ವಿಕಲಚೇತನ ವ್ಯಕ್ತಿಗಳಿಗೆ ಸುಸ್ಥಿರ ಜೀವನೋಪಾಯದ ಅವಕಾಶವನ್ನು ಸೃಷ್ಟಿಸಲು ಕೆಲಸ ಮಾಡುವುದು ಮತ್ತು ಅವರ ಮಾಲೀಕತ್ವದ ನಡೆಸುತ್ತಿರುವ ಮತ್ತು ನಿರ್ವಹಿಸುವ ಉದ್ಯಮಗಳ ಅಭಿವೃದ್ಧಿಯನ್ನು ಬೆಂಬಲಿಸುವುದು ಡೀಲ್ ಫೌಂಡೇಶನ್ ಸಂಸ್ಥೆಯ ಪ್ರಮುಖ ಕಾರ್ಯವಾಗಿದೆ.
ಸಾಮಾಜಿಕ ಮತ್ತು ಆರ್ಥಿಕ ಪುನರ್ವಸತಿ,ಚೇತರಿಕೆ ಮತ್ತು ಸ್ಥಿತಿಸ್ಥಾಪಕತ್ವಕ್ಕೆ ಕಾರಣವಾಗುವ ಪರಿಣಾಮಕಾರಿ ಪ್ರಕ್ರಿಯೆಯನ್ನು ಮಾಡಲು ಡೀಲ್ ಫೌಂಡೇಶನ್ ಸಂಸ್ಥೆಯು ಆಸಕ್ತಿ ಮತ್ತು ಸ್ಥಳದ ಸಮುದಾಯದಾದ್ಯಂತ ಕೆಲಸ ಮಾಡುತ್ತದೆ.ಗ್ರಾಮೀಣ ಪ್ರದೇಶಗಳಲ್ಲಿನ ವಿಕಲಚೇತನರ ಸಮುದಾಯಗಳನ್ನು ನಿಜವಾದ ಸ್ವಾವಲಂಬಿಗಳನ್ನಾಗಿ ಮಾಡಲು ಸಮುದಾಯದ ಒಡೆತನವು ಒಂದು ಮಾರ್ಗವಾಗಿದೆ.ಅದರಂತೆ ವಿಕಲಚೇತನತೆ ಮತ್ತು ಸ್ವಸಹಾಯ ಗುಂಪುಗಳನ್ನು ಹೊಂದಿರುವ ಸಶಕ್ತ ಮತ್ತು ಪ್ರೇರಿತ ವ್ಯಕ್ತಿಗಳನ್ನು ರಚಿಸುವ ಮೂಲಕ ಒಬ್ಬರು ಪ್ರಾರಂಭಿಸಬೇಕು ಮತ್ತು ಅವರು ಪ್ರಾರಂಭಿಸಿದ ಜೀವನೋಪಾಯ ಮತ್ತು ಉದ್ಯಮಶೀಲತೆಯ ಅಭಿವೃದ್ಧಿ ಚಟುವಟಿಕೆಗಳ ಉಸ್ತುವಾರಿಯನ್ನು ವಹಿಸಿಕೊಳ್ಳಬೇಕು ಅಂದಾಗ ಮಾತ್ರ ಯಶಸ್ಸು ಸಿಗಲು ಸಾಧ್ಯ ಎಂದು ಡೀಲ್ ಫೌಂಡೇಶನ್ ಸಂಸ್ಥೆಯು ಪ್ರತಿ ವಿಕಲಚೇತನರಲ್ಲಿ ಮನಮುಟ್ಟುವಂತೆ ಕಾರ್ಯನಿರ್ವಹಿಸುತ್ತಿದೆ.
ಅದರಂತೆ ವಿಕಲಚೇತನರು ಸ್ವ ಸಹಾಯ ಸಂಘ ರಚಿಸಿಕೊಂಡು ಸ್ವಾವಲಂಬನೆ ಜೀವನ ನಡೆಸುತ್ತಾ ಅನೇಕ ವಿಕಲಚೇತನರಿಗೆ ಮಾದರಿಯಾಗಿದ್ದಾರೆ.ಅಂತಹ ಸ್ವಸಹಾಯ ಸಂಘಗಳಲ್ಲಿ ದುರ್ಗಾ ಶಕ್ತಿ ವಿಕಲಚೇತನ ಸ್ವಸ್ಥಾಯ ಸಂಘವು ಕೂಡ ಒಂದು.ಈ ಸಂಘದ ಬಗ್ಗೆ ಹೇಳುವುದಾದರೆ ಮುಂಡರಗಿ ತಾಲೂಕಿನ ಲವ್ಲಿ ವುಡ್ ಆಫೀಸರ್ ಆದ ರೇಣುಕಾ ಕಲ್ಲಳ್ಳಿ ಇವರು ಮುಂಡರಗಿ ತಾಲೂಕಿನಲ್ಲಿ ವಿಕಲಚೇತನರು ಮತ್ತು ಮಹಿಳೆಯರ ಸ್ವಸಹಾಯ ಸಂಘಗಳನ್ನು ರಚಿಸಿ ಅವರಿಗೆ ತರಬೇತಿಗಳನ್ನು ನೀಡಿ ಉದ್ಯೋಗದಲ್ಲಿ ತೊಡುವಂತೆ ಮಾಡಿದ್ದಾರೆ.ಅದೇ ರೀತಿ ಕೊರ್ಲಳ್ಳಿ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಅಲ್ಲಿನ ವಿ ಆರ್ ಡಬ್ಲ್ಯೂ ಅವರಿಗೆ ಡೀಲ್ ಫೌಂಡೇಶನ್ ಸಂಸ್ಥೆಯ ಬಗ್ಗೆ ಮತ್ತು ಕಾರ್ಯ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿ ಅಲ್ಲಿನ ವಿಕಲಚೇತನರ ಮಾಹಿತಿಯನ್ನು ಪಡೆದುಕೊಂಡರು.
ನಂತರ ರೇಣುಕಾ ಅವರು ವಿಕಲಚೇತನ ಮನೆಗಳಿಗೆ ಭೇಟಿ ನೀಡಿ ಸರ್ವೇ ಮಾಡಿ ಅವರಿಗೆ ಡೀಲ್ ಫೌಂಡೇಶನ್ ಸಂಸ್ಥೆಯ ಬಗ್ಗೆ ಮಾಹಿತಿ ನೀಡಿದರು.ಹಾಗೆ ಅಲ್ಲಿನ ಹತ್ತು ಜನ ವಿಕಲಚೇತನರನ್ನು ಸೇರಿಸಿ ಅವರಿಗೆ ಸ್ವಸಹಾಯ ಸಂಘದ ಬಗ್ಗೆ ಮಾಹಿತಿ ನೀಡಿ ಸ್ವ ಸಹಾಯ ಸಂಘ ರಚಿಸುವುದರಿಂದ ಸಿಗುವ ಅನುಕೂಲತೆಗಳ ಬಗ್ಗೆ ಮಾಹಿತಿಯನ್ನು ನೀಡಿದರು.ನಂತರ ಅಲ್ಲಿನ ವಿಕಲಚೇತನರು ಸ್ವಸಹಾಯ ಸಂಘ ರಚಿಸಿಕೊಂಡು ತಮ್ಮದೇ ಆದ ಸಂಘವನ್ನು ಕಟ್ಟಿಕೊಂಡರು.ಆ ಸಂಘಕ್ಕೆ ರೇಣುಕಾ ಅವರು ಪ್ರತಿ ತಿಂಗಳು ಭೇಟಿ ನೀಡಿ ಮಾಹಿತಿಯನ್ನು ಕೊಡುತ್ತಿದ್ದರು.
ಹೀಗೆ ಒಂದು ದಿನ ರೇಣುಕಾ ಅವರು ರಚಿಸಿದ ವಿಕಲಚೇತನ ಸಂಘವನ್ನು ಕಂಡು ಉಳಿದ ಆಸಕ್ತಿ ಹೊಂದಿದ ವಿಕಲಚೇತನರು ತಾವೇ ಬಂದು ರೇಣುಕಾ ಅವರಿಗೆ ನಾವು ಸ್ವಸಹಾಯ ಸಂಘವನ್ನು ಮಾಡುತ್ತೇವೆ ಅದರಿಂದ ಅನುಕೂಲತೆಗಳನ್ನು ಪಡೆದುಕೊಂಡು ಉದ್ಯೋಗಕ್ಕೆ ತೊಡಗುತ್ತೇವೆ ಎಂದು ತಮ್ಮ ಅಭಿಪ್ರಾಯವನ್ನು ರೇಣುಕಾ ಅವರಿಗೆ ಹೇಳಿದರು.ಅದರಂತೆ ಅಲ್ಲಿನ 11 ಜನ ವಿಕಲಚೇತನರನ್ನು ಸೇರಿಸಿ ಸಂಘವನ್ನು ರಚಿಸಿದರು. ಅದಕ್ಕೆ “ದುರ್ಗಾ ಶಕ್ತಿ ವಿಕಲಚೇತನ ಸ್ವಸಹಾಯ ಸಂಘ”ಎಂದು ಹೆಸರಿಟ್ಟು ಕೆವಿಜಿ ಬ್ಯಾಂಕ್ ನಲ್ಲಿ ಖಾತೆಯನ್ನು ತೆರೆದರು.ಪ್ರತಿ ತಿಂಗಳು 100 ರೂಪಾಯಿ ಉಳಿತಾಯ ಕಟ್ಟುವುದು ಎಂದು ತೀರ್ಮಾನಿಸಿದರು.
ನಂತರ ಈ ಸಂಘಕ್ಕೆ ರೇಣುಕಾ ಅವರು ಬುಕ್ ರೈಟಿಂಗ್ ತರಬೇತಿ,2016ರ ಡಿಸೆಬಿಲಿಟಿ ಅವರ್ನೆಸ್ ತರಬೇತಿ,ಲೀಡರ್ಶಿಪ್ ತರಬೇತಿ ಮತ್ತು ಸರಕಾರದಿಂದ ಹಾಗೂ ಅನೇಕ ಇಲಾಖೆ ಇಂದ ಸಿಗುವ ಸೌಲಭ್ಯಗಳ ಕುರಿತು ಮಾಹಿತಿಯನ್ನು ನೀಡಿದರು. ನಂತರ ಡೀಲ್ ಫೌಂಡೇಶನ್ ವತಿಯಿಂದ ಉದ್ಯೋಗದ ತರಬೇತಿಗಳಾದ ಜೇನು ಸಾಕಾಣಿಕೆ ತರಬೇತಿ, ಹೈನುಗಾರಿಕೆ ತರಬೇತಿ, ಕುಂಕುಮ ತರಬೇತಿ,ಪೇಪರ್ ಬ್ಯಾಗ್ ತರಬೇತಿ, ಮೇಣದಬತ್ತಿಯ ತರಬೇತಿ ಮುಂತಾದ ತರಬೇತಿಗಳನ್ನು ರೇಣುಕಾ ಅವರು ಈ ಸಂಘಕ್ಕೆ ನೀಡಿದರು.ಇದರಿಂದ ಉದ್ಯೋಗದಲ್ಲಿ ಆಸಕ್ತಿ ಹೊಂದಿದ ವಿಕಲಚೇತನರು ಬ್ಯಾಂಕಿನಿಂದ ಅಥವಾ ಉಳಿತಾಯದಿಂದ ಸಾಲವನ್ನು ಪಡೆದುಕೊಂಡು ಉದ್ಯೋಗದಲ್ಲಿ ತೊಡಗಲು ಆಸಕ್ತಿ ಹೊಂದಿದರು.
ಇಷ್ಟೇ ಅಲ್ಲದೆ ಡೀಲ್ ಫೌಂಡೇಶನ್ ಸಂಸ್ಥೆಯು ವಿಕಲಚೇತನರು ಬ್ಯಾಂಕಿನಿಂದ ಎದುರಿಸುತ್ತಿರುವ ತೊಂದರೆಗಳನ್ನು ಗಮನಿಸಿ ವಿಕಲಚೇತನರಿಗೆ ಆ ತೊಂದರೆಯನ್ನು ತಪ್ಪಿಸಲು ಹಾಗೂ ವಿಕಲಚೇತನರಿಗೆ ಇನ್ನೂ ಹೆಚ್ಚಿನ ಅನುಕೂಲವಾಗಲಿ ಎಂದು ಮುಂಡರಗಿ ತಾಲೂಕು ಮಟ್ಟದಲ್ಲಿ ಮೆವುಂಡಿ ಗ್ರಾಮದಲ್ಲಿ “ಸುರಕ್ಷಿತ ವಿಕಲಚೇತನ ಕೋ ಆಪರೇಟಿವ್ ಸೊಸೈಟಿ”ಯನ್ನು ಆರಂಭಿಸಿದರು.ಇದರಲ್ಲಿ ವಿಕಲಚೇತನರು ಷೇರುದಾರರಾದರೆ ಕಡಿಮೆ ಬಡ್ಡೆಯಲ್ಲಿ ಸಾಲ ಹಾಗೂ ಠೇವಣಿ ಇಡುವುದರಿಂದ ಹೆಚ್ಚಿನ ಬಡ್ಡಿಯು ಅನುಕೂಲತೆಗಳು ಸಿಗುತ್ತವೆ. ಒಟ್ಟಾರೆಯಾಗಿ ಬೇರೆ ಬ್ಯಾಂಕಿಗಿಂತ ಹೆಚ್ಚಿನ ಅನುಕೂಲತೆಗಳು ಈ ಸೊಸೈಟಿಯಲ್ಲಿ ಸಿಗುತ್ತವೆ.ಇದು ವಿಕಲಚೇತನರಾಗಿ ಮಾತ್ರ ಇರುವಂತ ಸೊಸೈಟಿ ಆಗಿದೆ. ಆದ್ದರಿಂದ ಇದರ ಮಾಹಿತಿಯನ್ನು ದುರ್ಗಾ ಶಕ್ತಿ ಸಂಘದ ವಿಕಲಚೇತನರಿಗೆ ರೇಣುಕಾ ಅವರು ನೀಡಿದರು. ಅದರಂತೆ ಸಂಘದ ಸದಸ್ಯರೆಲ್ಲರೂ ಶೇರುದಾರರಾಗಿ ಅದರಿಂದ ಸೌಲಭ್ಯಗಳನ್ನು ಪಡೆದುಕೊಂಡರು.
ಈ ಸಂಘದಿಂದ ಕೋ ಆಪರೇಟಿವ್ ಸೊಸೈಟಿಯಲ್ಲಿ ಶೇರುದಾರರಾಗಿ ಸಾಲವನ್ನು ಪಡೆದುಕೊಂಡಿದ್ದಾರೆ.ಅದರಲ್ಲಿ ರೇಣವ್ವ ಕೊಂಚಿಗೇರಿ ಇವರು ಮೊದಲು 10000 ಸಾಲವನ್ನು ಪಡೆದುಕೊಂಡು ಹೈನುಗಾರಿಕೆ ಉದ್ಯೋಗ ಆರಂಭಿಸಿದರು. ಈ ಸಾಲವನ್ನು ಯಾವುದೇ ಕಟ್ಟು ಬಾಕಿ ಉಳಿಸದೆ ಮರುಪಾವತಿ ಮಾಡಿದರು. ನಂತರ ಎರಡನೇ ಸಾರಿ ರೆಣವ್ವ ಕೊಂಚಿಗೇರಿ ಇವರು 20000 ಸಾಲವನ್ನು ಪಡೆದುಕೊಂಡು ಹೈನುಗಾರಿಕೆ ಉದ್ಯೋಗದಲ್ಲಿ ಮುಂದುವರೆದಿದ್ದಾರೆ. ಇದರಿಂದ ಅವರ ಕುಟುಂಬಕ್ಕೂ ಅನುಕೂಲವಾಗಿದೆ.ಅದೇ ರೀತಿ ಲಕ್ಷ್ಮವ್ವ ಕೊಂಚಿಗೇರಿ ಇವರು ಕೂಡ 10,000 ಸಾಲ ಪಡೆದುಕೊಂಡು ಈ ಸಾಲದ ಜೊತೆಗೆ ಮನೆಯವರ ಸಹಕಾರದೊಂದಿಗೆ ಆಕಳು ಖರೀದಿಸಿ ಹೈನುಗಾರಿಕೆ ಉದ್ಯೋಗ ಮಾಡುತ್ತಿದ್ದಾರೆ. ಹೀಗೆ ಇವರನ್ನು ಕಂಡು ಉಳಿದ ಸದಸ್ಯರು ಕೂಡ ಉದ್ಯೋಗದಲ್ಲೇ ತೊಡಗಲು ಮುಂದೆ ಬರುತ್ತಿದ್ದಾರೆ.
ಇಷ್ಟೆಲ್ಲ ಸಹಕಾರ ನೀಡಿದ ಡೀಲ್ ಫೌಂಡೇಶನ್ ಸಂಸ್ಥೆಯ ಬಗ್ಗೆ ಸಂಘದ ಸದಸ್ಯರೆಲ್ಲರೂ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ ಅದು ವಿಕಲಚೇತನರಿಗಾಗಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಯನ್ನು ಕಂಡು ನಮಗೆ ಹೆಮ್ಮೆಯಾಯಿತು.ಮೊದಲು ನಮಗೆ ವಿಕಲಚೇತನರಿಗೆ ಸಿಗುವ ಸೌಲಭ್ಯಗಳ ಕುರಿತು ಹಾಗೂ ಸ್ವಸಹಾಯ ಸಂಘ ಮಾಡುವುದರಿಂದ ಸಿಗುವ ಸೌಲಭ್ಯಗಳ ಬಗ್ಗೆ ಯಾವುದೇ ಮಾಹಿತಿಯು ಕೂಡ ಗೊತ್ತಿರಲಿಲ್ಲ.ಈ ಸಂಸ್ಥೆಯಿಂದ ಸಂಘ ಮಾಡಿದ ಮೇಲೆ ಎಲ್ಲ ಮಾಹಿತಿ ಮತ್ತು ಅನುಕೂಲತೆಗಳು ನಮಗೆ ಸಿಗುತ್ತವೆ.ಸ್ವಸಹಾಯ ಸಂಘ ಮಾಡಿದ್ದರಿಂದ ಉಳಿತಾಯ ರೂಪದಲ್ಲಿ ಸ್ವಲ್ಪ ಹಣವಾದರೂ ಕೂಡಿ ಇಡುತ್ತಿದ್ದೇವೆ.ಅದು ನಮ್ಮ ಕಷ್ಟಕಾಲದಲ್ಲಿ ಅನುಕೂಲವಾಗುತ್ತಿದೆ.ಜೊತೆಗೆ ಉದ್ಯೋಗದಲ್ಲಿ ಆಸಕ್ತಿ ಹೊಂದಿದ್ದರು ಆರ್ಥಿಕವಾಗಿ ಸಹಾಯ ಮಾಡಲು ಯಾರು ಇರಲಿಲ್ಲ ಆದರೆ ಈ ಸಂಘ ಮಾಡಿದ್ದರಿಂದ ನಮ್ಮ ಸೊಸೈಟಿಯಲ್ಲಿ ಸೇರುದಾರರಾಗಿ ಸಾಲವನ್ನು ಪಡೆದುಕೊಂಡು ಉದ್ಯೋಗದಲ್ಲಿ ತೊಡಗುವಂತೆ ಮಾಡಿದ್ದಾರೆ.ಇಷ್ಟೆಲ್ಲ ಸಹಕಾರ ನೀಡಿದ ಡೀಲ್ ಫೌಂಡೇಶನ್ ಸಂಸ್ಥೆಗೂ ಹಾಗೂ ರೇಣುಕಾ ಅವರಿಗೂ ನಮ್ಮ ಸಂಘದ ಸದಸ್ಯರೆಲ್ಲರ ಪರವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇವೆ.ಹೀಗೆ ಇನ್ನು ಹೆಚ್ಚಿನ ಸಹಕಾರ ಬೆಂಬಲ ಇದ್ದು ನಮ್ಮನ್ನು ಹೀಗೆ ಮುನ್ನಡೆಸಲಿ ಎಂದು ಕೇಳಿಕೊಳ್ಳುತ್ತಾ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಹೀಗೆ ಡೀಲ್ ಫೌಂಡೇಶನ್ ಸಂಸ್ಥೆಯು ಎಲ್ಲೋ ಇದ್ದ ವಿಕಲಚೇತನನ್ನು ಗುರುತಿಸಿ ಅವರಿಗೆ ತರಬೇತಿಯನ್ನು ನೀಡಿ ಉದ್ಯೋಗದಲ್ಲಿ ತೊಡುವಂತೆ ಮಾಡಿ ಆರ್ಥಿಕವಾಗಿ ಸುಧಾರಣೆ ಹೊಂದುವಂತೆ ಬೆಂಬಲ ನೀಡುತ್ತಿದ್ದಾರೆ ಹೀಗೆ ಇನ್ನು ಹೆಚ್ಚಿನ ಮಟ್ಟದಲ್ಲಿ ಡೀಲ್ ಫೌಂಡೇಶನ್ ಸಂಸ್ಥೆಯು ಕೀರ್ತಿಗೊಳಿಸಲಿ ಎಂದು ಎಲ್ಲ ವಿಕಲಚೇತನರು ಹಾಗೂ ಮಹಿಳೆಯರು ಹಾರೈಸುತ್ತಿದ್ದಾರೆ.
ಈ ಬ್ಲಾಗ್ ಗೆ ಸಂಬಂಧಿಸಿದಂತೆ ಯಾವುದೇ ನಿರ್ದಿಷ್ಟ ಪ್ರಶ್ನೆಗಳಿಗೆ ಅಥವಾ ಯಾವುದೇ ಸಹಾಯಕ್ಕಾಗಿ Info@deal-foundation.com ನಲ್ಲಿ ತಿಳಿಸಿರಿ ಮತ್ತು ನಾವು ಮಾಡುವ ಕೆಲಸದ ಕುರಿತು ಇನ್ನಷ್ಟು ತಿಳಿದುಕೊಳ್ಳಲು www.deal-foundation ನಲ್ಲಿ ಲಾಗ್ ಇನ್ ಮಾಡಿ.
ಧನ್ಯವಾದಗಳು