ವಿಕಲಚೇತನ ವ್ಯಕ್ತಿಗಳಿಗೆ ಸುಸ್ಥಿರ ಜೀವನೋಪಾಯದ ಅವಕಾಶಗಳನ್ನು ಸೃಷ್ಟಿಸಲು ಕೆಲಸ ಮಾಡುವುದು ಮತ್ತು ಅವರ ಮಾಲಿಕತ್ವದ ನಡೆಸುತ್ತಿರುವ ಮತ್ತು ನಿರ್ವಹಿಸುತ್ತಾ ಉದ್ಯಮಗಳ ಅಭಿವೃದ್ಧಿಯನ್ನು ಬೆಂಬಲಿಸುವುದು ಡೀಲ್ ಫೌಂಡೇಶನ್ ಸಂಸ್ಥೆಯ ಪ್ರಮುಖ ಕಾರ್ಯವಾಗಿದೆ.

ಸಾಮಾಜಿಕ ಮತ್ತು ಆರ್ಥಿಕ ಪುನರ್ವಸತಿ ಚೇತರಿಕೆ ಮತ್ತು ಸ್ಥಿತಿಸ್ಥಾಪಕತ್ವಕ್ಕೆ ಕಾರಣವಾಗುವ ಪರಿಣಾಮಕಾರಿ ಪ್ರಕ್ರಿಯೆಯನ್ನು ವಿಮೆ ಮಾಡಲು ಡೀಲ್ ಫೌಂಡೇಶನ್ ಸಂಸ್ಥೆಯು ಆಸಕ್ತಿ ಮತ್ತು ಸ್ಥಳದ ಸಮುದಾಯಗಳಾದ್ಯಂತ ಕೆಲಸ ಮಾಡುತ್ತಿದೆ.ಗ್ರಾಮೀಣ ಪ್ರದೇಶಗಳಲ್ಲಿನ ವಿಕಲಚೇತನರ ಸಮುದಾಯಗಳನ್ನು ನಿಜವಾದ ಸ್ವಾವಲಂಬಿಗಳನ್ನಾಗಿ ಮಾಡಲು ಸಮುದಾಯದ ಒಡೆತನವು ಒಂದು ಮಾರ್ಗವಾಗಿದೆ ಎಂಬುದು ಶ್ರೇಷ್ಠ ಕಲಿಕೆಯಾಗಿದೆ.ವಿಕಲಚೇತನತೆ ಮತ್ತು ಸ್ವಸಹಾಯ ಗುಂಪುಗಳನ್ನು ಹೊಂದಿರುವ ಸಶಕ್ತ ಮತ್ತು ಪ್ರೇರಿತ ವ್ಯಕ್ತಿಗಳನ್ನು ರಚಿಸುವ ಮೂಲಕ ಒಬ್ಬರು ಪ್ರಾರಂಭಿಸಬೇಕು ಮತ್ತು ಅವರ ಪ್ರಾರಂಭಿಸುವ ಜೀವನೋಪಾಯ ಮತ್ತು ಉದ್ಯಮಶೀಲತೆ ಅಭಿವೃದ್ಧಿ ಚಟುವಟಿಕೆಗಳ ಉಸ್ತುವಾರಿಯನ್ನು ವಹಿಸಿಕೊಳ್ಳಬೇಕು ಅಂದಾಗ ಮಾತ್ರ ಯಶಸ್ಸು ಸಿಗಲು ಸಾಧ್ಯ ಎಂದು ಡೀಲ್ ಫೌಂಡೇಶನ್ ಸಂಸ್ಥೆಯು ಪ್ರತಿ ವಿಕಲಚೇತನರಲ್ಲಿ ಮನಮುಟ್ಟುವಂತೆ ಕಾರ್ಯನಿರ್ವಹಿಸುತ್ತಿದೆ.

ಅದರಂತೆ ವಿಕಲಚೇತನರಿಗೆ ಮತ್ತು ಮಹಿಳೆಯರಿಗೆ ಇನ್ನೂ ಹೆಚ್ಚಿನ ಉದ್ಯೋಗದ ಅವಕಾಶವನ್ನು ನೀಡಲು ಕೊಪ್ಪಳ ತಾಲೂಕಿನ ಉಷಾ ಸಿಲೈ ಸಂಸ್ಥೆ ಒಂದು ಡೀಲ್ ಫೌಂಡೇಶನ್ ಸಂಸ್ಥೆಯ ಸಹಯೋಗದೊಂದಿಗೆ ಗದಗ್ ತಾಲೂಕಿನ ವಿಕಲಚೇತನರಿಗೆ ಮತ್ತು ಮಹಿಳೆಯರಿಗೆ ಟೈಲರಿಂಗ್ ತರಬೇತಿಯನ್ನು ನೀಡಿ ಸ್ವತಹ ಉದ್ಯೋಗ ಮಾಡಲು ಟೈಲರಿಂಗ್ ಮಷೀನ್ ಕೂಡ ನೀಡುವ ಟೈಲರಿಂಗ್ ತರಬೇತಿಯ ಕಾರ್ಯಕ್ರಮವನ್ನು ಹಮ್ಮಿಕೊಂಡಿತು.ಅದರಂತೆ ಡೀಲ್ ಫೌಂಡೇಶನ್ ಸಂಸ್ಥೆಯ ಪ್ರೋಗ್ರಾಮ್ ಮ್ಯಾನೇಜರ್ ಆದ ಉಮಾ ಚಿಲ್ಗೊಡರ್ ಇವರ ನೇತೃತ್ವದಲ್ಲಿ ಪ್ರತಿ ತಾಲೂಕಿನಿಂದ ಒಬ್ಬ ವಿಕಲಚೇತನರು ಮತ್ತು ಮಹಿಳೆಯರನ್ನು ಆಯ್ಕೆ ಮಾಡಿದರು.ಕಾರಣ ಈ ಒಂದು ಕಾರ್ಯಕ್ರಮದ ಯೋಜನೆಗಳು ಪ್ರತಿ ತಾಲೂಕಿನವರಿಗೂ ಅವಕಾಶ ಸಿಗಬೇಕು ಎಂಬ ಉದ್ದೇಶದಿಂದ ಪ್ರತಿ ತಾಲೂಕಿಗೆ ಒಬ್ಬರಂತೆ ಆಯ್ಕೆ ಮಾಡಿ ಒಟ್ಟು 25 ವಿಕಲಚೇತನರು ಮತ್ತು ಮಹಿಳೆಯರನ್ನು ಒಳಗೊಂಡ ಸದಸ್ಯರನ್ನು ಆಯ್ಕೆ ಮಾಡಿದರು. ಅದರಲ್ಲಿ 10 ಜನ ವಿಕಲಚೇತನರು ಮತ್ತು 15 ಜನ ಮಹಿಳೆಯನ್ನು ಆಯ್ಕೆ ಮಾಡಿ ಈ ತರಬೇತಿಯನ್ನು ಗದಗ್ ತಾಲೂಕಿನ ರೈತ ವಿಸ್ತರಣಾ ಕೇಂದ್ರದಲ್ಲಿ ತರಬೇತಿಯನ್ನು ಆರಂಭಿಸಿದರು.

ಆಯ್ಕೆಯಾದ ಪ್ರತಿ 25 ಮಹಿಳೆಯರಿಗೆ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯ ವರೆಗೆ 10 ದಿನಗಳ ವರೆಗೆ ಈ ತರಬೇತಿಯನ್ನು ಹಮ್ಮಿಕೊಳ್ಳಲಾಯಿತು.ಅದರಂತೆ ತರಬೇತಿಗೆ ಬರುವ ಪ್ರತಿ ಮಹಿಳೆಯರಿಗೂ ಊಟದ ವ್ಯವಸ್ಥೆ ಮಾಡಿದರು.ಅದು ಡೀಲ್ ಫೌಂಡೇಶನ್ ಸಂಸ್ಥೆಯಿಂದ ಕೃಷಿ ವಿಸ್ತರಣ ಕೇಂದ್ರದಲ್ಲಿ ಆರಂಭ ಸ್ವ ಉದ್ಯೋಗ ಕೇಂದ್ರವನ್ನು ಆರಂಭಿಸಲಾಗಿದೆ.ಅಲ್ಲಿ ಸ್ವಸಹಾಯ ಸಂಘದವರು ರೊಟ್ಟಿ ವ್ಯಾಪಾರ ಮಾಡುತ್ತಿದ್ದಾರೆ.ಅವರಿಗೆ ಹತ್ತು ದಿನಗಳವರೆಗೆ ಊಟದ ವ್ಯವಸ್ಥೆಯನ್ನು ಮಾಡಿಕೊಡಬೇಕೆಂದು ಒಪ್ಪಿಸಿದರು. ಇದರಿಂದ ಅವರಿಗೂ ಉದ್ಯೋಗಕ್ಕೆ ಅನುಕೂಲವಾಯಿತು.ಪ್ರತಿದಿನ ತರತರದ ಅಡುಗೆ ಮಾಡಿ ಎಲ್ಲರಿಗೂ ಊಟದ ವ್ಯವಸ್ಥೆ ಮಾಡಿದರು.

ಈ ತರಬೇತಿಯ ಹತ್ತು ದಿನಗಳವರೆಗೆ ಪ್ರತಿದಿನವೂ ಒಂದೊಂದಾಗಿ ಕಲಿಸಿಕೊಟ್ಟರು. ಮೊದಲ ದಿನ ಟೈಲರಿಂಗ್ ಮಷೀನ್ ಜೋಡಿಸುವುದರ ಬಗ್ಗೆ ರಾಜಕುಮಾರ್ ಸರ್ ಎನ್ನುವವರು ಡೆಮೋ ಮಾಡಿ ಹೇಳಿಕೊಡುತ್ತಾ ಮಹಿಳೆಯರಿಗೆ ಅವರ ಟೈಲರಿಂಗ್ ಮಷೀನ್ ಅನ್ನು ಜೋಡಿಸಲು ಹೇಳಿಕೊಟ್ಟರು.ನಂತರ ಎರಡನೇ ದಿನ ಡೀಲ್ ಫೌಂಡೇಶನ್ ವತಿಯಿಂದ ಮೇವುಂಡಿ ಗ್ರಾಮದಲ್ಲಿ ವಿಕಲಚೇತನರಿಗೆ ಮತ್ತು ಮಹಿಳೆಯರಿಗೆ ಉಚಿತ ಟೈಲರಿಂಗ್ ತರಬೇತಿಯನ್ನು ನೀಡಲಾಗುತ್ತಿದೆ. ಅಲ್ಲಿ ಜ್ಯೋತಿ ಎನ್ನುವವರು ತರಬೇತಿಯನ್ನು ನೀಡುತ್ತಿದ್ದಾರೆ. ಅವರು ಕೂಡ ಈ ಹತ್ತು ದಿನಗಳ ಟೈಲರಿಂಗ್ ತರಬೇತಿಯಲ್ಲಿ ಮಹಿಳೆಯರಿಗೆ ಹೊಲಿಗೆ ಹಾಕುವುದು, ಡ್ರೆಸ್ ಹೊಲಿಯುವುದು,ಚಿಕ್ಕ ಮಕ್ಕಳ ಬಟ್ಟೆ ಹೊಲಿಯುವುದು ಹೇಗೆ ಎಂಬುದನ್ನು ಒಂದೊಂದಾಗಿ ಪ್ರತಿದಿನ ಹೇಳಿಕೊಡುತ್ತಾ ಹೋದರು.ಈ ತರಬೇತಿಯನ್ನು ನೀಡುವುದರ ಮೂಲ ಉದ್ದೇಶ ವಿಕಲಚೇತನರಿಗೆ ಹೊರಗಡೆ ಹೋಗಿ ಕೆಲಸ ಮಾಡಲು ಆಗುವುದಿಲ್ಲ ಈ ರೀತಿ ತರಬೇತಿ ತೆಗೆದುಕೊಂಡು ಮನೆಯಲ್ಲಿ ಇದ್ದು ಬಟ್ಟೆ ಒಲಿಯುವುದರಿಂದ ತಮ್ಮ ಜೀವನಕ್ಕೆ ಆಧಾರವಾಗುತ್ತದೆ ಜೊತೆಗೆ ಕೆಲ ವಿಕಲಚೇತನರು ಬಡತನ ಪರಿಸ್ಥಿತಿಯಲ್ಲಿ ಇರುತ್ತಾರೆ ಅವರಿಗೆ ಕಲಿಯಬೇಕು ಎಂಬ ಆಸೆ ಇರುತ್ತದೆ ಆದರೆ ಆರ್ಥಿಕ ಪರಿಸ್ಥಿತಿ ಅವರನ್ನು ನಿರಾಶ ಮಾಡಿರುತ್ತದೆ. ಈ ರೀತಿ ತರಬೇತಿಯಲ್ಲಿ ಭಾಗವಹಿಸಿದರೆ ಅವರಿಗೂ ಅನುಕೂಲವಾಗುತ್ತದೆ ಜೊತೆಗೆ ತರಬೇತಿಯ ನಂತರ ಉಚಿತ ಟೈಲರಿಂಗ್ ಮಷೀನ್ ನೀಡುತ್ತಿರುವುದರಿಂದ ವಿಕಲಚೇತನರಿಗೆ ಮತ್ತು ಮಹಿಳೆಯರಿಗೆ ಇನ್ನೂ ಅನುಕೂಲವಾಗುತ್ತದೆ. ಜೊತೆಗೆ ತರಬೇತಿಯ ನಂತರ ಸರ್ಟಿಫಿಕೇಟ್ ಕೂಡ ನೀಡುವುದರಿಂದ ಮುಂದೆ ಸರ್ಕಾರದ ವತಿಯಿಂದ ಯಾವುದಾದರೂ ಯೋಜನೆಗಳಿಗೆ ಅಪ್ಲಿಕೇಶನ್ ಹಾಕುವುದಕ್ಕೆ ಅನುಕೂಲವಾಗುತ್ತದೆ. ಈ ರೀತಿಯ ಎಲ್ಲ ಉದ್ದೇಶಗಳಿಂದ ಈ ತರಬೇತಿಯನ್ನು ಹಮ್ಮಿಕೊಳ್ಳಲಾಯಿತು.

ಈಗಿನ ಸಮಾಜದಲ್ಲಿ ಉಚಿತವಾಗಿ ಇಷ್ಟು ಟೈಲರಿಂಗ್ ಮಷೀನ್ ಗಳನ್ನು ನೀಡುವುದು ಕಷ್ಟ ಆದರೆ ವಿಕಲಚೇತನರಿಗೆ ಮತ್ತು ಮಹಿಳೆಯರ ಸ್ವಾವಲಂಬನೆ ಜೀವನಕ್ಕೆ ಸಹಾಯಕವಾಗಲಿ ಎಂದು ಈ ತರಬೇತಿಯ ಮೂಲಕ ಉಚಿತ ಟೈಲರಿಂಗ್ ಮಷೀನ್ ನೀಡಲಾಯಿತು.ಈ ತರಬೇತಿಯಿಂದ ಮಷಿನ್ ಜೋಡಿಸಲು ಹೇಗೆ ಎಂಬುದನ್ನು ಹೇಳಿಕೊಡಲು ಬಂದೆ ರಾಜಕುಮಾರ್ ಸರ್ ಇವರಿಗೂ ಕೂಡ ಈ ತರಬೇತಿಯಿಂದ ಉದ್ಯೋಗ ಸಿಕ್ಕಂತಾಯಿತು.ಜೊತೆಗೆ ಡ್ರೆಸ್, ಬ್ಲೌಸ್ ಈ ರೀತಿ ರೆಡಿಮೇಡ್ ಬಟ್ಟೆ ತಯಾರಿಸಿ ಮಾರಾಟ ಮಾಡುವುದರಿಂದ ಅವರಿಗೂ ಆರ್ಥಿಕವಾಗಿ ಸಹಾಯವಾಗುತ್ತದೆ.ಜೊತೆಗೆ ಗದಗ್ ತಾಲೂಕಿನಲ್ಲಿ ಅಷ್ಟೇ ಅಲ್ಲದೆ ಬೇರೆ ಬೇರೆ ಜಿಲ್ಲೆಗಳಲ್ಲಿಯೂ ಈ ರೀತಿಯ ತರಬೇತಿ ಕಾರ್ಯಗಾರವನ್ನು ಹಮ್ಮಿಕೊಂಡು ವಿಕಲಚೇತನರಿಗೆ ಮತ್ತು ಮಹಿಳೆಯರಿಗೆ ಅನುಕೂಲ ಮಾಡುತ್ತಿದ್ದಾರೆ.

ಹೀಗೆ ಕೊನೆಯ ದಿನ ಡೀಲ್ ಫೌಂಡೇಶನ್ ಸಂಸ್ಥೆ ವತಿಯಿಂದ ಉಮಾ ಚಿಲ್ ಗೌಡರ್ ಇವರ ಸಹಯೋಗದಲ್ಲಿ ಪ್ರತಿ ಮಹಿಳೆಯರಿಗೂ ಮತ್ತು ವಿಕಲಚೇತನರಿಗೆ ಸರ್ಟಿಫಿಕೇಟ್ ನೀಡಿ ಎಲ್ಲರಿಗೂ ಮುಂದಿನ ಭವಿಷ್ಯದಲ್ಲಿ ಆರ್ಥಿಕವಾಗಿ ಬೆಳೆಯಿರಿ ಎಂದು ಹಾರೈಸಿ ಈ ಹತ್ತು ದಿನದ ತರಬೇತಿಯನ್ನು ಮುಕ್ತಾಯಗೊಳಿಸಿದರು.

ಈ ರೀತಿಯಾಗಿ ಡೀಲ್ ಫೌಂಡೇಶನ್ ಸಂಸ್ಥೆ ಮತ್ತು ಉಷಾ ಶಿಲೈ ಸಂಸ್ಥೆಯ ಸಹಯೋಗದಲ್ಲಿ ವಿಕಲಚೇತನರಿಗೆ ಮತ್ತು ಮಹಿಳೆಯರಿಗೆ ಆರ್ಥಿಕವಾಗಿ ಜೀವನ ನಡೆಸಲು ಟೈಲರಿಂಗ್ ತರಬೇತಿಯ ಮೂಲಕ ಅವರ ಜೀವನಕ್ಕೆ ಬೆಳಕಾಗುವಂತೆ ಮಾಡಿದರು.

ಈ ಬ್ಲಾಗ್ ಗೆ ಸಂಬಂಧಿಸಿದಂತೆ ಯಾವುದೇ ನಿರ್ದಿಷ್ಟ ಪ್ರಶ್ನೆಗಳಿದ್ದರೆ ಅಥವಾ ಯಾವುದೇ ಸಹಾಯಕ್ಕಾಗಿ Info@deal-foundation. com ನಲ್ಲಿ ತಿಳಿಸಿರಿ ಮತ್ತು ನಾವು ಮಾಡುವ ಕೆಲಸದ ಕುರಿತು ಇನ್ನಷ್ಟು ತಿಳಿದುಕೊಳ್ಳಲು www.deal-foundation ಗೆ ಲಾಗಿನ್ ಮಾಡಿ.

ಧನ್ಯವಾದಗಳು

Get a report of all our on field work every month.

You have Successfully Subscribed!

Share This