ಗದಗ್ ತಾಲೂಕಿನಲ್ಲಿರುವ ವಿಕಲಚೇತನರ ಹಲವಾರು ಗುಂಪುಗಳಲ್ಲಿ ಸಮೃದ್ಧಿ ವಿಕಲಚೇತನ ಮಹಿಳಾ ಸ್ವ ಸಹಾಯ ಸಂಘ ಮತ್ತು ಸಮರ್ಥ ವಿಕಲಚೇತನ ಸ್ವಸಹಾಯ ಸಮೂಹವು ಒಂದಾಗಿದೆ. ವಿಕಲಚೇತನ ವ್ಯಕ್ತಿಗಳು ತಮ್ಮನ್ನು ಸಾಮಾಜಿಕವಾಗಿ ಹೊರಗಿಡುತ್ತಾರೆ.ಆದ್ದರಿಂದ ಒಟ್ಟಿಗೆ ಸೇರುವುದು ಉತ್ತಮ ಎಂದು ಅರಿತುಕೊಂಡಾಗ ಈ ಎರಡು ವಿಕಲಚೇತನರ ಸ್ವಸಹಾಯ ಸಂಘಗಳು ರಚನೆಯಾದವು. ಒಟ್ಟಿಗೆ ಸೇರಿಕೊಂಡ ಈ ಗುಂಪುಗಳ ಉದ್ದೇಶ ವಿಕಲಚೇತನ ಮಕ್ಕಳ ವೈಯಕ್ತಿಕ ಹಕ್ಕುಗಳ ಕುರಿತು ಮಾಹಿತಿ,ಸಂವಹನ,ಶಿಕ್ಷಣ ಮತ್ತು ಸ್ವಂತ ಜೀವನವನ್ನು ನಡೆಸಲು ತರಬೇತಿಯ ಮೂಲಕ ಒಂದು ಅವಕಾಶ ಬೇಕಿತ್ತು ಅದನ್ನು ಡೀಲ್ ಫೌಂಡೇಶನ್ ಸಂಸ್ಥೆಯು ಈ ವಿಶೇಷ ಅಗತ್ಯವುಳ್ಳ ವಿಕಲಚೇತನ ಮಕ್ಕಳಿಗೆ ಒದಗಿಸುತ್ತಿದೆ.ಅದು ತರಬೇತಿಯ ಮೂಲಕ,ಜ್ಞಾನ ಬೆಳೆಸುವುದರ ಮೂಲಕ,ಪ್ರೋತ್ಸಾಹ ತುಂಬುವುದರ ಮೂಲಕ ಡೀಲ್ ಫೌಂಡೇಶನ್ ಸಂಸ್ಥೆ ಮಾಡುತ್ತಿದೆ.

ಅದರಂತೆಯೇ ವಿಕಲಚೇತನ ಮಕ್ಕಳ ಸ್ವಸಹಾಯ ಸಂಘ ರಚನೆ ಮಾಡಿ ಅವರಿಗೆ ವ್ಯವಹಾರದ ಬಗ್ಗೆ, ವಿಕಲಚೇತನತೆಯ ಬಗ್ಗೆ, ಸರ್ಕಾರದಿಂದ ಸಿಗುವ ಸೌಲಭ್ಯಗಳ ಬಗ್ಗೆ ಹೀಗೆ ಹಲವಾರು ತರಬೇತಿಯನ್ನು ಡೀಲ್ ಫೌಂಡೇಶನ್ ಸಂಸ್ಥೆಯಿಂದ ನೀಡಲಾಯಿತು.ಈ ತರಬೇತಿಯಲ್ಲಿ ತಿಳಿದು ಬಂದಿರುವುದು ಆ ಸಂಘಗಳ ಎಲ್ಲಾ ವಿಕಲಚೇತನ ಮಕ್ಕಳಿಗೆ ಅವಕಾಶ ಸಿಕ್ಕರೆ ಉದ್ಯೋಗ ತರಬೇತಿ ಪಡೆದುಕೊಂಡು ತಂದೆ ತಾಯಿಗಳಿಗೆ ತಮ್ಮ ಮಕ್ಕಳು ಕೂಡ ಎಲ್ಲ ಮಕ್ಕಳಂತೆ ಅವರಿಗೂ ಅವರದೇ ಆದ ಛಲ,ಹುಮ್ಮಸ್ಸು ಇದೆ ಎಂದು ತೋರಿಸಿ ಕೊಡುವ ಭಾವನೆ ಮತ್ತು ಈ ಸಮಾಜಕ್ಕೆ ವಿಕಲಚೇತನ ಮಕ್ಕಳಿಗೆ ಅವಕಾಶ ಸಿಕ್ಕರೆ ಏನಾದರೂ ಸಾಧಿಸಿ ತೋರಿಸಬೇಕು,ಈ ಸಮಾಜಕ್ಕೆ ಮಾದರಿಯಾಗಬೇಕು ಎಂಬ ಭಾವನೆ ಆ ಎಲ್ಲಾ ಮಕ್ಕಳಲ್ಲಿ ಕಂಡುಬಂದಿತು.

ಅದಕ್ಕೆ ತಕ್ಕಂತೆ ಡೀಲ್ ಫೌಂಡೇಶನ್ ಸಂಸ್ಥೆಯ ಲವ್ಲಿಹುಡ್ ಆಫೀಸರ್ ಆದ ವೀಣಾ ಶಾಖಾನವರ ಇವರು ಆ ಶಾಲೆಯ ಮುಖ್ಯಸ್ಥರಾದ ಮಂಜುನಾಥ್ ಹದ್ದಣ್ಣವರ ಅವರ ಸಹಕಾರದ ಜೊತೆಗೆ ಮಕ್ಕಳಿಗೆ ಯಾವ ರೀತಿ ತರಬೇತಿ ಕೊಟ್ಟರೆ ಅವರು ಕಲಿಯುತ್ತಾರೆ ಆ ಮಕ್ಕಳ ಆಸಕ್ತಿ ಉದ್ಯೋಗ ಯಾವುದು ಎಂದು ಮಕ್ಕಳ ಜೊತೆಗೆ ಅವರೆಲ್ಲರ ಅಭಿಪ್ರಾಯ ಕೇಳಿದಾಗ ಕೆಲ ವಿಕಲಚೇತನರು ಪೇಪರ್ ಬ್ಯಾಗಿನಲ್ಲಿ, ಇನ್ನು ಕೆಲ ಮಕ್ಕಳು ಕುಂಕುಮ ತರಬೇತಿಯಲ್ಲಿ, ಮತ್ತು ಮೇಣದ ಬತ್ತಿ ತಯಾರಿಸುವ ತರಬೇತಿ ಪಡೆದುಕೊಳ್ಳಲು ಆಸಕ್ತಿ ಹೊಂದಿದ್ದಾರೆ ಎಂದು ಗುರುತಿಸಲಾಯಿತು.

ಅದರಂತೆಯೇ ಈ ಮಕ್ಕಳ ಆಸಕ್ತಿಯ ಬಗ್ಗೆ ಡೀಲ್ ಫೌಂಡೇಶನ್ ಸಂಸ್ಥೆಯ ಟ್ರೈನಿಂಗ್ ಕೋ ಆರ್ಡಿನೇಟರ್ ಆದ ಶಿವಕುಮಾರ್ ಶಿರೋಳ್ ಅವರಿಗೆ ತಿಳಿಸಿದಾಗ ವಿಕಲಚೇತನ ಮಕ್ಕಳ ಆಸಕ್ತಿ ಕುರಿತು ಹೆಮ್ಮೆ ಪಟ್ಟರು ಇಂತಹ ವಿಕಲಚೇತನ ಮಕ್ಕಳಿಗೆ ನಮ್ಮ ಸಂಸ್ಥೆಯಿಂದ ಆ ವಿಕಲಚೇತನ ಮಕ್ಕಳ ಆಸಕ್ತಿ ಎಲ್ಲಾ ತರಬೇತಿಗಳನ್ನು ಒಂದೊಂದಾಗಿ ನೀಡೋಣ ನಮ್ಮ ಡೀಲ್ ಫೌಂಡೇಶನ್ ಸಂಸ್ಥೆಯು ಯಾವಾಗಲೂ ಇಂತಹ ವಿಶೇಷ ಚೇತನಉಳ್ಳ ಮಕ್ಕಳಿಗೆ ಸಹಕಾರ ನೀಡುತ್ತದೆ ಎಂದು ಹೇಳಿದರು.

ಆ ಮಾತಿನಂತೆ ಪೇಪರ್ ಬ್ಯಾಗ್ ತರಬೇತಿ ಮೊದಲು ನೀಡುವುದಾಗಿ ಎಂದು ನಿಶ್ಚಯಿಸಿ ಆ ವಿಶೇಷ ಚೇತನರ ಎರಡು ಸ್ವಸಹಾಯ ಸಂಘಗಳಿಗೆ ಶಿವಕುಮಾರ್ ಶಿರೂರ್ ಮತ್ತು ವೀಣಾ ಶಾಕಾನವರ ಇವರು ಶಾಲೆಯ ಮುಖ್ಯಸ್ಥರ ಸಹಕಾರದಲ್ಲಿ ಪೇಪರ್ ಬ್ಯಾಗ್ ತರಬೇತಿಯನ್ನು ನೀಡಿದರು. ತರಬೇತಿಯ ದಿನವನ್ನು ಸಣ್ಣ ಕಾರ್ಯಕ್ರಮದ ಮೂಲಕ ದೀಪ ಹಚ್ಚಿ ಆರಂಭಿಸಿದರು. ಮಕ್ಕಳೊಂದಿಗೆ ಮಕ್ಕಳಾಗಿ ತರಬೇತಿದಾರರಾದ ಶಿವಕುಮಾರ್ ಇವರು ಮಕ್ಕಳ ಬೌದ್ಧಿಕ ಮಟ್ಟಕ್ಕೆ ತಕ್ಕಂತೆ ತರಬೇತಿಯನ್ನು ನೀಡಿದರು. ವಿಶೇಷ ಚೇತನ ಮಕ್ಕಳು ಕೂಡ ತುಂಬಾ ಆಸಕ್ತಿಯಿಂದ ಪೇಪರ್ ಬ್ಯಾಗನ್ನು ತಯಾರಿಸುತ್ತಿದ್ದರು. ಈ ಮಕ್ಕಳಲ್ಲಿ ಕೆಲವರು ನಿಧಾನವಾಗಿ ಕೆಲವರು ತುಂಬಾ ಆಸಕ್ತಿಯಿಂದ ಹೆಚ್ಚಿನ ಗಮನವಿಟ್ಟು ತರಬೇತಿ ಪಡೆದುಕೊಂಡರು.ಇದರಿಂದ ತಿಳಿದು ಬಂದಿರುವುದು ವಿಶೇಷ ಚೇತನರಲ್ಲಿ ನಾನು ಏನಾದರೂ ಮಾಡಬೇಕು ಎಂಬ ಮನೋಭಾವನೆ ಅಡಗಿರುತ್ತದೆ ಅವರಿಗೆ ಅವಕಾಶ ಸಿಗಬೇಕು ಅಷ್ಟೇ ಎಂದು ಕಂಡು ಬಂದಿತು.

ಹೀಗೆ ಪೇಪರ್ ಬ್ಯಾಗ್ ತರಬೇತಿಯ ನಂತರ ಇದನ್ನು ಹೀಗೆ ದಿನಾಲು ಪ್ರಯತ್ನ ಮಾಡಿಕೊಂಡು ಒಳ್ಳೆಯ ಹಂತಕ್ಕೆ ಈ ಪೇಪರ್ ಬ್ಯಾಗ್ ತಯಾರಿಸುತ್ತಾ ಹೋದರು ಡೀಲ್ ಫೌಂಡೇಶನ್ ಸಂಸ್ಥೆ ಇಂತಹ ಮಕ್ಕಳಿಗೆ ಅವಕಾಶ ಕೊಟ್ಟಿರುವುದರಿಂದ ಶಾಲೆಗಯ ಎಲ್ಲ ಸಿಬ್ಬಂದಿಗಳು ಹೆಮ್ಮೆಯ ವಿಚಾರ ವ್ಯಕ್ತಪಡಿಸಿದರು. ವಿಕಲಚೇತನರು ಡೀಲ್ ಫೌಂಡೇಶನ್ ನಿಂದ ತರಬೇತಿ ಪಡೆದುಕೊಳ್ಳುವುದನ್ನು ಪೇಪರ್‌ನಲ್ಲಿಯೂ ಕೂಡ ಸುದ್ದಿಯಾಗಿ ಈ ಮಕ್ಕಳಿಂದ ಡೀಲ್ ಫೌಂಡೇಶನ್ ಸಂಸ್ಥೆಗೆ ಹೆಮ್ಮೆಯಾಯಿತು. ಡೀಲ್ ಫೌಂಡೇಶನ್ ಇಂತ ವಿಕಲಚೇತನನ್ನು ಗುರುತಿಸಿ ಅವರಿಗೆ ಉದ್ಯೋಗ ಮಾಡಲು ಪ್ರತಿ ತಾಲೂಕಿನಲ್ಲೂ ಆರಂಭ ಸ್ವ ಉದ್ಯೋಗ ಕೇಂದ್ರವನ್ನು ಸ್ಥಾಪಿಸಲಾಗಿದೆ. ಅಲ್ಲಿ ಈ ವಿಕಲಚೇತನರು ತಯಾರಿಸಿದ ಪೇಪರ್ ಬ್ಯಾಗ ಮಾರಾಟ ಮಾಡಲಾಗುತ್ತಿದೆ. ಮತ್ತು ಡೀಲ್ ಫೌಂಡೇಶನ್ ಸಂಸ್ಥೆ ಜೀವನ್ ಕಾರ್ಟ್ ಆಪ್ ನಲ್ಲಿ ಈ ಪೇಪರ್ ಬ್ಯಾಗ್ ಮಾರಾಟ ಮಾಡಲಾಗುತ್ತಿದೆ.

ಡೀಲ್ ಫೌಂಡೇಶನ್ ಸಂಸ್ಥೆಯ ಮುಖ್ಯಸ್ಥರಾದ ಶ್ರೀ ಸುರೇಂದ್ರನಾಥ್ ಶ್ರಾಫ್,ಎಲಿಜಬತ್ ಶ್ರಾಪ್,

ಸಿಡ್ಬಿ ವತಿಯಿಂದ ಮಹಮ್ಮದ್ ಅರೋರ್, ನಿಕ್ ಎಡ್ವರ್ಡ್, ಸಿ ಎಸ್ ಆರ್ ನಿಂದ ಅಜಾಜ್ ರಶೀದ್ ಹಾಗೂ ಡೀಲ್ ಫೌಂಡೇಶನ್ ಸಂಸ್ಥೆಯ ಸಿಬ್ಬಂದಿಗಳು ಸೇರಿ ಈ ವಿಶೇಷ ಚೇತನ ಸ್ವ ಸಹಾಯ ಸಂಘಗಳ ಶಾಲೆಗೆ ಭೇಟಿ ನೀಡಿದರು.ಶಾಲೆಯ ಮುಖ್ಯಸ್ಥರು ಕಾರ್ಯಕ್ರಮದೊಂದಿಗೆ ಎಲ್ಲರನ್ನು ಸ್ವಾಗತಿಸಿ ಸನ್ಮಾನಿಸಿದರು. ಆ ಮಕ್ಕಳನ್ನು ಕಂಡು ಎಲ್ಲರೂ ಅಭಿನಂದನೆಯನ್ನು ಸಲ್ಲಿಸಿದರು. ವಿಕಲಚೇತನರು ತಯಾರಿಸಿದ ಪೇಪರ್ ಬ್ಯಾಗನ್ನು ಕಂಡು ಅವರ ಸತತ ಪ್ರಯತ್ನವನ್ನು ಎಲ್ಲರೂ ಶ್ಲಾಘೀಸಿದರು.ಡೀಲ್ ಫೌಂಡೇಶನ್ ಸಂಸ್ಥೆಯ ಮುಖ್ಯಸ್ಥರಾದ ಸುರೇಂದ್ರನಾಥ್ ಶ್ರಾಫ್ ವಿಕಲಚೇತನರನ್ನು ಕುರಿತು ಮಾತನಾಡಿ ಹೀಗೆ ಈ ಎಲ್ಲಾ ಮಕ್ಕಳ ಪ್ರಗತಿ ಇನ್ನೂ ಹೆಚ್ಚಿನ ಮಟ್ಟದಾಗಲಿ ಇವರ ಜೊತೆಗೆ ಡೀಲ್ ಫೌಂಡೇಶನ್ ಸಂಸ್ಥೆಯು ಯಾವಾಗಲೂ ಇರುತ್ತದೆ ಎಂದು ಚೈತನ್ಯ ಹೆಚ್ಚಿಸಿದರು. ದೇಹದ ಅಂಗಾಂಗಗಳು ಎಲ್ಲಾ ಸರಿ ಇದ್ದರೂ ಕೆಲವರು ಏನು ಮಾಡುವುದಿಲ್ಲ ಆದರೆ ಇಂತಹ ವಿಶೇಷ ಚೇತನ ಮಕ್ಕಳು ಈ ರೀತಿ ತರಬೇತಿ ಪಡೆದುಕೊಂಡು ಈ ಹಂತದವರಿಗೆ ಬಂದಿರುವುದು ಹೆಮ್ಮೆಯ ವಿಚಾರವಾಗುತ್ತದೆ. ಶಾಲೆ ಮುಖ್ಯಸ್ಥರಾದ ಮಂಜುನಾಥ್ ಹದಣ್ಣನವರ್ ಡೀಲ್ ಫೌಂಡೇಶನ್ ಸಂಸ್ಥೆಯು ಇಂತಹ ಮಕ್ಕಳಿಗೆ ತರಬೇತಿ ನೀಡಿ ಸ್ವಾವಲಂಬನೆ ಜೀವನಕ್ಕಾಗಿ ಅವಕಾಶ ಮಾಡಿಕೊಟ್ಟಿದೆ ಇದಕ್ಕೆ ಯಾವಾಗಲೂ ನಾವು ಚಿರಋಣಿಯಾಗಿರುತ್ತೇವೆ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಇವರೆಲ್ಲರ ಹಾರೈಕೆಗೆ ಡೀಲ್ ಫೌಂಡೇಶನ್ ಸಂಸ್ಥೆ ಮತ್ತು ತರಬೇತಿದಾರರು ಕಾರಣಿ ಕರ್ತರು ಎಂದು ಹೇಳಬಹುದು.ಇದರಿಂದ ತಿಳಿದು ಬಂದಿರುವುದು ಏನೆಂದರೆ ಸಕ್ರಿಯಗೊಳಿಸುವ ಪ್ರಕ್ರಿಯೆ ಮೂಲಕ ಮಾತ್ರ ಒಬ್ಬರು ತಮ್ಮ ನಿಜವಾದ ಸಾಮರ್ಥ್ಯವನ್ನು ಅರಿತುಕೊಳ್ಳಬಹುದು ಎಂದು ತಿಳಿದುಬರುತ್ತದೆ.

ಈ ಬ್ಲಾಗ್ ಗೆ ಸಂಬಂಧಿಸಿದಂತೆ ಯಾವುದೇ ನಿರ್ದಿಷ್ಟ ಪ್ರಶ್ನೆಗಳಿಗೆ ಅಥವಾ ಯಾವುದೇ ಸಹಾಯಕ್ಕಾಗಿ Info@deal-Foundation.com ನಲ್ಲಿ ತಿಳಿಸಿರಿ ಮತ್ತು ನಾವು ಮಾಡುವ ಕೆಲಸದ ಕುರಿತು ಇನ್ನಷ್ಟು ತಿಳಿದುಕೊಳ್ಳಲು www.deal-Foundation.com ಗೆ ಲಾಗ್ಇನ್ ಮಾಡಿರಿ.

ಧನ್ಯವಾದಗಳು

Get a report of all our on field work every month.

You have Successfully Subscribed!

Share This