Select Page

 

 

ವಿಕಲಚೇತನ ಉದ್ಯಮಶೀಲತೆ ಮತ್ತು ನಾಯಕತ್ವ ಫೌಂಡೇಶನ್ ವಿಕಲಚೇತನ ವ್ಯಕ್ತಿಗಳಿಗೆ ಸುಸ್ಥಿರ ಜೀವನೋಪಾಯದ ಅವಕಾಶವನ್ನು ಉತ್ತೇಜಿಸಲು ಮತ್ತು ಉತ್ತಮ ಶಿಕ್ಷಣ,ಅರಿವು ಮತ್ತು ಅಂತರ್ಗತ ವಾತಾವರಣದ ಮೂಲಕ ವಿಕಲಚೇತನ ವ್ಯಕ್ತಿಗಳ ವಿರುದ್ಧದ ತಾರತಮ್ಯಗಳನ್ನು ಕೊನೆಗೊಳಿಸಲು ಡೀಲ್ ಫೌಂಡೇಶನ್ ಸಂಸ್ಥೆ ಪ್ರತಿ ತಾಲೂಕಿನಲ್ಲಿ ಕಾರ್ಯ ನಿರ್ವಹಿಸುತ್ತದೆ.

ವಿಕಲಚೇತನರ ಪ್ರಗತಿಗೆ ಅಡ್ಡಿಯಾಗುವ ಎಲ್ಲಾ ಅಡೆತಡೆಗಳನ್ನು ತೊಡೆದುಹಾಕಿ ಪ್ರತಿಯೊಬ್ಬ ವ್ಯಕ್ತಿಯು ತನ್ನ ವಿಕಲಚೇತನತೆಯನ್ನು ಲೆಕ್ಕಿಸದೆ ಒಟ್ಟಾಗಿ ಕೆಲಸ ಮಾಡಲು ಡೀಲ್ ಫೌಂಡೇಶನ್ ಸಂಸ್ಥೆಯು ವಿಕಲಚೇತನರಿಗೆ ಅವಕಾಶಗಳನ್ನು ಸೃಷ್ಟಿಸಿದೆ.ಆ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಪ್ರತಿ ತಾಲೂಕಿನಲ್ಲಿ ವಿಕಲಚೇತನರು ಡೀಲ್ ಫೌಂಡೇಶನ್ ನಿಂದ ತರಬೇತಿ ಪಡೆದುಕೊಂಡು ಸ್ವಯಂ ಉದ್ಯೋಗದಲ್ಲಿ ತೊಡಗಿಸಿಕೊಂಡು ಉಳಿದ ವಿಕಲಚೇತನಗೆ ಮಾದರಿಯಾಗಿದ್ದಾರೆ.ಅಂತಹ ವಿಕಲಚೇತನರಲ್ಲಿ ಮಂಜುನಾಥ್ ನವಲಗುಂದ ಕೂಡ ಒಬ್ಬರು.

ಇವರ ಬಗ್ಗೆ ತಿಳಿದುಕೊಳ್ಳುವುದಾದರೆ ಇವರು ಮೂಲತಃ ಮುಂಡರಗಿ ತಾಲೂಕಿನ ಡಂಬಳ ಗ್ರಾಮದವರು.ತಂದೆ- ಹನುಮಂತಪ್ಪ,ತಾಯಿ-ಶಿವಪುತ್ರವ್ವ. ಇವರಿಗೆ ಇಬ್ಬರು ಗಂಡು ಮಕ್ಕಳು ಮಂಜುನಾಥ್ ಅವರು ಎರಡನೇ ಮಗ.ತಂದೆ ತಾಯಿ ಹೊಲಮನಿ ಕೆಲಸ ಮಾಡಿ ಕುಟುಂಬವನ್ನು ನೋಡಿಕೊಳ್ಳುತ್ತಿದ್ದರು. ಮಂಜುನಾಥ್ ಅವರು ಹುಟ್ಟಿನಿಂದಲೇ ದೈಹಿಕ ವಿಕಲಚೇತನತೆಯನ್ನು ಹೊಂದಿದವರು.ಇವರ ಎಡಗಾಲು ವಿಕಲಚೇತನತೆಯನ್ನು ಹೊಂದಿದೆ. ಆಗಿದ್ದರು ಇವರು ಪಿಯುಸಿ ವರೆಗೆ ಶಿಕ್ಷಣವನ್ನು ಮುಗಿಸಿದರು.ನಂತರ ಮುಂದಿನ ಹೆಚ್ಚಿನ ಶಿಕ್ಷಣಕ್ಕಾಗಿ ಕಲಿಯಬೇಕು ಎಂಬ ಆಸೆ ಇವರದಾಗಿತ್ತು ಆದರೆ ಆಗ ಕಾಲಿನ ತೊಂದರೆ ಹೆಚ್ಚಾಯಿತು ಜೊತೆಗೆ ಬೆನ್ ಹಿಂದೆ ಚಿಕ್ಕ ಗಡ್ಡೆ ಬೆಳೆದಿದ್ದರಿಂದ ಆಪರೇಷನ್ ಮಾಡಿಸಲಾಯಿತು.ಇದರಿಂದ ಇವರ ಹೆಚ್ಚಿನ ಶಿಕ್ಷಣ ಮುಂದುವರಿಸಲು ಆಗಲಿಲ್ಲ.

ಕುಟುಂಬವನ್ನು ತಂದೆ ತಾಯಿಯ ನಡೆಸಿಕೊಂಡು ಜೀವನ ಸಾಗಿಸುತ್ತಿದ್ದರು.ದಿನ ಕಳೆದಹಾಗೆ ತಂದೆ ತಾಯಿಗೆ ದುಡಿಯಲು ಆಗಲಿಲ್ಲ.ಹೀಗೆ ಕುಳಿತರೆ ಕುಟುಂಬವನ್ನು ನಡೆಸುವುದು ಕಷ್ಟ ಎಂದು ತಿಳಿದು ಯಾವುದಾದರು ಉದ್ಯೋಗ ಮಾಡಬೇಕು ಎಂದು ಆಲೋಚಿಸಿದಾಗ ಮೊಬೈಲ್ ಶಾಪ್ ಇಡಬೇಕು ಎಂದು ತೀರ್ಮಾನಿಸಿದರು.ಆಗ ಅವರ ಕುಟುಂಬದವರು ಧಾರವಾಡ ಮತ್ತು ಹುಲಕೋಟೆಯಲ್ಲಿ ಅದಕ್ಕಾಗಿ ತರಬೇತಿಯನ್ನು ನೀಡುತ್ತಾರೆ ಎಂದು ಸಲಹೆ ನೀಡಿದರು. ಅದರಂತೆ ಮೊದಲು ಧಾರವಾಡದಲ್ಲಿ ಒಂದು ತಿಂಗಳು ಮೊಬೈಲ್ ರಿಪೇರಿ ಹೇಗೆ ಮಾಡುವುದು ಎಂಬ ತರಬೇತಿಯನ್ನು ಮಂಜುನಾಥ್ ಅವರು ಪಡೆದುಕೊಂಡರು.ನಂತರ ಅಲ್ಲಿಂದ ಹುಲಕೋಟಿಯ ಕೆವಿಕೆ ಯಲ್ಲಿ ಕೂಡ ಒಂದು ತಿಂಗಳು ತರಬೇತಿಯನ್ನು ಮುಗಿಸಿಕೊಂಡರು. ನಂತರ ಕುಟುಂಬದ ಸಹಾಯದಿಂದ ಮನೆ ಹತ್ತಿರ ವಿದ್ದ ಅಂಗಡಿಯನ್ನು ಬಾಡಿಗೆ ಹಿಡಿದು ಅದಕ್ಕೆ “ಕಿರಣ್ ಮೊಬೈಲ್ ಶಾಪ್”ಎಂದು ಹೆಸರಿಟ್ಟು ವ್ಯಾಪಾರವನ್ನು ಆರಂಭಿಸಿದರು. ಹೀಗೆ ಮೊಬೈಲ್ ರಿಪೇರಿ ಮಾಡುತ್ತಾ ಕರೆನ್ಸಿ ಹಾಕುವುದನ್ನು ಕೂಡ ಆರಂಭಿಸಿಕೊಂಡರು.

ದಿನ ಕಳೆದ ಹಾಗೆ ಇವರ ವ್ಯಾಪಾರ ಚೆನ್ನಾಗಿ ಆಯಿತು.ನಂತರ ಇವರ ಅಣ್ಣನಿಗೆ ಮದುವೆ ಆಯಿತು ಆದರೆ ಅವರು ಅಪ್ಪ ಅಮ್ಮನನ್ನು ಬಿಟ್ಟು ಬೇರೆ ಮನೆ ಮಾಡಿ ತಮ್ಮ ಜೀವನವನ್ನು ನೋಡಿಕೊಂಡರು. ಕುಟುಂಬದ ಮನಸ್ತಾಪದಿಂದ ನೊಂದುಕೊಂಡರು ಆದರೂ ಧೈರ್ಯಗೆಡದೆ ಅಪ್ಪ ಅಮ್ಮನನ್ನು ಇನ್ನು ಚೆನ್ನಾಗಿ ದುಡಿದು ನೋಡಿಕೊಳ್ಳಬೇಕು ಎಂಬ ಮನದಾಸೆ ಮಂಜುನಾಥ್ ಅವರಿಗೆ ಹೆಚ್ಚಾಯಿತು.ಇವರಿಗೆ ಈ ಮೊಬೈಲ್ ಶಾಪ್ ರಿಪೇರಿ ಮಾಡುವುದರ ಜೊತೆಗೆ ಹೊಸ ಮೊಬೈಲ್ ಮಾರಾಟ ಮಾಡಿ ಹೆಚ್ಚಿನ ಪ್ರಮಾಣದಲ್ಲಿ ದುಡಿಯಬೇಕು ಇನ್ನು ದೊಡ್ಡ ಪ್ರಮಾಣದಲ್ಲಿ ಬೆಳೆಸಬೇಕು ಎಂಬ ಕನಸು ಇವರದಾಗಿದೆ ಆದರೆ ಅದಕ್ಕೆ ಬಂಡವಾಳದ ಕೊರತೆ ಇತ್ತು.ಅದಕ್ಕೆ ಏನಾದರೂ ಮಾಡಲೇಬೇಕು ಎಂದಾಗ ವಿಕಲಚೇತನಗಾಗಿ ಯಾವುದಾದರೂ ಸೌಲಭ್ಯಗಳು ಸಿಗಬಹುದಾ ಎಂದು ಯೋಚಿಸಿದಾಗ ಡೀಲ್ ಫೌಂಡೇಶನ್ ಸಂಸ್ಥೆಯ ಮುಂಡರಗಿ ತಾಲೂಕಿನ ಲವ್ಲೀ ವುಡ್ ಆಫೀಸರ್ ಆದ ರೇಣುಕಾ ಕಲ್ಲಳ್ಳಿ ಇವರು ಡಂಬಳ ಗ್ರಾಮದ ವಿ ಆರ್ ಡಬ್ಲ್ಯೂ ಅವರನ್ನು ಭೇಟಿ ನೀಡಿ ಡೀಲ್ ಫೌಂಡೇಶನ್ ಸಂಸ್ಥೆ ಬಗ್ಗೆ ಮಾಹಿತಿ ನೀಡಿದರು.ನಂತರ ವಿ ಆರ್ ಡಬ್ಲ್ಯೂ ಅವರು ಎಲ್ಲ ವಿಕಲಚೇತನರಿಗೆ ಅನುಕೂಲವಾಗುವಂತಾದರೆ ಸ್ವಸಹಾಯ ಸಂಘವನ್ನು ರಚನೆ ಮಾಡಿ ಅವರಿಗೆ ತರಬೇತಿಯನ್ನು ನೀಡಿ ಎಂದು ಹೇಳಿದರು. ಅದರಂತೆ ಅಲ್ಲಿನ ವಿಕಲಚೇತನರನ್ನು ಸೇರಿಸಿ ಡೀಲ್ ಫೌಂಡೇಶನ್ ಸಂಸ್ಥೆಯ ಬಗ್ಗೆ, ತರಬೇತಿಗಳ ಬಗ್ಗೆ,ಸರ್ಕಾರಿ ಯೋಜನೆಗಳ ಬಗ್ಗೆ ವಿಕಲಚೇತನರಿಗೆ ಮನ ಮುಟ್ಟುವ ಹಾಗೆ ವಿವರಣೆಯನ್ನು ರೇಣುಕಾ ಅವರು ನೀಡಿದರು. ಆಗ ಅಲ್ಲಿನ 10 ವಿಕಲಚೇತನರು ಸೇರಿ ಸಂಘವನ್ನು ರಚಿಸಿಕೊಂಡು ಅದಕ್ಕೆ “ಶ್ರೀ ಪುಟ್ಟರಾಜ ವಿಕಲಚೇತನ ಸ್ವಸಹಾಯ ಸಂಘ”ಎಂದು ಹೆಸರಿಟ್ಟು ಬ್ಯಾಂಕ್ ನಲ್ಲಿ ತಮ್ಮದೇ ಆದ ಗುಂಪಿನ ಖಾತೆಯನ್ನು ತೆರೆದರು.

ನಂತರ ಈ ಸಂಘಕ್ಕೆ ರೇಣುಕಾ ಕಲ್ಲಳ್ಳಿ ಅವರು ಉದ್ಯೋಗದ ತರಬೇತಿ,ಬುಕ್ ರೈಟಿಂಗ್ ತರಬೇತಿ, ಡೀಸಬಲಿಟಿ ಅವೆರ್ನೆಸ್ ತರಬೇತಿ, ಲೀಡರ್ಶಿಪ್ ತರಬೇತಿ ಮುಂತಾದ ತರಬೇತಿಯನ್ನು ನೀಡಿದರು.ಪ್ರತಿ ತಿಂಗಳು ಎಲ್ಲಾ ಸದಸ್ಯರು 200-/ ರೂಪಾಯಿ ಉಳಿತಾಯವನ್ನು ಕಟ್ಟುತ್ತಿದ್ದಾರೆ.ಈ ಸಂಘದ ವತಿಯಿಂದ ಬ್ಯಾಂಕ್ ಲೋನ್ ಪಡೆದುಕೊಂಡು ಹೆಚ್ಚಿನ ಉದ್ಯೋಗ ಮಾಡಬೇಕು ಇದರಿಂದ ಎಲ್ಲಾ ವಿಕಲಚೇತನರು ಬೆಳೆಯಬೇಕು ಎಂದು ಈ ಸದಸ್ಯರು ಪ್ರತಿ ವಿಕಲಚೇತನರಿಗೆ ಸ್ಪೂರ್ತಿಯಾಗಿದ್ದಾರೆ.ಜೊತೆಗೆ ಡೀಲ್ ಫೌಂಡೇಶನ್ ನ ಸಹಕಾರದಿಂದ ಸರ್ಕಾರದಿಂದ ಸಿಗುವ ಅನುದಾನವನ್ನು ಪಡೆದುಕೊಂಡು ತಮ್ಮ ಗ್ರಾಮದ ವಿಕಲಚೇತನರಿಗೆ ಸಭಾಭವನ ಅಥವಾ ವಿಕಲಚೇತನರಿಗೆ ತರಬೇತಿ ಕೊಟ್ಟಡಿ ನಿರ್ಮಾಣ ಮಾಡಬೇಕು ಎಂದು ಆ ಗ್ರಾಮದ ವಿಕಲಚೇತನರು ಕನಸನ್ನು ಹೊಂದಿದ್ದಾರೆ. ಅದರಂತೆ ಈ ಸ್ವಸಹಾಯ ಸಂಘವನ್ನು ಸ್ಪೂರ್ತಿದಾಯಕವಾಗಿ ನಡೆಸಿಕೊಂಡು ಹೋಗುತ್ತಿದ್ದಾರೆ.

ಮಂಜುನಾಥ್ ಅವರು ಡೀಲ್ ಫೌಂಡೇಶನ್ ಸಂಸ್ಥೆ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.ಅದು ಮೊದಲು ವಿಕಲಚೇತನರನ್ನು ಎಲ್ಲರೂ ಕಡೆಗಣಿಸುತ್ತಿದ್ದರು.ಆದರೆ ವಿಕಲಚೇತನರಿಗಾಗಿ ಡೀಲ್ ಫೌಂಡೇಶನ್ ಸಂಸ್ಥೆಯು ಕಾರ್ಯನಿರ್ವಹಿಸುತ್ತಿರುವುದು ಹೆಮ್ಮೆಯ ವಿಚಾರ ಜೊತೆಗೆ ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗ ಮಾಡಬೇಕು,ತಂದೆ ತಾಯಿಯನ್ನು ಇನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂಬ ಆಸೆ ಹೊತ್ತಿರುವ ನನಗೆ ಡೀಲ್ ಫೌಂಡೇಶನ್ ನಿಂದ ರೇಣುಕಾ ಅವರು ಮಾರ್ಗ ಸೂಚಿಸಿದರು. ಅದು ಸ್ವಸಹಾಯ ಸಂಘದ ಮೂಲಕ ಸಾಲ ತೆಗೆದುಕೊಂಡು ನನ್ನ ಆಸೆಯಂತೆ ಹೆಚ್ಚಿನ ಪ್ರಮಾಣದಲ್ಲಿ ದುಡಿಯಬಹುದು ಜೊತೆಗೆ ಇದುವರೆಗೂ ನಮ್ಮದು ಅಂತ ಯಾವುದೇ ರೀತಿಯ ಹಣವನ್ನು ಕುಡಿಇಟ್ಟಿಲ್ಲ ಆದರೆ ಇ ರೀತಿ ಪ್ರತಿ ತಿಂಗಳು ಉಳಿತಾಯ ಮಾಡುವುದರಿಂದ ನಮ್ಮ ಕಷ್ಟಕಾಲಕ್ಕೆ ಇದು ಸಹಾಯವಾಗುತ್ತದೆ. ವಿಕಲಚೇತನರಿಗೆ ಸರಕಾರದ ಸೌಲಭ್ಯಗಳನ್ನು ಸಿಗುವಂತೆ ಮಾಡಿದ್ದಾರೆ.ಇನ್ನು ಹೆಚ್ಚಾಗಿ ಹೇಳುವುದಾದರೆ ನಮ್ಮ ಗ್ರಾಮದ ವಿಕಲಚೇತನರು ಉದ್ಯೋಗ ಮಾಡಲು ಒಂದು ಕೊಠಡಿಯನ್ನು ಅಥವಾ ಸಮುದಾಯ ಭವನವನ್ನು ನಿರ್ಮಾಣ ಮಾಡಬೇಕು ಎಂಬ ಕನಸಿಗೆ ಡೀಲ್ ಫೌಂಡೇಶನ್ ಸಂಸ್ಥೆಯಿಂದ ರೇಣುಕಾ ಕಲ್ಲಳ್ಳಿ ಅವರು ಸಹಕಾರ ನೀಡುತ್ತಿದ್ದಾರೆ. ಅವರಿಗೆ ನಾನು ಮತ್ತು ನಮ್ಮ ಗ್ರಾಮದ ವಿಕಲಚೇತನರ ಪರವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಹೀಗೆ ಇನ್ನೂ ಹೆಚ್ಚಿನ ಮಟ್ಟದಲ್ಲಿ ಡೀಲ್ ಫೌಂಡೇಶನ್ ಸಂಸ್ಥೆಯು ಬೆಳೆಯಲಿ ಎಂದು ಹಾರೈಸಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ಹೀಗೆ ಡಂಬಳ ಗ್ರಾಮದ ಪ್ರತಿ ವಿಕಲಚೇತನರ ಮನದಲ್ಲಿ ಡೀಲ್ ಫೌಂಡೇಶನ್ ಸಂಸ್ಥೆಯಿಂದ ಅನೇಕ ವಿಕಲಚೇತನರು ತರಬೇತಿಯನ್ನು ಪಡೆದುಕೊಂಡು ಉದ್ಯೋಗಸ್ಥರಾಗಿ ಈ ಸಮಾಜದಲ್ಲಿ ವಿಕಲಚೇತನರು ಗುರುತಿಸಿಕೊಳ್ಳುವಂತೆ ಇನ್ನು ಹೆಚ್ಚಿನ ಮಟ್ಟದಲ್ಲಿ ಕಾರ್ಯನಿರ್ವಹಿಸಿ ಹೀಗೆ ಹೆಸರು ಮಾಡಲಿ ಎಂದು ಎಲ್ಲ ವಿಕಲಚೇತನರು ಹಾರೈಸುತ್ತಿದ್ದಾರೆ.

ಈ ಬ್ಲಾಗ್ ಗೆ ಸಂಬಂಧಿಸಿದಂತೆ ಯಾವುದೇ ಪ್ರಶ್ನೆಗಳಿದ್ದರೆ ಅಥವಾ ಯಾವುದೇ ಸಹಾಯಕ್ಕಾಗಿ Info@deal-foundation.com ನಲ್ಲಿ ತಿಳಿಸಿರಿ ಮತ್ತು ನಾವು ಮಾಡುವ ಕೆಲಸದ ಕುರಿತು ಇನ್ನಷ್ಟು ತಿಳಿದುಕೊಳ್ಳಲು www.deal-foundation ನಲ್ಲಿ ತಿಳಿಸಿ.

ಧನ್ಯವಾದಗಳು

Get a report of all our on field work every month.

You have Successfully Subscribed!

Share This