ಡೀಲ್ ಫೌಂಡೇಶನ್ ಸಂಸ್ಥೆಯ ಸಿಬ್ಬಂದಿಗಳು ಮತ್ತು ಸ್ವಯಂಸೇವಕರು ಮಾರ್ಚ್ 2023ರ ವೇಳೆಗೆ ಉತ್ತರ ಕರ್ನಾಟಕದ ಗದಗ ಜಿಲ್ಲೆಯಾದ್ಯಂತ 3000 ವಿಕಲ ಚೇತನರು ಮತ್ತು 1000 ಮಹಿಳಾ ಸದಸ್ಯರನ್ನು ಗುರುತಿಸಲು ಮತ್ತು ತಲುಪಲು ಪ್ರಚಾರ ಕ್ರಮವನ್ನು ಕೈಗೊಂಡರು. ಅದರಲ್ಲಿ ಸುಸ್ಥಿರ ಜೀವನೋಪಾಯ ಗಳ ಕಾರ್ಯಕ್ರಮವು ವಿಕಲಚೇತನತೆಯ ಜಾಗೃತಿ ಮತ್ತು ಸಮುದಾಯ ಸಂವೇದನೆಯನ್ನು ಉತ್ತೇಜಿಸುವುದು,ವೈಯಕ್ತಿಕ ಮತ್ತು ಸಮುದಾಯ ಮಟ್ಟದಲ್ಲಿ ವಿಕಲಚೇತನತೆಯನ್ನು ಸ್ವೀಕರಿಸಲು ಮತ್ತು ಸೇರಿಸಲು ಕೇಂದ್ರವಾಗಿತ್ತು. ಆದರೆ ಅರಿವಿನ ಕೊರತೆ ಮತ್ತು ಅದರ ಸ್ವೀಕಾರದಿಂದಾಗಿ ವಿಕಲಚೇತನತೆಯು ನಿರಂತರ ಸಮಸ್ಯೆಯಾಗಿ ಕಂಡುಬರುತ್ತದೆ.

ಈ ಸಮಸ್ಯೆಯನ್ನು ಪರಿಹರಿಸಲು ಡೀಲ್ ಫೌಂಡೇಶನ್ ಸಂಸ್ಥೆಯ ಸಿಬ್ಬಂದಿಗಳು ಪರಿಣಾಮಕಾರಿ ವಿಕಲಚೇತನತೆಯ ಜಾಗೃತಿ ಮತ್ತು ಸಮುದಾಯ ಸಂವೇದನೆಯನ್ನು ಒಟ್ಟು ಗುಡಿಸಿದ್ದಾರೆ.ಅದರಲ್ಲಿ ವಿಕಲಚೇತನರ ಮತ್ತು ಮಹಿಳೆಯರ ಅಗತ್ಯಗಳನ್ನು ಪೂರೈಸಲು ಗುಂಪು ರಚನೆಯಲ್ಲಿ ತೊಡಗಿದರು.ಅದು ವಿಕಲಚೇತನ ಮತ್ತು ಮಹಿಳೆಯರ ಸ್ವ-ಸಹಾಯ ಸಂಘವನ್ನು ರಚನೆ ಮಾಡಿ ಸ್ವಾವಲಂಬನೆ ಜೀವನಕ್ಕಾಗಿ ಸಹಕಾರ ಮಾಡಿಕೊಡುವ ಉದ್ದೇಶ ಡೀಲ್ ಫೌಂಡೇಶನ್ದಾಗಿದೆ.

ಅದರಂತೆಯೇ ಗದಗ ತಾಲೂಕಿನ ಬೆಟಗೇರಿ ಗ್ರಾಮದಲ್ಲಿನ ವಿಕಲಚೇತನರಿಗೆ &ಮಹಿಳೆಯರಿಗೆ ಡೀಲ್ ಫೌಂಡೇಶನ್ ಸಂಸ್ಥೆಯ ಲವ್ಲೀವುಡ್ವ ಆಫೀಸರ್ ಆದ ವೀಣಾ ಶಾಖಾನವರ ಇವರು ಡೀಲ್ ಫೌಂಡೇಶನ್ ಸಂಸ್ಥೆಯ ಕಾರ್ಯ ವೈಖರಿಗಳ ಬಗ್ಗೆ ಮಾಹಿತಿಯನ್ನು ನೀಡಿದರು.ನಂತರ ಅಲ್ಲಿನ ಮಹಿಳೆಯರು ಮತ್ತು ವಿಕಲಚೇತನ ಹೊಂದಿದ ಮಕ್ಕಳ ತಾಯಂದಿರು ಸೇರಿ 10 ಜನರ ಮಹಿಳಾ ಸ್ವಸಹಾಯ ಸಂಘವನ್ನು ರಚನೆ ಮಾಡಿ “ಉಜ್ವಲ ಮಹಿಳಾ ಸ್ವ ಸಹಾಯ ಸಂಘ” ಎಂದು ಹೆಸರಿಟ್ಟು ಬ್ಯಾಂಕ್ ಖಾತೆಯನ್ನು ತೆರೆದರು. ನಂತರ ಈ ಸಂಘಕ್ಕೆ ಬುಕ್ ರೈಟಿಂಗ್ ತರಬೇತಿ,ಡಿಸ್ಬೇಲಿಟಿ ಅವರೇನೆಸ್ ತರಬೇತಿ,ಉದ್ಯೋಗ ತರಬೇತಿ ಯನ್ನು ನೀಡಲಾಯಿತು. ತರಬೇತಿಯ ನಂತರ ಸದಸ್ಯರಲ್ಲಿರುವ ಆಸಕ್ತಿ ಉದ್ಯೋಗಗಳ ಬಗ್ಗೆ ಚರ್ಚಿಸಿದಾಗ ಟೈಲರಿಂಗ್ ತರಬೇತಿ,ನೇಕಾರಿಕೆ ಉದ್ಯೋಗ ಮುಂದುವರಿಸುವುದು, ಹೀಗೆ ಹಲವಾರು ಉದ್ಯೋಗದ ಬಗ್ಗೆ ಸದಸ್ಯರು ಅಭಿಪ್ರಾಯ ವ್ಯಕ್ತಪಡಿಸಿದರು.

ಈ ಸ್ವ ಸಹಾಯ ಸಂಘ ರಚನೆಯಾಗಿ ಆರು ತಿಂಗಳ ನಂತರ ಈ ಸಂಘಕ್ಕೆ 50,000 ಬ್ಯಾಂಕ್ ಲೋನ್ ಪಡೆದುಕೊಂಡು ನೇಕಾರಿಕೆ ಉದ್ಯೋಗ, ಟೈಲರಿಂಗ್ ಉದ್ಯೋಗ ಮಾಡುತ್ತಿದ್ದಾರೆ.ನೇಕಾರಿಕೆ ಉದ್ಯೋಗವನ್ನು ಆ ಸಂಘದ ಸದಸ್ಯರಾದ ಅರುಣಾ ಸಾರಂಗಿ ಇವರು ಮಾಡುತ್ತಿದ್ದಾರೆ.ಈ ನೇಕಾರಿಕೆಯನ್ನು ಮೊದಲು ಇವರ ತಂದೆ ತಾಯಿಗಳು ಎರಡು ನೇಕಾರಿಕೆ ಯಂತ್ರದಿಂದ ಉದ್ಯೋಗ ಮಾಡುತಿದ್ದರು.ತಂದೆ ತಾಯಿಯೊಂದಿಗೆ ಇವರು ಆ ಕೆಲಸದಲ್ಲಿ ತೊಡಗುತ್ತಾ ಹೋದರು. ಕ್ರಮೇಣವಾಗಿ ತಾವೇ ಸ್ವತಃ ಈ ನೇಕಾರಿಕೆ ಯಂತ್ರವನ್ನು ನಡೆಸುವ ಹಂತಕ್ಕೆ ಬಂದರು.ಹಾಗೆ ಮುಂದೆ ಒಂದೊಂದೇ ಯಂತ್ರವನ್ನು ಸಾಲವನ್ನು ಪಡೆದುಕೊಂಡು ಕರೀದಿಸುತ್ತಾ ಹೋದರು.ನಂತರ ಡೀಲ್ ಫೌಂಡೇಶನ್ ಸಂಸ್ಥೆಯ ಸಹಕಾರದೊಂದಿಗೆ ಬ್ಯಾಂಕ್ ಲೋನ್ ಪಡೆದುಕೊಂಡು ನೇಕಾರಿಕೆಗೆ ಬೇಕಾಗುವ ನೂಲು ಸುತ್ತುವ ಯಂತ್ರವನ್ನು ಖರೀದಿಸಿದರು.ಮೊದಲು ಇವರು ಕೈಯಿಂದಲೇ ನುಲು ಸುತ್ತುತಿದ್ದರು ಇದರಿಂದ ಅವರ ಆರೋಗ್ಯ ಕ್ಷಿಣಿಸುತ್ತ ಹೋಯಿತು.ಇದಕ್ಕೆ ಪರಿಹಾರವಾಗಿ ಕರೆಂಟ್ ನಿಂದ ನೂಲು ಸುತ್ತುವ ಯಂತ್ರವನ್ನು ಕರೀದಿಸಿದರು.ಇದರಿಂದ ಆರೋಗ್ಯವು ಚೇತರಿಸಿ ಜೊತೆಗೆ ತುಂಬಾ ಅನುಕೂಲವಾಯಿತು.

ಹಾಗೆ ಇವರಿಗೆ ಸರ್ಕಾರದ ವತಿಯಿಂದ ಎರಡು ನೇಕಾರಿಕೆಯ ಯಂತ್ರದೊಂದಿಗೆ ಒಟ್ಟು ಎಂಟು ನೇಕಾರಿಕೆ ಯಂತ್ರವನ್ನು ಅರುಣಾ ಸಾರಂಗಿ ಅವರು ತಮ್ಮ ಕುಟುಂಬದ ಸಹಕಾರದಿಂದ ನಡೆಸುತ್ತಿದ್ದಾರೆ. ಈ ಯಂತ್ರದಲ್ಲಿ ಒಂದು ದಿನಕ್ಕೆ ಎರಡು ರೇಷ್ಮೆ ಸೀರೆಗಳನ್ನು ತಯಾರಿಸುತ್ತಾರೆ.ಇವರು ತಯಾರಿಸಿದ ಸೀರೆಗಳನ್ನು ಬೇರೆ ಊರಿಗೆ ಮಾರಾಟ ಮಾಡುತ್ತಾರೆ ಕಾರಣ ಇವರ ಈ ಸೀರೆಗಳಿಗೆ ಅಷ್ಟು ಬೆಲೆ ಇದೆ.ಮಹಿಳೆಯರು ಕೂಡ ಇವರ ಮನೆಯಲ್ಲಿ ನೇಕಾರಿಕೆ ಕೆಲಸಕ್ಕೆ ಬರುತ್ತಾರೆ.ಒಟ್ಟು 12 ಜನ ಕೆಲಸಗಾರರೊಂದಿಗೆ ಈ ನೇಕಾರಿಕೆ ಉದ್ಯೋಗವನ್ನು ಮಾಡುತ್ತಿದ್ದಾರೆ. ಇದರಿಂದ ಅನೇಕ ಮಹಿಳೆಯರ ಜೀವನಕ್ಕೆ ಆಧಾರವಾಗಿದೆ.

ಡೀಲ್ ಫೌಂಡೇಶನ್ ಸಂಸ್ಥೆಯ ಟ್ರೈನಿಂಗ್ ಕೋ ಆರ್ಡನೆಟರ್ ಆದ ಶಿವುಕುಮಾರ ಶಿರೋಳ್ ಇವರು ಕೂಡ ಈ ಸಂಘವನ್ನು ವೀಕ್ಷಿಸಲು ಬಂದಾಗ ಇವರ ನೇಕಾರಿಕೆ ಉದ್ಯೋಗವನ್ನು ವೀಕ್ಷಿಸಿದರು.

ನಂತರ ಸಿಡ್ಬಿ ಯಿಂದ ಮಹಮ್ಮದ್ ಅರೂರ್,ಡೀಲ್ ಫೌಂಡೇಶನ್ ನಿಂದ ಸಾಗರ್ ವಿರುಪಣ್ಣವರ,ನಿಕ್ ಎಡ್ವರ್ಡ್ ಮತ್ತು ಸಿ.ಎಸ್.ಆರ್ ನಿಂದ ಅಝಜ್ ರಶೀದ್ ಅವರು ಕೂಡ ಈ ಸಂಘವನ್ನು ಪರಿಶೀಲನೆ ಮಾಡಿ ನೇಕಾರಿಕೆ ಉದ್ದೋಗದ ಬಗ್ಗೆ ಚರ್ಚೆ ಮಾಡಿದರು.ಮಹಮ್ಮದ್ ಅರೂರ್ ಇವರು ಸಂಘದ ಸದಸ್ಯರೆಲ್ಲರ ಪರಿಚಯ ಕೇಳಿ ಡೀಲ್ ಫೌಂಡೇಶನ್ ಬಗ್ಗೆ ಅವರ ಅಭಿಪ್ರಾಯವನ್ನು ಕೇಳಿದರು.ಮತ್ತು ಡೀಲ್ ಫೌಂಡೇಶನ್ ನಿಂದ ನಿಮಗೆ ಎಲ್ಲಾ ಉದ್ಯೋಗದ ಮಾಹಿತಿ ಸಿಕ್ಕಿದೆಯೇ ಎಂದು ಕೇಳಿದರು. ಹಾಗೂ ಲೋನ್ ಪಡೆದುಕೊಂಡ ಸದಸ್ಯರ ಜೊತೆಗೆ ಚರ್ಚೆ ಮಾಡಿ ಬ್ಯಾಂಕ್ ಲೋನ್ ಪಡೆದುಕೊಂಡು ಯಾವ ಉದ್ಯೋಗ ಮಾಡುತ್ತಿದ್ದೀರಾ,ಇದರಿಂದ ನಿಮಗೆ ಒಳ್ಳೆಯದಾಗಿದೆಯೇ ಎಂದು ಕೇಳಿದರು.ಅದರಂತೆ ಸದಸ್ಯರೆಲ್ಲರೂ ಉತ್ತರಿಸಿದರು.ಕೊನೆಗೆ ನೇಕಾರಿಕೆ ಉದ್ಯೋಗದ ಯಂತ್ರವನ್ನು ವೀಕ್ಷಿಸಿದರು.ಅದರಿಂದ ತಯಾರಾಗುವ ಸೀರೆ ಬಗ್ಗೆ ಇದು ಯಾವ ರೀತಿ ತಯಾರಾಗುತ್ತದೆ,ಇದಕ್ಕೆ ಬೇಕಾದ ಸಾಮಗ್ರಿಗಳನ್ನು ನೀವು ಎಲ್ಲಿಂದ ತರುತ್ತೀರಾ,ಒಂದು ಸೀರೆ ತಯಾರಾಗಲು ಎಷ್ಟು ದಿನ ಬೇಕು ಎಂಬ ಎಲ್ಲಾ ರೀತಿಯ ಪ್ರಶ್ನೆಗಳನ್ನು ಸದಸ್ಯರಿಗೆ ಕೇಳಿ ತಿಳಿದುಕೊಂಡರು. ಮಹಮ್ಮದ್ ಅರೂರ್,ಅಝಜ್ ರಶೀದ್ ಎಲ್ಲರೂ ನೇಕಾರಿಕೆ ಉದ್ಯೋಗವನ್ನು ವೀಕ್ಷಿಸಿ ಮೆಚ್ಚುಗೆಯನ್ನು ವ್ಯಕ್ತಪಡಿಸಿ ಸದಸ್ಯರೆಲ್ಲರಿಗೂ ಒಳ್ಳೆಯದಾಗಲಿ ಎಂದು ಹಾರೈಸಿದರು.

ಹೀಗೆ ಒಬ್ಬ ಮಹಿಳೆ ಮನಸು ಮಾಡಿದರೆ ಇಡೀ ಜಗತ್ತನ್ನೇ ಗೆಲ್ಲಬಲ್ಲಳು ಎಂಬ ಮಾತಿಗೆ ಈ ಸಂಘದ ಸದಸ್ಯರು ಉದಾಹರಣೆ ಎಂದು ಹೇಳಬಹುದು.ಈ ಸ್ವ ಸಹಾಯ ಸಂಘವು ಗದಗ ತಾಲೂಕಿನಲ್ಲಿರುವ ಸ್ವ ಸಹಾಯ ಸಂಘಗಳಿಗೆ ಮಾದರಿಯಾಗಿದೆ. ಜೊತೆಗೆ ಇವರ ಈ ಪರಿಶ್ರಮಕ್ಕೆ ಡೀಲ್ ಫೌಂಡೇಶನ್ ಸಂಸ್ಥೆಯು ಕೂಡ ಹೆಚ್ಚು ಸಹಕಾರ ನೀಡಿದೆ. ಇನ್ನೂ ಅನೇಕ ವಿಕಲಚೇತನ ಮತ್ತು ಮಹಿಳೆಯರಿಗೆ ಡೀಲ್ ಫೌಂಡೇಶನ್ ಸಂಸ್ಥೆಯು ಜೊತೆಯಾಗಿ ನಿಂತಿದೆ.

ಈ ಬ್ಲಾಗ್ ಗೆ ಸಂಬಂಧಿಸಿದಂತೆ ಯಾವುದೇ ನಿರ್ದಿಷ್ಟ ಪ್ರಶ್ನೆಗಳಿದ್ದರೆ ಅಥವಾ ಯಾವುದೇ ಸಹಾಯಕ್ಕಾಗಿ Info@deal-Foundation.com ನಲ್ಲಿ ತಿಳಿಸಿರಿ & ನಾವು ಮಾಡುವ ಕೆಲಸದ ಕುರಿತು ಇನ್ನಷ್ಟ್ಟು ತಿಳಿದುಕೊಳ್ಳಲು www.deal-Foundation ಗೆ ಲಾಗ್ ಇನ್ ಮಾಡಿ.

ಧನ್ಯವಾದಗಳು

Get a report of all our on field work every month.

You have Successfully Subscribed!

Share This