ವಿಕಲಚೇತನರ ಮತ್ತು ಮಹಿಳೆಯರ ಕುಟುಂಬಗಳಿಗೆ ಜೀವನೋಪಾಯವನ್ನು ಸೃಷ್ಟಿಸಲು ಡೀಲ್ ಫೌಂಡೇಶನ್ ಸಂಸ್ಥೆಯು ಕೈಗೊಂಡ ಸಮುದಾಯ ಸಂಘಟನೆ ಮತ್ತು ಅಭಿವೃದ್ಧಿ ಕಾರ್ಯಗಳ ಪರಿಣಾಮವಾಗಿ ಮಹಿಳೆಯರು ಮತ್ತು ವಿಕಲಚೇತನರ ಸ್ವಸಹಾಯ ಗುಂಪುಗಳನ್ನು ರಚಿಸಲಾಗುತ್ತಿದೆ.ಮಹಿಳೆಯರು ಮತ್ತು ವಿಕಲಚೇತನರು ತಮ್ಮ ಕುಟುಂಬಗಳನ್ನು ಬೆಳೆಸಲು ಜೀವನೋಪಾಯ ಮತ್ತು ಆದಾಯದ ಅವಕಾಶಗಳಲ್ಲಿ ತೊಡಗಿಕೊಳ್ಳಲು ಬಯಸುತ್ತಾರೆ.ಅಂತಹ ಮಹಿಳೆಯರು ಮತ್ತು ವಿಕಲಚೇತನರಿಗೆ ಡೀಲ್ ಫೌಂಡೇಶನ್ ಸಂಸ್ಥೆಯು ಸಮಾನ ಅವಕಾಶವನ್ನು ನೀಡಿ ಅವರನ್ನು ಈ ಸಮಾಜದಲ್ಲಿ ಗುರುತಿಸಿಕೊಳ್ಳುವಂತೆ ಮಾಡುತ್ತಿದೆ.
ಇದರ ಪರಿಣಾಮವಾಗಿ ಮಹಿಳೆಯರು ಮತ್ತು ವಿಕಲಚೇತನರ ಸ್ವಸಹಾಯ ಸಂಘಗಳನ್ನು ಮಾಡಿ ಡೀಲ್ ಫೌಂಡೇಶನ್ ವತಿಯಿಂದ ಅವೇರ್ನೆಸ್ ತರಬೇತಿ, ಫೈನಾನ್ಸಿಯಲ್ ಲೀಡರ್ಶಿಪ್ ತರಬೇತಿ,ಬುಕ್ ರೈಟಿಂಗ್ ತರಬೇತಿ,ಉದ್ಯೋಗಗಳ ತರಬೇತಿಯನ್ನು ಪಡೆದುಕೊಂಡು ಸ್ವಯಂ ಉದ್ಯೋಗದಲ್ಲಿ ತೊಡಗುವಂತೆ ಡೀಲ್ ಫೌಂಡೇಶನ್ ಸಂಸ್ಥೆ ಮಾಡುತಿದೆ.ಇದರಿಂದ ಅನೇಕ ಮಹಿಳೆಯರು ಸ್ವ ಸಹಾಯ ಸಂಘಗಳನ್ನು ಅನೇಕ ವರ್ಷಗಳ ವರೆಗೆ ಬೆಳೆಸಿಕೊಂಡು ಪ್ರತಿ ತಾಲೂಕಿನಲ್ಲಿ ಉಳಿದ ಮಹಿಳೆಯರಿಗೆ ಮಾದರಿಯಾಗಿದ್ದಾರೆ.ಅಂತಹ ಮಹಿಳಾ ಸ್ವ ಸಹಾಯ ಸಂಘಗಳಲ್ಲಿ ಹೇಳುವುದಾದರೆ ಮುಂಡರಗಿ ತಾಲೂಕಿನ “ಸ್ಪಂದನ ಮಹಿಳಾ ಸ್ವಸಹಾಯ ಸಂಘ”ವು ಒಂದು.
ಈ ಸಂಘದ ಬಗ್ಗೆ ನೋಡುವುದಾದರೆ ಮುಂಡರಗಿ ತಾಲೂಕಿನ ಲವ್ಲಿ ವುಡ್ ಆಫೀಸರ್ ಆದ ರೇಣುಕಾ ಕಲ್ಲಳ್ಳಿ ಇವರು ಮೆವುಂಡಿ ಗ್ರಾಮದಲ್ಲಿ ಅನೇಕ ವಿಕಲಚೇತನರು ಮತ್ತು ಮಹಿಳೆಯರ ಸ್ವಸಹಾಯ ಸಂಘವನ್ನು ರಚಿಸಿ ಅವರಿಗೆ ತರಬೇತಿಯನ್ನು ನೀಡಿ ಬ್ಯಾಂಕಿನಿಂದ ಸಾಲ ಕೊಡಿಸಿ ಉದ್ಯೋಗದಲ್ಲಿ ತೊಡಗುವಂತೆ ಮಾಡಿ ಅವರ ಕುಟುಂಬಗಳಿಗೆ ಆರ್ಥಿಕವಾಗಿ ಸಹಾಯವಾಗುವಂತೆ ಮಾಡುತ್ತಿದ್ದಾರೆ.ಇದನ್ನು ಗಮನಿಸಿದ ಮೆವುಂಡಿ ಗ್ರಾಮದ ಮಹಿಳೆಯರು ಇವರು ಪಂಚಾಯತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದವರು ಇವರು ರೇಣುಕಾ ಅವರನ್ನು ಭೇಟಿ ಮಾಡಿ ನಾವು ಸ್ವಸಹಾಯ ಸಂಘವನ್ನು ಮಾಡುತ್ತೇವೆ ನಮಗೂ ಅನುಕೂಲ ಮಾಡಿಕೊಡಿ ಎಂದು ಕೇಳಿದರು ಆಗ ರೇಣುಕಾ ಅವರು ನಮ್ಮ ಡೀಲ್ ಫೌಂಡೇಶನ್ ಸಂಸ್ಥೆಯ ಮುಖ್ಯ ಉದ್ದೇಶ ವಿಕಲಚೇತನರಿಗಾಗಿ ಮಹಿಳೆಯರಿಗಾಗಿ ಕಾರ್ಯನಿರ್ವಹಿಸುತ್ತಿದ್ದೇವೆ. ಸರಿ ಆಯಿತು ನಿಮಗೂ ಸ್ವಸಹಾಯ ಸಂಘ ರಚಿಸೋಣ ಎಂದು ಹೇಳಿದರು.
ನಂತರ ಆ ಮಹಿಳೆಯರು 10 ಜನ ಸೇರಿಕೊಂಡು ಎಲ್ಲ ದಾಖಲೆಯನ್ನು ಹೊಂದಿಸಿ ರೇಣುಕಾ ಅವರನ್ನು ಕರೆಸಿ ಸಂಘ ರಚಿಸಲು ಅನುಕೂಲ ಮಾಡಿಕೊಟ್ಟರು.ರೇಣುಕಾ ಅವರು ಎಲ್ಲ ದಾಖಲಾತಿಯೊಂದಿಗೆ ಸಂಘ ರಚಿಸಿ ಅದಕ್ಕೆ “ಸ್ಪಂದನ ಮಹಿಳಾ ಸ್ವಸಹಾಯ ಸಂಘ” ಎಂದು ಹೆಸರಿಟ್ಟು ಮುಂಡರಗಿ ತಾಲೂಕಿನ ಕೆಸಿಸಿ ಬ್ಯಾಂಕ್ ನಲ್ಲಿ ಖಾತೆಯನ್ನು ತೆರೆದರು. ಸದಸ್ಯರೆಲ್ಲರೂ ಪ್ರತಿ ತಿಂಗಳು ನೂರು ರೂಪಾಯಿ ಉಳಿತಾಯವನ್ನು ತುಂಬುತ್ತಿದ್ದಾರೆ.
ನಂತರ ಈ ಸಂಘಕ್ಕೆ ರೇಣುಕಾ ಅವರು ಬುಕ್ ರೈಟಿಂಗ್ ತರಬೇತಿ, ಲೀಡರ್ಶಿಪ್ ತರಬೇತಿ ಹಾಗೂ ಇಲಾಖೆಯಿಂದ ಸಿಗುವ ಸೌಲಭ್ಯಗಳ ಕುರಿತು ಮಾಹಿತಿಯನ್ನು ನೀಡಿದರು. ಹಾಗೂ ಉದ್ಯೋಗಗಳ ಬಗ್ಗೆ ತರಬೇತಿಯನ್ನು ಕೂಡ ನೀಡಿದರು.ಇದರಿಂದ ಸದಸ್ಯರೆಲ್ಲರೂ ಉದ್ಯೋಗದಲ್ಲಿ ಆಸಕ್ತಿ ಹೊಂದಿದ್ದು ಆರು ತಿಂಗಳ ಆದ ನಂತರ ಬ್ಯಾಂಕ್ ನಿಂದ ಲೋನ್ ತೆಗೆದುಕೊಂಡು ಉದ್ಯೋಗ ಮಾಡಲು ನಿರ್ಧರಿಸಿದರು.ಅದರಂತೆ ಬ್ಯಾಂಕಿಗೆ ಅರ್ಜಿಯನ್ನು ಸಲ್ಲಿಸಿದರು ಆದರೆ ಕೆಸಿಸಿ ಬ್ಯಾಂಕ್ ನಲ್ಲಿ ಒಂದು ವರ್ಷ ಆದ ನಂತರ ಲೋನ್ ಕೊಡುತ್ತೇವೆ ಎಂದು ಹೇಳಿದರು.ಎಲ್ಲ ಸದಸ್ಯರು ಚರ್ಚಿಸಿ ಈ ಖಾತೆಯನ್ನು ಮೆವುಂಡಿ ಗ್ರಾಮದ ಸಂರಕ್ಷಣೆ ವಿಕಲಚೇತನರ ಕೋ ಆಪರೇಟಿವ್ ಸೊಸೈಟಿಯಲ್ಲಿ ಖಾತೆಯನ್ನು ತೆರೆಯಲು ತೀರ್ಮಾನಿಸಿದರು.ಅದರಂತೆ ಅಲ್ಲಿ ಖಾತೆಯನ್ನು ತೆರೆದರು. ಅಲ್ಲಿಯೂ ಪ್ರತಿ ತಿಂಗಳ ನೂರು ರೂಪಾಯಿ ಉಳಿತಾಯವನ್ನು ತುಂಬುತ್ತಿದ್ದಾರೆ.
ಹೀಗೆ ಕೋ ಆಪರೇಟಿವ್ ಸೊಸೈಟಿ ನಿಂದ 50,000 ಮೊದಲು ಲೋನನ್ನು ಪಡೆದುಕೊಂಡು ಅದನ್ನು ಯಾವುದೇ ರೀತಿಯ ಕಟ್ಟು ಬಾಕಿ ಉಳಿಸದೆ ಮರುಪಾವತಿ ಮಾಡಿದರು.ನಂತರ ಎರಡನೇ ಸಲ ಸಾಲಕ್ಕಾಗಿ ಸದಸ್ಯರೆಲ್ಲರೂ ಸಭೆ ಮಾಡಿ ಎಲ್ಲ ದಾಖಲಾತಿಯನ್ನು ರೇಣುಕಾ ಅವರ ಸಹಯೋಗದಲ್ಲಿ ತಯಾರು ಮಾಡಿ ಅರ್ಜಿ ಸಲ್ಲಿಸಿದರು.ಎರಡನೇ ಸಲ 1 ಲಕ್ಷ ಬ್ಯಾಂಕ್ ಲೋನ್ ಅನ್ನು ಪಡೆದುಕೊಂಡು ಇದನ್ನು ಮೂರು ಜನ ಸದಸ್ಯರು ತೆಗೆದುಕೊಂಡು ಉದ್ಯೋಗದಲ್ಲಿ ತೊಡಗಿದ್ದಾರೆ. ಆ ಸದಸ್ಯರಲ್ಲಿ ಅಂಜಮ್ಮ ಹಿರೇಮನಿ ಇವರು ರೈತಾಪಿ ವರ್ಗದವರಾಗಿದ್ದು ಇವರು 50 ಸಾವಿರ ಲೋನ್ ಪಡೆದುಕೊಂಡು ಕುರಿಮರಿ ಖರೀದಿಸಿ ಕುರಿ ಸಾಕಾಣಿಕೆ ಉದ್ಯೋಗ ಮಾಡುತ್ತಿದ್ದಾರೆ. ಇದರಿಂದ ಇವರ ಆರ್ಥಿಕ ಜೀವನ ಸುಧಾರಣೆಯಾಗಿದೆ. ಅದೇ ರೀತಿ ದೇವಕ್ಕ ಹಿರೇಮನಿ ಇವರು ಕೂಡ 50000/- ಲೋನ್ ಪಡೆದುಕೊಂಡು ಆಕಳು ಖರೀದಿಸಿ ಹೈನುಗಾರಿಕೆ ಉದ್ಯೋಗ ಮಾಡುತ್ತಿದ್ದಾರೆ. ಇದರಿಂದ ಬಂದ ಲಾಭದಲ್ಲಿ ಇನ್ನು ಹೆಚ್ಚಿನ ಆಕಳನ್ನು ಖರೀದಿಸಿ ಆರ್ಥಿಕವಾಗಿ ಸಬಲರಾಗಿ ಮುಂದೆ ಬರುತ್ತಿದ್ದಾರೆ.ಹಾಗೂ ಮಹಾಲಕ್ಷ್ಮಿ ಇವರು ಕೂಡ ಉಳಿತಾಯದಿಂದ ಲೋನ್ ಪಡೆದುಕೊಂಡು ಕೃಷಿಗಾಗಿ ಉದ್ಯೋಗ ಮಾಡಿ ಕುಟುಂಬಕ್ಕೆ ಸಹಾಯ ಮಾಡಿದ್ದಾರೆ.
ಹೀಗೆ ಸಂಘದ ಸದಸ್ಯರೆಲ್ಲರೂ ಆಸಕ್ತಿ ಹೊಂದಿದ ಉದ್ಯೋಗಕ್ಕಾಗಿ ಲೋನ್ ಪಡೆದುಕೊಂಡು ತಮ್ಮ ಕುಟುಂಬಗಳಿಗೆ ಆಧಾರವಾಗಿದ್ದಾರೆ.ಇನ್ನು ಉಳಿದ ಸದಸ್ಯರು ಕೂಡ ಲೋನ್ ಪಡೆದುಕೊಳ್ಳಲು ನಿರ್ಧರಿಸಿದ್ದಾರೆ.ಹೀಗೆ ಈ ಸಂಘದ ಸದಸ್ಯರು ಯಾವುದೇ ಕಟ್ಟು ಬಾಕಿ ಉಳಿಸದೆ ಸಾಲವನ್ನು ಮರುಪಾವತಿಯನ್ನು ಮಾಡುತ್ತಿದ್ದಾರೆ.ಇಷ್ಟೆಲ್ಲಾ ಸಹಕಾರ ಪಡೆದುಕೊಂಡ ಸದಸ್ಯರು ಡೀಲ್ ಫೌಂಡೇಶನ್ ಸಂಸ್ಥೆ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ ಅದು ವಿಕಲಚೇತನರಿಗಾಗಿ ಕಾರ್ಯ ನಿರ್ವಹಿಸುತ್ತಿರುವ ಡೀಲ್ ಫೌಂಡೇಶನ್ ಸಂಸ್ಥೆಯನ್ನು ಮೇವುಂಡಿ ಗ್ರಾಮದಲ್ಲಿ ಕಂಡು ನಮಗೆ ಖುಷಿಯಾಯಿತು. ಹಾಗೂ ಸಂಸ್ಥೆಯ ಕಾರ್ಯ ಚಟುವಟಿಗಳನ್ನು ಗಮನಿಸಿ ಈ ಸಂಸ್ಥೆಯಿಂದ ನಾವು ತರಬೇತಿಯನ್ನು ಪಡೆದುಕೊಳ್ಳಬೇಕು ಎಂದು ನಿರ್ಧರಿಸಿ ರೇಣುಕಾ ಅವರಿಂದ ಸಂಘ ರಚಿಸಿಕೊಂಡೆವು. ಉಳಿತಾಯ ಮಾಡುವುದರಿಂದ ಮುಂದೆ ನಮ್ಮ ಕಷ್ಟಕಾಲಕ್ಕೆ ಸಹಾಯಕವಾಗುತ್ತಿದೆ ಜೊತೆಗೆ ಬೇರೆ ಕಡೆ ಸಾಲ ಕೇಳಲು ಹೋದರೆ ಕೊಡುವುದಿಲ್ಲ ಜೊತೆಗೆ ಹೆಚ್ಚಿನ ಬಡ್ಡಿ ಆದರೆ ನಮ್ಮ ಸಂಘ ಮಾಡಿದರಿಂದ ಕಡಿಮೆ ಬಡ್ಡಿಯಲ್ಲಿ ಸಾಲ ಸೌಲಭ್ಯಗಳು ಸಿಕ್ಕಿವೆ. ಇದರಿಂದ ನಮ್ಮ ಆರ್ಥಿಕ ಜೀವನವು ಸುಧಾರಣೆ ಹೊಂದಿದೆ.ಇಷ್ಟೆಲ್ಲ ತರಬೇತಿ ಮಾಹಿತಿ ನೀಡಿದ ಡೀಲ್ ಫೌಂಡೇಶನ್ ಸಂಸ್ಥೆಗೆ ಹಾಗೂ ರೇಣುಕಾ ಅವರಿಗೆ ನಮ್ಮ ಸಂಘದ ಸದಸ್ಯರೆಲ್ಲರ ಪರವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇವೆ.ಹೀಗೆ ನಮ್ಮಂತಹ ಅನೇಕ ಮಹಿಳೆಯರಿಗೆ ಈ ಸಂಸ್ಥೆಯ ನೆರಳಾಗಲಿ ಎಂದು ಕೇಳಿಕೊಳ್ಳುತ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಹೀಗೆ ಡೀಲ್ ಫೌಂಡೇಶನ್ ಸಂಸ್ಥೆ ಪ್ರತಿ ತಾಲೂಕಿನಲ್ಲಿ ವಿಕಲಚೇತನರಾಗಿ ಮತ್ತು ಮಹಿಳೆಯರ ಸ್ವಾವಲಂಬನೆ ಜೀವನಕ್ಕೆ ಸ್ವಸಹಾಯ ಸಂಘಗಳ ಮೂಲಕ ದಾರಿ ಮಾಡಿಕೊಟ್ಟಿದೆ. ಇದೆ ರೀತಿ ಡೀಲ್ ಫೌಂಡೇಶನ್ ಸಂಸ್ಥೆಯು ಹೆಚ್ಚಿನ ಕೀರ್ತಿ ಗಳಿಸಲಿ ಎಂದು ಎಲ್ಲ ಮಹಿಳೆಯರು ಮತ್ತು ವಿಕಲಚೇತರು ಹಾರೈಸುತ್ತಿದ್ದಾರೆ.
ಈ ಬ್ಲಾಗ ಗೆ ಸಂಬಂಧಿಸಿದಂತೆ ಯಾವುದೇ ನಿರ್ದಿಷ್ಟ ಪ್ರಶ್ನೆಗಳಿಗೆ ಅಥವಾ ಯಾವುದೇ ಸಹಾಯಕ್ಕಾಗಿ Info@deal-foindation.com ನಲ್ಲಿ ತಿಳಿಸಿರಿ ಮತ್ತು ನಾವು ಮಾಡುವ ಕೆಲಸದ ಕುರಿತು ಇನ್ನಷ್ಟು ತಿಳಿದುಕೊಳ್ಳಲು www.deal-foundation ಗೆ ಲಾಗ್ ಇನ್ ಮಾಡಿ.
ಧನ್ಯವಾದಗಳು