ಸಹಕಾರಿ ಕೃಷಿ ಪತ್ತಿನ ಕೋ ಆಪರೇಟಿವ್ ಬ್ಯಾಂಕ್ ಎಲ್ಲರಿಗೂ ತಿಳಿದಿರುವ ಹಾಗೆ ಪ್ರಥಮವಾಗಿ ಗದಗ್ ತಾಲೂಕಿನ ಕನಗಿನ ಹಾಳದಲ್ಲಿ ಸ್ಥಾಪನೆ ಆಯಿತು. ಉದ್ದೇಶ ಪ್ರತಿಯೊಬ್ಬ ಕೃಷಿಕರಿಗೂ ಕೂಡ ಆರ್ಥಿಕವಾಗಿ ನೆರವಾಗಿ ಕೃಷಿ ಚಟುವಟಿಕೆಗಳಿಗೆ ಆರ್ಥಿಕ ಸಹಾಯವನ್ನು ನೀಡುವುದರ ಮೂಲಕ ಆರ್ಥಿಕ ಬೆಳವಣಿಗೆ ತರುವುದಾಗಿದೆ.

   ಡೀಲ್ ಫೌಂಡೇಶನ್ ಸಂಸ್ಥೆಯು ವಿಕಲಚೇತನರು ಕೂಡ ಸ್ವಾವಲಂಬನೆ ಜೀವನವನ್ನು ನಡೆಸಬೇಕು ಸ್ವಯಂ ಉದ್ಯೋಗ ಮಾಡಬೇಕು ಅವರಿಗೂ ಆರ್ಥಿಕ ಸಹಾಯ ಮಾಡಬೇಕು ಎಂಬ ಗುರಿ ಉದ್ದೇಶದಿಂದ ವಿಕಲಚೇತನರ ಸಹಕಾರಿ ಕೋ-ಆಪರೇಟಿವ್ ಸೊಸೈಟಿಯನ್ನು ಗದಗ್ ಜಿಲ್ಲೆಯ ಮುಂಡರಗಿ ತಾಲೂಕಿನ ಮೇವುಂಡಿ ಗ್ರಾಮದ ಆಸ್ಕ್ ಕೇಂದ್ರದಲ್ಲಿ ಆರಂಭಿಸಿದರು. ಈ ಸೊಸೈಟಿಯಲ್ಲಿ 13 ಜನರ ಮಂಡಳಿಯ ಸದಸ್ಯರನ್ನಾಗಿ ಆಯ್ಕೆ ಮಾಡಲಾಗಿದೆ 13 ಜನರಲ್ಲಿ ಅಧ್ಯಕ್ಷರು,ಉಪಾಧ್ಯಕ್ಷರು ಮತ್ತು ಸದಸ್ಯರನ್ನು ಆಯ್ಕೆ ಮಾಡಿ ಡೀಲ್ ಫೌಂಡೇಶನ್ ಸಂಸ್ಥೆ ವತಿಯಿಂದ ಕಾರ್ಯದರ್ಶಿ ಮತ್ತು ಕಂಪ್ಯೂಟರ್ ಆಪರೇಟರ್ ಇದರೊಂದಿಗೆ ಸಹಕಾರಿಯ ವ್ಯವಹಾರಕ್ಕಾಗಿ ಬೇಕಾಗುವ ಸಾಫ್ಟ್ ವೇರ್, ವೋಚರ, ಬಾಂಡ್ ಪಾಸ್ ಪುಸ್ತಕದಂತಹ ದಾಖಲೆಗಳು ಹೊಂದಿಕೊಂಡು ಪ್ರತಿ ತಿಂಗಳು ಮಂಡಳಿಯ ಸದಸ್ಯರಿಂದ ಸಭೆಯನ್ನು ಕೈಗೊಳ್ಳುವುದು ಮತ್ತು ಸೊಸೈಟಿಯ ಅಭಿರುದ್ದಿಯ ಕುರಿತು ಚರ್ಚೆಯೊಂದಿಗೆ ಕಾರ್ಯನಿರ್ವಹಿಸುತ್ತಿದೆ.ಇದರ ಹೆಚ್ಚಿನ ಮಾಹಿತಿಗಾಗಿ ಜುಲೈ ತಿಂಗಳ ಸುದ್ದಿ ವರದಿಯನ್ನು ನೋಡಬಹುದು.

   ಮೆವುಂಡಿಯ ಕೋ ಆಪರೇಟಿವ್ ಸೊಸೈಟಿಯು ಸ್ಥಾಪನೆಯಾಗಿ 23/8/ 2023 ಕ್ಕೆ ಒಂದು ವರ್ಷವಾಯಿತು. ವಾರ್ಷಿಕ ಸಭೆಯನ್ನು ಡೀಲ್ ಫೌಂಡೇಶನ್ ಸಂಸ್ಥೆಯ ಮೇವುಂಡಿ ಗ್ರಾಮದ ಆಸ್ಕ್ ಕೇಂದ್ರದ ಆವರಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಗದಗ್ ಜಿಲ್ಲೆಯ ಮುಂಡರಗಿ ತಾಲೂಕಿನ ಕೆವಿಜಿ ಬ್ಯಾಂಕ್ ಮ್ಯಾನೇಜರ್ ಆದ ಶ್ರೀ ದುರ್ಗಾ ಪ್ರಸಾದ್ ಅವರು, ಮೆವುಂಡಿ ಗ್ರಾಮದ ಮಾಜಿ ಅಧ್ಯಕ್ಷರಾದ ದೇವಿಕ ಹಾರೋಗೇರಿ, ಜ್ಯೋತಿ ತಾರಿಕೊಪ್ಪ,ಛಾಯಾ ಜೋಶಿ ಹಾಗೂ ಬೆಟಿಗೇರಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಅಂದಪ್ಪ ಚಿಲ ಗೋಡರ್, ಕೋಆಪರೇಟಿವ್ ಸೊಸೈಟಿಗೆ ನಿರ್ದೇಶಕರು,ಅಧ್ಯಕ್ಷರು, ಉಪಾಧ್ಯಕ್ಷರು,ಸದಸ್ಯರು ಹಾಗೂ ಡೀಲ್ ಫೌಂಡೇಶನ್ ಸಂಸ್ಥೆ ಎಲ್ಲಾ ಕಾರ್ಯನಿರ್ವಾಹಕರು ಸೇರಿ ಸುಮಾರು 150ಕ್ಕೂ ಅಧಿಕ ವಿಕಲಚೇತನರು ಮತ್ತು ಮಹಿಳೆಯರು ಭಾಗಿಯಾಗಿದ್ದರು.

   ಈ ಕಾರ್ಯಕ್ರಮದ ನಿರೂಪಣೆಯನ್ನು ರೇಣುಕಾ ಕಲ್ಲಳ್ಳಿ ಇವರು ಮತ್ತು ವೇದಿಕೆಯ ಗಣ್ಯರನ್ನು ವೀಣಾ ಶಾಖಾನವರ ಇವರು ಸ್ವಾಗತವನ್ನು ಮಾಡಿದರು. ಡೀಲ್ ಫೌಂಡೇಶನ್ ಸಂಸ್ಥೆಯ ಪ್ರೋಗ್ರಾಮ್ ಮ್ಯಾನೇಜರ್ ಆದ ಶ್ರೀಮತಿ ಉಮಾ ಚಿಲ್ ಗೌಡರ್ ಇವರು ಕಳೆದ ಐದು ವರ್ಷಗಳಿಂದ ಮಾಡುತ್ತಿರುವ ವಿಕಲಚೇತನರ ಮತ್ತು ಮಹಿಳೆಯರು ಸ್ವಸಹಾಯ ಸಂಘಗಳ ಬಗ್ಗೆ,ಕೋ ಆಪರೇಟಿವ್ ಸೊಸೈಟಿಯ ಬಗ್ಗೆ,ಆಸ್ಕ್ ಕೇಂದ್ರ ಅಲ್ಲಿ ಮಾಡುವ ಸ್ವಯಂ ಉದ್ಯೋಗಗಳಾದ ರೊಟ್ಟಿ ತಯಾರಿಕೆ, ಎಚ್ಎಚ್ಐ ಪ್ರಾಡಕ್ಟ್ಸ್ ಬಗ್ಗೆ ಹಾಗೂ ಕರಿಬೇವು,ಪೇರಲ, ಹುಣಸಿ ಮುಂತಾದ ಹಣ್ಣುಗಳ ತೋಟಗಾರಿಕೆಯ ಬಗ್ಗೆ ಮಾಹಿತಿ ನೀಡಿದರು.

   ಕೆವಿಜಿ ಬ್ಯಾಂಕ್ ಮ್ಯಾನೇಜರ್ ಆದ ದುರ್ಗಾ ಪ್ರಸಾದ್ ಅವರು ಕೂಡ ಡೀಲ್ ಫೌಂಡೇಶನ್ ಸಂಸ್ಥೆಯ ಕಾರ್ಯ ಚಟುವಟಿಕೆಗಳು ಎಲ್ಲಾ ವಿಕಲಚೇತನ ಮತ್ತು ಮಹಿಳೆಯರ ಜೀವನಕ್ಕೆ ಅನುಕೂಲವಾಗಿದೆ. ಇವರ ಈ ಎಲ್ಲಾ ಚಟುವಟಿಕೆಗಳಿಗೆ ನಮ್ಮ ಸಹಕಾರ ಯಾವಾಗಲೂ ಇರುತ್ತದೆ ಎಂದು ಭರವಸೆ ನೀಡಿ ಹಾರೈಸಿದರು.

   ಡೀಲ್ ಫೌಂಡೇಶನ್ ಸಂಸ್ಥೆಯ ಮುಂಡರಗಿ ತಾಲೂಕಿನ ಲವ್ಲೀವುಡ್ ಆಫೀಸರ್ ಹಾಗೂ ಕೋ ಆಪರೇಟಿವ್ ಸೊಸೈಟಿಗೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾದ ರೇಣುಕಾ ಕಲ್ಲಳ್ಳಿ ಇವರು ಕೋ ಆಪರೇಟಿವ್ ಸೊಸೈಟಿಯ ಒಂದು ವರ್ಷದಲ್ಲಿ ಆದ ಪ್ರಗತಿಯ ಬಗ್ಗೆ ಈ ವಾರ್ಷಿಕ ಮಹಾಸಭೆಯಲ್ಲಿ ವಿವರಣೆ ನೀಡಿದರು. ಅಂದರೆ ಕಳೆದ ಒಂದು ವರ್ಷದಲ್ಲಿ ವಿಕಲಚೇತನರ ಸ್ವಸಹಾಯ ಸಂಘಗಳ ಉಳಿತಾಯ ಖಾತೆ ಮಾಡಿ ಮತ್ತು ಅವರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು ನೀಡಿ ಅವರ ಆರ್ಥಿಕ ಪರಿಸ್ಥಿತಿಯನ್ನು ಸುಧಾರಣೆ ಮಾಡುತ್ತಿದೆ ಹಾಗೂ ವಿಕಲಚೇತನರನ್ನು ಮತ್ತು ಮಹಿಳೆಯರನ್ನು ಷೇರುದಾರರನ್ನಾಗಿ ಮಾಡಿ ಅವರಿಗೆ ಅವಶ್ಯವಿರುವ ವೃತ್ತಿ ಚಟುವಟಿಕೆಗಳಿಗೆ ಅಂದರೆ ಮೇಣದಬತ್ತಿ ತಯಾರಿಕೆ, ಹೈನುಗಾರಿಕೆ,ಕುರಿ ಆಡು ಸಾಕಾಣಿಕೆ, ರೊಟ್ಟಿ ವ್ಯಾಪಾರ ಹೀಗೆ ಹಲವಾರು ಸಣ್ಣಪುಟ್ಟ ಉದ್ಯೋಗದಲ್ಲಿ ತೊಡಗಿಸಿಕೊಳ್ಳಲು ಅತಿ ಕಡಿಮೆ ಬಡ್ಡಿ ದರದಲ್ಲಿ ಹಣಕಾಸಿನ ಸಹಾಯ ಮಾಡಿ ವಿಕಲಚೇತನರು ಆರ್ಥಿಕ ಬೆಳವಣಿಗೆ ಹೊಂದುವಂತೆ ಮಾಡಿದೆ. ವಿಕಲಚೇತನರು ಕೋಆಪರೇಟಿವ್ ಸೊಸೈಟಿಯಲ್ಲಿ ಠೇವಣಿ ಮೂಲಕ ಹಣವನ್ನು ಉಳಿತಾಯ ಮಾಡುತ್ತಿದ್ದಾರೆ. ವಿಕಲಚೇತನರು ಈ ಕೋ ಆಪರೇಟಿವ್ ಸೊಸೈಟಿಯಲ್ಲಿ ಸಾಲವನ್ನು ಪಡೆದುಕೊಂಡು ಸ್ವಯಂ ಉದ್ಯೋಗದಲ್ಲಿ ತೊಡಗಿದ್ದಾರೆ. ಕಾಸಿನ ವ್ಯವಹಾರಕ್ಕಾಗಿ ಮತ್ತು ದಾಖಲೆಯ ಇಡುವಲ್ಲಿ ಶೇಷಮ್ ಅನ್ನುವ ತಂತ್ರಜ್ಞಾನವನ್ನು ಬಳಸಲಾಗಿದೆ.

   ಈ ರೀತಿಯಾಗಿ ಮೊದಲ ಹೆಜ್ಜೆಯ ಒಂದು ವರ್ಷದಲ್ಲಿ ವಿಕಲಚೇತನ ಮತ್ತು ಮಹಿಳೆಯರಿಗೆ ಕೋಆಪರೇಟಿವ್ ಸೊಸೈಟಿಯು ನೆರವಾಗಿದೆ,ಜೊತೆಗೆ ಮುಂದಿನ ವರ್ಷದಲ್ಲಿ ಇನ್ನೂ ಹೆಚ್ಚಿನ ವಿಕಲಚೇತನರು ಮತ್ತು ಮಹಿಳೆಯರ ಶೇರು ಹಣ ಕಟ್ಟಿಸಿ ಅವರಿಗೆ ಸಾಲ ಸೌಲಭ್ಯ ಮತ್ತು ತರಬೇತಿಯನ್ನು ನೀಡಿ ಉದ್ಯೋಗಸ್ಥರನ್ನಾಗಿ ಮಾಡಬೇಕು ಹಾಗೂ ಜಿಲ್ಲಾಮಟ್ಟದಲ್ಲಿ ಕೋ ಆಪರೇಟಿವ್ ಸೊಸೈಟಿಯನ್ನು ಮಾಡಬೇಕು ಎಂಬ ಗುರಿಯನ್ನು ಈ ಕೋ ಆಪರೇಟಿವ್ ಸೊಸೈಟಿಯು ಹೊಂದಿದೆ.

   ಈ ಬ್ಲಾಗ್ ಗೆ ಸಂಬಂಧಿಸಿದಂತೆ ಯಾವುದೇ ನಿರ್ದಿಷ್ಟ ಪ್ರಶ್ನೆಗಳಿಗೆ ಅಥವಾ ಯಾವುದೇ ಸಹಾಯಕ್ಕಾಗಿ ದಯವಿಟ್ಟು Info@deal-foundation.com ನಲ್ಲಿ ತಿಳಿಸಿರಿ. ಮತ್ತು ನಾವು ಮಾಡುವ ಕೆಲಸದ ಕುರಿತು ಇನ್ನಷ್ಟ್ಟು ತಿಳಿದುಕೊಳ್ಳಲು ದಯವಿಟ್ಟು www.deal-Foundation.com ಗೆ ಲಾಗ್ ಇನ್ ಮಾಡಿ.

            ಧನ್ಯವಾದಗಳು

Get a report of all our on field work every month.

You have Successfully Subscribed!

Share This