ವಿಕಲಚೇತನ ಉದ್ಯಮಶೀಲತೆ ಮತ್ತು ನಾಯಕತ್ವವು ಸ್ವಸಹಾಯ ಮಾದರಿಯಲ್ಲಿ ತೊಡಗಿಸಿಕೊಂಡಿದೆ. ಅಲ್ಲಿ ವಿಕಲಚೇತನರನ್ನು ಬೆಂಬಲಿಸಲಾಗುತ್ತದೆ. ಚೇತರಿಸಿಕೊಳ್ಳುವ ಮತ್ತು ಸಮರ್ಥನೀಯ ಸಮುದಾಯಗಳನ್ನು ನಿರ್ಮಿಸಲು ಸಹಾಯ ಮಾಡಿದೆ. ಡೀಲ್ ಫೌಂಡೇಶನ್ ಸಂಸ್ಥೆಯು ವಿಕಲಚೇತನರನ್ನು ಹೊರಗಿಡುವಿಕೆ ಮತ್ತು ಪ್ರತ್ಯೇಕತೆಯಿಂದ ಹೊರಹೊಮ್ಮಲು ಮತ್ತು ಅಂತರ್ಗತ ಭವಿಷ್ಯದ ಭರವಸೆಯನ್ನು ಹುಟ್ಟು ಹಾಕಲು ಸಹಾಯ ಮಾಡಿದೆ.

   ಅದಕ್ಕಾಗಿ ಏಳು ತಾಲೂಕಿನಲ್ಲಿ ಲವ್ಲಿವುಡ್ ಆಫೀಸರ್ಸ್ ವಿಕಲಚೇತನರನ್ನು ಗುರುತಿಸಿ ಅವರಿಗೆ ವಿಕಲಚೇತನರಿಗಾಗಿ ಇರುವಂತಹ ಸೌಲಭ್ಯಗಳ ಮಾಹಿತಿ ನೀಡಿ ಜೊತೆಗೆ ಸೌಲಭ್ಯಗಳು ಸಿಗುವಂತೆ ಮಾಡಿ ಎಲ್ಲಾ ಕ್ಷೇತ್ರದಲ್ಲಿ ವಿಕಲಚೇತನರು ಮುಂದೆ ಬರಬೇಕು ಎಂಬ ಆಶಯವನ್ನು ಡೀಲ್ ಫೌಂಡೇಶನ್ ಸಂಸ್ಥೆಯು ಹೊಂದಿದೆ. ಅದಕ್ಕೆ ತಕ್ಕಂತೆ ಡೀಲ್ ಫೌಂಡೇಶನ್ ಸಂಸ್ಥೆಯು ವಿಕಲಚೇತನರಿಗೆ ಬೆಳಕಿನ ಕಿರಣವಾಗಿ ನಿಂತಿದೆ. ವಿಕಲಚೇತನರಿಗೆ ಆತ್ಮವಿಶ್ವಾಸ ಮೂಡಿಸಿ ಅವರಿಗೆ ಜೀವನ ನಡೆಸಲು ಡೀಲ್ ಫೌಂಡೇಶನ್ ನಿಂದ ಸಿಗುವ ತರಬೇತಿಗಳು ಅಂದರೆ ಸ್ವಯಂ ಉದ್ಯೋಗ ಮಾಡಲು ಕೃಷಿ ತರಬೇತಿ, ಟೈಲರಿಂಗ್ ತರಬೇತಿ,ಹೈನುಗಾರಿಕೆ ತರಬೇತಿ,ಕುಂಕುಮ ತರಬೇತಿ ಹೀಗೆ ಮುಂತಾದ ತರಬೇತಿಗಳ ಮಾಹಿತಿಯನ್ನು ವಿಕಲಚೇತನರಿಗೆ ನೀಡುತ್ತಾರೆ.

   ವಿಕಲಚೇತನರ ಸ್ವಸಹಾಯ ಸಂಘ ರಚನೆ ಮಾಡಿ ಅವರಿಗೆ ಸ್ವಯಂ ಉದ್ಯೋಗದ ತರಬೇತಿ ನೀಡಿ ಬ್ಯಾಂಕ್ ನಿಂದ ಸಾಲ ಸೌಲಭ್ಯ ಕೊಡಿಸಿ ಅವರ ಆರ್ಥಿಕ ಜೀವನವನ್ನು ಕಟ್ಟಿಕೊಳ್ಳುವಂತೆ ಡೀಲ್ ಫೌಂಡೇಶನ್ ಸಂಸ್ಥೆ ಮಾಡುತ್ತದೆ.ಹೀಗೆ ಅನೇಕ ವಿಕಲಚೇತನರು ಸುಸ್ಥಿರ ಜೀವನೋಪಾಯ ಕಟ್ಟಿಕೊಂಡು ಈ ಸಮಾಜದಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ.ಇವರ ಏಳಿಗೆಗಾಗಿ ಬೆನ್ನೆಲುಬಾದ ಡೀಲ್ ಫೌಂಡೇಶನ್ ಸಂಸ್ಥೆಯ ಬಗ್ಗೆ ಮತ್ತು ತಮ್ಮ ಜೀವನದ ಕಷ್ಟ ಸುಖಗಳ ಬಗ್ಗೆ ವಿಕಲಚೇತನರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ ಅದರಲ್ಲಿ ಶಿವಪ್ಪ ಪರಸಪ್ಪ ಈರಿಗೇರಿ ಇವರು ತಮ್ಮ ಅಭಿಪ್ರಾಯವನ್ನು ಹೇಳಿದ್ದಾರೆ.

   ಇವರು ಮೂಲತಃ ಶಿರಹಟ್ಟಿ ತಾಲೂಕಿನ ಪರಸಾಪುರ ಗ್ರಾಮದವರು.ಇವರದು ಅವಿಭಕ್ತ ಕುಟುಂಬವಾಗಿದೆ.ಇವರು ಹುಟ್ಟಿ ಬೆಳೆದದ್ದು ತಂದೆ ತಾಯಿ ಇಬ್ಬರು ಕೃಷಿ ಕುಟುಂಬದಿಂದ ಬಂದವರು. ಇವರು ಹುಟ್ಟಿನಿಂದಲೇ ದೈಹಿಕ ವಿಕಲಚೇತನತೆಯನ್ನು ಹೊಂದಿದವರು. ಇವರ ಕುಟುಂಬ ಬಡತನ ಪರಿಸ್ಥಿತಿಯಿಂದಲೇ ಕೂಡಿತ್ತು ಆದರೂ ಇವರ ತಂದೆ ತಾಯಿ ನನ್ನ ಮಗನು ಶಾಲೆಯಲ್ಲಿ ಮುಂದೆ ಬರಬೇಕು ಎಂಬ ಅಭಿಲಾಶಯದಿಂದ ಶಾಲೆಗೆ ಸೇರಿಸಿದರು. ಇವರು ಬಡತನ ಪರಿಸ್ಥಿತಿಯೊಂದಿಗೆ ಬೆಳೆದು ಶಾಲಾ ಶಿಕ್ಷಣವನ್ನು ಹತ್ತನೇ ತರಗತಿಯ ವರೆಗೆ ಪೂರ್ಣಗೊಳಿಸಲು ಸಾಕಷ್ಟು ಅದೃಷ್ಟಶಾಲಿಯಾಗಿದ್ದಾರೆ. ಕೃಷಿಕ ಮನೆತನದವರಾಗಿದ್ದರಿಂದ ತಂದೆ ತಾಯಿಯೊಂದಿಗೆ ಹೊಲದಲ್ಲಿ ಕೆಲಸ ಮಾಡುತ್ತಿದ್ದರು. ಮುಂದೆ ವಿವಾಹವಾಗಿ ಇಬ್ಬರು ಮಕ್ಕಳೊಂದಿಗೆ ತಮ್ಮ ಕುಟುಂಬವನ್ನು ನಡೆಸಿದರು.

   ತಂದೆ ತಾಯಿ ತೀರಿಕೊಂಡ ನಂತರ ಆರ್ಥಿಕ ಪರಿಸ್ಥಿತಿಯು ಕಷ್ಟವಾಯಿತು ಆದರೂ ಹೊಲದಲ್ಲಿ ಕೆಲಸ ಮಾಡುತ್ತಾ ಜೀವನ ಸಾಗಿಸಿದರು. ದಿನ ಕಳೆದ ಹಾಗೆ ಕೈಕಾಲುಗಳು ದುರ್ಬಲಗೊಂಡು ಕಡಿಮೆಯಾದ ಮೂಳೆಯ ಸಾಂದ್ರತೆಯಿಂದಾಗಿ ಹೊಲದಲ್ಲಿ ಕೆಲಸ ಮಾಡಲು ಸಾಧ್ಯವಾಗಲಿಲ್ಲ. ಕುಟುಂಬ ನಡೆಸಲು ಮತ್ತು ಮಕ್ಕಳ ಮುಂದಿನ ಭವಿಷ್ಯಕ್ಕಾಗಿ ಏನಾದರೂ ಮಾಡಬೇಕು ಎಂಬ ಛಲದಿಂದ ಕಿರಾಣಿ ಅಂಗಡಿಯನ್ನು ಇಟ್ಟು ವ್ಯಾಪಾರ ಮಾಡುತ್ತಾ ಹೋದರು ಆದರೆ ಇದರಿಂದ ಬಂದ ಆದಾಯದಿಂದ ಕುಟುಂಬ ನಡೆಸಲು ಕಷ್ಟವಾಯಿತು.ಕಿರಾಣಿ ಅಂಗಡಿಯನ್ನು ದೊಡ್ಡ ಪ್ರಮಾಣದಲ್ಲಿ ಮಾಡಬೇಕು ಎಂಬ ಅಭಿಲಾಷೆ ಇವರದಾಗಿತ್ತು ಆದರೆ ಆರ್ಥಿಕ ಪರಿಸ್ಥಿತಿಯು ಬಡತನದಲ್ಲಿತ್ತು. ಹೀಗಿರುವಾಗ ನಮ್ಮ ಡೀಲ್ ಫೌಂಡೇಶನ್ ಸಂಸ್ಥೆಯ ಶಿರಹಟ್ಟಿ ತಾಲೂಕಿನ ಲವ್ಲೀವುಡ್ ಆಫೀಸರ್ ಆದ ರೇಖಾ ಮಡ್ಡಿ ಇವರನ್ನು ಗುರುತಿಸಿ ನಮ್ಮ ಡೀಲ್ ಫೌಂಡೇಶನ್ ಸಂಸ್ಥೆಯ ಕಾರ್ಯ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಆರ್ಥಿಕ ಅಭಿವೃದ್ಧಿ ಹೊಂದಬಹುದು ಎಂಬ ಅಭಿಲಾಷೆಯನ್ನು ಮೂಡಿಸಿದರು.

   ಹೀಗೆ 10 ಜನ ವಿಕಲಚೇತನರನ್ನು ಸೇರಿಸಿ  “ನಂದೀಶ್ವರ ವಿಕಲಚೇತನರ ಸ್ವಸಹಾಯ ಸಂಘ” ರಚನೆ ಮಾಡಿ ಅವರಿಗೆ ಡೀಲ್ ಫೌಂಡೇಶನ್ ಸಂಸ್ಥೆಯ ಲವ್ಲಿವುಡ್ ತರಬೇತಿಗಳಾದ 2016ರ ಡಿಸೆಬಿಲಿಟಿ ಅವೇರ್ನೆಸ್ ತರಬೇತಿ, ಹೈನುಗಾರಿಕೆ ತರಬೇತಿ, ಪೇಪರ್ ಬ್ಯಾಗ್ ತರಬೇತಿ,ಕುಂಕುಮ ತರಬೇತಿ, ಜೇನುಹುಳ ಸಾಕಾಣಿಕೆ, ಕೃಷಿ ತರಬೇತಿ ಹೀಗೆ ಹಲವಾರು ಸ್ವಯಂ ಉದ್ಯೋಗದ ಮಾಹಿತಿಯನ್ನು ನೀಡಿ ತರಬೇತಿ ನೀಡಲಾಯಿತು. ಇದರಿಂದ ಡೀಲ್ ಫೌಂಡೇಶನ್ ಸಹಕಾರದಿಂದ ವಿಕಲ ಚೇತನರು ಜೀವನ ನಡೆಸಲು ಧೈರ್ಯ ತುಂಬಿದಂತಾಯಿತು. ತರಬೇತಿಯ ನಂತರ ಬ್ಯಾಂಕ್ ನಿಂದ ಸಾಲ ಸೌಲಭ್ಯ ಪಡೆದು ಅವರ ಅಭಿಲಾಶಯದಂತೆ ಇನ್ನೂ ದೊಡ್ಡ ಪ್ರಮಾಣದಲ್ಲಿ ಅವರ ಅಂಗಡಿಯನ್ನು ಬೆಳೆಸಲು ಧೈರ್ಯ ಮೂಡಿತು. ಇದರಿಂದ ಅವರ ಕುಟುಂಬವು ಕೂಡ ಆರ್ಥಿಕ ಜೀವನದಲ್ಲಿ ಬೆಳೆಯಲು ಡೀಲ್ ಫೌಂಡೇಶನ್ ಸಂಸ್ಥೆಯು ಬಲವರ್ಧನೆ ಆಯಿತು.

   ಹೀಗೆ ಇವರ ಆಕಾಂಕ್ಷೆಯಂತೆ ಕೆಲವು ವಿಷಯಗಳನ್ನು ಬದಲಾಯಿಸಲು ಬಯಸುತ್ತಾರೆ. ಅದು ವಿಕಲಚೇತನತೆ, ವಿಕಲ ಚೇತನರ ಬಗ್ಗೆ ಸಾಮಾಜಿಕ ವರ್ತನೆಗಳು ಒಬ್ಬರು ಇತರರಿಗೆ ಯೋಗ್ಯರು ಎಂದು ಸಾಬೀತುಪಡಿಸಬೇಕಾಗಿಲ್ಲ ಇವರಂತಹ ಸಣ್ಣ ಉತ್ಪಾದಕರಿಗೆ ಬೆಲೆ ಸಿಗುವಂತೆ ಮಾಡಲು ಏನಾದರೂ ಮಾಡಬೇಕು ಎಂದು ಭಾವಿಸಿದ್ದಾರೆ.

   ಡೀಲ್ ಫೌಂಡೇಶನ್ ಕಾರ್ಯಕರ್ತರಿಂದ ನಾನು ಪಡೆದ ನಿರಂತರ ಬೆಂಬಲ ಮತ್ತು ಪ್ರೋತ್ಸಾಹವು ನನಗೆ ಬಹಳಷ್ಟು ಸಹಾಯ ಮಾಡಿದೆ.ನಿರ್ದಿಷ್ಟವಾಗಿ ಹೇಳುವುದಾದರೆ ನೀವು ಆಯೋಜಿಸಿದ ಕೃಷಿ ಆಧಾರಿತ ಜೀವನೋಪಾಯದ ತರಬೇತಿ ಅವಧಿಗಳು ನನಗೆ ಅಗತ್ಯವಿರುವ ಸರಿಯಾದ ಮಾಹಿತಿ ಮತ್ತು ಬೆಂಬಲವನ್ನು ನಾನು ಸಾಧಿಸಬಹುದು ಎಂಬ ವಿಶ್ವಾಸವನ್ನು ನೀಡಿದೆ. ಅಂತಿಮವಾಗಿ ನನ್ನ ಪರಿಸ್ಥಿತಿಯಲ್ಲಿರುವ ವಿಕಲಚೇತನರಿಗೆ ಸಹಾಯ ಮಾಡಲು ಬಯಸುತ್ತೇನೆ. ಡೀಲ್ ಫೌಂಡೇಶನ್ ಸಂಸ್ಥೆಗೆ ನಾನು ಯಾವಾಗಲೂ ಚಿರಋಣಿಯಾಗಿರುತ್ತೇನೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹೀಗೆ ಹಲವಾರು ವಿಕಲಚೇತನರಿಗೆ ನೆರಳಾಗಿರುವ ಡೀಲ್ ಫೌಂಡೇಶನ್ ಸಂಸ್ಥೆಯ ಬಗ್ಗೆ ವಿಕಲಚೇತನರು ತಮ್ಮ ಮನದಾಳದ ಮಾತನ್ನು ವ್ಯಕ್ತಪಡಿಸಿದ್ದಾರೆ.

   ಹೀಗೆ ಸುಸ್ಥಿರ  ಜೀವನೋಪಾಯದ ಅವಕಾಶಗಳನ್ನು ಉತ್ತೇಜಿಸುವ ಮೂಲಕ ವಿಕಲಚೇತನ ವ್ಯಕ್ತಿಗಳಿಗೆ ಸಹಾಯ ಮಾಡುವ ಅದ್ಭುತ ಕೆಲಸವನ್ನು ಡೀಲ್ ಫೌಂಡೇಶನ್ ಸಂಸ್ಥೆಯು ನಿಜವಾಗಿಯೂ ಮಾಡುತ್ತಿದೆ ಮತ್ತು ವಿಕಲಚೇತನರಲ್ಲಿ ಆತ್ಮವಿಶ್ವಾಸ ಮೂಡಿಸಿ ಉತ್ತಮ ಭವಿಷ್ಯಕ್ಕಾಗಿ ಭರವಸೆಯನ್ನು ತುಂಬಿದೆ.

   ಈ ಬ್ಲಾಗ್ ಗೆ ಸಂಬಂಧಿಸಿದಂತೆ ಯಾವುದೇ ನಿರ್ದಿಷ್ಟ ಪ್ರಶ್ನೆಗಳಿದ್ದರೆ ಅಥವಾ ಯಾವುದೇ ಸಹಾಯಕ್ಕಾಗಿ info@deal foundation.com ನಲ್ಲಿ ತಿಳಿಸಿರಿ ಮತ್ತು ನಾವು ಮಾಡುವ ಕೆಲಸದ ಕುರಿತು ಇನ್ನಷ್ಟು ತಿಳಿದುಕೊಳ್ಳಲು www.deal foundation.com ಗೆ ಲಾಗ್ಇನ್ ಮಾಡಿ.

         ಧನ್ಯವಾದಗಳು

Get a report of all our on field work every month.

You have Successfully Subscribed!

Share This