ಗದಗ್ ಜಿಲ್ಲೆ ಏಳು ತಾಲೂಕುಗಳಲ್ಲಿ ವಿಕಲಚೇತನ ಉದ್ಯಮಶೀಲತೆ ಮತ್ತು ನಾಯಕತ್ವ ಪ್ರತಿಷ್ಠಾನದಿಂದ ಸ್ಥಾಪಿಸಲಾಗುವ ಆರಂಭ ಸ್ವ ಉದ್ಯೋಗ ಕೇಂದ್ರ ಮುಖ್ಯವಾಗಿ ವಿಕಲಚೇತನ ವ್ಯಕ್ತಿಗಳಿಗೆ ಟೈಲರಿಂಗ್ ತರಬೇತಿ,ಹೈನುಗಾರಿಕೆ ತರಬೇತಿ,ರೊಟ್ಟಿ ತರಬೇತಿ, ಮೇಣದಬತ್ತಿ ತರಬೇತಿ, ಕುಂಕುಮ ತರಬೇತಿ,ಜೇನು ಸಾಕಾಣಿಕೆ ಮುಂತಾದ ಜೀವನ ಪೋಷಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಸಹಾಯ ಮಾಡುವ ಗುರಿಯನ್ನು ಹೊಂದಿದೆ.
ವಿಕಲಚೇತನತೆ ಹೊಂದಿದ ಹೆಚ್ಚಿನ ವ್ಯಕ್ತಿಗಳು ಅಗತ್ಯ ಅಂಶಗಳ ಅಗತ್ಯ ಮಾಹಿತಿಯನ್ನು ಹೊಂದಿರುವುದಿಲ್ಲ ಇದರಿಂದ ವಿಕಲಚೇತನ ವ್ಯಕ್ತಿಗಳ ಬೆಳವಣಿಗೆಗೆ ಅಡ್ಡಿ ಉಂಟು ಮಾಡಿದೆ ಜೊತೆಗೆ ಅನೇಕ ವಿಕಲಚೇತನ ವ್ಯಕ್ತಿಗಳು ಕಳೆದು ಹೋದ ಮತ್ತು ಹಿಂದುಳಿದಿರುವ ಭಾವನೆಗಳಿಗೆ ಕಾರಣವಾಗಿದೆ.ಇದಕ್ಕೆ ಪರಿಹಾರವಾಗಿ ಡೀಲ್ ಫೌಂಡೇಶನ್ ಸಂಸ್ಥೆಯು ಪ್ರತಿ ತಾಲೂಕಿನಲ್ಲಿ ಲವ್ಲೀ ವುಡ್ ಆಫೀಸರ್ಸ್ ಅನ್ನು ನೇಮಕ ಮಾಡಿ ವಿಕಲಚೇತನರೊಡನೆ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರತಿ ತಾಲೂಕಿನಲ್ಲಿ ವಿಕಲಚೇತನರ ಮಾಹಿತಿ ಪಡೆದು ಅವರನ್ನು ಒಂದು ಕಡೆ ಸೇರಿಸಿ ಅವರಿಗೆ ವಿಕಲಚೇತನರಿಗೆ ಸಿಗುವ ಸೌಲಭ್ಯಗಳ ಕುರಿತು ಡೀಲ್ ಫೌಂಡೇಶನ್ ಸಂಸ್ಥೆಯ ಬಗ್ಗೆ ಮಾಹಿತಿಯನ್ನು ನೀಡಿ ಸ್ವಸಹಾಯ ಸಂಘವನ್ನು ರಚಿಸಿ ತರಬೇತಿಗಳನ್ನು ನೀಡಿ ಸ್ವಯಂ ಉದ್ಯೋಗದಲ್ಲಿ ಮಾಡಿದ್ದಾರೆ.
ಅದರಲ್ಲಿ ಗದಗ್ ತಾಲೂಕಿನ ಲವ್ಲೀ ವುಡ್ ಆಫೀಸರ್ ಆದ ನಿರ್ಮಲ ಅವರು ಗದಗ್ ತಾಲೂಕಿನ ಸಂಭಾಪುರ ಗ್ರಾಮಕ್ಕೆ ಭೇಟಿ ನೀಡಿ ಅಲ್ಲಿನ ವಿಕಲಚೇತನರಿಗೆ ಡೀಲ್ ಫೌಂಡೇಶನ್ ಸಂಸ್ಥೆಯ ಕಾರ್ಯಗಳ ಬಗ್ಗೆ ಮತ್ತು ಸ್ವಸಹಾಯ ಸಂಘಗಳ ಬಗ್ಗೆ ಮಾಹಿತಿ ನೀಡಿದರು.ಅದರಂತೆ ಅಲ್ಲಿನ ವಿಕಲಚೇತನರು ಎಲ್ಲರೂ ಸೇರಿ ನಾವು ಸಂಘವನ್ನು ರಚಿಸುತ್ತೇವೆ ಎಂದು ಎಲ್ಲರೂ ಸೇರಿ ಸಂಘವನ್ನು ರಚಿಸಿಕೊಂಡರು. ಅದಕ್ಕೆ “ಶಾಂಭವಿ ವಿಕಲಚೇತನ ಸ್ವಸಹಾಯ ಸಂಘ” ಎಂದು ಹೆಸರಿಟ್ಟು ಕೆವಿಜಿ ಬ್ಯಾಂಕಿನಲ್ಲಿ ನಿರ್ಮಲ ಅವರ ಸಹಕಾರದಿಂದ ಖಾತೆಯನ್ನು ತೆರೆದರು.ಪ್ರತಿ ತಿಂಗಳು ಎಲ್ಲ ಸದಸ್ಯರು ನೂರು ರೂಪಾಯಿ ತುಂಬುತ್ತಿದ್ದಾರೆ.
ನಂತರ ಈ ಸಂಘಕ್ಕೆ ನಿರ್ಮಲ ಅವರು ಬುಕ್ ರೈಟಿಂಗ್ ತರಬೇತಿ,ದಿಸಾಬ್ಳಿಟಿ ಅವೆರ್ನೆಸ್ ತರಬೇತಿ, ಫೈನಾನ್ಸಿಯಲ್ ಲೀಡರ್ಶಿಪ್ ತರಬೇತಿಯನ್ನು ನೀಡಿದರು. ಹೀಗೆ ಪ್ರತಿ ತಿಂಗಳು ಎಲ್ಲ ಸದಸ್ಯರು ಮೀಟಿಂಗ್ ಮಾಡಿ ಸಂಘವನ್ನು ನಡೆಸಿಕೊಂಡು ಹೋಗುತ್ತಿದ್ದಾರೆ.ಹಾಗೆ ಈ ಸಂಘಕ್ಕೆ ಉದ್ಯೋಗದ ಬಗ್ಗೆ ತರಬೇತಿ ನೀಡಲು ಡೀಲ್ ಫೌಂಡೇಶನ್ ಸಂಸ್ಥೆ ಟ್ರೈನಿಂಗ್ ಕೋ ಆರ್ಡಿನೇಟರ್ ಆದ ಶಿವಕುಮಾರ್ ಶಿರೋಳ್ ಇವರು ವಿಕಲಚೇತನರ ಸಂಘಕ್ಕೆ ಉದ್ಯೋಗದ ತರಬೇತಿಯನ್ನು ನೀಡಿದರು.ಅದು ಡೀಲ್ ಫೌಂಡೇಶನ್ ನಿಂದ ಪೇಪರ್ ಬ್ಯಾಗ್ ತರಬೇತಿ, ಹೈನುಗಾರಿಕೆ ತರಬೇತಿ,ಜೇನು ಸಾಕಾಣಿಕೆ ತರಬೇತಿ ಮುಂತಾದ ತರಬೇತಿಗಳ ಬಗ್ಗೆ ಮಾಹಿತಿ ನೀಡಿ ಮುಂದೆ ಆ ಸದಸ್ಯರು ಉದ್ಯೋಗದಲ್ಲಿ ತೊಡಗಿದ ನಂತರ ಮಾರುಕಟ್ಟೆ ಸಂಪರ್ಕದ ಬಗ್ಗೆಯೂ ಮಾಹಿತಿಯನ್ನು ನೀಡಿದರು. ಹಾಗೂ ಸಿಡ್ಬಿ ವತಿಯಿಂದ ಟೈಲರಿಂಗ್ ಮಷೀನ್, ರೊಟ್ಟಿ ಮಷೀನ್, ಪೇಪರ್ ಪ್ಲೇಟ್ ಮಷೀನ್ ಸಬ್ಸಿಡಿ ಮೂಲಕ ಸಿಗುತ್ತವೆ ಎಂದು ಎಲ್ಲರಿಗೂ ಮಾಹಿತಿಯನ್ನು ನೀಡಿ ಬೆಂಬಲಿಸಿದರು.
ತರಬೇತಿಯನ್ನು ಪಡೆದ ನಂತರ ಉದ್ಯೋಗ ಮಾಡಲು ಬಂಡವಾಳ ಬೇಕು ಅದಕ್ಕಾಗಿ ತಾವು ತುಂಬುತ್ತಿರುವ ಉಳಿತಾಯದಿಂದ ಲೋನ್ ತೆಗೆದುಕೊಳ್ಳಲು ನಿರ್ಧರಿಸಿದರು.ಅದರಲ್ಲಿ ಮುತ್ತಪ್ಪ ಪೂಜಾರ ಇವರು 5000 ಲೋನ್ ತೆಗೆದುಕೊಂಡು ಪುಟ್ಟದಾಗಿ ಅಂಗಡಿ ಮಾಡಿ ಉದ್ಯೋಗ ಮಾಡಬೇಕು ಎಂದು ತೀರ್ಮಾನಿಸಿದ್ದಾರೆ. ಹಾಗೂ ಶಶಿಕಲಾ ಕುರುಬರ ಇವರು 10,000 ಲೋನ್ ಪಡೆದುಕೊಂಡು ಕೃಷಿಗಾಗಿ ಉದ್ಯೋಗದಲ್ಲಿ ತೊಡಗಿದ್ದಾರೆ. ಹೀಗೆ ಈ ಸದಸ್ಯರು ಲೋನ್ ಪಡೆದುಕೊಂಡು ಉದ್ಯೋಗದಲ್ಲಿ ತೊಡಗಿದ್ದಾರೆ. ಯಾವುದೇ ರೀತಿಯ ಕಟ್ಟು ಬಾಕಿ ಉಳಿಸದೆ ಸರಿಯಾಗಿ ಕಟ್ಟುತ್ತಿದ್ದಾರೆ.ಇವರ ನಂತರ ಉಳಿದ ಸದಸ್ಯರು ಬ್ಯಾಂಕ್ ಲೋನ್ ಪಡೆದುಕೊಂಡು ಉದ್ಯೋಗದಲ್ಲಿ ತೊಡಗಲು ಎಲ್ಲ ದಾಖಲೆಯನ್ನು ಹೊಂದಿಸುತ್ತಿದ್ದಾರೆ.
ಡೀಲ್ ಫೌಂಡೇಶನ್ ಸಂಸ್ಥೆಯು ಈ ರೀತಿಯಾಗಿ ಲೋನ್ ಪಡೆದುಕೊಂಡು ಉದ್ಯೋಗದಲ್ಲಿ ತೊಡಗಿಕೊಂಡ ವಿಕಲಚೇತನ ಮತ್ತು ಮಹಿಳೆಯರಿಗೆ ಪ್ರತಿ ತಾಲೂಕಿನಿಂದ ಉತ್ತಮವಾಗಿ ಸಂಘವನ್ನು ನಡೆಸಿಕೊಂಡ ಸ್ವ ಸಹಾಯ ಸಂಘಗಳಿಗೆ ಸ್ವಾವಲಂಬನೆ ಪ್ರಶಸ್ತಿಯನ್ನು ಪ್ರತಿ ವರ್ಷ ನೀಡುತ್ತಾರೆ.ಅದೇ ರೀತಿ ಈ ವರ್ಷದಲ್ಲಿಯೂ ಪ್ರಶಸ್ತಿಯನ್ನು ನೀಡಿದ್ದಾರೆ ಅದರಲ್ಲಿ ಈ ಸಂಘಕ್ಕೆ 5000 ಬಹುಮಾನವಾಗಿ ಪ್ರಶಸ್ತಿಯನ್ನು ನೀಡಿ ಇನ್ನು ಹೆಚ್ಚಿನ ಮಟ್ಟದಲ್ಲಿ ಉದ್ಯೋಗ ಮಾಡಿ ಬೆಳೆಯಲಿ ಆರ್ಥಿಕವಾಗಿ ಮುಂದೆ ಬರಲಿ ಎಂಬ ಉದ್ದೇಶದಿಂದ ಈ ಪ್ರಶಸ್ತಿಯನ್ನು ಪ್ರತಿ ತಾಲೂಕಿನಿಂದ ಸಂಘವನ್ನು ಆಯ್ಕೆ ಮಾಡಿ ಪ್ರಶಸ್ತಿಯನ್ನು ನೀಡಿದ್ದಾರೆ.
ಈ ರೀತಿಯಗಿ ಸಂಘದ ಸದಸ್ಯರು ಡೀಲ್ ಫೌಂಡೇಶನ್ ವತಿಯಿಂದ ತರಬೇತಿಗಳ ಮೂಲಕ ಉದ್ಯೋಗದಲ್ಲಿ ತೊಡಗಿ ತಮ್ಮನ್ನು ಗುರುತಿಸಿಕೊಳ್ಳುವಂತೆ ಮಾಡುತ್ತಿದ್ದಾರೆ ಇಷ್ಟೆಲ್ಲ ಸಹಕಾರ ನೀಡಿದ ಫೌಂಡೇಶನ್ ಸಂಸ್ಥೆಯ ಬಗ್ಗೆ ಸಂಘದ ಸದಸ್ಯರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ ಅದು ವಿಕಲಚೇತನರ ಸಂಘ ಮಾಡಿದ್ದರಿಂದ ನಮಗೆ ನಮ್ಮದು ಅಂತ ಸ್ವಲ್ಪವಾದರೂ ಉಳಿತಾಯದ ಮೂಲಕ ಹಣವನ್ನು ಕೂಡಿತ್ತಿದ್ದೇವೆ. ಜೊತೆಗೆ ತರಬೇತಿಗಳನ್ನು ಪಡೆದುಕೊಂಡು ಉದ್ಯೋಗದಲ್ಲಿ ತೊಡಗುವಂತೆ ಮಾಡಿದ್ದಾರೆ.ಹಾಗೆ ನಮ್ಮ ಉಳಿತಾಯದಿಂದ ಲೋನ್ ಪಡೆದುಕೊಂಡು ಬರುವ ಬಡ್ಡಿಯನ್ನು ಸದಸ್ಯರ ಉಳಿತಾಯದಲ್ಲಿ ಜಮಾ ಆಗುವಂತೆ ಇದರಿಂದ ಸಂಘವು ಇನ್ನೂ ಹೆಚ್ಚಿನ ಮಟ್ಟದಲ್ಲಿ ಬೆಳೆಯುತ್ತದೆ ಜೊತೆಗೆ ಜಿಲ್ಲಾ ಮಟ್ಟದಲ್ಲಿ ಕೋ ಆಪರೇಟಿವ್ ಸೊಸೈಟಿಯನ್ನು ಪ್ರಾರಂಭಿಸಿ ವೀಣಾ ಮೇಡಂ ಅವರು ಅಲ್ಲಿ ನಮ್ಮನ್ನು ಷೇರುದಾರರನ್ನಾಗಿ ಮಾಡಿ ನಮಗೆ ಹೆಚ್ಚಿನ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದ್ದಾರೆ.ಇಷ್ಟೆಲ್ಲಾ ಅವಕಾಶ ನೀಡಿದ ಡೀಲ್ ಫೌಂಡೇಶನ್ ಸಂಸ್ಥೆಗೆ ಹಾಗೂ ನಿರ್ಮಲ ಮತ್ತು ವೀಣಾ ಅವರಿಗೂ ಸಂಘದ ಸದಸ್ಯರೆಲ್ಲರ ಪರವಾಗಿ ಧನ್ಯವಾದಗಳು ಅರ್ಪಿಸುತ್ತೇವೆ.ಹೀಗೆ ಇನ್ನು ಹೆಚ್ಚಿನ ಸಹಕಾರ,ಸೌಲಭ್ಯ ಬೆಂಬಲ ಡೀಲ್ ಫೌಂಡೇಶನ್ ಸಂಸ್ಥೆಯು ನಮಗೆ ನೀಡಲಿ ಎಂದು ಕೇಳಿಕೊಳ್ಳುತ್ತಾ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಈ ರೀತಿಯಾಗಿ ಡೀಲ್ ಫೌಂಡೇಶನ್ ಸಂಸ್ಥೆಯು ವಿಕಲಚೇತನರಿಗೆ ಮತ್ತು ಮಹಿಳೆಯರಿಗೆ ಸ್ವಸಹಾಯ ಸಂಘ ರಚಿಸಿ ಉದ್ಯೋಗದ ತರಬೇತಿಯನ್ನು ನೀಡಿ ಆರ್ಥಿಕವಾಗಿ ಮುಂದೆ ಬರುವಂತೆ ಮಾಡುತ್ತಿದ್ದಾರೆ. ಜೊತೆಗೆ ಪ್ರಶಸ್ತಿಗಳನ್ನು ನೀಡುವುದರ ಮೂಲಕ ವಿಕಲಚೇತನ ಮತ್ತು ಮಹಿಳೆಯರಲ್ಲಿ ಇನ್ನು ಹೆಚ್ಚಿನ ಮಟ್ಟದಲ್ಲಿ ಬೆಳೆಯಬೇಕು ಎಂಬ ಹುಮ್ಮಸ್ಸನ್ನು ತುಂಬುತ್ತಿದ್ದಾರೆ. ಹೀಗೆ ಡೀಲ್ ಫೌಂಡೇಶನ್ ಸಂಸ್ಥೆಯು ದೇಶಾದ್ಯಂತ ವಿಕಲಚೇತನರಿಗಾಗಿ ಕಾರ್ಯನಿರ್ವಹಿಸಿ ಕೀರ್ತಿಗಳಿಸಲಿ ಎಂದು ಎಲ್ಲರೂ ಹಾರೈಸುತ್ತಿದ್ದಾರೆ.
ಈ ಬ್ಲಾಗ್ ಗೆ ಸಂಬಂಧಿಸಿದಂತೆ ಯಾವುದೇ ನಿರ್ದಿಷ್ಟ ಪ್ರಶ್ನೆಗಳಿಗೆ ಅಥವಾ ಯಾವುದೇ ಸಹಾಯಕ್ಕಾಗಿ Info@deal-foundation.com ನಲ್ಲಿ ತಿಳಿಸಿರಿ ಮತ್ತು ನಾವು ಮಾಡುವ ಕೆಲಸದ ಕುರಿತು ಇನ್ನಷ್ಟು ತಿಳಿದುಕೊಳ್ಳಲು www.deal-foundation.com ಗೆ ಲಾಗ್ ಇನ್ ಮಾಡಿ.
ಧನ್ಯವಾದಗಳು