ವಿಕಲಚೇತನರ ಮತ್ತು ಮಹಿಳೆಯರ ಕುಟುಂಬಗಳಿಗೆ ಜೀವನೋಪಾಯವನ್ನು ಸೃಷ್ಟಿಸಲು ಡೀಲ್ ಫೌಂಡೇಶನ್ ಸಂಸ್ಥೆಯು ಕೈಗೊಂಡ ಸಮುದಾಯ ಸಂಘಟನೆ ಮತ್ತು ಅಭಿವೃದ್ಧಿ ಕಾರ್ಯಗಳ ಪರಿಣಾಮವಾಗಿ ಮಹಿಳೆಯರು ಮತ್ತು ವಿಕಲಚೇತನ ಗುಂಪುಗಳನ್ನು ರಚಿಸಲಾಗುತ್ತಿದೆ.
ಗ್ರಾಮೀಣ ಪ್ರದೇಶಗಳಲ್ಲಿನ ಮಹಿಳೆಯರು ಮತ್ತು ವಿಕಲಚೇತನರು ತಮ್ಮ ಕುಟುಂಬಗಳನ್ನು ಬೆಂಬಲಿಸಲು ಜೀವನ ಉಪಾಯ ಮತ್ತು ಆದಾಯದ ಅವಕಾಶಗಳಲ್ಲಿ ತೊಡಗಿಸಿಕೊಳ್ಳಲು ಬಯಸುತ್ತಾರೆ ಅವರಿಗೆ ಡೀಲ್ ಫೌಂಡೇಶನ್ ಸಂಸ್ಥೆಯು ಲಿಂಗ ಮತ್ತು ವಿಕಲಚೇತನತೆಯ ಪಕ್ಷಪಾತವಿಲ್ಲದೆ ಸಮಾನ ಭಾಗವಹಿಸುವಿಕೆಗೆ ಅವಕಾಶ ನೀಡಿ ವಿಕಲಚೇತನರು ಮತ್ತು ಮಹಿಳೆಯರು ಪ್ರತಿ ಕ್ಷೇತ್ರದಲ್ಲಿ ಮುಂದೆ ಬರುವಂತೆ ಮಾರ್ಗ ಸೂಚಿಸುತ್ತಿದ್ದಾರೆ.
ಇದರ ಪರಿಣಾಮವಾಗಿ ಮಹಿಳೆಯರು ಮತ್ತು ವಿಕಲಚೇತನರ ಸ್ವಸಹಾಯ ಗುಂಪುಗಳನ್ನು ರಚಿಸಿ, ಡೀಲ್ ಫೌಂಡೇಶನ್ ವತಿಯಿಂದ ಹೈನುಗಾರಿಕೆ ತರಬೇತಿ,ಕುಂಕುಮ ತರಬೇತಿ,ಜೇನು ಸಾಕಾಣಿಕೆ ತರಬೇತಿ ಮುಂತಾದ ಜೀವನೋಪಾಯ ತರಬೇತಿಗಳನ್ನು ನೀಡಿ ಅವರನ್ನು ಸ್ವಯಂ ಉದ್ಯೋಗದಲ್ಲಿ ತೊಡಗಿಸಿ ಅವರ ಆರ್ಥಿಕ ಜೀವನ ಮಟ್ಟಕ್ಕೆ ಸಹಕಾರಿಯಾಗಿದೆ.ಈ ರೀತಿಯಾಗಿ ಪ್ರತಿ ತಾಲೂಕಿನಲ್ಲಿ ಲವ್ಲಿ ವುಡ್ ಆಫೀಸರ್ಸ್ ಕಾರ್ಯನಿರ್ವಹಿಸುತ್ತಿದ್ದಾರೆ.
ಮಹಿಳೆಯರು ಸ್ವಸಹಾಯ ಸಂಘವನ್ನು ರಚಿಸಿಕೊಂಡು ತರಬೇತಿಯ ನಂತರ ಉದ್ಯೋಗದಲ್ಲಿ ತೊಡಗಿದ್ದಾರೆ. ಅದರಲ್ಲಿ ಹೇಳುವುದಾದರೆ ಗದಗ್ ತಾಲೂಕಿನ ಲವ್ಲಿ ವುಡ್ ಆಫೀಸರ್ ಆದ ವೀಣಾ ಶಾಖನವರ್ ಇವರು ಕೋಟುಮಚಗಿ ಗ್ರಾಮದಲ್ಲಿ ಮಹಿಳಾ ಸದಸ್ಯರನ್ನು ಸೇರಿಸಿಕೊಂಡು ಅವರಿಗೆ ಡೀಲ್ ಫೌಂಡೇಶನ್ ಸಂಸ್ಥೆ ಮಾಡುತ್ತಿರುವ ಕಾರ್ಯಗಳ ಬಗ್ಗೆ ಮಾಹಿತಿ ನೀಡಿ ಜೊತೆಗೆ ಸ್ವಸಹಾಯ ಸಂಘದಿಂದ ಸಿಗುವ ಸೌಲಭ್ಯಗಳ ಮತ್ತು ಸರ್ಕಾರದ ವತಿಯಿಂದ ಸಿಗುವ ಅನುಕೂಲತೆಗಳ ಮಾಹಿತಿಯನ್ನು ನೀಡಿದರು.ಆಗ ಆ ಸದಸ್ಯರೆಲ್ಲರೂ ಒಪ್ಪಿಕೊಂಡು ಸ್ವಸಹಾಯ ಸಂಘವನ್ನು ರಚಿಸಿಕೊಂಡರು.12 ಜನ ಮಹಿಳೆಯರು ಸೇರಿ ಸಂಘವನ್ನು ರಚಿಸಿ ಅದಕ್ಕೆ “ಹೊಂಬೆಳಕು ಮಹಿಳಾ ಸ್ವಸಹಾಯ ಸಂಘ”ಎಂದು ಹೆಸರಿಟ್ಟು ಕೆವಿಜಿ ಬ್ಯಾಂಕ್ ನಲ್ಲಿ ಖಾತೆಯನ್ನು ತೆರೆದರು. ಸದಸ್ಯರೆಲ್ಲರೂ ಪ್ರತಿ ತಿಂಗಳು ಎರಡು ನೂರು ರೂಪಾಯಿ ಉಳಿತಾಯವನ್ನು ಕಟ್ಟುತ್ತಿದ್ದಾರೆ.
ನಂತರ ಈ ಸಂಘಕ್ಕೆ ವೀಣಾ ಅವರು 2016ರ ಡಿಸೆಬಿಲಿಟಿ ಅವೆರ್ನೆಸ್ ತರಬೇತಿ,ಬುಕ್ ರೈಟಿಂಗ್ ತರಬೇತಿ,ಲೀಡರ್ಶಿಪ್ ತರಬೇತಿಯನ್ನು ನೀಡಿದರು.ಹಾಗೆ ಡೀಲ್ ಫೌಂಡೇಶನ್ ಸಂಸ್ಥೆಯ ಟ್ರೈನಿಂಗ್ ಕೋರ್ಡಿನೇಟರ್ ಅದ ಶಿವಕುಮಾರ್ ಶಿರೋಳ್ ಇವರು ಈ ಸಂಘವನ್ನು ಭೇಟಿ ಮಾಡಿ ಈ ಸಂಘಕ್ಕೆ ಫೈನಾನ್ಸಿಯಲ್ ಲಿಟ್ರಸಿ ತರಬೇತಿ ಮತ್ತು ಉದ್ಯೋಗದ ತರಬೇತಿಯ ಬಗ್ಗೆ ಮಾಹಿತಿಯನ್ನು ನೀಡಿ ಸದಸ್ಯರಲ್ಲಿ ಆಸಕ್ತಿ ಇರುವ ಉದ್ಯೋಗದ ಬಗ್ಗೆ ಚರ್ಚೆ ಮಾಡಿದರು.
ನಂತರ ಸದಸ್ಯರಲ್ಲಿ ಆಸಕ್ತಿಯ ಉದ್ಯೋಗಗಳ ಬಗ್ಗೆ ಚರ್ಚಿಸಿದಾಗ ಹೈನುಗಾರಿಕೆ, ರೊಟ್ಟಿ ವ್ಯಾಪಾರ,ಕುರಿ ಸಾಕಾಣಿಕೆ ಮುಂತಾದ ಆಸಕ್ತಿ ಉದ್ಯೋಗದ ಬಗ್ಗೆ ಸದಸ್ಯರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.ಅದರಂತೆ ಆರು ತಿಂಗಳ ಆದ ನಂತರ ಈ ಸಂಘಕ್ಕೆ ಬ್ಯಾಂಕ್ ಲೋನ್ ಪಡೆದುಕೊಂಡು ಆಸಕ್ತಿಯ ಉದ್ಯೋಗದಲ್ಲಿ ಮುಂದುವರಿಯೋಣ ಎಂದು ಎಲ್ಲ ಸದಸ್ಯರು ತೀರ್ಮಾನಿಸಿದರು.
ಸಂಘ ರಚನೆಯಾದ ಆರು ತಿಂಗಳ ನಂತರ ಈ ಸಂಘಕ್ಕೆ ಬ್ಯಾಂಕ್ ಲೋನ್ ಗಾಗಿ ವೀಣಾ ಅವರು ಅರ್ಜಿಯನ್ನು ಸಲ್ಲಿಸಲು ಸದಸ್ಯರಲ್ಲಿ ಚರ್ಚೆ ಮಾಡಿದರು. ಅದರಂತೆ ಎಲ್ಲ ದಾಖಲಾತಿಯೊಂದಿಗೆ ಬ್ಯಾಂಕ್ ನಲ್ಲಿ ಅರ್ಜಿ ಸಲ್ಲಿಸಲು ಹೋದಾಗ ಕೆವಿಜಿ ಬ್ಯಾಂಕ್ ನಲ್ಲಿ ಒಂದು ವರ್ಷ ಆದ ನಂತರ ಸಾಲವನ್ನು ಕೊಡುತ್ತೇವೆ ಎಂದು ಹೇಳಿದರು. ಆದರೆ ಸದಸ್ಯರೆಲ್ಲರೂ ಚರ್ಚಿಸಿ ಅಲ್ಲಿಯವರೆಗೂ ತಮ್ಮ ಉಳಿತಾಯದಿಂದ ಸಾಲ ತೆಗೆದುಕೊಂಡು ಉದ್ಯೋಗವನ್ನು ಮಾಡೋಣ ಎಂದು ತೀರ್ಮಾನಿಸಿದರು.ಕೆಲ ಸದಸ್ಯರು ಉಳಿತಾಯದಿಂದ ಸಾಲವನ್ನು ತೆಗೆದುಕೊಂಡು ಕೃಷಿ ಉದ್ಯೋಗವನ್ನು ಮಾಡತೊಡಗಿದರು.
ಒಂದು ವರ್ಷ ಆದ ನಂತರ ವೀಣಾ ಅವರು ಮತ್ತೆ ಎಲ್ಲಾ ಸದಸ್ಯರ ದಾಖಲಾತಿಯೊಂದಿಗೆ ಬ್ಯಾಂಕ್ ನಲ್ಲಿ ಅರ್ಜಿಯನ್ನು ಸಲ್ಲಿಸಿದರು.ಆಗ ಬ್ಯಾಂಕಿನಲ್ಲಿ ಒಂದು ಲಕ್ಷ ಲೋನ್ ಸ್ಯಾಂಕ್ಷನ್ ಮಾಡಿದರು.ಆ ಲೋನನ್ನು ಸಂಘದ ಸದಸ್ಯರಲ್ಲಿ ಐದು ಜನ ಸದಸ್ಯರು ಆ ಲೋನನ್ನು ಪಡೆದುಕೊಂಡರು.ಅದರಲ್ಲಿ ಶಂಕ್ರವ್ವ ಸಿಂಟಾಲಕೇರಿ ಇವರು 20,000/-ಲೋನ್ ಪಡೆದುಕೊಂಡು ಆಕಳು ಖರೀದಿಸಿ ಹೈನುಗಾರಿಕೆ ಉದ್ಯೋಗವನ್ನು ಮಾಡುತ್ತಿದ್ದಾರೆ.ಇದರಿಂದ ಅವರ ಕುಟುಂಬಕ್ಕೂ ಆಧಾರವಾಗುತ್ತಿದೆ. ಅದೇ ರೀತಿ ನಜಮ ವಡ್ಡಟ್ಟಿ ಇವರು ಕೃಷಿಗಾಗಿ 50000 ಸಾಲವನ್ನುಪಡೆದುಕೊಂಡು ಉದ್ಯೋಗವನ್ನು ಮಾಡುತ್ತಿದ್ದಾರೆ.ಅದೇ ರೀತಿ ಅಕ್ಕಮ್ಮ ಮುಧೋಳ್ ಇವರು 10,000 ಲೋನ್ ಪಡೆದುಕೊಂಡು ಕುರಿ ಸಾಕಾಣಿಕೆ ಉದ್ಯೋಗ ಮಾಡುತ್ತಿದ್ದಾರೆ.ಅದೇ ರೀತಿ ಗೌರವ್ವ ಮಂಗಳಗಟ್ಟಿ ಇವರು ಕೂಡ 20,000 ಲೋನ್ ಪಡೆದುಕೊಂಡು ಕುರಿ ಸಾಕಾಣಿಕೆ ಉದ್ಯೋಗ ಮಾಡುತ್ತಿದ್ದಾರೆ.ಹೀಗೆ ಸಂಘದ ಸದಸ್ಯರು ಸಾಲವನ್ನು ಪಡೆದು ಉದ್ಯೋಗದಲ್ಲಿ ತೊಡಗಿದ್ದಾರೆ.ಯಾವುದೇ ರೀತಿಯ ಕಟ್ಟು ಬಾಕಿ ಉಳಿಸದೆ ಸಾಲ ಮರುಪಾವತಿಯನ್ನು ಮಾಡುತ್ತಿದ್ದಾರೆ.ಈ ಸದಸ್ಯರನ್ನು ಕಂಡು ಉಳಿದ ಸದಸ್ಯರು ಕೂಡ ಮುಂದಿನ ಲೋನ್ನಲ್ಲಿ ಸಾಲ ಪಡೆದುಕೊಂಡು ಉದ್ಯೋಗ ಮಾಡಲು ಆಸಕ್ತಿ ಹೊಂದಿದ್ದಾರೆ.
ಹೀಗೆ ಸಂಘದ ಸದಸ್ಯರೆಲ್ಲರೂ ತಮ್ಮ ಉದ್ಯೋಗದಲ್ಲಿ ಮುಂದುವರಿದಿದ್ದಾರೆ.ಇಷ್ಟೆಲ್ಲ ಸಹಕಾರ ಪಡೆದುಕೊಂಡ ಡೀಲ್ ಫೌಂಡೇಶನ್ ಸಂಸ್ಥೆಯ ಬಗ್ಗೆ ಸದಸ್ಯರೆಲ್ಲರೂ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ ಅದು ವಿಕಲಚೇತನರಿಗಾಗಿ ಕಾರ್ಯ ನಿರ್ವಹಿಸುತ್ತಿರುವ ಸಂಸ್ಥೆಯನ್ನು ಕಂಡು ನಮಗೆ ಖುಷಿಯಾಯಿತು.ನಂತರ ಮಹಿಳೆಯರಿಗೂ ಕೂಡ ಅವಕಾಶವನ್ನು ಕೊಟ್ಟರೆ ನಮಗೂ ಅನುಕೂಲವಾಗುತ್ತದೆ ಎಂದು ತಿಳಿದು ವೀಣಾ ಅವರ ಸಹಕಾರದಿಂದ ನಾವು ಸಂಘವನ್ನು ರಚಿಸಿಕೊಂಡವು.ಇದರಿಂದ ತುಂಬಾ ಅನುಕೂಲವಾಗಿದೆ. ಜೊತೆಗೆ ಉಳಿತಾಯ ಮಾಡುವುದರಿಂದ ಅದು ನಮ್ಮ ಕಷ್ಟಕಾಲದಲ್ಲಿ ಸಹಾಯ ವಾಗುತ್ತಿದೆ.ಸಂಘದಿಂದ ಲೋನ್ ಪಡೆದುಕೊಂಡು ಆಸಕ್ತಿ-ಉದ್ಯೋಗದಲ್ಲಿ ತೊಡಗಿ ಮಹಿಳೆಯರು ಕೂಡ ಅವಕಾಶ ಕೊಟ್ಟರೆ ಎಲ್ಲವನ್ನು ಸಾಧಿಸುತ್ತಾರೆ ಎಂದು ಈ ಸಂಘದ ಮೂಲಕ ನಮ್ಮ ಸಂಘದ ಮಹಿಳೆಯರು ಅದನ್ನು ನಿರೂಪಿಸಿದ್ದಾರೆ. ಇದರಿಂದ ನಮ್ಮ ಕುಟುಂಬವು ಆರ್ಥಿಕವಾಗಿ ಬೆಳವಣಿಗೆ ಹೊಂದಿದೆ.ಇಷ್ಟೆಲ್ಲ ಸಹಕಾರ ನೀಡಿದ ಡೀಲ್ ಫೌಂಡೇಶನ್ ಸಂಸ್ಥೆಗೆ ಹಾಗೂ ವೀಣಾ ಅವರಿಗೂ ನಮ್ಮ ಸಂಘದ ಸದಸ್ಯರೆಲ್ಲರ ಪರವಾಗಿ ಧನ್ಯವಾದಗಳು ಅರ್ಪಿಸುತ್ತೇವೆ ಹೀಗೆ ನಮ್ಮಂತಹ ಮಹಿಳೆಯರನ್ನು ಗುರುತಿಸಿ ಸಹಕಾರ ನೀಡಲಿ ಎಂದು ಕೇಳಿಕೊಳ್ಳುತ್ತೇವೆ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಈ ರೀತಿಯಾಗಿ ಡೀಲ್ ಫೌಂಡೇಶನ್ ಸಂಸ್ಥೆ ಮಹಿಳೆಯರಿಗೂ ಮತ್ತು ವಿಕಲಚೇತನರಲ್ಲಿ ಅಡಗಿರುವ ಕಲೆಯನ್ನು ಪ್ರೋತ್ಸಾಹ ತುಂಬುವುದರ ಮೂಲಕ ಆಕಲೆಯನ್ನು ಹೊರಹಾಕಿ ಅದಕ್ಕೆ ಬೇಕಾದ ಸೌಲಭ್ಯ, ತರಬೇತಿಗಳನ್ನು ನೀಡಿ ಈ ಸಮಾಜದಲ್ಲಿ ಎಲ್ಲರೂ ಗುರುತಿಸಿಕೊಳ್ಳುವಂತೆ ಮಾಡುತ್ತಿದೆ.ಹೀಗೆ ಗದಗ್ ತಾಲೂಕಿನ ಎಲ್ಲಾ ಮಹಿಳೆಯರು ಮತ್ತು ವಿಕಲಚೇತನರಿಗೆ ಸಹಾಯ ಮಾಡಿ ಡೀಲ್ ಫೌಂಡೇಶನ್ಯ ಕೀರ್ತಿ ಬೆಳಗಲಿ ಎಂದು ಎಲ್ಲರೂ ಆಶಿಸುತ್ತಿದ್ದಾರೆ.
ಈ ಬ್ಲಾಗ್ ಗೆ ಸಂಬಂಧಿಸಿದಂತೆ ಯಾವುದೇ ನಿರ್ದಿಷ್ಟ ಪ್ರಶ್ನೆಗಳಿಗೆ ಅಥವಾ ಯಾವುದೇ ಸಹಾಯಕ್ಕಾಗಿ Info@deal-foundation.com ನಲ್ಲಿ ತಿಳಿಸಿರಿ ಮತ್ತು ನಾವು ಮಾಡುವ ಕೆಲಸದ ಕುರಿತು ಇನ್ನಷ್ಟು ತಿಳಿದುಕೊಳ್ಳಲು www.deal-foundation ಗೆ ಲಾಗ್ ಇನ್ ಮಾಡಿ.
ಧನ್ಯವಾದಗಳು