ವಿಕಲಚೇತನ ಉದ್ಯಮಶೀಲತೆ ಮತ್ತು ನಾಯಕತ್ವ ಪ್ರತಿಷ್ಠಾನವು ಬೆಂಗಳೂರು ಮತ್ತು ಗದಗ್ ಜಿಲ್ಲೆಯದ್ಯಂತ ವಿಕಲಚೇತನರ ಮನೆಗಳೊಂದಿಗೆ ಸುಸ್ಥಿರ ಜೀವನವನ್ನು ರಚಿಸಲು, ಚೇತರಿಸಿಕೊಳ್ಳುವ ಮತ್ತು ಅಂತರ್ಗತ ಸಮುದಾಯಗಳನ್ನು ನಿರ್ಮಿಸಲು ಕೆಲಸ ಮಾಡುತ್ತಿದೆ.

ಸುಸ್ಥಿರತೆಯನ್ನು ಸಾಧಿಸಲು ಉದ್ಯೋಗವು ಅತ್ಯಂತ ಪ್ರಮುಖ ಹಂತಗಳಲ್ಲಿ ಒಂದಾಗಿದೆ. ವಿಕಲಚೇತನ ವ್ಯಕ್ತಿಗಳಿಗೆ ಅವಕಾಶಗಳನ್ನು ಒದಗಿಸುವ ಬಗ್ಗೆ ಜಾಗೃತಿಯನ್ನು ಉತ್ತೇಜಿಸಲು ಡೀಲ್ ಫೌಂಡೇಶನ್ ಸಂಸ್ಥೆಯ ಕಾರ್ಯಕರ್ತರು ಕೆಲಸ ಮಾಡುತ್ತಿದ್ದಾರೆ.ಅದು ವಿಕಲಚೇತನರ ಸ್ವಸಹಾಯ ಗುಂಪುಗಳನ್ನು ರಚನೆ ಮಾಡಿ ಅವರಿಗೆ ಡೀಲ್ ಫೌಂಡೇಶನ್ ಸಂಸ್ಥೆಯಿಂದ ಉದ್ಯೋಗಗಳ ತರಬೇತಿಯನ್ನು ನೀಡಿ ವಿಕಲಚೇತನರ ಸುಸ್ಥಿರ ಜೀವನಕ್ಕೆ ಸಹಾಯ ಮಾಡಿ ಕೊಡುತ್ತಿದೆ.ಹೀಗೆ 7 ತಾಲೂಕಿನಲ್ಲಿ ವಿಕಲಚೇತನರು ಸ್ವಾವಲಂಬನೆ ಜೀವನ ನಡೆಸುತ್ತಿದ್ದಾರೆ.ಅದರಲ್ಲಿ ದೇವಪ್ಪ ಜೋಗಿನ್ ಇವರು ಕೂಡ ಒಬ್ಬರು. ಇವರು ತಮ್ಮ ಜೀವನದ ಬಗ್ಗೆ ಮತ್ತು ಡೀಲ್ ಫೌಂಡೇಶನ್ ಸಂಸ್ಥೆಯ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಇವರ ಬಗ್ಗೆ ಹೇಳುವುದಾದರೆ ಇವರು ಮೂಲತಃ ಮುಂಡರಗಿಯವರು. ತಂದೆ -ಹೆಗ್ಗಪ್ಪ ತಾಯಿ- . ತಂದೆ ತಾಯಿ ಇಬ್ಬರು ಕೂಲಿ ಕೆಲಸ ಮಾಡುತ್ತಾ ಇವರ ಬಡ ಕುಟುಂಬ ಖುಷಿಯಾಗಿತ್ತು. ಮೂರು ವರ್ಷದವರೆಗೆ ಇವರ ಬಾಲ್ಯದ ತುಂಟಾಟವು ಮನೆಯವರೊಂದಿಗೆ ಖುಷಿಯಿಂದ ಕೂಡಿತ್ತು.ಆದರೆ ಮೂರು ವರ್ಷ ಆದ ನಂತರ ಮೈಮೇಲೆ ಚಿಕ್ಕ ಗುಳ್ಳೆತರ ಅಮ್ಮ ಕಾಣಿಸಿಕೊಂಡು ಹುಷಾರು ತಪ್ಪಿತು.ಆಸ್ಪತ್ರೆಗೆ ತೋರಿಸಿದರು ಆದರೂ ಪ್ರಯೋಜನವಾಗಲಿಲ್ಲ ಇದರ ಪರಿಣಾಮದಿಂದ ಇವರ ಎರಡು ಕಣ್ಣುಗಳು ಕಾಣದಂತಾಯಿತು. ಇವರು ತಂದೆ ತಾಯಿಗೆ ಒಬ್ಬನೇ ಮಗನು.ಮಗನು ಕಣ್ಣು ಕಳೆದುಕೊಂಡಿದ್ದರಿಂದ ಇವರ ಕುಟುಂಬಕ್ಕೆ ಬರಸಿಡಿಲು ಬಡಿದಂತಾಯಿತು.ಇವರ ಆರ್ಥಿಕ ಪರಿಸ್ಥಿತಿಯು ಕಷ್ಟದಲ್ಲಿದ್ದರೂ ಮಗನಿಗೆ ಆಸ್ಪತ್ರೆಗಾಗಿ ಓಡಾಡಿದರು ಆದರು ಯಾವ ಡಾಕ್ಟರ್ ಕೂಡ ಭರವಸೆ ಕೊಡಲಿಲ್ಲ ಈ ಆಘಾತವು ಮನೆಯವರಿಗೆ ದಾರಿ ಕಾಣದಂತಾಯಿತು.ಆ ಎಳೆ ವಯಸ್ಸಿನಲ್ಲಿ ಮುಂದಿನ ಬಾಲ್ಯದ ಖುಷಿ ಕಳೆದುಕೊಂಡರು.ತಂದೆ ತಾಯಿಗಳು ಮಗನ ಬಗ್ಗೆ ಚಿಂತೆ ಮಾಡುವಂತಾಯಿತು.ಎಲ್ಲಾ ದಿನನಿತ್ಯದ ಚಟುವಟಿಕೆಗಳು ತಾಯಿಯೇ ಮಾಡುವಂತಾಯಿತು. ಬೇರೆ ಮಕ್ಕಳೊಂದಿಗೆ ಆಟವಾಡಲು ಹೋಗುತ್ತಿದ್ದ ಮಗು ಈಗ ಮನೆಯಲ್ಲಿ ಕುಳಿತುಕೊಳ್ಳುವಂತಾಯಿತು ಎಂದು ತಾಯಿ ಚಿಂತಿಸಿದರು. ಆದರೂ ನನ್ನ ಮಗ ಏನಾದರೂ ಸಾಧಿಸಬೇಕು ಎಂಬ ಛಲ ತಾಯಿಯಲ್ಲಿ ಮೂಡಿತು.ವಯಸ್ಸಾದರೂ ಕೂಡ ಮಗನನ್ನು ಶಾಲೆಗೆ ಸೇರಿಸಿದರು. ಸರ್ಕಾರಿ ಶಾಲೆಯು ಮನೆ ಹತ್ತಿರವೇ ಇತ್ತು.ಇದರಿಂದ ದೇವಪ್ಪ ಅವರಿಗೆ ಶಾಲೆಗೆ ಹೋಗಲು ಸಹಾಯವಾಯಿತು.

ದೇವಪ್ಪ ಅವರ ತಾಯಿಗೆ ವಯಸ್ಸಾಗಿತ್ತು ದಿನಾಲು ಶಾಲೆಗೆ ಕರೆದುಕೊಂಡು ಹೋಗಲು ಆಗಲಿಲ್ಲ. ಆಗ ಶಾಲೆ ಶಿಕ್ಷಕರಾದ ಶಶಿಕಲಾ ಎನ್ನುವರು ದಿನಾಲು ಇವರನ್ನು ಶಾಲೆಗೆ ಕರೆದುಕೊಂಡು ಹೋಗುತ್ತಿದ್ದರು.ದೇವರ ಕೃಪೆಯಿಂದ ಶಿಕ್ಷಕರ ರೂಪದಲ್ಲಿ ಬಂದು ಶಾಲೆಗೆ ದಿನಾಲು ಹೋಗುವಂತಾಯಿತು. ಹೀಗೆ ಆರನೇ ತರಗತಿಯವರೆಗೆ ಶಿಕ್ಷಣ ಮುಗಿಯಿತು.ಆ ಸರ್ಕಾರಿ ಶಾಲೆಯು 6ನೇ ತರಗತಿಯವರೆಗೆ ಮಾತ್ರ ಇತ್ತು 7ನೇ ತರಗತಿಗೆ ಬೇರೆ ಕಡೆ ಹೋಗಬೇಕಿತ್ತು ಅದು ತುಂಬಾ ದೂರದಲ್ಲಿತ್ತು ವಯಸ್ಸಾದ ತಂದೆ ತಾಯಿಯಿಂದ ಇವರನ್ನು ದಿನಾಲು ಶಾಲೆಗೆ ಕರೆದುಕೊಂಡು ಹೋಗಲು ಆಗಲಿಲ್ಲ ಆದ್ದರಿಂದ ಇವರು ಶಿಕ್ಷಣವು 6ನೇ ತರಗತಿಯವರೆಗೆ ಕೊನೆಯಾಯಿತು.ಇಲ್ಲಿಯೂ ಕೂಡ ಇವರಿಗೆ ಜೀವನದಲ್ಲಿ ಪೆಟ್ಟು ಬಿತ್ತು.

ಹೀಗೆ ದಿನ ಕಳೆದ ಹಾಗೆ ಮನೆಯಲ್ಲಿಯೇ ಇದ್ದು ಬೆಳೆದರು. ತಂದೆ ತಾಯಿ ಕೂಲಿ ಕೆಲಸ ಮಾಡುತ್ತಿದ್ದರು.ಎಷ್ಟು ದಿನ ಅಂತ ನಾನು ಹೀಗೆ ಮನೆಯಲ್ಲಿ ಕುಳಿತಿರಲಿ ಒಂದು ಕಡೆ ತಂದೆ ತಾಯಿಗೆ ವಯಸ್ಸಾದರೂ ಕೂಡ ಕೂಲಿ ಕೆಲಸ ಮಾಡಿ ಕುಟುಂಬ ನಡೆಸುತ್ತಿದ್ದಾರೆ ಇನ್ನೊಂದು ಕಡೆ ನನ್ನ ಕಣ್ಣು ಹೋಗಿದ್ದರಿಂದ ಅವರಿಗೆ ಆಘಾತವಾಗಿದೆ. ಹೀಗೆ ಚಿಂತಿಸುತ್ತಾ ಇದ್ದರೆ ಏನು ಮಾಡಲು ಆಗುವುದಿಲ್ಲ ನಾನು ಏನಾದರೂ ಮಾಡಬೇಕು ಎಂದು ಯೋಚಿಸಿದರು ಆಗ ಬೀದಿಬೀದಿಗೆ ಹೋಗಿ ಐಸ್ ಕ್ರೀಮ್ ಮಾರಾಟ ಮಾಡುತ್ತಾ ಹೋದರು ಕಣ್ಣು ಕಾಣದ ಇವರಿಗೆ ಓಡಾಡಲು ಕಷ್ಟವಾಯಿತು ಬೇರೆ ಏನಾದರೂ ಮಾಡಬೇಕು ಎಂದು ಯೋಚಿಸಿದಾಗ ಮನೆಯಲ್ಲಿ ನಾನು ಹಾಲು, ಮೊಸರು ಯಾಕೆ ಮಾರಬಾರದು ಎಂದು ಯೋಚಿಸಿದರು.ಆಗ ಇವರ ಬಾಲ್ಯದ ಗೆಳೆಯರು ಇದನ್ನು ಕೇಳಿದಾಗ ದೇವಪ್ಪ ಅವರಿಗೆ ನಾವು ನಿನಗೆ ಹಾಲು,ಮೊಸರು ತಂದು ಕೊಡುತ್ತೇವೆ ನೀನು ಮನೆಯಲ್ಲಿಯೇ ಮಾರಾಟ ಮಾಡು ಎಂದು ಸ್ನೇಹಿತರು ಧೈರ್ಯ ತುಂಬಿ ಸಹಕಾರ ನೀಡಿದರು.

ಇದರ ಜೊತೆಗೆ ಎಲೆ,ಅಡಿಕೆ ಮುಂತಾದ ಚಿಕ್ಕ ಚಿಕ್ಕ ಕಿರಾಣಿ ಸಾಮಾನು ಮಾರಾಟ ಮಾಡುತ್ತಾ ಹೋದರು. ಇದರಿಂದ ಇವರ ಕುಟುಂಬಕ್ಕೆ ಸ್ವಲ್ಪ ಪ್ರಮಾಣದಲ್ಲಿ ಆರ್ಥಿಕವಾಗಿ ಸಹಾಯವಾಯಿತು. ದಿನ ಕಳೆದ ಹಾಗೆ ವ್ಯಾಪಾರ ಚೆನ್ನಾಗಿ ಬೆಳೆಯಿತು ಚಿಕ್ಕದಾಗಿದ್ದ ಇವರು ವ್ಯಾಪಾರ ಒಂದು ಚಿಕ್ಕ ಪೆಟ್ಟಿಗೆ ಇಟ್ಟು ಹೆಚ್ಚಿನ ವ್ಯಾಪಾರ ಮಾಡಬಹುದು ಎಂದು ದೇವಪ್ಪ ಅವರು ಯೋಚಿಸಿ ಒಂದು ಪೆಟ್ಟಿಗೆಯನ್ನು ಕೊಂಡುಕೊಂಡು ಮನೆಯ ಮುಂದೆ ಇಟ್ಟು ಎಲ್ಲ ರೀತಿಯ ಕಿರಣಿ ಸಾಮಾನು ಜೊತೆಗೆ ಸ್ಟೇಷನರಿ ಸಾಮಾನು ಕೂಡ ಇಟ್ಟು ವ್ಯಾಪಾರ ಮಾಡುತ್ತಾ ಹೋದರು. ಇವರ ಈ ದುಡಿಮೆಯಿಂದ ಹಾಸಿಗೆ ಹಿಡಿದ ತಂದೆ ತಾಯಿಯ ಆರೋಗ್ಯಕ್ಕೆ ಮತ್ತು ಕುಟುಂಬ ನಡೆಸಲು ಸಹಾಯವಾಯಿತು. ಆದರೆ ಮುಂದೆ ಇವರ ಸ್ನೇಹಿತರು ದೂರವಾದರೂ ಕಿರಾಣಿ ಸಾಮನು ತಂದು ಕೊಡುವವರು ಯಾರು ಇಲ್ಲದಂತಾಯಿತು. ಆದರೆ ಇವರು ಧೈರ್ಯ ಗೆಡೆದೆ ಯೋಚಿಸಿ ಹಾಲು, ಮೊಸರು,ಸ್ಟೇಷನರಿ ಸಾಮಾನು ಕೊಡುವ ಮಾಲೀಕರಿಗೆ ಫೋನ್ ಮಾಡಿ ಅವರ ಪರಿಸ್ಥಿತಿಯನ್ನು ಹೇಳಿದರು ಆಗ ಮಾಲೀಕರು ನಿಮಗೆ ಬೇಕಾದ ಸಾಮಾನುಗಳನ್ನು ಫೋನ್ ಮಾಡಿ ಹೇಳಿ ನಾವು ನಿಮ್ಮ ಅಂಗಡಿಗೆ ಕಳಿಸಿ ಕೊಡುತ್ತೇವೆ ಎಂದು ಹೇಳಿದರು. ಜೀವನದಲ್ಲಿ ಮತ್ತೆ ಸೋತೆ ಎಂದು ಚಿಂತಿಸುವಾಗ ಮತ್ತೆ ಇವರ ಬದುಕಿಗೆ ಜೀವ ಬಂದಂತಾಯಿತು. ಇವರಿಗೆ ಬೇಕಾದ ಎಲ್ಲಾ ಕಿರಣಿ ಸಾಮಾನುಗಳನ್ನು ಫೋನ್ ಮೂಲಕ ಆರ್ಡರ್ ಮಾಡಿ ತರಿಸಿಕೊಂಡು ವ್ಯಾಪಾರ ಮಾಡುತ್ತಾ ಜೀವನ ಸಾಗಿಸುತ್ತಿದ್ದಾರೆ.ಕಣ್ಣು ಕಾಣದ ಇವರಿಗೆ ದುಡ್ಡು ಏಣಿಸಲು ಆಗುವುದಿಲ್ಲ ಆದರೂ ಇವರು ಕಿರಾಣಿ ಅಂಗಡಿಯನ್ನು ಹೇಗೆ ನಡೆಸುತ್ತಾರೆ ಎಂದರೆ ಒಬ್ಬರು ಸಾಮಾನು ತಗೆದುಕೊಂಡ ಕೊಟ್ಟ ಹಣವನ್ನು ಪಕ್ಕದಲ್ಲಿ ಇಟ್ಟು ಇನ್ನೊಬ್ಬ ವೆಕ್ತಿಗೆ ಈ ಹಣ ಎಷ್ಟ್ಟು ಇದೆ ಎಂದು ಕೇಳಿ ಖಚಿತವಾದ ಮೇಲೆ ಗಲ್ಲೆ ಡಬ್ಬಿಗೆ ಹಣ ಹಾಕುತ್ತ ವ್ಯಾಪಾರ ಮಾಡುತ್ತಾರೆ. ಒಂದು ದಿನಕ್ಕೆ ಸುಮಾರು 2000 ದುಡಿಮೆಯಲ್ಲಿ ಎಲ್ಲಾ ಖರ್ಚು ತೆಗೆದು 800/1000 ವರೆಗೆ ಲಾಭವನ್ನು ಮಾಡುತ್ತಿದ್ದಾರೆ.

ನಂತರ ಡೀಲ್ ಫೌಂಡೇಶನ್ ಸಂಸ್ಥೆಯ ಮುಂಡರಗಿ ತಾಲೂಕಿನ ಲವ್ಲೀವುಡ್ ಆಫೀಸರ್ ಆದ ರೇಣುಕಾ ಕಲ್ಲಳ್ಳಿ ಇವರನ್ನು ಗುರುತಿಸಿ ಡೀಲ್ ಫೌಂಡೇಶನ್ ಸಂಸ್ಥೆಯ ಬಗ್ಗೆ ಮಾಹಿತಿ ನೀಡಿದರು. ಮೊದಲು ದೇವಪ್ಪ ಅವರು ಇದರ ಬಗ್ಗೆ ಗಮನಹರಿಸಲಿಲ್ಲ ಆದರೂ ಲವ್ಲಿವುಡ್ ಆಫೀಸರ್ ತಮ್ಮ ಪ್ರಯತ್ನ ಬಿಡದೆ ವಿಕಲಚೇತನತೆಯ ಬಗ್ಗೆ ಅವರಿಗೆ ಮಾಹಿತಿ ನೀಡುತ್ತಿದ್ದರು ಕಾರಣ ಅವರ ಜೀವನಕ್ಕೆ ಇನ್ನು ಹೆಚ್ಚಿನ ಆರ್ಥಿಕ ಸಹಕಾರ ವಾಗಲಿ ಎಲ್ಲರಿಗೂ ಮಾದರಿಯಾಗಲಿ ಎಂಬ ಉದ್ದೇಶದಿಂದ ಬೆನ್ನು ಬಿಡದೆ ಪ್ರಯತ್ನ ಪಟ್ಟರು. ಆಗ ದೇವಪ್ಪ ಅವರು ಅರಿತುಕೊಂಡು ವಿಕಲಚೇತನತೆಯ ಬಗ್ಗೆ ಅರಿವು ಮೂಡಿಸಿಕೊಂಡು ತಾವೇ ಮುಂದೆ ಬಂದು ವಿಕಲಚೇತನರ ಸ್ವಸಹಾಯ ಗುಂಪು ರಚನೆ ಮಾಡಲು ಒಪ್ಪಿಕೊಂಡರು.ಹೀಗೆ 10 ಜನ ವಿಕಲಚೇತನರು ಸೇರಿ “ದುರ್ಗಾದೇವಿ ವಿಕಲಚೇತನರ ಸ್ವಸಹಾಯ ಸಂಘ”ವನ್ನು ರಚನೆ ಮಾಡಿಕೊಂಡರು.ಡೀಲ್ ಫೌಂಡೇಶನ್ ನಿಂದ ಡೀಸಬಲಿಟಿ ಅವರ್ನೆಸ್ ತರಬೇತಿ,ಉದ್ಯೋಗ ತರಬೇತಿ,ಬುಕ್ ರೈಟಿಂಗ್ ತರಬೇತಿ ಹೀಗೆ ಹಲವಾರು ತರಬೇತಿಯನ್ನು ಪಡೆದುಕೊಂಡಿದ್ದಾರೆ.ಇವರ ಈ ಸ್ವ ಸಹಾಯ ಸಂಘದಿಂದ ಸಾಲವನ್ನು ಪಡೆದುಕೊಂಡು ಇನ್ನು ದೊಡ್ಡ ಪ್ರಮಾಣದ ಕಿರಾಣಿ ಅಂಗಡಿಯನ್ನು ಹಾಕಿ ವ್ಯಾಪಾರ ಮಾಡಬೇಕು ಎಂದು ಎಲ್ಲಾ ರೀತಿಯ ತಯಾರಿ ನಡೆಸುತ್ತಿದ್ದಾರೆ.ಇವರ ಈ ಕನಸು ಆದಷ್ಟು ಬೇಗ ನನಸಾಗುವ ದಿನ ಹತ್ತಿರದಲ್ಲಿದೆ.ಇದಕ್ಕೆ ಕಾರಣ ಡೀಲ್ ಫೌಂಡೇಶನ್ ಸಂಸ್ಥೆ ಎಂದು ಹೇಳಬಹುದು.ಜೊತೆಗೆ ಮೆವುಂಡಿ ಕೋ ಆಪರೇಟಿವ್ ಸೊಸೈಟಿಯಲ್ಲಿ ಇವರು ಕೂಡ ಷೇರುದಾರರಾಗಿದ್ದಾರೆ.ಇದರಿಂದ ಸಮಾಜದಲ್ಲಿ ಆಗುವ ಸ್ಥಿತಿಗತಿಗಳ ಬಗ್ಗೆ ತಿಳಿದುಕೊಳ್ಳುತ್ತಿದ್ದಾರೆ.

ಹೀಗೆ ಇವರು ಜೀವನದಲ್ಲಿ ಮುಂದೆ ಸಾಗುತ್ತಿದ್ದಾರೆ.ಇವರ ಕನಸು ನನಸು ಆಗಲು ಕಾರಣವಾಗುತ್ತಿರುವ ಡೀಲ್ ಫೌಂಡೇಶನ್ ಸಂಸ್ಥೆ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.ಅದು ಮೊದಲು ರೇಣುಕಾ ಕಲ್ಲಳ್ಳಿ ಅವರು ವಿಕಲಚೇತನಯ ಬಗ್ಗೆ, ವಿಕಲಚೇತನರಿಗೆ ಇರುವ ಸೌಲಭ್ಯಗಳ ಬಗ್ಗೆ,ಡೀಲ್ ಫೌಂಡೇಶನ್ ನಿಂದ ವಿಕಲಚೇತನರಿಗೆ ಸಿಗುತ್ತಿರುವ ಅನುಕೂಲಗಳ ಬಗ್ಗೆ ಮಾಹಿತಿ ನೀಡಲು ಬಂದಾಗ ನಾನು ನಿರಾಕರಿಸಿದೆ ಆದರೆ ಅವರ ಪ್ರಯತ್ನ,ತಾಳ್ಮೆಯನ್ನು ನೋಡಿ ಅದರ ಬಗ್ಗೆ ತಿಳಿದುಕೊಳ್ಳಬೇಕು ಎಂದು ಒಳಗೆ ಇಳಿದಾಗ ಮಾತ್ರ ನನಗೆ ಅರಿವಾಯಿತು.ಒಂದು ವೇಳೆ ನಾನು ತಿಳಿದುಕೊಳ್ಳದಿದ್ದರೆ ನನ್ನ ಜೀವನದಲ್ಲಿ ಒಳ್ಳೆಯ ಅವಕಾಶವನ್ನು,ಸ್ಪೂರ್ತಿಯನ್ನು ಕಳೆದುಕೊಳ್ಳುತ್ತಿದ್ದೆ,ಆದರೆ ಈಗ ನನಗೆ ಡೀಲ್ ಫೌಂಡೇಶನ್ ಸಂಸ್ಥೆಯಿಂದ ಎಲ್ಲ ರೀತಿಯ ತರಬೇತಿಯನ್ನು ಪಡೆದುಕೊಂಡಿದ್ದೇನೆ.ಇದರಿಂದ ನನ್ನ ಮುಂದಿನ ಭವಿಷ್ಯಕ್ಕೆ ಮತ್ತು ನನ್ನ ಕುಟುಂಬಕ್ಕೆ ಸಹಾಯಕವಾಗಿದೆ. ನಾನು ಇನ್ನು ಹೆಚ್ಚಿನ ಮಟ್ಟದಲ್ಲಿ ದುಡಿದು,ಎಲ್ಲಾ ವಿಕಲಚೇತನರಿಗೆ ನನ್ನಿಂದ ಆದಷ್ಟು ಸಹಾಯ ಮಾಡಿ ಸ್ಪೂರ್ತಿ ಆಗಬೇಕು ಎಂಬ ಹುಮ್ಮಸ್ಸು ನನ್ನಲ್ಲಿ ಡೀಲ್ ಫೌಂಡೇಶನ್ ಸಂಸ್ಥೆಯು ತುಂಬಿದೆ ಇದಕ್ಕೆ ನಾನು ಯಾವಾಗಲೂ ಚಿರಋಣಿಯಾಗಿರುತ್ತೇನೆ.ಮತ್ತು ನಾನು ಯಾವುದೇ ಸಮಯದಲ್ಲಿ ಕರೆ ಮಾಡಿದಾಗ ರೇಣುಕಾ ಕಲ್ಲಳ್ಳಿ ಇವರು ಸಹಾಯ ಮಾಡಿ ಮಾಹಿತಿಯನ್ನು ನೀಡುತ್ತಾರೆ ಇವರಿಗೂ ಕೂಡ ಧನ್ಯವಾದಗಳು. ಹೀಗೆ ನನ್ನಂತಹ ಅನೇಕ ವಿಕಲಚೇತನರ ಬಾಳಿಗೆ ಡೀಲ್ ಫೌಂಡೇಶನ್ ಸಂಸ್ಥೆಯು ಬೆಳಕಾಗಲಿ ಎಂದು ಕೇಳಿಕೊಳ್ಳುತ್ತೇನೆ ಎಂದು ತಮ್ಮ ಮನದಾಳದ ಮಾತನ್ನು ವ್ಯಕ್ತಪಡಿಸಿದ್ದಾರೆ.

ಈ ರೀತಿಯಾಗಿ ದೇವಪ್ಪ ಅವರು ತಮ್ಮ ಜೀವನದಲ್ಲಿ ಎಳು ಬೀಳು ಕಂಡು ಎಲ್ಲ ವಿಕಲಚೇತನರಿಗೆ ಮಾದರಿಯಾಗಿ ನಿಂತಿದ್ದಾರೆ.

ಈ ಬ್ಲಾಗ್ ಗೆ ಸಂಬಂಧಿಸಿದಂತೆ ಯಾವುದೇ ನಿರ್ದಿಷ್ಟ ಪ್ರಶ್ನೆಗಳಿಗೆ ಅಥವಾ ಯಾವುದೇ ಸಹಾಯಕ್ಕಾಗಿ Info@deal-foundation.com ನಲ್ಲಿ ತಿಳಿಸಿರಿ ಮತ್ತು ನಾವು ಮಾಡುವ ಕೆಲಸದ ಕುರಿತು ಇನ್ನಷ್ಟು ತಿಳಿದುಕೊಳ್ಳಲು www.deal-foundation.com ಗೆ ಲಾಗ್ ಇನ್ ಮಾಡಿ.

ಧನ್ಯವಾದಗಳು

Get a report of all our on field work every month.

You have Successfully Subscribed!

Share This