Empower Abilities, Change Lives

Your support helps us create a world where abilities shine beyond disabilities. Every donation provides essential resources, education, and opportunities for individuals to thrive. Together, we can break barriers and build a more inclusive future.

Donate Now & Make a Difference!

World where ability, not disability, matters

ಮರುಳು ಸಿದ್ದೇಶ್ವರ ಮಹಿಳಾ ಸ್ವಸಹಾಯ ಸಂಘದ ಕೇಸ್ ಸ್ಟಡಿ

ಡೀಲ್ ಫೌಂಡೇಶನ್ ಸಂಸ್ಥೆಯು ವಿಕಲಚೇತನರಿಗೆ ಮತ್ತು ಮಹಿಳೆಯರಿಗೆ ಸ್ವಾವಲಂಬನೆ ಜೀವನ ಕಟ್ಟಿಕೊಳ್ಳಲು ಎಲ್ಲರಂತೆ ಸದೃಢ ಭಾವನೆಗಳನ್ನು ಮೈಗೂಡಿಸಿಕೊಂಡು ಸದಾ ಕ್ರಿಯಾಶೀಲ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಡೀಲ್ ಫೌಂಡೇಶನ್ ಸಂಸ್ಥೆಯ ಎಲ್ಲಾ ಕಾರ್ಯಕರ್ತರು ಪ್ರತಿ ತಾಲೂಕಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.ಅಂದರೆ ಪ್ರತಿ ತಾಲೂಕಿನಲ್ಲಿ ಲವ್ಲಿ ವುಡ್ ಆಫೀಸರ್ಸ್ ವಿಕಲಚೇತನರನ್ನು ಮತ್ತು ಮಹಿಳೆಯರನ್ನು ಗುರುತಿಸಿ ಅವರಿಗೆ ಡೀಲ್ ಫೌಂಡೇಶನ್ ಸಂಸ್ಥೆ ಬಗ್ಗೆ ಮಾಹಿತಿ ನೀಡಿ ನಂತರ ಆಸಕ್ತಿ ಇರುವ ಮಹಿಳೆಯರನ್ನು ಒಟ್ಟುಗೂಡಿಸಿ ಸ್ವಸಹಾಯ ಸಂಘವನ್ನು ರಚನೆ ಮಾಡಿ ಸಂಘದ ಸದಸ್ಯರೆಲ್ಲರಿಗೂ ತರಬೇತಿಗಳನ್ನು ನೀಡಿ ಮಹಿಳೆಯರು ಮತ್ತು ವಿಕಲಚೇತನರಿಗೆ ಸ್ವಯಂ ಉದ್ಯೋಗದಲ್ಲಿ ತೊಡಗುವಂತೆ ಮಾಡುತ್ತಿದ್ದಾರೆ.

ಜೊತೆಗೆ ಅಷ್ಟೇ ಅಲ್ಲದೆ ಡೀಲ್ ಫೌಂಡೇಶನ್ ಸಂಸ್ಥೆಯ ತರಬೇತಿಗಳ ಜೊತೆಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳ ಕುರಿತು ಮಾಹಿತಿ ಹಾಗೂ ಅನೇಕ ಇಲಾಖೆಗಳಿಂದ ಸಿಗುವ ಸುತ್ತು ನಿಧಿ ಮತ್ತು ತರಬೇತಿಗಳನ್ನು ಕೂಡ ಡೀಲ್ ಫೌಂಡೇಶನ್ ಸಂಸ್ಥೆಯ ಸಹಕಾರದಿಂದ ಮಹಿಳೆಯರಿಗೆ ಸೌಲಭ್ಯಗಳನ್ನು ಲವ್ಲಿ ವುಡ್ ಆಫೀಸರ್ಸ್ ಕೊಡಿಸುತ್ತಿದ್ದಾರೆ.ಆ ತರಬೇತಿಗಳನ್ನು ಪಡೆದುಕೊಂಡ ನಂತರ ಮಹಿಳೆಯರು ಸ್ವಯಂ ಉದ್ಯೋಗದಲ್ಲಿ ತೊಡಗಿಕೊಂಡು ತಮ್ಮ ಆರ್ಥಿಕ ಜೀವನದಲ್ಲಿ ಮುಂದೆ ಬಂದಿದ್ದಾರೆ.

ಅಂತಹ ಸ್ವಸಹಾಯ ಸಂಘಗಳಲ್ಲಿ ಹೇಳುವುದಾದರೆ ಮುಂಡರಗಿ ತಾಲೂಕಿನ ದೋಣಿ ಗ್ರಾಮದ “ಮರಳು ಸಿದ್ದೆಶ್ವರ ಮಹಿಳಾ ಸ್ವಸಹಾಯ ಸಂಘ”ಕೂಡ ಒಂದು.ಈ ಸಂಘದ ಬಗ್ಗೆ ನೋಡುವುದಾದರೆ ಮುಂಡರಗಿ ತಾಲೂಕಿನ ಲವ್ಲಿ ಹುಡ್ ಆಫೀಸರ್ ಆದ ರೇಣುಕಾ ಕಲ್ಲಳ್ಳಿ ಇವರು ದೋಣಿ ಗ್ರಾಮಕ್ಕೆ ಭೇಟಿ ನೀಡಿ ಅಲ್ಲಿನ ವಿಕಲಚೇತನರಿಗೂ ಹಾಗೂ ಮಹಿಳೆಯರಿಗೂ ಡೀಲ್ ಫೌಂಡೇಶನ್ ಸಂಸ್ಥೆ ಕಾರ್ಯಗಳ ಬಗ್ಗೆ ಹಾಗೂ ಸ್ವಸಹಾಯ ಸಂಘದ ಬಗ್ಗೆ ಮಾಹಿತಿ ನೀಡಿದರು ಮತ್ತು ಮಹಿಳೆಯರು ಸ್ವಯಂ ಪ್ರೇರಣೆಯಿಂದ ಸ್ವಸಹಾಯ ಸಂಘವನ್ನು ರಚಿಸಲು ಮುಂದಾದರು.ಅವರೆಲ್ಲರನ್ನು ಒಟ್ಟುಗೂಡಿಸಿ 10 ಜನರಂತೆ ರೇಣುಕಾ ಅವರು ಸ್ವಸಹಾಯ ಸಂಘವನ್ನು ರಚಿಸಿದರು.

ನಂತರ ಆ ಎಲ್ಲಾ ಸಂಘಗಳಿಗೆ ತರಬೇತಿಗಳನ್ನು ನೀಡಿ ಸ್ವಯಂ ಉದ್ಯೋಗ ಮಾಡಲು ಆಸಕ್ತಿ ಹೊಂದುವಂತೆ ಮಾಡಿ ಸದಸ್ಯರಿಗೆ ಬ್ಯಾಂಕ್ ಲೋನ್ ಕೊಡಿಸಿ ಉದ್ಯೋಗದಲ್ಲಿ ತೊಡಗುವಂತೆ ರೇಣುಕಾ ಅವರು ಮಾಡಿದರು.ಹೀಗೆ ಪ್ರತಿ ತಿಂಗಳು ಆ ಸಂಘಗಳಿಗೆ ಭೇಟಿ ನೀಡಿ ಸಂಘವನ್ನು ನಡೆಸಿಕೊಂಡು ಹೋಗುತ್ತಿದ್ದಾರೆ.ಇದನ್ನು ಕಂಡ ದೋಣಿ ಗ್ರಾಮದ ಆಸಕ್ತಿ ಹೊಂದಿದ ಮಹಿಳೆಯರು ನಾವು ಸ್ವಸಹಾಯ ಸಂಘವನ್ನು ರಚನೆ ಮಾಡುತ್ತೇವೆ ಅದರ ಮಾಹಿತಿಯನ್ನು ನಮಗು ನೀಡಿ ಎಂದು ಆ ಮಹಿಳೆಯರು ರೇಣುಕಾ ಅವರನ್ನು ಕೇಳಿಕೊಂಡರು.ಆಗ ರೇಣುಕಾ ಅವರು ಸರಿ ಆಯಿತು ಸಂಘವನ್ನು ರಚಿಸಿ ಕೊಡುತ್ತೇನೆ ಎಂದು ಭರವಸೆ ನೀಡಿ 10 ಜನ ಮಹಿಳೆಯರೊಂದಿಗೆ ಸೇರಿಸಿ ಅವರಿಗೆ ಸಂಘದ ಬಗ್ಗೆ ಮಾಹಿತಿ ನೀಡಿ ಎಲ್ಲ ದಾಖಲಾತಿಯೊಂದಿಗೆ ಸಂಘ ರಚಿಸಿದರು.ಅದಕ್ಕೆ “ಮರಳು ಸಿದ್ದೇಶ್ವರ ಮಹಿಳಾ ಸ್ವಸಹಾಯ ಸಂಘ” ಎಂದು ಹೆಸರಿಟ್ಟು ಮೆವುಂಡಿ ಗ್ರಾಮದ ಕೋ ಆಪರೇಟಿವ್ ಸೊಸೈಟಿಯಲ್ಲಿ ಖಾತೆಯನ್ನು ತೆರೆದರು.

ನಂತರ ರೇಣುಕಾ ಅವರು ಈ ಸಂಘಕ್ಕೆ ಬುಕ್ ರೈಟಿಂಗ್ ತರಬೇತಿ,ಲೀಡರ್ಶಿಪ್ ತರಬೇತಿ ಹಾಗೂ ಸರ್ಕಾರದಿಂದ ಸೌಲಭ್ಯಗಳ ಕುರಿತು ಮಾಹಿತಿಯನ್ನು ನೀಡಿದರು. ಹಾಗೂ ಉದ್ಯೋಗ ತರಬೇತಿಗಳಾದ ಡೀಲ್ ಫೌಂಡೇಶನ್ ವತಿಯಿಂದ ಕುಂಕುಮ ತರಬೇತಿ, ಹೈನುಗಾರಿಕೆ ತರಬೇತಿ,ಜೇನು ಸಾಕಾಣಿಕೆ ತರಬೇತಿ, ಮೇಣದಬತ್ತಿ ತರಬೇತಿ ಮುಂತಾದ ತರಬೇತಿಯನ್ನು ನೀಡಿದರು.ನಂತರ ಮಹಿಳೆಯರು ಮನೆಯಲ್ಲಿ ಕುಳಿತರೆ ಏನು ಮಾಡಲು ಆಗುವುದಿಲ್ಲ ಉದ್ಯೋಗದಲ್ಲೇ ತೊಡಗಿದರೆ ನಮ್ಮ ಕುಟುಂಬಗಳಿಗೆ ಆಧಾರವಾಗುತ್ತದೆ ಎಂದು ತೀರ್ಮಾನಿಸಿ ಸಂಘ ರಚನೆಯಾದ ಆರು ತಿಂಗಳ ನಂತರ ಬ್ಯಾಂಕ್ ಲೋನ್ ತೆಗೆದುಕೊಂಡು ಉದ್ಯೋಗ ಮಾಡಲು ತೀರ್ಮಾನಿಸಿದರು.

ಹೀಗೆ ಆರು ತಿಂಗಳ ಆದ ನಂತರ ರೇಣುಕಾ ಅವರ ಸಹಕಾರದೊಂದಿಗೆ ಮೀಟಿಂಗ್ ನಲ್ಲಿ ಚರ್ಚೆ ಮಾಡಿ ಬ್ಯಾಂಕ್ ಲೋನ್ ತೆಗೆದುಕೊಳ್ಳಲು ತೀರ್ಮಾನಿಸಿದರು.ಅದರಂತೆ ಎಲ್ಲ ಸದಸ್ಯರ ದಾಖಲಾತಿಯನ್ನು ಹೊಂದಿಸಿ ಬ್ಯಾಂಕ್ ನಲ್ಲಿ ಅರ್ಜಿ ಸಲ್ಲಿಸಿದರು.ಹಾಗೆ ಈ ಸಂಘದ ಉಳಿತಾಯ ನೋಡಿ ಮೊದಲನೇ ಬ್ಯಾಂಕ್ ಲೋನ ಆಗಿದ್ದರಿಂದ ಮೊದಲು 50,000/- ಲೋನ್ ಕೊಡುತ್ತೇವೆ ಎಂದು ಬ್ಯಾಂಕ್ ನಲ್ಲಿ ಹೇಳಿದರು.ಎಲ್ಲ ಸದಸ್ಯರು ಚರ್ಚಿಸಿ ಸರಿ ಮೊದಲು ಅವಶ್ಯಕತೆ ಇರುವವರು ಈ ಸಾಲವನ್ನು ತೆಗೆದುಕೊಳ್ಳೋಣ ನಂತರ ಉಳಿದ ಸದಸ್ಯರು ತೆಗೆದುಕೊಳ್ಳೋಣ ಎಂದು ತೀರ್ಮಾನಿಸಿದರು.ಅದರಂತೆ 50,000 ಬ್ಯಾಂಕ್ ಲೋನ್ ಅನ್ನು ಐದು ಜನ ಸದಸ್ಯರು ತೆಗೆದುಕೊಂಡರು.ಅದರಲ್ಲಿ ಬಸವಣ್ಣವ್ವ ಮೇಟಿ ಇವರು 10,000 ಲೋನ್ ತೆಗೆದುಕೊಂಡು ಕುಟುಂಬದ ಸಹಾಯದಿಂದ ಹೈನುಗಾರಿಕೆ ಉದ್ಯೋಗವನ್ನು ಮಾಡುತ್ತಿದ್ದಾರೆ.ಹಾಗೆ ಸುಮಂಗಲ ಹಾವಿನ್ ಇವರು ಕೂಡ 10,000 ಲೋನ್ ಪಡೆದುಕೊಂಡು ಕುರಿ ಸಾಕಾಣಿಕೆ ಉದ್ಯೋಗ ಮಾಡುತ್ತಿದ್ದಾರೆ.ಹಾಗೆ ವಿಜಯಲಕ್ಷ್ಮಿ ಹಾವೀನ್ ಇವರು ಕೂಡ 10,000 ಲೋನ್ ಪಡೆದುಕೊಂಡು ಟೈಲರಿಂಗ್ ಮಷೀನ್ ಖರೀದಿಸಿ ಟೈಲರಿಂಗ್ ಉದ್ಯೋಗ ಮಾಡುತ್ತಿದ್ದಾರೆ.ಹಾಗೆ ರೇಖಾ ತಳವಾರ್ ಇವರು ಕೂಡ ಹತ್ತು ಸಾವಿರ ಲೋನ್ ಪಡೆದುಕೊಂಡು ಕುರಿ ಸಾಕಾಣಿಕೆ ಉದ್ಯೋಗ ಮಾಡುತ್ತಿದ್ದಾರೆ ಹಾಗೂ ಲಕ್ಷ್ಮಿ ಕಪ್ಪತ್ನವರ್ ಇವರು ಕೂಡ 10000 ಲೋನ್ ಪಡೆದುಕೊಂಡು ಹೈನುಗಾರಿಕೆ ಉದ್ಯೋಗದಲ್ಲಿ ಮುಂದುವರೆದಿದ್ದಾರೆ.

ಹೀಗೆ ಎಲ್ಲ ಸದಸ್ಯರು ಲೋನ್ ಪಡೆದುಕೊಂಡು ಉದ್ಯೋಗ ಮಾಡುತ್ತ ತಮ್ಮ ಕುಟುಂಬಗಳಿಗೆ ಆಧಾರವಾಗಿದ್ದಾರೆ.ಹಾಗೆ ಉಳಿದ ಮಹಿಳೆಯರಿಗೂ ಸ್ಪೂರ್ತಿ ನೀಡುತ್ತಿದ್ದಾರೆ. ಹೀಗೆ ಯಾವುದೇ ಕಟ್ಟು ಬಾಕಿ ಉಳಿಸದೆ ಸಾಲ ಮರುಪಾವತಿಯನ್ನು ಮಾಡುತ್ತಿದ್ದಾರೆ.ಹೀಗೆ ಡೀಲ್ ಫೌಂಡೇಶನ್ ವತಿಯಿಂದ ಸಂಘ ರಚನೆ ಮಾಡಿ ತರಬೇತಿ ಗಳನ್ನು ಪಡೆದುಕೊಂಡು ಉದ್ಯೋಗದಲ್ಲಿ ತೊಡಗುವಂತೆ ರೇಣುಕಾ ಅವರು ಮಾಡಿದ್ದಾರೆ.ಸಂಘದ ಸದಸ್ಯರೆಲ್ಲರೂ ಡೀಲ್ ಫೌಂಡೇಶನ್ ಸಂಸ್ಥೆಯ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ ಅದು ವಿಕಲಚೇತನರಿಗಾಗಿ ಹಾಗೂ ಮಹಿಳೆಯರಿಗಾಗಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಯನ್ನು ಕಂಡು ಹೆಮ್ಮೆಯಾಯಿತು.ಮನೆಗಳಿಗೆ ಸೀಮಿತವಾಗಿದ್ದ ನಾವು ಸಂಘ ರಚನೆ ಮಾಡಿದ್ದರಿಂದ ನಮ್ಮ ಉದ್ಯೋಗದಲ್ಲಿ ತೊಡಗುವಂತೆ ಆಯಿತು ಹಾಗೂ ಉಳಿತಾಯದಿಂದ ಮುಂದೆ ನಮ್ಮ ಕಷ್ಟಕಾಲದಲ್ಲಿ ಅದು ಸಹಾಯವಾಗುತ್ತಿದೆ ಹಾಗೂ ಕಡಿಮೆ ಬಡ್ಡಿ ಯಲ್ಲಿ ಸಂಘದಿಂದ ಸಾಲ ಸಿಗುತ್ತದೆ. ಮನೆಯಲ್ಲೇ ಇದ್ದರೆ ಸ್ವಯಂ ಉದ್ಯೋಗ ಮಾಡಬಹುದು ಎಂದು ಎಲ್ಲ ಮಹಿಳೆಯರಿಗೂ ಸ್ಪೂರ್ತಿ ನೀಡುತ್ತಿದ್ದಾರೆ ಸಂಘ ರಚನೆ ಮಾಡಿದ್ದರಿಂದ ತುಂಬಾ ಅನುಕೂಲವಾಗಿದೆ.ಹೀಗೆ ನಮ್ಮನ್ನು ಗುರುತಿಸುವಂತೆ ಮಾಡಿದ ರೇಣುಕಾ ಅವರಿಗೂ ಹಾಗೂ ಡೀಲ್ ಫೌಂಡೇಶನ್ ಸಂಸ್ಥೆಗೂ ನಮ್ಮ ಸಂಘದ ಸದಸ್ಯರೆಲ್ಲರ ಪರವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇವೆ.ಹೀಗೆ ನಮ್ಮಂತ ಮಹಿಳೆಯರನ್ನು ಗುರುತಿಸಿ ಸಹಕಾರ ನೀಡಿ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಹೀಗೆ ಡೀಲ್ ಫೌಂಡೇಶನ್ ಸಂಸ್ಥೆಯು ವಿಕಲಚೇತನರಿಗಾಗಿ ಹಾಗೂ ಮಹಿಳೆಯರಿಗಾಗಿ ಪ್ರತಿ ತಾಲೂಕಿನಲ್ಲಿ ಲವ್ಲಿ ವುಡ್ ಆಫೀಸರ್ಸ್ ಗಳ ಮೂಲಕ ಸ್ವಾವಲಂಬನೆ ಜೀವನ ನಡೆಸಿಕೊಳ್ಳಲು ಸದಸ್ಯರಿಗೆ ಅನುವು ಮಾಡಿಕೊಡುತ್ತಿದೆ. ಹೀಗೆ ಡೀಲ್ ಫೌಂಡೇಶನ್ ಸಂಸ್ಥೆಯು ಇನ್ನು ಹೆಚ್ಚಿನ ಕೀರ್ತಿ ಗಳಿಸಲಿ ಎಂದು ಎಲ್ಲ ವಿಕಲಚೇತನರು ಹಾಗೂ ಮಹಿಳೆಯರು ಹಾರೈಸುತ್ತಿದ್ದಾರೆ.

ಈ ಬ್ಲಾಗ್ ಗೆ ಸಂಬಂಧಿಸಿದಂತೆ ಯಾವುದೇ ನಿರ್ದಿಷ್ಟ ಪ್ರಶ್ನೆಗಳಿಗೆ ಅಥವಾ ಯಾವುದೇ ಸಹಾಯಕ್ಕಾಗಿ Info@deal-foundation.com ನಲ್ಲಿ ತಿಳಿಸಿರಿ ಮತ್ತು ನಾವು ಮಾಡುವ ಕೆಲಸದ ಕುರಿತು ಇನ್ನಷ್ಟು ತಿಳಿದುಕೊಳ್ಳಲು www.deal-foundation ಗೆ ಲಾಗ್ಇನ್ ಮಾಡಿ.

ಧನ್ಯವಾದಗಳು

Scroll to Top