Empower Abilities, Change Lives

Your support helps us create a world where abilities shine beyond disabilities. Every donation provides essential resources, education, and opportunities for individuals to thrive. Together, we can break barriers and build a more inclusive future.

Donate Now & Make a Difference!

World where ability, not disability, matters

ಸುನಂದಾ ಗಾಣಿಗೇರ ಇವರ ಜೀವನ ಕಥೆ

ಡೀಲ್ ಫೌಂಡೇಶನ್ ಸಂಸ್ಥೆಯು ವಿಕಲಚೇತನರಿಗಾಗಿ ಪ್ರತಿ ತಾಲೂಕಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ.ಅದಕ್ಕೆ ತಕ್ಕಂತೆ ಗುರಿಗಳನ್ನು ಹಾಕಿಕೊಂಡು ಎಲ್ಲಾ ಕಾರ್ಯಕರ್ತರು ವಿಕಲಚೇತನರನ್ನು ಗುರುತಿಸಿ ಅವರಿಗೆ ಪ್ರೇರಣೆ ನೀಡಿ ವಿಕಲಚೇತನತೆಯು ಒಂದು ನ್ಯೂನ್ಯತೆ ಅಲ್ಲ ಅದು ಸ್ವಾಭಾವಿಕ. ವಿಕಲಚೇತನತೆಯಿಂದ ಎಲ್ಲವನ್ನು ಸಾಧಿಸಬಹುದು ಎಂಬ ಮನಸ್ಥಿತಿಯನ್ನು ವಿಕಲಚೇತನರಲ್ಲಿ ಲವ್ಲಿವುಡ್ ಆಫೀಸರ್ಸ್ ತುಂಬುತ್ತಿದ್ದಾರೆ. ಅದೇ ರೀತಿ ಡೀಲ್ ಫೌಂಡೇಶನ್ ಸಂಸ್ಥೆಯು ವಿಕಲಚೇತನರಿಗಾಗಿ ಸ್ವ ಆರಂಭ ಉದ್ಯೋಗ ಕೇಂದ್ರವನ್ನು ಪ್ರತಿ ತಾಲೂಕಿನಲ್ಲಿ ಆರಂಭಿಸಿದೆ. ಅಲ್ಲಿ ಆಸಕ್ತಿ ಹೊಂದಿದ ವಿಕಲಚೇತನರು ಸ್ವಯಂ ಉದ್ಯೋಗದಲ್ಲಿ ತೊಡಗಬಹುದು ಜೊತೆಗೆ ವಿಕಲಚೇತನರು ತಯಾರಿಸಿದ ಕರಕುಶಲ ವಸ್ತುಗಳನ್ನು ಜೀವನ್ ಕಾರ್ಟ್ ಎಂಬ ವೆಬ್ಸೈಟ್ನಲ್ಲಿ ಮಾರಾಟ ಕೂಡ ಮಾಡಬಹುದು.ಈ ಅವಕಾಶವನ್ನು ಡೀಲ್ ಫೌಂಡೇಶನ್ ಸಂಸ್ಥೆಯು ವಿಕಲಚೇತನರಿಗೆ ನೀಡಿದೆ.ಹೀಗೆ ಹಲವಾರು ಅವಕಾಶಗಳನ್ನು ಸಂಸ್ಥೆಯು ವಿಕಲಚೇತನರಿಗೆ ನೀಡಿದೆ. ಆ ಅವಕಾಶಗಳನ್ನು ವಿಕಲಚೇತನರು ಉಪಯೋಗಿಸಿಕೊಂಡು ಸ್ವಯಂ ಉದ್ಯೋಗದಲ್ಲಿ ತೊಡಗಿದ್ದಾರೆ.ಇನ್ನು ಕೆಲ ವಿಕಲಚೇತನರು ಸ್ವಯಂ ಉದ್ಯೋಗದಲ್ಲಿ ತೊಡಗುವ ಮುನ್ನಡೆಯಲ್ಲಿದ್ದಾರೆ.ಇದರಿಂದ ಈ ಸಮಾಜದಲ್ಲಿ ವಿಕಲಚೇತನರು ತಮ್ಮನ್ನು ತಾವು ಗುರುತಿಸಿಕೊಳ್ಳುತ್ತಿದ್ದಾರೆ. ಅಂತಹ ವಿಕಲಚೇತನರಲ್ಲಿ ಹೇಳುವುದಾದರೆ ಸುನಂದ ಗಾಣಿಗೇರ ಇವರು ಕೂಡ ಒಬ್ಬರು.

ಇವರ ಬಾಲ್ಯ ಜೀವನ ನೋಡುವುದಾದರೆ ಸುನಂದ ಗಾಣಿಗೇರ್ ಇವರು ಮೂಲತಃ ನರಗುಂದ ತಾಲೂಕಿನ ಬೆನಕನಕೊಪ್ಪ ಗ್ರಾಮದವರು. ತಂದೆ ರಾಮಣ್ಣ,ತಾಯಿ ಶಾಂತವ್ವ.ಸುನಂದ ಅವರಿಗೆ ಇಬ್ಬರು ಅಣ್ಣಂದಿರು ಹಾಗೂ ಇಬ್ಬರು ಅಕ್ಕಂದಿರು.ಇವರಿಗೆ ಸುನಂದಾ ಅವರೇ ಕೊನೆಯ ಮಗಳು.ಒಟ್ಟು ಐದು ಜನ ಮಕ್ಕಳೊಂದಿಗೆ ಈ ಕುಟುಂಬ ಕೂಡಿತ್ತು.ಸುನಂದ ಅವರು ಹುಟ್ಟಿದ ಐದು ವರ್ಷದವರೆಗೆ ಯಾವುದೇ ತೊಂದರೆ ಇರಲಿಲ್ಲ ಎಲ್ಲ ಮಕ್ಕಳಂತೆ ಚೆನ್ನಾಗಿ ಆಟವಾಡುತ್ತಾ ಇದ್ದರು.5 ವರ್ಷದ ನಂತರ ಕ್ರಮೇಣವಾಗಿ ಇವರ ಬೆನ್ನು ಬಾಗುತ್ತ ಹೋಯಿತು.ತಂದೆ ತಾಯಿಯು ಕೂಲಿ ಕೆಲಸ ಮಾಡುತ್ತಿದ್ದರು ಅದರಲ್ಲಿಯೂ ಸುನಂದ ಅವರನ್ನು ಎಲ್ಲಾ ಆಸ್ಪತ್ರೆಗಳಿಗೂ ಚಿಕಿತ್ಸೆ ಕೊಡಿಸಿದರು ಆದರೆ ಯಾವುದೇ ಬದಲಾವಣೆ ಕಾಣಲಿಲ್ಲ.ಡಾಕ್ಟರ್ ಇವರ ಬೆನ್ನು ಮೂಳೆ ನರದೋಷದಿಂದ ಬಾಗಿದೆ ಇದಕ್ಕೆ ಯಾವುದೇ ಚಿಕಿತ್ಸೆ ಇಲ್ಲ ಸಾಧ್ಯವಾದಷ್ಟು ಭಾಗದಂತೆ ನೋಡಿಕೊಳ್ಳಿ ಎಂದು ಹೇಳಿದರು.ತಂದೆ ತಾಯಿಗೆ ಆತಂಕವಾಗಿ ಚಿಂತೆಗೆ ಒಳಗಾದರು.

ನಂತರ ಸುನಂದ ಅವರನ್ನು ಮನೆ ಹತ್ತಿರ ವಿದ್ದ ಸರ್ಕಾರಿ ಶಾಲೆಗೆ ಒಂದನೇ ತರಗತಿಗೆ ಸೇರಿಸಿದರು. ಮನೆಯಲ್ಲಿ ಬಡತನವಿದ್ದರೂ ಮಗಳನ್ನು ಚೆನ್ನಾಗಿ ಓದಿಸಬೇಕು ಎಂಬ ಆಸೆ ಅವರ ತಂದೆ ತಾಯಿಯದಾಗಿತ್ತು.ಓದುವ ಹಂಬಲವೂ ಸುನಂದ ಅವರಲ್ಲಿ ಮೂಡಿತು.ಅದರಂತೆ ಐದನೇ ತರಗತಿಯವರೆಗೂ ಅಲ್ಲಿಯ ಶಾಲೆ ಕಲಿತರು. ನಂತರ ಆರನೇ ತರಗತಿಗೆ ಮನೆಯಲ್ಲಿ ಕಷ್ಟವಿದ್ದ ಕಾರಣ ಅವರನ್ನು ಗದಗನಲ್ಲಿ ಹಾಸ್ಟೆಲ್ ಗೆ ಸೇರಿಸಿದರು.ಸುನಂದ ಅವರು ತಂದೆ ತಾಯಿಯನ್ನು ಬಿಟ್ಟಿರಲು ಕಷ್ಟವಾದರೂ ಬಡತನಕ್ಕಾಗಿ ಸಹಿಸಿಕೊಂಡು ಹಾಸ್ಟೆಲ್ ನಲ್ಲಿ ವಿದ್ಯಾಭ್ಯಾಸ ಮುಂದುವರಿಸಿದರು.ಹೀಗೆ ಇವರ ತಂದೆ ತಾಯಿ ಕೂಲಿ ಕೆಲಸ ಮಾಡುತ್ತ ಇಬ್ಬರು ಹೆಣ್ಣು ಮಕ್ಕಳಿಗೆ ಮದುವೆ ಮಾಡಿದರು.

ಹೀಗೆ ಸುನಂದ ಅವರು ಹಾಸ್ಟೆಲ್ ನಲ್ಲಿ ಇದ್ದು ಪಿಯುಸಿ ವರೆಗೆ ಶಿಕ್ಷಣ ಕಲಿತು ಇನ್ನೂ ತಂದೆ ತಾಯಿಗೆ ನನ್ನಿಂದ ಏನಾದರೂ ಸಹಾಯ ಮಾಡಬೇಕು ಎಂದು ಶಿಕ್ಷಣ ಬಿಟ್ಟು ಊರಿಗೆ ಮರಳಿ ಬಂದರು.ವಿಕಲಚೇತನತೆ ಹೊಂದಿದ್ದರು ಏನಾದರೂ ಮಾಡಿ ಸಾಧಿಸಬೇಕು ನನ್ನ ಕುಟುಂಬಕ್ಕೆ ಆರ್ಥಿಕವಾಗಿ ಸಹಾಯ ಮಾಡಬೇಕು ಎಂಬ ಆಸೆ ಸುನಂದ ಅವರದಾಗಿತ್ತು. ಆದರೆ ಹಣದ ಕೊರತೆಯ ಇದ್ದ ಕಾರಣ ಮುಂದೆ ಬರಲಿಲ್ಲ.ಹೀಗೆ ಒಮ್ಮೆ ಡೀಲ್ ಫೌಂಡೇಶನ್ ಸಂಸ್ಥೆಯ ಲವ್ಲಿ ವುಡ್ ಆಫೀಸರ್ ಆದ ಸಂಗೀತ ಅವರು ಬೆನಕನಕೊಪ್ಪ ಗ್ರಾಮಕ್ಕೆ ಭೇಟಿ ನೀಡಿ ಅಲ್ಲಿನ ವಿ ಆರ್ ಡಬ್ಲ್ಯೂ ಅವರಿಗೆ ಡೀಲ್ ಫೌಂಡೇಶನ್ ಸಂಸ್ಥೆಯ ಬಗ್ಗೆ ಮಾಹಿತಿ ಕೊಟ್ಟು ಅವರಿಂದ ವಿಕಲಚೇತನರ ಬಗ್ಗೆ ತಿಳಿದುಕೊಂಡರು.ನಂತರ ಸಂಗೀತ ಅವರು ಅಲ್ಲಿನ ವಿಕಲಚೇತನರನ್ನು ಒಂದು ಕಡೆ ಸೇರಿಸಿ ಅವರಿಗೆ ಸಂಸ್ಥೆಯ ಬಗ್ಗೆ ಮತ್ತು ಸ್ವಸಹಾಯ ಸಂಘದ ಬಗ್ಗೆ ಮಾಹಿತಿ ನೀಡಿದರು. ನಂತರ ಅಲ್ಲಿ ಸೇರಿದ್ದ ವಿಕಲಚೇತನರು ಆಸಕ್ತಿ ಹೊಂದಿ ಸಂಘ ರಚಿಸಲು ಒಪ್ಪಿಕೊಂಡರು.ಅದರಂತೆ 10 ಜನ ವಿಕಲಚೇತನರನ್ನು ಸೇರಿಸಿ ಅದಕ್ಕೆ “ಶ್ರೀ ಕುಟುಂಬ ವಿಕಲಚೇತನರ ಸ್ವಸಹಾಯ ಸಂಘ”ಎಂದು ಹೆಸರಿಟ್ಟರು. ಆ ಸಂಘದಲ್ಲಿ ಸುನಂದ ಅವರು ಕೂಡ ಒಬ್ಬರು ಸದಸ್ಯರಾದರು. ನಂತರ ಆ ಸಂಘವನ್ನು ಕೆವಿಜಿ ಬ್ಯಾಂಕ್ ನಲ್ಲಿ ಖಾತೆ ತೆರೆದರು. ಪ್ರತಿ ತಿಂಗಳ ನೂರು ರೂಪಾಯಿ ಉಳಿತಾಯ ತುಂಬುದಾಗಿ ತೀರ್ಮಾನಿಸಿದರು.ಈ ಸಂಘದಲ್ಲಿ ಸುನಂದ ಅವರೇ ಪ್ರತಿನಿಧಿಯಾಗಿ ಆಯ್ಕೆಯಾದರು.

ನಂತರ ಈ ಸಂಘಕ್ಕೆ ಸಂಗೀತ ಅವರು ಬುಕ್ ರೈಟಿಂಗ್ ತರಬೇತಿ,ಲೀಡರ್ಶಿಪ್ ತರಬೇತಿ,2016ರ ಡಿಸ್ ಎಬಿಲಿಟಿ ಅವೆರ್ನೆಸ್ ತರಬೇತಿ ಮತ್ತು ಸರ್ಕಾರದಿಂದ ಸಿಗುವ ಸೌಲಭ್ಯಗಳ ಕುರಿತು ಮಾಹಿತಿಯನ್ನು ನೀಡಿದರು. ಹೀಗೆ ಉದ್ಯೋಗದಲ್ಲಿ ಆಸಕ್ತಿ ಹೊಂದಿದ ಸುನಂದ ಅವರಿಗೆ ಇದು ಅವಕಾಶ ದೊರಕಿದಂತಾಯಿತು. ಮುಂದೆ ಸಂಘದಿಂದ ಲೋನ್ ಪಡೆದುಕೊಂಡು ಉದ್ಯೋಗದಲ್ಲಿ ತೊಡಗಬೇಕು ಎಂದು ತೀರ್ಮಾನಿಸಿದರು. ಹೀಗೆ ಸಂಘವನ್ನು ಪ್ರತಿ ತಿಂಗಳು ಮೀಟಿಂಗ್ ಮಾಡಿ ಯಾವುದೇ ಅಡಚಣೆ ಬರದ ಹಾಗೆ ನೋಡಿಕೊಂಡು ಹೋಗುತ್ತಿದ್ದಾರೆ.

ನಂತರ ಸುನಂದ ಅವರು ಪುಟ್ಟದಾಗಿ ಕಿರಣಿ ಅಂಗಡಿ ಇಟ್ಟು ಉದ್ಯೋಗ ಮಾಡುತ್ತೇನೆ ಎಂದು ತೀರ್ಮಾನಿಸಿದರು. ಅದರಂತೆ ಮನೆಯವರ ಸಹಕಾರದಿಂದ ಮನೆಯ ಮುಂದೆ ಉದ್ಯೋಗ ಆರಂಭಿಸಿದರು.ದಿನ ಕಳೆದ ಹಾಗೆ ವ್ಯಾಪಾರ ಚೆನ್ನಾಗಿ ಆಯಿತು ಈ ಅಂಗಡಿಯನ್ನು ದೊಡ್ಡ ಪ್ರಮಾಣದಲ್ಲಿ ಹಾಕೋಣ ಎಂದು ತೀರ್ಮಾನಿಸಿ ಸಂಘದಿಂದ ಎಲ್ಲ ಸದಸ್ಯರ ಒಪ್ಪಿಗೆಯಿಂದ 20,000/- ಉಳಿತಾಯದಿಂದ ಸಾಲವನ್ನು ಪಡೆದುಕೊಂಡು ಕುಟುಂಬದ ಸಹಕಾರದೊಂದಿಗೆ ತಮ್ಮ ಊರಿನಲ್ಲಿ ಒಂದು ಅಂಗಡಿ ಬಾಡಿಗೆ ಹಿಡಿದು ಕಿರಾಣಿ ಅಂಗಡಿ ಜೊತೆಗೆ ಟೀ ವ್ಯಾಪಾರ ಮಾಡಲು ಆರಂಭಿಸಿದರು. ಅವರ ಅಣ್ಣಂದಿರು ಕೂಡ ಸುನಂದ ಅವರಿಗೆ ಬೆನ್ನೆಲುಬಾಗಿ ನಿಂತು ಸಹಾಯ ಮಾಡುತ್ತಿದ್ದಾರೆ.ಹೀಗೆ ಸುನಂದ ಅವರು ಆರ್ಥಿಕವಾಗಿ ಮುಂದೆ ಬರುತ್ತಿದ್ದಾರೆ.ಇದರಿಂದ ಅವರ ಕುಟುಂಬಕ್ಕೂ ಸಹಾಯಕವಾಗಿ ವಿಕಲಚೇತನತೆ ಹೊಂದಿದ್ದರು ಧೈರ್ಯವಾಗಿ ಮುಂದೆ ಬರುತ್ತಿದ್ದಾರೆ.

ಹೀಗೆ ಸ್ವ ಸಹಾಯ ಸಂಘದಿಂದ ಡೀಲ್ ಫೌಂಡೇಶನ್ ಸಂಸ್ಥೆಯಿಂದ ತರಬೇತಿ ಪಡೆದುಕೊಂಡು ಉದ್ಯೋಗದಲ್ಲಿ ತೊಡಗಿದ ಸುನಂದ ಅವರು ಡೀಲ್ ಫೌಂಡೇಶನ್ ಸಂಸ್ಥೆಯ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.ಅದು ನನ್ನ ಕುಟುಂಬವು ಬಡತನದಲ್ಲಿತ್ತು ಅದರಿಂದ ವಿದ್ಯಾಭ್ಯಾಸ ಬಿಟ್ಟು ಏನಾದರೂ ಸಾಧಿಸಬೇಕು ಎಂಬ ಹಠ ಇತ್ತು ಅದಕ್ಕೆ ಆರ್ಥಿಕ ಪರಿಸ್ಥಿತಿ ಅಡ್ಡಿಯಾಗಿತ್ತು.ನನ್ನ ಕುಟುಂಬದವರಿಗೆ ನಾನು ಹೊರೆಯಾಗುತ್ತಿದ್ದೇನೆ ಎಂಬ ಭಾವನೆ ಮೂಡಿತು.ಆದರೆ ಅದೇ ಸಮಯಕ್ಕೆ ಡೀಲ್ ಫೌಂಡೇಶನ್ ಸಂಸ್ಥೆಯಿಂದ ಸಂಗೀತ ಅವರು ವಿಕಲಚೇತನರಿಗೆ ಸಿಗುವ ಸೌಲಭ್ಯಗಳ ಕುರಿತು ಮಾಹಿತಿ ಮತ್ತು ತರಬೇತಿಯನ್ನು ನೀಡಿ ಸ್ವಸಹಾಯ ಸಂಘದಲ್ಲಿ ತೊಡಗಿಸಿ ಅದರಿಂದ ಅಲ್ಪ ಪ್ರಮಾಣದಲ್ಲಿ ಉಳಿತಾಯದಿಂದ ನಮ್ಮ ಮುಂದಿನ ಜೀವನಕ್ಕೆ ಕೂಡಿ ಇಡುತಿದ್ದೇವೆ.ಈ ಉದ್ಯೋಗದ ತರಬೇತಿ ಪಡೆದುಕೊಂಡ ನಂತರ ನಾನು ಉದ್ಯೋಗದಲ್ಲಿ ತೊಡಗಬೇಕು ಎಂಬ ಛಲ ಮೂಡಿತು.ಅದರಂತೆ ಚಿಕ್ಕದಾಗಿ ಆರಂಭಿಸಿದ ನನ್ನ ಪ್ರಯತ್ನಕ್ಕೆ ಫಲ ಸಿಕ್ಕಿತು.ಅದು ಡೀಲ್ ಫೌಂಡೇಶನ್ ಸಂಸ್ಥೆಯ ಸಹಾಯದಿಂದ.ಹೀಗೆ ಸಂಘ ರಚನೆ ಮಾಡಿದ್ದರಿಂದ ತುಂಬಾ ಅನುಕೂಲವಾಗಿದೆ ನನ್ನ ಕಷ್ಟದಲ್ಲಿ ಸಾಲದ ಮೂಲಕ ಸಹಾಯಕವಾಗಿದೆ.ಇದರಿಂದ ನನ್ನನ್ನು ನಾನು ಗುರುತಿಸಿಕೊಂಡು ಸ್ವಾವಲಂಬನೆ ಜೀವನ ನಡೆಸುವಂತೆ ಮಾಡಿದ್ದಾರೆ. ಇಷ್ಟೆಲ್ಲ ಸಹಕಾರ ನೀಡಿದ ಡೀಲ್ ಫೌಂಡೇಶನ್ ಸಂಸ್ಥೆಗೆ ಹಾಗೂ ಸಂಗೀತ ಅವರಿಗೂ ಧನ್ಯವಾದಗಳು ಅರ್ಪಿಸುತ್ತೇನೆ. ಹೀಗೆ ಯಾವಾಗಲೂ ಸಹಕಾರ ನೀಡಿ ನಮ್ಮಂತಹ ವಿಕಲಚೇತನರನ್ನು ಗುರುತಿಸಿ ಬೆಳಸಲಿ ಎಂದು ಕೇಳಿಕೊಳ್ಳುತ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಹೀಗೆ ಡೀಲ್ ಫೌಂಡೇಶನ್ ಸಂಸ್ಥೆಯು ಇಂತಹ ಅನೇಕ ವಿಕಲಚೇತನರನ್ನು ಗುರುತಿಸಿ ಅವರಿಗೆ ಧೈರ್ಯ ತುಂಬುವುದರ ಮೂಲಕ ವಿಕಲಚೇತನತೆಯು ಯಾವುದಕ್ಕೂ ಅಡ್ಡಿಯಲ್ಲ ಎಲ್ಲ ವಿಕಲಚೇತನರು ಜನಸಾಮಾನ್ಯರಂತೆ ಎಂದು ಈ ಸಮಾಜಕ್ಕೆ ವಿಕಲಚೇತನರು ಗುರುತಿಸಿಕೊಳ್ಳುವಂತೆ ಮಾಡುತ್ತಿದ್ದಾರೆ.ಹೀಗೆ ಡೀಲ್ ಫೌಂಡೇಶನ್ ಸಂಸ್ಥೆಯ ಕಾರ್ಯಗಳು ಹೆಚ್ಚಿನ ಮಟ್ಟದಲ್ಲಿ ಬೆಳೆಯಲಿ ಯಶಸ್ವಿಯಾಗಲಿ ಎಂದು ಎಲ್ಲ ವಿಕಲಚೇತನರು ಹಾರೈಸುತ್ತಿದ್ದಾರೆ.

ಈ ಬ್ಲಾಗ್ ಗೆ ಸಂಬಂಧಿಸಿದಂತೆ ಯಾವುದೇ ನಿರ್ದಿಷ್ಟ ಪ್ರಶ್ನೆಗಳಿಗೆ ಅಥವಾ ಯಾವುದೇ ಸಹಾಯಕ್ಕಾಗಿ Info@deal-foundation.com ನಲ್ಲಿ ತಿಳಿಸಿರಿ ಮತ್ತು ನಾವು ಮಾಡುವ ಕೆಲಸದ ಕುರಿತು ಇನ್ನಷ್ಟು ತಿಳಿದುಕೊಳ್ಳಲು www.deal-foundation ಗೆ ಲಾಗ್ ಇನ್ ಮಾಡಿ.

ಧನ್ಯವಾದಗಳು

Scroll to Top