Select Page

 

ವಿಕಲಚೇತನ ವ್ಯಕ್ತಿಗಳಿಗೆ ಸುಸ್ಥಿರ ಜೀವನೋಪಾಯದ ಅವಕಾಶವನ್ನು ಸೃಷ್ಟಿಸಲು ಮತ್ತು ವಿಕಲಚೇತನರನ್ನು ಬೆಂಬಲಿಸುವುದು ಡೀಲ್ ಫೌಂಡೇಶನ್ ಸಂಸ್ಥೆಯ ಪ್ರಮುಖ ಕಾರ್ಯ ವೈಖರಿಯಾಗಿದೆ.ಇದರ ಪರಿಣಾಮವಾಗಿ ಪ್ರತಿ ತಾಲೂಕಿನಲ್ಲಿ ಡೀಲ್ ಫೌಂಡೇಶನ್ ವತಿಯಿಂದ ಲವ್ಲೀ ವುಡ್ ಆಫೀಸರ್ಸ್ ಕಾರ್ಯನಿರ್ವಹಿಸುತ್ತಿದ್ದಾರೆ. ಅದರಂತೆ ವಿಕಲಚೇತನರ ಸ್ವ-ಸಹಾಯ ಸಂಘವನ್ನು ರಚನೆ ಮಾಡಿ ಅವರಿಗೆ ಡೀಲ್ ಫೌಂಡೇಶನ್ ವತಿಯಿಂದ ಹೈನುಗಾರಿಕೆ ತರಬೇತಿ,ಟೈಲರಿಂಗ್ ತರಬೇತಿ,ಮೇಣಬತ್ತಿ ತರಬೇತಿ,ಕುರಿ-ಆಡು ಸಾಕಾಣಿಕೆ ತರಬೇತಿ,ಜೇನು ಸಾಕಾಣಿಕೆ ತರಬೇತಿ ಮುಂತಾದ ತರಬೇತಿಗಳನ್ನು ನೀಡಿ ಅವರ ಜೀವನ ಪೋಷಕ ಚಟುವಟಿಕೆಗಳಲ್ಲಿ ವಿಕಲಚೇತನರನ್ನು ತೊಡಗಿಸಿಕೊಳ್ಳುವಂತೆ ಮಾಡುತ್ತಿದ್ದಾರೆ.ಈಗಾಗಲೇ ಪ್ರತಿ ತಾಲೂಕಿನಲ್ಲಿ ವಿಕಲಚೇತನರ ಸ್ವಸಹಾಯ ಸಂಘವನ್ನು ರಚನೆ ಮಾಡಿ ತರಬೇತಿ ಪಡೆದುಕೊಂಡು ಬ್ಯಾಂಕ್ನಿಂದ ಸಾಲ ಪಡೆದುಕೊಂಡು ಆಸಕ್ತಿ ಇರುವ ಉದ್ಯೋಗದಲ್ಲಿ ತೊಡಗಿಸಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಇನ್ನು ಕೆಲ ವಿಕಲಚೇತನರು ಬಂಡವಾಳದ ಕೊರತೆಯಿಂದ ಅವರ ಆಸೆ ಕನಸಿನ ಹಾಗೆ ಹೆಚ್ಚಿನ ಪ್ರಮಾಣದಲ್ಲಿ ದುಡಿಯಲು ಆಗುತ್ತಿರಲಿಲ್ಲ ಅಂತವರು ಕೂಡ ಲೋನ್ ಪಡೆದುಕೊಂಡು ಹೆಚ್ಚಿನ ಮಟ್ಟದಲ್ಲಿ ಉದ್ಯೋಗ ಮಾಡಿ ಅನೇಕ ವಿಕಲಚೇತನರಿಗೆ ಸಹಾಯ ಮಾಡುತ್ತಿದ್ದಾರೆ.ಅಂತಹ ವಿಕಲಚೇತನರಲ್ಲಿ ಅರವಿಂದ್ ಅಬ್ಬಿಗೆರೆ ಇವರು ಕೂಡ ಒಬ್ಬರು.

ಇವರ ಬಗ್ಗೆ ಹೇಳುವುದಾದರೆ ಇವರು ಮೂಲತಃ ಗದಗ್ ತಾಲೂಕಿನ ಸಂಭಾಪುರ ಗ್ರಾಮದವರು.ತಂದೆ ಸಿದ್ದಪ್ಪ, ತಾಯಿ ಯಲ್ಲಮ್ಮ.ಇವರಿಗೆ ಇಬ್ಬರು ಮಕ್ಕಳು ಈ ಪುಟ್ಟ ಕುಟುಂಬದೊಂದಿಗೆ ಇವರ ಬಾಲ್ಯದ ಜೀವನ ಸಂತೋಷವಾಗಿತ್ತು.ಇವರು ಮೂಲತಃ ರೈತರು ಇವರ ಕುಟುಂಬ ಭೂಮಿ ತಾಯಿಯನ್ನೇ ನಂಬಿಕೆ ಜೀವನ ಸಾಗಿಸುತ್ತಿದ್ದರು. ಅರವಿಂದ್ ಅವರು ಮನೆಯ ಹತ್ತಿರವಿದ್ದ ಸರ್ಕಾರಿ ಶಾಲೆಗೆ ಹೋಗುತ್ತಿದ್ದರು.7ನೇ ತರಗತಿಯವರೆಗೆ ಕಲಿತು ಶಾಲೆಯನ್ನು ಬಿಟ್ಟರು ಕಾರಣ ಮನೆಯಲ್ಲಿ ಬಡತನ ಜೊತೆಗೆ ತಮ್ಮನನ್ನು ಹೆಚ್ಚಿನ ವಿದ್ಯಾಭ್ಯಾಸ ಕೊಡಿಸಬೇಕು ಎಂದು ಅವರ ಕನಸಾಗಿತ್ತು. ಅದಕ್ಕಾಗಿ ತಂದೆ ತಾಯಿ ಹೊಲದಲ್ಲಿ ಕೆಲಸ ಮಾಡಿ ಅವರನ್ನು ಬೆಳೆಸಿದ್ದರು.ಇನ್ನು ಹೆಚ್ಚಾಗಿ ಅವರಿಗೆ ಕಷ್ಟ ಆಗಬಾರದೆಂದು ಅರವಿಂದ್ ಅವರು ಶಾಲೆಯನ್ನು ಬಿಟ್ಟು ಹೋಟೆಲ್ ನಲ್ಲಿ ಕೆಲಸಕ್ಕೆ ಹೋದರು.

ಅರವಿಂದ್ ಅವರು ಹುಟ್ಟಿನಿಂದ ದೈಹಿಕ ವಿಕಲಚೇತನತೆ ಹೊಂದಿದವರಲ್ಲ.ಅದು ಒಂದು ದಿನ ಮನೆಯಲ್ಲಿ ಹಿಂದಿನ ಕಾಲದಲ್ಲಿ ಸೀಮೆಎಣ್ಣೆಯಿಂದ ದೀಪ ಹಚ್ಚುತ್ತಿದ್ದರು ಅದರಂತೆ ಅರವಿಂದ್ ಅವರು ಚಿಕ್ಕವರಿದ್ದಾಗ ರಾತ್ರಿ ಹೊತ್ತು ಮಲಗಿದಾಗ ದೀಪದ ಲ್ಯಾಟಿನ್ ಇವರ ಮುಖದ ಮೇಲೆ ಬಿದ್ದು ಪೂರ್ತಿ ಮುಖ ಮತ್ತು ಕೈ ಸುಟ್ಟಿತು.ನಂತರ ತಾಯಿ ಆಸ್ಪತ್ರೆಗೆ ಕರೆದುಕೊಂಡು ಹೋದರು.ಎಲ್ಲ ಚಿಕಿತ್ಸೆ ಕೊಡಿಸಿದರು.ಅವರ ಮುಖ ಮತ್ತು ಕೈಸುಟ್ಟ ಗಾಯದ ಕಲೆಗಳು ಹೋಗಲಿಲ್ಲ ಇದರಿಂದ ಅವರ ಮುಖ ವಿಕೃತ ರೂಪಕ್ಕೆ ಆಯಿತು.

ಮನೆಯಲ್ಲಿ ಎಲ್ಲರೂ ಆತಂಕಕ್ಕೆ ಒಳಗಾದರೂ ಅರವಿಂದ್ ಅವರು ಇದು ನನ್ನ ಪಾಲಿಗೆ ಬಂದದ್ದು ಇದನ್ನು ನಾನು ಅನುಭವಿಸಲೇಬೇಕು ಎಂದು ತಮ್ಮಲ್ಲಿಯ ತಾವು ಧೈರ್ಯ ಮಾಡಿಕೊಂಡು ಹುಷಾರಾದ ಮೇಲೆ ಹೀಗೆ ಕುಳಿತರೆ ಕುಟುಂಬ ನಡೆಸುವುದು ಕಷ್ಟವಾಗುತ್ತದೆ ಜೊತೆಗೆ ತಾಯಿಗೆ ನಾನು ಹೊರೆಯಾಗಬಾರದು ಎಂದು ಮತ್ತೆ ಹೋಟೆಲ್ ಕೆಲಸಕ್ಕೆ ಹೋದರು. ಹೀಗೆ ಇವರು ವಿಕಲಚೇತನತೆಯನ್ನು ಹೊಂದಿದರು.ದಿನ ಕಳೆದ ಹಾಗೆ ಅಂಗಡಿಯ ಮಾಲೀಕರು ಊಟವನ್ನು ಕೊಡದೆ ಕೆಲಸ ಮಾಡಿಸಿಕೊಳ್ಳುತ್ತಿದ್ದರು.ಇದರಿಂದ ಅರವಿಂದ್ ಅವರು ಮತ್ತು ಮಾಲೀಕರೊಂದಿಗೆ ಮನಸ್ತಾಪವಾಗಿ ಕೆಲಸ ಬಿಟ್ಟರು.

ಮುಂದ ಏನು ಮಾಡಬೇಕು ಎಂದು ತೋಚದಾಗ ಅವರ ತಾಯಿ ಕೂಡಿಟ್ಟಿದ್ದ 6000 ಹಣವನ್ನು ಮಗನಿಗೆ ಕೊಟ್ಟು ಯಾವುದಾದರೂ ಸ್ವಂತ ಉದ್ಯೋಗ ಮಾಡು ಎಂದು ಭರವಸೆ ತುಂಬಿದರು.ನಂತರ ಈ ಬಂಡವಾಳದಿಂದ ಮನೆಯಲ್ಲಿ ಸ್ವಂತ ಪುಟ್ಟ ಕಿರಾಣಿ ಅಂಗಡಿಯನ್ನು ಇಟ್ಟು ವ್ಯಾಪಾರ ಆರಂಭಿಸಿದರು.ದಿನ ಕಳೆದ ಹಾಗೆ ಬೇರೆ ಅಂಗಡಿಗಳಿಗೆ ಹೋಲ್ ಸೇಲ್ ರೂಪದಲ್ಲಿ ಕಿರಾಣಿ ಅಂಗಡಿ ಸಾಮಗ್ರಿಗಳನ್ನು ತಲುಪಿಸುವುದನ್ನು ಆರಂಭಿಸಿದರು. ಹೀಗೆ ಇವರ ವ್ಯಾಪಾರ ಕ್ರಮೇಣವಾಗಿ ಚೆನ್ನಾಗಿ ಆಯಿತು. ನಂತರ ಇವರಿಗೆ ಮದುವೆ ಆಯಿತು ಅವರ ಹೆಂಡತಿಯು ಕೂಡ ದೈಹಿಕ ವಿಕಲಚೇತನತೆಯನ್ನು ಹೊಂದಿದವರು.ಹೀಗೆ ಇವರಿಗೆ ಒಂದು ಪುಟ್ಟ ಹೆಣ್ಣು ಮಗುವಿನೊಂದಿಗೆ ಇವರ ಕುಟುಂಬ ಖುಷಿಯಿಂದ ಕೂಡಿತ್ತು.ಆದರೆ ಸ್ವಲ್ಪ ದಿನಗಳ ನಂತರ ಇವರು ತಂದೆ ತಾಯಿಯನ್ನು ಕಳೆದುಕೊಂಡು ಒಂಟಿಯಾದರು.

ತಾಯಿಯನ್ನು ಕಳೆದುಕೊಂಡ ಅರವಿಂದ್ ಅವರಿಗೆ ಅದನ್ನು ಮರೆಯುವುದು ಸ್ವಲ್ಪ ಕಷ್ಟವಾಯಿತು.ಆದರೆ ತಾಯಿಯ ಸ್ವರೂಪದಲ್ಲಿ ಅರವಿಂದ್ ಅವರಿಗೆ ಎರಡನೇ ಹೆಣ್ಣು ಮಗುವಿನ ಜನನವಾಯಿತು.ಹೀಗೆ ಇವರ ಕುಟುಂಬವು ಬೆಳೆಯಿತು.ದಿನ ಕಳೆದ ಹಾಗೆ ದುಡಿಮೆ ಕಡಿಮೆ ಆಯ್ತು ಅವರ ಹೆಂಡತಿ ಪುಟ್ಟ ವ್ಯಾಪಾರದಲ್ಲಿ ಜೀವನ ನಡೆಸುವುದು ಕಷ್ಟ ಇದೆ ಅಂಗಡಿ ಯ ಜೊತೆಗೆ ಜೆರಾಕ್ಸ್ ಮಷೀನ್ ಮತ್ತು ಹಾಲಿನ ವ್ಯಾಪಾರವನ್ನು ಆರಂಭಿಸೋಣ ನಾನು ಸಹಾಯ ಮಾಡುತ್ತೇನೆ ಎಂದು ಸಲಹೆ ನೀಡಿದರು.ಆದರೆ ಅದಕ್ಕೆ ಬಂಡವಾಳ ಬೇಕು ಅದನ್ನು ಹೇಗೆ ಹೊಂದಿಸುವುದು ಎಂದು ಅರವಿಂದ ಅವರು ಯೋಚಿಸುವಾಗ ಡೀಲ್ ಫೌಂಡೇಶನ್ ಸಂಸ್ಥೆಯ ಗದಗ ತಾಲೂಕಿನ ಲವ್ಲೀ ವುಡ್ ಆಫೀಸರ್ ಆದ ನಿರ್ಮಲ ಇವರು ಸಂಬಾಪೂರ ಗ್ರಾಮಕ್ಕೆ ಭೇಟಿ ನೀಡಿ ಅಲ್ಲಿ ಮುತ್ತಣ್ಣ ಎಂಬ ವಿಕಲಚೇತನರ ಸಹಾಯದಿಂದ ಅಲ್ಲಿನ ಏಲ್ಲಾ ವಿಕಲಚೇತನರನ್ನು ಒಂದು ದೇವಸ್ಥಾನದಲ್ಲಿ ಸೇರಿಸಿ ಅವರಿಗೆ ಡೀಲ್ ಫೌಂಡೇಶನ್ ಸಂಸ್ಥೆ ಕಾರ್ಯ ಚಟುವಟಿಕೆಗಳ ಬಗ್ಗೆ ಮತ್ತು ಈಗಾಗಲೇ ಗದಗ್ ತಾಲೂಕಿನಲ್ಲಿ ವಿಕಲಚೇತನರ್ ಸ್ವ ಸಹಾಯ ಸಂಘಗಳ ಕಾರ್ಯಗಳ ಬಗ್ಗೆ ಉದಾಹರಣೆ ನೀಡಿ ಫೌಂಡೇಶನ್ ಸಂಸ್ಥೆ ಯಾವಾಗಲೂ ಸಹಕಾರ ನೀಡುತ್ತದೆ ಎಂದು ವಿಕಲಚೇತನರಲ್ಲಿ ಭರವಸೆ ನೀಡಿದರು.

ನಂತರ ಅಲ್ಲಿನ ಹತ್ತು ಜನ ವಿಕಲಚೇತನ ಸೇರಿ “ಶ್ರೀ ಧರ್ಮಸ್ಥಳ ವಿಕಲಚೇತನ ಸ್ವಸಹಾಯ ಸಂಘ” ಎಂದು ಹೆಸರಿಟ್ಟು ಸಂಘವನ್ನು ಆರಂಭಿಸಿದರು.ಈ ಸಂಘಕ್ಕೆ ನಿರ್ಮಲ ಅವರು ಡೀಲ್ ಫೌಂಡೇಶನ್ ಸಂಸ್ಥೆಯಿಂದ 2016ರ ಡಿಸೆಬಿಲಿಟಿ ಅವೆರ್ನೆಸ್ ತರಬೇತಿ, ಬುಕ್ ರೈಟಿಂಗ್ ತರಬೇತಿ, ಫೈನಾನ್ಸಿಯಲ್ ತರಬೇತಿಯನ್ನು ನೀಡಿದ್ದಾರೆ.ಜೊತೆಗೆ ಈ ಸಂಘಕ್ಕೆ ಅರವಿಂದ್ ಅವರೇ ಪ್ರತಿನಿಧಿಯಾಗಿ ಈ ಸ್ವ ಸಹಾಯ ಸಂಘವನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.ಈ ಸಂಘದಿಂದ ಸ್ವಯಂ ಉದ್ಯೋಗಕ್ಕಾಗಿ ಮತ್ತು ಅರವಿಂದ್ ಅವರ ಅಭಿಲಾಶಯದಂತೆ ಜೆರಾಕ್ಸ್ ಮಷೀನ್ ಗಾಗಿ ಬ್ಯಾಂಕ್ ಲೋನ್ ಪಡೆದುಕೊಂಡು ಇನ್ನೂ ಹೆಚ್ಚಿನ ಉದ್ಯೋಗ ಆರಂಭಿಸಬೇಕು ಎಂದು ಎಲ್ಲ ವಿಕಲಚೇತನರು ಹೊಂದಾಣಿಕೆಯಿಂದ ಮತ್ತು ಡೀಲ್ ಫೌಂಡೇಶನ್ ಸಹಕಾರದಿಂದ ಈ ಸಂಘವನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.ಅದರಂತೆ ಅರವಿಂದ್ ಅವರು ತಮ್ಮ ಹೆಚ್ಚಿನ ಉದ್ಯೋಗಕ್ಕಾಗಿ ಈ ಸಂಘದಿಂದ ಬ್ಯಾಂಕ್ ಲೋನ್ ಪಡೆದುಕೊಳ್ಳಲು ಎಲ್ಲ ತಯಾರಿಯನ್ನು ನಿರ್ಮಲ ಅವರ ಸಹಕಾರದಿಂದ ಡಾಕ್ಯುಮೆಂಟ್ ರೆಡಿ ಮಾಡುತ್ತಿದ್ದಾರೆ.

ಇದರಿಂದ ಅರವಿಂದ್ ಅವರಂತಹ ಅನೇಕ ವಿಕಲ ಚೇತನರಿಗೆ ಈ ಸ್ವ ಸಹಾಯ ಸಂಘವು ಮಾದರಿಯಾಗಿದೆ. ಅರವಿಂದ ಅವರು ಡಿಲ್ ಫೌಂಡೇಶನ್ ಸಂಸ್ಥೆಯ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.ಅದು ನಮ್ಮ ಊರಿನ ವಿಕಲ ಚೇತನಿಗೆ ಇದುವರೆಗೂ ಪೆನ್ಷನ್ ಬಿಟ್ಟರೆ ಯಾವುದೇ ರೀತಿಯ ಸೌಲಭ್ಯಗಳು, ತರಬೇತಿಗಳನ್ನು ಪಡೆದುಕೊಂಡಿರಲಿಲ್ಲ ಜೊತೆಗೆ ಸರ್ಕಾರದ ಸೌಲಭ್ಯಗಳು ಕೂಡ ಗೊತ್ತಿರಲಿಲ್ಲ.ಹೀಗಿರುವಾಗ ಡೀಲ್ ಫೌಂಡೇಶನ್ ವತಿಯಿಂದ ನಿರ್ಮಲ ಅವರು ನಮ್ಮ ಊರಿಗೆ ಬಂದಿದ್ದು ಭಾಗ್ಯ ಎಂದು ಹೇಳಬಹುದು.ಏನು ಗೊತ್ತಿರದ ನಮಗೆ ಉದ್ಯೋಗದ ತರಬೇತಿಯ ಬಗ್ಗೆ ಮತ್ತು ಸರ್ಕಾರದ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿ ಜೊತೆಗೆ ವಿಕಲಚೇತನರ ಸ್ವಸಹಾಯ ಸಂಘ ರಚಿಸಿ ನಮಗೆ ಉದ್ಯೋಗ ತರಬೇತಿಯನ್ನು ನೀಡಿ ಇನ್ನೂ ಹೆಚ್ಚಿನ ಮಟ್ಟದಲ್ಲಿ ಉದ್ಯೋಗ ಮಾಡಿ ನನ್ನಂತಹ ವಿಕಲಚೇತನರಿಗೆ ಸಹಾಯ ಮಾಡಬೇಕು ಎಂಬ ನನ್ನ ಅಭಿಲಾಷೆ ಡೀಲ್ ಫೌಂಡೇಶನ್ ನಿಂದ ನೆರವಾಗುತ್ತಿದೆ.ಹೀಗೆ ವಿಕಲಚೇತನರಿಗಾಗಿ ಕೆಲಸ ಮಾಡುತ್ತಿರುವ ಡೀಲ್ ಫೌಂಡೇಶನ್ ಸಂಸ್ಥೆಯು ನಮ್ಮಂತ ವಿಕಲಚೇತನ ಗೆ ಇನ್ನೂ ಹೆಚ್ಚಿನ ಮಟ್ಟದಲ್ಲಿ ಪ್ರೋತ್ಸಾಹ,ಸಹಕಾರ ನೀಡಿ ಗದಗ್ ಜಿಲ್ಲೆಯಾದ್ಯಂತ ಇನ್ನೂ ಹೆಚ್ಚಿನ ಮಟ್ಟದಲ್ಲಿ ಕೀರ್ತಿಗಳಿಸಲಿ ಎಂದು ಪ್ರಾರ್ಥಿಸುತ್ತೇವೆ ಎಂದು ಅರವಿಂದ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ಈ ರೀತಿಯಾಗಿ ಗದಗ್ ತಾಲೂಕಿನಲ್ಲಿ ಡೀಲ್ ಫೌಂಡೇಶನ್ ಸಂಸ್ಥಯು ವಿಕಲಚೇತನರಾಗಿ ಕೆಲಸ ಮಾಡಿ ಅನೇಕ ವಿಕಲಚೇತನರ ಆರ್ಥಿಕ ಜೀವನಕ್ಕೆ ಸಹಕಾರಿಯಾಗಿ ಈ ಸಮಾಜದಲ್ಲಿ ವಿಕಲಚೇತನರು ಗುರುತಿಸಿಕೊಳ್ಳುವಂತೆ ಮಾಡುತ್ತಿದ್ದಾರೆ.ಇಂತಹ ಕಾರ್ಯಗಳಿಗೆ ಎಲ್ಲಾ ವಿಕಲಚೇತನರು ಡೀಲ್ ಫೌಂಡೇಶನ್ ಸಂಸ್ಥೆಗೆ ಕ್ರಮೇಣವಾಗಿ ಕೈಜೋಡಿಸಿ ಕೆಲಸ ಮಾಡುತ್ತಿದ್ದಾರೆ.ಹೆಚ್ಚಿನ ಮಟ್ಟದಲ್ಲಿ ಡೀಲ್ ಫೌಂಡೇಶನ್ ಸಂಸ್ಥೆ ಬೆಳಗಲಿ ಎಂದು ಹಾರೈಸುತ್ತಿದ್ದಾರೆ.

ಈ ಬ್ಲಾಗ್ ಗೆ ಸಂಬಂಧಿಸಿದಂತೆ ಯಾವುದೇ ಪ್ರಶ್ನೆಗಳಿದ್ದರೆ ಅಥವಾ ಯಾವುದೇ ಸಹಾಯಕ್ಕಾಗಿ Info@deal-foundation.com ನಲ್ಲಿ ತಿಳಿಸಿರಿ ಮತ್ತು ನಾವು ಮಾಡುವ ಕೆಲಸದ ಕುರಿತು ಇನ್ನಷ್ಟು ತಿಳಿದುಕೊಳ್ಳಲು www.deal-foundation ನಲ್ಲಿ ತಿಳಿಸಿ.

ಧನ್ಯವಾದಗಳು

Get a report of all our on field work every month.

You have Successfully Subscribed!

Share This