Select Page

ಡೀಲ್ ಫೌಂಡೇಶನ್ ಸಂಸ್ಥೆಯು ವಿಕಲಚೇತನರಿಗಾಗಿ ಪ್ರತಿ ತಾಲೂಕಿನಲ್ಲಿ ಜೀವನೋಪಾಯದ ಕೌಶಲ್ಯ ಅಭಿವೃದ್ಧಿ ತರಬೇತಿಯನ್ನು ಒದಗಿಸುವುದು,ಕಾರ್ಯಗಾರಗಳು, ದೃಷ್ಟಿಕೋನ ದಿನಗಳು ಮುಂತಾದವುಗಳನ್ನು ಆಯೋಜಿಸುತ್ತಾ ಬರುತ್ತಿದೆ.

ಗ್ರಾಮೀಣ ಪ್ರದೇಶಗಳಲ್ಲಿನ ವಿಕಲಚೇತನ ಮಹಿಳೆಯರು ಮತ್ತು ಪುರುಷರು ತಮ್ಮ ಕುಟುಂಬಗಳನ್ನು ಬೆಂಬಲಿಸಲು ಜೀವನೋಪಾಯ ಮತ್ತು ಆದಾಯದ ಅವಕಾಶಗಳಲ್ಲಿ ತೊಡಗಿಸಿಕೊಳ್ಳಲು ಬಯಸುತ್ತಾರೆ. ಅವರಿಗೆ ಲಿಂಗ ಮತ್ತು ವಿಕಲಚೇತನತೆಯ ಪಕ್ಷಪಾತವಿಲ್ಲದೆ ಸಮಾನ ಭಾಗವಹಿಸುವಿಕೆಗೆ ಅವಕಾಶ ನೀಡಿದರೆ ವಿಕಲಚೇತನರು ಕೂಡ ಪ್ರತಿ ಕ್ಷೇತ್ರದಲ್ಲಿ ಮುಂದೆ ಬರುತ್ತಾರೆ. ಇಂತಹ ಅನೇಕ ವಿಕಲಚೇತನರಿಗೆ ಜೀವನ ನಡೆಸಲು ಡೀಲ್ ಫೌಂಡೇಶನ್ ಸಂಸ್ಥೆಯು ಅವಕಾಶವನ್ನು ನೀಡಿ ದಾರಿಯನ್ನು ಸೂಚಿಸಿದೆ.

ಡೀಲ್ ಫೌಂಡೇಶನ್ ಸಂಸ್ಥೆಯಿಂದ ಅನೇಕ ವಿಕಲಚೇತನರು ತರಬೇತಿಯನ್ನು ಪಡೆದುಕೊಂಡು ಜೀವನೋಪಾಯ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಇನ್ನು ಕೆಲ ವಿಕಲಚೇತನರು ಇನ್ನು ಮುಂದೆ ಆದರೂ ಡೀಲ್ ಫೌಂಡೇಶನ್ ನಿಂದ ಅವಕಾಶ ಪಡೆದು ತರಬೇತಿಯನ್ನು ಪಡೆದುಕೊಂಡು ತಮ್ಮ ಜೀವನೋಪಾಯ ಚಟುವಟಿಕೆಯ ವೃತ್ತಿ ಜೀವನವನ್ನು ಇನ್ನೂ ಹೆಚ್ಚಿನ ಮಟ್ಟದಲ್ಲಿ ಬೆಳೆಸಬೇಕು ಎಂಬ ಆಶಯವನ್ನು ಹೊಂದಿದ್ದಾರೆ.

ಅದರಲ್ಲಿ ನಿಂಗಪ್ಪ ಕುರುಬಗೇರಿ ಅವರು ಒಬ್ಬರು. ಇವರ ಬಗ್ಗೆ ಹೇಳುವುದಾದರೆ ಇವರು ಮೂಲತಃ ಶಿರಹಟ್ಟಿ ತಾಲೂಕಿನ ಕೊಂಚಿಗೇರಿ ಗ್ರಾಮದವರು.ಇವರದು ಅವಿಭಕ್ತ ಕುಟುಂಬ ತಂದೆ ಹನುಮಂತಪ್ಪ ತಾಯಿ ಗಂಗಮ್ಮ.ಇಬ್ಬರು ಸಹೋದರರು ಮತ್ತು ಒಬ್ಬ ತಂಗಿ ಇದು ಇವರ ಜೇನುಗೂಡಿನ ಪುಟ್ಟ ಕುಟುಂಬವಾಗಿದೆ.ಇವರು ಹುಟ್ಟಿನಿಂದಲೇ ಅಂಧತ್ವವನ್ನು ಹೊಂದಿದವರು.ತಂದೆ ತಾಯಿಗೆ ಮೊದಲನೇ ಮಗ ಈ ರೀತಿ ಅಂದತ್ವ ಹೊಂದಿದ್ದಕ್ಕೆ ತಂದೆ ತಾಯಿಗೆ ಆಗತವಾಯಿತು.ಆದರೂ ದೇವರು ಕೊಟ್ಟ ಪ್ರತಿಫಲ ಎಂದು ಭಾವಿಸಿ, ಕೂಲಿ ಕೆಲಸ ಮಾಡಿ ಮಗನನ್ನು ಬೆಳೆಸಿದರು.ಇವರ ದಿನನಿತ್ಯದ ಕೆಲಸವನ್ನು ತಾಯಿಯೇ ಮಾಡುತ್ತಿದ್ದರು.ತಾಯಿಯ ಮಡಿಲಲ್ಲೆ ಬೆಳೆದು ಅವರ ಜೊತೆಗೆ ಹೆಚ್ಚಿನ ಬಾಂಧವ್ಯ ಬೆಳೆಸಿತು. ನಿಂಗಪ್ಪ ಇವರಿಗೆ ಶಾಲೆಗೆ ಹೋಗಬೇಕು ಬ್ರೈಲ್ ಲಿಪಿಯ ಮೂಲಕ ಕಲಿಯಬೇಕು ಎಂಬ ಆಸೆ ಇವರದಾಗಿತ್ತು ಆದರೆ ಮನೆಯಲ್ಲಿ ಬಡತನ ಇದ್ದದ್ದರಿಂದ ಶಾಲೆಗೆ ಹೋಗಲು ಆಗಲಿಲ್ಲ.

ಮುಂದೆ ಇವರಿಗೆ ಇಬ್ಬರು ತಮ್ಮಂದಿರು ಮತ್ತು ಒಬ್ಬ ತಂಗಿಯೊಂದಿಗೆ ಇವರ ಕುಟುಂಬ ಹೆಚ್ಚಿತು.ಶಾಲೆಯನ್ನು ಕಲಿತು ನಾನು ಏನಾದರೂ ಸಾಧಿಸಬೇಕು ಎಂಬ ಅಭಿಲಾಷೆ ನಿಂಗಪ್ಪ ಅವರದಾಗಿತ್ತು ಆದರೆ ತಂದೆ ತಾಯಿ ಕೂಲಿ ಕೆಲಸ ಮಾಡಿ ಕುಟುಂಬ ನಡೆಸುತ್ತಿದ್ದಾರೆ ಅದರಲ್ಲಿಯೂ ನಾನು ಶಾಲೆಗೆ ಹೋದರೆ ತಂದೆ ತಾಯಿಗೂ ಕಷ್ಟ ಜೊತೆಗೆ ನಾನು ಕಲಿತರೆ ನನ್ನ ತಮ್ಮಂದಿರು ಶಾಲೆಗೆ ಹೋಗಲು ಕಷ್ಟವಾಗುತ್ತದೆ ಎಂದು ಭಾವಿಸಿ, ತಮ್ಮಂದಿರಿಗೆ ಶಾಲೆಗೆ ಕಳುಹಿಸಿ ವಿದ್ಯಾವಂತರನ್ನಾಗಿ ಮಾಡಿದರು. ಇವರ ಈ ತ್ಯಾಗವನ್ನು ಮೆಚ್ಚಲೇಬೇಕು.

ನಿಂಗಪ್ಪ ಅವರು ತಮ್ಮ ಕುಟುಂಬಕ್ಕಾಗಿ ಜೀವನ ಸಾಗಿಸುತ್ತಾ ಬಂದರು.ಆದರೆ ಆ ದೇವರು ಇವರ ಕುಟುಂಬಕ್ಕೆ ಇನ್ನೂ ಆಘಾತ ನೀಡಿದನು.ಅದು ನಿಂಗಪ್ಪ ಅವರು ಕೂಡ ಹುಟ್ಟಿನಿಂದಲೇ ಅಂಧತ್ವ ಹೊಂದಿದವರು ಜೊತೆಗೆ ಅವರ ತಂಗಿಯೂ ಕೂಡ ಹುಟ್ಟಿನಿಂದಲೇ ಅಂದತ್ವ ಹೊಂದಿದವರು ಮತ್ತೆ ಇವರ ಕಷ್ಟದ ಜೀವನಕ್ಕೆ ಪೆಟ್ಟುಬಿತ್ತು.ತಂದೆ ತಾಯಿ ಇಬ್ಬರು ಕಣ್ಣೀರು ಹಾಕುತ್ತಾ ಅನಾರೋಗ್ಯದಿಂದ ಬಳಲುವಂತಾಯಿತು.ಆದರೆ ನಿಂಗಪ್ಪ ಅವರು ಧೈರ್ಯ ಗೆಡದೆ ಅವಳು ನಮ್ಮ ಮನೆಯ ಮಹಾಲಕ್ಷ್ಮಿ ಎಂದು ಭಾವಿಸಿ ಕಣ್ಣು ಕಾಣದೆ ಇದ್ದರೂ ತಮ್ಮ ಪುಟ್ಟ ತಂಗಿಯನ್ನು ತಾಯಿಯ ಹಾಗೆ ಜೋಪಾನ ಮಾಡಿ ಬೆಳೆಸಿದರು. ನಿಂಗಪ್ಪ ಅವರು ಕಣ್ಣು ಕಾಣದೆ ಇದ್ದರೂ ಬುದ್ಧಿವಂತರಾಗಿದ್ದರು. ಒಂದು ಸಾರಿ ಯಾರಾದರೂ ಯಾವುದೇ ಜಾಗಕ್ಕೆ ಕರೆದುಕೊಂಡು ಹೋದಾಗ ಅದನ್ನು ಹೆಜ್ಜೆ ಮೂಲಕ ಗ್ರಹಿಸಿಕೊಂಡು ತಾವೇ ಒಬ್ಬರೇ ಓಡಾಡುತ್ತಿದ್ದರು.ಹೀಗೆ ತಂದೆ ತಾಯಿಯೊಂದಿಗೆ ಕೂಲಿ ಕೆಲಸಕ್ಕೆ ಮತ್ತು ಹೊಲದಲ್ಲಿ ಕೆಲಸಕ್ಕೆ ಹೋಗುತ್ತಿದ್ದರು.

ಹೀಗೆ ಬಡತನದಲ್ಲಿದ್ದರೂ ಇವರ ಕುಟುಂಬ ಖುಷಿಯಿಂದ ಕೂಡಿತ್ತು. ಆದರೆ ಅನಾರೋಗ್ಯದಿಂದ ಬಳಲುತ್ತಿದ್ದ ತಾಯಿಯನ್ನು ಕಳೆದುಕೊಂಡು ಮತ್ತೆ ಜೀವನದಲ್ಲಿ ಪೆಟ್ಟು ಬಿತ್ತು ಮುಂದೆ ಕುಟುಂಬ ನಡೆಸಲು ಕಷ್ಟವಾಯಿತು.ಹೀಗೆ ಇದ್ದರೆ ತಮ್ಮಂದಿರಿಗೆ ಅಪ್ಪ-ಅಂಗಿಯನ್ನು ಸಾಕುವುದು ಕಷ್ಟವಾಗುತ್ತದೆ ನಾನು ಏನಾದರೂ ಮಾಡಬೇಕೆಂದು ಯೋಚಿಸಿದರು. ಆಗ ಬಾಲ್ಯದಲ್ಲಿ ಇವರ ಸ್ನೇಹಿತರೊಂದಿಗೆ ಸಮಯ ಕಳೆಯುತ್ತಿದ್ದರು.ಅವರ ಮನೆ ಹತ್ತಿರ ಮಂಗಳ ಪಾಟೀಲ್ ಎನ್ನುವರು ಕಿರಾಣಿ ಅಂಗಡಿಯನ್ನು ಇಟ್ಟು ವ್ಯಾಪಾರ ಮಾಡುತ್ತಿದ್ದರು.ನಿಂಗಪ್ಪ ಅವರು ಯಾವಾಗಲೂ ಅವರ ಅಂಗಡಿಯಲ್ಲಿ ಹೆಚ್ಚಿನ ಸಮಯ ಕಳುಹಿಸುತ್ತಿದ್ದರು.ತಾಯಿಯ ಸ್ವರೂಪದಲ್ಲಿ ಇದ್ದ ಮಂಗಳ ಪಾಟೀಲ್ ಇವರು ನಿಂಗಪ್ಪ ಅವರ ಜೀವನವನ್ನು ಕಂಡು ನೀವು ಯಾಕೆ ಪುಟ್ಟದಾಗಿ ಅಂಗಡಿಯನ್ನು ಇಟ್ಟು ಟಾಕ್ ಪ್ಯಾಕ್ ಮೂಲಕ ಮೊಬೈಲ್ ಗೆ ಕರೆನ್ಸಿ ಹಾಕುವುದು,ಥಂಬ್ ಮೂಲಕ ಸಿಮ್ ಕೊಡುವುದು ಈ ರೀತಿ ವ್ಯಾಪಾರ ಮಾಡುವುದು ನಿಮ್ಮಿಂದ ಅದು ಸಾಧ್ಯ ಮಾಡಿರಿ ಎಂದು ಸಲಹೆ ನೀಡಿ ಧೈರ್ಯ ತುಂಬಿದರು.ಕಣ್ಣು ಕಾಣದ ಇವರು ಹೇಗೆ ವ್ಯಾಪಾರ ಮಾಡುತ್ತಾರೆಂದರೆ ಟಾಕ್ ಪ್ಯಾಕ್ ಏನ್ನುವುದು ಮೊಬೈಲ್ ನಲ್ಲಿ ಕರೆನ್ಸಿ ಎಷ್ಟು ಹಾಕುವುದು, ಅದು ಹೇಗೆ ಎಂಬುದನ್ನು ಎಲ್ಲವನ್ನು ಸ್ವ ವಿವರವಾಗಿ ಹೇಳುತ್ತದೆ.ಅದರ ಮೂಲಕ ಇವರು ಕೆಲಸ ಮಾಡುತ್ತಾ ಹೋದರು.ಮೊದಲು ಮಂಗಳ ಅವರು ನಿಂಗಪ್ಪ ಅವರಿಗೆ ಎಲ್ಲವನ್ನು ಕಲಿಸಿಕೊಟ್ಟರು.

ಹೀಗೆ ಅವರ ಸಹಕಾರದಿಂದ ಪುಟ್ಟದಾಗಿ ಅಂಗಡಿಯನ್ನು ಹಾಕಿ ಅದಕ್ಕೆ “ನಿಂಗಪ್ಪ ಜನರಲ್ ಸ್ಟೋರ್” ಎಂದು ಹೆಸರಿಟ್ಟು ವ್ಯಾಪಾರ ಮಾಡುತ್ತಾ ಹೋದರು.ಅಂಗಡಿಗೆ ಬಂದ ಎಲ್ಲ ಜನರಿಗೆ ಟಾಕ್ ಪ್ಯಾಕ್ ಮೂಲಕ ಕರೆನ್ಸಿ ಹಾಕಿ,ವಿಥ್ ಕಾಮ್ ಮೂಲಕ ಹೆಬ್ಬಟ್ಟಿನ ಗುರುತು ಹಾಕಿಸಿ ಸಿಮ್ ಕೊಡುತ್ತಾ ವ್ಯಾಪಾರ ಆರಂಭಿಸಿದರು.ದೇವರು ಇವರಿಗೆ ಕಣ್ಣು ಕೊಡದೆ ಇದ್ದರೂ ಬುದ್ಧಿಶಕ್ತಿ ಕೊಟ್ಟಿದ್ದಾರೆ ಅದು ಯಾವುದೇ ನೋಟನ್ನಾದರೂ ಕೈಯಲ್ಲಿ ಹಿಡಿದು ಸ್ಪರ್ಶಿಸಿದಾಗ ಅದು ಇಷ್ಟೇ ರೂಪಾಯಿಯ ನೋಟು ಎಂದು ಗುರುತು ಹಿಡಿಯುತ್ತಾರೆ.ಇವರಿಗೆ ಇದುವರೆಗೂ ಯಾವುದೇ ಕಸ್ಟಮರ್ಸ್ ಇವರಿಗೆ ಮೋಸ ಮಾಡಿಲ್ಲ ಸರಿಯಾಗಿ ಹಣವನ್ನು ಕೊಟ್ಟು ಹೋಗುತ್ತಾರೆ.ಆ ದೇವರ ಕೃಪೆಯಿಂದ ಇವರ ವ್ಯಾಪಾರ ಚೆನ್ನಾಗಿ ನಡೆಯಿತು.ಇದರ ಜೊತೆಗೆ ಅನೇಕ ಕಿರಣಿ ಜನರಲ್ ಸ್ಟೋರ್ ಸಾಮಾನುಗಳನ್ನು ಇಟ್ಟು ವ್ಯಾಪಾರ ಮಾಡುತ್ತ ಹೋದರು.ಇವರ ಈ ವ್ಯಾಪಾರದಿಂದಲೇ ತಮ್ಮಂದಿರ ಜೀವನಕ್ಕೆ ಮತ್ತು ಅವರ ಕುಟುಂಬ ನಡೆಸಲು ಸಹಾಯವಾಯಿತು.

ನಂತರ ಕೊಂಚಿಗೇರಿ ಪಂಚಾಯಿತಿಗಯ ವಿ ಆರ್ ಡಬ್ಲ್ಯೂ ಮೂಲಕ ಡೀಲ್ ಫೌಂಡೇಶನ್ ಸಂಸ್ಥೆಯ ಶಿರಹಟ್ಟಿ ತಾಲೂಕಿನ ಲವ್ಲೀ ವುಡ್ ಆಫೀಸರ್ ಆದ ರೇಖಾ ಮಡ್ಡಿ ಇವರನ್ನು ಗುರುತಿಸಿ ಅವರ ಮನೆಗೆ ಹೋಗಿ ಅವರ ಬಗ್ಗೆ ತಿಳಿದುಕೊಂಡು ನಂತರ ಡೀಲ್ ಫೌಂಡೇಶನ್ ಬಗ್ಗೆ ಮಾಹಿತಿ ನೀಡಿ ಇನ್ನು ಹೆಚ್ಚಿನ ಮಟ್ಟದಲ್ಲಿ ಅಂಗಡಿ ಹಾಕಿ ವ್ಯಾಪಾರ ಮಾಡಬೇಕು ಎಂಬ ಆಶಯವನ್ನು ಹೊತ್ತ ನಿಂಗಪ್ಪ ಅವರಿಗೆ ರೇಖಾ ಮಡ್ಡಿ ಅವರು ನಿಮ್ಮ ಆಶಯಕ್ಕೆ ನಮ್ಮ ಸಂಸ್ಥೆ ಯಾವಾಗಲೂ ಸಹಕಾರ ನೀಡುತ್ತದೆ ಎಂದು ಭರವಸೆಯನ್ನು ನೀಡಿ ಅಲ್ಲಿನ 10 ಜನ ವಿಕಲ ಚೇತನರನ್ನು ಸೇರಿಸಿ “ಶ್ರೀ ಗಜಾನನ ವಿಕಲಚೇತನರ ಸ್ವಸಹಾಯ ಸಂಘ” ರಚನೆ ಮಾಡಿ ಅವರಿಗೆ ಡೀಲ್ ಫೌಂಡೇಶನ್ ಇಂದ ತರಬೇತಿ ನೀಡಿದರು.

ಈ ಸ್ವ ಸಹಾಯ ಸಂಘದ ವತಿಯಿಂದ ಬ್ಯಾಂಕ್ ನಿಂದ ಲೋನ್ ಪಡೆದುಕೊಂಡು ಇನ್ನು ಹೆಚ್ಚಿನ ಪ್ರಮಾಣದ ಅಂಗಡಿಯನ್ನು ಹಾಕಿ ನನ್ನಂತಹ ವಿಕಲಚೇತನರಿಗೆ ಕೆಲಸ ಕೊಡಬೇಕು ಎಂಬ ಕನಸು ನಿಂಗಪ್ಪ ಅವರದಾಗಿದೆ ಅದರಂತೆ ಲವ್ಲೀ ವುಡ್ ಆಫೀಸರ ಅದಕ್ಕೆ ಬೇಕಾದ ಎಲ್ಲಾ ತಯಾರಿಯನ್ನು ಮಾಡುತ್ತಿದ್ದಾರೆ.ಇನ್ನು ಸ್ವಲ್ಪ ದಿನಗಳಲ್ಲಿ ನಿಂಗಪ್ಪ ಅವರ ಕನಸು ನನಸಾಗುತ್ತದೆ.ಇದರಿಂದ ಅವರನ್ನು ಈ ಸಮಾಜವು ಇನ್ನೂ ಹೆಚ್ಚಿನ ಮಟ್ಟದಲ್ಲಿ ಗುರುತಿಸುವಂತೆ ಮಾದರಿಯಾಗುತ್ತಾರೆ.

ನಿಂಗಪ್ಪ ಅವರು ಡೀಲ್ ಫೌಂಡೇಶನ್ ಬಗ್ಗೆ ತಮ್ಮ ಅಭಿಪ್ರಾಯ ಹೇಳಿದ್ದಾರೆ.ಅದು ಚಿಕ್ಕದಾಗಿ ನಡೆಸುತ್ತಿದ್ದ ವ್ಯಾಪಾರದಿಂದ ಕುಟುಂಬ ನಡೆಸುತ್ತಿದ್ದೆ ಅಷ್ಟೇ ಆದರೆ ಮುಂದಿನ ಭವಿಷ್ಯಕ್ಕೆ ದಾರಿ ಸಿಗುತ್ತಿರಲಿಲ್ಲ.ಆಗ ರೇಖಾ ಮಡ್ಡಿ ಅವರು ಡೀಲ್ ಫೌಂಡೇಶನ್ ನಿಂದ ಸಿಗುವ ಅನುಕೂಲತೆಗಳ ಬಗ್ಗೆ ಮಾಹಿತಿ ನೀಡಿದಾಗ ನನ್ನಲ್ಲಿ ಆತ್ಮವಿಶ್ವಾಸ ಮೂಡಿಸಿತು.ದೊಡ್ಡ ಪ್ರಮಾಣದ ಅಂಗಡಿ ಇಟ್ಟು ವಿಕಲಚೇತನರಿಗೆ ಸಹಾಯ ಮಾಡಬೇಕು ಎಂಬ ನನ್ನ ಕನಸು ಡೀಲ್ ಫೌಂಡೇಶನ್ ನಿಂದ ನನಸಾಗುತ್ತದೆ ಎಂಬ ಭರವಸೆ ಮೂಡಿದೆ.ಜೊತೆಗೆ ವಿಕಲಚೇತನರಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳ ಮಾಹಿತಿ ಕೂಡ ನನಗೆ ಇದರಿಂದ ಸಿಗುತ್ತಿದೆ.ಆದ್ದರಿಂದ ನಾನು ಯಾವಾಗಲೂ ರೇಖಾ ಮಡ್ಡಿ ಅವರಿಗೆ ಮತ್ತು ಡೀಲ್ ಫೌಂಡೇಶನ್ ಸಂಸ್ಥೆ ಗೆ ಚರಣಿಯಾಗಿರುತ್ತೇನೆ ಎಂದು ತಮ್ಮ ಮನದಾಳದ ಮಾತನ್ನು ವ್ಯಕ್ತಪಡಿಸಿದ್ದಾರೆ.

ಈ ರೀತಿಯಾಗಿ ಡೀಲ್ ಫೌಂಡೇಶನ್ ಸಂಸ್ಥೆಯು ಅನೇಕ ವಿಕಲಚೇತನರನ್ನು ಗುರುತಿಸಿ ಅವರ ಜೀವನಕ್ಕೆ ಬೆಳಕನ್ನು ತೋರಿಸಿದ್ದಾರೆ. ಹೀಗೆ ಇನ್ನು ಅನೇಕ ವಿಕಲಚೇತನರಿಗೆ ಬೆಳಕಾಗಲಿ ಎಂದು ಎಲ್ಲ ವಿಕಲಚೇತನರು ಹಾರೈಸುತ್ತಾರೆ.

ಈ ಬ್ಲಾಗ್ ಗೆ ಸಂಬಂಧಿಸಿದಂತೆ ಯಾವುದೇ ನಿರ್ದಿಷ್ಟ ಪ್ರಶ್ನೆಗಳಿದ್ದರೆ ಅಥವಾ ಯಾವುದೇ ಸಹಾಯಕ್ಕಾಗಿ info@deal-foundation.com ನಲ್ಲಿ ತಿಳಿಸಿರಿ ಮತ್ತು ನಾವು ಮಾಡುವ ಕೆಲಸದ ಕುರಿತು ಇನ್ನಷ್ಟು ತಿಳಿದುಕೊಳ್ಳಲು www.deal-foundation ಗೆ ಲಾಗ್ ಇನ್ ಮಾಡಿರಿ.

ಧನ್ಯವಾದಗಳು