ವಿಕಲಚೇತನರ ಬಡತನವನ್ನು ಕಡಿಮೆ ಮಾಡುವ ಜವಾಬ್ದಾರಿಯುತ ಅಂಶಗಳನ್ನು ಇಂದಿನ ದಿನ ಮತ್ತು ಯುಗದಲ್ಲಿ ಪ್ರಮುಖ ಸವಾಲುಗಳಲ್ಲಿ ಒಂದಾಗಿದೆ. ತಂತ್ರಜ್ಞಾನದ ಪ್ರಗತಿಯಿಂದಾಗಿ ಸಮಯ ಮುಂದುವರೆದಂತೆ ಉದ್ಯೋಗಾವಕಾಶಗಳು ವಿರಳವಾಗಿವೆ. ಲಭ್ಯವಿರುವ ವಿವಿಧ ಅವಕಾಶಗಳ ಬಗ್ಗೆ ಅರಿವು ಇಲ್ಲದಿರುವ ವಿತರಚಕನ ವ್ಯಕ್ತಿಗಳಿಗೆ ಇದು ಹೆಚ್ಚು ಮತ್ತೊಂದೆಡೆ ಅವರ ವಿಕಲಚೇತನತೆಯಿಂದಾಗಿ ಲಭ್ಯವಿರುವ ಅವಕಾಶಗಳನ್ನು ನಿರಾಕರಿಸಲಾಗುತ್ತದೆ.

ಇದಕ್ಕೆ ಪರಿಹಾರವಾಗಿ ಡೀಲ್ ಫೌಂಡೇಶನ್ ಸಂಸ್ಥೆಯು ಅವರ ಕೌಶಲ್ಯ ಮತ್ತು ಸಾಮರ್ಥ್ಯಗಳನ್ನು ಗುರುತಿಸಿ ಅವರ ಕೌಶಲ್ಯ &ಸಾಮರ್ಥ್ಯಗಳಿಗೆ ಹೊಂದಿಕೆಯಾಗುವ ಕೆಲಸವನ್ನು ನೀಡುತ್ತಿದೆ.

ಅದರಂತೆ ಡೀಲ್ ಫೌಂಡೇಶನ್ ಸಂಸ್ಥೆಯು ವಿಕಲಚೇತನರ ಏಳಿಗೆಗಾಗಿ ಏಸ್ ಸಿ ಏಫ್ ಡೀಲ್ ಫೌಂಡೇಶನ್ ಗೆ ಯಶಸ್ವಿ ಅರ್ಜಿಯನ್ನು ಅನುಸರಿಸಿ ವಿಕಲಚೇತನ ವ್ಯಕ್ತಿಗಳನ್ನು ಒಳಗೊಂಡ ಅವರ ಸುಸ್ಥಿರ ಜೀವನೋಪಾಯ ಚಟುವಟಿಕೆಗಳನ್ನು ಅಳೆಯಲು ಏಪ್ರಿಲ್ 2022ರಲ್ಲಿ ಹಣಕಾಸಿನ ನೆರವು ನೀಡಲಾಯಿತು.2 ವರ್ಷಗಳ ಅವಧಿಯಲ್ಲಿ ಜೀವನೋಪಾಯದ ಚಟುವಟಿಕೆಗಳ ಸ್ಕೇಲ್ -ಆಪ್ ಗೆ ಒಪ್ಪಿದ ಬಜೆಟ್ ಒಳಗೊಂಡು ಈ ಅವಧಿಯಲ್ಲಿ ಸಿಡ್ಬಿ ಕೊಡುಗೆಯು ಇದೆ.

ಈ ಒಪ್ಪಂದದಂತೆ ಡೀಲ್ ಫೌಂಡೇಶನ್ ಸಂಸ್ಥೆಯ ಏಳು ತಾಲೂಕಿನಲ್ಲಿ ಕಾರ್ಯನಿರ್ವಹಿಸಲು ಲವ್ಲೀವುಡ್ ಒಫೀಸರ್ಸ್, ತರಬೇತಿ ಸಂಯೋಜಕರು, ಪ್ರೋಗ್ರಾಮ್ ಮ್ಯಾನೇಜರ್ ಹೀಗೆ ಹಲವಾರು ಹುದ್ದೆಗಳಿಗೆ ಆಫೀಸರ್ಸ್ ನ್ನು ಆಯ್ಕೆ ಮಾಡಿ 3000ವಿಕಲಚೇತನರು &1000ಮಹಿಳೆಯರೊಡನೆ ಕೆಲಸ ಮಾಡಲು ಗುರಿಯನ್ನು ಹಾಕಿಕೊಂಡಿತು. ಅದರಂತೆ ಈ ಎರಡು ವರ್ಷದ ಅವಧಿಯಲ್ಲಿ ವಿಕಲಚೇತನರಿಗಾಗಿ ಜಾಗೃತಿ ತರಬೇತಿ, ಸಮುದಾಯ ಸಂವೇದನೆ, ಬೇಸ್ ಲೈನ್ ಸಮೀಕ್ಷೆ ಮಾಡಿ ವಿಕಲಚೇತನರ ಪ್ರೋತ್ಸಾಹದಿಂದ ರಚನೆ ಮಾಡಿ ಅವರಿಗೆ ಜೀವನೋಪಾಯ ಚಟುವಟಿಕೆಗಳ ತರಬೇತಿ ನೀಡಿ ವಿಕಲಚೇತನರನ್ನು ಆರ್ಥಿಕವಾಗಿ, ಸಾಮಾಜಿಕವಾಗಿ, ಸದೃಢರನ್ನಾಗಿ ಮಾಡಬೇಕೆಂಬ ನಿಲುವನ್ನು ಡೀಲ್ ಫೌಂಡೇಶನ್ ಸಂಸ್ಥೆ ಹಾಕಿಕೊಂಡಿತು.

ಆ ಗುರಿಯಂತೆ ಡೀಲ್ ಫೌಂಡೇಶನ್ ನ ಕಾರ್ಯಕರ್ತರ ಶ್ರಮದಿಂದ ಎರಡು ವರ್ಷದ ಅವಧಿಯಲ್ಲಿ ಅಂದರೆ ಆಗೆಸ್ಟ್ 2023 ರ ವರೆಗೆ 802 ವಿಕಲಚೇತನರು &981 ಮಹಿಳಾ ಸದಸ್ಯರು ತರಬೇತಿ ಪಡೆದು ಸುಸ್ಥಿರ ಜೀವನೋಪಾಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.ಹಾಗೂ 1086 ವಿಕಲಚೇತನರು &366ಮಹಿಳಾ ಸದಸ್ಯರು ಆರ್ಥಿಕ ಸೇರ್ಪಡೆ ಚಟುವಟಿಕೆಗಳ ಮೂಲಕ ಬೆಂಬಲಿತಾರಾಗಿದ್ದಾರೆ. ಹಾಗೂ ಗದಗ, ಮೆವುಂಡಿ, ಶಿರಹಟ್ಟಿ, ಗಜೇಂದ್ರಗಡ 4ತಾಲೂಕುಗಳಲ್ಲಿ ಆರಂಭ ಸ್ವ ಉದ್ಯೋಗ ಕೇಂದ್ರವನ್ನು ಸ್ಥಾಪಿಸಿದೆ.ರೈತ ವಿಕಲಚೇತನರಿಗೆ ಅನುಕೂಲವಾಗಲು ರೈತ ಉತ್ಪಾದಕ ಕಂಪನಿಯನ್ನು ಮೇಯುಂಡಿ ಗ್ರಾಮದಲ್ಲಿ ಆರಂಭಿಸಲಾಗಿದೆ. ಮುಂಡರಗಿ ವಿಕಲಚೇತನರ ಸಹಕಾರ ಸಂಘ ಸುರಕ್ಷತಾ ತಾಲೂಕು ಮಟ್ಟದಲ್ಲಿ ರಚಿಸಲಾಗಿದೆ ಹಾಗೂ ಕೃಷಿ ಆಧಾರಿತ ಫಾರ್ಮಾರ ಪ್ರೊಡ್ಯೂಸರ್ ಕಂಪನಿ ಯನ್ನು ಕರ್ನಾಟಕ ಸರ್ಕಾರದಿಂದ ಅನುಮೋದಿಸಲ್ಪಟ್ಟಿದೆ. ಈ ರೀತಿಯಾಗಿ ಡೀಲ್ ಫೌಂಡೇಶನ್ ಹಾಕಿಕೊಂಡು ಗುರಿಗಳಂತೆ ಕಾರ್ಯನಿರ್ವಹಿಸಿ ಇದನ್ನು ಸಿಡ್ಬಿ ಗೆ ಕಳುಹಿಸಲಾಗಿದೆ.

ಈ ರೀತಿಯಾಗಿ ಡೀಲ್ ಫೌಂಡೇಶನ್ ಒಂದೊಂದು ಗಮೈಲುಗಲ್ಲು ಸಾಧಿಸಿದ ನಂತರ ಸಿಡ್ಬಿ ವತಿಯಿಂದ ಪ್ರತಿ ವರ್ಷ ಪರಿಶೀಲನೆ ಇರುತ್ತೆ ಅದರಂತೆಯೇ ಕಳೆದ ವರ್ಷದ ಸಿಡ್ಬಿ ಪರಿಶೀಲನೆಯಂತೆ ಈ ವರ್ಷವೂ ಸಿಡ್ಬಿಯಿಂದ ಮಹಮ್ಮದ್ ಅರೋರ್ ಅವರು 2 ದಿನಗಳ ಪರಿಶೀಲನೆಗೆ ಬಂದಿದ್ದರು.2ದಿನಗಳ ಸಿಡ್ಬಿ ಪರಿಶೀಲನೆಗೆ ತಯಾರಿ ಮಾಡಲಾಗಿತ್ತು ಅದರಂತೆಯೆ 6/112023 ಮೊದಲ ದಿನ ಮಹಮ್ಮದ್ ಅರುಣ್ ಡೀಲ್ ಫೌಂಡೇಶನ್ ಸಂಸ್ಥಾಪಕರಾದ ಮಿಸ್ಟರ್ ಸುರೇಂದ್ರ ಶ್ರೀಮತಿ ಎಲಿಬತ್ ಶಾಪ್ ನಿಕ್ ಅಡ್ವರ್ಡ್ ಅಜಾದ್ ಪ್ರಶೀದ್ ಹಾಗೂ ಡೀಲ್ ಫೌಂಡೇಶನ್ ಕಾರ್ಯಕರ್ತರು ಇವರೆಲ್ಲರ ಸಮ್ಮುಖದಲ್ಲಿ ಮೊದಲು ಕರ್ನಾಟಕ ಪಂಚಾಯತ್ ರಾಜ್ ಯುನಿವರ್ಸಿಟಿಯಲ್ಲಿ ಕುಲಪತಿಗಳೊಂದಿಗೆ ಮೀಟಿಂಗ್ ಮುಗಿಸಿಕೊಂಡು ವಿಕಲಾಂಗತೆಯ ಪ್ರಾರಂಭಿಕ ಹಂತದಲ್ಲಿ ಪತ್ತೆ ಹಚ್ಚುವಿಕೆ ಮತ್ತು ಮಾರ್ಗದರ್ಶನ ಮತ್ತು ಚಿಕಿತ್ಸೆಯ ಸೇವೆಗಳನ್ನು ನೀಡುತ್ತಿರುವ ಜಿ ಸಿ ಇ ಐ ಡಿ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿನ ಮಕ್ಕಳೊಂದಿಗೆ ಬೆರೆತು ಪೋಷಕರಿಗೆ ಅವರ ಅಭಿಪ್ರಾಯವನ್ನು ಕೇಳಿ ಪೋಷಕರ ತೊಂದರೆಗಳನ್ನು ನಿವಾರಿಸುತ್ತೇವೆ ಎಂದು ಮಿಸ್ಟರ್ ಸುರೇಂದ್ರ ಶಾಪ್ ಅವರು ಭರವಸೆ ನೀಡಿದರು.

ನಂತರ ಅಲ್ಲಿಂದ ಭುವನೇಶ್ವರಿ ವಿಶೇಷ ಅಗತ್ಯವುಳ್ಳ ಶಾಲೆಯ ಮಕ್ಕಳ ವಿಕಲಚೇತನರ ಸ್ವಸಹಾಯ ಸಂಘ ರಚನೆ ಮಾಡಲಾಗಿದೆ. ಅವು ಸಮರ್ಥ ಮತ್ತು ಸಮೃದ್ಧಿ ವಿಕಲಚೇತನರ ಸ್ವ ಸಹಾಯ ಸಂಘ ಈ ಎರಡು ಸಂಘದವರು ತಯಾರಿಸಿದ ಪೇಪರ್ ಬ್ಯಾಗನ್ನು ವೀಕ್ಷಿಸಲು ಸಂಘಗಳಿಗೆ ಭೇಟಿ ನೀಡಿದರು ಆ ಸಂಘದ ಮಕ್ಕಳನ್ನು ಕಂಡು ಎಲ್ಲರೂ ಆಶ್ಚರ್ಯಪಟ್ಟರು ಕಾರಣ ಎಲ್ಲಾ ಅಂಗಾಂಗಗಳು ಹೊಂದಿದ ವ್ಯಕ್ತಿಗಳು ಜೀವನದಲ್ಲಿ ಕೆಲಸ ಮಾಡಲು ಕಷ್ಟ ಪಡುತ್ತಾರೆ ಆದರೆ ಈ ವಿಶೇಷ ಅಗತ್ಯವುಳ್ಳ ಮಕ್ಕಳು ತಯಾರಿಸಿದ ಪೇಪರ್ ಬ್ಯಾಗ್, ಅವರ ಉತ್ಸಾಹ, ಕೌಶಲ್ಯ, ಸಾಧಿಸಬೇಕು ಎಂಬ ಛಲವನ್ನು ಕಂಡು ಮಹಮ್ಮದ್ ಅರುರವರು ಅಭಿನಂದನೆ ಸಲ್ಲಿಸಿ ಮಕ್ಕಳಿಗೆ ಹಾರೈಸಿದರು.

ಮುಂದೆ ಮಧ್ಯಾಹ್ನ ಕೃಷಿ ವಿಸ್ತರಣಾ ಕೇಂದ್ರದಲ್ಲಿ ಗದಗ್ ಅಸ್ಕ್ ಕೇಂದ್ರವನ್ನು ವೀಕ್ಷಿಸಿದರು. ಅದಕ್ಕೂ ಮೊದಲು ಅಲ್ಲಿ ಉತ್ತರ ಕರ್ನಾಟಕದ ಊಟದ ಔತಣವನ್ನು ಆಸ್ಕ್ ಕೇಂದ್ರದಲ್ಲಿ ಏರ್ಪಡಿಸಲಾಗಿತ್ತು. ಎಲ್ಲರೂ ಊಟದ ಔತಣವನ್ನು ಮೆಚ್ಚುಗೆ ಸಲ್ಲಿಸಿದರು.ನಂತರ ಗದಗ್ ಆಸ್ಕ್ ಸೆಂಟರ್ನಲ್ಲಿ ರೊಟ್ಟಿ ವ್ಯಾಪಾರ ಮಾಡುತ್ತಿರುವ ಕಲ್ಯಾಣ ಬಸವೇಶ್ವರ ಸಂಘದ ಸದಸ್ಯರಾದ ಸುನಿತ ಹಿರೇಮಠ ಅವರನ್ನು ಮಹಮ್ಮದ್ ಅವರು ಭೇಟಿ ನೀಡಿ ಈ ವ್ಯಾಪಾರದಿಂದ ಆಗುವ ಲಾಭ ನಷ್ಟದ ಬಗ್ಗೆ ಚರ್ಚಿಸಿದರು. ಆರ್ಥೋಟಿಕ್ಸ್ ಪ್ರಾಸ್ಪಟಿಕ್ ಬಗ್ಗೆ & ವಿಕಲಚೇತನ ರೈತರಿಗೆ ಅನುಕೂಲವಾಗಲು ಸಾಧನ ಸಲಕರಣೆಗಳನ್ನು ವೀಕ್ಷಿಸಿ ಅದರ ಬಗ್ಗೆ ಡೀಲ್ ಫೌಂಡೇಶನ್ ಸಂಸ್ಥೆ ಕಾರ್ಯಕರ್ತರಾದ ಸಾಗರ ವಿರುಪಣ್ಣವರು ಮಹಮ್ಮದ್ ಅರೂರ್ ಇವರಿಗೆ ಮಾಹಿತಿ ನೀಡಿದರು. ನಂತರ ವಸ್ತು ಪ್ರದರ್ಶನದಲ್ಲಿ ವಿಕಲಚೇತನರು ತಯಾರಿಸಿದ ಗೊಂಬೆಗಳು, ಮಾಸ್ಕ್, ಎಣಿಕೆ ಸಾಮಾನು, ಪೇಪರ್ ಬ್ಯಾಗ್, ಕೃಷಿಗೆ ಬೇಕಾದ ಗೊಬ್ಬರ, ಬೀಜ ಮುಂತಾದ ಕರ ಕುಶಲ ವಸ್ತುಗಳನ್ನು ವೀಕ್ಷಿಸಿ ಇದನ್ನು ವೀಣಾ ಶಾಖನವರು ಮತ್ತು ನಿರ್ಮಲ ಇವರು ಇಲ್ಲಿ ಕೆಲಸ ಮಾಡುತ್ತಾರೆ ಎಂದು ಸಾಗರ್ ಇವರು ಸ್ವ ವಿವರವಾಗಿ ತಿಳಿಸಿಕೊಟ್ಟರು. ಅದರಂತೆ ಮಹಮ್ಮದ್ ಆರೋರ್ ಇವರು ಒಳ್ಳೆಯ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಅಲ್ಲಿಂದ ಬೆಟಿಗೇರಿ ಗ್ರಾಮದ ಉಜ್ವಲ ಮಹಿಳಾ ಸ್ವಸಹಾಯ ಸಂಘಕ್ಕೆ ಭೇಟಿ ನೀಡಿ ಎಲ್ಲ ಸದಸ್ಯರೊಂದಿಗೆ ಚರ್ಚೆ ಮಾಡಿದರು. ಈ ಸಂಘದಲ್ಲಿ ಸಾಲವನ್ನು ತೆಗೆದುಕೊಂಡು ನೈಕರಿಗೆ ಉದ್ಯೋಗ ಮಾಡುತ್ತಿದ್ದಾರೆ. ಅದರ ಬಗ್ಗೆ ಮಹಮ್ಮದ್ ಅರೋರ್ ಇವರು ನೇಕಾರಿಕೆ ಯಂತ್ರವನ್ನು & ಅದರಿಂದ ತಯಾರಾದ ಸೀರೆಯನ್ನು ವೀಕ್ಷಿಸಿ ಎಲ್ಲರೊಂದಿಗೆ ಫೋಟೋ ತೆಗೆದುಕೊಂಡು ಮೊದಲನೇ ದಿನದ ಗದಗ್ ಪರಿಶೀಲನೆಯನ್ನು ಮುಕ್ತಾಯಗೊಳಿಸಿದರು.

ಎರಡನೇ ದಿನದ ಸಿಡ್ಬಿ ಪರಿಶೀಲನೆಯ ಪ್ಲಾನ್ ನಂತೆ ಮೆವುಂಡಿ ಆಸ್ಕ್ ಸೆಂಟರ್ ವೀಕ್ಷಣೆ ಮತ್ತು ಕೋ ಆಪರೇಟಿವ್ ಸೊಸೈಟಿ ವಿಕಲಚೇತನರೊಂದಿಗೆ ಚರ್ಚೆ,ಡೀಲ್ ಫೌಂಡೇಶನ್ ನ ಕಾರ್ಯಕರ್ತರೊಂದಿಗೆ ಚರ್ಚೆ ಮತ್ತು ವಿಕಲಚೇತನ ಸಂಘದ ಭೇಟಿ ಆಗಿತ್ತು. ಅದರಂತೆ ಎರಡನೇ ದಿನ ಮೆವುಂಡಿ ಗ್ರಾಮದ ಆಸ್ಕ್ ಸೆಂಟರ್ ವೀಕ್ಷಿಸಿ ಅಲ್ಲಿನ ಕಂಪ್ಯೂಟರ್ ತರಬೇತಿ ಕೇಂದ್ರವನ್ನು ವೀಕ್ಷಿಸಿದರು. ಮತ್ತು ಕೋ ಆಪರೇಟಿವ್ ಸೊಸೈಟಿ ವಿಕಲಚೇತನರೊಂದಿಗೆ ಚರ್ಚಿಸಿ ಕೋ ಆಪರೇಟಿವ್ ಬಗ್ಗೆ ವಿಕಲಚೇತನರ ಜೀವನದಲ್ಲಿ ಆಗುತ್ತಿರುವ ಬದಲಾವಣೆಯ ಬಗ್ಗೆ ಕೇಳಿದರು. ನಂತರ ಸರ್ಕಾರದಿಂದ ಅನುಮೋದನೆಗೊಂಡ ಫಾರ್ಮರ್ ಪ್ರೊಡೀಸ್ ಕಂಪನಿಯನ್ನು “ಪರಿಸರ ಸನ್ನಿಧಿ”ಎಂದು ನಾಮಕರಣ ಮಾಡಲಾಯಿತು. ಅದರ ಒಂದು ಸಭೆಯಲ್ಲಿ ಮಹಮ್ಮದ್ ಅರುರ್, ಸುರೇಂದ್ರ ಶ್ರಾಫ್, ನಿಕ್ ಎಡ್ವರ್ಡ್, ಕೃಷಿ ಇಲಾಖೆ ಮುಖ್ಯಸ್ಥರು, ಪಿಡಿಒ ಇನ್ನು ಅನೇಕ ಗಣ್ಯರು ಪಾಲ್ಗೊಂಡಿದ್ದರು.

ಮಧ್ಯಾಹ್ನ ಊಟ ಆದನಂತರ ಡೀಲ್ ಫೌಂಡೇಶನ್ ಸಂಸ್ಥೆಯ ಕಾರ್ಯಕರ್ತರೊಂದಿಗೆ ಚರ್ಚೆ ಮಾಡಿದರು. ಮುಂದಿನ ಕೆಲಸವನ್ನು ಯಾವ ರೀತಿ ಪೂರ್ಣಗೊಳಿಸಬೇಕು ಎಂದು ಸಲಹೆಯನ್ನು ನೀಡಿದರು ನಂತರ ಮುಂಡರಗಿ ತಾಲೂಕಿನ ಏಕ್ಲಾಸ್ ಪುರ ಗ್ರಾಮದ “ನಂದಿನಿ ಸ್ವಸಹಾಯ” ಗುಂಪನ್ನು ಭೇಟಿ ನೀಡಿದರು. ಈ ಗುಂಪಿನ ಸದಸ್ಯರು ಗೊಂಬೆ ತಯಾರಿಕೆ, ಹಾಲಿನ ಡೇರಿ ಉದ್ಯೋಗ, ಹೈನುಗಾರಿಕೆ, ಟೈಲರಿಂಗ್ ಉದ್ಯೋಗ ಮಾಡುತ್ತಿದ್ದಾರೆ. ಇವರೆಲ್ಲರನ್ನು ಕಂಡು ನಿಮ್ಮದೇ ಆದ ಅಂಗಡಿಯನ್ನು ಹಾಕಿಕೊಂಡು ಇನ್ನು ಹೆಚ್ಚಿನ ಸಾಲವನ್ನು ಪಡೆದುಕೊಂಡು ಹೆಚ್ಚಿನ ಪ್ರಮಾಣದಲ್ಲಿ ಆರ್ಥಿಕವಾಗಿ ಎಲ್ಲರೂ ಅಭಿವೃದ್ಧಿ ಹೊಂದಿರಿ ಎಂದು ಸಲಹೆ ನೀಡಿ ಹಾರೈಸಿದರು. ಮತ್ತು ಹುಣಸೆ ಜಿಗಳಿ ವ್ಯಾಪಾರ ಮಾಡುತ್ತಿರುವ ವಿರೂಪಾಕ್ಷಗೌಡರ ಅವರನ್ನು ಅಭಿನಂದಿಸಿದರು. ವಿಕಲಚೇತನತೆ ಹೊಂದಿರುವ ಇವರು ಸ್ವಂತ ಉದ್ಯೋಗ ಮಾಡುತ್ತಿರುವುದು ಎಲ್ಲಾ ವಿಕಲಚೇತನರಿಗೆ ಮಾದರಿಯಾಗಿದೆ. ಇವರ ಈ ಶ್ರಮ ಯಾವಾಗಲೂ ಹೆಚ್ಚಿನ ಮಟ್ಟದಲ್ಲಿ ಯಶಸ್ಸು ಸಿಗಲಿ ಎಂದು ಮಹಮದ್ ಅರುರ್ ಅವರು ಬೆಂಬಲಿಸಿದರು.

ಈ ರೀತಿಯಾಗಿ ಎರಡನೇ ದಿನದ ಸಿಡ್ಬಿ ಭೇಟಿಯು ಒಳ್ಳೆಯ ರೀತಿಯಲ್ಲಿ ಯಶಸ್ವಿಯಾಯಿತು. ಹೀಗೆ ಉಳಿದ ಕೆಲಸವನ್ನು ಹೆಚ್ಚಿನ ಪರಿಶ್ರಮ ಹಾಕಿ ವಿಕಲಚೇತನರಿಗೆ ಒಳ್ಳೆಯದಾಗಲಿ ಎಂದು ಮಹಮದ್ ಆರೂರ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಈ ಬ್ಲಾಗ್ ಗೆ ಸಂಬಂಧಿಸಿದಂತೆ ಯಾವುದೇ ನಿರ್ದಿಷ್ಟ ಪ್ರಶ್ನೆಗಳಿಗೆ ಅಥವಾ ಯಾವುದೇ ಸಹಾಯಕ್ಕಾಗಿ Info@deal-Foundation.com ನಲ್ಲಿ ತಿಳಿಸಿರಿ ಮತ್ತು ನಾವು ಮಾಡುವ ಕೆಲಸದ ಕುರಿತು ಇನ್ನಷ್ಟು ತಿಳಿದುಕೊಳ್ಳಲು www.deal-Foundation.com ಗೆ ಲಾಗ್ ಇನ್ ಮಾಡಿ.

ಧನ್ಯವಾದಗಳು

Get a report of all our on field work every month.

You have Successfully Subscribed!

Share This