ವಿಕಲಚೇತನರ ಪ್ರಾತಿನಿಧ್ಯದ ಕೊರತೆಯಿಂದಾಗಿ ವಿಕಲಚೇತನ ವ್ಯಕ್ತಿಗಳು ತಮ್ಮ ಹಕ್ಕುಗಳ ಬಗ್ಗೆ, ಪ್ರಯೋಜನಗಳ ಬಗ್ಗೆ ಮತ್ತು ಸಮಾಜದ ಮಾಹಿತಿಯ ಬಗ್ಗೆ ತಿಳಿದಿರುವುದಿಲ್ಲ ಅಥವಾ ಅದರ ಅರಿವು ಹೊಂದಿರುವುದಿಲ್ಲ.
ಈ ಅನಾನುಕೂಲಗಳು ಮತ್ತು ಅಡೆತಡೆಗಳನ್ನು ಜಯಿಸಲು ಲಭ್ಯವಿರುವ ಯೋಜನೆಗಳು ಮತ್ತು ಅವುಗಳನ್ನು ಸದುಪಯೋಗಪಡಿಸಿಕೊಳ್ಳಲು ಇರುವ ಕಾರ್ಯವಿಧಾನಗಳನ್ನು ವಿಕಲಚೇತನರಿಗೆ ತಿಳಿಸಿಕೊಡಬೇಕು.ಇಂತಹ ಕಾರ್ಯವನ್ನು ಡೀಲ್ ಫೌಂಡೇಶನ್ ಸಂಸ್ಥೆಯು ಜಾಗೃತಿ ಮೂಡಿಸುವುದರ ಮೂಲಕ ವಿಕಲಚೇತನರ ಸ್ವಸಹಾಯ ಸಂಘ ಮಾಡುವುದರ ಮೂಲಕ ವಿಕಲಚೇತನರಿಗೆ ಮಾಹಿತಿಯ ಹಕ್ಕಿನ ಬಗ್ಗೆ ಜ್ಞಾನವನ್ನು ಹೆಚ್ಚಿಸುತ್ತಿದ್ದಾರೆ.ಪ್ರತಿ ತಾಲೂಕಿನಲ್ಲಿ ಲವ್ಲೀ ವುಡ್ ಆಫೀಸರ್ ವಿಕಲಚೇತನರೊಡನೆ ಕಾರ್ಯನಿರ್ವಹಿಸಿ ಅವರಿಗೆ ಸ್ವಾವಲಂಬನೆ ಜೀವನಕ್ಕಾಗಿ ಸ್ವ ಸಹಾಯ ಸಂಘಗಳ ಮೂಲಕ ಮಾಹಿತಿ ನೀಡಿ ತರಬೇತಿಗಳನ್ನು ನೀಡಿ ಸದೃಢರನ್ನಾಗಿ ಮಾಡುತ್ತಿದ್ದಾರೆ.ಇದರಿಂದ ವಿಕಲಚೇತನರು ಸಮಾಜದಲ್ಲಿ ಸಕ್ರಿಯವಾಗಿ ಸದಸ್ಯರಾಗಲು ಸಾಧ್ಯವಾಗುತ್ತಿದೆ.
ಅಂತಹ ವಿಕಲಚೇತನರ ಸ್ವಸಹಾಯ ಸಂಘದಲ್ಲಿ ನೋಡುವುದಾದರೆ ಶಿರಹಟ್ಟಿ ತಾಲೂಕಿನ ಶ್ರೀ ಪುಟ್ಟರಾಜ ವಿಕಲಚೇತನ ಸ್ವ ಸಹಾಯ ಸಂಘವು ಒಂದು.ಈ ಸಂಘವನ್ನು ಶಿರಹಟ್ಟಿ ತಾಲೂಕಿನ ಲವ್ಲೀ ವುಡ್ ಆಫೀಸರ್ ಆದ ರೇಖಾ ಮಡ್ಡಿ ಅವರು ಶಿರಹಟ್ಟಿ ತಾಲೂಕಿನಲ್ಲಿ ವಿಕಲಚೇತನರ ಮನೆಗಳಿಗೆ ಭೇಟಿ ನೀಡಿ ಅವರ ಮಾಹಿತಿಯನ್ನು ಪಡೆದುಕೊಂಡು ಅವರಿಗೆ ಸಂಘದ ಬಗ್ಗೆ ಮಾಹಿತಿ ಕೊಟ್ಟು ವಿಕಲಚೇತನರಿಗೆ ಸಿಗುವ ಸೌಲಭ್ಯಗಳ ಕುರಿತು ಮಾಹಿತಿ ನೀಡುತ್ತಾ ಹೋದರು.ಹೀಗೆ ಎಲ್ಲಾ ವಿಕಲಚೇತನರ ಮನೆಗಳಿಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು. ಇದರಿಂದ ಪ್ರೇರಿತಗೊಂಡು ವಿಕಲಚೇತನರು ಮತ್ತು ವಿಕಲಚೇತನತೆಯ ಮಕ್ಕಳು ತಾಯಂದಿರು ಸೇರಿ ನಾವು ಸ್ವಸಹಾಯ ಸಂಘವನ್ನು ಮಾಡುತ್ತೇವೆ ಎಂದು ಮುಂದೆ ಬಂದರು.ನಂತರ ರೇಖಾ ಅವರು ವಿಕಲಚೇತನರ ಮಕ್ಕಳ ತಾಯಂದಿರನ್ನು ಸೇರಿಸಿ ಒಟ್ಟು 11 ಜನ ವಿಕಲಚೇತನರೊಂದಿಗೆ ಸಂಘವನ್ನು ರಚಿಸಿಕೊಂಡರು ಅದಕ್ಕೆ ಶ್ರೀ ಪುಟ್ಟರಾಜ ವಿಕಲಚೇತನರ ಸ್ವಸಹಾಯ ಸಂಘ ಎಂದು ಹೆಸರಿಟ್ಟು ಎಲ್ಲ ದಾಖಲಾತಿಯೊಂದಿಗೆ ರೇಖಾ ಅವರು ಸಹಕಾರದಿಂದ ಕೆವಿಜಿ ಬ್ಯಾಂಕ್ ನಲ್ಲಿ ಖಾತೆಯನ್ನು ತೆರೆದರು.
ಹೀಗೆ ಎಲ್ಲ ವಿಕಲಚೇತನರು ಪ್ರತಿ ತಿಂಗಳು ನೂರು ರೂಪಾಯಿ ಉಳಿತಾಯವನ್ನು ತುಂಬಲು ತೀರ್ಮಾನಿಸಿದರು. ನಂತರ ಈ ಸಂಘಕ್ಕೆ ರೇಖಾ ಅವರು 2016ರ ಡಿಸೆಬಿಲಿಟಿ ಅವೆರ್ನೆಸ್ ತರಬೇತಿ,ಬುಕ್ ರೈಟಿಂಗ್ ತರಬೇತಿ,ಲೀಡರ್ಶಿಪ್ ತರಬೇತಿಯನ್ನು ನೀಡಿದರು. ಹೀಗೆ ಎಲ್ಲ ವಿಕಲಚೇತನರು ಯಾವುದೇ ಅಡಚಣೆ ಬರದ ಹಾಗೆ ಈ ಸಂಘವನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.
ನಂತರ ಉದ್ಯೋಗದ ತರಬೇತಿಗಳ ಬಗ್ಗೆ ರೇಖಾ ಅವರು ಮಾಹಿತಿಯನ್ನು ನೀಡಿದರು.ಅದು ನಿಮ್ಮ ಸಂಘದಿಂದ ಸಾಲವನ್ನು ಪಡೆದುಕೊಂಡು ಆಸಕ್ತಿ ಇರುವ ಉದ್ಯೋಗವನ್ನು ಮಾಡಿ ಸ್ವಾಲಂಬಿಗಳಾಗಿ ಬದುಕಿ ಎಂದು ಸ್ಪೂರ್ತಿ ನೀಡಿದರು. ಅದರಂತೆ ಸಂಘದ ಸದಸ್ಯರು ಬ್ಯಾಂಕ್ ಲೋನ್ ಪಡೆದುಕೊಳ್ಳಲು ಸಮಯ ಬೇಕಾಗುತ್ತದೆ ಜೊತೆಗೆ ಬ್ಯಾಂಕಿಗೆ ಬಡ್ಡಿ ಕಟ್ಟುವುದರ ಬದಲಾಗಿ ನಮ್ಮ ಸಂಘದ ಉಳಿತಾಯದಿಂದಲೇ ಮೊದಲು ನಾವು ಸಾಲವನ್ನು ಪಡೆದುಕೊಂಡು ಉದ್ಯೋಗದಲ್ಲಿ ತೊಡಗೋಣ ಎಂದು ಪ್ರತಿ ತಿಂಗಳ ಮೀಟಿಂಗ್ ನಲ್ಲಿ ಎಲ್ಲ ಸದಸ್ಯರು ಚರ್ಚೆ ಮಾಡಿ ತೀರ್ಮಾನಿಸಿದರು.ಅದರಂತೆ ಮೊದಲು ಅವಶ್ಯಕತೆ ಇರುವ ಸದಸ್ಯರಿಗೆ ಉಳಿತಾಯದಿಂದ ಸಾಲವನ್ನು ಕೊಡಲು ತೀರ್ಮಾನಿಸಿ ಈ ಸಂಘದಿಂದ ನಾಲ್ಕು ಜನ ವಿಕಲಚೇತನ ಸದಸ್ಯರು ಸಾಲವನ್ನು ಪಡೆದುಕೊಳ್ಳಲು ತೀರ್ಮಾನಿಸಿದರು.
ಅದೇ ರೀತಿ ರೇಖಾ ಅವರ ಸಹಕಾರದಿಂದ ಉಳಿತಾಯದಿಂದ ಶಿವಲೀಲಾ ಹಡಪದ ಇವರು 10,000 ಲೋನ್ ಪಡೆದುಕೊಂಡು ಕೃಷಿಗಾಗಿ ಮತ್ತು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸಾಲವನ್ನು ಪಡೆದುಕೊಂಡು ಮಕ್ಕಳಿಗೆ ಶಿಕ್ಷಣವನ್ನು ನೀಡುತ್ತಿದ್ದಾರೆ. ಅದೇ ರೀತಿ ಲಕ್ಷ್ಮಿ ತುಳಿ ಇವರು ಕೂಡ ಕೃಷಿಗಾಗಿ 10,000 ಲೋನ್ ಪಡೆದುಕೊಂಡು ಉದ್ಯೋಗ ಮಾಡುತ್ತಿದ್ದಾರೆ. ಹಾಗೆ ಶರಣಪ್ಪ ಹುಬ್ಬಳ್ಳಿ ಇವರು ಕೂಡ 5000 ಲೋನ್ ಪಡೆದುಕೊಂಡು ಸೆಂಟರಿಂಗ್ ಕೆಲಸ ಮಾಡುತ್ತಿದ್ದಾರೆ. ಹಾಗೆ ಉಡಚವ್ವ ಕಂಬಳಿ ಇವರು ಕೂಡ 10,000 ಸಾಲವನ್ನು ಪಡೆದುಕೊಂಡು ಕೃಷಿಗಾಗಿ ಮೆಷಿನ್ ಅನ್ನು ಕರೆದಿಸಿ ಉದ್ಯೋಗ ಮಾಡುತ್ತಿದ್ದಾರೆ. ಹೀಗೆ ಈ ಎಲ್ಲ ಸದಸ್ಯರು ಕೃಷಿಗಾಗಿ,ಶಿಕ್ಷಣಕ್ಕಾಗಿ ಸಾಲನ್ನು ಪಡೆದುಕೊಂಡು ಉದ್ಯೋಗದಲ್ಲಿ ತೊಡಗಿ ತಮ್ಮ ಆರ್ಥಿಕ ಜೀವನದಲ್ಲಿ ಸುಧಾರಣೆ ಹೊಂದುತ್ತಿದ್ದಾರೆ. ಇವರ ಈ ಸಾಲವನ್ನು ಜವಾಬ್ದಾರಿಯಿಂದ ಸರಿಯಾಗಿ ಸಾಲ ಮರುಪಾವತಿ ಮಾಡುತ್ತಿದ್ದಾರೆ.ಹೀಗೆ ಇವರ ನಂತರ ಉಳಿದ ಸದಸ್ಯರು ಕೂಡ ಸಾಲ ಪಡೆದುಕೊಂಡು ಉದ್ಯೋಗದಲ್ಲಿ ಇನ್ನು ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗ ಮಾಡಬೇಕೆಂದು ತೀರ್ಮಾನಿಸಿದ್ದಾರೆ.
ಈ ರೀತಿಯಾಗಿ ವಿಕಲಚೇತನರು ಸಂಘವನ್ನು ರಚಿಸಿಕೊಂಡು ಉದ್ಯೋಗದಲ್ಲಿ ತೊಡಗಿದ್ದಾರೆ.ಡೀಲ್ ಫೌಂಡೇಶನ್ ಸಂಸ್ಥೆಯು ಇಂತಹ ವಿಕಲಚೇತನರ ಮತ್ತು ಮಹಿಳೆಯರು ತಮ್ಮ ಸಂಘದಿಂದ ಲೋನ್ ಪಡೆದುಕೊಂಡು ಉದ್ಯೋಗ ಮಾಡಿ ಆರ್ಥಿಕವಾಗಿ ಬೆಳವಣಿಗೆ ಹೊಂದಿದ ಸ್ವಸಹಾಯ ಸಂಘವನ್ನು ಗುರುತಿಸಿ ಪ್ರತಿ ವರ್ಷ ಸ್ವಾವಲಂಬನೆ ಪ್ರಶಸ್ತಿ ಕಾರ್ಯಕ್ರಮವನ್ನು ಮಾಡುತ್ತಿದ್ದಾರೆ.ಅದರಲ್ಲಿ ಈ ರೀತಿಯಾಗಿ ಬೆಳವಣಿಗೆ ಹೊಂದಿದ ಸಂಘವನ್ನು ಗುರುತಿಸಿ ಇನ್ನು ಹೆಚ್ಚಿನ ಮಟ್ಟದಲ್ಲಿ ಬೆಳೆಯಲಿ ಎಂದು ಪ್ರೋತ್ಸಾಹ ತುಂಬುವುದರ ಮೂಲಕ ಸಂಘಗಳಿಗೆ ಪ್ರಶಸ್ತಿಯ ಮೂಲಕ ಧನ ಸಹಾಯ ಮಾಡಿದ್ದಾರೆ. ಅದಕ್ಕಾಗಿ ಈ ಸಂಘವು ಮೂರನೇ ಪ್ರಶಸ್ತಿಗೆ ಆಯ್ಕೆಯಾಗಿ 10,000 ಪ್ರಶಸ್ತಿಯನ್ನು ಪಡೆದುಕೊಂಡಿದೆ.ಇದರಿಂದ ಸಾಲವನ್ನು ಪಡೆದುಕೊಂಡು ವಿಕಲಚೇತನರು ಬೆಳೆಯಲಿ ಅನುಕೂಲವಾಗಲಿ ಎಂಬ ಉದ್ದೇಶದಿಂದ ಡೀಲ್ ಫೌಂಡೇಶನ್ ಸಂಸ್ಥೆಯು ಪ್ರತಿ ವರ್ಷ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದೆ.
ಹೀಗೆ ವಿಕಲಚೇತನರು ಡೀಲ್ ಫೌಂಡೇಶನ್ ನಿಂದ ತರಬೇತಿಯನ್ನು ಪಡೆದುಕೊಂಡು ಉದ್ಯೋಗ ಮಾಡಿ ಆರ್ಥಿಕವಾಗಿ ಮುಂದೆ ಬರುತ್ತಿದ್ದಾರೆ.ಇಷ್ಟೆಲ್ಲ ಸಹಕಾರ ಪಡೆದುಕೊಂಡ ಈ ಸಂಘದ ಸದಸ್ಯರು ಡೀಲ್ ಫೌಂಡೇಶನ್ ಸಂಸ್ಥೆಯ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.ಅದು ವಿಕಲಚೇತನರಿಗಾಗಿ ಇಂತಹ ಒಂದು ಸಂಸ್ಥೆ ಕಾರ್ಯ ನಿರ್ವಹಿಸುತ್ತಿರುವುದು ಹೆಮ್ಮೆಯ ವಿಚಾರ ಅದರಲ್ಲಿ ರೇಖಾ ಅವರು ಪ್ರತಿ ಮನೆಗಳಿಗೂ ಭೇಟಿ ನೀಡಿ ಮಾಹಿತಿ ಕೊಡುವುದರ ಮೂಲಕ ನಮ್ಮನ್ನು ಗುರುತಿಸಿ ಬೆಂಬಲಿಸಿ ಸಂಘವನ್ನು ರಚಿಸಿ ಕೊಟ್ಟರು.ಇದರಿಂದ ನಮ್ಮನ್ನು ನಾವು ಗುರುತಿಸಿಕೊಳ್ಳುವಂತಾಗಿದೆ. ಎಲ್ಲ ಮಾಹಿತಿಯನ್ನು ಕೂಡ ರೇಖಾ ಅವರು ನಮಗೆ ನೀಡುತ್ತಿದ್ದಾರೆ.ಈ ರೀತಿ ಉಳಿತಾಯ ಮಾಡುವುದರಿಂದ ಮುಂದಿನ ನಮ್ಮ ಮಕ್ಕಳ ಭವಿಷ್ಯಕ್ಕೆ ಅಲ್ಪ ಪ್ರಮಾಣದಲ್ಲಿ ಆದರೂ ಸಹಾಯಕವಾಗುತ್ತಿದೆ ಜೊತೆಗೆ ನಮಗೆ ತರಬೇತಿಯನ್ನು ನೀಡಿ ಉದ್ಯೋಗದಲ್ಲಿ ತೊಡಗುವಂತೆ ಬೆಂಬಲಿಸಿ ಇಷ್ಟೆಲ್ಲ ಸಹಕಾರ ನೀಡಿದ್ದಾರೆ ಜೊತೆಗೆ ನಮ್ಮ ಸಂಘವನ್ನು ಗುರುತಿಸಿ ಪ್ರಶಸ್ತಿ ನೀಡುವುದರ ಮೂಲಕ ಇನ್ನು ಹೆಚ್ಚಿನ ಬೆಂಬಲ ನೀಡುತ್ತಿರುವುದು ನಮಗೆ ಇನ್ನು ಹೆಚ್ಚಿನ ಆಸಕ್ತಿ ಬಂದಿದೆ.ಇಷ್ಟೆಲ್ಲ ಸಹಕಾರ ನೀಡುತ್ತಿರುವ ಡೀಲ್ ಫೌಂಡೇಶನ್ ಸಂಸ್ಥೆಗೆ ಹಾಗೂ ರೇಖಾ ಅವರಿಗೂ ನಮ್ಮ ಸಂಘದ ಸದಸ್ಯರೆಲ್ಲರ ಪರವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇವೆ.ಹೀಗೆ ಇನ್ನು ಹೆಚ್ಚಿನ ಪ್ರೋತ್ಸಾಹ ನೀಡಿ ನಮ್ಮ ಸಂಘವನ್ನು ಹೆಚ್ಚಿನ ಮಟ್ಟದಲ್ಲಿ ಗುರುತಿಸಿಕೊಳ್ಳುವಂತೆ ಮಾಡುತ್ತೇವೆ ಎಂಬ ಭರವಸೆಯನ್ನು ನೀಡಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
ಈ ರೀತಿಯಾಗಿ ಡೀಲ್ ಫೌಂಡೇಶನ್ ಸಂಸ್ಥೆಯು ವಿಕಲಚೇತನರಿಗಾಗಿ ಪ್ರತಿ ತಾಲೂಕಿನಲ್ಲಿ ಕಾರ್ಯ ನಿರ್ವಹಿಸಿ ವಿಕಲ ಚೇತನರ ಏಳಿಗೆಗಾಗಿ ಲವ್ಲೀ ವುಡ್ ಆಫೀಸರ್ಸ್ ಕಾರ್ಯನಿರ್ವಹಿಸುತ್ತಿದ್ದಾರೆ. ಹೀಗೆ ಇನ್ನು ಹೆಚ್ಚಿನ ಮಟ್ಟದಲ್ಲಿ ಡೀಲ್ ಫೌಂಡೇಶನ್ ಸಂಸ್ಥೆ ಬೆಳೆಯಲಿ ಎಂದು ಎಲ್ಲ ವಿಕಲಚೇತನ ಮತ್ತು ಮಹಿಳೆಯರು ಹಾರೈಸುತ್ತಿದ್ದಾರೆ.
ಈ ಬ್ಲಾಗ್ ಗೆ ಸಂಬಂಧಿಸಿದಂತೆ ಯಾವುದೇ ನಿರ್ದಿಷ್ಟ ಪ್ರಶ್ನೆಗಳಿಗೆ ಅಥವಾ ಯಾವುದೇ ಸಹಾಯಕ್ಕಾಗಿ Info@deal-foundation.com ನಲ್ಲಿ ತಿಳಿಸಿರಿ ಮತ್ತು ನಾವು ಮಾಡುವ ಕೆಲಸದ ಕುರಿತು ಇನ್ನಷ್ಟು ತಿಳಿದುಕೊಳ್ಳಲು www.deal-foundation ಗೆ ಲಾಗ್ ಇನ್ ಮಾಡಿ.
ಧನ್ಯವಾದಗಳು