Select Page

ರಾಕೇಶ

ರಾಕೇಶನ ಬಾಳಿಗೆ ಬೆಳಕು ನೀಡಿತು ಸಂಸ್ಥೆ:

 ಹುಬ್ಬಳ್ಳಿಯಿಂದ ಬಂದ ರಾಕೇಶನಿಗೆ ಹುಟ್ಟಿನಿಂದಲೇ ಬಂದ ಶಾರೀರಿಕ ದೌರ್ಬಲ್ಯತೆ ಒಂದು ಸವಾಲಾಗಿ ಪರಿಣಮಿಸಿತ್ತು. ರಾಕೇಶನ ಶಾರೀರಿಕ ದೌರ್ಬಲ್ಯ ದೈನಂದಿನ ಕೆಲಸಗಳನ್ನು ಮಾಡುವಲ್ಲಿ ಅಡ್ಡ ಬರುತ್ತಿತ್ತು. ಆದರೆ ಈ ಎಲ್ಲ ದೈಹಿಕ, ಸಾಂಸ್ಥಿಕ ಹಾಗೂ ಸಾಮಾಜಿಕ ಅಡೆ-ತಡೆಗಳನ್ನು ಮೀರಿ ರಾಕೇಶ ಆರ್ಥಿಕ ವಲಯದಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳಲು ಬಯಸಿದ್ದನು. ರಾಕೇಶನ ಬಿ.ಸಿ.ಎ ಪದವಿ ಶಿಕ್ಷಣ ಮುಗಿದ ನಂತರ ಡೀಲ್ ಫೌಂಡೇಶನ್ ಸಂಸ್ಥೆಯು ತನ್ನ ನಗರ ಯೋಜನೆಯ ತರಬೇತಿ ಕಾರ್ಯಕ್ರಮಕ್ಕೆ ಶಿಬಿರಾರ್ಥಿಯಾಗಿ ಆಹ್ವಾನ ನೀಡಿತ್ತು

“ನಾನು ಕೂಡ ಎಲ್ಲರಂತೆ ಕೆಲಸದಲ್ಲಿ ತೊಡಗಿಸಿಕೊಂಡು, ಸಮಾಜದ ಮುಖ್ಯವಾಹಿನಿಯಲ್ಲಿ ಎಲ್ಲರಂತೆ ಬಾಳಲು ಇಚ್ಚಿಸುತ್ತೇನೆ ಜೀವನದಲ್ಲಿ ಏನಾದರೂ ಸಾಧಿಸಲು ಬಯಸುತ್ತೇನೆ. ಆದರೆ ನನ್ನ ಶಾರೀರಿಕ ದೌರ್ಬಲ್ಯದಿಂದಾಗಿ ಅದು ಅಸಾಧ್ಯ” ಎಂದು ತರಬೇತಿಯ ಮುನ್ನ ರಾಕೇಶ್ ಹೇಳುತ್ತಿದ್ದನು.

ಡೀಲ್ ಫೌಂಡೇಶನ್ ನಗರ ಯೋಜನೆಯ ತರಬೇತಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ ರಾಕೇಶನಿಗೆ ವಿವಿಧ ಸಂಸ್ಥೆಗಳ ಉದ್ಯೋಗ ಅಧಿಕಾರಿಗಳನ್ನು ಭೇಟಿ ಮಾಡುವ ಅವಕಾಶ ಕಲ್ಪಿಸಲಾಯಿತು. ಈ ತರಬೇತಿ ಯಿಂದ ರಾಕೇಶನಿಗೆ ತನ್ನ ಕೌಶಲ್ಯಗಳ ಅಭಿವೃದ್ಧಿ ಹಾಗೂ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಲು ಸಹಕಾರಿಯಾಯಿತು. ತರಬೇತಿಯ ಮೂಲಕ ರಾಕೇಶನಿಗೆ ನಾರ್ದನ್ಆರ್ಕ ಸಂಸ್ಥೆಯಿಂದ ಉದ್ಯೋಗವಕಾಶ ದೊರೆಯಿತು.

ನಾರ್ಥನ್ ಆರ್ಕ ಕಂಪನಿಯ ಮ್ಯಾನೇಜರ್ ಶ್ರೀ ರಾಮನಾಥನ್ ಅವರು ರಾಕೇಶ್ ಕುರಿತು ಹೇಳಿದ್ದೇನೆಂದರೆ. “ರಾಕೇಶ್ ವಿಕಲಚೇತನರು ಎಂದು ಅನಿಸಲೇ ಇಲ್ಲ ಉದ್ಯೋಗಕ್ಕೆ ರಾಕೇಶ್ ಸೂಕ್ತ ಅಭ್ಯರ್ಥಿ ಎಂದು ಚರ್ಚೆಯ ನಂತರ ನಿರ್ಧರಿಸಿದೆವು”