Empower Abilities, Change Lives

Your support helps us create a world where abilities shine beyond disabilities. Every donation provides essential resources, education, and opportunities for individuals to thrive. Together, we can break barriers and build a more inclusive future.

Donate Now & Make a Difference!

World Where Ability, Not Disability, Counts

ಡೀಲ್ ಫೌಂಡೇಶನ್ ಸಂಸ್ಥೆಯು ಪ್ರತಿ ತಾಲೂಕಿನಲ್ಲಿ ವಿಕಲಚೇತನರು ಮತ್ತು ಮಹಿಳೆಯರಿಗೆ ಜೀವನೋಪಾಯ ಕೌಶಲ್ಯ ತರಬೇತಿಗಳನ್ನು ನೀಡುವ ಮೂಲಕ ಸ್ವಸಹಾಯ ಸಂಘಗಳ ನಿರ್ಮಾಣ ಮತ್ತು ಸ್ವಾವಲಂಬನೆಗೆ ನೆರವಾಗುವ ಪ್ರಭಾವಶೀಲ ಕಾರ್ಯಾಚರಣೆ – ಗದಗ ತಾಲ್ಲೂಕಿನ ಅನ್ನಕ್ಕಾಳ್ ಅವರ ಪ್ರೇರಣಾದಾಯಕ ಉದ್ಯೋಗ ಯಶಸ್ಸಿನ ಕಥೆ

ಡೀಲ್ ಫೌಂಡೇಶನ್ ಸಂಸ್ಥೆಯು ವಿಕಲಚೇತನರಿಗೆ ಮತ್ತು ಮಹಿಳೆಯರಿಗೆ ಪ್ರತಿ ತಾಲೂಕಿನಲ್ಲಿ ಜೀವನೋಪಾಯದ ಕೌಶಲ್ಯಗಳ ಅಭಿವೃದ್ಧಿ ತರಬೇತಿಗಳನ್ನು ಒದಗಿಸುವುದು, ಕಾರ್ಯಗಾರಗಳನ್ನು ಆಯೋಜಿಸುತ್ತಾ ಬರುತ್ತಿದೆ. ಮಹಿಳೆಯರು ಮತ್ತು ವಿಕಲಚೇತನರ ಜೀವನದಲ್ಲಿ ಏನು ಮಾಡಲು ಆಗುತ್ತಿಲ್ಲ ಅವಕಾಶಗಳು ಕೂಡ ಸಿಗುತ್ತಿಲ್ಲ ಎಂಬ ಜಿಗುಪ್ಸೆಯಿಂದ ತಮ್ಮ ಮನೆಗಳಿಗೆ ಮಾತ್ರ ಸೀಮಿತವಾಗಿರುತ್ತಾರೆ.ಅಂತಹ ವಿಕಲಚೇತನರನ್ನು ಡೀಲ್ ಫೌಂಡೇಶನ್ ಸಂಸ್ಥೆಯು ಗುರುತಿಸಿ ಪ್ರತಿ ತಾಲೂಕಿನಲ್ಲಿ ಮೂಲಕ ಅವರಿಗೆ ತರಬೇತಿಗಳನ್ನು ನೀಡಿ ಅವಕಾಶಗಳನ್ನು ನೀಡುತ್ತಿದೆ.

ಹೌದು ಡೀಲ್ ಫೌಂಡೇಶನ ಸಂಸ್ಥೆಯಿಂದ ಲವ್ಲಿವುಡ್ ಆಫೀಸರ್ಸ್ ವಿಕಲಚೇತನರ ಸ್ವಸಹಾಯ ಸಂಘಗಳನ್ನು ರಚಿಸಿ ಅವರಿಗೆ ತರಬೇತಿಗಳನ್ನು ನೀಡಿ ಸ್ವಾವಲಂಬನೆ ಜೀವನಕ್ಕೆ ಸಹಾಯಕ ಮಾಡುತ್ತಿದ್ದಾರೆ. ಪ್ರತಿ ತಾಲೂಕಿನಲ್ಲಿ ವಿಕಲಚೇತರು ತಮ್ಮ ಆರ್ಥಿಕ ಜೀವನ ಮಟ್ಟವನ್ನು ಸುಧಾರಣೆ ಹೊಂದಿದ್ದಾರೆ ಅಂತಹ ಮಹಿಳೆಯರಲ್ಲಿ ಹೇಳುವುದಾದರೆ ಅನ್ನಕ್ಕ ಕಳ್ಯಾಳ ಇವರು ಕೂಡ ಒಬ್ಬರು.

ಇವರು ಮೂಲತಃ ಗದಗ್ ತಾಲೂಕಿನ ಹಾತಲಗೇರಿ ಗ್ರಾಮದವರು.ತಂದೆ ಗಂಗನಗೌಡ ತಾಯಿ ದ್ರಾಕ್ಷಾಯಿಣಿ.ಇವರು ಬಡತನ ಕುಟುಂಬದವರಾಗಿತ್ತು.ತಂದೆ ತಾಯಿ ಗೆ ಒಬ್ಬರೇ ಮುದ್ದಿನ ಮಗಳಾಗಿದ್ದರು.ಇವರಿಗೆ ಓದಲು ತುಂಬಾ ಆಸಕ್ತಿ ಇತ್ತು. ಆದರೆ ಮನೆಯಲ್ಲಿ ಬಡತನ ಪರಿಸ್ಥಿತಿ ಇತ್ತು ಅದಕ್ಕಾಗಿ ಪಿಯುಸಿ ವರೆಗೆ ಶಿಕ್ಷಣ ಮುಗಿಸಿಬಿಟ್ಟರು.ನಂತರ ತಂದೆ ತಾಯಿ ಅನ್ನಕ್ಕ ಇವರನ್ನು ಮದುವೆ ಮಾಡಿದರು.ಹೆಚ್ಚು ವಿದ್ಯಾಭ್ಯಾಸ ಮಾಡಿ ಏನಾದರೂ ಸಾಧಿಸಬೇಕು ಎಂಬ ಛಲ ಅನ್ನಕ್ಕ ಅವರದಾಗಿತ್ತು.ಆದರೆ ಬಡತನ ಇರುವ ಕಾರಣ ಶಿಕ್ಷಣ ಕೊನೆಗೊಳಿಸಿ ತಂದೆ ತಾಯಿಯ ಮಾತಿಗೆ ಬೆಲೆ ಕೊಟ್ಟು ಮದುವೆಯಾದರು.

ನಂತರ ಇವರಿಗೆ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಇವರ ಕುಟುಂಬ ಖುಷಿಯಿಂದ ಕೂಡಿತ್ತು.ಅನ್ನಕ್ಕ ಅವರು ಹೆಚ್ಚಿನ ಶಿಕ್ಷಣ ಮಾಡಲಿಕ್ಕೆ ಆಗಲಿಲ್ಲ ಆದರೆ ನನ್ನ ಮಕ್ಕಳು ಚೆನ್ನಾಗಿ ಕಲಿತು ವಿದ್ಯಾವಂತರಾಗಬೇಕು ಎಂದು ಮನೆಯಲ್ಲಿಯೇ ಬಟ್ಟೆ ಒಲಿದು ಕುಲಿ ಕೆಲಸ ಮಾಡುತ್ತಿದ್ದಾರೆ.

ಹೀಗೆ ಒಂದು ದಿನ ಡೀಲ್ ಫೌಂಡೇಶನ್ ಸಂಸ್ಥೆಯ ಗದಗ್ ತಾಲೂಕಿನ ಲವ್ಲಿ ವುಡ್ ಆಫೀಸರ್ ಆದ ವೀಣಾ ಅವರು ಹಾತಲಗೇರಿ ಗ್ರಾಮಕ್ಕೆ ಭೇಟಿ ನೀಡಿ ಅಲ್ಲಿನ ವಿಕಲಚೇತನರೊಂದಿಗೆ ಡೀಲ್ ಫೌಂಡೇಶನ್ ಸಂಸ್ಥೆಯ ಬಗ್ಗೆ ಮತ್ತು ಕಾರ್ಯಗಳ ಬಗ್ಗೆ, ಸ್ವಸಹಾಯ ಸಂಘಗಳ ಮಾಹಿತಿಯನ್ನು ನೀಡಿದರು. ಅದರಿಂದ ಅಲ್ಲಿನ ವಿಕಲಚೇತನರು ಸೇರಿ ಸ್ವಸಹಾಯ ಸಂಘವನ್ನು ರಚಿಸಿಕೊಂಡರು.ಇದರಲ್ಲಿ ಅನ್ನಕ್ಕ ಅವರು ಕೂಡ ಸದಸ್ಯರಾಗಿದ್ದಾರೆ.ಇದರಿಂದ ವಿಕಲಚೇತನರ ಜೀವನಕ್ಕೆ ಸಹಾಯಕವಾಗಲಿ ಎಂದು ಹತ್ತು ಜನ ವಿಕಲಚೇತನರು ಸೇರಿ ಸಂಘವನ್ನು ರಚಿಸಿಕೊಂಡು ಅದಕ್ಕೆ “ಬೇವಿನ ಮರದಮ್ಮ ವಿಕಲಚೇತನರ ಸ್ವಸಹಾಯ ಸಂಘ”ಎಂದು ಹೆಸರಿಟ್ಟು ಗದಗ ತಾಲೂಕಿನ ಕೆವಿಜಿ ಬ್ಯಾಂಕ್ ನಲ್ಲಿ ಖಾತೆಯನ್ನು ತೆರೆದರು.

ನಂತರ ಈ ಸಂಘಕ್ಕೆ ವೀಣಾ ಅವರು ಬುಕ್ ರೈಟಿಂಗ್ ತರಬೇತಿ,2016ರ ಡಿಸ್ ಎಬಿಲಿಟಿ ಅವೆರ್ನೆಸ್ ತರಬೇತಿ,ಲೀಡರ್ ಶಿಪ್ ತರಬೇತಿಯನ್ನು ನೀಡಿದರು. ಸ್ವಲ್ಪ ದಿನ ಕಳೆದ ನಂತರ ಡೀಲ್ ಫೌಂಡೇಶನ್ ಸಂಸ್ಥೆಯ ಉದ್ಯೋಗ ತರಬೇತಿಗಳಾದ ಕುಂಕುಮ ತರಬೇತಿ,ಮೇಣದ ಬತ್ತಿಯ ತರಬೇತಿ,ಪೇಪರ್ ಬ್ಯಾಗ್ ತರಬೇತಿ ಮುಂತಾದ ತರಬೇತಿಗಳ ಮಾಹಿತಿಯನ್ನು ನೀಡಿ ಉದ್ಯೋಗದಲ್ಲಿ ತೊಡಗುವಂತೆ ವಿಕಲಚೇತನರ ಸದಸ್ಯರಲ್ಲಿ ಆಸಕ್ತಿಯನ್ನು ನೀಡಿದರು.

ಅನ್ನಕ್ಕ ಅವರು ಉದ್ಯೋಗದಲ್ಲಿ ಆಸಕ್ತಿ ಹೊಂದಿರುವ ಕಾರಣ ಮನೆಯಲ್ಲಿಯೇ ಟೈಲರಿಂಗ್ ಉದ್ಯೋಗ ಮಾಡುತ್ತ ಕೂಲಿ ಕೆಲಸ ಮಾಡುವುದನ್ನು ಗಮನಿಸಿ ಅವರಿಗೆ ಅನುಕೂಲವಾಗಲಿ ಎಂದು ತಮ್ಮ ಸಂಘದಿಂದ 15000/-ಲೋನ್ ಪಡೆದುಕೊಂಡು ಟೈಲರಿಂಗ್ ಮಷೀನ್ ಖರೀದಿಸಿ ಉದ್ಯೋಗವನ್ನು ಆರಂಭಿಸಿದರು.ಇದರಿಂದ ಅವರ ಆರ್ಥಿಕ ಜೀವನ ಮಟ್ಟವು ಸುಧಾರಣೆ ಹೊಂದಿತು.ಜೊತೆಗೆ ಅವರ ಆಸೆಯಂತೆ ತಮ್ಮ ಮಕ್ಕಳಿಗೆ ಹೆಚ್ಚಿನ ವಿದ್ಯಾಭ್ಯಾಸವನ್ನು ಕೊಡಿಸಲು ಅನುಕೂಲವಾಗುತ್ತಿದೆ.

ಅಷ್ಟೇ ಅಲ್ಲದೆ ಇವರು ಡೀಲ್ ಫೌಂಡೇಶನ್ ಸಂಸ್ಥೆಯ ಜಿಲ್ಲಾಮಟ್ಟದ ಸಂರಕ್ಷಣೆ ವಿಕಲಚೇತನರ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯಲ್ಲಿ ಶೇರುದಾರರಾಗಿದ್ದಾರೆ.ಇದರಿಂದ ಅವರಿಗೆ ಮುಂದೆ ಸಾಲ ಸೌಲಭ್ಯಗಳ ಅನುಕೂಲ ವಾಗುತ್ತದೆ.

ಹೀಗೆ ಅನ್ನಕ್ಕ ಅವರು ಬಡತನದಲ್ಲಿದ್ದು ಕಷ್ಟದಲ್ಲಿ ಮುಂದೆ ಬಂದು ಸಮಾಜದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಡೀಲ್ ಫೌಂಡೇಶನ್ ನಿಂದ ಹೆಚ್ಚಿನ ಸಹಕಾರ, ಬೆಂಬಲದೊಂದಿಗೆ ಅನೇಕ ವಿಕಲಚೇತನರಿಗೆ ಮಾದರಿಯಾಗಿದ್ದಾರೆ.ಇಷ್ಟೆಲ್ಲ ಸಹಕಾರ ನೀಡಿದ ಡೀಲ್ ಫೌಂಡೇಶನ್ ಸಂಸ್ಥೆಯ ಬಗ್ಗೆ ಅನ್ನಕ್ಕ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.ಅದು ಡೀಲ್ ಫೌಂಡೇಶನ್ ಸಂಸ್ಥೆಯು ವಿಕಲಚೇತನರಿಗೆ ತರಬೇತಿಯನ್ನು ನೀಡಿ ಉದ್ಯೋಗದಲ್ಲಿ ತೊಡಗುವಂತೆ ಮಾಡುತ್ತಿದ್ದಾರೆ.ಮನೆಯಲ್ಲಿ ಸೀಮಿತವಾಗಿದ್ದ ನಮ್ಮನ್ನು ಗುರುತಿಸಿ ಈ ಸಮಾಜದಲ್ಲಿ ನಮ್ಮನ್ನು ಗುರುತಿಸಿಕೊಳ್ಳುವಂತೆ ಮಾಡಿದ್ದಾರೆ.ವಿಕಲಚೇತನರು ಮನೆಗಳಿಗೆ ಮಾತ್ರ ಸೀಮಿತವಲ್ಲ ಅವರಿಗೂ ಜೀವನದ ಕನಸು ಇದೆ ಅವಕಾಶ ಕೊಟ್ಟರೆ ಸಾಧಿಸಿ ನನಸು ಮಾಡಿ ಮಾದರಿಯಾಗುವಂತೆ ಈ ಸಂಸ್ಥೆಯು ನಮಗೆ ಬೆಂಬಲ ನೀಡಿದೆ.ಜೊತೆಗೆ ಉಳಿತಾಯ ಮಾಡುವುದರಿಂದ ಮುಂದೆ ನಮ್ಮ ಕಷ್ಟಕಾಲದಲ್ಲಿ ಸಹಾಯಕವಾಗುತ್ತದೆ ಅದಕ್ಕಾಗಿ ಪುಟ್ಟದಾಗಿ ಈ ಉಳಿತಾಯ ಮಾಡಿ ಜೀವನಕ್ಕೆ ಆಸರೆ ಆಗಿದ.ನಮ್ಮನ್ನು ಗುರುತಿಸಿ ಸ್ವ ಸಹಾಯ ಸಂಘ ಮಾಡಿ ತರಬೇತಿಯನ್ನು ನೀಡಿ ಉದ್ಯೋಗದಲ್ಲಿ ತೊಡಗುವಂತೆ ಮಾಡಿದ್ದಾರೆ.ಎಲ್ಲೋ ಇದ್ದ ನನ್ನನ್ನು ಅವರ ಗುರುತಿಸಿ ಮುಂದೆ ಬರುವಂತೆ ಬೆಂಬಲ ನೀಡಿದ್ದಾರೆ.ಇದರಿಂದ ಶಿಕ್ಷಣದ ಕನಸು ನಮ್ಮ ಮಕ್ಕಳಿಂದ ನನಸಾಗುತ್ತಿದೆ.ನಮ್ಮ ಕುಟುಂಬವು ಆರ್ಥಿಕವಾಗಿ ಸುಧಾರಣೆ ಹೊಂದಿದೆ. ಇದಕ್ಕೆಲ್ಲ ಕಾರಣ ಡೀಲ್ ಪೌಂಡೇಶನ್ ಸಂಸ್ಥೆಯು ಎಂದು ಹೇಳಬಹುದು. ಅದಕ್ಕಾಗಿ ಡಿಲ್ ಫೌಂಡೇಶನ್ ಸಂಸ್ಥೆಗೂ ಹಾಗೂ ವೀಣಾ ಅವರಿಗೂ ನನ್ನ ಪರವಾಗಿ ಹಾಗೂ ನನ್ನ ಕುಟುಂಬದ ಪರವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇನೆ.ಹೀಗೆ ನಮ್ಮಂತ ಅನೇಕ ವಿಕಲಚೇತನರನ್ನು ಗುರುತಿಸಿ ಅವರನ್ನು ಮುಂದೆ ಬರುವಂತೆ ಮಾಡಿ ಎಂದು ಕೇಳಿಕೊಳ್ಳುತ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಹೀಗೆ ಡೀಲ್ ಫೌಂಡೇಶನ್ ಸಂಸ್ಥೆಯು ವಿಕಲಚೇತನರಿಗೆ ಅವಕಾಶ ನೀಡಿ ಆರ್ಥಿಕವಾಗಿ ಬೆಂಬಲಿಸಿ ಜೀವನದ ಸಾಧನೆ ಅರ್ಥವನ್ನು ಈ ಸಮಾಜಕ್ಕೆ ಗುರುತಿಸಿಕೊಳ್ಳುವಂತೆ ಮಾಡುತ್ತಿದೆ.ಹೀಗೆ ಇನ್ನೂ ಹೆಚ್ಚಿನ ವಿಕಲಚೇತನರನ್ನು ಪ್ರತಿ ತಾಲೂಕಿನಲ್ಲಿ ತಮ್ಮನ್ನು ಗುರುತಿಸಿಕೊಂಡು ಮುಂದೆ ಬರಬೇಕು ಎಂಬ ಅಭಿಲಾಷೆ ಡೀಲ್ ಫೌಂಡೇಶನ್ ಸಂಸ್ಥೆದಾಗಿದೆ.ಹೀಗೆ ಇನ್ನು ಹೆಚ್ಚಿನ ಸಹಕಾರ ಡೀಲ್ ಫೌಂಡೇಶನ್ ಸಂಸ್ಥೆ ನೀಡಲಿ ಎಂದು ಎಲ್ಲರು ಮನವಿ ಮಾಡಿ ಹೆಚ್ಚಿನ ಕೀರ್ತಿಗಳಿಸಲಿ ಎಂದು ಹಾರೈಸುತ್ತಿದ್ದಾರೆ.

ಈ ಬ್ಲಾಗ್ ಗೆ ಸಂಬಂಧಿಸಿದಂತೆ ಯಾವುದೇ ನಿರ್ದಿಷ್ಟ ಪ್ರಶ್ನೆಗಳಿಗೆ ಅಥವಾ ಯಾವುದೇ ಸಹಾಯಕ್ಕಾಗಿ Info@deal-foundation.com ನಲ್ಲಿ ತಿಳಿಸಿರಿ ಮತ್ತು ನಾವು ಮಾಡುವ ಕೆಲಸದ ಕುರಿತು ಇನ್ನಷ್ಟು ತಿಳಿದುಕೊಳ್ಳಲು www.deal-fiundation ಗೆ ಲಾಗ್ ಇನ್ ಮಾಡಿರಿ.

ಧನ್ಯವಾದಗಳು

Scroll to Top