆರಂಭಿಸಿದೆ.ಹೀಗೆ ಹಲವಾರು ಅವಕಾಶಗಳನ್ನು ಡೀಲ್ ಫೌಂಡೇಶನ್ ಸಂಸ್ಥೆಯು ವಿಕಲಚೇತನರಿಗೆ ನೀಡಿದೆ. ಆ ಅವಕಾಶಗಳನ್ನು ಉಪಯೋಗಿಸಿಕೊಂಡು ವಿಕಲಚೇತನರು ಸ್ವಯಂ ಉದ್ಯೋಗದಲ್ಲಿ ತೊಡಗಿದ್ದಾರೆ. ಅಂತಹ ವಿಕಲಚೇತನದಲ್ಲಿ ಹೇಳುವುದಾದರೆ ಯಲ್ಲಪ್ಪ ಗೌಡ ಇವರು ಕೂಡ ಒಬ್ಬರು.
ಇವರ ಬಾಲ್ಯ ಜೀವನ ನೋಡುವುದಾದರೆ ಯಲ್ಲಪ್ಪ ಗೌಡ ಇವರು ಮೂಲತಃ ನರಗುಂದ ತಾಲೂಕಿನ ಕೊಣ್ಣೂರು ಗ್ರಾಮದವರು. ತಂದೆ ಬೀಮನಗೌಡ,ತಾಯಿ ಪಾರ್ವತಿ.ಇವರಿಗೆ ಒಬ್ಬ ಅಣ್ಣ ಮತ್ತು ಒಬ್ಬರು ತಂಗಿಯರೊಂದಿಗೆ ಇವರ ಕುಟುಂಬ ಕುಡಿತ್ತು.ಇವರು ಹುಟ್ಟಿನಿಂದಲೇ ವಿಕಲಚೇತನತೆಯನ್ನು ಹೊಂದಿದ್ದಾರೆ ಅದು ಇವರ ಎರಡು ಕಿವಿಗಳು ಕೇಳಿಸುತ್ತಿರಲಿಲ್ಲ.ಇವರು ನಾಲ್ಕನೇ ತರಗತಿಯವರೆಗೆ ಶಾಲೆಯನ್ನು ಕಲಿತುಬಿಟ್ಟರು ಕಾರಣ ಮನೆಯಲ್ಲೇ ಬಡತನ ಜೊತೆಗೆ ಇವರ ವಿಕಲಚೇತನತೆಯಿಂದ ಮನೆಯಲ್ಲಿ ಮನಸ್ತಾಪವಾಗುತ್ತಿತ್ತು ಅದಕ್ಕಾಗಿ ಇವರು ತಮ್ಮ ಅಜ್ಜಿಯ ಮನೆಗೆ ಹೋಗಿ ಅಲ್ಲಿ ಹೊಲಮನೆ ಕೆಲಸ ಮಾಡುತ್ತ ಜೀವನ ಸಾಗಿಸುತ್ತಿದ್ದರು.
ಹೀಗೆ ಯಲ್ಲಪ್ಪ ಗೌಡ ಅವರು ಅಜ್ಜಿಯ ಮನೆಯಲ್ಲಿ ಬೆಳೆಯುತ್ತಾ ಆಕಳನ್ನು ಖರೀದಿಸಿ ಹೈನುಗಾರಿಕೆ ಉದ್ಯೋಗ ಆರಂಭಿಸಿದರು. ನಂತರ ಇವರಿಗೆ ಮದುವೆಯಾಗಿ ಇಬ್ಬರು ಮಕ್ಕಳೊಂದಿಗೆ ಇವರ ಪುಟ್ಟ ಕುಟುಂಬ ಖುಷಿಯಿಂದ ಕೂಡಿತ್ತು.ಇವರ ಹೆಂಡತಿ ಪಂಚಾಯತಿಯಲ್ಲಿ ಕೆಲಸ ಮಾಡುತ್ತಿದ್ದರು.ಅದೇ ಸಮಯದಲ್ಲಿ ನರಗುಂದ ತಾಲೂಕಿನ ಲವ್ಲಿ ವುಡ್ ಆಫೀಸರ್ ಆದ ಸಂಗೀತ ಅವರು ಕೊಣ್ಣೂರು ಪಂಚಾಯತಿಯ ವಿಆರ್ ಡಬ್ಲ್ಯೂ ಅವರಿಗೆ ಭೇಟಿ ಮಾಡಿ ಡೀಲ್ ಫೌಂಡೇಶನ್ ಸಂಸ್ಥೆಯ ಬಗ್ಗೆ ಮಾಹಿತಿ ನೀಡುವಾಗ ಎಲ್ಲಪ್ಪ ಗೌಡ ಅವರು ಸಂಗೀತ ಅವರನ್ನು ಭೇಟಿ ಮಾಡಿ ಅವರ ನ್ಯೂನ್ಯತೆಯ ಬಗ್ಗೆ ಹೇಳಿದರು. ಅದಕ್ಕೆ ಸಂಗೀತ ಅವರು ವಿಕಲಚೇತನರಿಗೆ ಸೌಲಭ್ಯಗಳ ಕುರಿತು ಮತ್ತು ಸ್ವಸಹಾಯ ಸಂಘಗಳ ಬಗ್ಗೆ ಮಾಹಿತಿಯನ್ನು ನೀಡಿದರು. ಅದರಂತೆ ಅಲ್ಲಿನ ವಿಕಲಚೇತನನ್ನು ಸೇರಿಸಿ ಸಂಘವನ್ನು ರಚಿಸಿ ರಚಿಸಿದರು. ಅದರಲ್ಲಿ ಎಲ್ಲಪ್ಪ ಗೌಡ ಅವರು ಕೂಡ ಪ್ರತಿನಿಧಿಯಾಗಿದ್ದಾರೆ.ಆ ಸಂಘಕ್ಕೆ “ಶ್ರೀ ಬನಶಂಕರಿ ದೇವಿ ವಿಕಲಚೇತನರ ಸ್ವಸಾಯ ಸಂಘ”ಎಂದು ಹೆಸರಿಟ್ಟು ಕೆವಿಜಿ ಬ್ಯಾಂಕ್ ನಲ್ಲಿ ಖಾತೆಯನ್ನು ತೆರೆದರು.ಎಲ್ಲ ಸದಸ್ಯರು ಪ್ರತಿ ತಿಂಗಳು ನೂರು ರೂಪಾಯಿ ಉಳಿತಾಯವನ್ನು ಕಟ್ಟುತ್ತಾ ಸಂಘವನ್ನು ರಚಿಸಿಕೊಂಡು ಹೋಗುತ್ತಿದ್ದಾರೆ.
ನಂತರ ಈ ಸಂಘಕ್ಕೆ ಸಂಗೀತಾ ಅವರು ಬುಕ್ ರೈಟಿಂಗ್ ತರಬೇತಿ,2016ರ ಡಿಸ್ಟರ್ಬೆಟಿ ಅವೆರ್ನೆಸ್ ತರಬೇತಿ,ಫೈನಾನ್ಸಿಯಲ್ ಲೀಡರ್ಶಿಪ್ ತರಬೇತಿಯನ್ನು ನೀಡಿದರು.ಹಾಗೆ ಅನೇಕ ಇಲಾಖೆಗಳಿಂದ ಸಿಗುವ ಸೌಲಭ್ಯಗಳ ಕುರಿತು ಮಾಹಿತಿಯನ್ನು ನೀಡಿದರು.
ಈ ತರಬೇತಿಗಳ ನಂತರ ಸದಸ್ಯರೆಲ್ಲರೂ ಉದ್ಯೋಗ ಮಾಡಲು ಆಸಕ್ತಿ ಹೊಂದಿದರು. ಅದರಲ್ಲಿ ಎಲ್ಲಪ್ಪಗೌಡ ಅವರು ಆಸಕ್ತಿ ಹೈನುಗಾರಿಕೆಯಲ್ಲಿ ಹೆಚ್ಚಿನ ಅನುಭವ ಹೊಂದಿದ್ದರು.ಅದಕ್ಕಾಗಿ ಇನ್ನು ಹೆಚ್ಚಿನ ಪ್ರಮಾಣದಲ್ಲಿ ಆಕಳನ್ನು ಕರೀದಿಸಿ ಉದ್ಯೋಗ ಮಾಡಬೇಕು ಎಂದು ಆಸಕ್ತಿ ಹೊಂದಿದ್ದರು.ಆದರೆ ಅದಕ್ಕೆ ಬಂಡವಾಳ ಇರಲಿಲ್ಲ ಅದಕ್ಕಾಗಿ ಸಂಗೀತ ಅವರು ಸೆಲ್ಕೋ ಫೌಂಡೇಶನ್ ವತಿಯಿಂದ 40,000/- ಬ್ಯಾಂಕ್ ಲೋನ್ ಕೊಡಿಸಿದರು ಹಾಗೂ ಅವರ ಸಂಘದ ಉಳಿತಾಯದಿಂದ ಲೋನ್ ತೆಗೆದುಕೊಂಡು ಆಕಳು ಕರದಿಸಿ ಹೈನುಗಾರಿಕೆ ಉದ್ಯೋಗದಲ್ಲಿ ಮುಂದುವರೆದಿದ್ದಾರೆ.
ಹೀಗೆ ಎಲ್ಲಪ್ಪ ಗೌಡ ಅವರು ಹೈನುಗಾರಿಕೆಯಲ್ಲಿ ಪ್ರತಿ ದಿನಕ್ಕೆ 10 ರಿಂದ 15 ಲೀಟರ್ ಹಾಲನ್ನು ಮಾರಾಟ ಮಾಡುತ ತಮ್ಮ ಆರ್ಥಿಕ ಜೀವನದಲ್ಲಿ ಬೆಳವಣಿಗೆ ಹೊಂದುತ್ತಿದ್ದಾರೆ.ಈ ಸಮಾಜಕ್ಕೆ ವಿಕಲಚೇತನರು ಯಾವುದಕ್ಕೂ ಕಡಿಮೆ ಇಲ್ಲ ಎಂದು ತಮ್ಮನ್ನು ಗುರುತಿಸಿಕೊಳ್ಳುತ್ತಿದ್ದಾರೆ ಅಷ್ಟೇ ಅಲ್ಲದೆ ಎಲ್ಲಪ್ಪ ಗೌಡ ಅವರು ಸಂರಕ್ಷಣೆ ವಿಕಲಚೇತನ ಕೋ ಆಪರೇಟಿವ್ ಸೊಸೈಟಿಯಲ್ಲಿ ಶೇರುದಾರರಾಗಿದ್ದಾರೆ. ಇದರಿಂದ ಮುಂದೆ ಇನ್ನೂ ಹೆಚ್ಚಿನ ಸಾಲ ಸೌಲಭ್ಯ ಪಡೆದುಕೊಂಡು ತಮ್ಮ ಗುರಿಯನ್ನು ಎಲ್ಲಪ್ಪ ಗೌಡರು ಸಾಧಿಸುತ್ತಿದ್ದಾರೆ.
ಹೀಗೆ ಎಲ್ಲಪ್ಪ ಗೌಡ ಅವರು ಉದ್ಯಮದಲ್ಲಿ ಮುಂದುವರಿದು ಯಾವುದೇ ಕಟ್ಟು ಬಾಕಿ ಉಳಿಸದೆ ಸಾಲ ಮರುಪಾವತಿ ಮಾಡುತ್ತಿದ್ದಾರೆ. ಇವರು ಈ ಬೆಂಬಲಕ್ಕೆ ಡೀಲ್ ಫೌಂಡೇಶನ್ ಸಂಸ್ಥೆ ಬೆಂಬಲವಾಗಿ ನಿಂತಿದೆ.ಈ ಸಂಸ್ಥೆಯ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.ಅದು ಈ ಸಂಸ್ಥೆಯಲ್ಲಿ ನಾನು ಕೂಡ ಒಬ್ಬ ಸದಸ್ಯ ಎಂದು ಹೇಳಲು ಹೆಮ್ಮೆಯಾಗುತ್ತದೆ.ವಿಕಲಚೇತನರಿಗಾಗಿ ಕಾರ್ಯನಿರ್ವಹಿಸಿ ವಿಕಲಚೇತನರನ್ನು ಗುರುತಿಸಿ ತರಬೇತಿಗಳನ್ನು ನೀಡಿ ಉದ್ಯೋಗದಲ್ಲಿ ತೊಡುವಂತೆ ಮಾಡುತ್ತಿದ್ದಾರೆ.ಇದರಿಂದ ನಮ್ಮಂತಹ ಅನೇಕ ವಿಕಲಚೇತನರ ಜೀವನಕ್ಕೆ ಬೆಳಕಾಗಿದೆ.ಹಾಗೆ ಸಂಘ ರಚನೆ ಮಾಡಿದ್ದರಿಂದ ಉಳಿತಾಯ ಮಾಡಿ ಅದು ನಮ್ಮ ಕಷ್ಟಕಾಲಕ್ಕೆ ಅನುಕೂಲವಾಗುತ್ತಿದೆ.ಜೊತೆಗೆ ವಿಕಲಚೇತನರಿಗೆ ಸಾಲ ಕೊಡಲು ಒಪ್ಪುವುದಿಲ್ಲ ಅದೇ ಸಂಘ ರಚನೆ ಮಾಡಿದ್ದರಿಂದ ನಮಗೆ ಸಾಲ ಸೌಲಭ್ಯಗಳು ಸಿಗುತ್ತಿವೆ ಇದರಿಂದ ಉದ್ಯೋಗ ಮಾಡಲು ಅನುಕೂಲವಾಗಿದೆ.ಇಷ್ಟೆಲ್ಲ ಸೌಲಭ್ಯವನ್ನು ನೀಡುತ್ತಿರುವ ಡೀಲ್ ಫೌಂಡೇಶನ್ ಸಂಸ್ಥೆಗೂ ಹಾಗೂ ಸಂಗೀತ ಅವರಿಗೂ ನನ್ನ ಹೃದಯಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ.ಹೀಗೆ ಇನ್ನು ಹೆಚ್ಚಿನ ಸಹಕಾರ ನೀಡಿ ನಮ್ಮಂತಹ ವಿಕಲಚೇತನರನ್ನು ಗುರಿತಿಸಿ ಬೆಳಸಲಿ ಎಂದು ಕೇಳಿಕೊಳ್ಳುತ್ತಾ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಈ ರೀತಿಯಾಗಿ ಡೀಲ್ ಫೌಂಡೇಶನ್ ಸಂಸ್ಥೆಯು ವಿಕಲಚೇತನರು ಸ್ವಾವಲಂಬನೆ ಜೀವನ ನಡೆಸಿಕೊಳ್ಳಲು ಸಹಾಯಕವಾಗಿದೆ ಹಾಗೆ ಇನ್ನು ಹೆಚ್ಚಿನ ವಿಕಲಚೇತನರು ಇಂತಹ ಅವಕಾಶಗಳಿಂದ ವಂಚಿತರಾಗಿದ್ದಾರೆ ಅವರನ್ನು ಗುರುತಿಸಿ ಬೆಳೆಸಿ ಡೀಲ್ ಫೌಂಡೇಶನ್ ಸಂಸ್ಥೆಯ ಕೀರ್ತಿ ಬೆಳೆಯಲಿ ಎಂದು ಎಲ್ಲ ವಿಕಲಚೇತನರು ಹಾರೈಸುತಿದ್ದಾರೆ.
ಈ ಬ್ಲಾಗ್ ಗೆ ಸಂಬಂಧಿಸಿದಂತೆ ಯಾವುದೇ ನಿರ್ದಿಷ್ಟ ಪ್ರಶ್ನೆಗಳಿಗೆ ಅಥವಾ ಯಾವುದೇ ಸಹಾಯಕ್ಕಾಗಿ Info@deal-foundtion.com ನಲ್ಲಿ ತಿಳಿಸಿರಿ ಮತ್ತು ನಾವು ಮಾಡುವ ಕೆಲಸ ಕುರಿತು ಇನ್ನಷ್ಟು ತಿಳಿದುಕೊಳ್ಳಲು www.deal-foundtion ಗೆ ಲಾಗ್ ಇನ್ ಮಾಡಿರಿ.
ಧನ್ಯವಾದಗಳು