Select Page

 

ವಿಕಲಚೇತನ ವ್ಯಕ್ತಿಗಳನ್ನು ಸಬಲೀಕರಣಗೊಳಿಸುವತ್ತ ಆಂದೋಲನವು ಬೆಳೆಯುತ್ತದೆ. ವಿಕಲಚೇತನರ ಕೌಶಲ್ಯ ಮತ್ತು ದೃಷ್ಟಿಕೋನಗಳನ್ನು ಅಭಿವೃದ್ಧಿಪಡಿಸಲು ಉದ್ಯಮಶೀಲತೆಯು ಒಳಗೊಂಡಿದೆ.ಅದರಂತೆ ಉದ್ಯಮಶೀಲತೆಯು ವಿಕಲಚೇತನರು ಸ್ವಂತ ಹಣೆಬರದ ಮೇಲೆ ಹಿಡಿತ ಸಾಧಿಸಲು ಮತ್ತು ಅವರ ಆಸಕ್ತಿ ಮೌಲ್ಯಗಳನ್ನು ರಚಿಸಿಕೊಳ್ಳಲು ಅವಕಾಶ ನೀಡುತ್ತದೆ.ಅದರಲ್ಲಿ ಡೀಲ್ ಫೌಂಡೇಶನ್ ಎಂಬ ಉದ್ಯಮ ಸಂಸ್ಥೆಯು ವಿಕಲಚೇತನರಿಗೆ ಅವರ ಅಗತ್ಯಗಳನ್ನು ತರಬೇತಿಗಳ ಮೂಲಕ ಒದಗಿಸಿ ಅವರ ಕೌಶಲ್ಯ ಮತ್ತು ಪ್ರತಿಭೆಯನ್ನು ಬಳಸಿಕೊಂಡು ವಿಕಲಚೇತನರು ಈ ಸಮಾಜದಲ್ಲಿ ಗುರುತಿಸಿಕೊಳ್ಳುವಂತೆ ಮಾಡುತ್ತಿದೆ.

ವಿಕಲಚೇತನತೆಯನ್ನು ಗುರುತಿಸಿ ಅವರಿಗಾಗಿ ಸಮುದಾಯ ಅಭಿವೃದ್ಧಿ,ಕೃಷಿ ವ್ಯವಸ್ಥೆ, ಕೃಷಿ ಉತ್ಪನ್ನಗಳು,ಅನೇಕ ಗೃಹ ತಯಾರಿಕೆಯ ತರಬೇತಿಯನ್ನು ಒದಗಿಸುವುದರ ಮೂಲಕ ಡೀಲ್ ಫೌಂಡೇಶನ್ ಸಂಸ್ಥೆಯು ಪ್ರತಿ ತಾಲೂಕಿನಲ್ಲಿ ವಿಕಲಚೇತನರನ್ನು ಸ್ವಾವಲಂಬನೆ ಬದುಕಿಗಾಗಿ ಬಲವರ್ಧನೆಯನ್ನು ನೀಡುತ್ತಿದೆ. ಇದರಿಂದ ಪ್ರೇರಿತಗೊಂಡು ವಿಕಲಚೇತನರು ಆಸಕ್ತಿವಹಿಸಿ ಮುಂದೆ ಬಂದು ಸ್ವಯಂ ಉದ್ಯೋಗದಲ್ಲಿ ತೊಡಗಿ ಉದ್ಯೋಗ ಆರಂಭಿಸಿಕೊಂಡು ಈ ಸಮಾಜದಲ್ಲಿ ವಿಕಲಚೇತನರಿಗೂ ಅವಕಾಶ ಸಿಕ್ಕರೆ ಏನನ್ನಾದರೂ ಮಾಡಬಹುದು ಎಂದು ಉದಾಹರಣೆಯಾಗಿ ಗುರುತಿಸಿಕೊಂಡಿದ್ದಾರೆ.ಅದರಲ್ಲಿ ಮಹದೇವಪ್ಪ ಬಂಗಿ ಇವರು ಕೂಡ ಒಬ್ಬರು.

ಇವರ ಬಗ್ಗೆ ಹೇಳುವುದಾದರೆ ಇವರು ಮೂಲತಃ ಲಕ್ಷ್ಮೇಶ್ವರ ತಾಲೂಕಿನ ಆಡರಕಟ್ಟಿ ಗ್ರಾಮದವರು.ತಂದೆ ಈರಪ್ಪ ತಾಯಿ ನಾಗಮ್ಮ.ಇವರಿಗೆ ಮೂರು ಜನ ಸಹೋದರರೊಂದಿಗೆ ಅವಿಭಕ್ತ ಕುಟುಂಬದಿಂದ ಕೂಡಿತ್ತು.ಇವರ ಬಾಲ್ಯದ ಜೀವನವು ಕಷ್ಟದ ಪರಿಸ್ಥಿತಿ ಇದ್ದರೂ ಕೂಡ ಕುಟುಂಬದಲ್ಲಿ ಕುಷಿಯಿಂದ ಕೂಡಿತ್ತು.ತಂದೆ ತಾಯಿ ಎಲ್ಲ ಮಕ್ಕಳಿಗೂ ವಿದ್ಯಾಭ್ಯಾಸ ನೀಡಿದರು.ಮಹದೇವಪ್ಪ ಅವರು 10ನೇ ತರಗತಿಯವರಿಗೆ ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮುಗಿಸಿದ್ದರು.ನಂತರ ತಮ್ಮ ತಮ್ಮಂದಿರಿಗೆ ಶಿಕ್ಷಣ ಕೊಡಿಸಬೇಕು ಎಂಬ ಮನದಾಸೆ ಇವರದಾಗಿತ್ತು. ಅದಕ್ಕಾಗಿ ತಾವು ಕೂಲಿ ಕೆಲಸ ಮಾಡಲು ಆರಂಭಿಸಿ ಕುಟುಂಬವನ್ನು ನಡೆಸುತ್ತಾ ತಮ್ಮಂದಿರಿಗೆ ವಿದ್ಯಾಭ್ಯಾಸ ಕೊಡಿಸಿದರು.

ಇವರ ಮನೆಯಲ್ಲಿ ಬೈಕ್ ಇದ್ದಿದ್ದರಿಂದ ತಂದೆಯ ಜೊತೆಗೆ ಬೈಕ್ ಓಡಿಸುವುದನ್ನು ಕಲಿಸಿಕೊಂಡು ಮುಂದೆ ಬೇರೆ ಟ್ಯಾಕ್ಸಿಗಳನ್ನು ಓಡಿಸಲು ಕಲಿತು ಡ್ರೈವಿಂಗ್ ಕೆಲಸಕ್ಕೆ ಹೋದರು ಹೀಗೆ ಇಷ್ಟೇ ಕೂಲಿ ಕೆಲಸ ಮಾಡಿದರೆ ತಮ್ಮಂದಿರ ಶಿಕ್ಷಣ ಮತ್ತು ಕುಟುಂಬ ನಡೆಸಲು ಆಗುವುದಿಲ್ಲ ಎಂದು ತಿಳಿದು ಯೋಚಿಸಿ ತಂದೆಯವರ ಹತ್ತಿರ ನಾನೆ ಟಾಟಾ ಎಸಿ ಗಾಡಿ ತೆಗೆದುಕೊಂಡು ಉದ್ಯೋಗ ಆರಂಭಿಸುತ್ತೇನೆ ಎಂದು ಹೇಳಿದರು.ತಂದೆ ತಾಯಿಯ ಒಪ್ಪಿಗೆಯಂತೆ ಫೈನಾನ್ಸ್ ನಲ್ಲಿ ಲೋನ್ ಪಡೆದುಕೊಂಡು ಟಾಟಾ ಎಸಿ ಗಾಡಿಯನ್ನು ಖರೀದಿಸಿ ಬಾಡಿಗೆಗಾಗಿ ಬೇರೆ ಬೇರೆ ಊರಿಗೆ ಹೋಗುತ್ತಾ ಕೆಲಸವನ್ನು ಆರಂಭಿಸಿದರು.

ನಂತರ ಮಹದೇವಪ್ಪ ಅವರಿಗೆ ಮದುವೆಯಾಗಿ ನಂದಾ ದೀಪದ ಹಾಗೆ ಮೂರು ಜನ ಹೆಣ್ಣುಮಕ್ಕಳೊಂದಿಗೆ ಇವರ ಕುಟುಂಬವು ಸಂತೋಷದಿಂದ ತುಂಬಿತ್ತು.ಹೀಗೆ ಖುಷಿಯಾಗಿ ಸಾಗುತ್ತಿದ್ದೆ ಇವರ ಜೀವನಕ್ಕೆ ಪೆಟ್ಟು ಬಿತ್ತು ಅದು ಬಾಡಿಗೆಯಂತೆ ಕಲ್ಲುಗಳನ್ನು ಹೇರಿಕೊಂಡು ಬೇರೆ ಊರಿಗೆ ಹೋಗುವಾಗ ಅವರ ಟ್ಯಾಕ್ಸಿಗೆ ಆಕ್ಸಿಡೆಂಟ್ ಆಗಿ ಇಡೀ ಕಲ್ಲಿನ ಗಾಡಿ ಇವರ ಮೇಲೆ ಬಿದ್ದು ಎಚ್ಚರ ತಪ್ಪಿದಾಗ ಅಲ್ಲಿನ ಜನ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸುತ್ತಾರೆ.ಗಾಡಿ ಇವರ ಕಾಲೀನ ಮೇಲೆ ಬಿದ್ದ ಕಾರಣ ಇವರ ಎಡಗಾಲು ಸ್ವಾಧೀನ ಕಳೆದುಕೊಂಡು ವೈದ್ಯರು ಈ ಕಾಲನ್ನು ತೆಗೆಯಬೇಕು ಎಂದಾಗ ಮನೆಯವರಿಗೆ ಅಘಾತವಾಗಿ ಅವರ ಜೀವ ಮುಖ್ಯ ಎಂದು ತಿಳಿದು ಮನೆಯವರ ಒಪ್ಪಿಗೆಯಂತೆ ವೈದ್ಯರು ಅವರ ಕಾಲನ್ನು ತೆಗೆಯುತ್ತಾರೆ.ಸ್ವಲ್ಪ ದಿನಗಳ ಕಾಲ ಮನೆಯಲ್ಲಿ ಚೇತರಿಸಿಕೊಂಡು ಆರಾಮಾದರು.ಆದರೆ ಅವರಿಗೆ ಕುಟುಂಬ ನಡೆಸುವುದು ಹೇಗೆ ಎಂದು ಬೇಸರವಾಯಿತು. ಮಹದೇವಪ್ಪ ಅವರ ಹೆಂಡತಿ ಕೂಲಿ ಕೆಲಸ ಮಾಡಿ ಕುಟುಂಬವನ್ನು ನಡೆಸುತ್ತಿದ್ದರು.ಅಣ್ಣ-ತಮ್ಮಂದಿರೆಲ್ಲ ಮದುವೆ ಮಾಡಿಕೊಂಡು ತಮ್ಮ ಜೀವನವನ್ನು ನೋಡಿಕೊಂಡಿದ್ದರು. ಹೀಗೆ ಹೆಂಡತಿಯು ಎರಡನೇ ತಾಯಿ ಎಂದು ಹೇಳುವ ಮಾತು ಮಹದೇವಪ್ಪ ಅವರ ಜೀವನಕ್ಕೆ ಸಾಕ್ಷಿಯಾಯಿತು.ಅವರ ಹೆಂಡತಿ ಮನೆ ಮತ್ತು ಮಕ್ಕಳು ಗಂಡ ಇವರೆಲ್ಲರ ಜವಾಬ್ದಾರಿಯನ್ನು ಹೊತ್ತು ಕೂಲಿ ಕೆಲಸ ಮಾಡುತ್ತಾ ಮಕ್ಕಳಿಗೆ ಶಿಕ್ಷಣ ಕೊಡಿಸಿದರು. ನಂತರ ಮಹದೇವಪ್ಪ ಅವರು ನಾನು ಹೀಗೆ ಮನೆಯಲ್ಲಿ ಇದ್ದರೆ ನನ್ನ ಕುಟುಂಬಕ್ಕೆ ಇನ್ನೂ ಹೊರೆಯಾಗುತ್ತೇನೆ ನಾನು ಏನಾದರೂ ಮಾಡಬೇಕು ಎಂದು ಯೋಚಿಸಿದರು.ಆಗ ಸರ್ಕಾರದ ವತಿಯಿಂದ ಕೃತಕ ಕಾಲು ಜೋಡಣೆಯ ಸಲಕರಣೆಯನ್ನು ಪಡೆದುಕೊಂಡು ಅದನ್ನು ಹಾಕಿಕೊಂಡು ಓಡಾಡಲು ಆರಂಭಿಸಿದರು.ಸ್ವಲ್ಪ ದಿನ ಕಳೆದ ನಂತರ ಮತ್ತೆ ನಾನು ಗಾಡಿಯನ್ನು ಓಡಿಸಲು ನನ್ನಿಂದ ಸಾಧ್ಯ ಎಂದು ಯೋಚಿಸಿ ಹೆಂಡತಿ ಮಕ್ಕಳ ಪ್ರೋತ್ಸಾಹದಿಂದ ಸಾಲ ಮಾಡಿ ಆಟೊವನ್ನು ಖರೀದಿಸಿದರು. ಊರಿನ ಜನ ಒಂದೇ ಕಾಲಿನಿಂದ ನಿನ್ನಿಂದ ಓಡಿಸಲು ಆಗಲ್ಲ ಎಂದು ಮಹಾದೇವಪ್ಪ ಅವರನ್ನು ಹೀಯಾಳಿಸುತ್ತಿದ್ದರು.ಆದರೆ ಅವರ ಮಾತಿಗೆ ಕಿವಿಕೊಡದೆ ನನ್ನನ್ನು ಆಡಿಕೊಂಡ ಜನರಿಗೆ ನಾನು ಮಾಡಿ ತೋರಿಸಬೇಕು ಎಂಬ ಛಲದಿಂದ ಆಟೋವನ್ನು ಓಡಿಸಲು ಆರಂಭಿಸಿದರು.ಹೀಗೆ ದಿನ ಕಳೆದ ಹಾಗೆ ಇವರ ಜೀವನ ಸುಧಾರಣೆ ಹೊಂದಿತು.ಆಡಿಕೊಂಡ ಜನರಿಗೆ ಮಾದರಿಯಾದರು.ನಂತರ ಮಕ್ಕಳಿಗೆ ಮದುವೆ ಮಾಡಿದರು ಹೀಗೆ ಇವರ ಕುಟುಂಬವು ಕಷ್ಟದ ಪರಿಸ್ಥಿತಿ ಇದ್ದರೂ ಖುಷಿಯಿಂದ ಕೂಡಿತ್ತು.ದಿನ ಕಳೆದ ಹಾಗೆ ಇವರ ಕಾಲು ಕ್ರಮೇಣ ನೋವು ಕಾಣಿಸುತ್ತಾ ಹೋಯಿತು ಆದರೂ ನಾನು ಯಾರಿಗೂ ಒರೆಹಾಗಬಾರದು ಎಂದು ಸಾಧ್ಯವಾದಷ್ಟು ಆಟೋ ಓಡಿಸುತ್ತಿದ್ದಾರೆ.ಆದರೆ ಇದರಿಂದ ಸಾಲವನ್ನು ತೀರಿಸುತ್ತಾ ಕುಟುಂಬ ನಡೆಸುವುದು ಕಷ್ಟವಾಯಿತು.ಆಗ ಅವರ ಹೆಂಡತಿ ಹೀಗೆ ಆದರೆ ಕಷ್ಟವಾಗುತ್ತದೆ ಜೊತೆಗೆ ನಿಮ್ಮ ಆರೋಗ್ಯವು ಕ್ಷೀಣಿಸುತ್ತದೆ ಇದಕ್ಕೆ ಪರಿಹಾರವಾಗಿ ನಿಮ್ಮದೇ ಆದ ಸ್ವಂತ ಉದ್ಯೋಗ ಮಾಡಿ ಅದು ಸಣ್ಣ ಪ್ರಮಾಣದ್ದೇ ಆಗಲಿ ಆರಂಭಿಸಿ ಅದಕ್ಕೆ ನಾನು ಸಹಕಾರ ನೀಡುತ್ತೇನೆ ಎಂದು ಹೇಳಿದರು. ಏನೇ ಮಾಡುವುದಕ್ಕಾದರೂ ತರಬೇತಿ ಮತ್ತು ಬಂಡವಾಳ ಬೇಕು ಅದನ್ನು ಹೇಗೆ ಪಡೆದುಕೊಳ್ಳುವುದು ಎಂದು ಯೋಚಿಸುತ್ತಿರುವಾಗ ಸ್ವಲ್ಪ ದಿನಗಳ ನಂತರ ಡೀಲ್ ಫೌಂಡೇಶನ್ ಸಂಸ್ಥೆಯ ಲವ್ಲಿವುಡ್ ಆಫೀಸರ್ ಆದ ದೀಪ ಗೋಕಾವಿ ಅವರು ಆಡರಕಟ್ಟಿ ಪಂಚಾಯಿತಿಗೆ ಭೇಟಿ ನೀಡಿ ಅಲ್ಲಿನ ಪಿಡಿಓ, ಅಧ್ಯಕ್ಷರು, ಮತ್ತು ಎಲ್ಲ ಸದಸ್ಯರಿಗೆ ಡೀಲ್ ಫೌಂಡೇಶನ್ ಸಂಸ್ಥೆಯ ಕಾರ್ಯ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದಾಗ ಅವರ ಒಪ್ಪಿಗೆ ಮೇರಿಗೆ ಆ ಊರಿನ ವಿಕಲಚೇತನರನ್ನು ಸಭೆ ಸೇರಿಸಿ ಎಲ್ಲರಿಗೂ ಡೀಲ್ ಫೌಂಡೇಶನ್ ಸಂಸ್ಥೆ ಬಗ್ಗೆ, ತರಬೇತಿಗಳ ಬಗ್ಗೆ ಮಾಹಿತಿ ನೀಡಿದರು.ಆಗ ಅಲ್ಲಿನ ಎಲ್ಲಾ ವಿಕಲಚೇತನರು ಸೇರಿ ವಿಕಲಚೇತನರ ಸಂಘ ಮಾಡಿ ಸೌಲಭ್ಯಗಳನ್ನು ಪಡೆದುಕೊಂಡು ನಮ್ಮನ್ನು ಎಲ್ಲರೂ ಗುರುತಿಸುವಂತಾಗಬೇಕು ಎಂದು ಒಟ್ಟು ಗೂಡಿ 15 ಜನ ಸೇರಿ ಬಸವೇಶ್ವರ ವಿಕಲಚೇತನರ ಸ್ವಸಹಾಯ ಸಂಘವನ್ನು ಆರಂಭಿಸಿದರು. ನಂತರ ದೀಪಾವರೂ ಈ ಸಂಘವನ್ನು ಅಕೌಂಟ್ ಮಾಡಿಸಿ ಡಿಲೀಟ್ ಫೌಂಡೇಶನ್ ವತಿಯಿಂದ 2016ರ ಡಿಸ್ ಎಬಿಲಿಟಿ ಅವರ್ನೆಸ್ ತರಬೇತಿ ವಿಕಲಚೇತನರಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳ ಮಾಹಿತಿ ಉದ್ಯೋಗದ ಮಾಹಿತಿ ಮುಂತಾದ ತರಬೇತಿಗಳನ್ನು ನೀಡಿದರು.ಇದರಿಂದ ಈ ಸಮಾಜದಲ್ಲಿ ವಿಕಲಚೇತನರಿಗೂ ಅವಕಾಶವಿದೆ ಆದರೆ ಅದನ್ನು ಗುರುತಿಸುವುದಕ್ಕೆ ಡೀಲ್ ಫೌಂಡೇಶನ್ ಸಂಸ್ಥೆಯು ಸಹಕಾರ ನೀಡುತ್ತಿದೆ. ಮಹದೇವಪ್ಪ ಅವರು ಡಿಲ್ ಫೌಂಡೇಶನ್ ಸಂಸ್ಥೆಯಿಂದ ಉದ್ಯೋಗ ತರಬೇತಿಯನ್ನು ಪಡೆದುಕೊಂಡು ಚಿಕ್ಕಬಂಡವಾಳದಲ್ಲಿ ಸ್ವಯಂ ಉದ್ಯೋಗ ಮಾಡಬೇಕು ಎಂದು ತೀರ್ಮಾನಿಸಿ ತರಬೇತಿ ಪಡೆದುಕೊಳ್ಳಲು ಒಗಟ್ಟಾಗಿದ್ದಾರೆ. ಹೀಗೆ ತರಬೇತಿಯ ನಂತರ ಉದ್ಯೋಗ ಆರಂಭಿಸಿದರೆ ಅವರ ಆರ್ಥಿಕ ಪರಿಸ್ಥಿತಿಯು ಕೂಡ ಸುಧಾರಣೆ ಆಗುತ್ತದೆ ಜೊತೆಗೆ ಮನೆಯಲ್ಲಿ ಒಂದೇ ಉದ್ಯೋಗ ಮಾಡಿದರೆ ಅವರ ಕಾಲಿನ ನೋವು ಕೂಡ ಕಡಿಮೆಯಾಗುತ್ತದೆ.

ಈ ರೀತಿಯಾಗಿ ಮಹದೇವಪ್ಪ ಅವರು ಆಟೋ ಓಡಿಸುತ್ತಾ ಜೀವನ ಸಾಧಿಸುತ್ತಿದ್ದ ಇವರಿಗೆ ಡೀಲ್ ಫೌಂಡೇಶನ್ ಸಂಸ್ಥೆಯಿಂದ ಅವರ ಮುಂದಿನ ಭವಿಷ್ಯಕ್ಕೆ ಭರವಸೆ ಬೆಳಕು ಮೂಡುತ್ತಿದೆ.ಇದರಿಂದ ಅವರನ್ನು ಈ ಸಮಾಜ ಗುರುತಿಸುವಂಥಾಗುತ್ತದೆ. ಮಹದೇವಪ್ಪ ಅವರು ಡೀಲ್ ಫೌಂಡೇಶನ್ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅದು ಆಕ್ಸಿಡೆಂಟ್ ಆಗಿ ಕಾಲು ಹೋದಾಗ ಜೀವನ ನಡೆಸಲು ಕಷ್ಟವಾಯಿತು.ಆದರೂ ಹೇಗೋ ಕೃತಕ ಕಾಲಿನಿಂದ ಆಟೋ ಓಡಿಸುತ್ತ ದುಡಿಯುತ್ತಿದ್ದೆ ಆದರೆ ಇದರ ಪರಿಣಾಮ ಕಾಲು ನೋವು ಇನ್ನು ಹೆಚ್ಚಾಗುತ್ತಿತ್ತು ಇದರಿಂದ ಮುಂದೆ ಕುಟುಂಬ ನಡೆಸುವುದು ಹೇಗೆ ಎಂದು ಯೋಚಿಸುವಾಗ ಡೀಲ್ ಫೌಂಡೇಶನ್ ಸಂಸ್ಥೆಯು ನೆರಳಾಗಿ ಬಂದಿತು. ವಿಕಲಚೇತನರಿಗೆ ಸ್ವಯಂ ಉದ್ಯೋಗ ಮಾಡಲು ತರಬೇತಿ ನೀಡಿ ಅವರ ಆರ್ಥಿಕ ಜೀವನ ಸುಧಾರಣೆ ಆಗುವಂತೆ ಸಹಕಾರ ನೀಡುತ್ತಿದೆ ಅದರಲ್ಲಿ ನಾನು ಕೂಡ ಒಬ್ಬ ಎಂದು ಹೇಳುವುದಕ್ಕೆ ನನಗೆ ಹೆಮ್ಮೆ ಆಗುತ್ತದೆ.ಉದ್ಯೋಗದ ತರಬೇತಿಗೆ ಅವಕಾಶ ಕೊಡಿಸಿರುವ ದೀಪ ಅವರಿಗೂ ಮತ್ತು ಡೀಲ್ ಫೌಂಡೇಶನ್ ಸಂಸ್ಥೆಗೂ ಯಾವಾಗಲೂ ಚಿರಋಣಿಯಾಗಿರುತ್ತೇನೆ.ಹೀಗೆ ಅನೇಕ ವಿಕಲಚೇತನರ ಜೀವನಕ್ಕೆ ಡೀಲ್ ಫೌಂಡೇಶನ್ ಸಂಸ್ಥೆಯು ನೆರಳಾಗಲಿ ಇನ್ನು ಹೆಚ್ಚಿನ ಮಟ್ಟದಲ್ಲಿ ಇಡೀ ದೇಶಾದ್ಯಂತ ಹೆಸರು ಮಾಡಲಿ ಎಂದು ಹಾರೈಸುತ್ತೇವೆ ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಹೀಗೆ ಡೀಲ್ ಫೌಂಡೇಶನ್ ಸಂಸ್ಥೆಯು ವಿಕಲಚೇತನರ ಜೀವನಕ್ಕೆ ತೆರೆಮರೆಯಲ್ಲಿ ನಿಂತು ಬೆಳಕು ನೀಡುತಿದೆ.ಹೀಗೆ ಇನ್ನು ಹೆಚ್ಚಿನ ಮಟ್ಟದಲ್ಲಿ ಡೀಲ್ ಫೌಂಡೇಶನ್ ಸಂಸ್ಥೆಯು ಹೆಸರು ಮಾಡಲಿ ಎಂದು ಕೋರುತ್ತೇವೆ.

ಈ ಬ್ಲಾಗ್ ಗೆ ಸಂಬಂಧಿಸಿದಂತೆ ಯಾವುದೇ ನಿರ್ದಿಷ್ಟ ಪ್ರಶ್ನೆಗಳಿದ್ದರೆ ಅಥವಾ ಯಾವುದೇ ಸಹಾಯಕ್ಕಾಗಿ Info@deal-foundation.com ನಲ್ಲಿ ತಿಳಿಸಿರಿ ಮತ್ತು ನಾವು ಮಾಡುವ ಕೆಲಸದ ಕುರಿತು ಇನ್ನಷ್ಟು ತಿಳಿದುಕೊಳ್ಳಲು www.deal-Foundation ಗೆ ಲಾಗ್ ಇನ್ ಮಾಡಿ.

ಧನ್ಯವಾದಗಳು

Get a report of all our on field work every month.

You have Successfully Subscribed!

Share This