ವಿಕಲಚೇತನ ಮತ್ತು ಮಹಿಳೆಯರ ಸ್ವಾವಲಂಬನೆ ಜೀವನಕ್ಕಾಗಿ ಡೀಲ್ ಫೌಂಡೇಶನ್ ಸಂಸ್ಥೆಯು ತರಬೇತಿಗಳನ್ನು ನೀಡಿ ಅವರ ಅಭಿವೃದ್ಧಿಗಾಗಿ ಅನೇಕ ತರಬೇತಿಗಳ ಮಾರ್ಗವನ್ನು ನೀಡುತ್ತಿದೆ.ಅದು ವಿಕಲಚೇತನರು ಮತ್ತು ಮಹಿಳೆಯರ ಸ್ವಸಹಾಯ ಸಂಘ ರಚಿಸಿ ಅವರಿಗೆ ಡೀಲ್ ಫೌಂಡೇಶನ್ ನಿಂದ ಕುಂಕುಮ ತರಬೇತಿ,ಮೇಣದಬತ್ತಿಯ ತರಬೇತಿ,ಪೇಪರ್ ಬ್ಯಾಗ್ ತರಬೇತಿ,ಜೇನು ಸಾಕಾಣಿಕೆ ಮುಂತಾದ ತರಬೇತಿಗಳನ್ನು ನೀಡಿ ಬ್ಯಾಂಕ್ನಿಂದ ಸಾಲವನ್ನು ಕೊಡಿಸಿ ಅವರ ಆರ್ಥಿಕ ಜೀವನಕ್ಕೆ ಸಹಾಯಕವಾಗುವಂತೆ ಪ್ರತಿ ತಾಲೂಕಿನಲ್ಲಿ ಲವ್ಲಿ ವುಡ್ ಆಫೀಸರ್ಸ್ ಕಾರ್ಯನಿರ್ವಹಿಸುತ್ತಿದ್ದಾರೆ. ಇದರಿಂದ ಪ್ರತಿ ತಾಲೂಕಿನಲ್ಲಿ ಅನೇಕ ಮಹಿಳೆಯರು ಮತ್ತು ವಿಕಲಚೇತನರು ತಮ್ಮ ಸ್ವಾವಲಂಬನೆ ಜೀವನವನ್ನು ಕಟ್ಟಿಕೊಂಡಿದ್ದಾರೆ.
ಮಹಿಳೆಯರು ಕೂಡ ಯಾವುದಕ್ಕೂ ಕಡಿಮೆ ಇಲ್ಲ ಅವರಿಗೂ ಅವಕಾಶದ ಮಾರ್ಗವನ್ನು ಸೂಚಿಸಿದರೆ ಏನನ್ನಾದರೂ ಸಾಧಿಸುತ್ತಾರೆ ಎನ್ನುವುದಕ್ಕೆ ಪ್ರತಿ ತಾಲೂಕಿನಲ್ಲಿ ಲವ್ಲಿ ವುಡ್ ಆಫೀಸರ್ ರಚಿಸಿದ ಮಹಿಳಾ ಸ್ವಸಹಾಯ ಸಂಘಗಳು ಉದಾಹರಣೆಯಾಗಿವೆ. ಅಂತಹ ಸ್ವಸಹಾಯ ಸಂಘಗಳ ಬಗ್ಗೆ ಹೇಳುವುದಾದರೆ ಮುಂಡರಗಿ ತಾಲೂಕಿನ ಏಕ್ಲಸ್ ಪುರ ಗ್ರಾಮದ “ರೇಣುಕಾದೇವಿ ಮಹಿಳಾ ಸ್ವಸಹಾಯ ಸಂಘ” ಕೂಡ ಒಂದು.
ಈ ಸಂಘದ ಬಗ್ಗೆ ನೋಡುವುದಾದರೆ ಮುಂಡರಗಿ ತಾಲೂಕಿನ ಲವ್ಲಿ ಹುಡ್ ಆಫೀಸರ್ ಆದ ರೇಣುಕಾ ಕಲ್ಲಳ್ಳಿ ಇವರು ಏಟ್ ಯಕ್ಲಾಸಪುರ ಗ್ರಾಮಕ್ಕೆ ಭೇಟಿ ನೀಡಿ ಅಲ್ಲಿನ ವಿಕಲಚೇತನರನ್ನು ಭೇಟಿ ಮಾಡಿ ಅವರಿಗೆ ಡೀಲ್ ಫೌಂಡೇಶನ್ ಸಂಸ್ಥೆ ಕಾರ್ಯಗಳ ಬಗ್ಗೆ ಮಾಹಿತಿ ನೀಡಿ ವಿಕಲಚೇತನರಿಗೆ ಸ್ವಸಹಾಯ ಸಂಘ ರಚಿಸುವುದರಿಂದ ಸಿಗುವ ತರಬೇತಿಗಳ ಬಗ್ಗೆ ಮಾಹಿತಿ ನೀಡಿದರು.ಹೀಗೆ ಅವರೆಲ್ಲರ ಆಸಕ್ತಿಯಂತೆ ಅಲ್ಲಿ ಸಂಘವನ್ನು ರಚಿಸಿ ತರಬೇತಿಗಳನ್ನು ನೀಡಿದರು. ಹೀಗೆ ಪ್ರತಿ ತಿಂಗಳು ರೇಣುಕಾ ಅವರು ಆ ಗ್ರಾಮದ ಸಂಘಗಳಿಗೆ ಭೇಟಿ ನೀಡುವುದನ್ನು ಗಮನಿಸಿ ಅಲ್ಲಿನ ಮಹಿಳೆಯರು ರೇಣುಕಾ ಅವರೊಂದಿಗೆ ಭೇಟಿ ಮಾಡಿ ನಾವು ಸ್ವಸಹಾಯ ಸಂಘವನ್ನು ರಚಿಸಿಕೊಳ್ಳಲು ಆಸಕ್ತಿ ಇದೆ ಅದರ ಮಾರ್ಗವನ್ನು ನಮಗೆ ನೀಡಬೇಕು ಎಂದು ಎಲ್ಲ ಮಹಿಳೆಯರು ತಮ್ಮ ಆಸಕ್ತಿಯನ್ನು ವ್ಯಕ್ತಪಡಿಸಿದರು.
ಅದರಂತೆ ರೇಣುಕಾ ಅವರು ಸರಿ ಆಯಿತು 10 ಜನ ಎಲ್ಲ ಮಹಿಳೆಯರ ದಾಖಲಾತಿಯನ್ನು ಹೊಂದಿಸಿ ನಾನು ನಿಮಗೆ ಸಂಘವನ್ನು ರಚಿಸಿ ಕೊಡುತ್ತೇನೆ ಎಂದು ಹೇಳಿದರು.ಆಗ ಎಲ್ಲ ಸದಸ್ಯರು ದಾಖಲಾತಿಯನ್ನು ಒಟ್ಟುಗೂಡಿಸಿ ಸಂಘಕ್ಕೆ ರೇಣುಕಾದೇವಿ ಮಹಿಳಾ ಸ್ವಸಹಾಯ ಸಂಘ ಎಂದು ಹೆಸರಿಟ್ಟು ಮೇವುಂಡಿಯ ಸುರಕ್ಷಿತ ವಿಕಲಚೇತನರ ಕೋ ಆಪರೇಟಿವ್ ಸೊಸೈಟಿಯಲ್ಲಿ 2023 ರಲ್ಲಿ ಖಾತೆಯನ್ನು ತೆರೆದರು.ನಂತರ ಈ ಸಂಘಕ್ಕೆ ರೇಣುಕಾ ಅವರು ಬುಕ್ ರೈಟಿಂಗ್ ತರಬೇತಿ,ಲೀಡರ್ ಶಿಪ್ ತರಬೇತಿಗಳನ್ನು ನೀಡಿದರು.ಹಾಗೆ ಪ್ರತಿ ತಿಂಗಳು ಮೀಟಿಂಗ್ ಮಾಡಿ ಎರಡು ನೂರು ರೂಪಾಯಿ ಉಳಿತಾಯವನ್ನು ಕಟ್ಟುತ ಸಂಘವನ್ನು ನಡೆಸಿಕೊಂಡು ಹೋಗುತ್ತಿದ್ದಾರೆ.
ನಂತರ ರೇಣುಕಾ ಅವರು ಸಂಘದ ಸದಸ್ಯರಿಗೆ ಉದ್ಯೋಗದ ಬಗ್ಗೆ ಮಾಹಿತಿ ನೀಡಿ ಡೀಲ್ ಫೌಂಡೇಶನ್ ವತಿಯಿಂದ ಮೇಣದಬತ್ತಿ ತರಬೇತಿ,ಕುಂಕುಮ ತರಬೇತಿ, ಪೇಪರ್ ಬ್ಯಾಗ್ ತರಬೇತಿ ಮುಂತಾದ ತರಬೇತಿಗಳನ್ನು ನೀಡಿದರು.ಇದರಿಂದ ಆಸಕ್ತಿ ಹೊಂದಿದ ಮಹಿಳೆಯರು ಉದ್ಯೋಗದಲ್ಲಿ ತೊಡಗಲು ಮುಂದಾದರು.ಉದ್ಯೋಗ ಮಾಡಲು ಬಂಡವಾಳ ಬೇಕು ಅದಕ್ಕಾಗಿ ಸಂಘದ ಉಳಿತಾಯದಿಂದ ಮೊದಲು ಲೋನ್ ತೆಗೆದುಕೊಂಡು ಉದ್ಯೋಗ ಆರಂಭಿಸಬೇಕು ಎಂದು ಕಾಸಿಂಬಿ ನದಾಫ್ ಇವರು 15,000/- ಲೋನ್ ತೆಗೆದುಕೊಂಡು ಕಿರಾಣಿ ಅಂಗಡಿ ಹಾಕಿ ಉದ್ಯೋಗ ಆರಂಭಿಸಿದರು.ಪ್ರತಿದಿನದ ಇವರು ಶ್ರಮಕ್ಕೆ ಲಾಭಾಂಶ ಚೆನ್ನಾಗಿ ಆಗುತ್ತಿದೆ.ಇವರನ್ನು ಕಂಡು ಉಳಿದ ಸದಸ್ಯರು ಉದ್ಯೋಗ ಮಾಡಲು ಮುಂದಾದರು.ಅದಕ್ಕಾಗಿ ಬ್ಯಾಂಕ್ ಲೋನ್ ಗಾಗಿ ಅರ್ಜಿ ಹಾಕಿ ಲೋನ್ ಪಡೆದುಕೊಳ್ಳಲು ಎಲ್ಲ ಸದಸ್ಯರು ತೀರ್ಮಾನಿಸಿದರು.
ಅದರಂತೆ ಪ್ರತಿ ತಿಂಗಳ ಮೀಟಿಂಗ್ ನಲ್ಲಿ ರೇಣುಕಾ ಅವರು ಸಹಕಾರದೊಂದಿಗೆ ಎಲ್ಲ ದಾಖಲಾತಿಯನ್ನು ಹೊಂದಿಸಿ ಬ್ಯಾಂಕ್ ನಲ್ಲಿ ಅರ್ಜಿ ಸಲ್ಲಿಸಿದರು.ಇದು ಇವರ ಮೊದಲನೇ ಲೋನ್ ಆಗಿರುವುದರಿಂದ ಮೊದಲು 50,000 ಲೋನ್ ಕೊಡುತ್ತೇವೆ ಎಂದು ಬ್ಯಾಂಕ್ ನಲ್ಲಿ ಹೇಳಿದರು.ಸದಸ್ಯರೆಲ್ಲರೂ ಚರ್ಚಿಸಿ ಮೊದಲು ಅವಶ್ಯಕತೆ ಇರುವವರು ಸಾಲವನ್ನು ಪಡೆದುಕೊಳ್ಳೋಣ ನಂತರ ಉಳಿದ ಸದಸ್ಯರು ತೆಗೆದುಕೊಳ್ಳೋಣ ಎಂದು ತೀರ್ಮಾನಿಸಿದರು.ಅದರಂತೆ ಸಂಘದ ಸದಸ್ಯರಲ್ಲಿ ಒಟ್ಟು ನಾಲ್ಕು ಜನ ಈ ಸಾಲವನ್ನು ತೆಗೆದುಕೊಂಡು ಉದ್ಯೋಗ ಮಾಡುತ್ತಿದ್ದಾರೆ.ಅದರಲ್ಲಿ ಇಮಾಮ್ ಬಿ ಹೊಸಮನಿ ಇವರು 15000/- ಲೋನ್ ತೆಗೆದುಕೊಂಡು ಕೃಷಿಗಾಗಿ ಉದ್ಯೋಗ ಮಾಡುತ್ತಿದ್ದಾರೆ. ಅದೇ ರೀತಿ ಫಾತಿಮಾ ನದಾಫ್ ಇವರು ಕೂಡ 15000/- ಲೋನ್ ತೆಗೆದುಕೊಂಡು ತರಕಾರಿ ವ್ಯಾಪಾರ ಆರಂಭಿಸಿದ್ದಾರೆ.ಅದರಂತೆ ಖಾಸಂಬಿ ನದಾಫ್ ಇವರು ಕೂಡ 15000/- ಲೋನ್ ತೆಗೆದುಕೊಂಡು ಕಿರಾಣಿ ಅಂಗಡಿಯ ವ್ಯಾಪಾರವನ್ನು ದೊಡ್ಡ ಪ್ರಮಾಣದಲ್ಲಿ ಮಾಡಿ ಉದ್ಯೋಗ ಮಾಡುತ್ತಿದ್ದಾರೆ. ಹಾಗೆ ಅಮೀನಾಭಿ ನದಾಫ್ ಇವರು ಕೂಡ 5000/- ಲೋನ ತೆಗೆದುಕೊಂಡು ಆಟೋ ಬಾಡಿಗೆ ಹಿಡಿದು ಅವರ ಕುಟುಂಬಕ್ಕೆ ಸಹಾಯ ಮಾಡಿದ್ದಾರೆ.
ಹೀಗೆ ಈ ಎಲ್ಲ ಮಹಿಳೆಯರು ಲೋನ್ ತೆಗೆದುಕೊಂಡು ಉದ್ಯೋಗ ಆರಂಭಿಸಿ ತಮ್ಮ ಕುಟುಂಬಗಳಿಗೂ ಆಧಾರವಾಗಿ ಆರ್ಥಿಕವಾಗಿ ಸದೃಢರಾಗುತ್ತಿದ್ದಾರೆ.ಹಾಗೆ ಅನೇಕ ಮಹಿಳೆಯರಿಗೆ ಮಾದರಿಯಾಗಿದ್ದಾರೆ.ಹೀಗೆ ಯಾವುದೇ ರೀತಿ ಕಟ್ಟು ಬಾಕಿ ಉಳಿಸದೆ ಸಾಲ ಮರುಪಾವತಿ ಮಾಡಿ ಸಂಘದಲ್ಲಿ ಯಾವುದೇ ಅಡಚಣೆ ಬರದ ಹಾಗೆ ನಡೆಸಿಕೊಂಡು ಹೋಗುತ್ತಿದ್ದಾರೆ.
ಹೀಗೆ ಸ್ವಯಂ ಉದ್ಯೋಗದಲ್ಲಿ ತೊಡಗಿದ ಮಹಿಳೆಯರ ಸ್ಫೂರ್ತಿಗೆ ಡೀಲ್ ಫೌಂಡೇಶನ್ ಸಂಸ್ಥೆಯು ಕಾರಣವಾಗಿದೆ ಎಂದು ಹೇಳಬಹುದು.ಸದಸ್ಯರೆಲ್ಲರೂ ಡೀಲ್ ಫೌಂಡೇಶನ್ ಸಂಸ್ಥೆಯ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ ಅದು ಮೊದಲು ವಿಕಲಚೇತನರಾಗಿ ಕಾರ್ಯ ನಿರ್ವಹಿಸುತ್ತಿರುವ ರೇಣುಕಾ ಅವರನ್ನು ಕಂಡು ನಮಗೆ ಸಂತೋಷವಾಯಿತು. ಈ ಸಂಸ್ಥೆಯಿಂದ ನಮಗೆ ಅನುಕೂಲವಾಗಲಿ ಎಂದು ಸಂಘವನ್ನು ರಚಿಸಿದವು.ಸಂಘ ರಚನೆ ಮಾಡಿದ್ದರಿಂದ ಉಳಿತಾಯದ ಮೂಲಕ ಸ್ವಲ್ಪ ಹಣವಾದರೂ ಕೂಡಿ ಇಡುತ್ತಿದ್ದೇವೆ.ಜೊತೆಗೆ ಈ ಸಂಘ ರಚಿಸಿದ್ದರಿಂದ ನಮಗೆ ಉದ್ಯೋಗದ ತರಬೇತಿಗಳನ್ನು ರೇಣುಕಾ ಅವರು ನೀಡಿದರು. ಜೊತೆಗೆ ಈ ಸಂಘದಿಂದ ಲೆಕ್ಕದ ವ್ಯವಹಾರದ ಬಗ್ಗೆ ಮಾಹಿತಿ ಕೂಡ ನಮಗೆ ನೀಡಿದರು.ಹಾಗೆ ನಮ್ಮಲ್ಲಿ ಅಡಗಿದ್ದ ಉದ್ಯೋಗದ ಆಸಕ್ತಿಯನ್ನು ಗುರುತಿಸಿ ಇಲ್ಲಿಯವರೆಗೂ ಬೆಳೆಯುವಂತೆ ಈ ಸಂಸ್ಥೆಯು ನಮಗೆ ಸ್ಪೂರ್ತಿ ನೀಡಿದೆ. ಹಾಗೆ ಕಡಿಮೆ ಬಡ್ಡಿ ಯಲ್ಲಿ ಸಾಲವನ್ನು ಕೂಡ ನಮಗೆ ದೊರಕಿದೆ ನಮ್ಮ ಕುಟುಂಬದವರು ನಮ್ಮನ್ನು ಗುರುತಿಸಿ ಆರ್ಥಿಕವಾಗಿ ಮುಂದೆ ಬರುವಂತೆ ಬೆನ್ನೆಲುಬಾಗಿ ನಿಂತಿದ್ದಾರೆ. ಇಷ್ಟೆಲ್ಲ ಸಹಕಾರ ನೀಡಿದ ಡೀಲ್ ಫೌಂಡೇಶನ್ ಸಂಸ್ಥೆಗೆ ಹಾಗೂ ರೇಣುಕಾ ಅವರಿಗೂ ನಮ್ಮ ಸಂಘದ ಸದಸ್ಯರೆಲ್ಲರ ಪರವಾಗಿ ಧನ್ಯವಾದಗಳು ಅರ್ಪಿಸುತ್ತೇವೆ.ಹೀಗೆ ನಿಮ್ಮ ಸಹಾಯ ಸಹಕಾರದಿಂದ ಇನ್ನಷ್ಟು ನಮ್ಮಂತ ಮಹಿಳೆಯರನ್ನು ಗುರುತಿಸಿ ಸ್ವಾವಲಂಬನೆ ಜೀವನಕ್ಕೆ ಮಾರ್ಗ ಸೂಚನೆ ನೀಡಿ ಎಂದು ಕೇಳಿಕೊಳ್ಳುತ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಹೀಗೆ ಮಹಿಳೆಯರೆಲ್ಲರೂ ಆರ್ಥಿಕವಾಗಿ ಸದೃಢರಾಗಿ ತಮ್ಮ ಕುಟುಂಬವನ್ನು ಬೆಳೆಸುತ್ತಾ ತಾವು ಈ ಸಮಾಜದಲ್ಲಿ ತಮ್ಮನ್ನು ತಾವು ಗುರುತಿಸಿಕೊಳ್ಳುತ್ತಿದ್ದಾರೆ.ಹಾಗೆ ಡೀಲ್ ಫೌಂಡೇಶನ್ ಸಂಸ್ಥೆಯ ಕೀರ್ತಿಯು ಹೆಚ್ಚು ಬೆಳಗಲಿ ಎಂದು ಎಲ್ಲ ವಿಕಲಚೇತನರು ಹಾಗೂ ಮಹಿಳೆಯರಿಗೆ ಬೆಂಬಲವಾಗಿ ನಿಂತು ಮಾರ್ಗವನ್ನು ಸೂಚಿಸುತ್ತಾ ಅವರ ಜೀವನಕ್ಕೆ ಸಹಾಯವಾಗಲಿ ಎಂದು ಎಲ್ಲಾ ಮಹಿಳೆಯರು ಹಾರೈಸುತ್ತಿದ್ದಾರೆ.
ಈ ಬ್ಲಾಗಗೆ ಸಂಬಂಧಿಸಿದಂತೆ ಯಾವುದೇ ನಿರ್ದಿಷ್ಟ ಪ್ರಶ್ನೆಗಳಿಗೆ ಅಥವಾ ಯಾವುದೇ ಸಹಾಯಕ್ಕಾಗಿ Info@deal-foundation.com ನಲ್ಲಿ ತಿಳಿಸಿರಿ ಮತ್ತು ನಾವು ಮಾಡುವ ಕೆಲಸದ ಕುರಿತು ಇನ್ನಷ್ಟು ತಿಳಿದುಕೊಳ್ಳಲು www.deal-foundation ಗೆ ಲಾಗ್ ಇನ್ ಮಾಡಿರಿ.
ಧನ್ಯವಾದಗಳು