ಗದಗ್ ಜಿಲ್ಲೆಯ ಏಳು ತಾಲೂಕುಗಳಲ್ಲಿ ವಿಕಲಚೇತನ ಉದ್ಯಮಶೀಲತೆ ಮತ್ತು ನಾಯಕತ್ವ ಪ್ರತಿಷ್ಠಾನದಿಂದ ಸ್ಥಾಪಿಸಲಾಗಿರುವ “ಆರಂಭ ಸ್ವ ಉದ್ಯೋಗ ಕೇಂದ್ರ” ಮುಖ್ಯವಾಗಿ ವಿಕಲಚೇತನ ವ್ಯಕ್ತಿಗಳಿಗೆ ಹೈನುಗಾರಿಕೆ ತರಬೇತಿ, ಟೈಲರಿಂಗ್ ತರಬೇತಿ,ರೊಟ್ಟಿ ತಯಾರಿಕೆ,ಮೇಣದಬತ್ತಿ ತರಬೇತಿ, ಜೇನು ಸಾಕಾಣಿಕೆ ಮುಂತಾದ ಜೀವನ ಪೋಷಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಸಹಾಯ ಮಾಡುವ ಗುರಿಯನ್ನು ಹೊಂದಿದೆ.

   ಈ ಆಸ್ಕ್ ಕೇಂದ್ರಗಳು ವಿಕಲಚೇತನ ವ್ಯಕ್ತಿಗಳು ಸ್ವತಂತ್ರ ಜೀವನವನ್ನು ನಡೆಸಲು ಮತ್ತು ವಿಕಲಚೇತನತೆ ಎಲ್ಲಾ ಅಂಶಗಳ ಬಗ್ಗೆ ಅಗತ್ಯ ಮಾಹಿತಿಯನ್ನು ಒದಗಿಸಲು ಸಹಾಯ ಮಾಡುವ ಒಂದು ನಿಲುಗಡೆ ತಾಣವಾಗಿದೆ. ಅದಕ್ಕಾಗಿ ಗದಗ್, ಮುಂಡರಗಿ, ಶಿರಹಟ್ಟಿ,ಗಜೇಂದ್ರಗಡ,ನರಗುಂದ, ರೋಣ,ಲಕ್ಷ್ಮೇಶ್ವರ 7 ತಾಲೂಕುಗಳಲ್ಲಿ ಈ ಆಸ್ಕ್ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಈ ರೀತಿ ಮಾಡುವುದರಿಂದ ಗದಗ್ ಜಿಲ್ಲೆಯಾದ್ಯಂತ  ಇರುವ ಎಲ್ಲಾ ವಿಕಲಚೇತನರು ಇದರ ಪ್ರಯೋಜನವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತಿದೆ.

   ಉದಾಹರಣೆಗೆ ಗದಗ್ ತಾಲೂಕಿನ ರೈತ ವಿಸ್ತರಣಾ ಕೇಂದ್ರದಲ್ಲಿ ಆಸ್ಕ ಕೇಂದ್ರವನ್ನು ಆರಂಭಿಸಲಾಗಿದೆ.ಡೀಲ್ ಫೌಂಡೇಶನ್ ಸಂಸ್ಥೆ ಇದನ್ನು ಮಾಡುವುದರಿಂದ ಅವರ ಗುರುತಿಸಲ್ಪಟ್ಟಂತೆಯೇ ವಿಕಲಚೇತನರ ವೃತ್ತಿ ಜೀವನವನ್ನು ಸ್ಥಾಪಿಸಲು ಸರಿಯಾದ ವೇದಿಕೆಯನ್ನು ನೀಡಲಾಗುತ್ತಿದೆ. ಗದಗ್ ತಾಲೂಕಿನ ಲವ್ಲೀವುಡ್ ಆಫೀಸರ್ ಆದ ನಿರ್ಮಲ ಇವರು ಗದಗ್ ತಾಲೂಕಿನಲ್ಲಿ ವಿಕಲಚೇತನ ಮತ್ತು ಮಹಿಳೆಯರ ಸ್ವ ಸಹಾಯ ರಚನೆ ಮಾಡಿದ್ದು ವಿಕಲಚೇತನ ಮತ್ತು ಮಹಿಳೆಯರಿಗೆ ಫೌಂಡೇಶನ್ ನಿಂದ ಲವ್ಲೀವುಡ್ ಚಟುವಟಿಕೆಗಳ ತರಬೇತಿಯನ್ನು ನೀಡಲಾಗಿದೆ. ಈಗಾಗಲೇ ಅದರಲ್ಲಿ “ಸಮರ್ಥ ವಿಕಲಚೇತನರ ಮಹಿಳಾ ಸ್ವಸಹಾಯ ಸಂಘ” ಮತ್ತು “ಸಮೃದ್ಧಿ ವಿಕಲಚೇತನರ ಪುರುಷರ ಸ್ವಸಹಾಯ ಗುಂಪಿನವರು” ಪೇಪರ್ ಬ್ಯಾಗ್ ತರಬೇತಿಯನ್ನು ಪಡೆದುಕೊಂಡಿದ್ದು ತಾವು ತಯಾರಿಸಿದ ಪೇಪರ್ ಮಾರಾಟ ಮಾಡುವ ಉದ್ಯೋಗವನ್ನು ಈ ಆಸ್ಕ್ ಕೇಂದ್ರದಲ್ಲಿ ಪ್ರಾರಂಭಿಸಿದ್ದಾರೆ.ಜೊತೆಗೆ “ಕಲ್ಯಾಣ ಬಸವೇಶ್ವರ ಸ್ವ ಸಹಾಯ ಸಂಘ”ದವರು ರೊಟ್ಟಿ ಮಷೀನ್ ಹಾಕಿ ಉದ್ಯೋಗ ಪ್ರಾರಂಭಿಸಿದ್ದಾರೆ. ಇವರೆಲ್ಲರೂ ಡೀಲ್ ಫೌಂಡೇಶನ್ ಹಾಗೂ ಸೆಲ್ಕೋ ಕಂಪನಿಯಿಂದ ಸಹಕಾರ ಪಡೆದುಕೊಂಡು ತಾವು ಆರ್ಥಿಕವಾಗಿ ಸದೃಢರಾಗಿ ಮಾದರಿಯಾಗಬೇಕು ಎಂಬ ನಿಲುವನ್ನು ಹೊಂದಿದ್ದಾರೆ.ಜೊತೆಗೆ ವಿಕಲಚೇತನರ ತಯಾರಿಸಿದ ಗೊಂಬೆಗಳು, ಜೇನುತುಪ್ಪ,ಎಣಿಕೆ ಸಾಮಾನುಗಳು, ಮೇಣದಬತ್ತಿಗಳು, ಬ್ಯಾಗ್ ಜೊತೆಗೆ ಕೃಷಿಗೆ ಬೇಕಾದ ಎರೆಹುಳ ಗೊಬ್ಬರ,ಬೀಜ ಮುಂತಾದ ಕರಕುಶಲ ಸಾಮಾನುಗಳು ಈ ಆಸ್ಕ್ ಕೇಂದ್ರದಲ್ಲಿ ಮಾರಾಟಕ್ಕೆ ಸಿಗುತ್ತವೆ.

   ಡೀಲ್ ಫೌಂಡೇಶನ್ ಸಂಸ್ಥೆ ವಿಕಲಚೇತನರಿಗೆ ಈ ರೀತಿ ಸಹಕಾರ ಮಾಡುವುದರ ಜೊತೆಗೆ ವಿಕಲಚೇತನರಿಗೆ ಇನ್ನು ಅನುಕೂಲವಾಗಲಿ ಎಂದು ದೈಹಿಕ ನ್ಯೂನತೆ ಹೊಂದಿದ ವಿಕಲಚೇತನರಿಗೆ ಸಾಧನ ಸಲಕರಣೆಗಳ ತಯಾರು ಮಾಡುವ ವಿಭಾಗವನ್ನು ಗದಗ್ ಆಸ್ಕ ಕೇಂದ್ರದಲ್ಲಿ ಆರಂಭಿಸಬೇಕು ಎಂದು ಎಲ್ಲಾ ಕಾರ್ಯಗಳ ತಯಾರಿ ಮಾಡಿಕೊಳ್ಳುತ್ತಿದೆ.ಅದು “ಪ್ರಾಸ್ಪೆಟಿಕ್ ಮತ್ತು ಆರ್ಥೋಟಿಕ್” ತಂತ್ರಜ್ಞಾನ.

    ಪ್ರಾಸ್ಪೆಟಿಕ್ ಅಂದರೆ ಬಾಹ್ಯವಾಗಿ ಅನ್ವಯಿಸಲಾದ ಸಾಧನವನ್ನು ಸಂಪೂರ್ಣವಾಗಿ ಅಥವಾ ಭಾಗಶಃ ಬದಲಿಸಲು ಬಳಸಲಾಗುತ್ತದೆ. ಅರ್ಥೋಟಿಕ್ಸ್ ಅಂದರೆ ಆರೋಗ್ಯ ಕ್ಷೇತ್ರದಲ್ಲಿ ವಿಶೇಷತೆಯಾಗಿದೆ. ಆರ್ಥೋಸ್ ಇದು ಕಟ್ಟುಪಟ್ಟಿ ವಿನ್ಯಾಸ ಅನ್ವಯಕ್ಕೆ ಸಂಬಂಧಿಸಿದ ತಂತ್ರಜ್ಞಾನವೇ ಆರ್ಥೋಟಿಕ್ಸ್. ಪ್ರಾಸ್ಪೆಟಿಕ್ ಕಾಣೆಯಾದ ದೇಹದ ಭಾಗಗಳಿಗೆ ಬದಲಿ ಕೃತಕವಾಗಿ ಜೋಡಣೆ ಮಾಡುವುದಾಗಿದೆ. ಪ್ರಾಸ್ಪೆಟಿಕ್ ನಲ್ಲಿ ಟ್ರಾನ್ಸ್ ರಾಡಿಯಲ್, ಟ್ರಾನ್ಸ್ ಹ್ಯೂಮರಲ್, ಟ್ರಾನ್ಸ್ ಟಿಬಿಯಲ್,ಟ್ರಾನ್ಸ್ ಫೇಮೋರಲ್ ಈ ರೀತಿಯ ತಂತ್ರಜ್ಞಾನವನ್ನು ಬಳಸಲಾಗುತ್ತದೆ. ಟ್ರಾನ್ಸ್ ರಾಡಿಯಲ್ ಪ್ರಾಸ್ಪೆಟಿಕ್  ಎನ್ನುವುದು ಮೊಣಕೈ ಕೆಳಗೆ ಜೋಡಿಸುವ ಒಂದು ಕೃತಕ ತೋಳಾಗಿದೆ. ಟ್ರಾನ್ಸ್ ಹ್ಯೂಮರಲ್ ಪ್ರಾಸ್ಪೆಟಿಕ್ ದೇಹಕ್ಕೆ ಸಂಪರ್ಕಿಸುವ ಕೃತಕ ತೋಳಾಗಿದೆ. ಮೊಣ ಕೈ ಮೇಲೆ ಮತ್ತು ಭುಜದ ಕೆಳಗೆ ಉಪಯೋಗಿಸುತ್ತಾರೆ. ಟ್ರಾನ್ಸ್ ಟಿಬಿಯಲ್ ಪ್ರಾಸ್ಪೆಟಿಕ್ ಮೊಣಕಾಲಿನ ಕೆಳಗಿನ ಕೃತಕ ಕಾಲು.ಟ್ರಾನ್ಸ್ ಫೆಮೊರಲ್ ಪ್ರಾಸ್ಪೆಟಿಕ್ ಮೊಣಕಾಲಿನ ಮೇಲೆ ಕಾಣೆಯಾದ ಕಾಲನ್ನು ಬದಲಾಯಿಸುತ್ತದೆ. ಈ ರೀತಿಯಾಗಿ ಡೀಲ್ ಫೌಂಡೇಶನ್ ಸಂಸ್ಥೆ ಇದರ ಬಗ್ಗೆ ಕಾರ್ಯಾಚರಣೆ ಮಾಡುತ್ತಿದೆ.ಇದರ ಮೊದಲ ಹೆಜ್ಜೆಯಲ್ಲಿ ಮೆವುಂಡಿ ಗ್ರಾಮದ ಶ್ರೀ ಮಂಜುನಾಥ ಬಂಗಲ್ ಇವರು ದೈಹಿಕ ವಿಕಲಚೇತನತೆ ಅಂದರೆ ಅವರ ಎಡಗೈ ಸಂಪೂರ್ಣವಾಗಿ ಹೊಂದಿರುವುದಿಲ್ಲ. ಒಂದೇ ಕೈಯಿಂದ ಕೂಲ್ ಡ್ರಿಂಕ್ಸ್ ಅಂಗಡಿಯನ್ನು ನಡೆಸಿಕೊಂಡು ಉದ್ಯೋಗ ಮಾಡುತ್ತಿದ್ದಾರೆ. ಒಂದೇ ಕೈಯಿಂದ ಅವರಿಗೆ ಕೆಲಸ ಮಾಡಲು ಕಷ್ಟವಾಯಿತು. ಡೀಲ್ ಫೌಂಡೇಶನ್ ಸಂಸ್ಥೆ ಇವರನ್ನು ಗುರುತಿಸಿ ಇವರಿಗೆ ಟ್ರಾನ್ಸ್ ಹ್ಯೂಮರಲ್ ಪ್ರಾಸ್ಪೆಟಿಕ್ ಅನ್ನು ಜೋಡಿಸಲಾಗಿದೆ. ಇದರಿಂದ ಈಗ ಇವರು ಸ್ವತಃ ಇವರೇ ಯಾರ ಸಹಾಯವಿಲ್ಲದೆ ಟೂ ವೀಲರ್ ಗಾಡಿಯನ್ನು ಓಡಿಸುತ್ತಾರೆ ಮತ್ತು ತಮ್ಮ ಕೂಲ್ಡ್ರಿಂಕ್ಸ್ ಅಂಗಡಿಯನ್ನು ತಾವೇ ನಡೆಸಿಕೊಂಡು ಆರ್ಥಿಕ ಜೀವನವನ್ನು ಎಲ್ಲರೂ ಮೆಚ್ಚುವಂತೆ ಸಾಗಿಸುತ್ತಿದ್ದಾರೆ.ಇವರ ಈ ಅಭಿವೃದ್ಧಿಗೆ ಅವರ ಛಲವೇ ಕಾರಣ ಎಂದು ಹೇಳಬಹುದು.

   ಇದರ ಜೊತೆಗೆ ಕೃಷಿ ಮಾಡುವ ರೈತ ವಿಕಲಚೇತನರಿಗೆ ಮತ್ತು ಮಹಿಳೆಯರಿಗೆ ಅನುಕೂಲವಾಗಲಿ ಎಂದು ಕೃಷಿ ಸಲಕರಣೆ ತಯಾರಿಸುವ ಗುರಿಯನ್ನು ಡೀಲ್ ಫೌಂಡೇಶನ್ ಸಂಸ್ಥೆ ಹೊಂದಿದೆ.ಕೃಷಿಗೆ ಬೇಕಾದ ಸಲಕರಣೆಗಳು ಅಂದರೆ ಹ್ಯಾಂಡ್ ರಿಡ್ಜರ್,ಹಣ್ಣು ಹಾರ್ವೆಸ್ಟರ್, ಕಬ್ಬು ಸ್ಟ್ರಿಪ್ಪರ್, ಕಡಲೆ ಡೆಕೋರ್ಟಿಕೇಟರ್ ಮುಂತಾದ ಸಲಕರಣೆಗಳು ವಿಕಲಚೇತನ ರೈತರಿಗೆ ಅನುಕೂಲವಾಗಲಿ ಎಂದು ಇವುಗಳನ್ನು ತಯಾರಿಸುವ ಮುಂದಿನ ಗುರಿಯನ್ನು ಹೊಂದಿದೆ.

   ಈ ರೀತಿಯಾಗಿ ವಿಕಲಚೇತನರಿಗೆ ಸಾಧನೆ ಸಲಕರಣೆಗಳು ಮತ್ತು ವಿಕಲಚೇತನರಿಗೆ ಅನುಕೂಲವಾಗಲು ಕೃಷಿ ಯಂತ್ರಗಳನ್ನು ತಯಾರಿಸುವ ಮುಂದಿನ ಗುರಿಯನ್ನು ಡೀಲ್ ಫೌಂಡೇಶನ್ ಸಂಸ್ಥೆಯು ಹೊಂದಿದೆ. ವಿಕಲಚೇತನರೆಲ್ಲರೂ ಆರ್ಥಿಕವಾಗಿ, ಸಾಮಾಜಿಕವಾಗಿ,ಸದೃಢರಾಗಿ ಎಲ್ಲಾ ಕ್ಷೇತ್ರಗಳಲ್ಲಿ ಮುಂದೆ ಬಂದರೆ ಡೀಲ್ ಫೌಂಡೇಶನ್ ಸಂಸ್ಥೆಯ ಉದ್ದೇಶ ಕೂಡ ಸಾರ್ಥಕತೆಯಾಗುತ್ತದೆ. ಇವರೆಲ್ಲರ ಏಳಿಗೆಗಾಗಿ ಬೆನ್ನೆಲುಬಾಗಿ ನಿಂತಿರುವ ಸಿಡ್ಬಿ ಮತ್ತು ಡೀಲ್ ಫೌಂಡೇಶನ್ ಸಂಸ್ಥಗೆ ಹೆಮ್ಮೆಯ ವಿಚಾರವಾಗುತ್ತದೆ.ಇನ್ನು ಹೆಚ್ಚಿನ ವಿಕಲಚೇತನರು ತಮ್ಮ ಆರ್ಥಿಕ ಜೀವನ ಮಟ್ಟವನ್ನು ಸುಧಾರಿಸಲು ಡೀಲ್ ಫೌಂಡೇಶನ್ ಸಂಸ್ಥೆ ಅನುವು ಮಾಡಿಕೊಡುತ್ತದೆ.

    ಈ ಬ್ಲಾಗಗೆ ಸಂಬಂಧಿಸಿದಂತೆ ಯಾವುದೇ ನಿರ್ದಿಷ್ಟ ಪ್ರಶ್ನೆಗಳಿಗೆ ಅಥವಾ ಯಾವುದೇ ಸಹಾಯಕ್ಕಾಗಿ ದಯವಿಟ್ಟು Info@deal-foundation.com ನಲ್ಲಿ ತಿಳಿಸಿರಿ ಮತ್ತು ಮಾಡುವ ಕೆಲಸದ ಕುರಿತು ಇನ್ನಷ್ಟು ತಿಳಿದುಕೊಳ್ಳಲು ದಯವಿಟ್ಟು www.deal-foundation.com ಗೆ ಲಾಗ್ಇನ್ ಮಾಡಿ.

       ಧನ್ಯವಾದಗಳು

Get a report of all our on field work every month.

You have Successfully Subscribed!

Share This