ಡೀಲ್ ಫೌಂಡೇಶನ್ ಸಂಸ್ಥೆಯು ಗದಗ್ ಜಿಲ್ಲೆಯ 7 ತಾಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಜನವರಿ ತಿಂಗಳಲ್ಲಿ ನಡೆದ ಚಟುವಟಿಕೆಗಳು ಮತ್ತು ಇವೆಂಟುಗಳ ವಿವರ : —
1) ಜನವರಿ ತಿಂಗಳಲ್ಲಿ ವಿಕಲಚೇತನರ ಹಾಗೂ ಮಹಿಳೆಯರ ಸ್ವಸಹಾಯ ಸಂಘ ರಚನೆ ಮಾಡಿದ ವಿವರಗಳು ಈ ಕೆಳಗಿನಂತಿವೆ.
ಈ ತಿಂಗಳಲ್ಲಿ ಗದಗ, ಮುಂಡರಗಿ ಮತ್ತು ಶಿರಹಟ್ಟಿ ತಾಲೂಕಿನಲ್ಲಿ ಒಟ್ಟು 1 ಸ್ವಸಹಾಯ ಸಂಘಗಳನ್ನು ರಚನೆ ಮಾಡಿದ್ದು 10 ಸದಸ್ಯರಿದ್ದಾರೆ 1 ವಿಕಲಚೇತನರ ಸ್ವಸಹಾಯ ಸಂಘ ಒಟ್ಟು 10 ವಿಕಲಚೇತನ ಸದಸ್ಯರು. 0 ಮಹಿಳಾ ಸ್ವಸಹಾಯ ಸಂಘ 0 ಸದಸ್ಯರು ಇದರ ಉದ್ದೆಶ ವಿಕಲಚೇತನ ಸದಸ್ಯರು ಸ್ವಯಂ ಉದ್ಯೋಗ ಮಾಡಲು ಬ್ಯಾಂಕನಿಂದ ಸಾಲ ಪಡೆದು ಹೈನುಗಾರಿಕೆ ಕೃಷಿ ಕುರಿ ಆಡು ಸಾಕಾಣಿಕೆ ಇನ್ನು ಅನೇಕ ಉದ್ದೋಗ ಮಾಡುವದಕ್ಕಾಗಿ ಸಂಘ ರಚನೆ ಮಾಡಲಾಗಿದೆ.




- ಗ್ರಾಮ ದೇವತೆ ವಿಕಲಚೇತನರ ಸ್ವಸಹಾಯ ಸಂಘ ಚಿಕ್ಕಪ್ಪ ಚಿಕ್ಕೂಪ್ಪ ತಾಲೂಕ ಗದಗ್
2 ) ಗದಗ ಶಿರಹಟ್ಟಿ ಹಾಗೂ ಗಜೇಂದ್ರಗಡ ,ನರಗುಂದ , ಮುಂಡರಗಿ ತಾಲೂಕಿನಲ್ಲಿ ಒಟ್ಟು 1 ವಿಕಲಚೇತನರ ಸಂಘ ಒಟ್ಟು10 ಸದಸ್ಯರು 1 ಮಹಿಳಾ ಸ್ವಸಹಾಯ ಸಂಘ 10 ಸದಸ್ಯರು ಹಣಕಾಸಿನ ವ್ಯವಹಾರ ಮಾಡಲು ಹಣ ಹಾಕುವುದು ತೆಗೆಯುವುದು ಬ್ಯಾಂಕ್ ಸಾಲ ಸೌಲಭ್ಯ ಹೊಂದುವ ಸಲುವಾಗಿ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಕೆನರಾ ಬ್ಯಾಂಕ್ ನಲ್ಲಿ ಸಂಘಗಗಳ ಹೆಸರಿನಲ್ಲಿ ಉಳಿತಾಯ ಖಾತೆಯನ್ನು ತೆರೆಯಲಾಗಿದೆ.
- ಗ್ರಾಮ ದೇವತೆ ವಿಕಲಚೇತನರ ಸ್ವಸಹಾಯ ಸಂಘ ಚಿಕ್ಕಪ್ಪ ಚಿಕ್ಕೂಪ್ಪ ತಾಲೂಕ ಗದಗ್ ಹಾಗೂ
- ಹುಚ್ಚಿರೇಶ್ವರ ಮಹಿಳಾ ಸ್ವಸಹಾಯ ಸಂಘ ನೆರೆಗಲ್ ತಾಲೂಕ ಗಜೇಂದ್ರಗಡ




- ನರಗುಂದ ಶಿರಹಟ್ಟಿ ಮುಂಡರಗಿ ತಾಲೂಕುಗಳಲ್ಲಿ 2 ವಿಕಲಚತನರ ಸ್ವ ಸಹಾಯ ಸಂಘದ ಒಟ್ಟು 20 ಸದಸ್ಯರಿಗೆ 5 ಮಹಿಳಾ ಸಂಘ 50 ಸದಸ್ಯರಿಗೆ ಹಾಗೂ ವಿಕಲಚೇತನರ ಜಾಗೃತಿ ತರಬೇತಿ ಆರ್ಥಿಕ ಹಣಕಾಸು ತರಭೇತಿ ಮತ್ತು ನಾಯಕತ್ವ ತರಬೇತಿ . ಉದ್ಯಮಶೀಲತೆ ತರಬೇತಿ ಮತ್ತು ಸುಸ್ಥಿರ ಜೀವನೋಪಾಯ ತರಬೇತಿಯನ್ನು ವಿಕಲಚೇತನ ಗುಂಪಿನ ಸದಸ್ಯರಿಗೆ ನಡೆಸಲಾಯಿತು






- ದಿವ್ಯಜೋತಿ ವಿಕಲಚೇತನರ ಸ್ವಸಹಾಯ ಸಂಘ ಖಾನಾಪುರ ತಾಲೂಕ್ ಶಿರಹಟ್ಟಿ ಹಾಗೂ
- ಬನಶ್ರೀ ಮಹಿಳಾ ಸ್ವಸಹಾಯ ಸಂಘ ಖಾನಾಪುರ ತಾಲೂಕ್, ಶಿರಹಟ್ಟಿ ಹಾಗೂ
- ಬೇವಿನ ಮರದಮ್ಮ ವಿಕಲಚೇತನರ ಸ್ವಸಾಯ ಸಂಘ ಹಾತಲಗೇರಿ ತಾಲೂಕ್ ಗದಗ
- ಸಿದ್ದಾರೂಢ ವಿಕಲಚೇತನರ ಸ್ವಸಹಾಯ ಸಂಘ ಬೆಲೊಡ ತಾಲೂಕು ಗದಗ್ ಹಾಗೂ
- ಅನುರಾಗ ವಿಕಲಚೇತನರ ಸ್ವಸಹಾಯ ಸಂಘ ಕಳಸಾಪುರ ತಾಲೂಕ್ ಗದಗ್ ಹಾಗೂ
- ನವಚೇತನ ವಿಕಲಚೇತನರ ಸ್ವಸಹಾಯ ಸಂಘ ಜಲ್ಲಿಗೇರಿ ತಾಲೂಕ ಶಿರಹಟ್ಟಿ ಹಾಗೂ
- ಹೊಸ ಬೆಳಕು ವಿಕಲಚೇತನರ ಸ್ವಸಹಾಯ ಸಂಘ ದೇವಿಹಾಳ ತಾಲೂಕ ಶಿರಹಟ್ಟಿ ಹಾಗೂ
- ಎಲ್ಲಮ್ಮ ದೇವಿ ವಿಕಲಚೇತನರ ಸ್ವಸಹಾಯ ಸಂಘ ಶ್ರೀಮಂತಗಡ ತಾಲೂಕ್ ಶಿರಹಟ್ಟಿ ಹಾಗೂ
- ಕಲ್ಮೇಶ್ವರ ವಿಕಲಚೇತನರ ಸ್ವಸಹಾಯ ಸಂಘ ಮದ್ದೂರು ತಾಲೂಕ್ ಶಿರಹಟ್ಟಿ ಹಾಗೂ
- ಶ್ರೀ ಪುಟ್ಟರಾಜ ವಿಕಲಚೇತನರ ಸ್ವಸಹಾಯ ಸಂಘ ಶಿರಹಟ್ಟಿ ತಾಲೂಕು ಶಿರಹಟ್ಟಿ ಹಾಗೂ
- ಮಣಿಕಂಠ ವಿಕಲಚೇತನರ ಸ್ವಸಹಾಯ ಸಂಘ ಸೊರಟೂರು ತಾಲೂಕ್ ಗದಗ್ ಹಾಗೂ
- ಹುಚ್ಚಿರೇಶ್ವರ ಮಹಿಳಾ ಸ್ವಸಹಾಯ ಸಂಘ ನೆರಗಲ್ ತಾಲೂಕ್ ಗಜೇಂದ್ರಗಡ
- ಮುಂಡರಗಿ ತಾಲೂಕಿನಲ್ಲಿ ಮೇವುಂಡಿ ಗ್ರಾಮದಲ್ಲಿರುವ ಸುರಕ್ಷಿತ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯಲ್ಲಿ ಮಂಡಳಿಯ ಸಭೆಯನ್ನು ನಡೆಸಲಾಯಿತು ಸಭೆಯಲ್ಲಿ ಸೊಸೈಟಿಯ ಕಾರ್ಯ ಚಟುವಟಿಕೆಗಳ ಚರ್ಚಿಸಲಾಯಿತು ಹಾಗೂ ಜಿಲ್ಲಾ ಸಂರಕ್ಷಣಾ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯಲ್ಲಿ ಸೇರು ಸದಸ್ಯರಾಗಲು ಸಂಘ ಮತ್ತು ಸದಸ್ಯರೊಂದಿಗೆ ಚರ್ಚಿಸಲಾಯಿತು




- ಪರಿಸರ ಸಮೃದ್ಧಿ ರೈತ ಉತ್ಪಾದಕರ ಕಂಪನಿ ನಿಯಮಿತ ಮೇವುಂಡಿ ತಾಲೂಕ್ ಮುಂಡರಿಗೆ ಹಾಗೂ ಸೊರ್ಟೂರ್ ಸಮಗ್ರ ತೋಟಗಾರಿಕೆ ರೈತ ಉತ್ಪಾದಕರ ಕಂಪನಿ ಸೊರ್ಟೂರ್ ತಾ/ಗದಗ್ ಹಾಗೂ ಶಿರಹಟ್ಟಿ.
ನಿರ್ದೇಶಕ ಮಂಡಳಿ ಸಭೆಯನ್ನು ಮಾಡಲಾಯಿತು ಹಾಗೂ ರೈತರಿಗಾಗಿ ತಾಡಪತ್ರಿ ಮಾರಾಟ ಮಾಡಲಾಯಿತು.




- ಡೀಲ್ ಫೌಂಡೇಶನ್ ಸಂಸ್ಥೆ ಗದಗ್ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ಏಳು ತಾಲೂಕುಗಳಲ್ಲಿ ಮಹಿಳಾ ಸ್ವಸಹಾಯ ಸಂಘಗಳ ಹಾಗೂ ವಿಕಲಚೇತನರ ಸ್ವಸಹಾಯ ಸಂಘಗಳಲ್ಲಿ ಪ್ರತಿ ತಿಂಗಳು ಸಭೆ ಮಾಡಿದ ಚಟುವಟಿಕೆಗಳ ವಿವರಣೆಗಳು






- ಡೀಲ್ ಫೌಂಡೇಶನ್ ಸಂಸ್ಥೆಯ ತೊಟದಲ್ಲಿ ಎರೆಹುಳ ಗೊಬ್ಬರ ತಯಾರಿಕೆ ಮಾಡುವುದು ಮತ್ತು ಗೊಬ್ಬರ ತೆಗೆದು ಅದನ್ನು ಮೂರೂ ಎಕರೆ ತೊಟದಲ್ಲಿ ಹಾಕುವುದು ಮತ್ತು ವಸ್ತು ಪ್ರದರ್ಶನದಲ್ಲಿ ಎರೆಹುಳು ಗೊಬ್ಬರ ಮಾರಾಟ ಮಾಡುವುದು ಮತ್ತು ವಿಕಲಚೇತನ ಕುಟುಂಬಗಳಿಗೂ ಹಾಗೂ ಸ್ವಸಹಾಯ ಸಂಘಗಳಿಗೆ ಎರೆಹುಳ ಗೊಬ್ಬರ ತಯಾರಿಕೆ ಕುರಿತು ತರಬೇತಿಗಳನ್ನು ನೀಡುವುದು










8 ) ಡೀಲ್ ಫೌಂಡೇಶನ್ ಸಂಸ್ಥೆ ಮೇವುಂಡಿಯಲ್ಲಿ ವಿಕಲಚೇತನ ಕುಟುಂಬ ಹಾಗೂ ಮಹಿಳೆಯರಿಗಾಗಿ ಹೊಲಿಗೆ ತರಬೇತಿ ಕೇಂದ್ರವನ್ನು ಪ್ರಾರಂಭಿಸಿದ್ದು ಇದು ಸತತವಾಗಿ ನಾಲ್ಕು ವರ್ಷದಿಂದ ಹೊಲಿಗೆ ತರಬೇತಿ ಕೇಂದ್ರ ನಡೆಯುತ್ತಿದೆ. Deal-Foundation Mevundi -Tailoring Unit class








ಮುಂದಿನ ತಿಂಗಳ ಇವೆಂಟ ಮುಖ್ಯಾಂಶಗಳು:
- 50 ವಿಕಲಚೇತನರು ಸೇರಿದಂತೆ 05 ಹೊಸ ಸ್ವಸಹಾಯ ಗುಂಪುಗಳನ್ನು ಸ್ಥಾಪಿಸಲಾಗುವುದು.
- 10 SHG ಗಳಿಗೆ ಹಣಕಾಸಿನ ಸೇರ್ಪಡೆ ಮತ್ತು ಬ್ಯಾಂಕ್ ಸಂಪರ್ಕ ಕಲ್ಪಿಸುವುದು.
- 20 ಗುಂಪುಗಳ ಸಾಮರ್ಥ್ಯ ನಿರ್ಮಾಣ ಮತ್ತು ಜೀವನೋಪಾಯ ತರಬೇತಿ ನೀಡುವದು.
- ಮೇವುಂಡಿಯಲ್ಲಿ ಹೊಲಿಗೆ ತರಬೇತಿ ಹಾಗೂ ಉಡುಪುಗಳ ಸಿದ್ಧತೆ ಸೇವೆಯನ್ನು ಮುಂದುವರಿಸುವುದು.
- ಎರೆಹುಳ ಗೊಬ್ಬರ ತಯಾರಿಕೆ ಕೆಲಸ ಮುಂದುವರಿಸುವುದು
- ರೈತ ಉತ್ಪಾದಕರ ಕಂಪನಿ 250 ಹೊಸ ಸದಸ್ಯರ ಸೇರು ಸಂಗ್ರಹಿಸುವುದು (FPO ಕೆಲಸ.)
- ಸಹಕಾರಿ ಕೆಲಸ ಹಂಚಿಕೆ ಸೇರು ಮೊತ್ತ ಸಂಗ್ರಹಿಸುವ ಕೆಲಸ 50
- 10 ಗುಂಪುಗಳ ಜಾಗೃತಿ ತರಬೇತಿ ಮತ್ತು ಗುಂಪುವಾರು ತರಬೇತಿ
- ಆರಂಬ ಸ್ವ ಉದ್ಯೋಗ ಕೇಂದ್ರದ ಚಟುವಟಿಕೆಗಳನ್ನು ಮುಂದುವರಿಸುವುದು (ASK ಕೇಂದ್ರ ) ಹಾಗೂ ರೋಣದಲ್ಲಿ ಆರಂಭ ಸೌದೋಗ ಕೇಂದ್ರದ ಆಫೀಸನ್ನು ಹುಡುಕುವುದು.
- ಮುಂಡರಗಿ ಹೊರತುಪಡಿಸಿ ಉಳಿದ ತಾಲೂಕುಗಳಲ್ಲಾಸೇರಿ ಜಿಲ್ಲಾ ಸಹಕಾರಿ ಕೆಲಸ ನೊಂದಣಿ ಮಾಡಿಸಲು ಪೂರ್ವಭಾವಿ ಸಭೆ ಮಾಡುವುದು .