ವಿಕಲಚೇತನ ವ್ಯಕ್ತಿಗಳ ಕುಟುಂಬಗಳಿಗೆ ಸುಸ್ಥಿರ ಜೀವ ನೋಪಾಯವನ್ನು ಸೃಷ್ಟಿಸಲು ಡೀಲ್ ಫೌಂಡೇಶನ್ ಸಂಸ್ಥೆಯು ಕೈಗೊಂಡ ಸಮುದಾಯ ಸಂಘಟನೆ ಮತ್ತು ಅಭಿವೃದ್ಧಿ ಕಾರ್ಯಗಳ ಪರಿಣಾಮವಾಗಿ ವಿಕಲಚೇತನರ ಸ್ವಸಹಾಯ ಗುಂಪುಗಳನ್ನು ರಚಿಸಲಾಗುತ್ತಿದೆ.

ಅದರಂತೆ ಪ್ರತಿ ತಾಲೂಕಿನಲ್ಲಿ ವಿಕಲಚೇತನರಿಗಾಗಿ ಡೀಲ್ ಫೌಂಡೇಶನ್ ಸಂಸ್ಥೆಯು ಅವರ್ನೆಸ್ ಕಾರ್ಯಕ್ರಮವನ್ನು ಕೈಗೊಂಡಿದೆ. ಅದೇ ರೀತಿ ಗದಗ್ ತಾಲೂಕಿನಲ್ಲಿಯೂ ಈ ಕಾರ್ಯಕ್ರಮವನ್ನು ಮಾಡಿದಾಗ ಆ ಕಾರ್ಯಕ್ರಮಕ್ಕೆ ನಾಗಾವಿ ಯಿಂದ ವಿಕಲಚೇತನ ಮಕ್ಕಳು ಬಂದಿದ್ದರು. ಡೀಲ್ ಫೌಂಡೇಶನ್ ಕಾರ್ಯಗಳ ಬಗ್ಗೆ ತಿಳಿದುಕೊಂಡು ಆ ಮಕ್ಕಳು ಡೀಲ್ ಫೌಂಡೇಶನ್ ಸಂಸ್ಥೆಯ ಟ್ರೈನಿಂಗ್ ಕೋ ಆರ್ಡಿನೆಟರ್ ಆದ ಶಿವುಕುಮಾರ್ ಶಿರೋಳ್ ಇವರನ್ನು ಕಾರ್ಯಕ್ರಮದಲ್ಲಿ ಭೇಟಿ ಮಾಡಿ ಅವರು ಓದುತ್ತಿರುವ ವಿಶೇಷ ಚೇತನ ಮಕ್ಕಳ ಶಾಲೆಯ ಬಗ್ಗೆ ತಿಳಿಸಿ ನಮ್ಮ ಶಾಲೆಗೆ ಭೇಟಿ ನೀಡಿ ಎಂದು ಕೇಳಿಕೊಂಡರು ಆಗ ಡೀಲ್ ಫೌಂಡೇಶನ್ ಸಂಸ್ಥೆಯ ಕಾರ್ಯಕರ್ತರಾದ ವೀಣಾ ಶಾಖನವರ ಇವರು ಶಿವಕುಮಾರ್ ಶಿರೋಳ್ ಇವರ ಸಲಹೆಯಂತೆ ಆ ಶಾಲೆಯನ್ನು ಭೇಟಿ ನೀಡಿದರು.

“ಇಂದಿನ ಮಕ್ಕಳೇ ನಾಳಿನ ಪ್ರಜೆಗಳು” ಎಂಬ ಜನಪ್ರಿಯ ಮಾತು ಪ್ರತಿಯೊಬ್ಬರಿಗೂ ತಿಳಿದಿದೆ ಅದಕ್ಕೆ ತಕ್ಕಂತೆ ವಿಕಲಚೇತನ ಮಕ್ಕಳಿಗೆ ಗರಿಷ್ಠ ಬೆಂಬಲವನ್ನು ಒದಗಿಸಲು ಗದಗ್ ತಾಲೂಕಿನ ಹುಡ್ಕೋ ಕಾಲೋನಿಯಲ್ಲಿರುವ ಭುವನೇಶ್ವರಿ ವಿಶೇಷ ಅಗತ್ಯ ವುಳ್ಳ ಶಾಲೆಯಲ್ಲಿನ ಮಕ್ಕಳನ್ನು ಗುರುತಿಸಲಾಯಿತು. ಈಗಾಗಲೇ ಡೀಲ್ ಫೌಂಡೇಶನ್ ಸಂಸ್ಥೆಯು ಪ್ರತಿ ತಾಲೂಕಿನಲ್ಲಿ ವಿಕಲಚೇತನರ ಸ್ವಸಹಾಯ ಗುಂಪುಗಳನ್ನು ರಚನೆ ಮಾಡಿ ಅವರಿಗೆ ಸ್ವಯಂ ಉದ್ಯೋಗಗಳ ತರಬೇತಿ, ಡಿಸೆಬಿಲಿಟಿ ಅವೇರ್ನೆಸ್ ತರಬೇತಿ ಹೀಗೆ ಮುಂತಾದ ತರಬೇತಿಗಳನ್ನು ನೀಡುತ್ತಾ ಬರುತ್ತಿದೆ.ಜೊತೆಗೆ ಎಲ್ಲ ತಾಲೂಕಿನಲ್ಲಿ ವಿಕಲಚೇತನರು ಸ್ವಯಂ ಉದ್ಯೋಗದಲ್ಲಿ ತೊಡಗಿದ್ದಾರೆ.

ಅದೇ ರೀತಿ ಗದಗ್ ತಾಲೂಕಿನ ಲವ್ಲೀವುಡ್ ಆಫೀಸರ್ ಆದ ವೀಣಾ ಶಾಖನವರು ಆ ಶಾಲೆಯ ಮುಖ್ಯಸ್ಥರಾದ ಶ್ರೀ ಮಂಜುನಾಥ ಹದ್ದಣ್ಣವರ ಇವರನ್ನು ಭೇಟಿ ನೀಡಿ ಡೀಲ್ ಫೌಂಡೇಶನ್ ಸಂಸ್ಥೆಯ ಕಾರ್ಯ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿ ಅಂದರೆ ವಿಕಲಚೇತನ ಸ್ವಸಹಾಯ ಸಂಘಗಳ ರಚನೆ ಮಾಡಿ ಅವರಿಗೆ ಪೇಪರ್ ಬ್ಯಾಗ್ ತರಬೇತಿ, ಕುಂಕುಮ ತರಬೇತಿ, ಮೇಣದಬತ್ತಿ ತರಬೇತಿ, ಆಡು ಸಾಕಾಣಿಕೆ, ರೊಟ್ಟಿ ತಯಾರಿಕೆ ಮುಂತಾದ ತರಬೇತಿ ಗಳನ್ನು ನೀಡಿ ಸ್ವಯಂ ಉದ್ಯೋಗದಲ್ಲಿ ತೊಡಗಿಸುವಂತೆ ಡೀಲ್ ಫೌಂಡೇಶನ್ ಸಂಸ್ಥೆಯು ಮಾಡುತ್ತಿದೆ.ಅದೇ ರೀತಿ ಈ ಶಾಲೆಯಲ್ಲಿನ ಮಕ್ಕಳಿಗೆ ಅನುಕೂಲವಾಗುವ ತರಬೇತಿಗಳನ್ನು ನೀಡಿ ಅವರ ಮುಂದಿನ ಜೀವನಕ್ಕೆ ಸಹಕಾರವಾಗಲು ಮತ್ತು ಈ ರೀತಿಯ ಮಕ್ಕಳಿಗೂ ಅವಕಾಶ ಸಿಗುವಂತಾಗಲಿ ಎಂದು ಎಲ್ಲ ಮಾಹಿತಿ ನೀಡಿದರು.

ಶಾಲೆಯ ಮುಖ್ಯಸ್ಥರು ಇದನ್ನು ಕೇಳಿ ನಮ್ಮ ಮಕ್ಕಳಲ್ಲಿ ಇಂತಹ ಆಸಕ್ತಿಯ ಕೌಶಲ್ಯಗಳು ಇವೆ ಆದರೆ ಇದನ್ನು ಯಾರು ಗುರುತಿಸಲು ಅವಕಾಶ ಕೊಟ್ಟಿರಲಿಲ್ಲ ನಿಮ್ಮ ಡೀಲ್ ಫೌಂಡೇಶನ್ ಸಂಸ್ಥೆಯಿಂದ ನಮ್ಮ ಮಕ್ಕಳ ಪ್ರತಿಭೆ ಹೆಚ್ಚುವಂತಾದರೆ, ಗುರುತಿಸುವಂತಾದರೆ ಇದಕ್ಕೆ ಯಾವಾಗಲೂ ಸಹಕಾರ ನೀಡುತ್ತೇವೆ ಎಂದು ಭರವಸೆ ನೀಡಿದರು.ಅದೇ ತೆರನಾಗಿ ಅಲ್ಲಿನ ಮಕ್ಕಳಲ್ಲಿ 18 ವರ್ಷ ಮೇಲ್ಪಟ್ಟು ವಿಕಲಚೇತನರ ಸ್ವ ಸಹಾಯ ಸಂಘಗಳನ್ನು ರಚನೆ ಮಾಡಲಾಯಿತು.ಅವು “ಸಮೃದ್ಧಿ ವಿಕಲಚೇತನರ ಮಹಿಳಾ ಸ್ವ ಸಹಾಯ ಸಂಘ & ಸಮರ್ಥ್ ವಿಕಲಚೇತನರ ಸ್ವ ಸಹಾಯ ಸಂಘ” ಎಂದು ಹೆಸರಿಟ್ಟು ಸಂಘಗಳನ್ನು ರಚನೆ ಮಾಡಲಾಯಿತು.

ಸ್ವ ಸಹಾಯ ಸಂಘ ರಚನೆ ಆದ ನಂತರ ಮೊದಲ ಹೆಜ್ಜೆ ಅವರಿಗೆ ಖಾತೆಯ ಪುಸ್ತಕ, ಸಾಲದ ಖಾತೆ, ಉಳಿತಾಯ ಖಾತೆ ಪುಸ್ತಕಗಳನ್ನು ನೀಡಲಾಯಿತು. ಡೀಲ್ ಫೌಂಡೇಶನ್ ಸಂಸ್ಥೆಯು ವಿಕಲಚೇತನರ ಸ್ವಸಹಾಯ ಸಂಘಗಳಿಗೆ ತರಬೇತಿಗಳನ್ನು ನೀಡುತ್ತದೆ ಹೆಚ್ಚಾಗಿ ದೈಹಿಕ ವಿಕಲಚೇತನತೆ ಹೊಂದಿದ ಸಂಘಗಳು ಪ್ರತಿ ತಾಲೂಕಿನಲ್ಲೂ ರಚನೆಯಾಗಿವೆ. ಆದರೆ ಈ ಶಾಲೆಯಲ್ಲಿನ ಮಕ್ಕಳಿಗೆ ವಿಶೇಷ ತರಬೇತಿ ನೀಡಲು ಕಾರಣ ಈ ಮಕ್ಕಳು ವಿಶೇಷ ಚೇತನವುಳ್ಳ ಮಕ್ಕಳಾಗಿದ್ದಾರೆ ಇಂತಹ ಮಕ್ಕಳಿಗೆ ತರಬೇತಿ ನೀಡಿ ಉದ್ಯೋಗಸ್ತರನ್ನಾಗಿ ಮಾಡಲು ಡೀಲ್ ಫೌಂಡೇಶನ್ ಸಂಸ್ಥೆಗೆ ಒಂದು ಅವಕಾಶ ಸಿಕ್ಕಿದೆ.ಈ ಎರಡು ಸಂಘಗಳಿಗೆ ಬುಕ್ ರೈಟಿಂಗ್ ತರಬೇತಿಯನ್ನು ಡೀಲ್ ಫೌಂಡೇಶನ್ ಸಂಸ್ಥೆಯ ಪ್ರೋಗ್ರಾಮ್ ಮ್ಯಾನೇಜರ್ ಆದ ಶ್ರೀಮತಿ ಉಮಾ ಚೀಲಗೋಡರ್ &ಗದಗ್ ತಾಲೂಕಿನ ಲವ್ಲೀವುಡ್ ಆಫೀಸರ್ ಆದ ವೀಣಾ ಇವರ ಸಹಯೋಗದಲ್ಲಿ ತರಬೇತಿ ನೀಡಲು ಬಂದಾಗ ಶಾಲೆಯ ಮುಖ್ಯಸ್ಥರಾದ ಮಂಜುನಾಥ್ ಅವರು ನಮ್ಮ ಮಕ್ಕಳಿಗೆ ನಿಮ್ಮ ಸಂಸ್ಥೆಯಿಂದ ಮೊದಲನೇ ತರಬೇತಿ ಅದನ್ನು ದೀಪ ಬೆಳಗುವುದರ ಮೂಲಕ ಪ್ರಾರಂಭಿಸೋಣ ಎಂದು ಚಿಕ್ಕದಾಗಿ ಕಾರ್ಯಕ್ರಮ ಮಾಡಿ ಮಕ್ಕಳ ಭವಿಷ್ಯಕ್ಕೆ ಹಾರೈಸಿದರು ನಂತರ ಪ್ರತಿ ಮಕ್ಕಳೊಂದಿಗೆ ಶ್ರೀಮತಿ ಉಮಾ ಇವರು ಮಾತನಾಡಿ ಅವರ ಮುಗ್ದತೆಯಲ್ಲಿ ಇವರು ಬೆರೆತು ಖುಷಿಯನ್ನು ಹಂಚಿದರು. ಮಕ್ಕಳಿಗೆ ಅರ್ಥವಾಗುವ ರೀತಿ ಅವರ ತಕ್ಕಂತೆ ಸರಳ ರೀತಿಯಲ್ಲಿ ಸಂಘಗಳ ಬಗ್ಗೆ ಮಾಹಿತಿ ನೀಡಿದರು ಮತ್ತು ಸ್ವಸಹಾಯ ಸಂಘಗಳ ಪುಸ್ತಕ ಬರೆಯುವುದು ಹಾಗೂ ಉಳಿತಾಯ ತುಂಬುವುದರ ಬಗ್ಗೆ ಮಾಹಿತಿ ನೀಡಿದರು ಜೊತೆಗೆ ಎಂಟರ್ಪ್ರೈನರ್ಷಿಪ್ ತರಬೇತಿಯನ್ನು ನೀಡಿದರು. ಅದು ಚಿತ್ರಗಳನ್ನು ತೋರಿಸುತ್ತಾ ಹಣ ಕುಡಿ ಇಡುವುದರಿಂದ ಆಗುವ ಉಪಯೋಗಗಳನ್ನು ತಿಳಿಸಿದರು. ಇದರಿಂದ ಮಕ್ಕಳು ಕೂಡ ಅವರ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾ ಹೋದರು ಇದರಿಂದ ಮಕ್ಕಳಲ್ಲಿ ಹಣಕಾಸಿನ ಬಗ್ಗೆ,ಬರೆಯುವುದರ ಬಗ್ಗೆ,ಉದ್ಯೋಗದ ಬಗ್ಗೆ ತಿಳುವಳಿಕೆ ಮೂಡಿಸಿತು. ಈ ಗುಂಪಿನಲ್ಲಿ ಕೆಲವು ಮಕ್ಕಳು ಬರೆಯುವುದರ ಆಸಕ್ತಿ ಇರುವುದರಿಂದ ಶಾಲೆಯ ಟೀಚರ್ ಗಳ ಸಹಾಯದಿಂದ ಆ ಮಕ್ಕಳು ಈ ಸಂಘದ ಉಳಿತಾಯ ಖಾತೆಯ ಪುಸ್ತಕವನ್ನು ಬರೆಯುತ್ತಿದ್ದಾರೆ.

ಈ ರೀತಿಯಾಗಿ ಡೀಲ್ ಫೌಂಡೇಶನ್ ಸಂಸ್ಥೆ ವತಿಯಿಂದ ವಿಕಲಚೇತನ ಮಕ್ಕಳಿಗೆ ಅವಕಾಶ ಸಿಕ್ಕಂತಾಗಿದೆ ಅವರನ್ನು ಈ ಸಮಾಜ ಗುರುತಿಸುವಂತಾಗಿದೆ. ವಿಕಲಚೇತನರಲ್ಲಿ ಪ್ರತಿಭೆ ಅನ್ನುವ ಕಮಲ ಡೀಲ್ ಫೌಂಡೇಶನ್ ಸಂಸ್ಥೆಯಿಂದ ಅರಳುವಂತಾಗಿದೆ. ಈ ಎರಡು ಸಂಘಗಳ ಮಕ್ಕಳಿಗೆ ತರಬೇತಿಯ ನಂತರ ಉದ್ಯೋಗದ ಪ್ರಗತಿಯ ಬಗ್ಗೆ ಮುಂದಿನ ಸುದ್ದಿ ಪತ್ರ ನೋಡಿರಿ.

ಈ ಬ್ಲಾಗ್ ಗೆ ಸಂಬಂಧಿಸಿದಂತೆ ಯಾವುದೇ ನಿರ್ದಿಷ್ಟ ಪ್ರಶ್ನೆಗಳಿಗೆ ಅಥವಾ ಯಾವುದೇ ಸಹಾಯಕ್ಕಾಗಿ ದಯವಿಟ್ಟು Info@deal-foundation.com ನಲ್ಲಿ ತಿಳಿಸಿರಿ. ಮತ್ತು ನಾವು ಮಾಡುವ ಕೆಲಸದ ಕುರಿತು ಇನ್ನಷ್ಟು ತಿಳಿದುಕೊಳ್ಳಲು ದಯವಿಟ್ಟು www.deal-foundation.com ಗೆ ಲಾಗ್ಇನ್ ಮಾಡಿ.

ಧನ್ಯವಾದಗಳು

Get a report of all our on field work every month.

You have Successfully Subscribed!

Share This