ಸುನೀತಾ ಹಿರೇಮಠ ಇವರ ಜೀವನ ಕಥೆ

ಡೀಲ್ ಫೌಂಡೇಶನ್ ಸಂಸ್ಥೆಯು ವಿಕಲಚೇತನ ಮತ್ತು ಮಹಿಳೆಯರಿಗೆ ಪ್ರತಿ ತಾಲೂಕಿನಲ್ಲಿ ಜೀವನೋಪಾಯದ ಕೌಶಲ್ಯ ಅಭಿವೃದ್ಧಿ ತರಬೇತಿಯನ್ನು ಒದಗಿಸುವುದು, ಕಾರ್ಯಗಾರಗಳನ್ನು ಆಯೋಜಿಸುತ್ತಾ ಬರುತ್ತಿದೆ. ಮಹಿಳೆಯರು ಮತ್ತು ವಿಕಲಚೇತನರು ಜೀವನದಲ್ಲಿ ಏನು ಮಾಡಲು ಆಗುತ್ತಿಲ್ಲ ಅವಕಾಶಗಳು ಕೂಡ ಸಿಗುತ್ತಿಲ್ಲ ಎಂಬ ಜಿಗುಪ್ಸೆಯಿಂದ ತಮ್ಮ ಮನೆಗಳಿಗೆ ಮಾತ್ರ ಸೀಮಿತವಾಗಿರುತ್ತಾರೆ. ಅಂತಹ ಮಹಿಳೆಯರನ್ನು ಡೀಲ್ ಫೌಂಡೇಶನ್ ಸಂಸ್ಥೆಯು ಲವ್ಲಿ ವುಡ್ ಆಫೀಸರ್ಸ್ ಗಳ ಮೂಲಕ ಅವರಿಗೆ ತರಬೇತಿಗಳನ್ನು ನೀಡಿ ಅವಕಾಶಗಳನ್ನು ನೀಡುತ್ತಿದೆ.

ಹೌದು ಡೀಲ್ ಫೌಂಡೇಶನ್ ಸಂಸ್ಥೆಯಿಂದ ಲವ್ಲಿ ವುಡ್ ಆಫೀಸರ್ಸ್ ಮಹಿಳೆಯರ ಸ್ವ ಸಹಾಯ ಸಂಘವನ್ನು ರಚಿಸಿ ಅವರಿಗೆ ತರಬೇತಿಗಳನ್ನು ನೀಡಿ ಸ್ವಾವಲಂಬನೆ ಜೀವನಕ್ಕೆ ಸಹಾಯಕ ಮಾಡುತ್ತಿದ್ದಾರೆ.ಪ್ರತಿ ತಾಲೂಕಿನಲ್ಲಿ ಮಹಿಳೆಯರು ತಮ್ಮ ಆರ್ಥಿಕ ಜೀವನ ಮಟ್ಟವನ್ನು ಸುಧಾರಣೆ ಹೊಂದಿದ್ದಾರೆ.ಅಂತಹ ಮಹಿಳೆಯರಲ್ಲಿ ಹೇಳುವುದಾದರೆ ಸುನಿತಾ ಹಿರೇಮಠ ಇವರು ಕೂಡ ಒಬ್ಬರು.

ಇವರ ಬಗ್ಗೆ ಹೇಳುವುದಾದರೆ, ಇವರ ಮೂಲತಃ ಗದಗ್ ತಾಲೂಕಿನ ನಾರಾಯಣಪುರದ ಗ್ರಾಮದವರು.ತಂದೆ ಗಂಗನಗೌಡ ತಾಯಿ ದ್ರಾಕ್ಷಾಯಿಣಿ.ಇವರದು ಬಡ ಕುಟುಂಬವಾಗಿತ್ತು.ತಂದೆ ತಾಯಿಗಳಿಗೆ ಒಬ್ಬರೇ ಮುದ್ದಿನ ಮಗಳಾಗಿದ್ದರು.ಇವರಿಗೆ ಓದಲು ತುಂಬಾ ಆಸಕ್ತಿ ಇತ್ತು.ಆದರೆ ಮನೆಯಲ್ಲಿ ಬಡತನ ಪರಿಸ್ಥಿತಿ ಇತ್ತು. ಅದಕ್ಕಾಗಿ ಪಿಯುಸಿ ವರೆಗೆ ಶಿಕ್ಷಣ ಮುಗಿಸಿ ಬಿಟ್ಟರು.ನಂತರ ತಂದೆ ತಾಯಿ ಸುನಿತಾ ಅವರಿಗೆ ಮದುವೆ ಮಾಡಿದರು.ಹೆಚ್ಚು ವಿದ್ಯಾಭ್ಯಾಸ ಮಾಡಿ ಏನಾದರೂ ಸಾಧಿಸಬೇಕು ಎಂಬ ಛಲ ಸುನಿತಾ ಅವರದಾಗಿತ್ತು ಆದರೆ ಬಡತನ ಇರುವ ಕಾರಣ ಶಿಕ್ಷಣವನ್ನು ಕೊನೆಗೊಳಿಸಿ ತಂದೆ ತಾಯಿಯ ಮಾತಿಗೆ ಬೆಲೆ ಕೊಟ್ಟು ಮದುವೆಯಾದರು.

ನಂತರ ಇವರಿಗೆ ಇಬ್ಬರು ಹೆಣ್ಣು ಮಕ್ಕಳು ಮತ್ತು ಒಬ್ಬ ಗಂಡು ಮಗುವಿನೊಂದಿಗೆ ಇವರ ಕುಟುಂಬ ಖುಷಿಯಿಂದ ಕೂಡಿದೆ.ಸುನೀತಾ ಅವರು ಹೆಚ್ಚಿನ ಶಿಕ್ಷಣ ಮಾಡಲಿಕ್ಕೆ ಆಗಲಿಲ್ಲ ಆದರೆ ನನ್ನ ಮಕ್ಕಳು ಚೆನ್ನಾಗಿ ಕಲಿತು ವಿದ್ಯಾಭ್ಯಾಂತರಾಗಬೇಕು ಎಂದು ಮನೆಯಲ್ಲಿ ಇಡ್ಲಿ ರವಾ ಪ್ಯಾಕ್ ಮಾಡಿ ಮಾರಾಟ ಮಾಡುತ್ತಾ ಕಷ್ಟ ಪಡುತ್ತಿದ್ದರು.

ಹೀಗೆ ಒಂದು ದಿನ ಡೀಲ್ ಫೌಂಡೇಶನ್ ಸಂಸ್ಥೆಯ ಗದಗ್ ತಾಲೂಕಿನ ಲವ್ಲಿ ವುಡ್ ಆಫೀಸರ್ ಆದ ವೀಣಾ ಅವರು ನಾರಾಯಣಪುರ ಗ್ರಾಮಕ್ಕೆ ಭೇಟಿ ನೀಡಿ ಅಲ್ಲಿನ ಮಹಿಳೆಯರೊಂದಿಗೆ ಡೀಲ್ ಫೌಂಡೇಶನ್ ಸಂಸ್ಥೆ ಬಗ್ಗೆ ಮತ್ತು ಕಾರ್ಯಗಳ ಬಗ್ಗೆ, ಸ್ವಸಹಾಯ ಸಂಘಗಳ ಬಗ್ಗೆ ಮಾಹಿತಿ ನೀಡಿದರು.ಅದರಿಂದ ಅಲ್ಲಿನ ಮಹಿಳೆಯರು ಪ್ರೇರಿತಗೊಂಡು 10 ಜನ ಸೇರಿ ಸ್ವ ಸಹಾಯ ಸಂಘವನ್ನು ರಚಿಸಿಕೊಂಡರು.ಇದನ್ನು ಗಮನಿಸಿದ ಸುನಿತಾ ಅವರು ನಾವು ಕೂಡ ಸ್ವಸಹಾಯ ಸಂಘವನ್ನು ಮಾಡುತ್ತೇವೆ ಇದರಿಂದ ನಮ್ಮ ನಮ್ಮ ಜೀವನಕ್ಕೆ ಸಹಾಯಕವಾಗಲಿ ಎಂದು ಹತ್ತು ಜನ ಮಹಿಳೆಯರು ಸೇರಿ ಅವರು ಸ್ವ ಸಹಾಯ ಸಂಘವನ್ನು ರಚಿಸಿಕೊಂಡಿದ್ದರು. ಅದಕ್ಕೆ “ಕಲ್ಯಾಣ ಬಸವೇಶ್ವರ ಸ್ವ ಸಹಾಯ ಸಂಘ” ಎಂದು ಹೆಸರಿಟ್ಟು ಗದಗ್ ತಾಲೂಕಿನ ಕೆಸಿಸಿ ಬ್ಯಾಂಕಿನಲ್ಲಿ ಖಾತೆಯನ್ನು ತೆರೆದರು.

ನಂತರ ಈ ಸಂಘಕ್ಕೆ ವೀಣಾ ಅವರು ಬುಕ್ ರೈಟಿಂಗ್ ತರಬೇತಿಯನ್ನು ನೀಡಿದರು.ಹಾಗೆ ಡೀಲ್ ಫೌಂಡೇಶನ್ ಸಂಸ್ಥೆಯ ಪ್ರೋಗ್ರಾಮ್ ಮ್ಯಾನೇಜರ್ ಆದ ಉಮಾ ಚಿಲ್ ಗೌಡರ್ ಮತ್ತು ಟ್ರೈನಿಂಗ್ ಕೋ ಆರ್ಡಿನೇಟರ್ ಆದ ಶಿವಕುಮಾರ್ ಶಿರೂಳ ಇವರು ನಾರಾಯಣಪುರ ಗ್ರಾಮದ ಒಟ್ಟು ಆರು ಸಂಘಗಳಿಗೆ ಫೈನಾನ್ಸಿಯಲ್ ಲೀಡರ್ ಶಿಪ್ ತರಬೇತಿ,2016ರ ಡಿಸೆಬಿಲಿಟಿ ಅವೆರ್ನೆಸ್ ತರಬೇತಿಯನ್ನು ನೀಡಿ ಸರ್ವೆ ಮಾಡಿ ಆಸಕ್ತಿ ಉದ್ಯೋಗದ ಬಗ್ಗೆ ಮಾಹಿತಿ ಪಡೆದುಕೊಂಡರು. ಅದರಲ್ಲಿ ಕಲ್ಯಾಣ ಬಸವೇಶ್ವರ ಸ್ವಸಹಾಯ ಸಂಘವು ಕೂಡ ಒಂದು.

ಸುನೀತಾ ಅವರು ವೈಯಕ್ತಿಕ ಉದ್ಯೋಗದಲ್ಲಿ ಆಸಕ್ತಿ ಹೊಂದಿರುವ ಕಾರಣ ಮನೆಯಲ್ಲಿ ಇಡ್ಲಿ ರವ ವ್ಯಾಪಾರ ಮಾಡುವುದನ್ನು ಗಮನಿಸಿ ಡೀಲ್ ಫೌಂಡೇಶನ್ ವತಿಯಿಂದ ಪ್ರತಿ ತಾಲೂಕಿನಲ್ಲಿ ಆರಂಭ ಸ್ವ ಉದ್ಯೋಗ ಕೇಂದ್ರವನ್ನು ಆರಂಭಿಸಿದೆ.ಅಲ್ಲಿ ವಿಕಲಚೇತನರು ಮತ್ತು ಮಹಿಳೆಯರು ಆಸಕ್ತಿ ಹೊಂದಿರುವ ಉದ್ಯೋಗವನ್ನು ಮಾಡಲು ಅವಕಾಶ ನೀಡಿದೆ. ಅದರಂತೆ ಗದಗ್ ತಾಲೂಕಿನ ಕೃಷಿ ವಿಸ್ತರಣ ಕೇಂದ್ರದ ಆಸ್ಕ್ ಸೆಂಟರ್ ನಲ್ಲಿ ಸುನಿತಾ ಅವರಿಗೆ ಉದ್ದೋಗ ಮಾಡಲು ಅವಕಾಶವನ್ನು ನೀಡಿದೆ. ಇದರಿಂದ ಅವರು ಡೀಲ್ ಫೌಂಡೇಶನ್ ನ ಸಹಕಾರದಿಂದ ಸಿಡ್ಬಿ ವತಿಯಿಂದ ಬ್ಯಾಂಕ್ ಲೋನ್ ಮೂಲಕ ರೊಟ್ಟಿ ಮಷೀನ್ ಪಡೆದುಕೊಂಡು ಆಸ್ಕ್ ಸೆಂಟರ್ ನಲ್ಲಿರೊಟ್ಟಿ ಮಷೀನ್ ಹಾಕಿ ಕುಟುಂಬದ ಸಹಕಾರದೊಂದಿಗೆ ಉದ್ಯೋಗ ಮಾಡಿ ತಮ್ಮ ಆರ್ಥಿಕ ಜೀವನದಲ್ಲಿ ಸುಧಾರಣೆ ಹೊಂದುತ್ತಿದ್ದಾರೆ.

ಅಷ್ಟೇ ಅಲ್ಲದೆ ತಮ್ಮ ಸಂಘದಿಂದ 25,000 ಲೋನ್ ಪಡೆದುಕೊಂಡು ಹೆಚ್ಚಿನ ಉದ್ಯೋಗ ಮಾಡುವುದಕ್ಕಾಗಿ ರೊಟ್ಟಿ ವ್ಯಾಪಾರ ಮಾಡುವುದರ ಜೊತೆಗೆ ಚಟ್ನಿಪುಡಿ,ಶೇಂಗಾ ಚಟ್ನಿ ಗುರೆಲ್ಲೂ ಚಟ್ನಿ,ಚಕ್ಕಲಿ ಮತ್ತು ಕ್ಯಾಂಟೀನ್ ರೂಪದಲ್ಲಿ ಅಡುಗೆ ಮಾಡಿಕೊಡುತ್ತಾ ಆರ್ಥಿಕ ಜೀವನದಲ್ಲಿ ಮುಂದುವರೆದು ಮಹಿಳೆಯರು ಯಾವುದಕ್ಕೂ ಕಡಿಮೆ ಇಲ್ಲ ಎಂದು ಗುರುತಿಸಿಕೊಳ್ಳುತ್ತಿದ್ದಾರೆ.ತಮ್ಮ ಆಸೆಯಂತೆ ಮಕ್ಕಳಿಗೆ ಹೆಚ್ಚಿನ ವಿದ್ಯಾಭ್ಯಾಸ ಕೊಡಿಸಿ ತಮ್ಮ ಕನಸನ್ನು ಮಕ್ಕಳಿಂದ ಸುನಿತಾ ಅವರು ಪೂರೈಸಿಕೊಳ್ಳುತ್ತಿದ್ದಾರೆ. ಇದಕ್ಕೆ ಅವರ ಕುಟುಂಬವೂ ಕೂಡ ಬೆನ್ನೆಲುಬಾಗಿ ನಿಂತು ಅವರಿಗೆ ಸಹಕಾರ ನೀಡುತ್ತಿದೆ.

ಹೀಗೆ ಸುನಿತಾ ಅವರು ಬಡತನದಲ್ಲಿದ್ದು ಕಷ್ಟಪಟ್ಟು ಮುಂದೆ ಬಂದು ಸಮಾಜದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ.ಡೀಲ್ ಫೌಂಡೇಶನ್ ನಿಂದ ಹೆಚ್ಚಿನ ಸಹಕಾರ ಬೆಂಬಲದೊಂದಿಗೆ ಅನೇಕ ಮಹಿಳೆಯರಿಗೆ ಮಾದರಿಯಾಗಿದ್ದಾರೆ.ಇಷ್ಟೆಲ್ಲ ಸಹಕಾರ ನೀಡಿದ ಡೀಲ್ ಫೌಂಡೇಶನ್ ಸಂಸ್ಥೆಯ ಬಗ್ಗೆ ಸುನಿತಾ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.ಅದು ಡೀಲ್ ಫೌಂಡೇಶನ್ ಸಂಸ್ಥೆಯು ವಿಕಲಚೇತನರಿಗೆ ಮಾತ್ರ ತರಬೇತಿಯನ್ನು ನೀಡುತ್ತದೆ ಎಂದು ಭಾವಿಸಿದ್ದೆ ಆದರೆ ನಮ್ಮಂತಹ ಕನಸನ್ನು ಹೊತ್ತ ಮಹಿಳೆಯರಿಗೂ ಸಹಕಾರ ನೀಡಿ ಅವಕಾಶವನ್ನು ಕೊಟ್ಟು ಮಹಿಳೆಯರು ಮನೆಯಲ್ಲಿಯೇ ಮಾತ್ರ ಸೀಮಿತವಲ್ಲ ಅವರಿಗೂ ಜೀವನದ ಕನಸು ಇದೆ ಅವಕಾಶಕೊಟ್ಟರೆ ಸಾಧಿಸಿ ನನಸು ಮಾಡುತ್ತಾರೆ ಎಂಬ ಬೆಂಬಲ ಈ ಡೀಲ್ ಫೌಂಡೇಶನ್ ಸಂಸ್ಥೆಯು ನಮಗೆ ನೀಡಿದೆ.100 ರೂಪಾಯಿ ಉಳಿತಾಯ ಮಾಡುವುದರಿಂದ ಮುಂದೆ ನಮ್ಮ ಕಷ್ಟಕಾಲದಲ್ಲಿ ಸಹಾಯಕವಾಗುತ್ತದೆ ಅದಕ್ಕಾಗಿ ಪುಟ್ಟದಾಗಿ ಈ ಉಳಿತಾಯ ಮಾಡಿ ಜೀವನಕ್ಕೆ ಆಸರೆಯಾಗಿದೆ.ಡೀಲ್ ಫೌಂಡೇಶನ್ ಸಂಸ್ಥೆಇಂದ ವೀಣಾ ಅವರು ನಮ್ಮನ್ನು ಗುರುತಿಸಿ ಸ್ವಸಹಾಯ ಸಂಘವನ್ನು ಮಾಡಿ ತರಬೇತಿಯನ್ನು ನೀಡಿ ಉದ್ಯೋಗದಲ್ಲಿ ತೊಡಗುವಂತೆ ಮಾಡಿದ್ದಾರೆ.ಎಲ್ಲೋ ಇದ್ದ ನಮ್ಮನ್ನು ಅವರು ಗುರುತಿಸಿ ಮುಂದೆ ಬರುವಂತೆ ಬೆಂಬಲ ನೀಡಿದ್ದಾರೆ. ಇದರಿಂದ ಶಿಕ್ಷಣದ ಕನಸು ನಮ್ಮ ಮಕ್ಕಳಿಂದ ನನಸಾಗುತ್ತಿದೆ ಮತ್ತು ನಮ್ಮ ಕುಟುಂಬವು ಆರ್ಥಿಕವಾಗಿ ಸುಧಾರಣೆ ಹೊಂದಿದೆ.ಇದಕ್ಕೆಲ್ಲ ಕಾರಣ ಡೀಲ್ ಫೌಂಡೇಶನ್ ಸಂಸ್ಥೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವಂತಾಗಿದೆ.ಇಷ್ಟೆಲ್ಲ ಸಹಕಾರ ನೀಡಿದ ಡೀಲ್ ಫೌಂಡೇಶನ್ ಸಂಸ್ಥೆಗೂ ಮತ್ತು ವೀಣಾ ಅವರಿಗೂ ನನ್ನ ಕುಟುಂಬದ ಪರವಾಗಿ ಹಾಗೂ ನಮ್ಮ ಸಂಘದ ಪರವಾಗಿ ಧನ್ಯವಾದಗಳು ಅರ್ಪಿಸುತ್ತೇನೆ. ಹೀಗೆ ನಮ್ಮಂತಹ ಅನೇಕ ಮಹಿಳೆಯರನ್ನು ಗುರುತಿಸಿ ಅವರನ್ನು ಮುಂದೆ ಬರುವಂತೆ ಮಾಡಿ ಎಂದು ಕೇಳಿಕೊಳ್ಳುತ್ತಾ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಹೀಗೆ ಡೀಲ್ ಫೌಂಡೇಶನ್ ಸಂಸ್ಥೆಯು ವಿಕಲಚೇತನರಿಗೆ ಮತ್ತು ಮಹಿಳೆಯರಿಗೆ ಅವಕಾಶವನ್ನು ನೀಡಿ ಆರ್ಥಿಕವಾಗಿ ಬೆಂಬಲಿಸಿ ಜೀವನದ ಸಾಧನೆ ಅರ್ಥವನ್ನು ಈ ಸಮಾಜಕ್ಕೆ ಗುರುತಿಸಿಕೊಳ್ಳುವಂತೆ ಮಾಡುತ್ತಿದೆ.ಹೀಗೆ ಇನ್ನೂ ಹೆಚ್ಚಿನ ಮಹಿಳೆಯರು ಪ್ರತಿ ತಾಲೂಕಿನಲ್ಲಿ ತಮ್ಮನ್ನು ಗುರುತಿಸಿಕೊಂಡು ಮುಂದೆ ಬರಬೇಕು ಎಂಬ ಅಭಿಲಾಷೆ ಡೀಲ್ ಫೌಂಡೇಶನ್ ಸಂಸ್ಥೆಯಾಗಿದೆ.ಹೀಗೆ ಇನ್ನೂ ಹೆಚ್ಚಿನ ಸಹಕಾರ ಎಲ್ಲರಿಗೂ ಡೀಲ್ ಫೌಂಡೇಶನ್ ಸಂಸ್ಥೆಯು ನೀಡಲಿ ಎಂದು ಎಲ್ಲರೂ ಮನವಿ ಮಾಡಿ ಹೆಚ್ಚಿನ ಕೀರ್ತಿಗಳಿಸಲಿ ಎಂದು ಹಾರೈಸುತಿದ್ದಾರೆ.

ಈ ಬ್ಲಾಗ್ ಗೆ ಸಂಬಂಧಿಸಿದಂತೆ ಯಾವುದೇ ನಿರ್ದಿಷ್ಟ ಪ್ರಶ್ನೆಗಳಿದ್ದರೆ ಅಥವಾ ಯಾವುದೇ ಸಹಾಯಕ್ಕಾಗಿ Info@deal-foundation.com ನಲ್ಲಿ ತಿಳಿಸಿರಿ ಮತ್ತು ನಾವು ಮಾಡುವ ಕೆಲಸದ ಕುರಿತು ಇನ್ನಷ್ಟು ತಿಳಿದುಕೊಳ್ಳಲು www.deal-foundation ಗೆ ಲಾಗ್ ಇನ್ ಮಾಡಿ.

ಧನ್ಯವಾದಗಳು

Scroll to Top