ಡೀಲ್ ಫೌಂಡೇಶನ್ ಸಂಸ್ಥೆಯು ಗದಗ್ ಜಿಲ್ಲೆಯ 7 ತಾಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿರುವ ನವಂಬರ್ ತಿಂಗಳಲ್ಲಿ ನಡೆದ ಚಟುವಟಿಕೆಗಳು ಮತ್ತು ಇವೆಂಟುಗಳ ವಿವರ : —
1) ನವಂಬರ್ ತಿಂಗಳಲ್ಲಿ ವಿಕಲಚೇತನರ ಹಾಗೂ ಮಹಿಳೆಯರ ಸ್ವಸಹಾಯ ಸಂಘ ರಚನೆ ಮಾಡಿದ ವಿವರಗಳು ಈ ಕೆಳಗಿನಂತಿವೆ.
ಈ ತಿಂಗಳಲ್ಲಿ ಗದಗ, ಮುಂಡರಗಿ ಮತ್ತು ಶಿರಹಟ್ಟಿ ತಾಲೂಕಿನಲ್ಲಿ ಒಟ್ಟು 6 ಸ್ವಸಹಾಯ ಸಂಘಗಳನ್ನು ರಚನೆ ಮಾಡಿದ್ದು 64 ಸದಸ್ಯರಿದ್ದಾರೆ 2 ವಿಕಲಚೇತನರ ಸ್ವಸಹಾಯ ಸಂಘ ಒಟ್ಟು 22 ವಿಕಲಚೇತನ ಸದಸ್ಯರು , 4 ಮಹಿಳಾ ಸ್ವಸಹಾಯ ಸಂಘ 42 ಸದಸ್ಯರು ಇದರ ಉದ್ದೆಶ ವಿಕಲಚೇತನ ಸದಸ್ಯರು ಸ್ವಯಂ ಉದ್ಯೋಗ ಮಾಡಲು ಬ್ಯಾಂಕನಿಂದ ಸಾಲ ಪಡೆದು ಹೈನುಗಾರಿಕೆ ಕೃಷಿ ಕುರಿ ಆಡು ಸಾಕಾಣಿಕೆ ಇನ್ನು ಅನೇಕ ಉದ್ದೋಗ ಮಾಡುವದಕ್ಕಾಗಿ ಸಂಘ ರಚನೆ ಮಾಡಲಾಗಿದೆ.
- ಪ್ರಭುಸ್ವಾಮಿ ವಿಕಲಚೇತನರ ಸ್ವ ಸಹಾಯ ಸಂಘ ಕಡಕೋಳ ತಾಲೂಕ್, ಶಿರಹಟ್ಟಿ ಹಾಗೂ
- ಶ್ರೀ ದಾನೇಶ್ವರಿ ಮಹಿಳಾ ಸ್ವಸಹಾಯ ಸಂಘ ಹರಿಪೂರ ತಾ/ ಶಿರಹಟ್ಟಿ ಹಾಗೂ
- ಶ್ರೀ ಮಲ್ಲಿಕಾರ್ಜುನ ವಿಕಲಚೇತನರ ಸ್ವ ಸಹಾಯ ಸಂಘ ಹೊಸಳ್ಳಿ ತಾಲೂಕ ಶಿರಹಟ್ಟಿ ಹಾಗೂ
- ಶ್ರೀ ಹುಚ್ಚಿರೇಶ್ವರ ಮಹಿಳಾ ಸ್ವಸಹಾಯ ಸಂಘ ನೆರಗಲ್ ತಾ/ ಗಜೇಂದ್ರಗಡ ಹಾಗೂ
- ದುರ್ಗಾದೇವಿ ಮಹಿಳಾ ಸ್ವಸಹಾಯ ಸಂಘ ಕೊತಬಾಳ ತಾಲೂಕ್ ರೋಣ ಹಾಗೂ
- ಶಿರಡಿ ಸಾಯಿಬಾಬಾ ಮಹಿಳಾ ಸ್ವಸಹಾಯ ಸಂಘ ಕೊತಬಾಳ ತಾಲೂಕ ರೋಣ
2 ) ಶಿರಹಟ್ಟಿ ಹಾಗೂ ಗಜೇಂದ್ರಗಡ ,ನರಗುಂದ , ಮುಂಡರಗಿ ತಾಲೂಕಿನಲ್ಲಿ ಒಟ್ಟು 0 ವಿಕಲಚೇತನರ ಸಂಘ ಒಟ್ಟು 0 ಸಂಘ 3 ಮಹಿಳಾ ಸ್ವಸಹಾಯ ಸಂಘ 30 ಸದಸ್ಯರು ಹಣಕಾಸಿನ ವ್ಯವಹಾರ ಮಾಡಲು ಹಣ ಹಾಕುವುದು ತೆಗೆಯುವುದು ಬ್ಯಾಂಕ್ ಸಾಲ ಸೌಲಭ್ಯ ಹೊಂದುವ ಸಲುವಾಗಿ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಕೆನರಾ ಬ್ಯಾಂಕ್ ನಲ್ಲಿ ಸಂಘಗಗಳ ಹೆಸರಿನಲ್ಲಿ ಉಳಿತಾಯ ಖಾತೆಯನ್ನು ತೆರೆಯಲಾಗಿದೆ.
- ಶ್ರೀ ಬನಶಂಕರಿ ದೇವಿ ಮಹಿಳಾ ಸ್ವಸಹಾಯ ಸಂಘ ತಾಲೂಕ್ ರೋಣ ಹಾಗೂ
- ದುರ್ಗಾದೇವಿ ಮಹಿಳಾ ಸ್ವಸಹಾಯ ಸಂಘ ಕೊತಬಾಳ ತಾಲೂಕ್ ರೋಣ ಹಾಗೂ
- ಶಿರಡಿ ಸಾಯಿಬಾಬಾ ಮಹಿಳಾ ಸ್ವಸಹಾಯ ಸಂಘ ಕೊತಬಾಳ ತಾಲೂಕ ರೋಣ
- ಈ ತಿಂಗಳಿನಲ್ಲಿ ಶಿರಹಟ್ಟಿ ಹಾಗೂ ಗದಗ್ ,ಮುಂಡರಗಿ ತಾಲೂಕಿನಲ್ಲಿ ಒಟ್ಟು 0 ವಿಕಲಚೇತನ ಸದಸ್ಯರು ಹಾಗೂ 10 ಮಹಿಳಾ ಸದಸ್ಯರು ಒಟ್ಟು 10 ಬ್ಯಾಂಕ್ನಿಂದ ಸಾಲ ಪಡೆದುಕೊಂಡಿರುತ್ತಾರೆ
- ನರಗುಂದ ಶಿರಹಟ್ಟಿ ಮುಂಡರಗಿ ತಾಲೂಕುಗಳಲ್ಲಿ 2 ವಿಕಲಚತನರ ಸ್ವ ಸಹಾಯ ಸಂಘದ ಒಟ್ಟು 22 ಸದಸ್ಯರಿಗೆ 1 ಮಹಿಳಾ ಸಂಘ 10 ಸದಸ್ಯರಿಗೆ ಹಾಗೂ ವಿಕಲಚೇತನರ ಜಾಗೃತಿ ತರಬೇತಿ ಆರ್ಥಿಕ ಹಣಕಾಸು ತರಭೇತಿ ಮತ್ತು ನಾಯಕತ್ವ ತರಬೇತಿ . ಉದ್ಯಮಶೀಲತೆ ತರಬೇತಿ ಮತ್ತು ಸುಸ್ಥಿರ ಜೀವನೋಪಾಯ ತರಬೇತಿಯನ್ನು ವಿಕಲಚೇತನ ಗುಂಪಿನ ಸದಸ್ಯರಿಗೆ ನಡೆಸಲಾಯಿತು
- ಶ್ರೀ ಲಕ್ಷ್ಮಿ ವಿಕಲಚೇತನರ ಸ್ವಸಹಾಯ ಸಂಘ ಮಾಚೇನಹಳ್ಳಿ ತಾಲೂಕ್, ಶಿರಹಟ್ಟಿ ಹಾಗೂ
- ಕಾಮಧೇನು ಮಹಿಳಾ ಸ್ವ ಸಹಾಯ ಸಂಘ ಬೆಟ್ಗೇರಿ ತಾ/ ಗದಗ ಹಾಗೂ
- ಶಾಂಭವಿ ವಿಕಲಚೇತನರ ಸ್ವಸಹಾಯ ಸಂಘ ಹಾತಲಗೇರಿ ತಾಲೂಕು
- ಮುಂಡರಗಿ ತಾಲೂಕಿನಲ್ಲಿ ಮೇವುಂಡಿ ಗ್ರಾಮದಲ್ಲಿರುವ ಸುರಕ್ಷಿತ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯಲ್ಲಿ ಮಂಡಳಿಯ ಸಭೆಯನ್ನು ನಡೆಸಲಾಯಿತು ಸಭೆಯಲ್ಲಿ ಸೊಸೈಟಿಯ ಕಾರ್ಯ ಚಟುವಟಿಕೆಗಳ ಚರ್ಚಿಸಲಾಯಿತು
- ಪರಿಸರ ಸಮೃದ್ಧಿ ರೈತ ಉತ್ಪಾದಕರ ಕಂಪನಿ ನಿಯಮಿತ ಮೇವುಂಡಿ ತಾಲೂಕ್ ಮುಂಡರಿಗೆ ಹಾಗೂ ಸೊರ್ಟೂರ್ ಸಮಗ್ರ ತೋಟಗಾರಿಕೆ ರೈತ ಉತ್ಪಾದಕರ ಕಂಪನಿ ಸೊರ್ಟೂರ್ ತಾ/ಗದಗ್ ಹಾಗೂ ಶಿರಹಟ್ಟಿ.
ನಿರ್ದೇಶಕ ಮಂಡಳಿ ಸಭೆಯನ್ನು ಮಾಡಲಾಯಿತು ಹಾಗೂ ರೈತರಿಗಾಗಿ ತಾಡಪತ್ರಿ ಮಾರಾಟ ಮಾಡಲಾಯಿತು.
- ಸ್ವಾವಲಂಬನ ಅವಾರ್ಡ್ ಕಾರ್ಯಗಾರವನ್ನು ಗದಗ್ ಕೃಷಿ ಸಂಶೋಧನೆ ಕೇಂದ್ರದ ಆವರಣದಲ್ಲಿ ನಡೆಸಲಾಯಿತು.
ಈ ಕಾರ್ಯಗಾರದಲ್ಲಿ ಕೃಷಿ ವಿಶ್ವವಿದ್ಯಾಲಯ ಧಾರವಾಡ ದಿಂದ ಕುಲಪತಿಗಳು ಹಾಗೂ ಪ್ರೊಫೆಸರ್ ಹಾಗೂ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಕುಲಪತಿಗಳು ಮತ್ತು ಇತರೆ ಸರ್ಕಾರಿ ಇಲಾಖೆಯಿಂದ ಅಧಿಕಾರಿಗಳು ಭಾಗವಹಿಸಿದ್ದರು ಹಾಗೂ ಡೀಲ್
ಫೌಂಡೇಶನ್ ಸಂಸ್ಥೆ ಕಾರ್ಯನಿರ್ವಹಿಸುತ್ತಿರುವ ಗದಗ್ ಜಿಲ್ಲೆಯ ಏಳು ತಾಲೂಕಿನಿಂದ ವಿಕಲಚೇತನರು ಹಾಗೂ ಮಹಿಳಾ ಸ್ವಸಹಾಯ ಸಂಘದ ಸದಸ್ಯರು ಭಾಗವಹಿಸಿದ್ದರು. ಇದರಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ 8 ಸ್ವ ಸಹಾಯ ಸಂಘಗಳು ಬಹುಮಾನಗಳನ್ನು ಪಡೆದುಕೊಂಡರು.
- ಡೀಲ್ ಫೌಂಡೇಶನ್ ಸಂಸ್ಥೆಯ ತೊಟದಲ್ಲಿ ಎರೆಹುಳ ಗೊಬ್ಬರ ತಯಾರಿಕೆ ಮಾಡುವುದು ಮತ್ತು ಗೊಬ್ಬರ ತೆಗೆದು ಅದನ್ನು ಮೂರೂ ಎಕರೆ ತೊಟದಲ್ಲಿ ಹಾಕುವುದು ಮತ್ತು ವಸ್ತು ಪ್ರದರ್ಶನದಲ್ಲಿ ಎರೆಹುಳು ಗೊಬ್ಬರ ಮಾರಾಟ ಮಾಡುವುದು ಮತ್ತು ವಿಕಲಚೇತನ ಕುಟುಂಬಗಳಿಗೂ ಹಾಗೂ ಸ್ವಸಹಾಯ ಸಂಘಗಳಿಗೆ ಎರೆಹುಳ ಗೊಬ್ಬರ ತಯಾರಿಕೆ ಕುರಿತು ತರಬೇತಿಗಳನ್ನು ನೀಡುವುದು
8 ) ಡೀಲ್ ಫೌಂಡೇಶನ್ ಸಂಸ್ಥೆ ಮೇವುಂಡಿಯಲ್ಲಿ ವಿಕಲಚೇತನ ಕುಟುಂಬ ಹಾಗೂ ಮಹಿಳೆಯರಿಗಾಗಿ ಹೊಲಿಗೆ ತರಬೇತಿ ಕೇಂದ್ರವನ್ನು ಪ್ರಾರಂಭಿಸಿದ್ದು ಇದು ಸತತವಾಗಿ ನಾಲ್ಕು ವರ್ಷದಿಂದ ಹೊಲಿಗೆ ತರಬೇತಿ ಕೇಂದ್ರ ನಡೆಯುತ್ತಿದೆ. Deal-Foundation Mevundi -Tailoring Unit class
ಮುಂದಿನ ತಿಂಗಳ ಇವೆಂಟ ಮುಖ್ಯಾಂಶಗಳು:
- 200 ವಿಕಲಚೇತನರು ಸೇರಿದಂತೆ 20 ಹೊಸ ಸ್ವಸಹಾಯ ಗುಂಪುಗಳನ್ನು ಸ್ಥಾಪಿಸಲಾಗುವುದು.
- 10 SHG ಗಳಿಗೆ ಹಣಕಾಸಿನ ಸೇರ್ಪಡೆ ಮತ್ತು ಬ್ಯಾಂಕ್ ಸಂಪರ್ಕ ಕಲ್ಪಿಸುವುದು.
- 20 ಗುಂಪುಗಳ ಸಾಮರ್ಥ್ಯ ನಿರ್ಮಾಣ ಮತ್ತು ಜೀವನೋಪಾಯ ತರಬೇತಿ ನೀಡುವದು.
- ಮೇವುಂಡಿಯಲ್ಲಿ ಹೊಲಿಗೆ ತರಬೇತಿ ಹಾಗೂ ಉಡುಪುಗಳ ಸಿದ್ಧತೆ ಸೇವೆಯನ್ನು ಮುಂದುವರಿಸುವುದು.
- ಎರೆಹುಳ ಗೊಬ್ಬರ ತಯಾರಿಕೆ ಕೆಲಸ ಮುಂದುವರಿಸುವುದು
- ರೈತ ಉತ್ಪಾದಕರ ಕಂಪನಿ 250 ಹೊಸ ಸದಸ್ಯರ ಸೇರು ಸಂಗ್ರಹಿಸುವುದು (FPO ಕೆಲಸ.)
- ಸಹಕಾರಿ ಕೆಲಸ ಹಂಚಿಕೆ ಸೇರು ಮೊತ್ತ ಸಂಗ್ರಹಿಸುವ ಕೆಲಸ 50
- 10 ಗುಂಪುಗಳ ಜಾಗೃತಿ ತರಬೇತಿ ಮತ್ತು ಗುಂಪುವಾರು ತರಬೇತಿ
- ಆರಂಬ ಸ್ವ ಉದ್ಯೋಗ ಕೇಂದ್ರದ ಚಟುವಟಿಕೆಗಳನ್ನು ಮುಂದುವರಿಸುವುದು (ASK ಕೇಂದ್ರ ) ಹಾಗೂ ರೋಣದಲ್ಲಿ ಆರಂಭ ಸೌದೋಗ ಕೇಂದ್ರದ ಆಫೀಸನ್ನು ಹುಡುಕುವುದು.
- ಮುಂಡರಗಿ ಹೊರತುಪಡಿಸಿ ಉಳಿದ ತಾಲೂಕುಗಳಲ್ಲಾಸೇರಿ ಜಿಲ್ಲಾ ಸಹಕಾರಿ ಕೆಲಸ ನೊಂದಣಿ ಮಾಡಿಸಲು ಪೂರ್ವಭಾವಿ ಸಭೆ ಮಾಡುವುದು .
- ಡಿಲ್ – ಫೌಂಡೇಶನ್ ಸಂಸ್ಥೆ ವತಿಯಿಂದ ಗದಗನಲ್ಲಿ ಸ್ವಾವಲಂಬನ ಅವಾರ್ಡ್ ಕಾರ್ಯಕ್ರಮ ಏಳು ತಾಲೂಕಿನಿಂದ ಸುಮಾರು 250 ಸದಸ್ಯರನ್ನು ಸೇರಿಸುವುದು.