ಜನವರಿ 2022 ರ ಕಾರ್ಯ ಚಟುವಟಿಕೆಗಳ ಸಾಧನೆ

ಹೊಸಗುಂಪುಗಳರಚನೆ:

ಈ ತಿಂಗಳಲ್ಲಿ ಚುರ್ಚಿಹಾಳ ಗ್ರಾಮದಲ್ಲಿ ‘ಮನುಶ್ರೀ ಜಂಟಿ ಭಾದ್ಯತೆ ಗುಂಪು’ ಮತ್ತು ಗದಗ ಜಿಲ್ಲೆಯ ಮೇವುಂಡಿ ಗ್ರಾಮದಲ್ಲಿ ‘ಜನನಿ ಸ್ವ-ಸಹಾಯ ಗುಂಪು’ ಎಂಬ ಎರಡು ಹೊಸ ಗುಂಪುಗಳನ್ನು ರಚಿಸಲಾಗಿದೆ.

ಬ್ಯಾಂಕ್ಖಾತೆಯನ್ನುತೆರೆಯುವಿಕೆ:

ಮನುಶ್ರೀ ಜಂಟಿ ಭಾದ್ಯತೆ ಗುಂಪು ಮತ್ತು ಜನನಿ ಸ್ವ-ಸಹಾಯ ಗುಂಪುಗಳಿಗೆ ಗುಂಪಿನ ಬ್ಯಾಂಕ್ ಖಾತೆಗಳನ್ನು ತೆರೆಯಲಾಯಿತು.

ಸಾಲದಅರ್ಜಿ:

ರಾಮೇನಹಳ್ಳಿ ಗ್ರಾಮದ ಆಶೀರ್ವಾದ್ ಜಂಟಿ ಭಾದ್ಯತೆ ಗುಂಪಿನ ಸದಸ್ಯರಿಗೆ, ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಡಂಬಳ ಶಾಖೆಯಲ್ಲಿ ಗುಂಪಿನ ಸಾಲಕ್ಕೆ ಅರ್ಜಿ ಸಲ್ಲಿಸಲು ನಾವು ಸಹಾಯ ಮಾಡಿದ್ದೇವೆ.

ಕೌಶಲ್ಯತರಬೇತಿಕಾರ್ಯಕ್ರಮ:

ನಾವು ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ (ಎಇಇಸಿ) ಗದಗ ಸಹಯೋಗದಲ್ಲಿ ಯುವ ಕೌಶಲ್ಯ ತರಬೇತಿ ಕಾರ್ಯಕ್ರಮವನ್ನು ನಡೆಸಿದ್ದೇವೆ. ಈ ಕಾರ್ಯಕ್ರಮವು ಯುವಜನರಿಗೆ ಆದಾಯ ಉತ್ಪಾದನಾ ಚಟುವಟಿಕೆಗಳ ಬಗ್ಗೆ ತರಬೇತಿ ನೀಡುವ ಉದ್ದೇಶವನ್ನು ಹೊಂದಿದೆ.

ಪೇಪರ್ ಬ್ಯಾಗ್ ಮತ್ತು ಬಿಸ್ಕೆಟ್ ತಯಾರಿಕೆ ತರಬೇತಿ:

ಕೈ-ತೋಟ ಮತ್ತು ಕುರಿ ಸಾಕಾಣಿಕೆಯ ತರಬೇತಿ:

ಜೇನುಕೃಷಿಯ ತರಬೇತಿ:

ರೈತ ಉತ್ಪಾದಕರ ಕಂಪನಿಯ (ಎಫ್‌ಪಿಸಿ) ತರಬೇತಿ:

ಕುಂಕುಮ ತಯಾರಿಕೆಯ ತರಬೇತಿ:

ಪ್ರಮಾಣಪತ್ರ ವಿತರಣೆ:

ಜಂಟಿಭಾದ್ಯತೆ ಗುಂಪಿನಸದಸ್ಯರಿಗೆತರಬೇತಿ:

ಗದಗ ಜಿಲ್ಲೆಯ ಹಾರೋಗೇರಿ ಗ್ರಾಮದಲ್ಲಿ ಶ್ರೀ ಪುಟ್ಟರಾಜ ಜಂಟಿ ಭಾದ್ಯತೆ ಗುಂಪು ಮತ್ತು ಶ್ರೀ ನೇತ್ರಾವತಿ ಜಂಟಿ ಭಾದ್ಯತೆ ಗುಂಪಿನ ಸದಸ್ಯರಿಗೆ ಆದಾಯ ಉತ್ಪಾದನಾ ಚಟುವಟಿಕೆಗಳ ಕುರಿತು ತರಬೇತಿ ನೀಡಲಾಯಿತು.

ಗುಂಪು ಸಭೆಗಳು:

ಗದಗ ಜಿಲ್ಲೆಯ ಹಾರೋಗೇರಿ, ಪೇಟಾಲೂರು ಮತ್ತು ವೆಂಕಟಾಪುರ ಗ್ರಾಮಗಳಲ್ಲಿ ಜಂಟಿ ಭಾದ್ಯತೆ ಗುಂಪಿನ ಸದಸ್ಯರಿಗೆ ಮಾಸಿಕ ಗುಂಪು ಸಭೆಗಳನ್ನು ನಡೆಸಿದ್ದೇವೆ.

ಜೇನುಕೃಷಿಯ ತರಬೇತಿ :

ಗದಗ ಜಿಲ್ಲೆಯ ಬರದೂರು ಗ್ರಾಮದ ರೈತ ಈಶ್ವರಗೌಡ ಅವರಿಗೆ ಜೇನು ಸಾಕಾಣಿಕೆ ತರಬೇತಿ ನೀಡಿದ್ದೇವೆ. ಇದು ಜೀವನೋಪಾಯದ ಮೂಲವಾಗಿ ತನ್ನದೇ ಆದ ಜೇನುಸಾಕಣೆಯ ಉದ್ಯಮವನ್ನು ಪ್ರಾರಂಭಿಸಲು ಅನುವು ಮಾಡಿಕೊಡುತ್ತದೆ.

ಎರೆಹುಳು ಗೊಬ್ಬರ ತಯಾರಿಕೆ :

ಗದಗ ಜಿಲ್ಲೆಯ ಮೇವುಂಡಿಯಲ್ಲಿರುವ ನಮ್ಮ ಕೃಷಿ/ತೋಟಗಾರಿಕೆ ಪ್ಲಾಟ್‌ನಲ್ಲಿ ಎರೆಹುಳು ಗೊಬ್ಬರ ತಯಾರಿಕೆಯ ಕೆಲಸ ಮುಂದುವರೆದಿದೆ.

ಹೊಲಿಗೆತರಬೇತಿ:

ಗದಗ ಜಿಲ್ಲೆಯ ಮೇವುಂಡಿ ಗ್ರಾಮದಲ್ಲಿರುವ ನಮ್ಮ ತರಬೇತಿ ಕೇಂದ್ರದಲ್ಲಿ ಹೊಲಿಗೆ ಮತ್ತು ಉಡುಪು ತರಬೇತಿ ತರಗತಿಗಳು ಮುಂದುವರೆದಿವೆ.

 ಮುಂಬರುವ ಕಾರ್ಯ ಚಟುವಟಿಕೆಗಳ ಮುಖ್ಯಾಂಶಗಳು:

  • ವಿಕಲಚೇತನತೆಯನ್ನು ಹೊಂದಿರುವ ಎರಡು ಜಂಟಿ ಬಾಧ್ಯತೆ ಗುಂಪುಗಳನ್ನು ರಚಿಸುವುದು.
  • ಎರಡು ಜಂಟಿ ಬಾಧ್ಯತೆ ಗುಂಪುಗಳಿಗೆ ಬ್ಯಾಂಕ್ ಸಂಪರ್ಕವನ್ನು ಕಲ್ಪಿಸುವುದು.
  • ಗುಂಪುಗಳಿಗೆ ಸಾಮರ್ಥ್ಯ ಬಲವರ್ಧನೆ ತರಬೇತಿ ಮತ್ತು ಜೀವನೋಪಾಯದ ತರಬೇತಿಯನ್ನು ನಡೆಸಲಾಗುವುದು.
  • ಹೊಲಿಗೆ ತರಬೇತಿ ಕೇಂದ್ರದಲ್ಲಿ ಉಡುಪುಗಳ ತಯಾರಿಕೆಯ ತರಬೇತಿಯು ಮುಂದುವರೆಯುವುದು.
  • ತೋಟದ ಕೃಷಿ ತರಬೇತಿ ಕೇಂದ್ರ ಕಾರ್ಯ.
  • ಎರೆಹುಳು ಗೊಬ್ಬರ ತಯಾರಿಕೆ.
  • ಪೇರಲ ಮತ್ತು ಕರಿಬೇವು ಎಲೆಗಳ ಕೊಯ್ಲು ಮತ್ತು ಮಾರಾಟ ಮಾಡುವುದು.
  • ರೈತ ಉತ್ಪಾದನೆ ಕಂಪನಿ ( ಎಪ್ ಪಿ ಓ ) ತಯಾರಿ ಕೆಲಸ.
  • ವಿಕಲಚೇತನರ ಸಹಕಾರಿ ಸಂಘದ ನೋಂದಣಿ ಕಾರ್ಯ.

Get a report of all our on field work every month.

You have Successfully Subscribed!

Share This