Select Page

ಶಾಮ

ಶಾಮನ ಯಶಸ್ಸಿನ ಕಥೆ :

 ಕಠಿಣ ಜೀವನ ಮತ್ತು ಅನೇಕ ಹತಾಶೆಗಳ ಮಧ್ಯೆ ಶಾಮನು ಡೀಲ್ ಫೌಂಡೇಶನ್ ಗೆ ಪರಿಚಯಿಸಲ್ಪಟ್ಟನು. ಡೀಲ್ ಫೌಂಡೇಶನ್ನಿನ ನಗರ ಯೋಜನೆಯ ತರಬೇತಿ ಕಾರ್ಯಕ್ರಮಕ್ಕೆ ಸೇರಿದ ನಂತರ ಆತನು ತನ್ನ ಸಾಮರ್ಥ್ಯಗಳನ್ನು ಅರಿತುಕೊಂಡು ಇದರೊಂದಿಗೆ ಯಾವ ಉದ್ಯೋಗವಕಾಶಗಳನ್ನು ಎಲ್ಲಿ ಹಾಗೂ ಯಾವ ರೀತಿಯಲ್ಲಿ ಹುಡುಕಬೇಕು ಎನ್ನುವುದನ್ನು ತಿಳಿದುಕೊಂಡನು. ತಾನು ಉದ್ಯೋಗದ ಅರ್ಜಿಯನ್ನು ಹೇಗೆ ಭರ್ತಿ ಮಾಡಬೇಕು ಹಾಗೂ ಉದ್ಯೋಗ ಸಂದರ್ಶನಗಳಲ್ಲಿ ತನ್ನನ್ನು ತಾನು ಹೇಗೆ ಪ್ರಸ್ತುತಪಡಿಸಬೇಕು ಎಂಬುದನ್ನು ಕಲಿತನು.

ಶ್ಯಾಮನಿಗೆ ದೈಹಿಕ ಬಲಹೀನತೆ ಇದ್ದೂ ಈ ಹಿಂದೆ ಇದ್ದ ಎರಡು ಉದ್ಯೋಗವಕಾಶಗಳು ಕೈತಪ್ಪಿ ಹೋಗಿದ್ದವು. ಅವರ ಕೌಶಲ್ಯ, ಸಾಮರ್ಥ್ಯ ಹಾಗೂ ಅವರ ಕೆಲಸ ಮಾಡುವ ಪಾತ್ರಗಳ ನಡುವೆ ಹೊಂದಾಣಿಕೆ ಇಲ್ಲದಿದ್ದ ಕಾರಣಕ್ಕಾಗಿ ಹಿಂದಿನ ಎರಡು ಉದ್ಯೋಗವಕಾಶಗಳು ಕೈ ತಪ್ಪಿ ಹೋದವು. “ನಾನು ತುಂಬಾ ಶ್ರದ್ಧೆಯಿಂದ ಕೆಲಸ ಮಾಡಲು ಹಾಗೂ ನನ್ನ ಕೆಲಸದ ಪಾತ್ರದಲ್ಲಿ ಯಶಸ್ವಿಯಾಗಲು ಬಯಸಿದ್ದೆ. ನನ್ನ ಲಕ್ಷ್ಯ ಹಾಗೂ ವಿಶ್ವಾಸವನ್ನು ಕಳೆದುಕೊಂಡಿದೆ.” ಎಂದು ತರಬೇತಿಯ ಮುನ್ನ ಶ್ಯಾಮ ಹೇಳುತ್ತಿದ್ದನು ಡೀಲ್ ಫೌಂಡೇಶನ್ ಸಂಸ್ಥಾಪಕರಾದಂತ ಎಲಿಜಬೆತ್ ಅವರ ಸಹಾಯದಿಂದ ಶ್ಯಾಮ ತನ್ನ ಆತ್ಮವಿಶ್ವಾಸವನ್ನು ಮರಳಿ ಪಡೆದನು. ಎಲಿಜಬೆತ್ ರವರು ಶ್ಯಾಮನಿಗೆ ತನಗಿರುವ ವಿವಿಧ ಆಯ್ಕೆಗಳು ಹಾಗೂ ತನ್ನ ಗುರಿಯ ಬಗ್ಗೆ ಅರಿವು ಮಾಡಿಸಿದರು. ಅದರ ಪ್ರಕಾರ ಶ್ಯಾಮನು ಮಾನವ ಸಂಪನ್ಮೂಲ ವ್ಯವಸ್ಥಾಪಕನಾಗಿ ತರಬೇತಿ ಪಡೆದು ಲಹೂನಾ ಸಂಸ್ಥೆಯಲ್ಲಿ ವ್ಯವಸ್ಥಾಪಕ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿ ತನ್ನ ಊರಾದ ಕೊಯಮತ್ತೂರಿಗೆ ಮರಳಿದ್ದಾನೆ.

ಸವಾಲುಗಳನ್ನು ಮೆಟ್ಟಿಲು ಮಾಡಿಕೊಂಡ ನಿತ್ಯಾಳ ಜೀವನದ ಉದಾರಣೆ.

ಬೆಂಗಳೂರಿನ “ಆಲಜಿ” ಕಂಪನಿಯಲ್ಲಿ ಉದ್ಯೋಗ ಅಧಿಕಾರಿಯಾಗಿರುವ ತಮಿಳುನಾಡಿನ ಈರೊಡೆ ನಗರದಿಂದ ಬಂದವರು ತೀವ್ರದೃಷ್ಟಿ ದುರ್ಬಲತೆಯನ್ನು ಹೊಂದಿದ್ದಾರೆ. ಡೀಲ್ ಫೌಂಡೇಶನ್ ನಗರ ಯೋಜನೆಯ ತರಬೇತಿ ಕಾರ್ಯಕ್ರಮದ ಮೂಲಕ ತನ್ನ ಕೌಶಲ್ಯಗಳನ್ನು ಅಭಿವೃದ್ಧಿ ಪಡಿಸಿಕೊಂಡು ಹಾಗೂ ಯೋಜನೆಯ ಪ್ರಾಯೋಗಿಕ ನೆರವಿನಿಂದಾಗಿ ಅವರು ಈ ಮೇಲ್ಕಂಡ ಸಂಸ್ಥೆಯಲ್ಲಿ ಉದ್ಯೋಗವನ್ನು ಪಡೆಯುವಲ್ಲಿ ಸಫಲರಾದರು. ಡೀಲ್ ಫೌಂಡೇಶನ್ ನಗರ ಯೋಜನೆಯ ತರಬೇತಿ ಕಾರ್ಯಕ್ರಮದ ಸಂಯೋಜಕರು ನಿತ್ಯಾಳಿಗೆ ತನ್ನ ದುರ್ಬಲತೆಯನ್ನು ಸವಾಲಾಗಿ ಸ್ವೀಕರಿಸಿ ತರಬೇತಿ ಪೂರ್ಣಗೊಳಿಸಲು ಪ್ರೋತ್ಸಾಹ ನೀಡಿದರು. ತರಬೇತಿ ಕಾರ್ಯಕ್ರಮದ ತಂಡ ನಿತ್ಯಾಳನ್ನು ಬೆಂಬಲಿಸಿ ತರಬೇತಿಯ ಎಲ್ಲ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಪೂರೈಸಲು ಪ್ರೋತ್ಸಾಹಿಸಿತು. ನಿತ್ಯಾ ಯಶಸ್ವಿಯಾಗಿ ತರಬೇತಿಯನ್ನು ಪೂರೈಸಿದ ನಂತರ ಇ.ಸಿ.ಎಸ್. ಸಂಸ್ಥೆಯಲ್ಲಿ ತರಬೇತಿ ಅಧಿಕಾರಿಯಾಗಿ ಉದ್ಯೋಗ ಪಡೆಯುವಲ್ಲಿ ಯಶಸ್ವಿಯಾದರು. ಇವತ್ತು ನಿತ್ಯಾ ಇ.ಸಿ.ಎಸ್. ಸಂಸ್ಥೆಯನ್ನು ತೊರೆದು “ಆಲಜಿ” ಸಂಸ್ಥೆಯಲ್ಲಿ ಉನ್ನತ ಮಟ್ಟದ ಉದ್ಯೋಗ ಅಧಿಕಾರಿಯಾಗಿ ಸೇರಿಕೊಂಡು ಯಶಸ್ವಿಯಾಗಿದ್ದಾರೆ.