Select Page

 

 

 

ವಿಕಲಚೇತನರ ಏಳಿಗೆಗಾಗಿ ಮತ್ತು ಅವರ ಜೀವನಕ್ಕೆ ಸಾಕಾರವಾಗಲಿ ಎಂಬ ಉದ್ದೇಶದಿಂದ ವಿಕಲಚೇತನ ವ್ಯಕ್ತಿಗಳನ್ನು ಒಳಗೊಂಡ ಅದರ ಸುಸ್ಥಿರ ಜೀವನೋಪಾಯ ಚಟುವಟಿಕೆಯನ್ನು ಅಳೆಯಲು ಎರಡು ವರ್ಷಗಳ ಅವಧಿಯಲ್ಲಿ ಜೀವನೋಪಾಯದ ಚಟುವಟಿಕೆಗಳ ಬಜೆಟ್ ಗೆ ಡೀಲ್ ಫೌಂಡೇಶನ್ ಸಂಸ್ಥೆಯು ಒಪ್ಪಿಕೊಂಡಿತು.ಅದರಂತೆ ವಿಕಲಚೇತನರಿಗೆ ಮತ್ತು ಮಹಿಳೆಯರಿಗೆ ಆರ್ಥಿಕ ಅಭಿವೃದ್ಧಿಗಾಗಿ ಅಂತಹ ಹಂತವಾಗಿ ಗುರಿಗಳನ್ನು ಹಾಕಿಕೊಂಡು ಮುಂದುವರೆಯಿತು.ಅಂದರೆ ವಿಕಲಚೇತನರಿಗಾಗಿ ಜಾಗೃತಿ ತರಬೇತಿ,ಸಮುದಾಯ ಸಂವೇದನೆ,ಬೇಸ್ ಲೈನ್ ಸಮೀಕ್ಷೆ, ಜೀವನೋಪಾಯ ತರಬೇತಿಗಳು, ಆರ್ಥಿಕ ಸಾಕ್ಷರತೆ ತರಬೇತಿ,ಆರಂಭ ಸ್ವ ಉದ್ಯೋಗ ಕೇಂದ್ರ, ವಿಕಲಚೇತನರ ಸ್ವ ಸಹಾಯ ಗುಂಪು ರಚನೆ ಮಾಡುವುದು, ಬ್ಯಾಂಕ್/ಹಣಕಾಸು ಮತ್ತು ಮಾರುಕಟ್ಟೆ ಸಂಪರ್ಕ ಒದಗಿಸುವುದು, ರೈತ ಉತ್ಪಾದಕ ಕಂಪನಿಗಳ ರಚನೆ,ತಾಲೂಕು ಮತ್ತು ಜಿಲ್ಲಾಮಟ್ಟದಲ್ಲಿ ಸಹಕಾರಿ ಸಂಘ ರಚನೆ ಮಾಡುವುದು ಈ ರೀತಿಯಾಗಿ ಗುರಿಗಳನ್ನು ಮುಂದೆ ಇಟ್ಟುಕೊಂಡು ಇದನ್ನು ಕಾರ್ಯರೂಪಕ್ಕೆ ತರಲು ಪ್ರತಿ ತಾಲೂಕಿನಲ್ಲಿ ಲವ್ಲೀವುಡ್ ಆಫೀಸರ್ಸ್ ಅಂದರೆ ಮುಂಡರಗಿ ತಾಲೂಕಿಗೆ ರೇಣುಕಾ ಕಲ್ಲಳ್ಳಿ, ಗದಗ್ ತಾಲೂಕಿಗೆ ನಿರ್ಮಲ, ಶಿರಹಟ್ಟಿ ತಾಲೂಕಿಗೆ ರೇಖಾ ಮಡ್ಡಿ, ಲಕ್ಷ್ಮೇಶ್ವರ ತಾಲೂಕಿಗೆ ದೀಪ, ರೋಣ ಮತ್ತು ನರಗುಂದ ತಾಲೂಕಿಗೆ ಸಂಗೀತಾ ಹೀಗೆ ಎಲ್ಲಾ ತಾಲೂಕಿನಲ್ಲಿ ಲವ್ಲೀವುಡ್ ಆಫೀಸರ್ ವಿಕಲಚೇತನರ ಅಭಿವೃದ್ಧಿಗಾಗಿ ಕೆಲಸ ಮಾಡತೊಡಗಿದರು. ವಿಕಲಚೇತನರ ಅಭಿವೃದ್ಧಿಯಲ್ಲಿ ಮೊದಲು ಸ್ವಸಹಾಯ ಗುಂಪು ರಚನೆ ಮಾಡಿ ಸದಸ್ಯರ ಬ್ಯಾಂಕ್ ಅಕೌಂಟ್ ಮಾಡಿಸಿ ಪ್ರತಿ ತಿಂಗಳು ಉಳಿತಾಯ ಕಟ್ಟಿಸಿ ಮುಂದುವರಿಸುವುದು ನಂತರ ಡೀಲ್ ಫೌಂಡೇಶನ್ ಸಂಸ್ಥೆ ತರಬೇತಿಗಳನ್ನು ನೀಡಿ ಆರು ತಿಂಗಳ ನಂತರ ಸ್ವಯಂ ಉದ್ಯೋಗ ಮಾಡಲು ಬ್ಯಾಂಕ್ ಮೂಲಕ ಸಾಲವನ್ನು ಕೊಡಿಸಿ ಅವರಿಗೆ ಆರ್ಥಿಕವಾಗಿ ಬೆಂಬಲಿಸಿ ಉದ್ಯೋಗದಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವುದು ಹೀಗೆ ಆರ್ಥಿಕ ಅಭಿವೃದ್ಧಿ ಹೊಂದಿ ವಿಕಲಚೇತನರು ತಮ್ಮ ಜೀವನದಲ್ಲಿ ಮುಂದೆ ಬರಬೇಕೆಂಬ ಆಶಯ ಫೌಂಡೇಶನ್ ಆಗಿದೆ.

ಹೀಗೆ ಪ್ರತಿ ತಾಲೂಕಿನಲ್ಲಿ ವಿಕಲಚೇತನರಾಗಿ ಕೆಲಸ ಮಾಡುತ್ತಿರುವ ಡೀಲ್ ಫೌಂಡೇಶನ್ ಸಂಸ್ಥೆ ಕಾರ್ಯಕರ್ತರಿಂದ ಈಗಾಗಲೇ ಒಟ್ಟು 3043ವಿಕಲಚೇತನರು &1275 ಮಹಿಳಾ ಸದಸ್ಯರಿಗೆ ವಿಕಲಚೇತನರ ಜಾಗೃತಿ ಮತ್ತು ಸಮುದಾಯ ಸಂವೇದನೆ ಶೀಲತೆಯನ್ನು ಒದಗಿಸಲಾಗಿದೆ.ಹಾಗೂ 1113ವಕಲಚೇತನರು &1549 ಮಹಿಳೆಯರಿಗೆ ಆರ್ಥಿಕ ಸಾಕ್ಷರತೆ ತರಬೇತಿ ನಾಯಕತ್ವ ತರಬೇತಿ ಮತ್ತು ಉದ್ಯಮಶೀಲತೆ ತರಬೇತಿ ನೀಡಲಾಗಿದೆ.ಹಾಗೂ 802 ವಿಕಲಚೇತನರು&981 ಮಹಿಳಾ ಸದಸ್ಯರು ತರಬೇತಿ ಪಡೆದುಕೊಂಡು ಸುಸ್ಥಿರ ಜೀವನೋಪಾಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಹಾಗೂ ಮೆವುಂಡಿ,ಗದಗ್,ನರೇಗಲ್, ಶಿರಹಟ್ಟಿ ತಾಲೂಕಿನಲ್ಲಿ ನಾಲ್ಕು ಆಸ್ಕ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.1104 ವಿಕಲಚೇತನರು &680 ಮಹಿಳಾ ಸದಸ್ಯರ ಸದಸ್ಯತ್ವದೊಂದಿಗೆ 174 ಸ್ವ ಸಹಾಯ ಗುಂಪು ರಚಿಸಲಾಗಿದೆ. ಹಾಗೂ 1086 ವಿಕಲಚೇತನರು &366 ಮಹಿಳಾ ಸದಸ್ಯರು ಆರ್ಥಿಕ ಸೇರ್ಪಡೆ ಚಟುವಟಿಕೆಗಳ ಮೂಲಕ ಬೆಂಬಲಿತರಾಗಿದ್ದಾರೆ.ಹಾಗೂ ಕೃಷಿ ಆಧಾರಿತ ಫಾರ್ಮೆರ್ ಪ್ರೊಡ್ಯೂಸ ಕಂಪನಿಯನ್ನು ಕರ್ನಾಟಕ ಸರ್ಕಾರದಿಂದ ಅನುಮೋದಿಸಿ “ಪರಿಸರ ಸನ್ನಿಧಿ”ಎಂದು ಹೆಸರಿಡಲಾಗಿದೆ.ಹಾಗೂ ಮುಂಡರಗಿ ವಿಕಲಚೇತನರ ಸಹಕಾರಿ ಸಂಘ ಸುರಕ್ಷಿತ ತಾಲೂಕು ಮಟ್ಟದಲ್ಲಿ ರಚಿಸಲಾಗಿದೆ. ಇವುಗಳನ್ನೆಲ್ಲ ಈಗಾಗಲೇ ಡೀಲ್ ಫೌಂಡೇಶನ್ ಸಂಸ್ಥೆಯು ಹಾಕಿಕೊಂಡ ಗುರಿಗಳಂತೆ ಸಾಧಿಸುತ್ತಾ ಬರುತ್ತಿದೆ.ಇನ್ನುಳಿದ ಗುರಿಗಳಲ್ಲಿ ಇನ್ನೂ ಹೆಚ್ಚಿನ ವಿಕಲಚೇತನರ ಸ್ವಸಹಾಯ ಗುಂಪು ರಚನೆ ಮಾಡಿ ಅವರಿಗೆ ಜೀವನೋಪಾಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿ ಉಳಿದ ಎರಡು ತಾಲೂಕಿನಲ್ಲಿ ಆಸ್ಕ ಕೇಂದ್ರ ಸ್ಥಾಪಿಸಿ ಜಿಲ್ಲಾ ಮಟ್ಟದಲ್ಲಿ ವಿಕಲಚೇತನರ ಕೋ ಆಪರೇಟಿವ್ ಸೊಸೈಟಿಯನ್ನು ಸ್ಥಾಪಿಸಬೇಕು ಎಂಬ ಗುರಿಯನ್ನು ಹಾಕಿಕೊಂಡಿದೆ.

ಡೀಲ್ ಫೌಂಡೇಶನ್ ಸಂಸ್ಥೆ ಹಾಕಿಕೊಂಡ ಈ ಎಲ್ಲಾ ಗುರಿಗಳನ್ನು ಸಾಧಿಸುತ್ತಾ ಬರೋದಕ್ಕೆ ಎಲ್ಲ ಕಾರ್ಯಕರ್ತರು ಮುಖ್ಯ ಕಾರಣ ಎಂದು ಹೇಳಬಹುದು.ಪ್ರತಿದಿನವು ವಿಕಲಚೇತನರಿಗಾಗಿ ಕೆಲಸ ಮಾಡುತ್ತಿರುವ ಕಾರ್ಯಕರ್ತರಿಗೆ ಹೊಸ ಹುಮ್ಮಸ್ಸು,ಬೆಳವಣಿಗೆ ಹೆಚ್ಚಿಸಲು,ಹೊಸ ವಾತಾವರಣ ಸಿಗಲಿ ಅವರಿಗೂ ಮನರಂಜನೆಯ ಭಾವನೆಯನ್ನು ಹೊರಹಾಕಲು ಒಂದು ದಿನದ ಪ್ರವಾಸವನ್ನು ಹಮ್ಮಿಕೊಂಡಿತು. ಅದರ ಎಲ್ಲಾ ತಯಾರಿಯನ್ನು ಡೀಲ್ ಫೌಂಡೇಶನ್ ಸಂಸ್ಥೆಯ ಪ್ರೋಗ್ರಾಮ್ ಮ್ಯಾನೇಜರ್ ಆದ ಉಮಾ ಶಿರೋಳ್, ಟ್ರೈನಿಂಗ್ ಕೋ ಆರ್ಡಿನೇಟರ್ ಆದ ಶಿವಕುಮಾರ್ ಶಿರೋಳ್ ಹಾಗೂ ಸಾಗರ್ ವಿರುಪಣ್ಣವರ್ ಇವರೆಲ್ಲರೂ ಸಹಕರಿಸಿ ಒಂದು ದಿನದ ಪ್ರವಾಸಕ್ಕೆ ಚರ್ಚೆ ಮಾಡಿ ಅದು ಹಸಿರು ವಾತಾವರಣದಿಂದ ಎಲ್ಲರ ಮನಸ್ಸಲ್ಲು ಹೊಸ ಚೈತನ್ಯ ತರುವ ಹಾಗೆ ಹಳ್ಳಿಯ ಜಾಗ ಇರಬೇಕು ಎಂದು ಎಲ್ಲರೂ ಚರ್ಚಿಸಿದಾಗ ಎಲ್ಲರಲ್ಲಿ ಅಗಡಿ ತೋಟ ಎಂದು ಅಭಿಪ್ರಾಯವನ್ನು ಮೂಡಿತು. ಅದರಂತೆ 8/11/2023 ರಂದು ಅಗಡಿ ತೋಟಕ್ಕೆ ಹಮ್ಮಿಕೊಂಡಿತು. ಬೆಳಗ್ಗೆ 8:00ಗೆ ಎಲ್ಲ ಕಾರ್ಯಕರ್ತರು ಹೊರಟು ದಾರಿಯಲ್ಲಿ ಎಲ್ಲಾ ಕಾರ್ಯಕರ್ತರು ಖುಷಿಯಿಂದ ಹಾಡು ಹೇಳುತ್ತಾ ಅವರಲ್ಲಿ ಅಡಗಿರುವ ಖುಷಿಯನ್ನು ಹಂಚಿಕೊಳ್ಳುತ್ತಾ ಹೋದರು. ಸಮಯ ಹೋಗಿದೆ ಗೊತ್ತಾಗಲಿಲ್ಲ ಅಷ್ಟರಲ್ಲಿ 10:30ಕ್ಕೆ ಅಗಡಿ ತೋಟವನ್ನು ತಲುಪಿದರು. ಎಲ್ಲಾ ಕಾರ್ಯಕರ್ತರ ಜೊತೆಗೆ ಡೀಲ್ ಫೌಂಡೇಶನ್ ಸಂಸ್ಥೆ ಹೆಡ್ ಆಫೀಸರ್ ಆದ ಸುರೇಂದ್ರನಾಥ್ ಶ್ರಾಫ್&ನಿಕ್ ಎಡ್ವಾರ್ಡ್ ಇವರು ಕೂಡ ಬಂದಿದ್ದರು.ಅಲ್ಲಿಗೆ ತಲುಪಿದ ನಂತರ ಮೊದಲು ಎಲ್ಲರನ್ನೂ ಆರತಿ ಮಾಡಿ ಸಿಹಿ ಕೊಟ್ಟು ಸ್ವಾಗತಿಸಿದರು. ನಂತರ ಅಲ್ಲಿಯೇ ಬೆಳೆದ ಗಿಡದ ಕೊಂಬೆಯಿಂದ ತಯಾರಿಸಲು ಹೂವಿನ ಟೋಪಿಯನ್ನು ಎಲ್ಲರೂ ಹಾಕಿಕೊಂಡು ಹಾಡು ಹೇಳುತ್ತಾ ಮನರಂಜಿಸಿದರು.ನಂತರ ಬೆಲ್ಲದಿಂದ ತಯಾರಿಸಿದ ಪಾನೀಯವನ್ನು ಕುಡಿದು ಮುಂದೆ ಸಾಗಿದರು. ದಾರಿ ಮಧ್ಯೆ ಹಸಿರು ವಾತಾವರಣ,ಗಿಡ ಮರಗಳು ಮನಸೆಳೆಯುವಂತಿದ್ದವು.ಎಲ್ಲರ ಭಾವನೆಗಳಿಗೂ ಹಸಿರಾದವು.

ಅಲ್ಲಿಂದ ಮುಂದೆ ಸಾಗುತ್ತಾ ಕಲ್ಲಂಗಡಿಯನ್ನು ಸವಿದು ಕಬ್ಬಿನ ಗಾಣದ ಹತ್ತಿರ ಸಾಗಿ ಕಬ್ಬಿನ ಹಾಲನ್ನು ನಾವೇ ಗಾಣದಲ್ಲಿ ಕಬ್ಬನ್ನು ಇಟ್ಟು ಹಾಲನ್ನು ಪಡೆಯಬೇಕಿತ್ತು. ಅದರಂತೆ ಎಲ್ಲರೂ ಖುಷಿಯಿಂದ ಗಾಣವನ್ನು ತಿರುಗಿಸಲು ಹೋದರು ಆದರೆ ಹೆಣ್ಣು ಮಕ್ಕಳಿಗೆ ಅದು ಸ್ವಲ್ಪ ಕಷ್ಟವಾಯಿತು.ಸಾಗರ್,ವರುಣ್, ಶಿವಕುಮಾರ್ ಹಾಗೂ ಸುರೇಂದ್ರನಾಥ್ ಸರ್ ಕೂಡ ಗಾಣವನ್ನು ತಿರುಗಿಸಿ ಎಲ್ಲರಿಗೂ ಕಬ್ಬಿನ ಹಾಲಿನ ಸವಿ ರುಚಿಯನ್ನು ನೀಡಿದರು.

ತುಂತುರು ಮಳೆ ಹನಿಗಳಲ್ಲಿ ಸಾಗುತ್ತಾ ಹಗ್ಗ ಹಿಡಿದು ಹತ್ತುವ ರೋಪ್ ನ್ನು ಪ್ರತಿಯೊಬ್ಬರು ಹತ್ತಿ ಆರಂಭಿಸಿದರು.ನೋಡಲು ಸುಲಭ ಆದರೆ ಹತ್ತಿದ ಮೇಲೆ ಅದರ ಅನುಭವ ಖುಷಿ ಕೊಡುವಂತಾಗಿತ್ತು.ಕೆಲವರು ಮಧ್ಯನೇ ಇಳಿದರು ಇನ್ನು ಕೆಲವರು ಪೂರ್ಣಗೊಳಿಸಿದರು.ನಂತರ ಮಳೆಯ ಜ್ವರ ಇದು ಇದರ ಮಧ್ಯೆ ಎಲ್ಲ ಕಾರ್ಯಕರ್ತರು ಜೊತೆಗೆ ಗೂಡಿ ಕೆಲಸ ಮಾಡಿದರು ಅವರ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಂಡಿರಲಿಲ್ಲ ಅದನ್ನು ತಿಳಿದುಕೊಳ್ಳಲು ಎಲ್ಲ ಕಾರ್ಯಕರ್ತರ ಮಧ್ಯೆ ಒಂದು ಟಾಸ್ಕ್ ನ್ನು ಸುರೇಂದ್ರನಾಥ್ ಸರ್ ಏರ್ಪಡಿಸಿದರು.ಅದು ಇಬ್ಬರನ್ನು ಜೊತೆಜೊತೆಯಾಗಿ ಮಾಡಿ ಅವರಿಬ್ಬರಲ್ಲಿ ಅವರಲ್ಲಿರುವ ಐದು ಸಂಗತಿಗಳನ್ನು ಅವರ ಬಗ್ಗೆ ತಿಳಿದುಕೊಳ್ಳಲು ಹೇಳಿದರು. ಅದರಂತೆ ದೀಪಾ-ತಹಸೀನ್, ಹಾಲಪ್ಪ -ನಿಕ್ ಎಡ್ವರ್ಡ್, ರೇಖಾ- ನಿರ್ಮಲಾ ಹೀಗೆ ಜೋಡಿ ಜೋಡಿ ಆಗಿ ಒಬ್ಬರನ್ನೊಬ್ಬರು ಅರಿತುಕೊಳ್ಳಲು ಹೇಳಿದರು. ನಂತರ ಒಬ್ಬರು ಬಂದು ಅವರು ತಿಳಿದುಕೊಂಡ ಹೊಸ ಸಂಗತಿಯನ್ನು ಹಂಚಿಕೊಂಡರು. ತಹಸೀನ್ ಅವರು ದೀಪಾವರಲ್ಲಿರುವ 5 ಸಂಗತಿಯನ್ನು & ದೀಪಾವರು ತಹಸೀನ್ ಅಲ್ಲಿರುವ ಐದು ವಿಚಾರಗಳನ್ನು ಹೇಳಿದರು. ಹೀಗೆ ಪ್ರತಿಯೊಬ್ಬರೂ ಅವರ ಜೊತೆಗಾರರ ಬಗ್ಗೆ ತಿಳಿದುಕೊಂಡು ಹೇಳುತ್ತಾ ಹೋದರು.ಇದರಿಂದ ತಿಳಿದು ಬರುವುದು ನಮ್ಮ ಜೊತೆಗೆ ಇದ್ದು ಜೊತೆಗೆ ಕೆಲಸ ಮಾಡುವವರ ಬಗ್ಗೆ ನಾವು ತಿಳಿದುಕೊಳ್ಳಲು ಸಮಯ ಕೊಟ್ಟಿರುವುದಿಲ್ಲ ಬೇರೆಯಾದರೂ ಕೇಳಿದಾಗ ಗೊತ್ತಿಲ್ಲ ಅನ್ನೋದಕ್ಕಿಂತ ಅವರ ಬಗ್ಗೆ ಒಳ್ಳೆಯ ಅಭಿಪ್ರಾಯವನ್ನು ಹೇಳಬಹುದು ಎಂಬ ಧೈರ್ಯ ಮೂಡಿತು.ಒಬ್ಬರನ್ನು ಅರಿತುಕೊಳ್ಳುವ ಭಾವನೆ ಬೆಳೆಯಿತು ಮತ್ತು ನಮ್ಮ ಬಂಧುಗಳು ಬಗ್ಗೆ ಇನ್ನು ಯಾರೇ ಆದರೂ ಮೊದಲು ಅವರ ಬಗ್ಗೆ, ಅವರ ಇಷ್ಟ ಕಷ್ಟಗಳ ಬಗ್ಗೆ ಅರಿತು ಸ್ಪಂದಿಸಬೇಕು ಎಂಬ ಮನೋಬಲ ಈ ಚಟುವಟಿಕೆಯಿಂದ ಮೂಡಿಬಂದಿತು. ಇದರಿಂದ ಆ ಒಂದು ಕ್ಷಣ ಎಲ್ಲರ ಕಣ್ಣಂಚಲಿ ನೀರು ತುಂಬಿ ಅರಿತುಕೊಳ್ಳುವ ಭಾವನೆ ಮೂಡಿಸಿತು.

ನಂತರ ಹೀಗೆ ಮುಂದೆ ಸಾಗುತ್ತಾ ಎತ್ತಿನ ಗಾಡಿ,ಕುದುರೆ,ಆಕಳು ಎಲ್ಲವನ್ನು ವೀಕ್ಷಿಸಿ ಹಳ್ಳಿ ವಾತಾವರಣ ಸೃಷ್ಟಿಸುವ ರೇಷ್ಮೆ ಸೀರೆಯನ್ನು ಹುಟ್ಟು ಹೆಣ್ಣು ಮಕ್ಕಳು ಅದರ ಸಂಭವನ್ನು ಹೆಚ್ಚಿಸಿದರು. ನಂತರ ಉಪಹಾರ ಸೇವಿಸಿ ವಸ್ತು ಪ್ರದರ್ಶನವನ್ನು ಕೂಡ ವೀಕ್ಷಿಸಿದರು. ಮಧ್ಯಾಹ್ನ ಹಳ್ಳಿ ಸೊಬಗಿನಿಂದ ತಯಾರಿಸಿದ ಊಟವನ್ನು ಎಲ್ಲರೂ ಒಟ್ಟುಗೂಡಿ ಊಟದ ರುಚಿಯನ್ನು ಸವಿದರು.

ನಂತರ ಬಾಳೆಹಣ್ಣು,ಮಜ್ಜಿಗೆ ಸವಿದು ಮುಂದಿನ ಸಿಡ್ಬಿ ಕೆಲಸವನ್ನು ಯಾವ ರೀತಿ ಪೂರ್ಣಗೊಳಿಸಬೇಕು ಎಂದು ಚರ್ಚಿಸಿದರು.ಇನ್ನು ಹೆಚ್ಚಿನ ಪರಿಶ್ರಮ ಹಾಕಿ ಎಲ್ಲರೂ ಒಟ್ಟುಗೂಡಿ ಈ ಪ್ರಾಜೆಕ್ಟ್ ಅನ್ನು ಸರಿಯಾದ ಸಮಯಕ್ಕೆ ಪೂರ್ಣಗೊಳಿಸಿ ಜೊತೆಗೆ ಎಲ್ಲಾ ಕಾರ್ಯಕರ್ತರ ಶಿಕ್ಷಣಕ್ಕೆ ತಕ್ಕಂತೆ ವಿಕಲಚೇತನರಿಗಾಗಿ ತರಬೇತಿ ನೀಡಲು ಅಂದರೆ ಫಿಜಿಯೋಥೆರಪಿ ಟ್ರೈನಿಂಗ್,ಸ್ಪೀಚ್ ಥರಫಿ ಟ್ರೈನಿಂಗ್ ಹೀಗೆ ಅವರ ಕೌಶಲ್ಯಕ್ಕೆ ತಕ್ಕಂತೆ ತರಬೇತಿ ನೀಡಿ ಪ್ರತಿಯೊಂದು ಹುದ್ದೆ ಫೌಂಡೇಶನ್ ನ ಕಾರ್ಯಕರ್ತರನ್ನು ಸದೃಢಗೊಳಿಸಬೇಕು ಎಂದು ಚರ್ಚೆ ಮಾಡಿದರು. ಅದೇ ರೀತಿ ಎಲ್ಲ ಕಾರ್ಯಕರ್ತರಿಗೂ ಹುಮ್ಮಸ್ಸು ತುಂಬಿಸಿ ಇನ್ನು ಹೆಚ್ಚಿನ ಕೆಲಸ ಮಾಡಲು ಸುರೇಂದ್ರನಥ್ ಸರ್ ಪ್ರೇರಣೆಯನ್ನು ನೀಡಿದರು.ಎಲ್ಲರೂ ಇನ್ನೂ ಹೆಚ್ಚಿನ ಪರಿಶ್ರಮ ಹಾಕಿ ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದರು.

ನಂತರ ಮಳೆ ಆಟದಲ್ಲಿ ಎಲ್ಲಾ ಹೆಣ್ಣುಮಕ್ಕಳು ಕುಣಿದು ತಮ್ಮ ಖುಷಿಯನ್ನು ಹಂಚಿಕೊಂಡರು ಕುದುರೆ ಮೇಲೆ ಸವಾರಿ ಮಾಡಿ ಅದರ ಅನುಭವವನ್ನು ಪಡೆದುಕೊಂಡರು.ಕೊನೆಗೆ ಉಪಹಾರ ಸೇವಿಸಿ ತಾಂಬೂಲ ಪಡೆದುಕೊಂಡು ಅಂದಿನ ಒಂದು ದಿನದ ಚಿಂತನ ಮಂಥನ ದಿನವನ್ನು ಮುಗಿಸಿದರು.

ಈ ರೀತಿಯಾಗಿ ಡೀಲ್ ಫೌಂಡೇಶನ್ ಎಲ್ಲ ಕಾರ್ಯಕರ್ತರಿಗೆ ಬದಲಾವಣೆಯನ್ನು ತರಲು, ಭಾವನೆಗಳನ್ನು ಹಂಚಿಕೊಳ್ಳಲು ಒಂದು ಅವಕಾಶವನ್ನು ಡೀಲ್ ಫೌಂಡೇಶನ್ ಸಂಸ್ಥೆ ನೀಡಿತು. ಇದರಿಂದ ಎಲ್ಲರಿಗೂ ಹೊಸತನವನ್ನು ಮೂಡಿಸಿತು ಮತ್ತು ಈ ಚಿಂತನ ಮಂಥನ ದಿನದಿಂದ ಎಲ್ಲರಲ್ಲೂ ಬಾಂಧವ್ಯ ಹುಟ್ಟಿಸಿ ಈ ಸಮಾಜಕ್ಕೆ ಒಳ್ಳೆಯದು ಮಾಡಬೇಕು ಎಂಬ ಉದ್ದೇಶ ಡೀಲ್ ಫೌಂಡೇಶನ್ ಆಗಿದೆ.

ಈ ಬ್ಲಾಗ್ ಗೆ ಸಂಬಂಧಿಸಿದಂತೆ ಯಾವುದೇ ನಿರ್ದಿಷ್ಟ ಪ್ರಶ್ನೆಗಳಿದ್ದರೆ ಅಥವಾ ಯಾವುದೇ ಸಹಾಯಕ್ಕಾಗಿ Info@deal foundation.com ನಲ್ಲಿ ತಿಳಿಸಿರಿ ಮತ್ತು ನಾವು ಮಾಡುವ ಕೆಲಸದ ಕುರಿತು ಇನ್ನಷ್ಟು ತಿಳಿದುಕೊಳ್ಳಲು www.deal-Foundation ಗೆ ಲಾಗ್ ಇನ್ ಮಾಡಿರಿ.

ಧನ್ಯವಾದಗಳು