ಶ್ರೀ ಗೌರಿ ವಿಕಲಚೇತನರ ಜಂಟಿ ಬಾಧ್ಯತೆ ಗುಂಪಿನ ಕೇಸ್ ಸ್ಟಡಿ

 

ವಿಕಲಚೇತನ ವ್ಯಕ್ತಿಗಳಿಗೆ ಸುಸ್ಥಿರ ಜೀವನೋಪಾಯದ ಅವಕಾಶವನ್ನು ಸೃಷ್ಟಿಸಲು ಕೆಲಸ ಮಾಡುವುದು ಮತ್ತು ಅವರ ಮಾಲೀಕತ್ವದ ನಡೆಸುತ್ತಿರುವ ಮತ್ತು ನಿರ್ವಹಿಸುವ ಉದ್ಯಮಗಳ ಅಭಿವೃದ್ಧಿಯನ್ನು ಬೆಂಬಲಿಸುವುದು ಡೀಲ್ ಫೌಂಡೇಶನ್ ಸಂಸ್ಥೆಯ ಪ್ರಮುಖ ಕಾರ್ಯವಾಗಿದೆ.

ಸಾಮಾಜಿಕ ಮತ್ತು ಆರ್ಥಿಕ ಪುನರ್ವಸತಿ,ಚೇತರಿಕೆ ಮತ್ತು ಸ್ಥಿತಿಸ್ಥಾಪಕತ್ವಕ್ಕೆ ಕಾರಣವಾಗುವ ಪರಿಣಾಮಕಾರಿ ಪ್ರಕ್ರಿಯೆಯನ್ನು ಮಾಡಲು ಡೀಲ್ ಫೌಂಡೇಶನ್ ಸಂಸ್ಥೆಯು ಆಸಕ್ತಿ ಮತ್ತು ಸ್ಥಳದ ಸಮುದಾಯದಾದ್ಯಂತ ಕೆಲಸ ಮಾಡುತ್ತದೆ.ಗ್ರಾಮೀಣ ಪ್ರದೇಶಗಳಲ್ಲಿನ ವಿಕಲಚೇತನರ ಸಮುದಾಯಗಳನ್ನು ನಿಜವಾದ ಸ್ವಾವಲಂಬಿಗಳನ್ನಾಗಿ ಮಾಡಲು ಸಮುದಾಯದ ಒಡೆತನವು ಒಂದು ಮಾರ್ಗವಾಗಿದೆ.ಅದರಂತೆ ವಿಕಲಚೇತನತೆ ಮತ್ತು ಸ್ವಸಹಾಯ ಗುಂಪುಗಳನ್ನು ಹೊಂದಿರುವ ಸಶಕ್ತ ಮತ್ತು ಪ್ರೇರಿತ ವ್ಯಕ್ತಿಗಳನ್ನು ರಚಿಸುವ ಮೂಲಕ ಒಬ್ಬರು ಪ್ರಾರಂಭಿಸಬೇಕು ಮತ್ತು ಅವರು ಪ್ರಾರಂಭಿಸಿದ ಜೀವನೋಪಾಯ ಮತ್ತು ಉದ್ಯಮಶೀಲತೆಯ ಅಭಿವೃದ್ಧಿ ಚಟುವಟಿಕೆಗಳ ಉಸ್ತುವಾರಿಯನ್ನು ವಹಿಸಿಕೊಳ್ಳಬೇಕು ಅಂದಾಗ ಮಾತ್ರ ಯಶಸ್ಸು ಸಿಗಲು ಸಾಧ್ಯ ಎಂದು ಡೀಲ್ ಫೌಂಡೇಶನ್ ಸಂಸ್ಥೆಯು ಪ್ರತಿ ವಿಕಲಚೇತನರಲ್ಲಿ ಮನಮುಟ್ಟುವಂತೆ ಕಾರ್ಯನಿರ್ವಹಿಸುತ್ತಿದೆ.

ಅದರಂತೆ ವಿಕಲಚೇತನರು ಜಂಟಿ ಬಾಧ್ಯತೆ ಸಂಘ ರಚಿಸಿಕೊಂಡು ಸ್ವಾವಲಂಬನೆ ಜೀವನ ನಡೆಸುತ್ತಾ ವಿಕಲಚೇತನರಿಗೆ ಮಾದರಿಯಾಗಿದ್ದಾರೆ.ಅಂತಹ ಸ್ವಸಹಾಯ ಸಂಘಗಳಲ್ಲಿ ಹೇಳುವುದಾದರೆ ಶ್ರೀ ಗೌರಿ ಜಂಟಿ ಬಾಧ್ಯತೆ ಗುಂಪು ಕೂಡ ಒಂದು.ಈ ಸಂಘದ ಬಗ್ಗೆ ನೋಡುವುದಾದರೆ ಮೊದಲು ಡೀಲ್ ಫೌಂಡೇಶನ್ ಸಂಸ್ಥೆಯು ಮೆವುಂಡಿ ಗ್ರಾಮದಲ್ಲಿ ಸಂಸ್ಥೆಯನ್ನು ಆರಂಭಿಸಿದ ನಂತರ ಅಲ್ಲಿನ ವಿಕಲಚೇತನರನ್ನು ಸರ್ವೆ ಮಾಡಿ ಡೀಲ್ ಫೌಂಡೇಶನ್ ಸಂಸ್ಥೆ ಕಾರ್ಯಗಳ ಬಗ್ಗೆ ಉಮಾ ಚಿಲ್ ಗೌಡರ್ ಹಾಗೂ ಶಿವಕುಮಾರ್ ಶಿರೋಳ ಇವರು ಗ್ರಾಮದ ಎಲ್ಲ ವಿಕಲಚೇತನರಿಗೆ ಮಾಹಿತಿಯನ್ನು ನೀಡಿದರು. ಹಾಗೆ ವಿಕಲಚೇತನರು ಮತ್ತು ಮಹಿಳೆಯರಿಗಾಗಿ ಹೊಲಿಗೆ ತರಬೇತಿಯನ್ನು ಆರಂಭಿಸಿದರು.ಆ ತರಬೇತಿಯಲ್ಲಿ ಸರ್ವೆ ಮಾಡಿದ ವಿಕಲಚೇತನರು ಭಾಗವಹಿಸಿ ಉಚಿತವಾಗಿ ಟೈಲರಿಂಗ್ ತರಬೇತಿಯನ್ನು ಪಡೆದುಕೊಂಡರು.ಆ ತರಬೇತಿಗೆ ಬಂದ ವಿಕಲಚೇತನರಿಗೆ ಉಮಾ ಚಿಲ್ ಗೌಡರ್ ಇವರು ನಿಮ್ಮದೇ ಆದ ವಿಕಲಚೇತನರ ಸಂಘವನ್ನು ರಚಿಸಿಕೊಂಡು ಉಳಿತಾಯ ಮಾಡಿ ಅದರಿಂದ ಸಾಲ ಪಡೆದುಕೊಂಡು ಸ್ವಾವಲಂಬನೆ ಜೀವನಕ್ಕೆ ಸಹಾಯ ಮಾಡಿಕೊಳ್ಳಿ ಎಂದು ವಿಕಲಚೇತನರಿಗೆ ಪ್ರೇರಣೆಯನ್ನು ನೀಡಿದರು.

ಅದರಂತೆ ಟೈಲರಿಂಗ್ ತರಬೇತಿ ಪಡೆದುಕೊಂಡಿದ್ದ ಐದು ಜನ ವಿಕಲಚೇತನರು ಸೇರಿ ಮೊದಲು ಜಂಟಿ ಬಾಧ್ಯತೆ ಗುಂಪು ಎಂದು ಮಾಡಿಕೊಂಡರು ಅದಕ್ಕೆ ” ಶ್ರೀ ಗೌರಿ ಜಂಟಿ ಬಾಧ್ಯತೆ ಗುಂಪು” ಎಂದು ಹೆಸರು ಕೆವಿಜಿ ಬ್ಯಾಂಕ್ ನಲ್ಲಿ ಖಾತೆಯನ್ನು ತೆರೆದರು. ಇದು ಡೀಲ್ ಫೌಂಡೇಶನ್ ಸಂಸ್ಥೆ ವತಿಯಿಂದ ರಚಿಸಿದ ಮೊದಲ ಸಂಘವಾಗಿದೆ.ಈ ಸಂಘಕ್ಕೆ ಉಮಾ ಚಿಲ್ ಗೌಡರ್ ಇವರು ಬುಕ್ ರೈಟಿಂಗ್ ತರಬೇತಿ,ಕೆಪಾಸಿಟಿ ಬಿಲ್ಡಿಂಗ್ ತರಬೇತಿ, ಉದ್ಯೋಗಗಳ ತರಬೇತಿಯ ಬಗ್ಗೆ ಮಾಹಿತಿಯನ್ನು ನೀಡಿದರು.ಇದರಿಂದ ಸಂಘದ ಸದಸ್ಯರೆಲ್ಲರೂ ಈ ತರಬೇತಿಗಳಿಂದ ಹೊಸ ಜೀವನದ ಬದುಕಿಗೆ ಮೊದಲ ಹೆಜ್ಜೆಯಾಗಿ ಉದ್ಯೋಗದಲ್ಲಿ ಆಸಕ್ತಿ ಹೊಂದಿದರು.

ನಂತರ ಉದ್ಯೋಗವನ್ನು ಮಾಡಿ ಜೀವನಕ್ಕೆ ಆಧಾರವಾಗಿ ಮಾಡಲು ಮಾಡಿಕೊಳ್ಳಬೇಕೆಂದು ಸದಸ್ಯರೆಲ್ಲರೂ ತೀರ್ಮಾನಿಸಿದರು.ಆದರೆ ಅದನ್ನು ಯಾವ ರೀತಿ ಮಾರ್ಕೆಟಿಂಗ್ ಮಾಡಬೇಕು ಎಂದು ಡೀಲ್ ಫೌಂಡೇಶನ್ ಸಂಸ್ಥೆಯ ಟ್ರೈನಿಂಗ್ ಕೋ ಆರ್ಡಿನೇಟರ್ ಆದ ಶಿವಕುಮಾರ್ ಶಿರೋಳ್ ಅವರು ಸಂಘದ ಎಲ್ಲ ವಿಕಲಚೇತನರಿಗೆ ಉದ್ಯೋಗದ ಆರಂಭದ ಹಂತದಿಂದ ಅದನ್ನು ಮಾರ್ಕೆಟಿಂಗ್ ಮಾಡಿ ಲಾಭವನ್ನು ಪಡೆಯುವುದು ಹೇಗೆ ಎಂಬ ಹಂತದವರೆಗೂ ಎಲ್ಲ ರೀತಿಯ ಮಾಹಿತಿಯನ್ನು ಸಂಘದ ಸದಸ್ಯರಿಗೆ ನೀಡಿದರು.

ಹೀಗೆ ಈ ಸಂಘ ರಚನೆಯಾದ ಆರು ತಿಂಗಳ ನಂತರ ಬ್ಯಾಂಕ್ ಲೋನ್ ಪಡೆದುಕೊಳ್ಳಲು ಸದಸ್ಯರು ಪ್ರತಿ ವಾರದ ಮೀಟಿಂಗ್ನಲ್ಲಿ ಚರ್ಚೆ ಮಾಡಿದರು.ಅದರಂತೆ ಉಮಾ ಚಿಲ್ ಗೌಡರ್ ಇವರ ಸಹಕಾರದೊಂದಿಗೆ ಬ್ಯಾಂಕ್ ಲೋನ್ ಅರ್ಜಿಯನ್ನು ಹಾಕಿ ಎಲ್ಲ ದಾಖಲಾತಿಯನ್ನು ಬ್ಯಾಂಕಿಗೆ ಸಲ್ಲಿಸಿ ಮೊದಲು ಲೋನ್ ಆಗಿ ಒಂದು ಲಕ್ಷ ಬ್ಯಾಂಕ್ ಲೋನ್ ಅನ್ನು ಈ ಸಂಘದ ಸದಸ್ಯರು ಪಡೆದುಕೊಂಡರು.ಆ ಲೋನ್ ಅನ್ನು ಸಂಘದ ಸದಸ್ಯರಲ್ಲಿ ಮೂರು ಜನ ವಿಕಲಚೇತನರು ಪಡೆದುಕೊಂಡರು.ಅದರಲ್ಲಿ ಶಿಲ್ಪಾ ವಾಲಿಕಾರ್ ಇವರು ಬಡತನ ಕುಟುಂಬ ಹೊಂದಿದ್ದು ಜೀವನಕ್ಕೆ ಆಧಾರವಾಗಲಿ ಎಂಬ ಉದ್ದೇಶದಿಂದ ಕುಟುಂಬವನ್ನು ನಡೆಸಲು 40,000 ಲೋನ್ ಪಡೆದುಕೊಂಡು ಹೋಟೆಲ್ ಉದ್ಯೋಗ ಆರಂಭಿಸಿ ವಿಕಲಚೇತನರಿಗೆ ಮಾದರಿಯಾಗಿದ್ದಾರೆ.ಹಾಗೆ ದೇವಕ್ಕ ತಳವಾರ್ ಇವರು ಕುರಿಮರಿ ಸಾಕಾಣಿಕೆಗಾಗಿ 30000 ಲೋನ್ ಪಡೆದುಕೊಂಡು ಉದ್ಯೋಗದಲ್ಲಿ ತೊಡಗಿ ಕುಟುಂಬಕ್ಕೆ ಆಧಾರವಾಗಿದ್ದಾರೆ.ಅದೇ ರೀತಿ ಪಾರ್ವತಿ ಚುಂಗಿನ್ ಇವರು ಹೈನುಗಾರಿಕೆಗಾಗಿ 30,000/- ಸಾಲವನ್ನು ಪಡೆದುಕೊಂಡು ಉದ್ಯೋಗದಲ್ಲಿ ತೊಡಗಿದ್ದಾರೆ. ಹೀಗೆ ಮೊದಲ ಬ್ಯಾಂಕ್ ಲೋನ್ ನಲ್ಲಿ ಮೂರು ಜನ ಸದಸ್ಯರು ಪಡೆದುಕೊಂಡು ಉದ್ಯೋಗ ಆರಂಭಿಸಿ ಆರ್ಥಿಕವಾಗಿ ಮುಂದುವರೆದಿದ್ದಾರೆ.

ಹೀಗೆ ಈ ಸಂಘದಿಂದ ವಿಕಲಚೇತನರು ತರಬೇತಿಯನ್ನು ಪಡೆದುಕೊಂಡು ಉದ್ಯೋಗದಲ್ಲಿ ತೊಡಗಿ ಕುಟುಂಬಕ್ಕೆ ಆಧಾರವಾಗಿದ್ದಾರೆ.ಜೊತೆಗೆ ಈ ಸಂಘದ ಸದಸ್ಯರಾದ ದೇವಕ್ಕ ತಳವಾರ್ ಇವರು ಡೀಲ್ ಫೌಂಡೇಶನ್ ಸಂಸ್ಥೆ ಇಂದ ತರಬೇತಿಯನ್ನು ಪಡೆದುಕೊಂಡು ಡೀಲ್ ಫೌಂಡೇಶನ್ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದು ಡೀಲ್ ಫೌಂಡೇಶನ್ ವತಿಯಿಂದ ಅವರ ಆರ್ಥಿಕ ಜೀವನಕ್ಕೆ ಇನ್ನೂ ಹೆಚ್ಚಿನ ಸಹಾಯಕವಾಗಿದೆ.ಅಷ್ಟೇ ಅಲ್ಲದೆ ಡೀಲ್ ಫೌಂಡೇಶನ್ ಸಂಸ್ಥೆ ವತಿಯಿಂದ ವಿಕಲಚೇತನರಿಗೆ ಬೇರೆ ಸಂಸ್ಥೆ ಹಾಗೂ ಸರ್ಕಾರದಿಂದ ಸಿಗುವ ಕೃಷಿ ತರಬೇತಿಗಳಿಗೆ ಈ ಸಂಘದ ಸದಸ್ಯರೆಲ್ಲರೂ ಭಾಗವಹಿಸಿದ್ದರು. ಒಟ್ಟಾರೆಯಾಗಿ ಈ ಸಂಘವು ಎಲ್ಲ ವಿಕಲಚೇತನರಿಗೆ ಮಾದರಿಯಾಗಿದೆ.

ಮೊದಲನೇ ಬ್ಯಾಂಕ್ ಲೋನ್ ಯಾವುದೇ ರೀತಿಯ ಕಟ್ಟು ಬಾಕಿ ಉಳಿಸದೆ ಸರಿಯಾಗಿ ಮರ ಪಾವತಿ ಮಾಡಿ ಎರಡನೇ ಸಾರಿ ಎರಡು ಲಕ್ಷ ಸಾಲವನ್ನು ಈ ಸಂಘವು ಪಡೆದುಕೊಂಡಿದೆ.ಇದನ್ನು ಕೂಡ ಉದ್ಯೋಗಕ್ಕೆ ಬಳಸಿಕೊಂಡು ಆರ್ಥಿಕವಾಗಿ ಸದೃಢರಾಗಿದ್ದಾರೆ.ಈ ಸಂಘದ ಉಳಿತಾಯ,ಸಾಲ ಮರುಪಾವತಿಯನ್ನು ಎಲ್ಲವನ್ನು ಗಮನಿಸಿ ಕೆವಿಜಿ ಬ್ಯಾಂಕ್ ನವರೇ ಈ ಸಂಘಕ್ಕೆ ಮುಂದೆ ಬಂದು ಸಾಲವನ್ನು ಪಡೆದುಕೊಳ್ಳಿ ಎಂದು ಹೇಳುತ್ತಿದ್ದಾರೆ.ಎರಡು ಲಕ್ಷ ಸಾಲವನ್ನು ಕೂಡ ಸರಿಯಾಗಿ ಮರುಪಾವತಿಸಿ ಉಳಿತಾಯವನ್ನು ಮಾಡುತ್ತಿದ್ದಾರೆ.

ನಂತರ ಮತ್ತೆ ಸಾಲನ್ನು ಪಡೆದುಕೊಳ್ಳಲು ಮೂರು ಲಕ್ಷ ಸಾಲಕ್ಕಾಗಿ ಅರ್ಜಿಯನ್ನು ಹಾಕಿ 3 ಲಕ್ಷ ಬ್ಯಾಂಕ್ ಲೋನ್ ಅನ್ನು ಪಡೆದುಕೊಂಡರು.ಅದನ್ನು ಶಿಲ್ಪಾ ವಾಲಿಕಾರ್ ಇವರು ಹೋಟೆಲ್ ಉದ್ಯೋಗವನ್ನು ಹೆಚ್ಚಿನದಾಗಿ ಮಾಡಲು ಒಂದು ಲಕ್ಷ ಲೋನ್ ಹಾಗೂ ಪಾರ್ವತಿ ಚುಂಗಿನ್ ಇವರು ಹೈನುಗಾರಿಕೆಗಾಗಿ ಹಾಗೂ ದೇವಕ್ಕ ತಳವಾರ್ ಇವರು ಮನೆ ಕಟ್ಟಲು ಒಂದು ಲಕ್ಷ ಸಾಲವನ್ನು ಪಡೆದುಕೊಂಡು ಯಾವುದೇ ಕಟ್ಟು ಬಾಕಿ ಉಳಿಸದೆ ಮರುಪಾವತಿ ಮಾಡುತ್ತಿದ್ದಾರೆ.ಹೀಗೆ ಈ ಸಂಘವು ಮೂರು ಬಾರಿ ಬ್ಯಾಂಕ್ ಲೋನ್ ಪಡೆದುಕೊಂಡು ಸ್ವಸಹಾಯ ಸಂಘಗಳಿಗೆ ಮಾದರಿಯಾಗಿದೆ.

ಅಷ್ಟೇ ಅಲ್ಲದೆ ಡೀಲ್ ಫೌಂಡೇಶನ್ ವತಿಯಿಂದ ವಿಕಲಚೇತನರಿಗೆ ಅನುಕೂಲವಾಗಲಿ ಎಂದು ಸುರಕ್ಷಿತ ವಿಕಲಚೇತನರ ಕೋ ಆಪರೇಟಿವ್ ಸೊಸೈಟಿಯನ್ನು ಆರಂಭಿಸಿದೆ.ಅದರಲ್ಲಿ ಈ ಸಂಘದ ಸದಸ್ಯರು ಶೇರುದಾರರಾಗಿ ದೇವಕ್ಕ ತಳವಾರ್ ಇವರು ಆ ಸೊಸೈಟಿಯ ಬೋರ್ಡ್ ಮೆಂಬರ್ ಕೂಡ ಆಗಿದ್ದಾರೆ. ಹೀಗೆ ಈ ಸಂಘದ ವ್ಯವಹಾರ, ಹೊಂದಾಣಿಕೆ ಎಲ್ಲವನ್ನು ಗಮನಿಸಿ, ಡೀಲ್ ಫೌಂಡೇಶನ್ ಸಂಸ್ಥೆಯು ಪ್ರತಿ ವರ್ಷದಂತೆ ಈ ವರ್ಷವೂ ಸ್ವಾವಲಂಬನೆ ಅವಾರ್ಡ್ ಕಾರ್ಯಕ್ರಮದಲ್ಲಿ ಈ ಸಂಘಕ್ಕೆ ಮೊದಲ ಬಹುಮಾನಕ್ಕಾಗಿ ಈ ಸಂಘವನ್ನು ಆಯ್ಕೆ ಮಾಡಿ 20 ಸಾವಿರ ಬಹುಮಾನವನ್ನು ಪಡೆದುಕೊಂಡಿದೆ.

ಹೀಗೆ ಡೀಲ್ ಫೌಂಡೇಶನ್ ಸಂಸ್ಥೆಯ ರಚನೆಯಿಂದ ಆರಂಭವಾದ ಈ ಸಂಘವು ಯಾವುದೇ ಅಡೆಚಣೆ ಇಲ್ಲದೆ ಮಾದರಿಯಾಗಿದೆ.ಇಷ್ಟೆಲ್ಲ ಸಹಕಾರ ನೀಡಿದ ಡೀಲ್ ಫೌಂಡೇಶನ್ ಸಂಸ್ಥೆಯ ಬಗ್ಗೆ ಸಂಘದ ಸದಸ್ಯರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.ಅದು ವಿಕಲಚೇತನರಿಗಾಗಿ ಕಾರ್ಯ ನಿರ್ವಹಿಸಲು ಆರಂಭವಾದ ಸಂಸ್ಥೆಯಲ್ಲಿ ಮೊದಲು ನಮ್ಮನ್ನು ಗುರುತಿಸಿ ತರಬೇತಿಯನ್ನು ನೀಡಿ ಆರ್ಥಿಕವಾಗಿ ಮುಂದೆ ಬರುವಂತೆ ಮಾಡಿದೆ. ವಿಕಲಚೇತನರಿಗೆ ಯಾರು ಸಾಲವನ್ನು ನೀಡುವುದಿಲ್ಲ ಅದೇ ನಮ್ಮದೇ ಆದ ಸಂಘ ಮಾಡಿದ್ದರಿಂದ ಉಳಿತಾಯದ ಜೊತೆಗೆ ಕಡಿಮೆ ಬಡ್ಡಿ ಯಲ್ಲಿ ನಮಗೆ ಸಾಲ ಸಿಗುತ್ತಿದೆ. ನಮ್ಮನ್ನು ಈ ಸಮಾಜ ಗುರುತಿಸುವಂತೆ ಡೀಲ್ ಫೌಂಡೇಶನ್ ಸಂಸ್ಥೆ ಯಿಂದ ಉಮಾ ಚಿಲ್ ಗೌಡರ್ ಹಾಗೂ ಶಿವಕುಮಾರ್ ಶಿರೋಳ್ ಇವರು ನಮ್ಮಲ್ಲಿ ಆತ್ಮಸ್ಥೈರ್ಯ ತುಂಬಿ ಆರ್ಥಿಕವಾಗಿ ಸದೃಢ ರನ್ನಾಗಿ ಮಾಡಿದ್ದಾರೆ. ಜೊತೆಗೆ ಹಲವಾರು ತರಬೇತಿಗಳಿಂದ ನಮ್ಮ ಜ್ಞಾನ ಇನ್ನೂ ಹೆಚ್ಚಾಗಿದೆ. ಹೊರಗಿನ ಪ್ರಪಂಚ ನಮಗೆ ತಿಳಿಯುವ ಹಾಗೆ ಮಾಡಿದೆ ಮತ್ತು ನಮ್ಮ ಕುಟುಂಬಕ್ಕೆ ನಾವು ಹೊರೆಯಾಗದಂತೆ ಸ್ವಾವಲಂಬನೆ ಬದುಕಿಗೆ ದಾರಿ ಮಾಡಿ ಕೊಟ್ಟ ಡೀಲ್ ಫೌಂಡೇಶನ್ ಸಂಸ್ಥೆಗೆ ಹಾಗೂ ಉಮಾ ಚಿಲ್ ಗೌಡರ್ ಹಾಗೂ ಶಿವಕುಮಾರ್ ಶಿರೋಳ್ ಇವರಿಗೂ ನಮ್ಮ ಸಂಘದ ಸದಸ್ಯರೆಲ್ಲರ ಪರವಾಗಿ ಧನ್ಯವಾದಗಳು.ಹೀಗೆ ಹೆಚ್ಚಿನ ಸಹಕಾರ ನೀಡಿ ಬೆಳೆಸಲಿ ಎಂದು ಕೇಳಿಕೊಳ್ಳುತ್ತಾ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಹೀಗೆ ಡೀಲ್ ಫೌಂಡೇಶನ್ ಸಂಸ್ಥೆಯು ಆರಂಭವಾಗಿ ವಿಕಲಚೇತನರಿಗೆ ಆರ್ಥಿಕವಾಗಿ ಬೆನ್ನೆಲುಬಾಗಿ ತರಬೇತಿಗಳ ಮೂಲಕ ವಿಕಲಚೇತನರ ಜೀವನಕ್ಕೆ ಸಹಾಯಕವಾಗುವಂತೆ ಮಾಡುತ್ತಿದೆ.ಹೀಗೆ ಇನ್ನೂ ಹೆಚ್ಚಿನ ಮಟ್ಟದಲ್ಲಿ ಕೀರ್ತಿ ಗಳಿಸಲಿ ಎಂದು ಎಲ್ಲ ವಿಕಲಚೇತನರು ಹಾರೈಸುತ್ತಿದ್ದಾರೆ.

ಈ ಬ್ಲಾಗ್ ಗೆ ಸಂಬಂಧಿಸಿದಂತೆ ಯಾವುದೇ ನಿರ್ದಿಷ್ಟ ಪ್ರಶ್ನೆಗಳಿಗೆ ಅಥವಾ ಯಾವುದೇ ಸಹಾಯಕ್ಕಾಗಿ Info@deal-foundation.com ನಲ್ಲಿ ತಿಳಿಸಿರಿ ಮತ್ತು ನಾವು ಮಾಡುವ ಕೆಲಸದ ಕುರಿತು ಇನ್ನಷ್ಟು ತಿಳಿದುಕೊಳ್ಳಲು www.deal-foundation ಗೆ ಲಾಗ್ ಇನ್ ಮಾಡಿ.

ಧನ್ಯವಾದಗಳು

Scroll to Top